Tag: Childrens

  • ಡೆಂಗ್ಯೂನಿಂದ ವ್ಯಕ್ತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಡೆಂಗ್ಯೂನಿಂದ ವ್ಯಕ್ತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಬೆಳಗಾವಿ: ಒಂದು ಕಡೆ ಮಳೆ ಇಲ್ಲದೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಈಗ ಬರದ ಜೊತೆಗೆ ಈ ಭಾಗದಲ್ಲಿ ಡೆಂಗ್ಯೂ ರೋಗ ತಾಂಡವವಾಡುತ್ತಿದೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಡೆಂಗ್ಯೂ ರೋಗದಿಂದ ಇಬ್ಬರು ಮಕ್ಕಳು ಹಾಗೂ ಓರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಮಂದಿ ಪಕ್ಕದ ಮಹಾರಾಷ್ಟ್ರದ ಮೀರಜ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶೇಜಲ ಸಂಗಪ್ಪ ರೇವಾಗೋಳ (9), ಅಂಕಿತಾ ಅನಿಲ್ ಮಠಪತಿ (5) ಹಾಗೂ ಧರೆಪ್ಪ ಎಂಬವರು ಡೆಂಗ್ಯೂ ರೋಗಕ್ಕೆ ಬಲಿಯಾಗಿದ್ದಾರೆ. ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದಲೇ ಈ ಭಾಗದಲ್ಲಿ ಡೆಂಗ್ಯೂ ತಾಂಡವವಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಸುಪ್ರಸಿದ್ಧ ಖಿಳೇ ಗಾಂವ ಬಸವಣ್ಣ ದೇವಸ್ಥಾನ ಹೊಂದಿರುವ ಈ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಈಗಲಾದರೂ ಡೆಂಗ್ಯೂ ಇಲ್ಲಾ ಎನ್ನುವ ಮೊಂಡು ವಾದವನ್ನು ಬಿಟ್ಟು ಈ ಭಾಗದಲ್ಲಿ ಡೆಂಗ್ಯೂ ರೋಗ ಇನ್ನಷ್ಟು ಜನರನ್ನು ಬಲಿ ತೆಗೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ.

  • ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.

    ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ವ್ಯಕ್ತಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

    ವ್ಯಕ್ತಿ ಬೇಸರದಿಂದ ಮೂವರನ್ನು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ಅವರ ಮೃತದೇಹವನ್ನು ದುತೂರಿ ಗ್ರಾಮದ ಅರಣ್ಯದಲ್ಲಿದ್ದ ಬಾವಿಯಲ್ಲಿ ಎಸೆದಿದ್ದನು. ಮಕ್ಕಳು ಕಾಣಿಸದೇ ಇದ್ದಾಗ ಪೋಷಕರು ಶುಕ್ರವಾರ ರಾತ್ರಿ ಸುಮಾರು 9.22ಕ್ಕೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಹಾಗೂ ದೂರು ಕೂಡ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಧೃವ್ ಭುಷಣ್ ದುಬೆ ಹಾಗೂ ಮುಂಶಿಯ ಎಸ್‍ಎಸ್‍ಪಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

  • ಮೇ 23ಕ್ಕೆ ನನ್ನ ಮದ್ವೆ ಬಗ್ಗೆ ಹೇಳುತ್ತೇನೆ: ಸಲ್ಮಾನ್ ಖಾನ್

    ಮೇ 23ಕ್ಕೆ ನನ್ನ ಮದ್ವೆ ಬಗ್ಗೆ ಹೇಳುತ್ತೇನೆ: ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಮೇ 23ರಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ಹೇಳುವುದಾಗಿ ತಮಾಷೆ ಮಾಡಿದ್ದಾರೆ.

