Tag: Chilume

  • ವೋಟರ್‌ಗೇಟ್‌ ಹಗರಣಕ್ಕೆ ಅಡ್ಡ ಆಗಿತ್ತಾ ಪ್ರಭಾವಿ ಶಾಸಕರ ಕಚೇರಿ?

    ವೋಟರ್‌ಗೇಟ್‌ ಹಗರಣಕ್ಕೆ ಅಡ್ಡ ಆಗಿತ್ತಾ ಪ್ರಭಾವಿ ಶಾಸಕರ ಕಚೇರಿ?

    – ಪಾಲಿಕೆ ಅನುಮತಿ ರದ್ದು ಬಳಿಕವೂ ಐಡಿ ಸಮೀಕ್ಷೆ

    ಬೆಂಗಳೂರು: ಬಿಬಿಎಂಪಿಯ ವೋಟರ್‌ ದತ್ತಾಂಶ ಹಗರಣ(Voter Data Scam) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಿಲುಮೆ(Chilume) ಸಂಸ್ಥೆಯ ಸಿಬ್ಬಂದಿ ಹೊಂಗಸಂದ್ರ ವಾರ್ಡ್‍ನ ಶಾಸಕರ ಕಚೇರಿಯಿಂದ ಕಾರ್ಯನಿರ್ವಹಿಸಿರುವುದು ಬೆಳಕಿಗೆ ಬಂದಿದೆ.

    ಚಿಲುಮೆಯ(Chilume) ಅಕ್ರಮಗಳು ಬಯಲಿಗೆ ಬರುವ ಸುಳಿವನ್ನು ಅರಿತಿದ್ದ ಬಿಬಿಎಂಪಿ(BBMP) ತರಾತುರಿಯಲ್ಲಿ ನವೆಂಬರ್ 2ರಂದು ಚಿಲುಮೆಗೆ ನೀಡಿದ್ದ ಸರ್ವೇ ಅನುಮತಿಯನ್ನು ರದ್ದು ಮಾಡಿತ್ತು. ಈ ಬೆನ್ನಲ್ಲೇ ಚಿಲುಮೆಯ ನಾಲ್ಕು ಕಚೇರಿಗಳು ದಿಢೀರ್ ಎಂದು ಬಂದ್ ಆಗಿದ್ದವು. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಈ ಹೊತ್ತಲ್ಲಿ ಚಿಲುಮೆಯ ಸರ್ವೇ ಸಿಬ್ಬಂದಿಗೆ ಆಶ್ರಯ ಸಿಕ್ಕಿದ್ದು ಹೊಂಗಸಂದ್ರ ವಾರ್ಡ್‍ನ(Hongasandra Ward) ಶಾಸಕರ ಕಚೇರಿಯಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿನ ಆ ಪ್ರಭಾವಿ ಶಾಸಕರ ಕಚೇರಿಯಲ್ಲಿ ಕುಳಿತೇ ಚಿಲುಮೆ ಸಂಸ್ಥೆಯ ಸರ್ವೇ ಸಿಬ್ಬಂದಿ ನವೆಂಬರ್ 17ರವರೆಗೂ ಕಾರ್ಯನಿರ್ವಹಿಸಿದ್ದರು ಎನ್ನಲಾಗುತ್ತಿದೆ.

    ಈ ಆರೋಪ ನಿಜವೇ ಆದಲ್ಲಿ, ಇಡೀ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ಸಿಗಲಿದೆ. ಬಿಜೆಪಿಯ ಆ ಶಾಸಕ ಮತ್ತು ಬಿಬಿಎಂಪಿ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಈ ಮಧ್ಯೆ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರ ಕ್ಷೇತ್ರಗಳ ಮತದಾರರ ಮಾಹಿತಿಯನ್ನು ಚಿಲುಮೆ ಸಂಸ್ಥೆಯ ರವಿಕುಮಾರ್ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ

    ಮತ ಮಾಹಿತಿಗಳವು ಪ್ರಕರಣದಲ್ಲಿ ಬಂಧಿತ ಕಿಂಗ್‍ಪಿನ್ ರವಿಕುಮಾರ್ ವಿಚಾರಣೆ ತೀವ್ರಗೊಂಡಿದೆ. ಚಿಲುಮೆಯ ಕೆಂಪೇಗೌಡ, ಧರ್ಮೇಶ್‍ನನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿವೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಪತ್ರಗಳು ಲಭ್ಯವಾಗಿವೆ.

