Tag: Childrens

  • ಶಾಲೆಗೆ ನುಗ್ಗಿ ಕಪಾಟಿನಲ್ಲಿ ಅವಿತುಕೊಂಡ 7 ಅಡಿಗೂ ಉದ್ದದ ನಾಗರಹಾವು!

    ಶಾಲೆಗೆ ನುಗ್ಗಿ ಕಪಾಟಿನಲ್ಲಿ ಅವಿತುಕೊಂಡ 7 ಅಡಿಗೂ ಉದ್ದದ ನಾಗರಹಾವು!

    ರಾಮನಗರ: ಸರ್ಕಾರಿ ಶಾಲೆಗೆ ನುಗ್ಗಿ ಕಪಾಟಿನಲ್ಲಿ ಹಾವು ಅವಿತುಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳು ಭಯಭೀತಗೊಂಡ ಘಟನೆ ರಾಮನಗರ ತಾಲೂಕಿನ ಕವಣಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿರುವ ಹಾವು ತರಗತಿ ಒಳಗೆ ಕಪಾಟಿನಲ್ಲಿ ಸೇರಿಕೊಂಡಿತ್ತು. ಬೆಳಗ್ಗೆ ಶಾಲೆಗೆ ಹೋದ ಮಕ್ಕಳಿಗೆ ಕೆಲ ಸಮಯದ ಬಳಿಕ ಹಾವು ಕಾಣಿಸಿಕೊಂಡಿದೆ. ನಂತರ ಭಯಬೀತರಾದ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಓಡಿದ್ದಾರೆ.

    ನಂತರ ಉರಗ ತಜ್ಞ ಅಮಾನ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಕಪಾಟಿನಲ್ಲಿ ಅವಿತಿದ್ದ ಹಾವನ್ನು ಸೆರೆ ಹಿಡಿದ್ರು. ಏಳು ಅಡಿಗೂ ಉದ್ದದ ನಾಗರ ಹಾವನ್ನು ಕಂಡು ಗ್ರಾಮಸ್ಥರಲ್ಲದೇ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಆಶ್ಚರ್ಯಗೊಂಡಿದ್ದರು.

    ಸಾಮಾನ್ಯವಾಗಿ 5 ಅಡಿಯಿರುತ್ತೆ, ಆದ್ರೆ ಈ ಹಾವು ಸುಮಾರು ಏಳೂವರೆ ಅಡಿ ಇತ್ತು. ಹಾವನ್ನು ಸೆರೆ ಹಿಡಿದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ ಅಂತ ಶಾಲಾ ಶಿಕ್ಷಕರು ತಿಳಿಸಿದ್ದಾರೆ.

    ಹಾವನ್ನು ಸೆರೆ ಹಿಡಿದ ಉರಗತಜ್ಞ ಅಮಾನ್ ಖಾನ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದು, ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.

  • ಹಣಕ್ಕಾಗಿ ಪತ್ನಿಗೆ ಕಿರುಕುಳ- ಮಾತು ಕೇಳದಿದ್ರೆ ಮಕ್ಳನ್ನೇ ರೇಪ್ ಮಾಡುವುದಾಗಿ ಸಹೋದರರಿಂದ ಬೆದರಿಕೆ

    ಹಣಕ್ಕಾಗಿ ಪತ್ನಿಗೆ ಕಿರುಕುಳ- ಮಾತು ಕೇಳದಿದ್ರೆ ಮಕ್ಳನ್ನೇ ರೇಪ್ ಮಾಡುವುದಾಗಿ ಸಹೋದರರಿಂದ ಬೆದರಿಕೆ

