Tag: Childrens

  • ಮೂವರು ಮಕ್ಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ್ಳು

    ಮೂವರು ಮಕ್ಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ್ಳು

    – ಮತ್ತೆ ಊರಿಗೆ ಕರೆದುಕೊಂಡು ಬಂದು ಕೈಕೊಟ್ಟ ಪ್ರಿಯಕರ
    – ಕೈಕೊಟ್ಟ ಪ್ರಿಯಕರನ ಮನೆ ಮುಂದೆ ಮಕ್ಕಳೊಂದಿಗೆ ಧರಣಿ

    ವಿಜಯಪುರ: ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಓಡಿ ಹೋದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದ ಗೃಹಿಣಿ ಯಲ್ಲಮ್ಮ ಅದೇ ಗ್ರಾಮದ ಯುವಕ ಪ್ರಭು ಎಂಬವನ ಜೊತೆ 7 ತಿಂಗಳ ಕಾಲ ಪುಣೆಗೆ ಓಡಿ ಹೋಗಿದ್ದಳು. 7 ತಿಂಗಳು ಅಲ್ಲಿ ಇಬ್ಬರು ಸುತ್ತಿ ನಂತರ ಯಲಮ್ಮನನ್ನು ಗ್ರಾಮಕ್ಕೆ ಕರೆ ತಂದು ನಡುಬೀದಿಯಲ್ಲಿ ಬಿಟ್ಟು ಪ್ರಿಯಕರ ಪ್ರಭು ಪರಾರಿಯಾಗಿದ್ದಾನೆ.

    ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಯಲ್ಲಮ್ಮನ ಪತಿ ಹಾಗೂ ಆತನ ಮನೆಯವರು ಮೂರು ಮಕ್ಕಳ ಸಮೇತ ಮರಳಿ ಮನೆಗೆ ಬರದಂತೆ ಆಕೆಯನ್ನು ಹೊರ ಹಾಕಿದ್ದಾರೆ. ಈಗ ಬೇರೆ ದಾರಿಯಿಲ್ಲದೆ ಪ್ರಿಯಕರನ ಮನೆ ಎದುರು ಮೂರು ಮಕ್ಕಳ ಸಮೇತ ಯಲ್ಲಮ್ಮ ಧರಣಿ ನಡೆಸುತ್ತಿದ್ದಾಳೆ.

    ಪ್ರಿಯಕರ ಪ್ರಭು ಮಾತ್ರ ಯಲ್ಲಮ್ಮಳನ್ನು ಮರಳಿ ಊರಿಗೆ ಕರೆ ತಂದು ಬಿಟ್ಟು ನಂತರ ಪರಾರಿಯಾಗಿದ್ದಾನೆ. ಇತ್ತ ಪ್ರಭು ಮನೆಯವರು ಮನೆಗೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ. ಆದರೆ ಯಲ್ಲಮ್ಮ ಮೂವರು ಮಕ್ಕಳ ಸಮೇತ ಬಂದು ಪ್ರಭು ಮನೆ ಮುಂದೆ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಾ ಕುಳಿತಿದ್ದಾಳೆ.

    ಈ ಬಗ್ಗೆ ಯಲ್ಲಮ್ಮ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯಲ್ಲಮ್ಮಗೆ ಡಿಎಸ್‍ಎಸ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಸಾಥ್ ನೀಡಿವೆ. ಅಲ್ಲದೆ ಆಕೆಯನ್ನು ಪ್ರಿಯಕರ ಪ್ರಭು ಮನೆಗೆ ಸೇರಿಸಲು ಸಂಘಟನೆಗಳ ಪ್ರಯತ್ನ ಮಾಡುತ್ತಿವೆ.

  • ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಕುರಿತಾಗಿ ಪ್ಲಾಸ್ಟಿಕ್ ನಿಷೇಧ, ಬಯಲು ಶೌಚ ಮುಕ್ತ, ಜಲ ಸಂರಕ್ಷಣೆ ಕುರಿತು ಮಾತನಾಡಿದ್ದು ತುಂಬಾ ಉಪಯುಕ್ತವಾಗಿದೆ ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ ಪ್ರತಿಕ್ರಿಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುವಾರ ಮಠದಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಧಾನಿಯವರೇ ಸ್ವಪ್ರೇರಣೆಯಿಂದ ಬಂದು ಪೂಜ್ಯರ ಗದ್ದುಗೆ ದರ್ಶನ ಪಡೆದಿದ್ದಾರೆ. ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು, ಜಲಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಜೊತೆಗೆ ನಾಡಿನ ಸಂತರು ಮೂರು ಸಂಕಲ್ಪ ತೊಟ್ಟು ದೇಶದ ಬದಲಾವಣೆಗೆ ಶ್ರಮಿಶಬೇಕು ಎಂದು ಕರೆ ಕೊಟ್ಟಿದ್ದಾರೆ ಎಂದರು.

    ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಇತ್ತು ಎಂದು ಮಾಧ್ಯಮದಲ್ಲಿ ತಪ್ಪಾಗಿ ಪ್ರಸಾರವಾಗಿತ್ತು. ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲಾಗಲಿ, ಮಠದ ವತಿಯಿಂದಾಗಲಿ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ಮಕ್ಕಳೊಂದಿಗೆ ಮಾತಾಡಿಲ್ಲ ಎಂಬ ವಿಚಾರ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಸಮಯದ ಅಭಾವ ಇತ್ತು. ಹಾಗಾಗಿ ಚುಟುಕಾಗಿ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಮಾತನಾಡುವವರಿದ್ದರು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೇಬಿ ಶ್ರೀ ಎಂಬ ಬಾಲನಟಿ ಪ್ರಧಾನಿಯವರಿಗೆ ಪ್ರಶ್ನೆ ಕೇಳುವ ಇಂಗಿತ ವ್ಯಕ್ತಡಿಸಿದ್ದು ನಿಜ. ಆದರೆ ನಾವು ಅವರಿಗೆ ಅವಕಾಶ ನೀಡುತ್ತೆವೆ ಎನ್ನುವುದನ್ನು ಖಾತ್ರಿ ಮಾಡಿರಲಿಲ್ಲ. ಪ್ರಶ್ನೆ ಕೇಳುವ ಸಂದರ್ಭ ಬಂದರೇ ಚೀಟಿ ಕೊಟ್ಟರೆ ಅನುಕೂಲ ಮಾಡಿಕೊಡುತ್ತೆ ಎಂದಿದ್ದೆ ಅಷ್ಟೇ ಹೊರತು ಪ್ರತ್ಯೇಕವಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಿರಲಿಲ್ಲ ಎಂದು ಒತ್ತಿ ಹೇಳಿದರು.

  • ಹೊಸ ವರ್ಷಕ್ಕೆ ಮಕ್ಕಳಿಗೆ ಜನ್ಮ ನೀಡಿದ 22 ತಾಯಂದಿರು

    ಹೊಸ ವರ್ಷಕ್ಕೆ ಮಕ್ಕಳಿಗೆ ಜನ್ಮ ನೀಡಿದ 22 ತಾಯಂದಿರು

    ಬೆಂಗಳೂರು: ಅಮ್ಮಂದಿರ ಪಾಲಿಗೆ ಹೊಸ ವರ್ಷ ಡಬಲ್ ಸಂಭ್ರಮ. ಏಕೆಂದರೆ ಹೊಸ ವರ್ಷಕ್ಕೆ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    2020ರ ಮಧ್ಯರಾತ್ರಿ 12 ಗಂಟೆಯಿಂದ ಇದುವರೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮವಿತ್ತಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮಾಹಿತಿ ನೀಡಿದ್ದಾರೆ.

    ಹೊಸ ವರ್ಷ ದಿನವೇ ಪುಟಾಣಿಗಳು ಅಮ್ಮನ ಬಿಸಿಯಪ್ಪುಗೆಯಲ್ಲಿ ಇದ್ರೆ, ತಾಯಂದಿರ ಮುಖದಲ್ಲಿ ಸಂತೋಷದ ಆನಂದ ಭಾಷ್ಪ. ಹೊಸ ವರ್ಷದ ಸಂಭ್ರಮದ ಜೊತೆಗೆ ಮನೆಗೆ ಕಂದಮ್ಮ ಬಂದ ಖುಷಿಯನ್ನು ತಾಯಂದಿರು ವ್ಯಕ್ತಪಡಿಸಿದರು.

