Tag: Childrens

  • ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ

    ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ

    ಲಕ್ನೋ: ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು ದಂಪತಿ ಹಾಗೂ ಮಹಿಳೆ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದಿನ ಇಂದಿರಾಪುರಂನಲ್ಲಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಸುಮಾರು 5.15ಕ್ಕೆ ಈ ಘಟನೆ ನಡೆದಿದೆ. ಪತಿ-ಪತ್ನಿ ಮೊದಲು ರೂಮಿನಲ್ಲಿ ಮಲಗಿದ್ದ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾರೆ. ಬಳಿಕ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮೃತ ವ್ಯಕ್ತಿಯ ಎರಡನೇ ಪತಿ ಎಂದು ಹೇಳಲಾಗುತ್ತಿದೆ.

    ಈ ಘಟನೆಯಲ್ಲಿ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ದಂಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ದಂಪತಿ ತಮ್ಮ ಮಗ ಹಾಗೂ ಮಗಳು ನಿದ್ದೆ ಮಾಡುವಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

    ತನಿಖೆ ವೇಳೆ ಮೃತ ವ್ಯಕ್ತಿಗೆ ಇಬ್ಬರು ಪತ್ನಿಯರು ಇದ್ದಾರೆ ಎಂಬುದು ತಿಳಿಯಿತು. ನಾವು ಫ್ಯ್ಲಾಟ್ ಬಾಗಿಲು ತೆಗೆದಾಗ ಅಲ್ಲಿ ಇಬ್ಬರು ಮಕ್ಕಳ ಮೃತದೇಹದ ಜೊತೆಗೆ ಡೆತ್‍ನೋಟ್ ಕೂಡ ಪತ್ತೆಯಾಗಿದೆ. ಆರ್ಥಿಕ ಸಮಸ್ಯೆಯಿಂದ ದಂಪತಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಗಾಜಿಯಾಬಾದ್ ಎಸ್‍ಎಸ್‍ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

    ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸೆಕ್ಯೂರಿಟ್ ಗಾರ್ಡ್, ಈ ಘಟನೆ ಇಂದು ಬೆಳಗ್ಗೆ ಸುಮಾರು 5.15ಕ್ಕೆ ನಡೆದಿದೆ. ಮೊದಲು ನಾನು ಶಬ್ದ ಕೇಳಿದೆ. ತಕ್ಷಣ ಸ್ಥಳಕ್ಕೆ ಓಡಿ ಬಂದಾಗ ನೆಲದ ಮೇಲೆ ಮೃತದೇಹ ಬಿದ್ದಿರುವುದನ್ನು ನೋಡಿದೆ. ತಕ್ಷಣ ನಾನು ನನ್ನ ಸೂಪರ್‍ವೈಸರ್‍ಗೆ ಕರೆದೆ. ಆಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

  • ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಚಿಕ್ಕಮಗಳೂರು: ಮಕ್ಕಳು ಕೀಟಲೆ ಮಾಡಿದರು ಎಂದು ತಂದೆಯೊಬ್ಬ ದೋಸೆ ಕಡ್ಡಿ ಬಿಸಿ ಮಾಡಿ ಬರೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸ್ಗಲ್‍ನಲ್ಲಿ ನಡೆದಿದೆ.

    ಹರೀಶ್ ಬರೆ ಹಾಕಿದ ಕ್ರೂರ ತಂದೆ. 10 ವರ್ಷದ ಹಿಂದೆ ಮದುವೆಯಾದ ಹರೀಶ್ ಹಾಗೂ ಪುಷ್ಪ ದಂಪತಿಗೆ 2 ಹೆಣ್ಣು, 2 ಗಂಡು ಮಕ್ಕಳಿವೆ. ಪಾಪಿ ತಂದೆಯ ಕೃತ್ಯದಿಂದ ಇದೀಗ ಎರಡು ಮಕ್ಕಳು ಓಡಾಡುವುದಕ್ಕೂ ಆಗದೇ ನರಕ ಅನುಭವಿಸುತ್ತಿದ್ದಾರೆ. ಮಕ್ಕಳ ದಯನೀಯ ಸ್ಥಿತಿ ಕಂಡು ಹೆತ್ತೊಡಲು ಕಣ್ಣೀರಲ್ಲಿ ಮುಳುಗಿದೆ.