    ರಾಮನಗರ: ವಿಚ್ಚೇದನವಾದ್ರೂ ಪತಿಯೊಬ್ಬ ತನ್ನ ಮೊದಲ ಪತ್ನಿಯನ್ನು ಹಣಕ್ಕಾಗಿ ಕಿರುಕುಳ ನೀಡುವುದಲ್ಲದೆ ಒಟ್ಟಾಗಿ ಬಾಳದಿದ್ದರೆ ಜೀವ ಉಳಿಸಲ್ಲ ಎಂದು ಬೆದರಿಕೆ ಹಾಕುತ್ತಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ಗೀತಾ ಸಿಂಗ್ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ. ರಾಯಚೂರಿನ ಎಲ್‍ಬಿಎಸ್ ನಿವಾಸಿಯಾಗಿರುವ ಗೀತಾ ಅವರಿಗೆ ಐದು ಜನ ಮಕ್ಕಳು. ಸಫಾಯಿ ಕರ್ಮಚಾರಿ ಕೆಲಸ ಮಾಡಿಕೊಂಡು ಬದುಕುತ್ತಿರುವ ಗೀತಾ ಸಿಂಗ್, ನಾಲ್ಕು ಜನ ಹೆಣ್ಣುಮಕ್ಕಳು ಒಂದು ಗಂಡು ಮಗುವನ್ನ ಕರುಣಿಸಿರುವ ಪಾಪಿ ಪತಿ ರಾಜೇಶ್ ಸಿಂಗ್ ಗೆ ಡಿವೋರ್ಸ್ ನೀಡಿದ್ದಾರೆ. ಆದರೂ ಆತ ಹಣಕ್ಕಾಗಿ ಪತ್ನಿ ಮಕ್ಕಳನ್ನು ಪೀಡಿಸುತ್ತಿದ್ದಾನೆ.

    ಈಗಾಗಲೇ ಇನ್ನೂ ಇಬ್ಬರು ಪತ್ನಿಯರನ್ನು ಹೊಂದಿರುವ ರಾಜೇಶ್ ಸಿಂಗ್ ಏಪ್ರಿಲ್ 2018ರಲ್ಲಿ ವಿವಾಹ ವಿಚ್ಛೇದನವಾದರೂ ಜೊತೆಗೆ ಸಂಸಾರ ಮಾಡು ಎಂದು ಪೀಡಿಸುತ್ತಿದ್ದಾನೆ. ನಿತ್ಯ ಕುಡಿದು ಬಂದು ಹಣಕ್ಕಾಗಿ ಪತ್ನಿ ಮಕ್ಕಳನ್ನು ಹೊಡೆಯುತ್ತಿದ್ದಾನೆ. ಹೀಗಾಗಿ ನೊಂದ ಗೀತಾ ಸಿಂಗ್ ವಿವಾಹ ವಿಚ್ಚೇದನ ಪಡೆದಿದ್ದಾರೆ. ಆದರೆ ರಾಜೇಶ್ ಹಾಗೂ ಅವನ ಸಹೋದರರು ಮತ್ತು ಗೀತಾ ಸಿಂಗ್ ಸಂಬಂಧಿಕರು ಒಟ್ಟಾಗಿರುವಂತೆ ಕಿರುಕುಳ ನೀಡುತ್ತಿದ್ದಾರೆ.

    ಒಂದಾಗದಿದ್ದರೇ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನ ಅತ್ಯಾಚಾರ ಮಾಡುವುದಾಗಿ ಅಣ್ಣನ ಮಕ್ಕಳೇ ಬೆದರಿಸುತ್ತಿದ್ದಾರೆ ಎಂದು ಗೀತಾ ಸಿಂಗ್ ಆರೋಪಿಸಿದ್ದಾರೆ. ರಾಜೇಶ್ ಹಣಕ್ಕಾಗಿ ಕಿರುಕುಳ ನೀಡುವುದಲ್ಲದೆ ಒಟ್ಟಾಗಿ ಬಾಳದಿದ್ದರೆ ಜೀವ ಉಳಿಸಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ. ಹಣ ಹೆಂಡದ ಆಸೆಗೆ ಗೀತಾ ಸಹೋದರರು ಸಹ ಪಾಪಿ ಪತಿಯ ಮಾತನ್ನೇ ಕೇಳುತ್ತಿದ್ದಾರೆ. ಮಾತು ಕೇಳದಿದ್ದರೇ ತಂಗಿಯ ಮಕ್ಕಳನ್ನೇ ಅತ್ಯಾಚಾರ ಮಾಡುವುದಾಗಿ ಹೆದರಿಸುತ್ತಿದ್ದಾರೆ. ಇದರಿಂದ ನೊಂದ ಮಹಿಳೆ ಜಿಲ್ಲಾಧಿಕಾರಿ ಕಚೇರಿ ಎದುರು ವಿಷಕುಡಿದು ಸಾಯುವುದಾಗಿ ಹೇಳುತ್ತಿದ್ದಾರೆ.

