Tag: China Military

  • ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ಟೊಕಿಯೊ: ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ.

    ಈ ಬಗ್ಗೆ ಜಪಾನಿನ ರಕ್ಷಣಾ ಸಚಿವ ನೊಬುವೊ ಕಿಶಿ ಮಾಹಿತಿ ನೀಡಿದ್ದು, ಚೀನಾ ಉಡಾವಣೆ ಮಾಡಿದ್ದ 9 ಕ್ಷಿಪಣಿಗಳಲ್ಲಿ 5 ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಬಂದಿದೆ. ಇದರಿಂದಾಗಿ ನಮ್ಮ ದೇಶದ ಭದ್ರತೆ ಹಾಗೂ ಜನರ ಜನರ ಸುರಕ್ಷತೆಗೆ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಜಪಾನ್‍ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾವು ತೈವಾನ್‍ಗೆ ಹತ್ತಿರದಲ್ಲಿವೆ. ಈ ಹಿನ್ನೆಲೆಯಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‍ನ ವಿಶೇಷ ಆರ್ಥಿಕ ವಲಯದ ಮೇಲೆ ಬಿದ್ದಿರುವುದು ಇದೇ ಮೊದಲು ಎಂದು ಹೇಳಿದರು.

    ಚೀನಾ ಪ್ರಜಾಸತ್ತಾತ್ಮಕ ತೈವಾನ್ ಅನ್ನು ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಅಗತ್ಯವಿದ್ದಲ್ಲಿ ಬಲವಂತವಾಗಿ ಅದನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ಅಷ್ಟೇ ಅಲ್ಲದೇ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾವು ಇಂದು ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    Live Tv
    [brid partner=56869869 player=32851 video=960834 autoplay=true]

  • ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಹಿನ್ನೆಲೆ ಕೆರಳಿರುವ ಚೀನಾ ತನ್ನ ಸೇನೆಗೆ ಯುದ್ಧಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

    ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತೈವಾನ್ ಸುತ್ತ ಸಮುದ್ರದಲ್ಲಿ ಸುತ್ತುವರಿದಿದ್ದು, ಮಿಲಿಟರಿ ತರಬೇತಿ ನಡೆಸುತ್ತಿದೆ. ತೈವಾನ್‌ನ ಮಿಲಿಟರಿ ದ್ವೀಪದ ಸುತ್ತಮುತ್ತಲಿನ ಸಮುದ್ರದಲ್ಲಿ ನಡೆಯುತ್ತಿರುವ ಚೀನೀ ತರಬೇತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ.

    ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ಚೀನಾದ 27 ಯುದ್ಧ ವಿಮಾನಗಳು ತೈವಾನ್‌ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿವೆ ಎಂದು ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಚೀನಾ ಬೆದರಿಕೆಗೆ ತೈವಾನ್ ಅಧ್ಯಕ್ಷೆ ಸಾಯ್ ಯಿಂಗ್ ವೆನ್ ತಿರುಗೇಟು ಕೊಟ್ಟಿದ್ದಾರೆ. ದೇಶದ 2.3 ಕೋಟಿ ಜನರು ಹೇಡಿಗಳಲ್ಲ. ಚೀನಾದ ಮಿಲಿಟರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ತಿರುಗಿಬಿದ್ದಿದ್ದಾರೆ.

    ಪೆಲೋಸಿ 24 ಗಂಟೆಗಳಿಗೂ ಕಡಿಮೆ ಅವಧಿಯ ತೈವಾನ್ ಭೇಟಿಯ ಬಳಿಕ ಬುಧವಾರವೇ ದಕ್ಷಿಣ ಕೊರಿಯಾಗೆ ವಿಶೇಷ ವಿಮಾನದಲ್ಲಿ ನಿರ್ಗಮಿಸಿದ್ದಾರೆ. ಈ ನಡುವೆ ಚೀನಾ ತರಬೇತಿಯನ್ನು ಮುಂದುವರೆಸಿದ್ದರೂ ಅದು ಯುದ್ಧ ಮಾಡಲು ಮುಂದಾಗುವುದಿಲ್ಲ ಎಂದು ತೈಪೆಯ ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

    Live Tv
    [brid partner=56869869 player=32851 video=960834 autoplay=true]