    ಸೈಕೋ ಹರೀಶ್ ವರ್ಷದ ಹಿಂದೆಯೂ ಪತ್ನಿ, ಮಕ್ಕಳಿಗೆ ವೈರ್‍ನಿಂದ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನು. ಆಗ ಪತ್ನಿಯೇ ದೂರು ನೀಡಿ ಜೈಲಿಗೆ ಹಾಕಿಸಿದ್ದರು. ಮತ್ತೆ ಅವರೇ ಪತಿ ಸರಿ ಹೋಗಬಹುದು ಎಂದು ತಾನೇ ಹೋಗಿ ಜಾಮೀನು ನೀಡಿ ಮನೆಗೆ ಕರೆ ತಂದಿದ್ದರು. ಜೈಲಿನಿಂದ ಬಂದ ನಂತರ ಹರೀಶ್ ಮತ್ತೆ ತನ್ನ ವರಸೆ ಮುಂದುವರಿಸಿದ್ದಾನೆ.

    ಮಕ್ಕಳ ಮುಗ್ಧತೆ ಕಂಡರೆ ಎಂಥವರು ಕೂಡ ಕರಗುತ್ತಾರೆ. ಇಲ್ಲಿ ಐ ಲವ್ ಯೂ ಅಪ್ಪ ಎಂದು ಎನಿಸಿಕೊಳ್ಳಬೇಕಿದ್ದ ಕುಡುಕ ಹರೀಶ್, ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ಸೈಕೋ ಪತಿಯ ಕಾಟ ತಡೆಯಲಾಗದೆ ಪುಷ್ಪ ತನ್ನ ನಾಲ್ಕು ಮಕ್ಕಳ ಸಮೇತ ತವರು ಸೇರಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕೂಡಲೇ ಹರೀಶ್ ವಿರುದ್ಧ ಕ್ರಮ ಕೈಗೊಂಡು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಿದೆ.

  • ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

    ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

    ಉಡುಪಿ: ಮಾನಸಿಕ ಖಿನ್ನತೆಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ದೇವಸ್ಥಾನದ ಬಾಣಸಿಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಜಿಲ್ಲೆಯ ಕುಂದಾಪುರದ ಗೋಳಿಯಂಗಡಿಯ ಈ ಘಟನೆ ನಡೆದಿತ್ತು. ಊರಿಗೆಲ್ಲಾ ಅಡುಗೆ ಮಾಡಿ ಬಡಿಸುತ್ತಿದ್ದ ಬಾಣಸಿಗ ಸೂರ್ಯನಾರಾಯಣ ಭಟ್ ಮನೆಯವರಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ. ಸೂರ್ಯನಾರಾಯಣ ತನ್ನ ಮಡದಿ ಮಾನಸಿ, ಮಕ್ಕಳಾದ ಸುಧೀಂದ್ರ, ಸುಧೀಶ್ ಮೂವರಿಗೂ ವಿಷವಿಕ್ಕಿದ್ದಾನೆ. ನಂತರ ಬಡಿಗೆಯಿಂದ ತಲೆ ಹೊಡೆದು ಮೂವರನ್ನು ಕೊಲೆ ಮಾಡಿದ್ದಾನೆ. ಅವರು ಮೃತಪಟ್ಟ ತಕ್ಷಣ ಸೂರ್ಯನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ಮಕ್ಕಳನ್ನು ಕೊಂದ, ತಾನು ಆತ್ಮಹತ್ಯೆ ಮಾಡ್ಕೊಂಡ

    ಈ ಬಗ್ಗೆ ಎಸ್.ಪಿ ನಿಶಾ ಜೇಮ್ಸ್ ಮಾತನಾಡಿ, ಕಳೆದ ಐದು ವರ್ಷದಿಂದ ಕೊಲೆ ಆರೋಪಿಗೆ ಮಾನಸಿಕ ಸಮಸ್ಯೆ ಇತ್ತು ಎಂಬ ಮಾಹಿತಿ ಇದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದನು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಕೌಟುಂಬಿಕ ಕಲಹದ ಬಗ್ಗೆ ಕೆಲ ವರ್ಷಗಳ ಹಿಂದೆ ಪತ್ನಿಯಿಂದ ದೂರು ಬಂದಿತ್ತು ಎಂದರು.