    ಸಂಬಂಧಿಕರು ಏಕಾಏಕಿ ಮನೆಗೆ ನುಗ್ಗಿ ಗಲಾಟೆ ಮಾಡಿ ಕಿವಿಯೋಲೆಯನ್ನು ಕಿತ್ತುಕೊಂಡು ಹೋಗಿದ್ದಾರೆ. ಗೀತಾ ಸಿಂಗ್ ಸಹೋದರರ ಮಕ್ಕಳಾದ ರೋಹಿತ್, ರಾಹುಲ್, ವಿಶಾಲ್, ಸುಮಿತ್, ರಾಜೀವ್ ನಿಮ್ಮ ಮಕ್ಕಳಿಗೆ ಮದುವೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬೆದರಿಸಿದ್ದಾರೆ. ಈಗಾಗಲೇ ಎಸ್‍ಪಿ, ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ತಾಯಿ ಮಕ್ಕಳು ದೂರು ನೀಡಿದ್ದಾರೆ. ಆದರೆ ಕೌಟುಂಬಿಕ ವಿಚಾರ ಎಂದು ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೆಲ ಅಧಿಕಾರಿಗಳು ಇನ್ನೂ ರೇಪ್ ಆಗಿಲ್ಲವಲ್ಲಾ ಎನ್ನುವ ಉಡಾಫೆ ಮಾತನಾಡಿದ್ದಾರೆ ಎಂದು ಗೀತಾ ಮಗಳು ತನ್ನ ಅಲವತ್ತುಕೊಂಡಿದ್ದಾರೆ.

    ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರು ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಯಾವ ಅಧಿಕಾರಿಗಳು ಸ್ಪಂದಿಸದಿದ್ದದೆ ಜಿಲ್ಲಾಧಿಕಾರಿ ಕಚೇರಿ ಎದುರು ಐದು ಮಕ್ಕಳೊಂದಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೀತಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

  • ಪುಟ್ಟ ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ!

    ಪುಟ್ಟ ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ!

    ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ತೋಟಗಾನಹಳ್ಳಿ ಬಳಿ ಈ ಘಟನೆ ನಡೆದಿದೆ.

    ಪಾರ್ವತಮ್ಮ(25), ಚಂದನ(5), ಅಕ್ಷಯ್(3) ಹಾಗೂ ಜೀವನ್(7) ಮೃತ ದುರ್ದೈವಿಗಳು. ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ ಹಾಗೂ ಆಕೆಯ ಮೂವರು ಮಕ್ಕಳು ಗುರುವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಾಯಿ ಪಾರ್ವತಮ್ಮ ಹಾಗೂ ಮಗ ಅಕ್ಷಯ್ ಕುಮಾರ್ ಮೃತದೇಹಗಳು ಪತ್ತೆಯಾಗಿತ್ತು. ಇಂದು ಮುಂಜಾನೆ ಇನ್ನಿಬ್ಬರು ಮಕ್ಕಳಾದ ಚಂದನ ಹಾಗೂ ಜೀವನ್ ಅವರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಮೃತರು ನುಕ್ಕನಹಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಪತ್ನಿ ಮಕ್ಕಳು ಎನ್ನಲಾಗಿದೆ.

    ಸದ್ಯ ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಬೆಂಗಳೂರು: ಶನಿವಾರ ಸಂಜೆ ಆನೇಕಲ್ ತಾಲೂಕಿನ ಮಂಚನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದ ಬಾಲಕರು ಇದೀಗ ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ದಾರೆ.

