Tag: Childrens

  • ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ – ಮಕ್ಕಳಿಗೆ ವಿತರಿಸಿದ ಕಾಮಿಕ್ ಬುಕ್ ನಲ್ಲಿತ್ತು ಅಶ್ಲೀಲ ಚಿತ್ರ!

    ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ – ಮಕ್ಕಳಿಗೆ ವಿತರಿಸಿದ ಕಾಮಿಕ್ ಬುಕ್ ನಲ್ಲಿತ್ತು ಅಶ್ಲೀಲ ಚಿತ್ರ!

    ಬೆಂಗಳೂರು: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರವಾಗಿರಿ. ನಿಮ್ಮ ಮಕ್ಕಳಿಗೆ ಯಾವುದೇ ಸಂಸ್ಥೆ ವಿತರಿಸುವ ಬುಕ್ ಗಳ ಮೇಲೆ ಗಮನ ಹರಿಸಿ.

    ಖಾಸಗಿ ಸಂಸ್ಥೆಯೊಂದು ಕಾಮಿಕ್ ಬುಕ್‍ನಲ್ಲಿ ಅಶ್ಲೀಲ ಚಿತ್ರವಿರುವ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ವಿವಾದಕ್ಕೀಡಾಗಿದೆ. ನಗರದ ವೈಟ್ ಫೀಲ್ಡ್ ನ ಕೆಟಿಪಿಒ ಸಭಾಂಗಣದಲ್ಲಿ ನ. 17 ಹಾಗೂ 18ರಂದು ಕಾಮಿಕ್ ಕಾನ್ ಇಂಡಿಯಾ (ಸಿಸಿಬಿಐ) ಸಂಸ್ಥೆ 7ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿತ್ತು.

    ಈ ಕಾರ್ಯಕ್ರಮದಲ್ಲಿ 6 ರಿಂದ 18 ವರ್ಷದ ಒಳಗಿನ ನೂರಾರು ಮಕ್ಕಳು ಭಾಗಿಯಾಗಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ಕಾಮಿಕ್ ಬುಕ್, ಟಿ-ಶರ್ಟ್, ಬ್ಯಾಡ್ಜ್ ಹಾಗೂ ಪೋಸ್ಟರ್ ಇರುವ ಕಿಟ್ ನೀಡಿತ್ತು. ಇದರಲ್ಲಿ ಅಮೆರಿಕ ಲೇಖಕ ಬ್ರಿಯಾನ್ ಕೆ. ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಅಶ್ಲೀಲ ಚಿತ್ರಗಳಿದ್ದು, ಈ ಪುಸ್ತಕವನ್ನು ಮಕ್ಕಳಿಗೆ ವಿತರಿಸಲಾಗಿತ್ತು.

    ಬೆಳಕಿಗೆ ಬಂದಿದ್ದು ಹೇಗೆ?
    ಈ ಕಾರ್ಯಕ್ರಮದಲ್ಲಿ ಇಂದಿರಾನಗರ ನಿವಾಸಿಯಾಗಿರುವ 16 ವರ್ಷದ ಬಾಲಕಿಯೊಬ್ಬಳು ಭಾಗವಹಿಸಿದ್ದಳು. ಗುರುವಾರ ಬೆಳಗ್ಗೆ ಬಾಲಕಿಯ ತಾಯಿ ಮನೆಯನ್ನು ಶುಚಿಗೊಳಿಸುವಾಗ ಅಲ್ಲಿಯೇ ಇದ್ದ ಸಂಸ್ಥೆಯ ನೀಡಿದ್ದ ಕಿಟ್ ಅನ್ನು ಕುತೂಹಲದಿಂದ ತೆಗೆದು ನೋಡಿದ್ದಾರೆ.

    ಈ ವೇಳೆ ಪುಸ್ತಕದಲ್ಲಿದ್ದ ಅಶ್ಲೀಲ ಚಿತ್ರಗಳನ್ನು ನೋಡಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಕೂಡಲೇ ವಿದ್ಯಾರ್ಥಿಗಳಿಗೆ ಈ ಚಿತ್ರಗಳಿರುವ ಪುಸ್ತಕಗಳನ್ನು ವಿತರಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಸಂಸ್ಥೆಗೆ ಸಂದೇಶ ಕಳುಹಿಸಿ ಸ್ಪಷ್ಟನೆ ಕೇಳಿದ್ದಾರೆ. ಈ ಕುರಿತು ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಬಾಲಕಿಯ ತಾಯಿ ತಕ್ಷಣ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ಪ್ರತಿಕ್ರಿಯಿಸಿ ಕ್ಷಮೆ ಕೇಳಿದೆ.

