Tag: China App

  • ಭಾರತಕ್ಕೆ ಮರಳಲಿದೆಯಾ ಟಿಕ್‌ಟಾಕ್? – ಪಾಲುದಾರರನ್ನು ಹುಡುಕ್ತಿದೆ ಕಂಪನಿ

    ಭಾರತಕ್ಕೆ ಮರಳಲಿದೆಯಾ ಟಿಕ್‌ಟಾಕ್? – ಪಾಲುದಾರರನ್ನು ಹುಡುಕ್ತಿದೆ ಕಂಪನಿ

    ನವದೆಹಲಿ: ಬೈಟೆಡಾನ್ಸ್ ಮಾಲೀಕತ್ವದ ವೀಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ 2 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು. ಸಾವಿರಾರು ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್ ಅನ್ನು ಭಾರತ ಸರ್ಕಾರ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ನಿಷೆಧಿಸಿತ್ತು. ಇದೀಗ ಟಿಕ್‌ಟಾಕ್ ಮತ್ತೆ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

    ಟಿಕ್‌ಟಾಕ್ ಭಾರತದಲ್ಲಿ ಹೊಸ ಪಾಲುದಾರರನ್ನು ಹುಡುಕುತ್ತಿರುವುದಾಗಿ ವರದಿಯಾಗಿದೆ. ಪ್ರಸ್ತುತ ಬೈಟೆಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮರಳಿ ತರಲು ಮುಂಬೈ ಮೂಲದ ಹಿರನಂದಾನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಹಿರನಂದಾನಿ ಗ್ರೂಪ್ ಮುಂಬೈ, ಬೆಂಗಳೂರು ಹಾಗೂ ಚೆನ್ನೈನಾದ್ಯಂತ ಯೋಜನೆಗಳನ್ನು ಹೊಂದಿದ್ದು, ಇದು ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ. ಇದು ರಿಯಲ್ ಎಸ್ಟೇಟ್ ದೈತ್ಯ ಯೊಟ್ಟಾ ಇನ್ಫ್ರಾಸ್ಟ್ರಕ್ಚರ್ ಸೊಲ್ಯೂಷನ್ಸ್ ಅಡಿಯಲ್ಲಿ ಡೇಟಾ ಸೆಂಟರ್ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ತಂತ್ರಜ್ಞಾನ ನೇತೃತ್ವದ ಗ್ರಾಹಕ ಸೇವೆ ಆರ್ಮ್ ಟೆಜ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.

    ವರದಿಗಳ ಪ್ರಕಾರ ಎರಡೂ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಇದರ ಯೋಜನೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಮ್ಮೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ. ಆದರೆ ಯೋಜನೆಗಳ ಬಗ್ಗೆ ತಿಳಿಸಲಾಗಿದೆ. ಇದರ ಬಗ್ಗೆ ಕಂಪನಿ ಅನುಮೋದನೆಗೆ ಬಂದಾಗ ಅವರ ವಿನಂತಿಯನ್ನು ಪರಿಶೀಲಿಸಲಿದ್ದೇವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ಚೀನಾದೊಂದಿಗಿನ ಭಾರತದ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲದಿದ್ದರೂ ಚೀನಾ ಮೂಲದ ಅಪ್ಲಿಕೇಶನ್ ಮತ್ತೆ ಭಾರತದಲ್ಲಿ ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಆದರೆ ಭಾರತ ಇದಕ್ಕೆ ಅವಕಾಶ ನೀಡುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.