    ಗ್ರಾಮದ ಚಂದನ್(12), ವಿಕಾಸ್(12), ನಂದನ್(12) ಹಾಗೂ ಕಾರ್ತಿಕ್(14) ಶನಿವಾರ ಸಂಜೆ ಆಟವಾಡಿ ಬಳಿಕ ಪೋಷಕರಿಗೆ ತಿಳಿಸದೆ ಹೊಸೂರು ಬೆಟ್ಟಕ್ಕೆ ತೆರಳಿ ಅಲ್ಲಿ ಇದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ನಂತರ ಮನೆಗೆ ಬರಲು ಹಣವಿಲ್ಲದೆ ಹೊಸೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಇವರನ್ನು ಗಮನಿಸಿದ ಹೊಸೂರು ಪೊಲೀಸರು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ ಹೊಸೂರು ಪೊಲೀಸರು ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಮಕ್ಕಳನ್ನು ಅತ್ತಿಬೆಲೆ ಪೊಲೀಸರಿಗೆ ನೀಡಿದ್ದಾರೆ. ಬಳಿಕ ಮಕ್ಕಳು ಪೋಷಕರ ಮಡಿಲು ಸೇರಿದ್ದು, ಈ ಮೂಲಕ ಮಕ್ಕಳ ಕಳ್ಳರ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.

    ಶನಿವಾರ ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಬಳಿಕ ನಾಪತ್ತೆಯಾಗಿದ್ದರಿಂದ ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ್ಕಕೀಡಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

  • ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಬೆಂಗಳೂರು: ಸಂಜೆ ಆಟ ಆಡ್ತಿದ್ದ ನಾಲ್ವರು ಶಾಲಾ ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ಮಂಚನಹಳ್ಳಿಯಲ್ಲಿ ನಡೆದಿದೆ.

    12 ವರ್ಷದ ಚಂದನ್, ವಿಕಾಸ್, ನಂದನ್ ಮತ್ತು 14 ವರ್ಷದ ಕಾರ್ತಿಕ್ ನಾಪತ್ತೆಯಾದ ಬಾಲಕರು. ಆನೇಕಲ್, ಅತ್ತಿಬೆಲೆ, ಬೆಂಗಳೂರು ಸೇರಿ ಎಲ್ಲೆಡೆ ಮಕ್ಕಳಿಗಾಗಿ ಹುಡುಕಾಟ ನಡೆಸಲಾಗ್ತಿದೆ.

    ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಆತಂಕಗೊಂಡ ಪಾಲಕರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.

    ಸದ್ಯ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಟ ನಿಖಿಲ್ ಕುಮಾರಸ್ವಾಮಿ!

    ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಟ ನಿಖಿಲ್ ಕುಮಾರಸ್ವಾಮಿ!

    ಮಂಡ್ಯ: ಸಿನಿಮಾ ಚಿತ್ರೀಕರಣ ವೇಳೆ ಗ್ರಾಮೀಣ ಮಕ್ಕಳೊಂದಿಗೆ ನಟ ನಿಖಿಲ್ ಕುಮಾರಸ್ವಾಮಿ ಕ್ರಿಕೆಟ್ ಆಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ನಾರ್ಥ್ ಬ್ಯಾಂಕ್ ಬಳಿ ‘ಸೀತಾರಾಮ ಕಲ್ಯಾಣ’ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಚಿತ್ರೀಕರಣ ವೇಳೆ ನಿಖಿಲ್ ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಕಳೆದೊಂದು ವಾರದಿಂದ ಚಿತ್ರೀಕರಣ ನಡೆಯುತ್ತಿದ್ದು, ನಟ ನಿಖಿಲ್ ಜೊತೆ ಕ್ರಿಕೆಟ್ ಆಡಿ ಮಕ್ಕಳು ಸಂಭ್ರಮಿಸಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ತನ್ನ ತಾತನಿಗೋಸ್ಕರ ಹಳ್ಳಿ ಸೊಗಡಿನ ಸೀತಾರಾಮ ಕಲ್ಯಾಣ ಚಿತ್ರ ಮಾಡಲಿದ್ದಾರೆ. ಸಾಂಪ್ರದಾಯಿಕ ಶೈಲಿ ನಿರೂಪಣೆ, ಹಳ್ಳಿ ಸೊಗಡು ಹೆಚ್ ಡಿ ಕುಮಾರಸ್ವಾಮಿ ನಿರ್ಮಾಣದ ಚಿತ್ರಗಳಲ್ಲಿ ಈ ದೃಶ್ಯಗಳನ್ನು ಕಾಣಬಹುದು.

    ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಹಳ್ಳಿ ಸೊಗಡನ್ನು ತೋರಿಸುವ ದೃಶ್ಯಗಳನ್ನು ಕಡಿಮೆಯಾಗಿತ್ತು. ಹೀಗಾಗಿ ಮತ್ತೆ ಹಳ್ಳಿ ವೈಭೋಗದ ದೃಶ್ಯವನ್ನು ತೋರಿಸೋಕೆ ಸೀತಾರಾಮ ಕಲ್ಯಾಣ ಚಿತ್ರ ಬರುತ್ತಿದೆ.

    ಮಂಡ್ಯ ಮೈಸೂರು ಭಾಗದ ಹಳ್ಳಿ ಹುಡುಗನಾಗಿ ನಿಖಿಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಐದಾರು ತಿಂಗಳ ಹಿಂದೆಯೇ ಸೆಟ್ಟೇರಿದ್ದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಜೊತೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

    ಮೂಲಗಳ ಪ್ರಕಾರ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ವೇಳೆಗೆ ಅದ್ಧೂರಿ ಮದುವೆ ಸೆಟ್ಟನ್ನು ಕ್ರಿಯೇಟ್ ಮಾಡಲಾಗುತ್ತೆ ಎನ್ನುವ ಸುದ್ದಿ ಇದೆ. ಹೀಗಾಗಿ ರೀಲ್ ಲೈಫ್‍ನಲ್ಲಿ ನಟ ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಕಲ್ಯಾಣೋತ್ಸವಕ್ಕೆ ಸಜ್ಜಾಗುತ್ತಿದ್ದಾರೆ.


  • ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ನಾಪತ್ತೆ!

    ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ನಾಪತ್ತೆ!

    ಬೆಂಗಳೂರು: ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ.

    ಕೃಷ್ಣ(06) ಮತ್ತು ಅರವಿಂದ್(05) ಕಾಣೆಯಾಗಿರುವ ಮಕ್ಕಳು. ಒಂದು ದಿನದ ಹಿಂದೆಯಷ್ಟೇ ಸಂಬಂಧಿಕರ ಮನೆಗೆ ಬಂದಿದ್ದರು. ಬಾಗಲಕೋಟೆಯ ಮಹಾಲಿಂಗಪುರದಿಂದ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದರು.

    ಶನಿವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾಗಿದ್ದಾರೆ. ಸದ್ಯ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷಿ ಹೊಂಡಕ್ಕೆ ಹಾರಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

    ಕೃಷಿ ಹೊಂಡಕ್ಕೆ ಹಾರಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

    ಕೋಲಾರ: ಕೌಟುಂಬಿಕ ಕಲಹ ಹಿನ್ನೆಲೆ ಕೃಷಿ ಹೊಂಡಕ್ಕೆ ಹಾರಿ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಗೊಟ್ಟಕುಂಟೆ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೊಟ್ಟಗಿಂಟೆ ಗ್ರಾಮದ ತಾಯಿ ಕನಕ(26), ಅಮೃತ(6) ಹಾಗೂ ಜಯಂತಿ(3) ಮೃತರು.

    ರಾತ್ರಿ ಗಂಡ ನರಸಿಂಹ ರೆಡ್ಡಿಯೊಂದಿಗೆ ಜಗಳ ಮಾಡಿಕೊಂಡಿರುವ ಕನಕ ತನ್ನಿಬ್ಬರ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ತರುವಾಯ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟವಾಡುತ್ತಿದ್ದಾಗ ಚಾಕು ತೋರಿಸಿ ಬಾಯಿಗೆ ಬಟ್ಟೆಕಟ್ಟಿ ಇಬ್ಬರು ಬಾಲಕಿಯರನ್ನು ಕಾರಿನಲ್ಲಿ ಅಪಹರಿಸಿದ್ರು!

    ಆಟವಾಡುತ್ತಿದ್ದಾಗ ಚಾಕು ತೋರಿಸಿ ಬಾಯಿಗೆ ಬಟ್ಟೆಕಟ್ಟಿ ಇಬ್ಬರು ಬಾಲಕಿಯರನ್ನು ಕಾರಿನಲ್ಲಿ ಅಪಹರಿಸಿದ್ರು!