    ನವೆಂಬರ್ 26ರ ರಾತ್ರಿ ಘಟನೆ ನಡೆದಿದೆ. ಗೋಳಿಯಂಗಡಿಯ ಸುರ್ಗೋಳಿಯ ನಿರ್ಜನ ಪ್ರದೇಶದಲ್ಲಿ ಮನೆ ಇರುವುದರಿಂದ ಘಟನೆ ಯಾರಿಗೂ ಗಮನಕ್ಕೆ ಬಂದಿಲ್ಲ. ಮಕ್ಕಳು ಬುಧವಾರ ಶಾಲೆಗೆ ಹೊಗದಿರೋದನ್ನು ನೋಡಿ ಸೂರ್ಯನಾರಾಯಣನ ಸಹೋದರನಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ತಮ್ಮನ ಕರೆ ಸ್ವೀಕರಿಸದಿದ್ದಾಗ ಸಂಜೆಯ ವೇಳೆಗೆ ಮನೆ ಹತ್ತಿರ ಬಂದು ನೋಡಿದಾಗ ಊರಿಗೆ ಊರೇ ಬೆಚ್ಚಿಬಿದ್ದಿದೆ. ಒಂದೇ ಕೋಣೆಯೊಳಗೆ ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ, ಮಾನಸಿಕ ಖಿನ್ನತೆಯೇ ಸೂರ್ಯನಾರಾಯಣನಿಂದ ಈ ದುಷ್ಕೃತ್ಯವೆಸಗಲು ಕಾರಣ.

    ಈ ಘಟನೆ ಬಗ್ಗೆ ಸ್ಥಳೀಯ ಸಂದೀಪ್ ಮಾತನಾಡಿ, ಸುತ್ತಮುತ್ತಲಿನ ಮನೆಯವರ ಬಳಿ ಇವರು ಕಡಿಮೆ ಸಂಪರ್ಕದಲ್ಲಿ ಇದ್ದರು. ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಗಂಡ ಹೆಂಡತಿ ಜಗಳದಲ್ಲೆ ಮಕ್ಕಳು ಬಡವಾದವು ಎಂದು ಹೇಳಿದರು.

    ಮೂರು ಜೀವಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿವೆ. ಶಾಲೆಗೆ ಹೋಗುವ ಮಕ್ಕಳು ಮಾಡಿದ ತಪ್ಪಾದರೂ ಏನು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿದ್ದಾರೆ. ಪತ್ನಿ ಮಾನಸಿ ಕುಟುಂಬದ ಉಪಸ್ಥಿತಿಯಲ್ಲಿ ಮಹಜರು ಮಾಡಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

  • ಪತ್ನಿ ಮಕ್ಕಳನ್ನು ಕೊಂದ, ತಾನು ಆತ್ಮಹತ್ಯೆ ಮಾಡ್ಕೊಂಡ

    ಪತ್ನಿ ಮಕ್ಕಳನ್ನು ಕೊಂದ, ತಾನು ಆತ್ಮಹತ್ಯೆ ಮಾಡ್ಕೊಂಡ

    ಉಡುಪಿ: ಪತ್ನಿ ಮಕ್ಕಳನ್ನು ಕೊಂದು ವ್ಯಕ್ತಿ ನೇಣಿಗೆ ಶರಣಾದ ಘಟನೆ ಉಡುಪಿಯ ಗೋಳಿಯಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.