    ಕಳೆದ ಏಳು ವರ್ಷದಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲಿಲ್ಲ. ನಮಗೆ ತಿಳಿಯದೇ ಇಂತಹ ಅಶ್ಲೀಲ ಚಿತ್ರಗಳು ಬಂದಿದೆ ಎಂದು ಸಂಸ್ಥೆ ಕ್ಷಮೆಯಾಚಿಸಿದೆ. ಸಂಸ್ಥೆ ಕ್ಷಮೆ ಕೇಳಿದ್ದರೂ ಸುಮ್ಮನಾಗದ ಪೋಷಕರು ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 (ಮಕ್ಕಳಿಗೆ ಅಶ್ಲೀಲ ಪುಸ್ತಕ ಮಾರಾಟ) ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್

    ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್

    ಮೈಸೂರು: ಸಾಂಸ್ಕೃತಿಕ ನಗರಿಯ ಮೈಸೂರಿನ ಅರಮನೆ ಆವರಣದಲ್ಲಿ ಭಾನುವಾರ ಬರೀ ಮಕ್ಕಳದೇ ಕಲರವ ಕೇಳಿ ಬಂದಿದ್ದು, ಯದುವೀರ್ ಮಕ್ಕಳೊಂದಿಗೆ ಮಗುವಾಗಿದ್ದಾರೆ.

    ಮಕ್ಕಳ ಜೊತೆ ರಾಜವಂಶಸ್ಥರಾದ ಯದುವೀರ್ ಅವರು ಬೆರೆತು ಮಕ್ಕಳ ಸಂತೋಷ ಹೆಚ್ಚಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ಭೇರುಂಡ ಸಂಸ್ಥೆ ವತಿಯಿಂದ ಅರಮನೆಯ ಆವರಣದಲ್ಲಿ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

    ಭೇರುಂಡ ಸಂಸ್ಥೆಯ ಸ್ಥಾಪಕ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರಕ್ಕೆ ಬಣ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು.

    ಸದ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಕ್ಕಳ ಕುಂಚದಲ್ಲಿ ಮೈಸೂರಿನ ಐತಿಹಾಸಿಕ ತಾಣಗಳು ಹಾಗೂ ಪ್ರಾಕೃತಿಕ ಚಿತ್ರಗಳು ಮೂಡಿ ಬಂದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೋಷಕರೇ ನಾಯಿಗಳ ಬಗ್ಗೆ ಎಚ್ಚರ- ಮಾಂಸ, ಸಂಪರ್ಕಕ್ಕೆ ಸಂಗಾತಿ ಸಿಗದಿದ್ದರೆ ಮಕ್ಕಳನ್ನು ಕಚ್ಚುತ್ತೆ

    ಪೋಷಕರೇ ನಾಯಿಗಳ ಬಗ್ಗೆ ಎಚ್ಚರ- ಮಾಂಸ, ಸಂಪರ್ಕಕ್ಕೆ ಸಂಗಾತಿ ಸಿಗದಿದ್ದರೆ ಮಕ್ಕಳನ್ನು ಕಚ್ಚುತ್ತೆ

    ಬೆಂಗಳೂರು: ನಿಮ್ಮ ಮನೆಯ ಆಸುಪಾಸು ನಾಯಿಗಳಿದ್ದರೆ ಪೋಷಕರೇ ಎಚ್ಚರವಾಗಿರಿ. ನಾಯಿಗಳಿಗೆ ಈಗ ಪ್ರಸವ ಕಾಲವಾಗಿದ್ದು, ಎಲ್ಲಂದರಲ್ಲಿ ಮಾಂಸ ಸಿಗದಿದ್ದರೆ ಹಾಗೂ ಸಂಪರ್ಕಕ್ಕೆ ಮತ್ತೊಂದು ಸಂಗಾತಿ ಸಿಗದಿದ್ದರೆ ಸಿಕ್ಕ ಸಿಕ್ಕವರನ್ನು ಕಚ್ಚಲು ಶುರು ಮಾಡಿವೆ.