    ವೈದ್ಯರು ಕೂಡ ಹೊಸ ವರ್ಷದಂದು ಹುಟ್ಟಿದ ಪುಟಾಣಿಗಳ ತಾಯಂದಿರಿಗೆ ಶುಭಾಶಯ ತಿಳಿಸಿ ಸಂಭ್ರಮಿಸಿದರು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಡೇ ಯಂದು ಹುಟ್ಟಿದ ಮಕ್ಕಳನ್ನು ನೋಡಿ ಎಲ್ಲರೂ ಖುಷಿಪಟ್ಟರು.

  • ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ದಾವಣಗೆರೆ: ಕೇತುಗ್ರಸ್ತ ಸೂರ್ಯಗ್ರಹಣದ ಭಯ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಸೂರ್ಯನ ಕಿರಣ ನಮ್ಮ ಮೈಮೇಲೆ ಬಿದ್ದರೆ ದೋಷವಾಗುತ್ತಾ ಎನ್ನುವಷ್ಟರ ಮಟ್ಟಿಗೆ ಮೂಡ ನಂಬಿಕೆ ಬೇರೂರಿದೆ.

    ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡದ ಗ್ರಾಮಸ್ಥರು ಮನೆಯಿಂದಲೇ ಹೊರ ಬಾರದ ಸ್ಥಿತಿ ಉಂಟಾಗಿದೆ. ಮನೆಯಿಂದ ಹೊರ ಬಂದರೆ ಏನಾದರೂ ದೋಷ ಬರುತ್ತಾ ಎನ್ನುವ ಭಯದಲ್ಲಿ ಬೆಳಗ್ಗೆಯಿಂದಲೂ ಬಾಗಿಲು ಮುಚ್ವಿಕೊಂಡು ಒಳಗೆ ಕೂತಿದ್ದಾರೆ. ಮನೆಯಿಂದ ಹೊರ ಬಂದರೆ ಏನಾದ್ರು ದೋಷವಾಗುತ್ತೆ ಎನ್ನುವ ಭಯದಲ್ಲಿ ಗ್ರಾಮದ ಜನರು ಕಾಡುತ್ತಿದ್ದು ಹೊರ ಬಾರದೆ ಕೂತಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಸೂರ್ಯ ಗ್ರಹಣ ಹಿನ್ನೆಲೆ ಒಬ್ಬರೇ ಮಕ್ಕಳಿರುವ ಪೋಷಕರು ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ಗ್ರಹಣ ದೋಷ ನಿವಾರಣೆ ಆಗುವಂತೆ ಪ್ರಾರ್ಥಿಸಿದರು.

    ಕೇತುಗ್ರಸ್ತ ಸೂರ್ಯಗ್ರಹಣದಲ್ಲಿ ಒಬ್ಬನೇ ಮಗನಿದ್ದವರಿಗೆ ದೋಷ ಬರುತ್ತೆ ಎನ್ನುವ ನಂಬಿಕೆ ಇದ್ದು, ದೋಷ ಪರಿಹಾರಕ್ಕೆ ಎಕ್ಕೆ ಗಿಡದ ಪೂಜೆ ಸಲ್ಲಿಸಿದರೆ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ. ಆದ್ದರಿಂದ ಪಣಿಯಾಪುರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆ ತಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

  • ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ಮಂಡ್ಯ: ಕೌಟುಂಬಿಕ ಕಲಹದಿಂದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹಾಗಲಹಳ್ಳಿಯಲ್ಲಿ ನಡೆದಿದೆ.