    ಆರ್‌ಓಗಳ ಮೂಲಕವೇ ಮತಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿಲುಮೆ ಮಾಹಿತಿ ಆಧರಿಸಿಯೇ ಆರ್‌ಓಗಳು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಆದರೂ ಈವರೆಗೂ ಕೇವಲ ಮೂವರು ಆರ್‌ಓಗಳನ್ನು ಅಮಾನತು ಮಾಡಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯನ್ನು ಬಂಧಿಸಿ: ಡಿಕೆಶಿ ಆಗ್ರಹ

    ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯನ್ನು ಬಂಧಿಸಿ: ಡಿಕೆಶಿ ಆಗ್ರಹ

    ರಾಮನಗರ: ವೋಟರ್ ಐಡಿ ಅಕ್ರಮ (Voters Survey) ಪ್ರಕರಣದ ಒಬ್ಬ ಕಿಂಗ್ ಪಿನ್ ಬಂಧನ ಮಾಡಿದ್ರೆ ಸಾಲದು. ಇದರ ಹಿಂದೆ ಯಾರಿದ್ದಾರೆ? ಯಾವ ರಾಜಕಾರಣಿ ಇದ್ದಾರೆ? ಯಾವ ಮಂತ್ರಿ ಇದ್ದಾರೆ ಎಲ್ಲವೂ ತನಿಖೆ ಆಗಬೇಕು. ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳೂ ಪ್ರಕರಣದಲ್ಲಿ ಭಾಗಿ ಆಗಿದ್ದರೆ ಅವರ ಬಂಧನ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಆಗ್ರಹಿಸಿದ್ದಾರೆ.

    ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಲುಮೆ (Chilume) ಸಂಸ್ಥೆಯಲ್ಲಿ ಕೆಲಸಕ್ಕೆ ಬಂದಿರುವ ಪಾಪ ಹುಡುಗ ಏನು ಮಾಡ್ತಾನೆ. ಅಗ್ರಿಮೆಂಟ್ ಮಾಡಿಕೊಟ್ಟವರು ಯಾರು? ಆದೇಶ ಕೊಟ್ಟವರು ಯಾರು? ಮೇಲಿನವರಿಂದ ಆದೇಶ ಬಂತು ಅಂತ ಅಲ್ಲಿನ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಂದಮೇಲೆ ಆ ಮೇಲಿನವರು ಅಂದ್ರೆ ಯಾರು? ಮುಖ್ಯಮಂತ್ರಿಗಳಾ? ಅಥವಾ ಸಚಿವರಾ ಎಂಬುದು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಿಲುಮೆ ವಿರುದ್ಧ ಕೇಸ್‌: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ

    ರಾಜ್ಯದ ಜನರನ್ನು ಡಿಕೆಶಿ ಮತ್ತು ಸಿದ್ದರಾಮಯ್ಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅಶ್ವಥ್ ನಾರಾಯಣ (Ashwathnarayan) ಆರೋಪ ವಿಚಾರವಾಗಿ ಮಾತನಾಡಿ, ಅಲ್ಲಿ ನನ್ನ ಚೆಕ್ ಸಿಕ್ಕಿದೆಯಾ? ನಾನೇನಾದ್ರು ಕೆಲಸ ಮಾಡು ಅಂತ ಹೇಳಿದ್ನಾ? ನಮ್ಮ ಕಾಲದಲ್ಲಿ ನಾವೇನಾದ್ರು ಮಾಡಿದ್ರೆ ನಮ್ಮ ಮೇಲೂ ತನಿಖೆ ಆಗಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ಚಿಲುಮೆ ವಿರುದ್ಧ ಕೇಸ್‌: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ

    ಚಿಲುಮೆ ವಿರುದ್ಧ ಕೇಸ್‌: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ

    ಬೆಂಗಳೂರು: ವೋಟರ್ ಐಡಿ ಹಗರಣಕ್ಕೆ(Voter Data Theft Case) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ(Karnataka Government) ಯಾವುದೇ ತನಿಖೆಗೆ ಆದೇಶ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

    ಚಿಲುಮೆ(Chilume) ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಚುನಾವಣಾ ಆಯೋಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಏನೇ ಅಕ್ರಮ ನಡೆದರೂ ಚುನಾವಣಾ ಆಯೋಗಕ್ಕೆ(Election Commission) ಮಾತ್ರ ತನಿಖೆ ನಡೆಸುವ ಅಧಿಕಾರ ಇದೆ ಎಂದು ಹೇಳಿದೆ.

    ಹೇಳಿಕೆಯಲ್ಲಿ ಏನಿದೆ?
    ಸರ್ಕಾರ ಮತದಾರರ ಮಾಹಿತಿ ಕಲೆ ಹಾಕಿದ ಖಾಸಗಿ ಸಂಸ್ಥೆ ವಿರುದ್ಧ ತನಿಖೆಗ ಆದೇಶಿಸಿದ್ದು ಕಾಡುಗೋಡಿ ಮತ್ತು ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತದ ಚುನಾವಣಾ ಆಯೋಗ ಸ್ವತಂತ್ರ ಅಂಗವಾಗಿದ್ದು ಮತದಾರರ ಪಟ್ಟಿಗಳ ತಯಾರಿ, ಪ್ರಕಟಣೆ ಮತ್ತು ಪರಿಷ್ಕರಣೆ ಕೈಗೊಳ್ಳುತ್ತದೆ.  ಇದನ್ನೂ ಓದಿ: ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಭಾರತದ ಚುನಾವಣಾ ಆಯೋಗದ ನಿರ್ದೇಶನದೊಂದಿಗೆ ಎಲ್ಲಾ ಚಟುವಟಿಕೆಗಳನ್ನು ನೇರವಾಗಿ ಅಧೀಕ್ಷಕರ ಅಡಿಯಲ್ಲಿ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಯಾವುದೇ ಪಾತ್ರವನ್ನು ಹೊಂದಿಲ್ಲ.

    ಮತದಾರರ ಪಟ್ಟಿಗಳ ನಿರ್ವಹಣೆ, ಚುನಾವಣೆಗಳನ್ನು ನಡೆಸುವುದು, ಚುನಾವಣಾ ವಿಷಯಗಳಲ್ಲಿ ಅಕ್ರಮ ಆರೋಪ ಬಂದಾಗ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರವಿದೆ ಹೊರತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಬೆಂಗಳೂರು: ಮತದಾರರ ಮಾಹಿತಿ ಕಳವು (Voter Data Theft) ಪ್ರಕರಣ ಸಂಬಂಧ ಪೊಲೀಸರ (Police) ತನಿಖೆ ತೀವ್ರಗೊಂಡಿದೆ. ಒಬ್ಬೊಬ್ಬರೇ ಆರೋಪಿಗಳು ಖಾಕಿ ಬಲೆಗೆ ಬೀಳುತ್ತಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್‌ನನ್ನು (Ravikumar) ಪೊಲೀಸರು ಬಂಧಿಸಿದ್ದಾರೆ.

    ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರಿಂದ ರೇಣುಕಪ್ರಸಾದ್, ಧರ್ಮೇಶ್ ಬೆನ್ನಲ್ಲೇ ಕಂಪನಿ ನಿರ್ದೇಶಕರಾದ ಕೆಂಪೇಗೌಡ, ಐಶ್ವರ್ಯರನ್ನು ಪೊಲೀಸ್ರು ಬಂಧಿಸಿದ್ರು. ಇಂದು ಡಿಜಿಟಲ್ ಸಮೀಕ್ಷಾ ಆ್ಯಪ್ ಡೆವಲಪ್ ಮಾಡಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    ಡಿಜಿಟಲ್ ಸಮೀಕ್ಷಾ ಆ್ಯಪ್ ಶೋಧಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ. ಮತ್ತೊಂದು ಕಡೆ ವಿವಿಧ ತಂಡಗಳಾಗಿ ಪೊಲೀಸರು ಹಲವೆಡೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಕಲೆಹಾಕ್ತಿದ್ದಾರೆ. ಇಲ್ಲಿವರೆಗೂ ಚಿಲುಮೆ ಸಂಸ್ಥೆಯಿಂದ ಯಾರಿಗೆಲ್ಲಾ ಲಾಭವಾಗಿದೆ, ಯಾರೆಲ್ಲಾ ರಾಜಕೀಯ ಮುಖಂಡರು, ಅಧಿಕಾರಿಗಳು ಇದಕ್ಕೆ ಕೈ ಜೋಡಿಸಿದ್ದಾರೆ ಅನ್ನೋದ್ರ ಮಾಹಿತಿಯನ್ನು ಪೊಲೀಸ್ರು ಹೆಕ್ಕುತ್ತಿದ್ದಾರೆ. ಏಳಕ್ಕೂ ಹೆಚ್ಚು ಕ್ಷೇತ್ರಗಳ ಮತದಾರರ ಮಾಹಿತಿ ಎಗರಿಸಿದ್ದ ಚಿಲುಮೆ, ಸಚಿವರು ಮತ್ತು ಶಾಸಕರಿಗೆ ಮಾರಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಬ್ಲಾಕ್ ಮನಿಯನ್ನು ವೈಟ್ ಮಾಡಿತಾ ಚಿಲುಮೆ..?- ಡಿಕೆಶಿ ಹೊಸ ಬಾಂಬ್