    ಸಲ್ಮಾನ್ ಖಾನ್ ತಮ್ಮ ಮುಂದಿನ ‘ಭಾರತ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕ ನಿಮ್ಮ ಮದುವೆ ಬಗ್ಗೆ ಇಡೀ ರಾಷ್ಟ್ರ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

    ಈ ವೇಳೆ ಸಲ್ಮಾನ್, “ಹೌದು. ನಾನು ಮೇ 23ಕ್ಕೆ ನನ್ನ ಮದುವೆ ಬಗ್ಗೆ ಹೇಳೋಣ ಎಂದು ಯೋಚಿಸುತ್ತಿದ್ದೇನೆ” ಎಂದು ನಗುತ್ತಾ ಉತ್ತರಿಸಿದ್ದಾರೆ. ಮೇ 23ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬರಲಿದೆ. ಜನರು ಫಲಿತಾಂಶದ ಬದಲು ತಮ್ಮ ಮದುವೆ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದಾರೆಂದು ನೋಡಲು ಸಲ್ಮಾನ್ ಈ ರೀತಿ ಉತ್ತರಿಸಿದ್ದಾರೆ.

    ಇದಾದ ಬಳಿಕ ಸಂದರ್ಶಕ ನಿಮಗೆ ಮಕ್ಕಳು ಎಂದರೆ ಇಷ್ಟ. ಮಕ್ಕಳು ಬೇಡವಾ ಎಂದು ಪ್ರಶ್ನಿಸಿದ್ದಾರೆ. ಆಗ ಸಲ್ಮಾನ್, “ನನಗೆ ಮಕ್ಕಳು ಬೇಕು. ಆದರೆ ಮಕ್ಕಳು ಜೊತೆ ತಾಯಿ ಕೂಡ ಬರುತ್ತಾರೆ. ನನಗೆ ತಾಯಿ ಬೇಡ. ಆದರೆ ಮಕ್ಕಳಿಗೆ ತಾಯಿಯ ಅವಶ್ಯಕತೆ ಇದೆ. ಮಕ್ಕಳನ್ನು ನೋಡಿಕೊಳ್ಳಲು ಇಡೀ ಕುಟುಂಬವೇ ಇದೆ” ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಸರೋಗಸಿ ಮೂಲಕ ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್‍ನಲ್ಲಿ ಹರಿದಾಡುತ್ತಿತ್ತು. ಸಲ್ಮಾನ್ ಮುಂದಿನ ದಿನಗಳಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದು ತಂದೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸಲ್ಮಾನ್ ಯಾವುದೇ ಅಧಿಕೃತವಾದ ಹೇಳಿಕೆ ನೀಡಿಲ್ಲ.

  • ನಾಡಿಗೆ ಬಂದ ಜಿಂಕೆಯನ್ನು ಸಾವಿನಿಂದ ರಕ್ಷಿಸಿದ ಮಕ್ಕಳು!

    ನಾಡಿಗೆ ಬಂದ ಜಿಂಕೆಯನ್ನು ಸಾವಿನಿಂದ ರಕ್ಷಿಸಿದ ಮಕ್ಕಳು!

    ಚಾಮರಾಜನಗರ: ಅರಣ್ಯದಿಂದ ನೀರು ಹಾಗೂ ಮೇವು ಅರಸಿ ನಾಡಿನತ್ತ ಬಂದಿದ್ದ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಈ ವೇಳೆ ಜಿಂಕೆಯನ್ನು ಜಿಲ್ಲೆ ಹನೂರು ತಾಲೊಕಿನ ಶಾಗ್ಯ ಸಮೀಪದ ಬಿರೂಟ್ ಗ್ರಾಮದ ಮಕ್ಕಳು ರಕ್ಷಿಸಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಬೇಸಿಗೆ ಕಾಲ ಆಗಿರುವುದರಿಂದ ಕಾಡಿನಲ್ಲಿರುವ ಪ್ರಾಣಿಗಳು ಸರಿಯಾಗಿ ಆಹಾರ, ನೀರು ಸಿಗದೇ ನಾಡಿನತ್ತ ಮುಖ ಮಾಡುತ್ತಿವೆ. ಹೀಗೆ ಹೊಟ್ಟೆಗೆ ಮೇವಿಲ್ಲದೆ ಆಹಾರ ಅರಸಿ ಬಿರೂಟ್ ಗ್ರಾಮದ ಬಳಿ ಜಿಂಕೆಯೊಂದು ಬಂದಿತ್ತು. ಗ್ರಾಮದಲ್ಲಿ ಕಾಣಿಸಿಕೊಂಡ ಜಿಂಕೆಯನ್ನು ನೋಡಿ ನಾಯಿಗಳು ಅದರ ಮೇಲೆ ದಾಳಿ ನಡೆಸಿವೆ. ಈ ವೇಳೆ ದಾಳಿಗೊಳಗಾಗಿದ್ದ ಜಿಂಕೆಯನ್ನು ಗ್ರಾಮದ ಮಕ್ಕಳು ರಕ್ಷಿಸಿ, ಗಾಯಗೊಂಡಿದ್ದ ಜಿಂಕೆಗೆ ಔಷಧಿಯನ್ನು ಹಚ್ಚಿ ಜೀವ ಉಳಿಸಿದ್ದಾರೆ.