    ಚಳಿಗಾಲ ಬರುತ್ತಿದ್ದಂತೆಯೇ ಹಾದಿ ಬೀದಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇದಕ್ಕೆ ಕಾರಣ ನಾಯಿಗಳಿಗೆ ಈಗ ಪ್ರಸವ ಕಾಲ. ಸಂಗಾತಿ ಸಿಗದಿದ್ದರೆ ಹೀಗೆ ಮಾಡುತ್ತವೆ. ಅಷ್ಟೇ ಅಲ್ಲದೇ ಅಕ್ಕಪಕ್ಕ ಮಾಂಸದಂಗಡಿಗಳಿದ್ದು ಆಹಾರ ಸಿಗದಿದ್ದರೂ ನಿಮ್ಮ ಮಕ್ಕಳು ತಿಂಡಿ ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿದ್ದರೆ, ಮಕ್ಕಳನ್ನು ಟಾರ್ಗೆಟ್ ಮಾಡುತ್ತವೆ.

    ಬೀದಿ ನಾಯಿಗಳಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗದಿದ್ದರೆ, ಅದರಲ್ಲೂ ಮಾಂಸದಂಗಡಿಗಳು ಆಸುಪಾಸಿನಲ್ಲಿ ಪ್ರಾಣಗಳಿಗೆ ತ್ಯಾಜ್ಯವನ್ನು ಹಾಕಿ ತಿನ್ನುವ ಅಭ್ಯಾಸ ಮಾಡಿಸಿದರೆ ಎಚ್ಚರ ಇರಲಿ. ಒಂದು ದಿನ ಫುಡ್ ಮಿಸ್ ಆದರೂ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ಎರಗಬಹುದು. ಹೀಗಾಗಿ ಪಾಲಿಕೆ ಈ ಸಂಬಂಧ ಹೊಸ ನಿರ್ಧಾರಕ್ಕೆ ಬಂದಿದೆ.

    ಈ ಪ್ರಕಾರ ಪ್ರಾಣಿ ವೆಸ್ಟ್ ಬ್ಲಾಕ್ ಸ್ಟಾರ್ಟ್‍ಗಳಲ್ಲಿ ಬಿಸಾಡೋರನ್ನು ಕಂಡರೆ ತಕ್ಷಣ ಪಾಲಿಕೆಗೆ ಮಾಹಿತಿ ನೀಡಿ. ಕೊಟ್ಟಾಕ್ಷಣ ಅಂಗಡಿಯವರೊಂದಿಗೆ ಗಲಾಟೆ ಬೇಡ. ಬೀದಿ ನಾಯಿ ಕಚ್ಚುತ್ತೆ ಎನ್ನುವ ತಲೆನೋವು ಕೂಡ ಬೇಡ. ತಕ್ಷಣ ಪಾಲಿಕೆ ಮಾಂಸದಂಗಡಿಗೆ ದಂಡ ಹಾಕಿ ಮತ್ತೆ ತ್ಯಾಜ್ಯ ಹಾಕದಂತೆ ಮಾಡುತ್ತದೆ.

    ಪಾಲಿಕೆ ಈಗ ಮಾಂಸದಂಗಡಿ ಮೇಲೆ ಕ್ರಮ ಜರುಗಿಸಲು ಸಿದ್ಧವಾದರೂ ಪೋಷಕರಂತೂ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೊಸ ದಾರಿ ಸಿಕ್ಕಂತೆ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ

    ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ

    ಚಂಡೀಗಢ: ಆರ್ಥಿಕ ಸಂಕಷ್ಟಕ್ಕೆ ಮನನೊಂದು ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಫರೀದಾಬಾದ್ ನಲ್ಲಿ ನಡೆದಿದೆ.