  • ರಾಜ್ಯದ ಜನರ ದುಡ್ಡು ದೋಚ್ತಿವೆ ಚೀನಿ ಆ್ಯಪ್‍ಗಳು – ಶೇರ್, ಲೈಕ್ ಕೊಡ್ತಿದ್ರೆ ಹುಷಾರಾಗಿರಿ

    ರಾಜ್ಯದ ಜನರ ದುಡ್ಡು ದೋಚ್ತಿವೆ ಚೀನಿ ಆ್ಯಪ್‍ಗಳು – ಶೇರ್, ಲೈಕ್ ಕೊಡ್ತಿದ್ರೆ ಹುಷಾರಾಗಿರಿ

    ಬೆಂಗಳೂರು: ಲೋನ್ ಆ್ಯಪ್ ಗಳ ಬಳಿಕ ಮತ್ತೊಂದು ರೀತಿಯ ಮಹಾ ಮಹಾ ವಂಚನೆ ಬಯಲಿಗೆ ಬಂದಿದೆ. ಲಿಂಕ್ ಶೇರ್ ಮಾಡಿ ಹಣ ಗಳಿಸಿ ಎಂದು ಆಫರ್ ಕೊಟ್ಟು, ಸೆಲೆಬ್ರಿಟಿಗಳು ಹಾಗೂ ಸೆಲೆಬ್ರಿಟಿಗಳ ಸುದ್ದಿ ಶೇರ್ ಮಾಡಿದ್ರೆ ದುಡ್ಡು ಕೊಡ್ತೀವಿ. ಕುಳಿತಲ್ಲೇ ಸಾವಿರಾರು ರೂಪಾಯಿ ಗಳಿಕೆಯ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರ ಪೊಲೀಸರು ಚೀನೀ ಗ್ಯಾಂಗ್ ನ ಮತ್ತೊಂದು ಚೀಟಿಂಗ್ ಜಾಲ ಪತ್ತೆ ಹಚ್ಚಿದ್ದಾರೆ. ಈ ಆ್ಯಪ್ ಮೂಲಕ ಬಡವರು, ಮಧ್ಯಮ ವರ್ಗದ ಜನರಿಗೆ ಆಮಿಷವೊಡ್ಡಿ ಹಣ ಲೂಟಿ ಮಾಡಲಾಗಿದ್ದು, ನಗರದ ದಕ್ಷಿಣ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರ ಬಂಧನ ಮಾಡಲಾಗಿದ್ದು, ಇನ್ನೂ ಕೆಲವರ ಹುಡುಕಾಟ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಇಬ್ಬರು ಸ್ಟಾರ್‌ಗಳ ಜೊತೆ ಯಶ್‌ಗೆ ಸ್ಥಾನ – ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಂಚನೆ ಹೇಗೆ?

    ಲೋನ್ ಆ್ಯಪ್ ರೀತಿ ಲಿಂಕ್ ಕಳಿಸೋ ಖದೀಮರ ಈ ಜಾಲ, ಆಂಡ್ರಾಯ್ಡ್ ಫೋನಿಗೆ ಎಪಿಕೆ ಲಿಂಕ್ ಕಳಿಸುತ್ತೆ. ಲಿಂಕ್ ನಲ್ಲಿ ಸರ್ಚ್ ಮಾಡಿದ್ರೆ ಆ್ಯಪ್ ಇನ್‍ಸ್ಟಾಲ್ ಆಗುತ್ತೆ. ಆ್ಯಪ್ ನಲ್ಲಿರುವ ವೀಡಿಯೋಗಳು, ಸೆಲೆಬ್ರಿಟಿಗಳ ಸುದ್ದಿ ಶೇರ್, ಲೈಕ್, ಕಾಮೆಂಟ್ ಮಾಡುವಂತೆ ಸೂಚನೆ ಬರುತ್ತೆ. ವೀಡಿಯೋಗಳನ್ನ ನೋಡಿ, ಲೈಕ್ ಮಾಡಿ, ಶೇರ್ ಮಾಡಿದ್ರೆ ಹಣ ಬರುತ್ತೆ ಎಂದು ಆಮಿಷ ಒಡ್ಡಲಾಗುತ್ತದೆ.

    ಒಂದು ವೀಡಿಯೋ ಶೇರ್ ಮಾಡಿದ್ರೆ ಇಪ್ಪತ್ತು ರೂ. ಕೊಡ್ತೀವಿ ಎಂದು ಆಮಿಷ ಬರುತ್ತೆ. ಮೊದಲಿಗೆ ಕಾಂಪ್ಲಿಮೆಂಟರಿಯಾಗಿ ಮೂರು ವೀಡಿಯೋ ಕಳಿಸೋ ಚೀನೀ ಗ್ಯಾಂಗ್, ಮೂರು ವೀಡಿಯೋ ನೋಡಿ ಲೈಕ್, ಶೇರ್ ಮಾಡಿದ್ರೆ 60 ರೂ. ಅಕೌಂಟ್ ಗೆ ಜಮೆಯಾಗುತ್ತೆ. ಸುಲಭವಾಗಿ ಕುಳಿತಲ್ಲೆ ಹಣ ಗಳಿಸಬಹುದು ಎಂದು ನಂಬಿಸೋ ಗ್ಯಾಂಗ್, ಮೂರು ವೀಡಿಯೋ ಅವಧಿ ಮುಗಿದ ಬಳಿಕ ಅಸಲಿ ಆಟ ಶುರು ಮಾಡುತ್ತದೆ. ಇದನ್ನೂ ಓದಿ:  ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ

    ರೀಚಾರ್ಜ್ ಮಾಡಿದ್ರೆ ಬ್ಲಾಕ್

    ಈ ಟಾಸ್ಕ್ ನಲ್ಲಿ ಮುಂದುವರೆಯಲು ರೀಚಾರ್ಜ್ ಮಾಡುವಂತೆ ಸೂಚನೆ ಬರುತ್ತೆ. ಮೊದಲ ರೀಚಾರ್ಜ್ 6 ರಿಂದ 30 ಸಾವಿರ ಮಾಡಲು ಅವಕಾಶ ನೀಡಲಾಗುತ್ತೆ. ರೀಚಾರ್ಜ್ ಮಾಡಿದ ನಾಲ್ಕೈದು ದಿನದಲ್ಲಿ ಆ್ಯಪ್ ಬ್ಲಾಕ್ ಆಗುತ್ತೆ. ಈ ವೇಳೆ ಹಣ ತೆಗೆಯಲು, ಕಳಿಸಲು ನಿರ್ಬಂಧ ವಿಧಿಸುತ್ತದೆ. ಯಾಕೆ ಅಂತ ಪ್ರಶ್ನೆ ಮಾಡಿದ್ರೆ ನೀವು ಒಂದು ಲೆವೆಲ್ ರೀಚ್ ಆಗಿದ್ದೀರಿ. ಮತ್ತೊಂದು ಲೆವೆಲ್ ಗೆ ಹೋಗಲು ರೀಚಾರ್ಜ್ ಮಾಡಬೇಕು ಎಂಬ ಉತ್ತರ ಸಿಗುತ್ತದೆ.

    50 ಸಾವಿರ ಮೇಲ್ಪಟ್ಟು ರೀಚಾರ್ಜ್ ಮಾಡಲು ಕರೆ ಬರುತ್ತೆ. ಎರಡನೇ ರೀಚಾರ್ಜ್ 50 ಸಾವಿರ ಮೇಲ್ಪಟ್ಟು ಮಾಡಿದರೆ ಹೆಚ್ಚಿನ ಹಣದ ಆಮಿಷವೊಡ್ತಾರೆ. ದುಡ್ಡಿನ ಆಸೆಗಾಗಿ ತಾ ಮುಂದು ನಾ ಮುಂದು ಎಂದು ರೀಚಾರ್ಜ್ ಮಾಡಿದ ಜನರಿಗೆ, ರೀಚಾರ್ಜ್ ಆದ ಕೆಲವೇ ದಿನಗಳಲ್ಲಿ ಆ್ಯಪ್ ಮತ್ತೆ ಬ್ಲಾಕ್ ಆಗುತ್ತೆ. ಪುನಃ ಯಾಕೆ ಏನು ಅಂತ ಪ್ರಶ್ನೆ ಮಾಡಿದ್ರೆ, ಲೆವೆಲ್ ಚೇಂಜ್ ಅನ್ನೋ ಉತ್ತರ. ಒಂದು ಲಕ್ಷಕ್ಕೆ ರೀಚಾರ್ಜ್ ಮಾಡಿ ಅನಿಯಮಿತ ಟಾಸ್ಕ್ ಆಡಿ ಎಂದು ಆಫರ್ ಬರುತ್ತೆ.

