Tag: Chilume

  • ಚಿಲುಮೆ ಡೇಟಾ ಅಕ್ರಮ ಪ್ರಕರಣ – ಆರೋಪಿಗಳಾದ IAS ಅಧಿಕಾರಿಗಳ ಅಮಾನತು ಕ್ರಮ ಹಿಂಪಡೆದ ಸರ್ಕಾರ

    ಚಿಲುಮೆ ಡೇಟಾ ಅಕ್ರಮ ಪ್ರಕರಣ – ಆರೋಪಿಗಳಾದ IAS ಅಧಿಕಾರಿಗಳ ಅಮಾನತು ಕ್ರಮ ಹಿಂಪಡೆದ ಸರ್ಕಾರ

    ಬೆಂಗಳೂರು: ಚಿಲುಮೆ ಡೇಟಾ (Chilume) ಅಕ್ರಮ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಐಎಎಸ್ ಅಧಿಕಾರಿಗಳ (IAS Officers) ಅಮಾನತು ಕ್ರಮವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದು, ಇಬ್ಬರಿಗೂ ಸ್ಥಳ ನಿಯೋಜನೆ ಮಾಡಿದೆ.

    ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳಾದ ಶ್ರೀನಿವಾಸ್ ಮತ್ತು ರಂಗಪ್ಪ ಅವರ ಹೆಸರು ಕೇಳಿಬಂದಿತ್ತು. ಇಬ್ಬರ ವಿಚಾರಣೆಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಆಗ ಸರ್ಕಾರ ಸೇವೆಯಿಂದ ಅಮಾನತು ಮಾಡಿತ್ತು. ಇದನ್ನೂ ಓದಿ: ಫೆಬ್ರವರಿಯಲ್ಲಿ ಬಜೆಟ್ ಮಂಡನೆ: ಬೊಮ್ಮಾಯಿ

    ಬಳಿಕ ಸರ್ಕಾರದ ಕ್ರಮವನ್ನು ಇಬ್ಬರೂ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಇದೀಗ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಬ್ಬರನ್ನು ಸೇವೆಗೆ ಹೊಸ ಸ್ಥಾನಗಳಿಗೆ ನಿಯೋಜನೆ ಮಾಡಿದೆ.

    ಬೆಂಗಳೂರು ನಗರ ಜಿಲ್ಲಾಧಿಕಾರಿ ಆಗಿದ್ದ ಶ್ರೀನಿವಾಸ್‌ ಅವರನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. ಇನ್ನು ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ರಂಗಪ್ಪ ಅವರನ್ನು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿಮಿಟೆಡ್‍ನ ಎಕ್ಸಿಕ್ಯೂಟಿವ್ ನಿರ್ದೇಶಕರನ್ನಾಗಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ – ನಾಲ್ವರು ವಿದ್ಯಾರ್ಥಿಗಳು ಸೇರಿ ಏಳು ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು

    ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಜ್ವರದಿಂದ ಬಳಲುತ್ತಿದ್ದ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಬೆಂಗಳೂರಿನ (Bengaluru) ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತುಷಾರ್ ಗಿರಿನಾಥ್ ಅವರು ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದರು. ಇದರ ಜೊತೆಗೆ ಕಳೆದ ಶನಿವಾರದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪರಿಶೀಲನೆಗೆ ಒಳಪಡಿಸಿದಾಗ ಯೂರಿನರಿ ಇನ್‍ಫೆಕ್ಷನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಔಷಧ ಹಾಗೂ ಇಂಜೆಕ್ಷನ್ ನೀಡಲಾಗಿತ್ತು. ಆದರೂ ಜ್ವರ ಕ್ಷೀಣಿಸದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತುಷಾರ್ ಗಿರಿನಾಥ್ ಆಪ್ತರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಇತ್ತ ಚಿಲುಮೆ (Chilume) ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತೀವ್ರವಾಗಿ ನಡೆಯುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಸಮಯದಲ್ಲೇ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಹಾಗೂ ಒತ್ತಡದಿಂದಲೇ ಜ್ವರ ಕಾಣಿಸಿಕೊಂಡಿತೇ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಂಡಿತರಿಗೆ ಕೇಂದ್ರದಿಂದ ಗುಡ್‍ನ್ಯೂಸ್ – ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು: ಬೆಂಗಳೂರಿನ ಚಿಲುಮೆ ಸಂಸ್ಥೆ (Chilume) ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿ (Raichur) ಮತದಾರರ ಪಟ್ಟಿಯಲ್ಲಿ (Voters List) ಹೆಸರು ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    ರಾಯಚೂರಿನಲ್ಲಿ (Raichur) 40 ಸಾವಿರಕ್ಕೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ (BJP) ಶಾಸಕರಿಂದ ಗೋಲ್‌ಮಾಲ್ ನಡೆದಿದೆ ಅಂತ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಗಳು ದಾಖಲೆ ಹಿಡಿದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    2020 ರಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ 2,36,710 ಮತದಾರರಿದ್ದರೆ, 2022 ರಲ್ಲಿ 2,38,000 ಮತದಾರರು ಇದ್ದಾರೆ. ಆದರೆ 2023ರ ಚುನಾವಣೆಗಾಗಿ (Elections) ಬಿಡುಗಡೆಯಾಗಿರುವ ಪರಿಷ್ಕೃತ ಮತದಾರರ ಕರಡು ಪ್ರತಿಯಲ್ಲಿ 2,13,000 ಮತದಾರರಿದ್ದಾರೆ. 16 ಸಾವಿರ ಹೊಸ ಮತದಾರನ್ನ ಸೇರ್ಪಡೆ ಮಾಡಲಾಗಿದೆ. ಆದ್ರೆ ಮೊದಲಿನಿಂದ ಇದ್ದ 40 ಸಾವಿರ ಮತದಾರರ ಹೆಸರನ್ನ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕರಡು ಮತದಾರರ ಪಟ್ಟಿಯಲ್ಲಿ ಗುರುತಿನ ಚೀಟಿ ಸಂಖ್ಯೆ ಇದ್ದರೂ ಹೆಸರು, ತಂದೆ ಹೆಸರು, ವಿಳಾಸ ಅಳಿಸಿ ಹಾಕಲಾಗಿದೆ, ವಿಳಾಸ ಬದಲಿಸಲಾಗಿದೆ. ಬಹಳಷ್ಟು ಮುಸ್ಲಿಂ ಮತದಾರರನ್ನ (Muslim Voters) ಪಟ್ಟಿಯಿಂದಲೇ ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತದಾರರ ಪಟ್ಟಿ (Voters List) ಪರಿಷ್ಕರಣೆಗೆ ಡಿಸೆಂಬರ್ 24ರ ವರೆಗೆ ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಡಾ.ರಜಾಕ್ ಉಸ್ತಾದ್ ಹಾಗೂ ಜಾವೀದ್ ಉಲ್ ಹಕ್ ಮನವಿ ಮಾಡಿದ್ದಾರೆ.

    ರಾಯಚೂರು ನಗರ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿ ಸರ್ಕಾರ ಹಾಗೂ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಕೈವಾಡವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ- ಗ್ರಾಮಸ್ಥರಿಂದ ದೂರು

    ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಮತದಾರರನ್ನ ಕೈಬಿಟ್ಟಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರುತ್ತೆ. ಬಿಎಲ್‌ಓ ಗಳು ಮನೆ ಮನೆಗೆ ತೆರಳಿ ಮೃತಪಟ್ಟವರ ಮಾಹಿತಿ ಪಡೆದು ಡಿಲಿಟ್ ಮಾಡಿರುತ್ತಾರೆ. ಜೊತೆಗೆ 18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ವೋಟರ್ಸ್ ಡ್ರಾಫ್ಟ್ ರೋಲನ್ನ ಪಕ್ಷಗಳಿಗೆ ನೀಡುತ್ತೇವೆ. ಡಿಲಿಟ್ ಆಗಿರೋ ಮತದಾರರ ಮಾಹಿತಿ ನೀಡಿದರೆ ಸೇರ್ಪಡೆ ಮಾಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಯಾವುದೇ ಒತ್ತಡದಿಂದ ಮತದಾರರ ಪಟ್ಟಿ ಡಿಲಿಟ್ ಮಾಡಿಲ್ಲ ಅಂತಾ ಹೇಳಿದ್ದಾರೆ.