    ಬ್ಲಾಕ್ ಮನಿಯನ್ನು ವೈಟ್ ಮಾಡಿತಾ ಚಿಲುಮೆ..?- ಡಿಕೆಶಿ ಹೊಸ ಬಾಂಬ್

    ಬೆಂಗಳೂರು: ಮತ ಮಾಹಿತಿ ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಚಿಲುಮೆ ಸಂಸ್ಥೆ (Chilume Enterprises Private Limited) ಯಲ್ಲಿ ಬ್ಲಾಕ್ ಮನಿ ವೈಟ್ ಆಗಿದೆ. ನೋಟ್ ಕೌಂಟಿಂಗ್ ಮಿಷನ್ ಕೂಡ ಸಿಕ್ಕಿದೆ. ವೋಟರ್ ಲಿಸ್ಟ್ ಅಕ್ರಮ ಬಯಲಾಗಿದೆ. ಸರ್ಕಾರ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ವೋಟರ್ ಲಿಸ್ಟ್ (Voter List) ನಲ್ಲೂ ಭ್ರಷ್ಟತನವನ್ನು ಮಾಧ್ಯಮದ ಮುಂದೆಯೂ ಇಟ್ಟಿದ್ದೇವೆ. ಆದರೆ ಸರ್ಕಾರ ಯಾರನ್ನೂ ಇದುವರೆಗೆ ಬಂಧನ ಮಾಡಿಲ್ಲ. ನೋಟ್ ಕೌಂಟಿಂಗ್ ಮಿಷನ್ ಕೂಡ ಅದೇ ಕಚೇರಿಯಲ್ಲಿ ಇದೆ. 2000 ರೂ. ಮೇಲೆ ಯಾರೂ ಹಣ ಇಸ್ಕೊಳ್ಳುವಂತಿಲ್ಲ. ಹಣದ ಅವ್ಯವಹಾರ ಕೂಡ ಚಿಲುಮೆ ಕಚೇರಿಯಲ್ಲಿ ನಡೆದಿದೆ.ಬ್ಲಾಕ್ ಮನಿ ವೈಟ್ ಮಾಡುವ ಕೆಲಸ ನಡೆದಿದೆ ಎಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ಮತದಾರರ ಪಟ್ಟಿ ಕಳವು ಪ್ರಕರಣ ಸಂಬಂಧ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಯಲಾಗಿದೆ. ಈ ಬೆನ್ನಲ್ಲೇ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ. ಸದ್ಯ ಕಂಪ್ಯೂಟರ್ ನಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಬೆಂಗಳೂರು: ಮತದಾರರ ಪಟ್ಟಿ ಕಳವು ಪ್ರಕರಣ ಸಂಬಂಧ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಯಲಾಗಿದೆ. ಈ ಬೆನ್ನಲ್ಲೇ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ (E-Mail) ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ. ಸದ್ಯ ಕಂಪ್ಯೂಟರ್ ನಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ಈ ನಡುವೆ ಚಿಲುಮೆ ಸಂಸ್ಥೆ (Chilume Enterprises Private Limited) ಯ ಮೇಲೆ ಪೊಲೀಸರ ದಾಳಿ ಮಾಡಿದ್ದು, ಈ ವೇಳೆ 80 ಬಿಎಲ್ ಓ ಕಾರ್ಡ್, ಲ್ಯಾಪ್ ಟಾಪ್ ಗಳು, ಒಂದು ಟ್ಯಾಬ್, ಕಂಪ್ಯೂಟರ್ ಗಳು, ಕೆಲವೊಂದು ಲೆಟರ್ ಹೆಡ್ ಗಳು, ಹಣ ಎಣಿಸೋ ಮೆಷಿನ್ ಹಾಗೂ ಬ್ಯಾಂಕ್ ಅಕೌಂಟ್‍ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಅಲ್ಲದೆ ಎಸ್‍ಬಿಐ, ಆಕ್ಸಿಸ್ ಬ್ಯಾಂಕ್‍ನಲ್ಲಿ ಕೋಟ್ಯಂತರ ರೂ. ವ್ಯವಹಾರ ಮಾಡಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ನಾಲ್ವರು ಚಿಲುಮೆ ಸಿಬ್ಬಂದಿಗೆ ನೋಟಿಸ್: ವೋಟರ್ ಐಡಿಗಳ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸರು ವಿಚಾರಗೆ ಹಾಜರಾಗುವಂತೆ ಚಿಲುಮೆ ಸಂಸ್ಥೆಯ ನಾಲ್ವರು ಸಿಬ್ಬಂದಿಗೆ ನೋಟೀಸ್ ನೀಡಿದ್ದಾರೆ. ಪ್ರಕರಣದ ಕುರಿತು ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೂವರು ಎಸ್ಕೇಪ್ ಆಗಿದ್ದಾರೆ. ಚಿಲುಮೆ ಸಂಸ್ಥೆಯ ಮಾಲೀಕ ರವಿಕುಮಾರ್, ಸಿಬ್ಬಂದಿ ಕೆಂಪೇಗೌಡ ಹಾಗೂ ರಕ್ಷಿತ್ ಎಸ್ಕೇಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ಬೆಂಗಳೂರು: ಚಿಲುಮೆ (Chilume) ಯಿಂದ ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡವಿರುವುದು ಬಯಲಾಗಿದೆ. ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳು ಶಾಮೀಲುಲಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚಿಲುಮೆ ಸಂಸ್ಥೆ ಜೊತೆ ಪ್ರಭಾವಿ ರಾಜಕಾರಣಿಗಳ ಕರಾರು ಪತ್ರ ಪತ್ತೆಯಾಗಿದ್ದು, ಇಬ್ಬರು ರಾಜಕಾರಣಿಗಳು ಚುನಾವಣಾ ಸಮೀಕ್ಷೆ (Election Survey) ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಲೆಟರ್ ಹೆಡ್‍ಗಳು ಕೂಡ ಪತ್ತೆಯಾಗಿದೆ.

