Tag: China President

  • G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    ನವದೆಹಲಿ: ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G 20 summit 2023) ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ (Xi Jinping) ಭಾಗವಹಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡೆನ್ (Joe Biden) ಹೇಳಿದ್ದಾರೆ. ನಾನು ಅವರನ್ನು ನೋಡಲು ಭಾರತಕ್ಕೆ ಹೊಗುತ್ತಿದ್ದೇನೆ, ಅವರ ಅನುಪಸ್ಥಿತಿ ತೀವ್ರ ನಿರಾಶೆಗೊಳಿಸಿದೆ ಎಂದರು.

    ಡೆಲವೇರ್ ನ ರೆಹೋಬೋತ್ ಬೀಚ್‍ನಲ್ಲಿ ಮಾತನಾಡಿದ ಅವರು, ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವರು ಬಾರದಿರುವುದು ನನಗೆ ತೀವ್ರ ಬೇಸರವಾಗಿದೆ. ಇದೇ ವೇಳೆ ಏಷ್ಯಾದಲ್ಲಿ (Asia) ಅಮೆರಿಕಾದ (America) ಸಂಬಂಧಗಳನ್ನು ಬಲಪಡಿಸಲು ವಿಯೆಟ್ನಾಂಗೆ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ‌Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ – ಇಸ್ರೋದಿಂದ ವೀಡಿಯೋ ರಿಲೀಸ್‌

    ಭಾರತ ಮತ್ತು ವಿಯೆಟ್ನಾಂ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ಹೆಚ್ಚು ನಿಕಟ ಸಂಬಂಧಗಳನ್ನು ಬಯಸುತ್ತಾರೆ ಮತ್ತು ಅದು ತುಂಬಾ ಸಹಾಯಕವಾಗಬಹುದು ಎಂದು ಬೈಡೆನ್ ಹೇಳಿದರು. ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬೀಜಿಂಗ್ ಅನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3ನೇ ಅವಧಿಗೆ ಚೀನಾದ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್

    3ನೇ ಅವಧಿಗೆ ಚೀನಾದ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್

    ಬೀಜಿಂಗ್: ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ದಾಖಲೆಯ 3ನೇ ಅವಧಿಗೆ ಭಾನುವಾರ ಮರು ಆಯ್ಕೆಯಾಗಿದ್ದಾರೆ.‌ ಈ ಮೂಲಕ ಮತ್ತೆ 5 ವರ್ಷದ ಅವಧಿಗೆ ಜಿನ್‌ಪಿಂಗ್‌ ಚೀನಾದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

    ಪಕ್ಷದ ಅಧಿಕೃತ ನಿವೃತ್ತಿಯ ವಯಸ್ಸು 68 ಆಗಿದ್ದರೂ 69 ವರ್ಷದ ಜಿನ್‌ಪಿಂಗ್ ಈಗಾಗಲೇ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಆದರೂ ಮತ್ತೆ 5 ವರ್ಷದ ಅವಧಿಗೆ ಕಾಂಗ್ರೆಸ್‌ನಿಂದ 1 ದಿನದ ಮುಂಚಿತವಾಗಿಯೇ ಪ್ರಬಲ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದಾರೆ.

    ಚೀನಾದ 2ನೇ ನಾಯಕ ಪ್ರೀಮಿಯರ್ ಲಿ ಕೆಕಿಯಾಂಗ್ ಸೇರಿದಂತೆ ಹಲವು ಹಿರಿಯ ನಾಯಕರು ಈಗಾಗಲೇ ನಿವೃತ್ತರಾಗಿದ್ದಾರೆ. ಅವರಾರಿಗೂ ಕೇಂದ್ರ ಸಮಿತಿಗೆ ಪ್ರವೇಶಿಸಲು ಸಾಧ್ಯವಾಗದೇ ಹೋಗಿದ್ದು, ಇದೀಗ ಚೀನಾದ ರಾಜಕೀಯ ಹಾಗೂ ಸರ್ಕಾರ ಹಾದಿ ತಪ್ಪುವ ಭೀತಿಯಲ್ಲಿದೆ. ಇದನ್ನೂ ಓದಿ: ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

    ಕೋವಿಡ್ ಹಾವಳಿಯ ಹಿನ್ನೆಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದ ಸರ್ಕಾರದ ವಿರುದ್ಧ ಚೀನಾದ ಜನತೆ ಕೆಲ ದಿನಗಳ ಹಿಂದೆ ಅಲ್ಲಲ್ಲಿ ಪ್ರತಿಭಟಿಸಿರುವುದಾಗಿ ವರದಿಯಾಗಿದೆ. ಕ್ಸಿ ಜಿನ್‌ಪಿಂಗ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಡ ಹಾಕಲಾಗಿದೆ ಎಂದೂ ಹೇಳಲಾಗಿದೆ. ಆದರೂ ಅಂತಹ ಯಾವುದೇ ಸರ್ಕಾರಿ ವಿರೋಧಿ ಚಟುವಟಿಕೆಗಳು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ 3ನೇ ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿನ್‌ಪಿಂಗ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    Live Tv
    [brid partner=56869869 player=32851 video=960834 autoplay=true]

  • ಮಾಮಲ್ಲಪುರಂ ಬೀಚ್‍ನಲ್ಲಿ ಪ್ಲಾಸ್ಟಿಕ್ ಹೆಕ್ಕಿದ ಮೋದಿ – ವಿಡಿಯೋ

    ಮಾಮಲ್ಲಪುರಂ ಬೀಚ್‍ನಲ್ಲಿ ಪ್ಲಾಸ್ಟಿಕ್ ಹೆಕ್ಕಿದ ಮೋದಿ – ವಿಡಿಯೋ

    ಮಹಾಬಲಿಪುರಂ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನಕ್ಕೆ ವಿಶೇಷ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ಸುಮಾರು 30 ನಿಮಿಷಗಳ ಕಾಲ ವಾಯು ವಿಹಾರ ಮಾಡಿದರು. ಈ ಸಮಯದಲ್ಲಿ ಬೀಚ್‍ನಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು (ಪ್ಲಾಗಿಂಗ್) ಸಂಗ್ರಹಿಸಿದರು.

    ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಅವರು, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಡ ಆರೋಗ್ಯವನ್ನು ಪಡೆಯೋಣ ಎಂದಿದ್ದಾರೆ.

    ವಿಡಿಯೋದಲ್ಲಿ ಮೋದಿ ಅವರು, ಸಮುದ್ರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಚೀಲ ಹಾಗೂ ಚಪ್ಪಲಿಗಳನ್ನು ತೆಗೆದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಧಾನಿಗಳ ಈ ವಿಡಿಯೋವನ್ನು ಇದುವರೆಗೂ ಸುಮಾರು 60 ಸಾವಿರ ಮಂದಿ ಲೈಕ್ ಮಾಡಿದ್ದು, 18 ಸಾವಿರಕ್ಕೂ ಹೆಚ್ಚು ಮಂದಿ ಟ್ವಿಟನ್ನು ರಿಟ್ವೀಟ್ ಮಾಡಿದ್ದಾರೆ.