    ಬಿಜೆಪಿಗೆ ಮತ ಹಾಕದಿರುವ ಸಮುದಾಯ ಮತ್ತು ವ್ಯಕ್ತಿಗಳನ್ನ ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಅನ್ನೋ ಆರೋಪವೇ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇಂತಹ ಕೃತ್ಯದಲ್ಲಿ ಭಾಗಿಯಾಗಿರದಿದ್ದರೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬೆಳಕಿಗೆ ತರಲಿ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕ ಹಿಂಸೆ- ಜೀವ ರಕ್ಷಣೆಗೆ ಮನವಿ

    ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕ ಹಿಂಸೆ- ಜೀವ ರಕ್ಷಣೆಗೆ ಮನವಿ

    ಬೆಂಗಳೂರು: ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ಹೀಗಾಗಿ ಜೀವ ರಕ್ಷಣೆ ಮಾಡಿ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮನವಿ ಮಾಡಿಕೊಂಡರು.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ನೌಕರರ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಿಬಿಎಂಪಿ ನೀಡಿರುವ ದೂರಿನನ್ವಯ ಕಂದಾಯಾಧಿಕಾರಿಗಳನ್ನು ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಏಕಾಏಕಿ ಬಂಧಿಸಿರುವುದು ಸೂಕ್ತವಲ್ಲ. ಬದಲಿಗೆ ಅಕ್ರಮ ಎಸಗಿದೆ ಎನ್ನಲಾದ ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು CEO ನಡೆಸುವ ತನಿಖೆಗೆ ಸಿದ್ಧವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದರು.

    ಯಾವುದಾದರೂ ಒಂದು ಸಂಸ್ಥೆ ತನಿಖೆಯನ್ನು ಮಾಡಲಿ ಎರಡು-ಮೂರು ಪೊಲೀಸ್ ಠಾಣೆಗಳು ಅಥವಾ ವಿವಿಧ ಸಂಸ್ಥೆಗಳು ಭಾಗಿಯಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು. ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಬಿಬಿಎಂಪಿ ದೂರು ದಾಖಲಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ದೂರು ದಾಖಲಿಸಬೇಕು. ಇಲ್ಲಿ ಪ್ರೊಸಿಜರ್ ಎರರ್ ಆಗಿದೆ ಎಂದರು.

    ಚಿಲುಮೆ ಸಂಸ್ಥೆ BLO ಗುರುತಿನ ಚೀಟಿಯನ್ನು ನಕಲಿ ಮಾಡಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಸಮಂಜಸ ಎಂದು ಹೇಳಿದರು.

    ದತ್ತಾಂಶ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆ (Chilume) ಭಾಗಿಯಾಗಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿಯಲ್ಲಿ ದತ್ತಾಂಶ ಕಳವು ಮತ್ತು ಮತದಾರರನ್ನು ತೆಗೆದು ಹಾಕಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಅಧಿಕಾರಿಗಳನ್ನು ಬಂಧಿಸುತ್ತಿರುವುದು ಸೂಕ್ತವಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಮತ್ತು ಪುನರಾವರ್ತನೆಯಾಗಿರುವ ಹೆಸರುಗಳನ್ನು ಮಾತ್ರ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

    ಈ ವೇಳೆ ಸಂಘದ ಉಪ ಆಯುಕ್ತರಾದ ಲಕ್ಷ್ಮೀದೇವಿ, ವಕೀಲರಾದ ಶ್ರೀನಿವಾಸ್, ಅಧಿಕಾರಿಗಳಾದ ಕೆ.ಜಿ.ರವಿ,ಶಾಂತೇಶ್, ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ,ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ, ಬಾಬಣ್ಣ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ತನಿಖೆ ಹೆಸ್ರಲಿ ಟಾರ್ಚರ್ ಕೊಡಬೇಡಿ:  ಬಿಬಿಎಂಪಿ ಅಧಿಕಾರಿ ಮನವಿ