    ಸೂರ್ಯನಾರಾಯಣ ಭಟ್ (50) ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೂರ್ಯನಾರಾಯಣ ತನ್ನ ಪತ್ನಿ ಮಾನಸಿ (40) ಹಾಗೂ ಪುತ್ರರಾದ ಸುಧೀಂದ್ರ (14) ಸುಧೀಶ್ (8)ನನ್ನು ವಿಷ ಕೊಟ್ಟಿದ್ದಾನೆ. ಬಳಿಕ ವಿಷ ಸೇವಿಸಿ ಅಸ್ವಸ್ಥರಾಗಿದ್ದ ಮೂವರನ್ನು ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

    ಮೂವರು ಪ್ರಾಣಬಿಟ್ಟ ನಂತರ ಸೂರ್ಯನಾರಾಯಣ ನೇಣಿಗೆ ಶರಣಾಗಿದ್ದಾನೆ. ಪತಿ-ಪತ್ನಿ ನಡುವಿದ್ದ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಆಗಿರಬಹುದು ಎನ್ನಲಾಗಿದೆ. ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಸೂರ್ಯನಾರಾಯಣ ಭಟ್ ಫೋನ್ ರಿಸೀವ್ ಮಾಡದ ಕಾರಣ ಆತನ ಸಹೋದರ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.

    ಮನೆಯಲ್ಲಿ ನಾಲ್ವರು ಮೃತಪಟ್ಟಿದ್ದನ್ನು ನೋಡಿದ ಸೂರ್ಯನಾರಾಯಣ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪತ್ನಿ ಜೊತೆ ಜಗಳ – ಇಬ್ಬರು ಮಕ್ಕಳು ಸೇರಿ ಐವರಿಗೆ ಬೆಂಕಿ ಹಚ್ಚಿದ

    ಪತ್ನಿ ಜೊತೆ ಜಗಳ – ಇಬ್ಬರು ಮಕ್ಕಳು ಸೇರಿ ಐವರಿಗೆ ಬೆಂಕಿ ಹಚ್ಚಿದ

    ಹೈದರಾಬಾದ್: ಪತ್ನಿ ಜೊತೆಗಿನ ಜಗಳಕ್ಕೆ ಪತಿಯೊಬ್ಬ ಇಬ್ಬರು ಮಕ್ಕಳ ಜೊತೆ ಐವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಸಿದ್ಧಿಪೇಟ್ ಜಿಲ್ಲೆಯ ಕೊಂಡಪಕಾ ಮಂಡಲದಲ್ಲಿ ನಡೆದಿದೆ.

    ಲಕ್ಷ್ಮೀರಜ್ಯಾಮ್ ಬೆಂಕಿ ಹಚ್ಚಿದ ಆರೋಪಿ. ಲಕ್ಷ್ಮೀರಜ್ಯಾಮ್ ಹಾಗೂ ಆತನ ಪತ್ನಿಯ ನಡುವೆ ಜಗಳವಾಗಿತ್ತು. ಅಲ್ಲದೆ ಕಳೆದ ಎರಡು ತಿಂಗಳಿನಿಂದ ಪತ್ನಿ ತನ್ನ ಪತಿಯ ಮನೆಗೆ ಹೋಗದೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಳು.

    ಪತ್ನಿ ಮನೆಗೆ ಬರಲಿಲ್ಲ ಎಂದು ಲಕ್ಷ್ಮೀರಜ್ಯಾಮ್ ಬೇಸರದಿಂದ ಇದ್ದನು. ಶುಕ್ರವಾರ ಆರೋಪಿ ಪತಿ ಪತ್ನಿಯ ತವರು ಮನೆಗೆ ಹೋಗಿದ್ದಾನೆ. ಈ ವೇಳೆ ತನ್ನ ಪತ್ನಿ, ಇಬ್ಬರು ಮಕ್ಕಳು, ಬಾಮೈದಾ ರಾಜು ಹಾಗೂ ನಾದಿನಿ ಸುನಿತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಐವರನ್ನು ಸ್ಥಳೀಯರು ಸಿಖಂದರಬಾದ್‍ನ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಐವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

  • ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

    ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

    ಜೈಪುರ: ಭಿಕ್ಷೆ ಬೇಡುವ ಮಕ್ಕಳಿಗಾಗಿ ರಾಜಸ್ಥಾನ ಪೊಲೀಸರು ಶಾಲೆ ತೆರೆದಿದ್ದು, 450 ಮಕ್ಕಳು ಈಗ ಈ ಶಾಲೆಯಲ್ಲಿ ಓದುತ್ತಿದ್ದಾರೆ.

