Tag: Chinese woman

  • ಸ್ನ್ಯಾಪ್‌ಚಾಟ್‌ ಮೂಲಕ ಯುವಕನೊಂದಿಗೆ ಪ್ರೀತಿ – ದೇಶ ಬಿಟ್ಟು ಪಾಕಿಸ್ತಾನಕ್ಕೆ ಬಂದ ಚೀನಾ ಯುವತಿ

    ಸ್ನ್ಯಾಪ್‌ಚಾಟ್‌ ಮೂಲಕ ಯುವಕನೊಂದಿಗೆ ಪ್ರೀತಿ – ದೇಶ ಬಿಟ್ಟು ಪಾಕಿಸ್ತಾನಕ್ಕೆ ಬಂದ ಚೀನಾ ಯುವತಿ

    ಬೀಜಿಂಗ್: ಪಾಕಿಸ್ತಾನ (Pakistan), ಭಾರತ (India) ಆಯ್ತು.. ಈಗ ಚೀನಾ ದೇಶ ಗಡಿಯಾಚೆಯ ಪ್ರೇಮಕಥೆ ವಿಷಯಕ್ಕೆ ಸುದ್ದಿಯಾಗಿದೆ. ಚೀನಾದ (China) ಯುವತಿಯೊಬ್ಬಳು ತನ್ನ ದೇಶ ತೊರೆದು ಪಾಕಿಸ್ತಾನಿ ವ್ಯಕ್ತಿಯನ್ನು ಸೇರಲು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

    ಗಾವೊ ಫೆಂಗ್ ಹೆಸರಿನ ಯುವತಿ ಮೂರು ತಿಂಗಳ ಭೇಟಿ ವೀಸಾದಲ್ಲಿ ಚೀನಾದಿಂದ ಗಿಲ್ಗಿಟ್ ಮೂಲಕ ರಸ್ತೆ ಮಾರ್ಗವಾಗಿ ಇಸ್ಲಾಮಾಬಾದ್‌ಗೆ ಬಂದಿದ್ದಾರೆ. 21 ವರ್ಷದ ಯುವತಿಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿರುವ ಜಾವೇದ್ (18) ಕರೆದೊಯ್ದಿದ್ದಾನೆ. ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನಿ ಗೆಳೆಯನನ್ನು ವರಿಸಿದ ಅಂಜು – ಇಸ್ಲಾಂ ಧರ್ಮಕ್ಕೆ ಮತಾಂತರ

    ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಜೌರ್ ಜಿಲ್ಲೆಯಲ್ಲಿ ಭದ್ರತಾ ಪರಿಸ್ಥಿತಿಯಿಂದಾಗಿ ಜಾವೇದ್ ತನ್ನ ಊರಿನ ಬದಲು ಲೋವರ್ ದಿರ್ ಜಿಲ್ಲೆಯ ಸಮರ್‌ಬಾಗ್ ತೆಹಸಿಲ್‌ನಲ್ಲಿರುವ ಚಿಕ್ಕಪ್ಪನ ಮನೆಗೆ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನ್ಯಾಪ್‌ಚಾಟ್ (Snapchat) ಮೂಲಕ ಸಂಪರ್ಕದಲ್ಲಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರದ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ. ಕೊನೆಗೆ ತನ್ನ ಪ್ರಿಯಕರನನ್ನ ಸೇರಲು ಯುವತಿ ದೇಶವನ್ನು ತೊರೆದು ಬಂದಿದ್ದಾಳೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಯುವತಿ ಪ್ರಯಾಣದ ದಾಖಲೆಗಳು ಸರಿಯಾಗಿವೆ. ಆಕೆ ಜಾವೇದ್ ಅವರೊಂದಿಗೆ ಇನ್ನೂ ಮದುವೆಯಾಗಿಲ್ಲ. ಯುವತಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ. ಭದ್ರತಾ ಕಾಳಜಿಯಿಂದಾಗಿ ಆಕೆ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಕೊಟ್ಟಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ನವದೆಹಲಿ: ಉತ್ತರ ದೆಹಲಿಯಲ್ಲಿ (Delhi) ಟಿಬೆಟಿಯನ್ ನಿರಾಶ್ರಿತರು ವಾಸವಿದ್ದ ಸ್ಥಳದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಚೀನಾದ ಮಹಿಳೆಯನ್ನು (Chinese woman) ಪೊಲೀಸರು (Delhi Police) ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆಯ ಗುರುತಿನ ಪತ್ರದಲ್ಲಿ ಆಕೆಯ ಹೆಸರು ಡೋಲ್ಮಾ ಲಾಮಾ ಎಂದು ಬರೆಯಲಾಗಿದೆ. ಆಕೆಯ ವಿಳಾಸ ನೇಪಾಳದ (Nepal) ರಾಜಧಾನಿ ಕಠ್ಮಂಡು ಎಂದು ತೋರಿಸಿದೆ. ಆದರೆ ಆಕೆಯ ನಿಜ ಹೆಸರು ಕೈ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿ ಇರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ವಾಸವಿದ್ದಳು. ಆಕೆ ಬೌದ್ಧ ಸನ್ಯಾಸಿಗಳಂತೆ ಸಾಂಪ್ರದಾಯಿಕ ಕೆಂಪು ನಿಲುವಂಗಿ ಧರಿಸಿಕೊಂಡು, ಕೂದಲನ್ನೂ ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು

    ಈ ಬಗ್ಗೆ ಮಹಿಳೆಯ ವಿದೇಶಿ ಪ್ರಯಾಣದ ದಾಖಲೆಗಳನ್ನು ಹುಡುಕಿದಾಗ ಆಕೆ 2019ರಲ್ಲಿ ಚೀನಾದ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದು ತಿಳಿದುಬಂದಿದೆ. ಆಕೆಯನ್ನು ವಿಚಾರಿಸಿದಾಗ ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾಳೆ.

    ಮಹಿಳೆ ಇಂಗ್ಲಿಷ್, ಮ್ಯಾಂಡರಿನ್ ಹಾಗೂ ನೇಪಾಳಿ ಭಾಷೆಗಳನ್ನು ತಿಳಿದಿದ್ದಾಳೆ. ಆಕೆ ಬೇಹುಗಾರಿಕೆ ಕೆಲಸಗಳಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದಾರೆ. ಇದನ್ನೂ ಓದಿ: ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    Live Tv
    [brid partner=56869869 player=32851 video=960834 autoplay=true]