    ತನಿಖೆ ಹೆಸ್ರಲಿ ಟಾರ್ಚರ್ ಕೊಡಬೇಡಿ: ಬಿಬಿಎಂಪಿ ಅಧಿಕಾರಿ ಮನವಿ

    ಬೆಂಗಳೂರು: ನಗರದ 120 ಕಂದಾಯಾಧಿಕಾರಿಗಳ ರಕ್ಷಿಸಿ, ತನಿಖೆ ಹೆಸ್ರಲಿ ಟಾರ್ಚರ್ ಕೊಡಬೇಡಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‌ ರಾಜ್‌ ತಿಳಿಸಿದರು.

    ಚಿಲುಮೆ (Chilume) ವೋಟರ್‌ ಐಡಿ (Voter ID) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಚಿಲುಮೆ ವೋಟರ್‌ ಐಡಿ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ. ಆದರೆ ಹಗರಣಕ್ಕೆ ಸಂಬಂಧಿಸಿ ಒಂದೇ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು. ಈಗ 10 ಪೊಲೀಸ್, ಪ್ರಾದೇಶಿಕ ಆಯುಕ್ತರ ಕಚೇರಿ, ಚುನಾವಣಾಧಿಕಾರಿ ಕಚೇರಿಯವರು ತನಿಖೆ ಮಾಡುತ್ತಿದ್ದಾರೆ. ಇದರಿಂದಾಗಿ ನಾವು ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾವ್ ಬಿಬಿಎಂಪಿ ಕಂದಾಯಾಧಿಕಾರಿಗಳು ಕೆಲಸ ಮಾಡಿ ಟಾರ್ಚರ್ ಅನುಭವಿಸ್ತಾ ಇದ್ದೇವೆ. ಅಷ್ಟೇ ಅಲ್ಲದೇ ತಡರಾತ್ರಿವರೆಗೆ ಮಹಿಳಾ ಅಧಿಕಾರಿಗಳನ್ನು ಪೊಲೀಸ್‌ ಠಾಣೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ಮಾನಸಿಕ ಚಿತ್ರ ಹಿಂಸೆ ತಡೆಯಲು ಆಗಲ್ಲ. 10 ಸ್ಟೇಷನ್‌ಗಳ ಹತ್ತಿ‌ ಇಳಿದು ಸಾಕಾಗಿದೆ. ತಡರಾತ್ರಿ 4 ಗಂಟೆಯವರೆಗೂ ತನಿಖೆ ಮಾಡ್ತಾರೆ. ನಿದ್ದೆಯಿಲ್ಲ, ಬದುಕು ಕಷ್ಟವಾಗಿದೆ. ಈ ರೀತಿ ಆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

    ಚುನಾವಣೆಗಾಗಿ ಕೆಲಸ ಮಾಡುತ್ತೇವೆ. ಈ ರೀತಿ ಬಿಟ್ಟಿ ಕೆಲಸಕ್ಕೆ ವರ್ಷಕ್ಕೆ ಗೌರವ ಧನ 7 ಸಾವಿರ ರೂ. ನೀಡುತ್ತಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಬಿಎಲ್‌ಒಗಳನ್ನು ಅಧಿಕೃತವಾಗಿ ನೇಮಿಸಬೇಕು ಎಂದ ಅವರು, ಸದ್ಯ ಯಾವುದೇ 6 ಲಕ್ಷ ಹೆಸರು ಡಿಲೀಷನ್ ಫೈನಲ್ ಕಾಪಿ ಆಗಿಲ್ಲ. ಇದು ಕೇವಲ ಡ್ರಾಫ್ಟ್ ನೋಟ್ ಮೇಲೆ ಆಗಿರುವ ಡಿಲೀಷನ್ ಆಗಿದೆ. ಆಡಿಷನ್, ಡಿಲಿಷನ್‌ನಿಂದ ಅಧಿಕಾರಿಗಳಿಗೆ ಯಾವುದೇ ಲಾಭ ಆಗಲ್ಲ. ದೂರು ಕೊಟ್ಟ ನಮಗೆ ಟಾರ್ಚರ್ ಯಾಕೆ ಕೊಡ್ತೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: 24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್‌