    ಸರಿಯಾದ ಸಮಯಕ್ಕೆ ನಾಯಿಗಳಿಂದ ಜಿಂಕೆಯನ್ನು ಮಕ್ಕಳು ರಕ್ಷಣೆ ಮಾಡಿದಕ್ಕೆ ಒಂದು ಜೀವ ಬದುಕುಳಿದಿದೆ. ಅಲ್ಲದೆ ಜಿಂಕೆಯನ್ನು ರಕ್ಷಿಸಿ, ಆರೈಕೆ ಮಾಡಿದ ಬಿರೂಟ್ ಗ್ರಾಮದ ಮಕ್ಕಳ ಕೆಲಸ ಎಲ್ಲರ ಮನ ಗೆದ್ದಿದ್ದು, ಮಕ್ಕಳಿಗೆ ಗ್ರಾಮಸ್ಥರು ಜಿಂಕೆಯನ್ನು ಆರೈಕೆ ಮಾಡುವುದಕ್ಕೆ ಸಾಥ್ ನೀಡಿದ್ದಾರೆ.

    https://www.youtube.com/watch?v=HhiGm81xR04

  • ಮೂವರು ಮಕ್ಕಳೊಂದಿಗೆ ತಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

    ಮೂವರು ಮಕ್ಕಳೊಂದಿಗೆ ತಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

    ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆ ತನ್ನ ಮೂವರು ಮಕ್ಕಳಿಗೆ ತಂದೆಯೇ ವಿಷ ನೀಡಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ನಡೆದಿದೆ.

    ತಂದೆ ಲೋಕೇಶ್(40) ಹಾಗೂ ಮಕ್ಕಳಾದ ಸೃಷ್ಟಿ(14), ಸ್ನೇಹಾ(12), ಮಂಜುನಾಥ್(8) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದ ತಂದೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ಊಟಕ್ಕೆ ವಿಷ ಸೇರಿಸಿ ತಂದೆ ಮಕ್ಕಳು ಸೇವಿಸಿದ್ದಾರೆ. ಆದ್ರೆ ಈ ವೇಳೆ ಅಕ್ಕಪಕ್ಕದ ಮನೆಯವರು ಮಕ್ಕಳ ನರಳಾಟ ಕೇಳಿ ಮನೆ ಒಳಗಡೆ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ವಿಷ ಸೇವಿಸಿದ್ದ ಪರಿಣಾಮ ತಂದೆ ಸ್ಥಿತಿ ಗಂಭೀರವಾಗಿದೆ. ಆದ್ರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದಕ್ಕೆ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊದಲು ನಾಲ್ವರನ್ನೂ ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಪಿಯುಸಿ ಫಲಿತಾಂಶ – ನೆನಪಿರಲಿ ಪ್ರೇಮ್‍ಗೆ ಹೆಮ್ಮೆ ತಂದ ಪುತ್ರಿ

    ಪಿಯುಸಿ ಫಲಿತಾಂಶ – ನೆನಪಿರಲಿ ಪ್ರೇಮ್‍ಗೆ ಹೆಮ್ಮೆ ತಂದ ಪುತ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನೆನಪಿರಲಿ ಪ್ರೇಮ್ ಅವರ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದರ ಮೂಲಕ ತಮ್ಮ ತಂದೆಗೆ ಹಮ್ಮೆ ಪಡಿಸಿದ್ದಾರೆ.

