Tag: Chinese President

  • ಗೃಹ ಬಂಧನದ ವದಂತಿಯ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

    ಗೃಹ ಬಂಧನದ ವದಂತಿಯ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

    ಬೀಜಿಂಗ್: ಚೀನಾದ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್ (Xi Jinping) ಅವರನ್ನು ಗೃಹ ಬಂಧನದಲ್ಲಿ (House Arrest) ಇರಿಸಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಡುತ್ತಿದ್ದ ಬೆನ್ನಲ್ಲೇ ಅವರು ಮಂಗಳವಾರ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಸೆಪ್ಟೆಂಬರ್ 16 ರಂದು ಜಿನ್‌ಪಿಂಗ್ ಅವರು ಸಮರ್‌ಕಂಡರ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಹಿಂದಿರುಗಿದ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ವದಂತಿಗಳು ಹರಿದಾಡಲಾರಂಭಿಸಿತ್ತು.

    ವದಂತಿ ಏಕೆ ಹುಟ್ಟಿತು?
    ಚೀನಾದಲ್ಲಿ ಕಳೆದ ವಾರ ಇಬ್ಬರು ಮಾಜಿ ಮಂತ್ರಿಗಳಿಗೆ ಮರಣದಂಡನೆ ಹಾಗೂ 4 ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ವರದಿಗಳ ಪ್ರಕಾರ, 6 ಮಂದಿ ಕೂಡಾ ರಾಜಕೀಯ ಬಣದ ಭಾಗವಾಗಿದ್ದರು. ಶಿಕ್ಷೆ ವಿಧಿಸಲಾದ 6 ಜನರೂ ಜಿನ್‌ಪಿಂಗ್ ಅವರ ವಿರೋಧಿ ಎನ್ನಲಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ಪಕ್ಷವೇ ಗೃಹಬಂಧನದಲ್ಲಿ ಇರಿಸಿದೆ ಎಂಬ ವದಂತಿ ಹರಡಿತ್ತು. ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ರೆಡ್ ಅಲರ್ಟ್ – ಗುಪ್ತಚರ ಇಲಾಖೆ ಸೂಚನೆ ಏನು?

    ವಿದೇಶದ ಮಾಧ್ಯಮಗಳು, ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಗೂ ಚೀನಾದಲ್ಲಿ ನಿರ್ಬಂಧ ಇರುವುದರಿಂದ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ನಿಖರವಾಗಿ ತಿಳಿಯುವುದು ಅಸಾಧ್ಯವಾಗಿದೆ. ಗೃಹ ಬಂಧನದ ವದಂತಿ ಹರಡಲು ಇದು ಕೂಡಾ ಕಾರಣವಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    Live Tv
    [brid partner=56869869 player=32851 video=960834 autoplay=true]

  • ಮೋದಿ-ಜಿನ್‍ಪಿಂಗ್ ಅನೌಪಚಾರಿಕ ಶೃಂಗಸಭೆ ಅಂತ್ಯ: ಚರ್ಚೆಯಾಗಲಿಲ್ಲ ಕಾಶ್ಮೀರ ವಿಚಾರ

    ಮೋದಿ-ಜಿನ್‍ಪಿಂಗ್ ಅನೌಪಚಾರಿಕ ಶೃಂಗಸಭೆ ಅಂತ್ಯ: ಚರ್ಚೆಯಾಗಲಿಲ್ಲ ಕಾಶ್ಮೀರ ವಿಚಾರ

    ಚೆನ್ನೈ: ಭಾರತ ಮತ್ತು ಚೀನಾ ನಡುವಿನ ಅನೌಪಚಾರಿಕ ಶೃಂಗಸಭೆ ಇಂದು ಮುಕ್ತಾಯವಾಗಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ನಡೆದ ಎರಡು ದಿನಗಳ ಅನೌಪಚಾರಿಕ ಶೃಂಗಸಭೆ ಮುಕ್ತಾಯವಾಗಿದೆ. ಚೆನ್ನೈನ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ನವದಹೆಲಿಗೆ ಹಾಗೂ ಕ್ಸಿ ಜಿನ್‍ಪಿಂಗ್ ನೇಪಾಳಕ್ಕೆ ತೆರಳಿದ್ದಾರೆ.