    ಧರ್ಮವೀರ್ ಜಖರ್ ಅವರು 2016ರಲ್ಲಿ ರಾಜಸ್ಥಾನದ ಚುರುವಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ವೇಳೆ ಅವರು ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದಿದ್ದಾರೆ. ಈಗ ಇವರ ಶಾಲೆಯಲ್ಲಿ 450 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

    ಧರ್ಮವೀರ್ ಚುರು ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆ ಬಳಿ ಈ ಶಾಲೆಯನ್ನು ತೆರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೀದಿಯಲ್ಲಿ ಭಿಕ್ಷೆ ಬೇಡುವ ಮಕ್ಕಳ ಕೈಯಲ್ಲಿ ತಟ್ಟೆ ಬದಲು ಪೆನ್ಸಿಲ್ ಹಾಗೂ ಪುಸ್ತಕಗಳಿರಬೇಕು. ಮಕ್ಕಳು ಓದುವ ಹಾಗೂ ಬರೆಯುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ಠಾಣೆಯ ಸುತ್ತಮುತ್ತ ಅನೇಕ ಮಕ್ಕಳು ಭಿಕ್ಷೆ ಬೇಡುವುದನ್ನು ನಾನು ನೋಡಿದ್ದೇನೆ. ಅವರನ್ನು ಪ್ರಶ್ನಿಸಿದಾಗ ಅವರು ಅನಾಥರು ಎಂಬ ವಿಷಯ ತಿಳಿಯಿತು. ಸತ್ಯವನ್ನು ತಿಳಿಯಲು ಅವರು ವಾಸಿಸುತ್ತಿದ್ದ ಸ್ಲಂಗೆ ಹೋಗಿದ್ದೆ. ಈ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದರು.

    ಶಾಲೆ ಶುರು ಮಾಡುವ ಮೊದಲು ಧರ್ಮವೀರ್ ಒಂದು ಗಂಟೆಗಳ ಕಾಲ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದೇ ರೀತಿ ನಿಧಾನವಾಗಿ ‘ಅಪ್ನಿ ಪಾಠಶಾಲಾ'(ನಮ್ಮ ಶಾಲೆ) ಶಾಲೆಯ ರೂಪವನ್ನು ಪಡೆಯಿತು. ಮಹಿಳಾ ಪೇದೆಗಳು ಹಾಗೂ ಸಮಾಜ ಸೇವೆ ಮಾಡುವವರು ಧರ್ಮವೀರ್ ಅವರ ಸಹಾಯ ಮಾಡುತ್ತಾರೆ. ಈ ಶಾಲೆಯಲ್ಲಿ ಓದುವ ಸುಮಾರು 200 ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಲಾಗಿದೆ. ಇದರಲ್ಲಿ 90 ಮಕ್ಕಳು ಆರನೇ ಹಾಗೂ ಎಂಟನೇ ತರಗತಿ ಓದುತ್ತಿದ್ದಾರೆ.

