Tag: Chinese

  • ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ (California) ಏಷ್ಯಾದ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (Shooting) ಹತ್ತು ಜನರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.

    ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರು ಹೊಸ ವರ್ಷದ ಪಾರ್ಟಿಯಲ್ಲಿ ಸಂಭ್ರಮಿಸುತ್ತಿದ್ದಾಗ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶೂಟೌಟ್‌ನಲ್ಲಿ ಗಾಯಗೊಂಡವರನ್ನು ತುರ್ತು ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಅಂಬುಲೆನ್ಸ್‌ಗೆ ಹಾಕಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ವೀಡಿಯೋಗಳಲ್ಲಿವೆ. ಇದನ್ನೂ ಓದಿ: ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಎರಡು ದಿನಗಳ ʼಚಂದ್ರನ ಹೊಸ ವರ್ಷʼದ ಹಬ್ಬಕ್ಕಾಗಿ ಹತ್ತಾರು ಸಾವಿರ ಜನರು ಮುಂಜಾನೆಯೇ ಜಮಾಯಿಸಿದ್ದರು. ರಾತ್ರಿ ಪಾರ್ಟಿ ವೇಳೆ ಬಂದೂಕುಧಾರಿ ಗುಂಡು ಹಾರಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.

    “ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು” ಎಂದು ಲಾಸ್ ಏಂಜಲೀಸ್ ಸಿಟಿ ಕಂಟ್ರೋಲರ್ ಕೆನ್ನೆತ್ ಮೆಜಿಯಾ ಟ್ವೀಟ್‌ನಲ್ಲಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    ಅಮೆರಿಕದಲ್ಲಿ ಗನ್‌ ಹಿಂಸಾಚಾರವು ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾದಲ್ಲಿ ಲಾಕ್‍ಡೌನ್- 90 ಲಕ್ಷ ಮಂದಿ ನಿವಾಸಿಗಳು ಮನೆಯಲ್ಲಿ ಲಾಕ್

    ಚೀನಾದಲ್ಲಿ ಲಾಕ್‍ಡೌನ್- 90 ಲಕ್ಷ ಮಂದಿ ನಿವಾಸಿಗಳು ಮನೆಯಲ್ಲಿ ಲಾಕ್

    ಚೀನಾ: ವೇಗವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಚೀನಾ (China) ಕೈಗಾರಿಕಾ ಕೇಂದ್ರದಲ್ಲಿ ಲಾಕ್‍ಡೌನ್ (Lockdown) ವಿಧಿಸಿದೆ. 9 ಮಿಲಿಯನ್ (90ಲಕ್ಷ) ನಿವಾಸಿಗಳು ಮನೆಯೊಳಗೆ ಇರಲು ಸೂಚನೆ ನೀಡಲಾಗಿದೆ.

    ಹೊರಡಿಸಿದ ಆದೇಶಗಳ ಪ್ರಕಾರ, ಈಶಾನ್ಯ ಕೈಗಾರಿಕಾ ಕೇಂದ್ರವಾದ ಚಾಂಗ್‍ಚುನ್‍ನಲ್ಲಿ 9 ಮಿಲಿಯನ್ ನಿವಾಸಿಗಳಿಗೆ ಲಾಕ್‍ಡೌನ್ ವಿಧಿಸಿದೆ. ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬರುವಂತಿಲ್ಲ. ಕೆಲವು ಅನಿವಾರ್ಯತೆಯಿಂದಾಗಿ ಮನೆಯಿಂದ ಹೊರಗೆ ಬರುವವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಗರ ಅಧಿಕಾರಿಗಳು ಈಗಾಲೇ ಎಲ್ಲಾ ವ್ಯವಹಾರ, ಸಾರಿಗೆ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಿದ್ದಾರೆ.