    ಈ ವೇಳೆ ಜನ ಒಂದು ಲಕ್ಷನಾ ಅಂತ ಮೀನಾಮೇಷ ಎಣಿಸಿದ್ರೆ ಸಿಗುತ್ತೆ ಬಂಪರ್ ಆಫರ್. 70 ಸಾವಿರ ರೀಚಾರ್ಜ್ ಮಾಡಿ ಅನ್ನೋ ರಿಯಾಯಿತಿ. ಈ ವೇಳೆ ಲಕ್ಷಾಂತರ ಜನರಿಂದ 70 ಸಾವಿರ ರೂ. ಗೆ ರೀಚಾರ್ಜ್ ಆಗಿದ್ದು, ಕೋಟಿ ಕೋಟಿ ಹಣ ರೀಚಾರ್ಜ್ ಆದ ಕೂಡಲೇ ಆ್ಯಪ್ ನ ವ್ಯಾಲೆಟ್ ಬ್ಲಾಕ್ ಆಗಿದೆ ಎಂದು ಉತ್ತರ ಬರುತ್ತೆ. ಇದನ್ನೂ ಓದಿ:  ಪ್ರವಾಸಿಗರು ದೀಪಾಲಂಕಾರವನ್ನು ವೀಕ್ಷಿಸುವಾಗ ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು: ಸೋಮಶೇಖರ್ ಮನವಿ

    ಕೋಟ್ಯಂತರ ವಂಚನೆ:

    ಮಾರ್ಚ್ 15 ರಂದು ದಿಢೀರನೆ ವ್ಯಾಲೇಟ್ ಕ್ಲೋಸ್ ಮಾಡಿದ ಗ್ಯಾಂಗ್, ವ್ಯಾಲೇಟ್ ನಲ್ಲಿದ್ದ ಹಣ ಕ್ರಿಪ್ಟೋ ಮೂಲಕ ವರ್ಗಾವಣೆ ಮಾಡಿ ಎಸ್ಕೇಪ್ ಆಗಿದೆ. ಚೀನೀ ಗ್ಯಾಂಗ್ ನ ನಯವಂಚಕ ಕೃತ್ಯದಿಂದ ಜನರು ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರು, ಕರ್ನಾಟಕ ಮಾತ್ರವಲ್ಲದೆ ದೇಶದ ಸಾವಿರಾರು ಜನರಿಂದ ಆ್ಯಪ್ ನಲ್ಲಿ ಹಣ ಹೂಡಿಕೆಯಾಗಿದೆ. ಒಂದು ಸಾವಿರ ರೂ.ಯಿಂದ ಹಿಡಿದು ಲಕ್ಷ, ಲಕ್ಷ ಹಣ ಹೂಡಿಕೆಯಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ 20 ಕೋಟಿ ರೂ. ಚೀಟಿಂಗ್ ಪತ್ತೆಯಾಗಿದೆ. ಅದರಲ್ಲಿ ಪೊಲೀಸರು 11 ಕೋಟಿಯಷ್ಟು ಅಕೌಂಟ್ ಟ್ರಾನ್ಸಫರ್ ಪತ್ತೆ ಹಚ್ಚಿದ್ದಾರೆ. ಕೃತ್ಯದಲ್ಲಿ ಚೀನೀ ಮೂಲದ ಗ್ಯಾಂಗ್ ಕೈವಾಡವಿದ್ದು, ಆ್ಯಪ್ ಸಿದ್ದಗೊಳಿಸಿ ಭಾರತದಲ್ಲಿ ಚಾಲನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

  • ಡಿಜಿಟಲ್ ಸ್ಟ್ರೈಕ್ 3 – ಮತ್ತೆ 43 ಚೀನಿ ಆ್ಯಪ್‍ಗಳು ನಿಷೇಧ

    ಡಿಜಿಟಲ್ ಸ್ಟ್ರೈಕ್ 3 – ಮತ್ತೆ 43 ಚೀನಿ ಆ್ಯಪ್‍ಗಳು ನಿಷೇಧ

    ನವದೆಹಲಿ: 43 ಚೀನಾ ಆ್ಯಪ್‍ಗಳನ್ನು ಭಾರತದಲ್ಲಿ ನಿಷೇಧ ಮಾಡಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.

    ಇಂದು ಈ ವಿಚಾರವಾಗಿ ಪತ್ರಿಕಾ ಹೇಳಿಯನ್ನು ಬಿಡುಗಡೆ ಮಾಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ. ಜೊತೆಗೆ ಈ ಆ್ಯಪ್‍ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ಮಾಹಿತಿ ಇರುವುದರಿಂದ ಬ್ಯಾನ್ ಮಾಡಿದ್ದೇವೆ ಎಂದು ತಿಳಿಸಿದೆ.

    ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ 43 ಆ್ಯಪ್‍ಗಳನ್ನು ನಿಷೇಧ ಮಾಡುವಂತೆ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ ಎಂದು ತಿಳಿಸಿದೆ. ಈ ಹಿಂದೆಯೂ ಕೂಡ ಭಾರತ ಸರ್ಕಾರ ಟಿಕ್‍ಟಾಕ್ ಸೇರಿದಂತೆ ಸುಮಾರು 118 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿತ್ತು.

    ಗಲ್ವಾನ್ ಘರ್ಷಣೆಯ ನಂತರ ಕಳೆದ ಜೂನ್ 29 ರಂದು ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿತ್ತು. ನಂತರ ಈ 59 ಆ್ಯಪ್‍ಗಳನ್ನು ಒಳಗೊಂಡಂತೆ ಸೆಪ್ಟಂಬರ್ 2ರಂದು 118 ಆ್ಯಪ್‍ಗಳನ್ನು ನಿಷೇಧ ಮಾಡಲಾಗಿತ್ತು. ಈಗ ಮತ್ತೆ ಚೀನಾ ದೇಶದ ಅಲಿ ಎಕ್ಸ್ ಪ್ರೆಸ್, ಆಲಿಬಾಬ ವರ್ಕ್ ಬೆಂಚ್ ಮತ್ತು ಕ್ಯಾಮ್‍ಕಾಡ್ ಸೇರಿದಂತೆ ಸುಮಾರು 43 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಅಪ್ಲಿಕೇಶನ್‍ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‍ಗಳನ್ನು ನಿಷೇಧಿಸಿ ಎಂದು ಜೂನ್‍ನಲ್ಲಿ ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‍ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

  • ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್

    ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್

    – 59 ಚೀನಾ ಆ್ಯಪ್ ಬ್ಯಾನ್ ಮಾಡಿದ್ದಕ್ಕೆ ಶಾಸಕರು ವಿರೋಧ

    ಮಂಗಳೂರು: ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಾಸಕ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಚೈನಾಗೆ ಆ್ಯಪ್‍ನಿಂದ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್‍ನಿಂದ ಲಾಭ ಇಲ್ಲ. ಪಿಎಂ ಕೇರ್ಸ್ ಫಂಡ್‍ಗೆ ಟಿಕ್‍ಟಾಕ್‍ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರಕ್ಕೆ ಅವರ ಹಣವನ್ನು ತೆಗದುಕೊಳ್ಳೋಕೆ ನಾಚಿಕೆ ಆಗೋದಿಲ್ವಾ ಎಂದು ಮರು ಪ್ರಶ್ನೆ ಹಾಕಿದ್ರು.

    ಚೀನಾ ಆ್ಯಪ್ ಕಂಪನಿಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದರು. ಈಗ ಅವರು ಕೆಲಸ ಕಳೆದುಕೊಂಡಿದ್ದಾರೆ. ಆ್ಯಪ್ ಮೂಲಕ ಭಾರತೀಯರು ಆದಾಯ ಪಡೆಯುತ್ತಿದ್ದರು. ಪ್ರಚಾರಕ್ಕೋಸ್ಕರ ಸರ್ಕಾರ ಆ್ಯಪ್ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ ನಗುವ ಪರಿಸ್ಥಿತಿ ಬಂದಿದೆ ಎಂದರು.

    ಪ್ರಿಯಾಂಕಾ ಗಾಂಧಿಗೆ ಸರ್ಕಾರದ ಬಂಗಲೆ ವಾಪಾಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಶಾಸಕರು, ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಹವಾ ಇದೆ. ಇದರಿಂದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿಯ ತಂದೆ, ಅಜ್ಜಿಯನ್ನು ಭಯೋತ್ಪಾದಕರು ಕೊಂದಿದ್ದಾರೆ. ಹಾಗಾಗಿ ಪ್ರಿಯಾಂಕಾ ಗಾಂಧಿಗೂ ರಕ್ಷಣೆ ನೀಡಲಾಗಿದೆ. ದೆಹಲಿಯಲ್ಲಿ ತುಂಬಾ ಮಂದಿ ಸರ್ಕಾರಿ ಬಂಗಲೆಯಲ್ಲಿ ಇದ್ದಾರೆ. ಅವರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ದ್ವೇಷದ ರಾಜಕಾರಣವನ್ನು ಜನರು ಸಹಿಸೋದಿಲ್ಲ ಎಂದು ಗರಂ ಆದರು.