    ಉಭಯ ನಾಯಕರ ಭೇಟಿ ವೇಳೆ ಕಾಶ್ಮೀರದ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕಾಶ್ಮೀರ ಸಮಸ್ಯೆಯು ಭಾರತದ ಆಂತರಿಕ ವಿಚಾರವಾಗಿದೆ. ಹೀಗಾಗಿ ಈ ಕರಿತು ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರುವಂತೆ ಕ್ಸಿ ಜಿನ್‍ಪಿಂಗ್ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಮೋದಿ ಸಮ್ಮತಿ ನೀಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಟ್ವೀಟ್ ಮಾಡಿ, ತಮಿಳುನಾಡಿನ ನನ್ನ ಸಹೋದರ ಸಹೋದರಿಯರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆಯೇ ಅವರ ಆತಿಥ್ಯ ಉತ್ತಮವಾಗಿತ್ತು. ರಾಜ್ಯದ ಸೃಜನಶೀಲ ಜನರ ನಡುವೆ ಇರುವುದು ಯಾವತ್ತೂ ಸಂತೋಷದ ವಿಚಾರ. ಮಾಮಲ್ಲಪುರಂನಲ್ಲಿ ಶೃಂಗಸಭೆ ಆಯೋಜಿಸಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಚೆನ್ನೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದಿದ್ದ ಕ್ಸಿ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ಬಳಿಕ ಪ್ರಧಾನಿ ನರೇಂದ್ರ ತಮಿಳುನಾಡಿನ ಸಾಂಪ್ರದಾಯಿಕ ಧರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದರು.

    ಪ್ರಧಾನಿ ಮೋದಿ ಜಿನ್‍ಪಿಂಗ್ ಅವರೊಂದಿಗೆ ಸಮುದ್ರ ತೀರದಲ್ಲಿ ವಿಹರಿಸಿದರು. ಈ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು. ನಂತರ ಜಿನ್‍ಪಿಂಗ್ ಪ್ರವಾಸದ ಗೌರವಾರ್ಥ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಚೆಟ್ಟಿನಾಡ್, ಕರೈಕುಡಿಯ ಸಾಂಪ್ರದಾಯಿಕ ತಿನಿಸುಗಳನ್ನು ಚೀನಾ ಅಧ್ಯಕ್ಷರಿಗೆ ಉಣಬಡಿಸಲಾಯಿತು.

    ಪ್ರಧಾನಿ ಮೋದಿ ಇಂದು ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಡ ದೇಹ, ಆರೋಗ್ಯವನ್ನು ಪಡೆಯೋಣ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್‍ಪಿಂಗ್ ಅವರು ಸಭೆ ನಡೆಸಿದರು. ಬಳಿಕ ಕೋವಲಂನ ಕೋವ್ ಹೋಟೆಲ್‍ನಲ್ಲಿ ನಡೆದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದರು.

  • ಮಹಾಬಲಿಪುರಂನಲ್ಲಿ ವಿಶ್ವದ ಮಹಾನ್ ನಾಯಕರ ಸಂಗಮ

    ಮಹಾಬಲಿಪುರಂನಲ್ಲಿ ವಿಶ್ವದ ಮಹಾನ್ ನಾಯಕರ ಸಂಗಮ

    ಚೆನ್ನೈ: ಅಮೆರಿಕದಲ್ಲಿ ಕಳೆದ ತಿಂಗಳು ಡೊನಾಲ್ಡ್ ಟ್ರಂಪ್ ಜೊತೆ ಸೇರಿ ಹೌಡಿ ಮೋದಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಗೆ ಸ್ನೇಹ ಹಸ್ತ ಚಾಚಿದ್ದಾರೆ.

    ತಮಿಳುನಾಡಿನ ಸಾಂಪ್ರದಾಯಿಕ ಧರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದರು. ಜೊತೆಯಲ್ಲೇ ಎಳನೀರು ಕುಡಿದರು. ಇದನ್ನೂ ಓದಿ: ಪಂಚೆ, ಶರ್ಟಿನಲ್ಲಿ ಮಿಂಚಿದ ಪ್ರಧಾನಿ ಮೋದಿ

    ಪ್ರಧಾನಿ ಮೋದಿ ಜಿನ್‍ಪಿಂಗ್ ಅವರೊಂದಿಗೆ ಸಮುದ್ರ ತೀರದಲ್ಲಿ ವಿಹರಿಸಿದರು. ಈ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು. ನಂತರ ಜಿನ್‍ಪಿಂಗ್ ಪ್ರವಾಸದ ಗೌರವಾರ್ಥ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಚೆಟ್ಟಿನಾಡ್, ಕರೈಕುಡಿಯ ಸಾಂಪ್ರದಾಯಿಕ ತಿನಿಸುಗಳನ್ನು ಚೀನಾ ಅಧ್ಯಕ್ಷರಿಗೆ ಉಣಬಡಿಸಲಾಯಿತು.