    ಮನೆಯಲ್ಲಿನ ಕಡು-ಬಡತನ ಸಹಿಸಲಾಗಲೇ ಓರ್ವ ಸಹೋದರನ ಜೊತೆ ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರಾಜ್‍ಕುಂದ್ ನಗರದ ಮನೆಯೊಂದರಲ್ಲಿ ವಾಸವಿದ್ದ ಈ ಮಕ್ಕಳು, ತಮ್ಮ ಸಾವಿಗೆ ಆರ್ಥಿಕ ಪರಿಸ್ಥಿತಿ ಕಾರಣವೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

    ಈ ದುರ್ಘಟನೆ ನಡೆದು 3-4 ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ವಿಷಯ ತಿಳಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನ ಕೈಗೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಬಡತನದ ಕಾರಣ ತಿಳಿಸಿದ್ದಾರೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಬೆಂಗಳೂರು: ಆಸ್ತಿಗಾಗಿ ಪತ್ನಿಯೇ ತನ್ನ ಪತಿಯನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮಚಂದ್ರ(48) ಕಿಡ್ನಾಪ್ ಆಗಿದ್ದ ಪತಿ. ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ರೂಪಿಸಿದ್ದು, ಈಗ ಎಚ್‍ಎಎಲ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಇದೇ ತಿಂಗಳ 5ರಂದು ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳ ಜೊತೆ ಸೇರಿಕೊಂಡು ಪತಿ ರಾಮಚಂದ್ರನ ಕಿಡ್ನಾಪ್ ಮಾಡಿದ್ದಾಳೆ. ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಮೇಶ್ ನಗರ ಸಮೀಪ ನಿರ್ಜನ ಪ್ರದೇಶದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಂತರ ಬೊಮ್ಮಸಂದ್ರದ ಕಿತ್ತಗಾನ್ ಹಳ್ಳಿಯಲ್ಲಿ ರೂಮ್ ಒಂದರಲ್ಲಿ ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಪತ್ನಿ, ಮಕ್ಕಳು ಹಾಗೂ ಬಾಮೈದ ಟಾರ್ಚರ್ ನೀಡಿದ್ದಾರೆ.

    ರಾಮಚಂದ್ರನನ್ನು ಈ ರೀತಿ ಕಿರುಕುಳ ನೀಡುತ್ತಿರುವುದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಕಿಡ್ನಾಪ್ ಆಗಿದ್ದ ರಾಮಚಂದ್ರನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗ್ತಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್‍ಎಎಲ್ ಠಾಣಾ ಪೊಲೀಸರು ಪತ್ನಿ ಹಾಗೂ ಮಕ್ಕಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ, ಮಕ್ಕಳನ್ನು ಬಿಟ್ಟು ಬೆಂಗ್ಳೂರಿಗೆ ಓಡಿ ಹೋದ – ಗಂಡ ಬೇಕೆಂದು ಪತ್ನಿ ಅಳಲು

    ಪತ್ನಿ, ಮಕ್ಕಳನ್ನು ಬಿಟ್ಟು ಬೆಂಗ್ಳೂರಿಗೆ ಓಡಿ ಹೋದ – ಗಂಡ ಬೇಕೆಂದು ಪತ್ನಿ ಅಳಲು

    ಮಂಗಳೂರು: ಪತಿವೊಬ್ಬ ಪತ್ನಿ ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ಓಡಿ ಹೋಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರು ನಗರ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪತ್ನಿ ದೂರು ದಾಖಲಿಸಿದ್ದು, ಪತಿಯನ್ನು ಹುಡುಕಿಕೊಡುವಂತೆ ಅಲವತ್ತುಕೊಂಡಿದ್ದಾಳೆ. ಎಂಟು ವರ್ಷದ ಹಿಂದೆ ಬೆಂಗಳೂರಿನ ಮಾಗಡಿ ನಿವಾಸಿ ಮಹಮ್ಮದ್ ಸಲೀಂ ಕೊಣಾಜೆ ಬಳಿಯ ಮಂಜನಾಡಿಯ ಸಫಿಯಾಳನ್ನು ಮದುವೆ ಮಾಡಿಕೊಡಲಾಗಿತ್ತು.

    ಏಳು ವರ್ಷಗಳ ಕಾಲ ಮಾಗಡಿಯ ಮನೆಯಲ್ಲಿ ಜೊತೆಗಿದ್ದ ದಂಪತಿ ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬಾಡಿಗೆ ಮನೆಗೆ ಬಂದ ಬಳಿಕ ಪತಿ ಸಲೀಂ ಜಗಳ ಆರಂಭಿಸಿದ್ದಲ್ಲದೆ, ಆರು ತಿಂಗಳ ಹಿಂದೆ ಬಾಡಿಗೆ ಮನೆಯಲ್ಲಿ ಕಷ್ಟವಾಗುತ್ತಿದೆಯೆಂದು ತವರಿಗೆ ಕಳಿಸಿದ್ದ.