    ಬೆಂಗಳೂರು: ಶನಿವಾರ ಬೆಂಗಳೂರಿನ ದಾರಸಹಳ್ಳಿಯಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಇಂದು ಮೈಸೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

    ಹರ್ಷಿತ(10) ಮತ್ತು ಮೋನಿಷ(09) ನಾಪತ್ತೆಯಾಗಿದ್ದ ಮಕ್ಕಳು. ಇವರು ಇಂದು ಮೈಸೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಮನೆ ಮುಂದೆ ಆಟವಾಡುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಅಪಹರಣ ಮಾಡಿದ್ದಾರೆ ಅಂತ ಮಕ್ಕಳು ಹೇಳಿದ್ದಾರೆ.

    ಆಟವಾಡುವಾಗ ಚಾಕು ತೋರಿಸಿ ಬಾಯಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅದಕ್ಕೂ ಮುಂಚೆ ಮನೆಗೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಸಿಕೊಂಡಿದ್ದಾರೆ. ನಂತರ ಯಶವಂತಪುರದಿಂದ ರೈಲಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಅಂತ ಅಪಹರಣವಾದ ಮಕ್ಕಳು ತಿಳಿಸಿದ್ದಾರೆ.

    ಮಕ್ಕಳು ಅಪಹರಣಕಾರರಿಂದ ತಪ್ಪಿಸಿಕೊಂಡು ಮೈಸೂರಿನಲ್ಲಿ ಸಿಕಿದ್ದು, ಸದ್ಯ ಮೈಸೂರು ರೈಲ್ವೇ ಪೊಲೀಸರ ವಶದಲ್ಲಿದ್ದಾರೆ. ಇತ್ತ ಮಕ್ಕಳು ಕಾಣೆಯಾದ ಕುರಿತು ಪೋಷಕರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಪಾಟ್ನಾ: ಮದುವೆಯಾಗಿ 11 ವರ್ಷಗಳ ನಂತರ 3 ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರ ಜೊತೆ ಓಡಿಹೋದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯ ಈಸ್ಟ್ ಕಾಲೋನಿನಲ್ಲಿ ನಡೆದಿದೆ.

    ಮನೋಜ್ ಕುಮಾರ್ ಎಂಬವರ ಪತ್ನಿ ಪಕ್ಕದ್ಮನೆ ಯುವಕನ ಜೊತೆ ಓಡಿಹೋಗಿದ್ದಾಳೆ. ಮನೋಜ್ ಕುಮಾರ್ ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದು, ಈ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

                                  ಪತಿ ಮನೋಜ್ ಕುಮಾರ್

    ಮನೋಜ್ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆ ಪಕ್ಕದ್ಮನೆ ಯುವಕನ ಜೊತೆ ಓಡಿ ಹೋಗಿದ್ದಾಳೆ. ಪತ್ನಿ ಓಡಿಹೋದ ಮೇಲೆ ಮನೋಜ್ ಏಪ್ರಿಲ್ 8ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೋಜ್ ಪೊಲೀಸ್ ಠಾಣೆಯಿಂದ ಡಿಐಜಿ ಕಚೇರಿವರೆಗೂ ದೂರು ನೀಡಿದ್ದರು. ಆದರೆ ಅವರ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಮನೋಜ್‍ಗೆ ಪೊಲೀಸ್ ಅಧಿಕಾರಿಯಿಂದ ಕೇವಲ ಆಶ್ವಾಸನೆಯಷ್ಟೇ ಸಿಕ್ಕಿದೆ ಎಂಬುದಾಗಿ ವರದಿಯಾಗಿದೆ.

    ಪುಸ್ತಕ ತರಬೇಕೆಂದ ಅಣ್ಣಂದಿರ ಜೊತೆ ಹೋದ ಅಮ್ಮ ಮತ್ತೆ ಹಿಂದಿರುಗಲಿಲ್ಲ ಎಂದು ಮನೋಜ್ ಕುಮಾರ್ ಮಗಳು ತಿಳಿಸಿದ್ದಾಳೆ.