    ನೆನಪಿರಲಿ ಪ್ರೇಮ್ ಅವರ ಮಗಳು ಅಮೃತಾ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಂದಿದ್ದು, ಅಮೃತಾ ತನ್ನ ಪರೀಕ್ಷೆಯಲ್ಲಿ ಶೇ. 91 ಅಂಕ ಪಡೆದಿದ್ದಾರೆ.

    ನೆನಪಿರಲಿ ಪ್ರೇಮ್ ತಮ್ಮ ಟ್ವಿಟ್ಟರಿನಲ್ಲಿ ಫ್ಯಾಮಿಲಿ ಫೋಟೋ ಹಾಕಿ ತಮ್ಮ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಅಮೃತಾ ಹಾಗೂ ಮಗ ಏಕಾಂತ್ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಬಗ್ಗೆ ಪ್ರೇಮ್ ಖುಷಿಪಟ್ಟಿದ್ದಾರೆ.

    ಪ್ರೇಮ್ ತಮ್ಮ ಟ್ವಿಟ್ಟರಿನಲ್ಲಿ, “ಹಾಯ್ ಎಲ್ಲರಿಗೂ. ನನ್ನ ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.91 ಅಂಕ ಪಡೆದಿದ್ದಾಳೆ. ನನ್ನ ಮಗ 8ನೇ ತರಗತಿಯಲ್ಲಿ ಮೂರನೇ ರ್‍ಯಾಂಕ್ ಪಡೆದಿದ್ದಾನೆ” ಎಂದು ಟ್ವೀಟ್ ಮಾಡಿದ್ದಾರೆ.

    ಪ್ರೇಮ್ ಅವರ ಮಗಳು ಅಮೃತಾ ಹಾಗೂ ಮಗ ಏಕಾಂತ್‍ಗೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

  • ಅಪ್ಪ, ಅಮ್ಮನ ಜೊತೆ ಹೇಳಿ ನನ್ನನ್ನು ಪಾಸ್ ಮಾಡಿಸಿ: ನಿಂತಿದ್ದ ಮಕ್ಕಳ ಜೊತೆ ಸುಮಲತಾ ಮನವಿ

    ಅಪ್ಪ, ಅಮ್ಮನ ಜೊತೆ ಹೇಳಿ ನನ್ನನ್ನು ಪಾಸ್ ಮಾಡಿಸಿ: ನಿಂತಿದ್ದ ಮಕ್ಕಳ ಜೊತೆ ಸುಮಲತಾ ಮನವಿ

    ಮಂಡ್ಯ: ನಿಮ್ಮ ಪರೀಕ್ಷೆ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೀಬೇಕು, ನಿಮ್ಮ ಅಪ್ಪ-ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಮಕ್ಕಳ ಜೊತೆ ಮಾತನಾಡಿದ್ದಾರೆ.

    ರಾಯಸಮುದ್ರ ಗ್ರಾಮದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿ ನಿಂತಿದ್ದ ಚಿಕ್ಕ ಚಿಕ್ಕ ಮಕ್ಕಳು “ಕ್ರಮ ಸಂಖ್ಯೆ ಇಪ್ಪತ್ತು, ಕುಮಾರಸ್ವಾಮಿಗೆ ಆಪತ್ತು”, “ಗೆಲ್ತಾರಪ್ಪೊ ಗೆಲ್ತಾರೆ, ಸುಮಲತಾ ಗೆಲ್ತಾರೆ” ಘೋಷಣೆ ಕೂಗಿದರು.

    ಮಕ್ಕಳು ಈ ರೀತಿ ಘೋಷಣೆ ಕೂಗಿದ್ದನ್ನು ಕಂಡು ಸುಮಲತಾ, “ನೀವೆಲ್ಲಾ ಚೆನ್ನಾಗಿ ಓದಿ ಪರೀಕ್ಷೆ ಬರೆದ್ರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು, “ಹಃ ಚೆನ್ನಾಗಿ ಬರೆದು ಪಾಸ್ ಆಗಿದ್ದೇವೆ” ಎಂದು ಉತ್ತರಿಸಿದರು. ಮತ್ತೆ ಸುಮಲತಾ ಅವರು, “ನಿಮ್ಮ ಎಕ್ಸಾಂ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೆಯಬೇಕು, ನಿಮ್ಮಪ್ಪ ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ. ಕ್ರಮಸಂಖ್ಯೆ, ಚಿಹ್ನೆ ಬಗ್ಗೆ ನಿಮ್ಮಪ್ಪ ಅಮ್ಮನಿಗೆ ಹೇಳಿಕೊಡಿ” ಎಂದ ಸುಮಲತಾ ಮಕ್ಕಳ ಜೊತೆ ಮನವಿ ಮಾಡಿದರು.