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ (VoterID Scam) ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು (Police) ನಾಲ್ವರು ಆರ್‌ಓಗಳನ್ನ ಬಂಧಿಸಿದ್ದಾರೆ.

    ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ ವಿಭಾಗ), ಸೊಹೆಲ್ ಅಹಮದ್ (ಶಿವಾಜಿನಗರ), ಚಂದ್ರಶೇಖರ್ (ಮಹಾದೇವಪುರ) ಹಾಗೂ ಆರ್‌ಆರ್ ನಗರದ ಎಆರ್‌ಓ ಮಹೇಶ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಆರ್‌ಒಗಳು ಖಾಸಗಿ ವ್ಯಕ್ತಿಗಳಿಗೆ ಬಿಎಲ್‌ಓ ಕಾರ್ಡ್ಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ಚುನಾವಣಾ ಆಯೋಗ (Election Commission) ಈಗಾಗಲೇ ಅಧಿಕಾರಿಗಳ ಫೋನ್ ಕರೆ ತನಿಖೆಗೆ ಮುಂದಾಗಿದೆ. ಬಿಬಿಎಂಪಿ (BBMP) ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ರಂಗಪ್ಪ ಅವರು ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರೆ, ಶ್ರೀನಿವಾಸ್ ಅವರು, ಮಹದೇವಪುರ ಕ್ಷೇತ್ರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮೂರು ಕ್ಷೇತ್ರದಲ್ಲಿ ಬಿಎಲ್‌ಓ ಐಡಿ ಕಾರ್ಡ್ ಇಟ್ಟುಕೊಂಡು ಸರ್ವೆ ನಡೆಸಲಾಗಿತ್ತು. ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿತು. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಅಮಾನತುಗೊಂಡ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದು, ಬಿಎಲ್‌ಓ ಎಂಬ ಐಡಿ ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು ಯಾರು? ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆ ಮಾಹಿತಿ ಕದ್ದಿದೆಯಾ? ಹೀಗೆ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಚುನಾವಣಾ ಆಯೋಗ ಈಗ ಅಧಿಕಾರಿಗಳ ಫೋನ್ ಕರೆ ತನಿಖೆಗೆ ಮುಂದಾಗಿದೆ.

    ಬಿಬಿಎಂಪಿ (BBMP) ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ರಂಗಪ್ಪ ಅವರು ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರೆ, ಶ್ರೀನಿವಾಸ್ ಅವರು, ಮಹದೇವಪುರ ಕ್ಷೇತ್ರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮೂರು ಕ್ಷೇತ್ರದಲ್ಲಿ ಬಿಎಲ್‍ಓ ಐಡಿ ಕಾರ್ಡ್ ಇಟ್ಟಿಕೊಂಡು ಸರ್ವೆ ನಡೆಸಲಾಗಿತ್ತು. ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿದೆ.

    ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಅಮಾನತುಗೊಂಡ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದು, ಬಿಎಲ್‍ಓ ಎಂಬ ಐಡಿ ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು ಯಾರು? ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆ ಮಾಹಿತಿ ಕದ್ದಿದೆಯಾ? ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಇದೇ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಅನ್ನು ಚುನಾವಣಾ ಆಯೋಗ ಟ್ರ್ಯಾಪ್ ಮಾಡುತ್ತಿದೆ. ಇದರಿಂದ ಮಹತ್ವದ ಅಂಶಗಳು ಹೊರಬಿದ್ದರೆ, ಚಿಲುಮೆ ಜೊತೆ ಬಿಬಿಎಂಪಿ ಹಿರಿಯ ಅಧಿಕಾರಿ ನಂಟು ಬಯಲಾಗಲಿದೆ. ಒಂದು ವೇಳೆ ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಹಿರಿಯ ಅಧಿಕಾರಿಯನ್ನು ಬಂಧಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟೌಟ್‌ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ : ಜೆಡಿಎಸ್ ಒತ್ತಾಯ

    ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ : ಜೆಡಿಎಸ್ ಒತ್ತಾಯ

    ಬೆಂಗಳೂರು: ಚಿಲುಮೆ (Chilume) ವೋಟರ್ ಐಡಿ ಅಕ್ರಮ ಪ್ರಕರಣದ ತನಿಖೆಗೆ ಒತ್ತಾಯಿಸಿ ಜೆಡಿಎಸ್ (JDS) ಇಂದು ಪ್ರತಿಭಟನೆ ನಡೆಸಿತು.

    ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ನೇತೃತ್ವದಲ್ಲಿ, ಫ್ರೀಡಂ ಪಾರ್ಕ್‌‌ನಲ್ಲಿ ಪ್ರತಿಭಟನೆ ‌ನಡೆಸಲಾಯಿತು. ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು, ಘೋಷಣೆ ಕೂಗಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಬಳಿಕ ಚುನಾವಣೆ ಆಯೋಗಕ್ಕೆ ಪಾದಯಾತ್ರೆ ಮೂಲಕ ‌ತೆರಳಿ ದೂರು ನೀಡಿದರು.

    ಚುನಾವಣೆ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಚಿಲುಮೆ ಅಕ್ರಮಕ್ಕೆ ಕಾರಣ ಯಾರು ಅಂತ ಸೂಕ್ತ ತನಿಖೆ ಆಗಬೇಕು. ಎಷ್ಟು ಲಕ್ಷ ವೋಟರ್ ಕಾರ್ಡ್ ಡಿಲೀಟ್ ಆಗಿವೆ ಅಂತ ಮಾಹಿತಿ ನೀಡಬೇಕು. ಇನ್ನು ಮುಂದೆ ಚುನಾವಣೆ ವೇಳೆ ರಿಟರ್ನಿಂಗ್ ಆಫೀಸ್‌ಗಳ ಬಳಿ ಇರುವ ಪಟ್ಟಿ ಹಾಗೂ ಅಭ್ಯರ್ಥಿಗಳು ಇರೋ ಪಟ್ಟಿ ಒಂದೇ ಇರುವಂತೆ ನೋಡಿಕೊಳ್ಳಬೇಕು ಎಂದರು. ಅಲ್ಲದೆ ಚುನಾವಣೆ ವೇಳೆ ಅಕ್ರಮ ಮಾಡಿದ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ ಮಾಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಚಿಲುಮೆ ಕೇಸ್‍ನಲ್ಲಿ ಕಂಪ್ಲೇಂಟ್ ಜಟಾಪಟಿ- ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು

    ಇದೇ ವೇಳೆ ಕಾಂಗ್ರೆಸ್ ‌ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಚಿಲುಮೆ ಅಕ್ರಮದಲ್ಲಿ ಇದ್ದಾವೆ. ಇಬ್ಬರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡ್ತಿದ್ದಾರೆ. ಈ ಅಕ್ರಮದ ತನಿಖೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಗಬೇಕು ಎಂದು ಆಗ್ರಹ ಮಾಡಿದರು. ಚಿಲುಮೆ ಹಗರಣದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಜಾತಿ ಧರ್ಮ, ದಲಿತ, ಮುಸ್ಲಿಂ, ಗೌಡ ಎಂಬ ಹೆಸರು ಇರೋರನ್ನ ಪಟ್ಟಿಯಿಂದ ಡಿಲೀಟ್ ಮಾಡ್ತಿದ್ದಾರೆ. ಸೋಲಿನ ಭಯದಿಂದ ಹೀಗೆ ಬಿಜೆಪಿ ಅಕ್ರಮ ಮಾಡ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    Live Tv
    [brid partner=56869869 player=32851 video=960834 autoplay=true]