    ಸವಿತಾ (29) ಹಾಗೂ ತರುಣ್ (9), ತೇಜಶ್ರೀ (7) ಮೃತಪಟ್ಟ ತಾಯಿ ಮಕ್ಕಳು. ಮದ್ದೂರು ತಾಲೂಕಿನ ಮರಕಾರದೊಡ್ಡಿ ಗ್ರಾಮದ ಸವಿತಾಳನ್ನು ಕೆ. ಹಾಗಲಹಳ್ಳಿ ಗ್ರಾಮದ ಸುಂದರ್ ಎಂಬವರ ಜೊತೆ ಕಳೆದ 10 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

    ಮದುವೆ ದಿನದಿಂದಲೂ ಇಬ್ಬರು ಖುಷಿಯಾಗಿದ್ದರು. ಆದರೆ ಕಳೆದ ಒಂದು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಮನಸ್ಥಾಪ ಇತ್ತು. ರಾತ್ರಿ ಇದ್ದಕ್ಕಿದ್ದ ಹಾಗೇ ಸವಿತಾ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.

    ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬರುತ್ತಿದೆ. ಅದರೆ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇದಲ್ಲದೇ ಸವಿತಾ ಪತಿ ಸುಂದರ್ ಈಗ ಕಣ್ಮರೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಕೋಲ್ಕತ್ತಾ: ಭಾರತ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಸೀಕ್ರೆಟ್ ಸಾಂತಾ’ ಆಗಿ ಪಶ್ಚಿಮ ಬಂಗಳಾದ ಕೋಲ್ಕತ್ತಾದಲ್ಲಿರುವ ದೀನದಲಿತರ ಮಕ್ಕಳ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.

    ಖಾಸಗಿ ವಾಹಿನಿಯೊಂದು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳು ತಮ್ಮ ನೆಚ್ಚಿನ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಕ್ರಿಸ್ಟಿಯಾನೊ ರೊನಾಲ್ಡೊ, ಪಿ.ವಿ ಸಿಂಧು ಹಾಗೂ ಕ್ರಿಸ್ಮೆಸ್ ಸಮಯದಲ್ಲಿ ಇಷ್ಟವಾಗುವ ವಸ್ತುಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮಕ್ಕಳು ಮಾತನಾಡಿದ ಈ ವಿಡಿಯೋವನ್ನು ವಿರಾಟ್ ಅವರು ನೋಡಿದ್ದಾರೆ. ಇದನ್ನೂ ಓದಿ: ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮಕ್ಕಳ ವಿಡಿಯೋ ನೋಡಿದ ನಂತರ ವಿರಾಟ್ ಸಾಂತಾ ಕ್ಲಾಸ್‍ನಂತಯೆ ಉಡುಪು ಧರಿಸಿ, ಮಕ್ಕಳಿಗೆ ಉಡುಗೊರೆಯನ್ನು ಹಂಚಿದ್ದಾರೆ. ಉಡುಗೊರೆ ಎಲ್ಲ ಹಂಚಿದ ಬಳಿಕ ವಿರಾಟ್ ತಾವು ಹಾಕಿದ ನಕಲಿ ಗಡ್ಡವನ್ನು ತೆಗೆದಿದ್ದಾರೆ. ವಿರಾಟ್‍ರನ್ನು ನೋಡುತ್ತಿದ್ದಂತೆ ಮಕ್ಕಳು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಅಲ್ಲದೆ ವಿರಾಟ್‍ರನ್ನು ತಬ್ಬಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ಕೊನೆಯಲ್ಲಿ ವಿರಾಟ್, ಈ ಮಕ್ಕಳು ವರ್ಷವಿಡೀ ನಮಗೆ ಬೆಂಬಲಿಸುತ್ತಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದು ಹಾಗೂ ಅವರನ್ನು ಸಂತೋಷ ತಂದ ಕ್ಷಣ ಅದ್ಭುತವಾಗಿತ್ತು. ನಾನು ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ಅವರ ಈ ಕೆಲಸಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/StarSportsIndia/status/1207927652079812608?ref_src=twsrc%5Etfw%7Ctwcamp%5Etweetembed%7Ctwterm%5E1207927652079812608&ref_url=https%3A%2F%2Fwww.timesnownews.com%2Fsports%2Fcricket%2Farticle%2Fvideo-virat-kohli-turns-secret-santa-for-underprivileged-kids-ahead-of-christmas%2F529935

  • ಮುದ್ದಾಗಿ ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದ ಪುಟಾಣಿಗಳು

    ಮುದ್ದಾಗಿ ಹೆಜ್ಜೆ ಹಾಕಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದ ಪುಟಾಣಿಗಳು