    ಸುಮಲತಾ ಅವರು ಕೆಆರ್ ಪೇಟೆಯ ತೆಂಡೆಕೆರೆ, ಶೀಳನೆರೆ, ರಾಯಸಮುದ್ರ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ರಾಯಸಮುದ್ರದ ಗ್ರಾಮಸ್ಥೆಯೊಬ್ಬರು ಸುಮಲತಾ ಅವರಿಗೆ ರವಿಕೆ, ಬೆಲ್ಲ, ಅಕ್ಕಿ, ತೆಂಗಿನ ಕಾಯಿ, ಎಲೆ, ಅಡಿಕೆ ಸಮೇತ ಮಡಿಲು ತುಂಬಿ ಆಶೀರ್ವದಿಸಿದರು.

  • ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ತುಮಕೂರು: ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಇವರು ಎಷ್ಟೋ ಜನರನ್ನು ಕೊಂದಾಕವ್ರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಬಗ್ಗೆ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಎಷ್ಟು ಜನರನ್ನು ಕೊಂದು ಹಾಕಿದ್ದಾರೆ. ಅವರ ಜಾತಿಯವರನ್ನು ಕೊಂದು ಹಾಕಿದ್ದಾರೆ. ಅವರಿಗೆ ಬೇರೆ ಜಾತಿಗೆ ಕೈ ಹಾಕುವುದಕ್ಕೆ ಆಗಲ್ಲ. ದೇವೇಗೌಡರು ತಮ್ಮ ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಅವರ ಜಿಲ್ಲೆಯಲ್ಲಿ ಮರ್ಡರ್ ಗಳು ಆಗಿದ್ದು ಲೆಕ್ಕ ಹಾಕಿಕೊಂಡು ಬರಲಿ ಎಂದರು.

    ಕುಮ್ಮಕ್ಕು ಇಲ್ಲದೆ ಊರಲ್ಲಿ ಮರ್ಡರ್ ಆಗುತ್ತಾ. ರಾಜಕಾರಣಿ ಹೋಗಿ ಮರ್ಡರ್ ಮಾಡ್ತಾನಾ?. ಅವರ ಜನಾಂಗದ ಮೇಲೆ ಯಾರನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರು ಒಂದು ರೀತಿಯಲ್ಲಿ ಹೆಗಲ ಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯ ಇರಲ್ಲ, ಬಹಳ ಕಷ್ಟ. ಹುಷಾರಾಗಿರಬೇಕು ಅಷ್ಟೇ ಎಂದು ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿ ಗುಡುಗಿದ್ದಾರೆ.

    ತುಮಕೂರು ಲೋಕಸಭಾ ಕ್ಷೇತ ಚುನಾವಣೆಯಲ್ಲಿ ಮೈತ್ರಿ ಪಕ್ಷ- ಬಿಜೆಪಿ ನಡುವೆ ಟಾಕ್ ಫೈಟ್ ಹೆಚ್ಚಾಗಿದೆ. ವಿರೋಧ ಪಕ್ಷದವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.

  • ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    – ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ
    – ಶಾಲೆಯ ಆವರಣದಲ್ಲಿ ವಿಜ್ಞಾನ ಮಾದರಿ