    ಶಾಲೆಯ ಹತ್ತಿರದಲ್ಲೇ ನಮ್ಮದೊಂದು ವಾಹನವಿದ್ದು, ಅದರಲ್ಲಿ ಮಕ್ಕಳನ್ನು ಸ್ಲಂನಿಂದ ಸ್ಕೂಲ್‍ಗೆ ಕರೆದುಕೊಂಡು ಹೋಗಲಾಗುತ್ತದೆ. ಇದಲ್ಲದೆ ಮಕ್ಕಳಿಗಾಗಿ ಸ್ಕೂಲ್ ಡ್ರೆಸ್, ಶೂ, ಊಟ ಹಾಗೂ ಪುಸ್ತಕಗಳನ್ನು ಸಹ ನೀಡುತ್ತೇವೆ. ಇದೆಲ್ಲಾ ಉಚಿತವಾಗಿದ್ದು, ಇದಕ್ಕಾಗಿ ಇಲಾಖೆಯಲ್ಲಿರುವ ಸಮಾಜ ಸೇವಕರು ಹಾಗೂ ಕೆಲವು ಸಂಸ್ಥೆಗಳು ಸಹಾಯ ಮಾಡುತ್ತದೆ. ಮಕ್ಕಳನ್ನು ಶಾಲೆಗೆ ಕರೆತರುವುದು ಬಹಳ ಕಷ್ಟದ ಕೆಲಸವಾಗಿತ್ತು. ಏಕೆಂದರೆ ಮೂಲಭೂತ ಸೌಕರ್ಯ ಸಿಗದ್ದಕ್ಕೆ ಅವರು ಭಿಕ್ಷೆ ಬೇಡುತ್ತಿದ್ದರು. ಹಾಗಾಗಿ ನಾವು ಮೊದಲು ಊಟದ ವ್ಯವಸ್ಥೆ ಮಾಡಿದ್ದೆವು ಎಂದು ಧರ್ಮವೀರ್ ಹೇಳಿದರು.

    ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದ ಕೆಲವು ಕುಟುಂಬಗಳು ಕೆಲಸ ಹುಡುಕಲು ಇಲ್ಲಿಗೆ ಬರುತ್ತಾರೆ. ನಾವು ಅವರಿಗೂ ಹಾಗೂ ಅವರ ಮಕ್ಕಳಿಗೂ ಶಾಲೆಗೆ ಬರುವಂತೆ ಪ್ರೇರೇಪಿಸಿದ್ದೆವು. ಕೆಲವು ಮಕ್ಕಳಿಗೆ ರಸ್ತೆಯಲ್ಲಿ ಕಸ ಎತ್ತಬೇಕೆಂದು ಹೇಳಲಾಗಿತ್ತು. ಏಕೆಂದರೆ ಅವರು ಈ ರೀತಿ ಮಾಡದಿದ್ದರೆ ಅವರ ಪೋಷಕರು ಶಾಲೆಗೆ ಕಳುಹಿಸಲು ನಿರಾಕರಿಸುತ್ತಿದ್ದರು. ಹಾಗಾಗಿ ಮಕ್ಕಳು ಶಾಲೆ ಮುಗಿದ ನಂತರ ಈ ಕೆಲಸವನ್ನು ಮಾಡುತ್ತಿದ್ದರು ಎಂದು ಧರ್ಮವೀರ್ ತಿಳಿಸಿದ್ದಾರೆ.

    ಈ ಶಾಲೆ ನಡೆಸಲು ಪ್ರತಿ ತಿಂಗಳು ಒಂದೂವರೆ ಲಕ್ಷ ರೂ. ಖರ್ಚು ಆಗುತ್ತದೆ. ಈ ಹಣವನ್ನು ಜನರ ದೇಣಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸರ್ಕಾರದಿಂದ ನಮಗೆ ಯಾವುದೇ ಸಹಾಯವಾಗಿಲ್ಲ. ಪೊಲೀಸ್, ಸಮಾಜ ಹಾಗೂ ಶಿಕ್ಷಣ ವಿಭಾಗದ ಸಹಾಯದಿಂದ ನಾವು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಮಕ್ಕಳಿಗಾಗಿ ವಿಶೇಷ ಶಾಲೆ ಹಾಗೂ ಬೇರೆ ಸಿಬ್ಬಂದಿ ವ್ಯವಸ್ಥೆ ಮಾಡುವುದು ಮುಖ್ಯ. ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇವರು ಮತ್ತೆ ಯಾವತ್ತೂ ಶಾಲೆಗೆ ಬರುವುದಿಲ್ಲ ಎಂದು ಧರ್ಮವೀರ್ ತಿಳಿಸಿದ್ದಾರೆ.

  • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವಿಜಯಪುರ: ತಾಯಿಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಗರದ ರಾಜ್ ರತನ್ ಕಾಲೋನಿ ನಿವಾಸಿಯಾಗಿರುವ ದಾಲಿಬಾಯಿ ಎಂಬ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ವಿಷಯವೇನೆಂದರೆ ದಾಲಿಬಾಯಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ನಗರದ ಮುದನೂರು ಆಸ್ಪತ್ರೆಯಲ್ಲಿ ದಾಲಿಬಾಯಿ ಅವರ ಹೆರಿಗೆ ನಡೆದಿದ್ದು, ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅಲ್ಲದೆ ತಾಯಿ ಹಾಗೂ ನಾಲ್ಕು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಇತ್ತ ನಾಲ್ಕು ಮಕ್ಕಳು ಒಟ್ಟಿಗೆ ಹುಟ್ಟಿದ್ದ ಕಾರಣ ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.

  • ಬೆಳ್ಳಂಬೆಳಗ್ಗೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವು

    ಬೆಳ್ಳಂಬೆಳಗ್ಗೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವು

    ಕೊಪ್ಪಳ: ಬೆಳ್ಳಂಬೆಳಗ್ಗೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕೊಪ್ಪಳ ತಾಲೂಕಿನ ಯಲಮಗೇರಿಯಲ್ಲಿ ಗ್ರಾಮದಲ್ಲಿ ಬೆಳಗ್ಗಿನ ಜಾವ ಮೂರು ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 22 ವರ್ಷದ ಸುಜಾತ, 15 ವರ್ಷದ ಅಮರೇಶ, 18 ವರ್ಷದ ಗವಿಸಿದ್ದಪ್ಪ ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಬಾರಿ ಮಳೆ ಸುರಿಯುತ್ತಿದ್ದು ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲೂ ಮಳೆಯ ಆರ್ಭಟ ಜೋರಾಗಿತ್ತು.

    ಸೋಮವಾರ ರಾತ್ರಿಯೂ ಮಳೆ ಸುರಿದಿದೆ. ಈ ಕಾರಣದಿಂದ ಮನೆಯೆ ಮೇಲೆ ಮಲಗಿದ್ದವರು ಒಳಗೆ ಬಂದು ಮಲಗಿದ್ದಾರೆ. ಎಡಬಿಡದೆ ಮಳೆ ಸುರಿದಿದ್ದರಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಏಕಾಏಕಿ ಕುಸಿದು ಬಿದ್ದಿದೆ. ಮನೆಯ ಮೇಲ್ಛಾವಣಿ ಕುಸಿಯುತ್ತಿದ್ದಂತೆ ಕೆಳಗೆ ಮಲಗಿದ್ದ ಮೂವರಲ್ಲಿ ಬಾಲಕ ಗವಿಸಿದ್ದಪ್ಪ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.

    ಸುಜಾತ, ಅಮರೇಶ ಗೆ ತೀವ್ರ ಉಸಿರಾಟದ ತೊಂದರೆಯಾಗಿದೆ. ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    – ಇತ್ತ ಮೈಸೂರಿನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ

    ಬೆಳಗಾವಿ/ಮೈಸೂರು: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ ಚನ್ನಗೌಡರ (34) ಮೃತಪಟ್ಟ ತಾಯಿ. ಶಿಲ್ಪಾ ತನ್ನ ಮಕ್ಕಳಾದ ಸುಜಲ ಮತ್ತು ಸುದರ್ಶನನಿಗೆ ನೇಜ ಗ್ರಾಮದ ಹೊರವಲಯದಲ್ಲಿ ತೆರೆದ ಬಾವಿಯಲ್ಲಿ ಈಜು ಕಲಿಸುತ್ತಿದ್ದಳು. ಈ ವೇಳೆ ಶಿಲ್ಪಾ ಮೂರ್ಛೆ ತಪ್ಪಿದ್ದಾಳೆ. ಈಜುವಾಗ ಶಿಲ್ಪಾ ತಂಬಾಕು ಸೇವನೆ ಮಾಡಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.