    ತುಮಕೂರು: ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಪುಟಾಣಿಗಳು ತಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಪುಟ್ಟಪುಟ್ಟ ಹೆಜ್ಜೆ ಹಾಕಿದ್ದಾರೆ. ಹೆಜ್ಜೆ ಹಾಕುವ ಮೂಲಕ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ತುಮಕೂರು ನಗರದ ಎಸ್‍ಎಸ್ ಪುರಂನಲ್ಲಿರುವ ಮಾರುತಿ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದಾಗುವ ತೊಂದರೆಯನ್ನು ತೆರೆದಿಟ್ಟಿದ್ದಾರೆ. ಪ್ಲಾಸ್ಟಿಕ್ ಕುರಿತಾದ ಟಿಕ್ ಟಿಕ್ ಟಿಕ್ ಟಿಕ್ ಎನ್ನುವ ಹಿಂದಿ ಹಾಡಿಗೆ ಪುಟಾಣಿಗಳು ಹೆಜ್ಜೆ ಹಾಕಿದ್ದಾರೆ.

    ವೇದಿಕೆ ಮುಂದೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಹಿಂಭಾಗದ ಪರದೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ಪರಿಣಾಮಗಳ ದೃಶ್ಯಾವಳಿಗಳು ಮೂಡುತ್ತಿದ್ದವು. ವಿಶೇಷ ಎಂದರೆ ಪ್ರಧಾನಿ ಮೋದಿ ಕಡಲ ಕಿನಾರೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚಿಗೊಳಿಸುವ ದೃಶ್ಯಾವಳಿ ಕಂಡು ಬಂದಿತ್ತು. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಲವು ಪರಿಸರ ಮಾಲಿನ್ಯಗಳ ಬಗ್ಗೆ ಪುಟಾಣಿ ಕಂದಮ್ಮಗಳು ನೃತ್ಯದ ಮೂಲಕ ಜಾಗೃತಿ ಮೂಡಿಸಿದ್ದಾರೆ.

    ಟಿಕ್ ಟಿಕ್ ಎನ್ನುತ್ತಾ ಎಳೆಯರು ಹೆಜ್ಜೆ ಇಡುತಿದ್ದಂತೆ ನೆರೆದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಪರಿಸರ ಜಾಗೃತಿ ಮಕ್ಕಳ ನೃತ್ಯ ಮನೋಜ್ಞವಾಗಿ ಮೂಡಿ ಬಂದಿತ್ತು.

  • ಅರಬ್ಬಿ ಸಮುದ್ರದಾಳದಲ್ಲಿ ವಿಹರಿಸಿದ ಐಜಿಪಿ ಡಿ. ರೂಪ ಮೌದ್ಗೀಲ್

    ಅರಬ್ಬಿ ಸಮುದ್ರದಾಳದಲ್ಲಿ ವಿಹರಿಸಿದ ಐಜಿಪಿ ಡಿ. ರೂಪ ಮೌದ್ಗೀಲ್

    – ಸಮುದ್ರದಾಳದಲ್ಲೂ ಸೆಲ್ಯುಟ್ ಮಾಡಿ ಖದರ್ ತೋರಿಸಿದ ಡಿ.ರೂಪ

    ಕಾರವಾರ: ಸದಾ ಇಲಾಖೆಯ ಕೆಲಸ-ಕಾರ್ಯದ ಒತ್ತಡದಲ್ಲಿದ್ದ ಕರ್ನಾಟಕದ ಮೊದಲ ಐಪಿಎಸ್ ಅಧಿಕಾರಿ ಡಿ. ರೂಪ ಅವರು ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಮಕ್ಕಳ ಸಮೇತ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಬ್ಯುಸಿ ಮೂಡ್‍ನಿಂದ ಹೊರಬಂದು ಎಂಜಾಯ್ ಮಾಡಿದರು.

    ಸದ್ಯ ರೈಲ್ವೆ ಇಲಾಖೆಯ ಕರ್ನಾಟಕ ಐಜಿಪಿ ಆಗಿರುವ ಡಿ. ರೂಪ ಮೌದ್ಗೀಲ್ ಅವರು ಮಗ ಹಾಗೂ ಪುತ್ರಿ ಜೊತೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಇಲ್ಲಿನ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯಿಂದ ಅರಬ್ಬಿ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ವಿಸ್ಮಯ ಕಣ್ತುಂಬಿಕೊಂಡರು.