    11ಕ್ಕೂ ಹೆಚ್ಚು ರಾಜಕಾರಣಿಗಳು, ಐಎಎಸ್ (IAS), ಕೆಎಎಸ್ (KAS) ಅಧಿಕಾರಿಗಳ ವಿಸಿಟಿಂಗ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 7ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಸಿದ ಕೆಲವು ಕ್ಷೇತ್ರಗಳ ಸಮೀಕ್ಷೆಗಳ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಸಂಸ್ಥೆಯ ಲೆಟರ್‍ಹೆಡ್‍ಗಳು ಕೂಡ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ದಾಳಿ ವೇಳೆ ಸಿಕ್ಕಿದ್ದೇನು..?: ಅಸಲಿಗೆ ಚಿಲುಮೆ ಸಂಸ್ಥೆಯ ಮೇಲಿನ ದಾಳಿಯಲ್ಲಿ ಅಧಿಕೃತ ಕಚೇರಿ ಹೊಂದಿದ್ದರೂ ಅನಧಿಕೃತವಾಗಿ ಬಿಲ್ಡಿಂಗ್ ಒಂದರಲ್ಲಿ ವ್ಯವಹಾರ ನಡೆಸುತ್ತಿರುವುದು ಬಯಲಾಗಿದೆ. ಈ ಕಟ್ಟಡದಲ್ಲಿನ ದಾಳಿ ವೇಳೆ ಪೊಲೀಸರಿಗೆ ಭರ್ಜರಿ ದಾಖಲೆ ಸಿಕ್ಕಿದೆ. ನಾಲ್ಕು ಬ್ಯಾಗ್ ಗಳು, ಒಂದು ಚೀಲದಲ್ಲಿ ಪೊಲೀಸರು ಚೆಕ್ ಗಳು, ಬ್ರೌಷರ್ ಗಳು, ಲೆಟರ್ ಹೆಡ್ ಗಳು, ಸ್ಕಾಲರ್ ಶಿಪ್ ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ.

    ಅಸಲಿಗೆ ಈ ಚೆಕ್ ಗಳು ಲೆಟರ್ ಹೆಡ್ ಗಳು ಚಿಲುಮೆ ಸಂಸ್ಥೆಯದ್ದಲ್ಲ. ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಚೆಕ್, ಲೆಟರ್ ಹೆಡ್ ಬ್ರೌಷರ್ ಪತ್ತೆಯಾಗಿದೆ. ಆ ಪ್ರಭಾವಿ ರಾಜಕಾರಣಿಗೂ ಚಿಲುಮೆಗೂ ಇರುವ ಸಂಬಂಧವೇನು..?, ಚಿಲುಮೆ ಹೆಸರಲ್ಲಿ ಆ ಕಟ್ಟಡದಲ್ಲಿ ರಾಜಕಾರಣಿ ಮಾಡ್ತಿದ್ದ ವ್ಯವಹಾರವಾದ್ರು ಏನು ಎನ್ನುವುದರ ಕುರಿತು ಎಲ್ಲ ದಾಖಲಾತಿಗಳನ್ನು ಹಲಸೂರು ಗೇಟ್ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ಬೆಂಗಳೂರು: ರಾಜ್ಯದಲ್ಲಿಯೇ ದೊಡ್ಡ ಸುದ್ದಿಯಾಗಿರೋ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ.

    ‘ಅವರು’ ಹೇಳಿದಂತೆ ನಾವು ಕೆಲಸ ಮಾಡುತ್ತಾ ಇದ್ದೇವೆ. ನಾವು ಡೇಟಾ (Data) ಸಂಗ್ರಹಿಸಿದ್ದು, ಮಾರಾಟ ಮಾಡಿದ್ದು ನಿಜ. ಆರ್‍ಓ ಚಂದ್ರಶೇಖರ್ ಹೇಳಿದಂತೆ ಕೇಳುತ್ತಾ ಇದ್ದೆವು. ಅವರೇ ನಮಗೆಲ್ಲಾ ಸೂತ್ರಧಾರಿ ಎಂದು ಬಾಯ್ಬಿಟ್ಟಿದ್ದಾರೆ.

    ಮಹದೇವಪುರ ವಲಯದಲ್ಲಿ ಮಾಹಿತಿಯನ್ನು ಕಲೆ ಹಾಕಿದ್ದೀವಿ. ಮಾಹಿತಿಯನ್ನು ಆರ್ ಓಗೆ ನೀಡಿ ಹಣವನ್ನು ಪಡೆದುಕೊಂಡಿದ್ದೇವೆ ಎಂದು ರೇಣುಕಾಪ್ರಸಾದ್, ಧರ್ಮೇಶ್ ಸೇರಿ ನಾಲ್ವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ

    ಇತ್ತ ಪ್ರಕರಣ ಸಂಬಂಧ ಪ್ರಕರಣದ ತನಿಖೆಯ ಮೇಲೆ ಚುನಾವಣಾ ಆಯೋಗ (Election Commission) ನಿಗಾ ಇಟ್ಟಿದೆ. ಯಾವುದೇ ಕಾರಣಕ್ಕೂ ಮಾಹಿತಿ ಟ್ಯಾಂಪರಿಂಗ್ ಆಗದಂತೆ ಎಚ್ಚರ ವಹಿಸಲು ಚುನಾವಣಾ ಆಯೋಗವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಪ್ರತಿಯೊಂದನ್ನು ವೀಡಿಯೋ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಕಂಪ್ಯೂಟರ್ ಮತ್ತು ದಾಖಲೆ ವಶಕ್ಕೆ ತೆಗೆದುಕೊಳ್ಳುವ ಪೊಲೀಸರಿಂದ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಎರಡು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಗದ್ದಲ ಎದ್ದಿದೆ. ಅದರಲ್ಲೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಹೆಸರಿನಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿವೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸಿದೆ. ಈ ಅನುಮಾನಕ್ಕೆ ಕಾರಣ ಹೊಂಬಾಳೆ ಹೆಸರು.

    ಚಿತ್ರೋದ್ಯಮದ ಬಹುತೇಕರಿಗೆ ಗೊತ್ತಿರುವಂತೆ ಹೊಂಬಾಳೆ ಫಿಲ್ಮಸ್ ಸಂಸ್ಥೆಯು ಅಶ್ವತ್ಥ್ ನಾರಾಯಣ್ ಅವರ ಸಂಬಂಧಿ ವಿಜಯ್ ಕುಮಾರ್ ಅವರದ್ದು. ಈ ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಚಿತ್ರಗಳು ನಿರ್ಮಾಣಗೊಂಡಿವೆ. ‘ಹೊಂಬಾಳೆ’ ಎನ್ನುವ ಹೆಸರೇ ಮತದಾರರ ಪಟ್ಟಿಯ ವಿವಾದಕ್ಕೆ ಮುನ್ನುಡಿಯಾಗಿದ್ದು, ಇದು ಚಿಲುಮೆ ಎನ್ನುವ ಹೆಸರಿನ ಸಂಸ್ಥೆಯ ಜೊತೆ ತಳುಕುಹಾಕಿಕೊಂಡಿದೆ.  ಮತದಾರರ ಪಟ್ಟಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಹೆಸರು ಬಲವಾಗಿ ಕೇಳಿಬಂದಿದೆ. ಚಿಲುಮೆ ಸಂಸ್ಥೆಯು ಈ ಹಿಂದೆ ಹೊಂಬಾಳೆ ಹೆಸರಿನಲ್ಲಿ ಚಟುವಟಿಕೆಯಲ್ಲಿತ್ತು ಎನ್ನುವುದು ವಿವಾದಕ್ಕೆ ಕಾರಣವಾದ ಅಂಶ.

    ಹೊಂಬಾಳೆ ಹೆಸರು ಕೇಳಿ ಬರುತ್ತಿದ್ದಂತೆಯೇ ಆದ ಘಟನೆಗೂ ಅಶ್ವತ್ಥ್ ನಾರಾಯಣ್ ಅವರಿಗೆ ನೇರ ಸಂಬಂಧವಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆ ಫಿಲ್ಮಸ್ ಸಂಸ್ಥೆಯನ್ನು ತಿವಿಯಲು ಈ ಬ್ಯಾನರ್ ನಿಂದ ನಿರ್ಮಾಣವಾದ ಎರಡು ಚಿತ್ರಗಳ ಹೆಸರನ್ನು ಉಪಯೋಗಿಸಿಕೊಂಡು, ಹೊಂಬಾಳೆ ಫಿಲ್ಮ್ಸ್ ನ ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು

    ಈ ಕುರಿತು ಸರಣಿಯ ಟ್ವಿಟ್ ಮಾಡಿರುವ ಸಿದ್ಧರಾಮಯ್ಯ, ‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು’ ಎಂದು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಭಾರೀ ವೈರಲ್ ಆಗಿದೆ. ಅಲ್ಲದೇ ಅನೇಕರು ಇದಕ್ಕೆ ಸ್ಪಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]