    ಇದಕ್ಕೂ ಮುನ್ನ ಶುಕ್ರವಾರ ಮಧ್ಯಾಹ್ನ 1.45ಕ್ಕೆ ಚೆನ್ನೈಗೆ ಬಂದಿಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಶನಿವಾರ ಬೆಳಗ್ಗೆ ಇಬ್ಬರು ವಿಶ್ವ ದಿಗ್ಗಜರ ನಡುವೆ ಸಭೆ ನಡೆಯಲಿದೆ. ಈ ವೇಳೆ ಭಯೋತ್ಪಾದನೆ ದಮನ, ರಕ್ಷಣಾ ವ್ಯವಹಾರ, ಗಡಿ ವಿವಾದದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಈ ನಡುವೆ ಚೀನಾ ಆಕ್ರಮಿಸಿರುವ ಪಿಓಕೆಯ 5,000 ಕಿಲೋಮೀಟರ್ ಭೂಭಾಗವನ್ನು ಬಿಟ್ಟು ತೆರಳುವಂತೆ ಕ್ಸಿ ಜಿನ್‍ಪಿಂಗ್‍ರನ್ನು ಪ್ರಧಾನಿ ಮೋದಿ ಆಗ್ರಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

  • ಮೋದಿಗೆ 56 ಇಂಚು ಎದೆ ಇದ್ರೆ ಚೀನಾ ಅಧ್ಯಕ್ಷರಿಗೆ ಪಿಓಕೆ ಬಗ್ಗೆ ಹೇಳಲಿ: ಕಪಿಲ್ ಸವಾಲು

    ಮೋದಿಗೆ 56 ಇಂಚು ಎದೆ ಇದ್ರೆ ಚೀನಾ ಅಧ್ಯಕ್ಷರಿಗೆ ಪಿಓಕೆ ಬಗ್ಗೆ ಹೇಳಲಿ: ಕಪಿಲ್ ಸವಾಲು

    ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದಿನಿಂದ ಎರಡು ದಿನಗಳ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸವಾಲು ಹಾಕಿದ್ದಾರೆ.

    ಪಾಕಿಸ್ತಾನ ಆಕ್ರಮಿತಮ ಕಾಶ್ಮೀರ (ಪಿಓಕೆ)ದಲ್ಲಿ 5 ಸಾವಿರ ಕಿಲೋಮೀಟರ್ ಭೂಭಾಗವನ್ನು ತೆರವುಗೊಳಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಪ್ರಧಾನಿ ಮೋದಿ ಹೇಳಲಿ. ಈ ಮೂಲಕ ತಮ್ಮ 56 ಇಂಚು ಎದೆಯ ಸಾಮರ್ಥ್ಯವನ್ನು ತೋರಿಸಲಿ ಎಂದು ಸವಾಲೊಡ್ಡಿದ್ದಾರೆ. ಇದನ್ನೂ ಓದಿ: ಇಂದು ಮೋದಿ, ಜಿನ್‍ಪಿಂಗ್ ಮಾತುಕತೆ – ಮಹಾಬಲಿಪುರಂನಲ್ಲೇ ಭೇಟಿ ಯಾಕೆ? ಅಂಥ ವಿಶೇಷತೆ ಏನಿದೆ?

    ಈ ಕುರಿತು ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ವಿರೋಧ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕ್ಸಿ ಜಿನ್‍ಪಿಂಗ್ ಬೆಂಬಲಿಸಿದ್ದಾರೆ. ಆದ್ದರಿಂದ ಈಗ ಮೋದಿ ಜಿ ಅವರ ಕಣ್ಣಲ್ಲಿ ಕಣ್ಣಿಟ್ಟು, ಪಿಒಕೆಯಲ್ಲಿ ಚೀನಾ ಆಕ್ರಮಿಸಿರುವ 5000 ಕಿ.ಮೀ ಭೂಮಿಯನ್ನು ಖಾಲಿ ಮಾಡುವಂತೆ ಹಾಗೂ 5 ಜಿಗಾಗಿ ಭಾರತದಲ್ಲಿ ಹುವಾಯ್ ಇಲ್ಲ ಎಂದು ಹೇಳಲಿ ಎಂದು ತಿಳಿಸಿದ್ದಾರೆ.

    ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಲಾಯಿತು. ಜಿನ್‍ಪಿಂಗ್ ಐತಿಹಾಸಿಕ ಮಹಾಬಲಿಪುರಂ ದೇವಾಲಯ, 4 ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲಿದ್ದಾರೆ. ಭದ್ರತೆ ಉದ್ದೇಶದಿಂದ ಕರಾವಳಿ ರಸ್ತೆಯ ಪ್ರತಿ 50-100 ಮೀಟರ್ ಗೂ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅನೌಪಚಾರಿಕ ಶೃಂಗಸಭೆ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದು, ಜಾಗತಿಕ, ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವೆ ಯಾವುದೇ ಒಪ್ಪಂದ ನಡೆಯುವುದಿಲ್ಲ.