    ಮೊದಲ ಬಾರಿ ಸ್ಕೂಬಾ ಡೈ ಮಾಡಿರುವುದಕ್ಕೆ ಡಿ. ರೂಪ ಸಂತಸ ವ್ಯಕ್ತಪಡಿಸಿದರು. ರೂಪ ಅವರು ಮಕ್ಕಳ ಜೊತೆ ಸಮಯ ಕಳೆದು ಅರಬ್ಬಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಸಮುದ್ರದಾಳದಲ್ಲಿ ರೂಪ ಸೆಲ್ಯೂಟ್ ಮಾಡಿ ತಮ್ಮ ಖದರ್ ತೋರಿಸಿದ್ದಾರೆ. ಸದಾ ಕಳ್ಳರ, ಬ್ರಷ್ಟ ರಾಜಕಾರಣಿಗಳ ಬೆನ್ನು ಬಿದ್ದು ಕರ್ತವ್ಯ ನಿಷ್ಠೆ ಮೂಲಕ ಹೆಸರು ಮಾಡಿರುವ ಡಿ. ರೂಪ ಸಮುದ್ರದಾಳದಲ್ಲೂ ತಮ್ಮ ಕದರ್ ತೋರಿಸಿದರು.

    ಮೊದಲ ಬಾರಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡಿದ ಅವರು ಆಳದಲ್ಲಿ ಉಸಿರಾಡಲು ಕಷ್ಟವಾಗಿ ಸಮುದ್ರದಿಂದ ಹೊರಬಂದರು. ಆದರೆ ಛಲ ಬಿಡದ ಅವರು ಮೊತ್ತೊಮ್ಮ ಆಕ್ಸಿಜನ್ ತುಂಬಿದ ಸಿಲೆಂಡರ್ ಬೆನ್ನಿಗೆ ಹೊತ್ತು ಸಮುದ್ರದಾಳಕ್ಕೆ ಇಳಿದು ಈಜಾಡಿದರು. ಈ ವೇಳೆ ಸಮುದ್ರದಾಳದಲ್ಲಿ ಸೆಲ್ಯುಟ್ ಮಾಡಿ ತಮ್ಮ ಖದರ್ ತೋರಿಸಿದ ಡಿ.ರೂಪ ಬರೋಬ್ಬರಿ 45 ನಿಮಿಷ ಆಳ ಸಮುದ್ರದಲ್ಲಿ ಈಜಾಡಿ ವಿವಿಧ ಭಂಗಿಯಲ್ಲಿ ಕ್ಯಾಮರಕ್ಕೆ ಪೋಸ್ ಕೊಟ್ಟು ಸಮುದ್ರದಾಳದ ಸೌಂದರ್ಯವನ್ನು ಸವಿದರು.

  • 50 ಮಕ್ಕಳಿದ್ದ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    50 ಮಕ್ಕಳಿದ್ದ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    – ಬೆಳಗಾವಿಯಿಂದ ಬಂದಿದ್ದ ಶಾಲಾ ಪ್ರವಾಸದ ಬಸ್

    ಮಂಗಳೂರು: ಕಾರು ಹಾಗೂ 50 ಮಕ್ಕಳಿದ್ದ ಶಾಲಾ ಪ್ರವಾಸದ ಬಸ್‍ ಡಿಕ್ಕಿ ಹೊಡೆದು ಭಾರೀ ಅನಾಹುತ ತಪ್ಪಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕೌಕ್ರಾಡಿ ಎಂಬಲ್ಲಿ ನಡೆದಿದೆ.