    ಡೋಜೀನ್ ನಗರಗಳಲ್ಲಿ ಪ್ರತಿದಿನ 1,000ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 2 ವರ್ಷಗಳ ನಂತರ ಈಚೆಗೆ ಅತಿ ಹೆಚ್ಚು ಹೊಸ ಪ್ರಕರಣಗಳು ಒಂದೇ ದಿನದಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಒಂದು ಅಥವಾ ಹೆಚ್ಚಿನ ಪ್ರಕರಣಗಳು ವರದಿಯಾದ ಯಾವುದೇ ಸಮುದಾಯ ಅಥವಾ ನಗರದಲ್ಲಿ ಲಾಕ್‍ಡೌನ್ ಹೇರುವುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಜಿಲಿನ್ ನಗರದಲ್ಲಿ ಚೀನಾದ ಅಧಿಕಾರಿಗಳು ಈಗಾಗಲೇ ಭಾಗಶಃ ಲಾಕ್‍ಡೌನ್‍ನ್ನು ವಿಧಿಸಿದ್ದಾರೆ. ಅಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇತರ ನಗರಗಳೊಂದಿಗೆ ಪ್ರಯಾಣ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂದು ಜಿಲಿನ್ ನಗರದಲ್ಲಿ 93 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗಕ್ಕೆ ಚೀನಾದ ಶೂನ್ಯ ಸಹಿಷ್ಣುತೆ ವಿಧಾನದ ಅಡಿಯಲ್ಲಿ ಈ ಕ್ರಮಗಳನ್ನು ನಿರ್ದಿಷ್ಟಪಡಿಸಲಾಗಿದೆ.

  • 800 ವರ್ಷಗಳ ಹಿಂದೆ ಮದ್ಯ ಸಂಗ್ರಹಿಸಿಡುತ್ತಿದ್ದ ಅವಶೇಷಗಳು ಪತ್ತೆ

    800 ವರ್ಷಗಳ ಹಿಂದೆ ಮದ್ಯ ಸಂಗ್ರಹಿಸಿಡುತ್ತಿದ್ದ ಅವಶೇಷಗಳು ಪತ್ತೆ

    ಬೀಜಿಂಗ್: ಸರಿಸುಮಾರು 800 ವರ್ಷಗಳ ಹಿಂದೆ ಮದ್ಯದ ಸಂಗ್ರಹಿಸಿಡಲು ಬಳಸುತ್ತಿದ್ದ ಅವಶೇಷಗಳು ಮಧ್ಯ ಚೀನಾದಲ್ಲಿ ಪತ್ತೆಯಾಗಿವೆ.

    ಈ ವಿಚಾರವಾಗಿ ಮಾಹಿತಿ ನೀಡಿದ ಪುರಾತತ್ವ ಶಾಸ್ತ್ರಜ್ಞರು, ಮಣ್ಣಿನ ಮಡಿಕೆಯಲ್ಲಿ ಮದ್ಯ ಸಂಗ್ರಹಿಸಿಟ್ಟಿಡುತ್ತಿರುವುದು ಪತ್ತೆಯಾಗಿದೆ. ಇದು ಸುಮಾರು 800 ವರ್ಷಗಳ ಹಿಂದಿನದ್ದಾಗಿದೆ. ಚೀನಾದ ಜನರು ಮೊನಾಸ್ಕಸ್ ಅಲ್ಕೋಹಾಲ್ ತಯಾರಿಸಲು ಬಳಸುತ್ತಿದ್ದರು ಅನ್ನೋದಕ್ಕೆ ಪುರಾವೆ ಸಿಕ್ಕಿವೆ ಎಂದು ತಿಳಿಸಿದ್ದಾರೆ.

    ALCOHOL

    ಚೀನಾದ ಸಾಂಸ್ಕ್ರತಿಕ ತಾಣ ಹೆನಾನ್ ಪ್ರಾಂತ್ಯದ ಪೀಲಿಗಾಂಗ್‍ನಲ್ಲಿ 2 ಮಣ್ಣಿನ ಮಡಿಕೆಗಳು ಪತ್ತೆ ಆಗಿವೆ ಎಂದು ಚೀನಾದ ಪುರಾತತ್ವ ಇಲಾಖೆಯ ಅಧಿಕಾರಿ ಯೊಂಗ್‍ಕಿಯಾಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋ, ರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ಇಲ್ಲಿ ಪತ್ತೆಯಾಗಿರುವ ಮಡಿಕೆಗಳು ಮದ್ಯ ತುಂಬಲು ಮತ್ತು ಮದ್ಯ ತಯಾರಿಸಲು ಬಳಸುಲಾಗುತ್ತಿತ್ತು ಅನ್ನೋದು ಸ್ಪಷ್ಟವಾಗುತ್ತಿದೆ. ಪೀಲಿಗಾಂಗ್ ಪ್ರಾಂತ್ಯವು ಚೀನಾದ ಅತ್ಯಂತ ಪ್ರಾಚೀನ ಕಾಲದ ಪ್ರದೇಶವಾಗಿದೆ.  ಇದನ್ನೂ ಓದಿ: ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

  • ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

    ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

    ನವದೆಹಲಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಕಗಳು ತಿಳಿಸಿವೆ.

    ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿಧರಿಸಿದೆ. ತನ್ನ ವಶದಲ್ಲಿರುವ ಟಿಬೆಟ್‍ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‍ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು. ಹೀಗಾಗಿಯೇ ಪೂರ್ವ ಲಡಾಖ್‍ನಲ್ಲಿ ಚೀನಾಯೋಧರು ಹಿನ್ನಡೆ ಅನುಭವಿಸಿದ್ದರು.

    ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೆಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

  • ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು

    ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು

    ಧಾರವಾಡ: ಉಪಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರೀ ವೈರಲ್ ಆಗಿದ್ದ ಹೌದು ಹುಲಿಯಾ ಉದ್ಘೋಷ ಈಗ ದೂರದ ಚೀನಾ ದೇಶವನ್ನೂ ತಲುಪಿದೆ.

    ಹೌದು. ಚೀನಾ ದೇಶದ ಶೆಂಜಿನ್ ನಗರದಲ್ಲಿ ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡಿರುವ ನಾಲ್ವರು ಚೀನಿ ಯುವಕರು ವಿಸ್ಕಿ ಕುಡಿಯುತ್ತ ಹೌದು ಹುಲಿಯಾ ಡೈಲಾಗ್ ಹೇಳಿ ಖುಷಿಪಟ್ಟಿದ್ದಾರೆ. ಚೀನಾ ದೇಶ ಶೆಂಜಿನ್ ನಗರದ ಜೆಮ್ಮಿ, ಹೆನ್ರಿ, ಜೆಫ್ ಹಾಗೂ ಜಾಯ್ ಕ್ಸೋ ಟ್ಯಾಂಗ್ ಅವರು ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡುತ್ತ ಹೌದು ಹುಲಿಯಾ ಎಂದಿದ್ದಾರೆ.

    ಧಾರವಾಡ ಮೂಲದ ಶಶಿ ಶಿರಗುಪ್ಪಿ ಅವರು ಸದ್ಯ ಚೀನಾದಲ್ಲಿ ನೆಲೆಸಿದ್ದಾರೆ. ಅವರ ಜೊತೆಯಲ್ಲಿ ಚೀನಿ ಸ್ನೇಹಿತರು ಪಾರ್ಟಿ ಮಾಡುತ್ತಿದ್ದಾಗ ಶಶಿ ಅವರ ಬಾಯಿಂದ ಹೌದು ಹುಲಿಯಾ ಎಂಬುದನ್ನು ಕೇಳಿ ಅವರು ಹಾಗೆಯೇ ಉದ್ಘೋಷ ಹೊರಡಿಸಿದ್ದಾರೆ. ಕನ್ನಡದ ದೊಡ್ಮನೆ ಹುಡ್ಗ ಚಿತ್ರದ ‘ತ್ರಾಸ್ ಆಕ್ಕತಿ’ ಹಾಡು ಹಾಕಿಕೊಂಡು ಪಾರ್ಟಿ ಮಾಡಿರುವ ಈ ಚೀನಿಯರನ್ನು ಪಾರ್ಟಿ ಹೇಗಿತ್ತು? ಊಟ ಹೇಗಿತ್ತು? ಡ್ರಿಂಕ್ಸ್ ಹೇಗಿತ್ತು ಎಂದು ಕೇಳಿದಾಗ ಹೌದು ಹುಲಿಯಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಈ ದೃಶ್ಯವನ್ನು ಶಶಿ ಅವರು ವಿಡಿಯೋ ಮಾಡಿ ತಮ್ಮ ಯುಟ್ಯೂಬ್ ಚಾನಲ್‍ಗೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಚೀನಿಯರ ಬಾಯಲ್ಲಿ ನಮ್ಮ ಕನ್ನಡ ಭಾಷೆ ಕೇಳುತ್ತಿರುವುದು ಖುಷಿಯಾಗುತ್ತಿದೆ ಎಂದು ಶಶಿ ಹೇಳಿದ್ದಾರೆ.