  • ಚಿಲುಮೆ ಕೇಸ್‍ನಲ್ಲಿ ಕಂಪ್ಲೇಂಟ್ ಜಟಾಪಟಿ- ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು

    ಚಿಲುಮೆ ಕೇಸ್‍ನಲ್ಲಿ ಕಂಪ್ಲೇಂಟ್ ಜಟಾಪಟಿ- ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು

    ಬೆಂಗಳೂರು: ಚಿಲುಮೆ (Chilume) ಡೇಟಾ ಕಳವು ಪ್ರಕರಣ ಕೇಂದ್ರ ಚುನಾವಣಾ ಆಯೋಗ (Central Election Commission) ದ ಮೆಟ್ಟಿಲೇರಿದೆ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಬಿಜೆಪಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಕೆ ಆಗಿದೆ.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ವಿಚಾರ ಉಲ್ಲೇಖಿಸಿ ಪರಿಷತ್ ಸದಸ್ಯ ಎನ್. ರವಿಕುಮಾರ್ 4 ಪುಟಗಳ ದೂರು ಸಲ್ಲಿಸಿದ್ದಾರೆ. ಮತಪಟ್ಟಿ ಡಿಲೀಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ. ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್. ಈ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಕಣ್ಣು ಕೆಂಪಗಾಗಿಸಿದೆ ಕಾಂಗ್ರೆಸ್‍ನ ಟಿಕೆಟ್ ಆಕಾಂಕ್ಷಿಗಳ ಪಟ್ಟಿ – ಪ್ರಭಾವಿ ನಾಯಕರಿಗೆ ಗಾಳ ಹಾಕಲು ಪ್ಲಾನ್

    ಸದ್ಯ ಚಿಲುಮೆ ಕೇಸ್ ನ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಕುಮಾರ್ ಸಹ ಪೊಲೀಸ್ ಕಬ್ಜಾದಲ್ಲಿದ್ದಾನೆ. ಈ ಆರೋಪಿಗಳು ವಿಚಾರಣೆ ವೇಳೆ ಕೆಲ ಸುಳಿವು ಬಾಯಿ ಬಿಟ್ಟಿದ್ದಾರೆನ್ನಲಾಗಿದೆ. ಆರೋಪಿಗಳ ವಿಚಾರಣಾ ಹೇಳಿಕೆಯ ಮಾಹಿತಿಗಳೇ ಈಗ ಬಿಜೆಪಿ (BJP) ಗೆ ಅಸ್ತ್ರವಾಗಿದೆ. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    ಈ ಮಾಹಿತಿ ಆಧರಿಸಿ ಕಾಂಗ್ರೆಸ್ ಗೆ ಕೌಂಟರ್ ಕೊಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಚಿಲುಮೆಯಿಂದ ಸರ್ವೆ ಮಾಡಿಸಿಕೊಂಡ ಕೈ ಶಾಸಕರ ಹೆಸರು ಬಿಡುಗಡೆಗೆ ಬಿಜೆಪಿ ರೆಡಿ ಮಾಡಿಕೊಳ್ಳುತ್ತಿದೆ. ಪೊಲೀಸರ ಮೂಲಕವೇ ಕಾಂಗ್ರೆಸ್ ಶಾಸಕರ ಹೆಸರು ಬಯಲು ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್ ಪಡೆಗೆ ಮುಜುಗರ ತರಲು ಬಿಜೆಪಿ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ದಾಳವನ್ನೇ ಪ್ರತಿದಾಳ ಮಾಡಿಕೊಂಡು ಟಕ್ಕರ್ ಕೊಡಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    ಬೆಂಗಳೂರು: ನಗರದಲ್ಲಿ ಬಯಲಿಗೆ ಬಂದ ವೋಟರ್‌ಗೇಟ್‌ ಹಗರಣ (Voter ID Scam) ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟೋರಿಯಸ್ ಚಿಲುಮೆ ಸಂಸ್ಥೆಯ ಸಿಬ್ಬಂದಿ ಒಬ್ಬೊಬ್ಬರಾಗಿ ಅಂದರ್ ಆಗುತ್ತಿದ್ದಾರೆ. ಇದೀಗ ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್‌ನನ್ನು (Lokesh) ಪೊಲೀಸರು ಬಂಧಿಸಿದ್ದಾರೆ.