    ಇನ್ನು ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ ವಿಚಾರದ ಕುರಿತು ಮಾತನಾಡಿ, ಅಮಾನವೀಯವಾಗಿ ನಡೆದುಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಆರೋಗ್ಯ ಸಚಿವರ ಜಿಲ್ಲೆ ಅಂತ ರಿಯಾಯಿತಿ ಕೊಡಲಾಗಿದ್ಯಾ?, ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು. ಮುಂದಿನ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಅಂಬುಲೆನ್ಸ್ ಸೇವೆ ಇಲ್ಲ. ಎಲ್ಲಾ ಧರ್ಮದವರಿಗೂ ಸರಿಯಾದ ಅಂತ್ಯಕ್ರಿಯೆ ಮಾಡಲು ಸರ್ಕಾರ ಸ್ಥಳ ಗುರುತಿಸಬೇಕು ಎಂದು ಖಾದರ್ ಆಗ್ರಹಿಸಿದರು.

  • ಟಿಕ್‍ಟಾಕ್ ಬ್ಯಾನ್- ನೆಟ್ಟಿಗರಿಂದ ಶ್ರದ್ಧಾಂಜಲಿ

    ಟಿಕ್‍ಟಾಕ್ ಬ್ಯಾನ್- ನೆಟ್ಟಿಗರಿಂದ ಶ್ರದ್ಧಾಂಜಲಿ

    ಬೆಂಗಳೂರು: ಟಿಕ್‍ಟಾಕ್, ಹೆಲೋ ಆ್ಯಪ್ ಸೇರಿದಂತೆ ಚೀನಾದ 59 ಮೊಬೈಲ್ ಆ್ಯಪ್‍ಗಳನ್ನ ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಟಿಕ್‍ಟಾಕ್ ನಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಿದ್ದ ಕೆಲ ನೆಟ್ಟಿಗರಿಗೆ ಬೇಸರವಾದ್ರೆ, ಬಹುತೇಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/Monu_memer/status/1277651268840779776

    ಟಿಕ್‍ಟಾಕ್ ಫೋಟೋಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿಯನ್ನು ನೆಟ್ಟಿಗರು ಸಲ್ಲಿಸಿದ್ದಾರೆ. ಇನ್ನು ಟಿಕ್‍ಟಾಕ್ ಮೂಲಕ ಫೇಮಸ್ ಆಗಿದ್ದ ಬಳಕೆದಾರರು, ಇಷ್ಟು ದಿನ ಮಾಡಿದೆಲ್ಲ ವ್ಯರ್ಥವಾಯ್ತು ಅನ್ನೋ ರೀತಿಯ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದೆಲ್ಲ ಒಂದು ಕಡೆಯಾದ್ರೆ ಪ್ರಧಾನಿ ಮೋದಿ ನೆರೆಯ ವೈರಿ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಬರೆದುಕೊಂಡು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಗಲ್ವಾನಾ ಗಡಿಯಲ್ಲಿ ನಡೆದ ಘರ್ಷಣೆ ಬಳಿಕ ಚೀನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಚೀನಾದ ವಸ್ತುಗಳ ಬಳಕೆಯನ್ನು ನಿಲ್ಲಿಸಿ ಎಂದು ಬಾಯ್ಕಟ್ ಚಿನಾ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು. ಸರ್ಕಾರದ ಘೋಷಣೆಗೂ ಮುನ್ನವೇ ಹಲವರು ಚೀನಾದ ಆ್ಯಪ್‍ಗಳನ್ನು ಅನ್ ಇನ್‍ಸ್ಟಾಲ್ ಮಾಡಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರೋ ಸರ್ಕಾರ, ಮೊಬೈಲ್‍ಗಳಲ್ಲಿ ಚೀನಾದ ಆ್ಯಪ್‍ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.

    https://twitter.com/Thisisforprabha/status/1277647538107977728