    ಬಸ್ ಪಲ್ಟಿ ಹೊಡೆದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಬೆಳಗಾವಿಯ ಜಿಲ್ಲೆಯ 50 ಜನ ಶಾಲಾ ಮಕ್ಕಳು ಬಸ್ ನಲ್ಲಿ ರಾಜ್ಯದ ಕರಾವಳಿ ಪ್ರವಾಸಕ್ಕೆ ಬಂದಿದ್ದರು. ಶುಕ್ರವಾರ ಮಂಗಳೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಬಳಿಕ ಕೌಕ್ರಾಡಿ ಗ್ರಾಮದ ತಿರುವಿನಲ್ಲಿ ಸಾಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದ. ಆದರೆ ಚಾಲಕರ ನಿಯಂತ್ರಣ ತಪ್ಪಿದ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ‌.

    ತಮಿಳುನಾಡು ನೋಂದಣಿಯ ಹ್ಯುಂಡೈ ಕಾರ್ ನಲ್ಲಿದ್ದ ಪ್ರಯಾಣಿಕರು ಕೂಡ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಆದರೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬಾಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ನುಜ್ಜಾಗಿದ್ದು, ಬಸ್ ರಸ್ತೆಯ ಪಕ್ಕಕ್ಕೆ ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಗಾಯಗೊಂಡ ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

  • ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು – ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ತಂದೆ

    ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು – ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ತಂದೆ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ತಂದೆಯೊಬ್ಬರು ಗೋಡೆ ಕುಸಿದು ಮೃತಪಟ್ಟ ಇಬ್ಬರು ಮಕ್ಕಳ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸೆಲ್ವರಾಜ್ ಅವರು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಲ್ವರಾಜ್ ಅವರಿಗೆ 15 ವರ್ಷದ ರಾಮನಾಥನ್ ಹಾಗೂ 18 ವರ್ಷದ ನಿವೇದಾ ಮಕ್ಕಳಿದ್ದರು. ಗೋಡೆ ಕುಸಿದು ಇಬ್ಬರು ಮೃತಪಟ್ಟ ಕಾರಣ ಸೆಲ್ವರಾಜ್ ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆಗೆ 17 ಮಂದಿ ಬಲಿ

    ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ನಡೆದ ಅನೇಕ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 17 ಮಂದಿ ಕೊಯಮತ್ತೂರಿನಲ್ಲಿ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ತಮ್ಮ ಚಿಕ್ಕಮ್ಮನ ಮನೆಯಲ್ಲಿ ಮಲಗಿದ್ದಾಗ ಗೋಡೆ ಕುಸಿದಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

    ನನ್ನ ಮಕ್ಕಳ ಮೃತದೇಹ ಮಣ್ಣಿನಲ್ಲಿ ಸೇರುತ್ತದೆ ಅಥವಾ ಸುಟ್ಟು ಹೋಗುತ್ತದೆ. ಆದರೆ ಅವರ ಕಣ್ಣುಗಳು ಇಬ್ಬರಿಗೆ ಉಪಯೋಗವಾಗುತ್ತದೆ. ಇದು ಒಳ್ಳೆಯ ಕೆಲಸ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಸೆಲ್ವರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ಸೆಲ್ವರಾಜ್ ಅವರ ಪತ್ನಿ ಲಕ್ಷ್ಮಿ ನಿಧನರಾಗಿದ್ದರು. ಆಗ ಸೆಲ್ವರಾಜ್ ಅವರೊಬ್ಬರೇ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಿವೇದಾ ಬಿ.ಕಾಂ ಓದುತ್ತಿದ್ದರೆ, ರಾಮ್‍ನಾಥ್ 10ನೇ ತರಗತಿ ಓದುತ್ತಿದ್ದನು.

    ನನ್ನ ಮಗಳು ವಿದ್ಯಾಭ್ಯಾಸ ಮಾಡಿ ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದಳು. ಆಕೆ ಓದಿನಲ್ಲಿ ತುಂಬಾ ಮುಂದಿದ್ದಳು. ನನ್ನ ಮಕ್ಕಳ ಕಣ್ಣುಗಳು ಜಗತ್ತಿನ ಬೇರೆ ವ್ಯಕ್ತಿಗಳಿಗೆ ಬೆಳಗಾಗಿರುವುದು ನನಗೆ ತುಂಬಾ ಖುಷಿಯಿದೆ ಎಂದು ಹೇಳುವ ಮೂಲಕ ಸೆಲ್ವರಾಜ್ ಭಾವುಕರಾಗಿದ್ದರು.