    ಚಿಲುಮೆ (Chilume) ಸಂಸ್ಥೆಯಿಂದ ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ಲೊಕೇಶ್ ಎರಡನೇ ಆರೋಪಿ ಆಗಿದ್ದು, ಕೇಸ್ ದಾಖಲಾದ ಬಳಿಕ ನಾಪತ್ತೆಯಾಗಿದ್ದ. ಇಂದು ಹಲಸೂರು ಗೇಟ್ ಪೊಲೀಸರು ಲೋಕೇಶ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವೋಟರ್‌ಗೇಟ್‌ ಹಗರಣಕ್ಕೆ ಅಡ್ಡ ಆಗಿತ್ತಾ ಪ್ರಭಾವಿ ಶಾಸಕರ ಕಚೇರಿ?

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದೀವಿ. ಕಾಡುಗೋಡಿ ಮತ್ತು ಹಲಸೂರ್ ಗೇಟ್‍ನಲ್ಲಿ ದಾಖಲಾದ ಎರಡೂ ಎಫ್‍ಐಆರ್‌ನಲ್ಲಿ (FRI) ಲೋಕೇಶ್ ಹೆಸರು ಉಲ್ಲೇಖ ಆಗಿತ್ತು. ಲೋಕೇಶ್‍ನನ್ನು ಬಂಧಿಸಿ ಒಂದು ರೌಂಡ್ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಮಾಡಲಾಗ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ

    ಪ್ರಕರಣದ ಪ್ರಮುಖ ಆರೋಪಿ ಬಂಧಿತ ಕಿಂಗ್‍ಪಿನ್ ರವಿಕುಮಾರ್ ವಿಚಾರಣೆ ತೀವ್ರಗೊಂಡಿದೆ. ಚಿಲುಮೆಯ ಕೆಂಪೇಗೌಡ, ಧರ್ಮೇಶ್‍ನನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿವೆ. ಈ ವೇಳೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಪತ್ರಗಳು ಲಭ್ಯವಾಗಿವೆ. ಆರ್‌ಓಗಳ ಮೂಲಕವೇ ಮತಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿಲುಮೆ ಮಾಹಿತಿ ಆಧರಿಸಿಯೇ ಆರ್‌ಓಗಳು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಆದ್ರೂ ಈವರೆಗೂ ಕೇವಲ ಮೂವರು ಆರ್‌ಓಗಳನ್ನು ಸಸ್ಪೆಂಡ್ ಅಷ್ಟೇ ಮಾಡಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಎಲ್‍ಓ ಕಾರ್ಡ್ ಮಾಡಿಕೊಡದ ಆರ್‌ಓಗಳ ಮೇಲೆ ಸ್ಥಳೀಯ ಕಾರ್ಪೋರೇಟರ್‌ಗಳು ಮತ್ತು ಶಾಸಕರಿಂದ ಒತ್ತಡ ಹಾಕಿಸ್ತಿದ್ವಿ ಎಂಬ ವಿಚಾರವನ್ನು ರವಿಕುಮಾರ್ ವಿಚಾರಣೆ ವೇಳೆ ತಿಳಿದುಬಂದಿದೆ. ಬರೀ ಶಾಸಕರಷ್ಟೇ ಅಲ್ಲ, ಕಾರ್ಪೋರೆಷನ್ ಚುನಾವಣೆಗೆ ನಿಲ್ಲಲು ಬಯಸಿದ್ದ ಹಲವು ರಾಜಕಾರಣಿಗಳು ಕೂಡ ಚಿಲುಮೆಯಿಂದ ಮತ ಮಾಹಿತಿ ಖರೀದಿ ಮಾಡ್ತಿದ್ವು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]