    ತಾಯಿ ಮುಳುಗುತ್ತಿರುವುದನ್ನು ನೋಡಿದ ಮಕ್ಕಳು ಸಹಾಯಕ್ಕಾಗಿ ಕೂಗಾಡಿದ್ದಾರೆ. ಅಲ್ಲದೆ ತಾಯಿಯ ರಕ್ಷಣೆ ಮಾಡುವಂತೆ ಮಕ್ಕಳು ನೆರೆ ಹೊರೆಯವರನ್ನು ಬಾವಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಜನರು ರಕ್ಷಣೆಗೆ ಬರುವಷ್ಟರಲ್ಲಿ ಶಿಲ್ಪಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ತರಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಧನುಷ್ (19) ಮೃತ ಯುವಕನಾಗಿದ್ದು, ಬೆಂಗಳೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.

    ಧನುಷ್ ತನ್ನ ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದನು. ನದಿ ತೀರದ ಸಮಾಧಿ ಸ್ವಚ್ಚಗೊಳಿಸಲು ನೀರು ತರಲು ಹೋಗಿದ್ದ ವೇಳೆ ಧನುಷ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳ ನೆರವಿಗೆ ನಿಂತ ಅಲಿಯಾ

    ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳ ನೆರವಿಗೆ ನಿಂತ ಅಲಿಯಾ

    ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.

    ಅಲಿಯಾ ಪೇಟಿಂಗ್ ಪ್ರದರ್ಶನ(ಎಕ್ಸಿಬಿಷನ್)ನಲ್ಲಿ ಭಾಗವಹಿಸುವ ಮೂಲಕ ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. ಈ ಎಕ್ಸಿಬಿಷನ್‍ನಿಂದ ಬಂದ ಹಣವನ್ನು ಮಕ್ಕಳ ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ.

    ಬುಧವಾರ ಅಲಿಯಾ ಅವರು ಮುಂಬೈನ ಬಾಯಿ ಜರ್ಬಾಯಿ ವಾಡಿಯಾ ಆಸ್ಪತ್ರೆಯಲ್ಲಿ ‘ಆರ್ಟ್ ಫಾರ್ ದಿ ಹಾರ್ಟ್’ ಎಕ್ಸಿಬಿಷನ್ ಉದ್ಘಾಟಿಸಿದ್ದರು. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಅಲಿಯಾ, “ಮಕ್ಕಳು ದೊಡ್ಡವರಿಗಿಂತ ಹೆಚ್ಚು ಪಾಸಿಟಿವ್ ಆಗಿರುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಏಕೆಂದರೆ ಅವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಇರುವುದಿಲ್ಲ. ಇದೇ ಕಾರಣಕ್ಕೆ ಅವರು ಬೇಗ ಗುಣಮುಖರಾಗುತ್ತಾರೆ” ಎಂದು ಹೇಳಿದ್ದಾರೆ.

    ನಾನು ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕ(ಎನ್‍ಐಸಿಯು)ಗೆ ಹೋಗಿದ್ದೆ. ಇಡೀ ಏಷಿಯಾದಲ್ಲಿ ಇದು ಅತಿದೊಡ್ಡ ಘಟಕ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಎಕ್ಸಿಬಿಷನ್ ಆಯೋಜಿಸಲಾಗಿದೆ. ಇದರಿಂದ ಸಂಗ್ರಹಿಸಲಾದ ಹಣವನ್ನು ಮಕ್ಕಳ ಸರ್ಜರಿಗೆ ಉಪಯೋಗಿಸಲಾಗುತ್ತದೆ ಎಂದು ಅಲಿಯಾ ಭಟ್ ತಿಳಿಸಿದ್ದಾರೆ.

     

    View this post on Instagram

     

    #aliabhatt today at wadia hospital

    A post shared by Viral Bhayani (@viralbhayani) on