    ಪತ್ನಿ ಮೂರು ಮಕ್ಕಳ ಜೊತೆ ತವರಿನಲ್ಲಿದ್ದ ವೇಳೆ, ಅತ್ತ ಸಲೀಂ ಮತ್ತೊಂದು ಮದುವೆಗೆ ರೆಡಿ ಮಾಡಿಕೊಂಡಿದ್ದ. ವಿಚಾರ ತಿಳಿದ ಪತ್ನಿ ಮತ್ತು ಮನೆಯವರು ಬೆಂಗಳೂರಿಗೆ ಧಾವಿಸಿ, ಮಹಮ್ಮದ್ ಸಲೀಂನ ಎರಡನೇ ಮದುವೆಗೆ ತಡೆ ಒಡ್ಡಿದ್ದರು. ಕೊನೆಗೆ ಅಲ್ಲಿನ ಪೊಲೀಸರು ಸಲೀಂನನ್ನು ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು. ಬಳಿಕ ಪತ್ನಿಯ ಜೊತೆ ಮಂಗಳೂರಿನ ಮನೆಗೆ ಆಗಮಿಸಿ, ಒಂದು ವಾರ ಕಾಲ ಇದ್ದ ಮಹಮ್ಮದ್ ಸಲೀಂ ಬಳಿಕ ಅಲ್ಲಿದ್ದ ಕೈನೆಟಿಕ್ ಜೊತೆಗೆ ಪರಾರಿಯಾಗಿದ್ದಾನೆ. ಬೆಂಗಳೂರಿಗೆ ತೆರಳಿದ್ದಾನೆ ಎನ್ನಲಾಗುತ್ತಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಕೋಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇತ್ತ ಪತ್ನಿ ಸಫಿಯಾ ಮೂರು ಮಕ್ಕಳ ಜೊತೆ ಜೀವನ ಸಾಧ್ಯವಿಲ್ಲವೆಂದು ಪತಿಗಾಗಿ ಅಲವತ್ತುಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವೆ ಬಿಟ್ಟು ಮಕ್ಳು ಮಾಡ್ಕೋ ಎಂದು ಸಲ್ಮಾನ್‍ಗೆ ನಟಿ ಸಲಹೆ: ವಿಡಿಯೋ

    ಮದುವೆ ಬಿಟ್ಟು ಮಕ್ಳು ಮಾಡ್ಕೋ ಎಂದು ಸಲ್ಮಾನ್‍ಗೆ ನಟಿ ಸಲಹೆ: ವಿಡಿಯೋ

    ಮುಂಬೈ: ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬಾಚ್ಯೂಲರ್ ಸಲ್ಮಾನ್ ಖಾನ್ ಅವರಿಗೆ ನಟಿ ರಾಣಿ ಮುಖರ್ಜಿ ಮದುವೆ ಬಿಟ್ಟು ಮಕ್ಳು ಮಾಡಿಕೋ ಎಂದು ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದಾರೆ.

    ಸಲ್ಮಾನ್ ಖಾನ್ ಖಾಸಗಿ ವಾಹಿನಿಯಲ್ಲಿ ‘ದಸ್ ಕಾ ದಮ್’ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಈ ಕಾರ್ಯಕ್ರಮದ ಕೊನೆಯ ಎಪಿಸೋಡ್ ಅಂದರೆ ಗ್ರಾಂಡ್ ಫಿನಾಲೆಯಲ್ಲಿ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಹಾಗೂ ನಟಿ ರಾಣಿ ಮುಖರ್ಜಿ ಆಗಮಿಸಿದ್ದರು.

    ಈ ಕಾರ್ಯಕ್ರಮದ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ನಟಿ ರಾಣಿ ಮುಖರ್ಜಿ ತನ್ನ ಗೆಳೆಯ ಹಾಗೂ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್‍ಗೆ ಮದುವೆ ಬಿಟ್ಟು ಮಕ್ಕಳು ಮಾಡಿಕೋ ಎಂದು ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲೇ ಸಲ್ಮಾನ್‍ಗೆ ಸಲಹೆ ನೀಡಿದ್ದಾರೆ.

    ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಭಾಗವಹಿಸಿದ್ದು, ಈ ಎಪಿಸೋಡ್ ಜನರಿಗೆ ಸಾಕಷ್ಟು ಮನರಂಜನೆ ನೀಡಲಿದೆ. ಈ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಹೊರತುಪಡಿಸಿ ಹಾಸ್ಯನಟ ಸುನೀಲ್ ಗ್ರೋವರ್ ಕೂಡ ಭಾಗವಹಿಸಿದ್ದಾರೆ.

    ಈ ಹಿಂದೆ ರಾಣಿ ಮುಖರ್ಜಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್-11 ಶೋನಲ್ಲಿ ಭಾಗವಹಿಸಿದ್ದರು. ಆ ಸಮಯದಲೂ ಕೂಡ ರಾಣಿ ಮುಖರ್ಜಿ ತನ್ನ ಗೆಳೆಯ ಸಲ್ಮಾನ್ ಖಾನ್‍ಗೆ ಮದುವೆ ಬಿಟ್ಟು ಮಕ್ಕಳು ಮಾಡಿಕೋ ಎಂದು ಸಲಹೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.

    ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.

    ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ರಾಯಚೂರು: ಪೋಷಕರೇ ನಿಮ್ಮ ಮಕ್ಕಳಿಗೆ ಬೇಕರಿ ತಿನಿಸುಗಳನ್ನು ಕೊಡುವ ಮೊದಲು ಹುಷಾರಾಗಿರಿ. ಯಾಕಂದ್ರೆ ತಂದೆಯೊಬ್ಬರು ತನ್ನ ಮಗಳಿಗೆ ಚಿಪ್ಸ್ ಕೊಡಿಸಿದಾಗ ಆ ಪ್ಯಾಕೆಟ್‍ನಲ್ಲಿ ಹುಳ ಕಂಡುಬಂದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ಮಗಳಿಗೆ ಕೊಡಿಸಿದ ಯುರೋ ಕಂಪೆನಿ ಚಿಪ್ಸ್ ಪ್ಯಾಕೆಟ್ ನಲ್ಲಿ ಹುಳ ಕಂಡು ಪೋಷಕರು ದಂಗಾಗಿದ್ದಾರೆ. ಮಗಳು ಶಾಲೆಗೆ ಹೋಗಲು ಅಳುತ್ತಿದ್ದಾಳೆ ಅಂತ ರಮಿಸಲು ಕೊಡಿಸಿದ ಚಿಪ್ಸ್ ನಲ್ಲಿ ಹುಳ ಕಂಡುಬಂದಿದೆ.

    ಎಕ್ಸ್ ಪೈರಿ ಡೇಟ್‍ಗಿಂತ ಮೊದಲೇ ಪ್ಯಾಕೆಟ್ ನಲ್ಲಿ ಚಿಪ್ಸ್ ಹಾಳಾಗಿದೆ. ಆತಂಕಗೊಂಡ ಪಾಲಕರು ಮುಂಜಾಗೃತವಾಗಿ ಚಿಪ್ಸ್ ತಿಂದ ಮಗುವನ್ನು ವೈದ್ಯರಿಗೆ ತೋರಿಸಿದ್ದಾರೆ.

  • ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಬೆಂಗಳೂರು: ಕೆಲವರು ಮಕ್ಕಳಾಗಲಿಲ್ಲ ಎಂದು ತಮ್ಮ ಜೀವನವನ್ನೇ ಶಪಿಸುತ್ತಾರೆ. ಆದರೆ ಇಲ್ಲೊಬ್ಬರು ಸಮಾಜ ಸೇವೆಯಲ್ಲೇ ತಮ್ಮ ಮಕ್ಕಳನ್ನು ಕಾಣುತ್ತಿದ್ದಾರೆ.

    ನೆಲಮಂಗಲ ಪಟ್ಟಣ ನಿವಾಸಿ ಮುನೀರ್ ಪಾಷಾ ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಮಾಜ ಸೇವೆಯ ಮೂಲಕ ಮಕ್ಕಳನ್ನು ಕಾಣುತ್ತಿದ್ದಾರೆ.

    ಅಪ್ಪಟ ದೇಶಾಭಿಮಾನಿ, ಪ್ರಾಣಿಪಕ್ಷಿ ಪ್ರಿಯರಾಗಿರುವ ಇವರು ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಗುಡ್‍ಬೈ ಹೇಳಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಯಾರೊಬ್ಬರಿಂದ ಒಂದು ರೂ. ಹಣ ಪಡೆಯದೆ ಸ್ವಂತ ಹಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆ, ತಾಲೂಕು ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳ ಮಾಹಿತಿ, ಬ್ಯಾಂಕ್, ಅಂಚೆ ಕಛೇರಿ, ಗ್ಯಾಸ್ ಏಜೆನ್ಸಿ, ಮಾಧ್ಯಮ ಪ್ರತಿನಿಧಿಗಳ ಮಾಹಿತಿ, ಬ್ಲಡ್ ಬ್ಯಾಂಕ್‍ಗಳ ಮಾಹಿತಿ, ತುರ್ತು ಸಂದರ್ಭದ ಸಹಾಯದ ಮಾಹಿತಿಗಳು ಸೇರಿದಂತೆ ಪ್ರತಿನಿತ್ಯ ಜನ ಸಾಮಾನ್ಯರಿಗೆ ಅವಶ್ಯವಿರುವ ಎಲ್ಲಾ ಮಾಹಿತಿ ಮೊಬೈಲ್ ನಂಬರ್ ಗಳನ್ನು ಒಳಗೊಂಡ ಮಾಹಿತಿಯನ್ನು ಪ್ರತಿ ಮನೆ ಹಾಗೂ ಸಾರ್ವಜನಿಕರಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ನಂಬರ್ ಗಳನ್ನೊಳಗೊಂಡ ಮಾಹಿತಿಯನ್ನು ಗೋಡೆಗಳಿಗೆ ಅಂಟಿಸಿ ನಾಗರಿಕರಿಗೆ ನೆರವಾಗಿದ್ದಾರೆ.

    ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಎಲ್ಲಾ ಶಾಲೆಯ ಮಕ್ಕಳಿಗೆ ದೇಶದ ಭಾವುಟ ಹಾಗೂ ಸಿಹಿಯನ್ನು ಹಂಚುವ ಮೂಲಕ ತಮ್ಮ ಜೀವನವನ್ನು ಕಳೆಯುತಿದ್ದಾರೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಯನ್ನ ಪ್ರತಿಯೊಬ್ಬರಲ್ಲೂ ಸಾರಿ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ವೃದ್ಧಾಪ್ಯದ ಕಾಲವನ್ನು ಕಳೆಯುತ್ತಿದ್ದಾರೆ.

    ಪ್ರಾಣಿಪಕ್ಷಿ ಪ್ರಿಯರಾಗಿರುವ ಮುನೀರ್ ಪಾಷಾ, ಬೀದಿಯಲ್ಲಿ ಸಿಗುವ ನಾಯಿ, ಹಸು, ಕಾಗೆ ಮುಂತಾದವುಗಳಿಗೆ ಆಹಾರ ನೀಡಿ ತಮ್ಮ ಸುಖಃ ಜೀವನವನ್ನು ಸಮಾಜದೊಂದಿಗೆ ಕಳೆಯುತ್ತಿದ್ದಾರೆ. ಶಾಲಾ ಪುಟಾಣಿಗಳಲ್ಲಿ ಮುನೀರ್ ಅಂಕಲ್ ಎಂದೇ ಚಿರಪರಿಚಿತರಾಗಿರುವ ಇವರು ಶಾಲಾ ಆವರಣಕ್ಕೆ ಆಗಮಿಸುತ್ತಲೇ ವಿದ್ಯಾರ್ಥಿಗಳು ಸುತ್ತುವರಿದು ಪ್ರೀತಿ ಅಭಿಮಾನವನ್ನು ತೋರಿಸುತ್ತಾರೆ.

    ಜಾತ್ಯಾತೀತತೆ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದಲ್ಲಿ ಮುನೀರ್ ಪಾಷಾ ರಿಯಲ್ ಜಾತ್ಯಾತೀತ ಹೀರೋವಾಗಿ ಇಂದು ಹೊರಹೊಮ್ಮಿ ಉತ್ತಮ ಸಮಾಜಜೀವಿಯಾಗಿ ತಮ್ಮ ಇಳಿವಯಸ್ಸಿನ ಜೀವನವನ್ನು ಕಳೆಯುತ್ತಿದ್ದಾರೆ.

    https://www.youtube.com/watch?v=jFSqATg29rY