    ಮಡಿಕೇರಿ: ಕೊಡಗಿನ ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಮಕ್ಕಳಿಗೆ ಉಪಯುಕ್ತವಾಗಲೆಂದು ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮಾಡುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿನೂತನ ಕಲಿಕೆ ವಿಧಾನವನ್ನು ಬಳಸಲಾಗುತ್ತಿದೆ. ಇಲ್ಲಿನ ಶಿಕ್ಷಕ ಸತೀಶ್ ಅವರು ಟೆಕ್ನಾಲಜಿ ಬಳಸಿ ವಿನೂತನ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಇವರ ಈ ವಿಶೇಷ ಪಾಠದ ಪ್ಲಾನ್‍ನಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಕೂಡ ಸಂಜೆ ಮನೆಯಲ್ಲಿಯೇ ಸಂಜೆ ವೇಳೆ ಪಾಠ ಕೇಳ್ತಿದ್ದಾರೆ. ಶಾಲೆಯ ಪಾಠ ಅರ್ಥವಾಗದ ಮಕ್ಕಳು ಮತ್ತೆ ಪಾಠ ಕೇಳಿ ಕಲಿಯುತ್ತಿದ್ದಾರೆ. ಈ ವಿಭಿನ್ನ ಪ್ರಯೋಗ ಮಕ್ಕಳಿಗೂ, ಪೋಷಕರಿಗೂ ಖುಷಿ ಕೊಟ್ಟಿದೆ.

    ಶಾಲೆಯ ಆವರಣದ ಸುತ್ತಲೂ ಸೈನ್ಸ್ ಮಾಡೆಲ್‍ಗಳನ್ನು ನಿರ್ಮಿಸಲಾಗಿದೆ. ಈ ಮಾಡೆಲ್‍ಗಳನ್ನು ನೋಡಿ ಕಲಿತು, ಅದರ ಕೆಲಸದ ಬಗ್ಗೆ ಇಲ್ಲಿನ ಮಕ್ಕಳು ವಿವರಿಸುತ್ತಾರೆ. ಕಾಲೇಜು ಮಟ್ಟದ ಪ್ರಾಕ್ಟಿಕಲ್ ಟೀಚಿಂಗ್ ಕೂಡ ಅಲ್ಲಿದೆ. ಟೆಕ್ನಾಲಜಿಯನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಶಿಕ್ಷಕ ಸತೀಶ್ ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾರೆ.

    ಹೇಗೆ ಕಾನ್ಫರೆನ್ಸ್ ಕಾಲ್?
    ಸಿಟಿಯ ಹೈಫೈ ಶಾಲೆಗಳಲ್ಲಿ ಮಕ್ಕಳಿಗೆ ವಾಟ್ಸಾಪ್ ಗ್ರೂಪ್ ಮಾಡಿ ಟೀಚ್ ಮಾಡುವಂತಹದ್ದು ಗ್ರಾಮೀಣ ಭಾಗಕ್ಕೆ ಆಗಲ್ಲ, ಅದರ ಬದಲಿಗೆ ಬಂದಿರೋದೆ ಕಾನ್ಫರೆನ್ಸ್ ಕಾಲ್ ಟೀಚಿಂಗ್. ಇದು ತುಂಬಾ ಸಿಂಪಲ್. ಸಂಜೆ ಮಕ್ಕಳು ಮನೆಗೆ ಹೋದ್ಮೇಲೆ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಸಮಯ ಫಿಕ್ಸ್ ಆಗಿರುತ್ತೆ. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದು. ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

    ಪ್ರಸ್ತುತ ನಾನು 3, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು, ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಾನ್ಫರೆನ್ಸ್ ಕಾಲ್ ಟೀಚಿಂಗ್ ಬಳಿಕ ಅದನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. ಸತೀಶ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶಾಲಾ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಡೀ ನಿದ್ದೆಗೆಟ್ಟು ಕಾದುಕುಳಿತ ಪೋಷಕರು..!

    ಶಾಲಾ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಡೀ ನಿದ್ದೆಗೆಟ್ಟು ಕಾದುಕುಳಿತ ಪೋಷಕರು..!

    ಕಾರವಾರ: ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ತಂದೆ-ತಾಯಿ ದಿನವಿಡೀ ದುಡಿಯುತ್ತಾರೆ. ಅದರ ಜೊತೆಗೆನೇ ಮಕ್ಕಳ ಶಾಲಾ-ಕಾಲೇಜು ವಿದ್ಯಾಭ್ಯಾಸದ ಬಗ್ಗೆಯೂ ವಿಚಾರ ಮಾಡುತ್ತಾರೆ. ಆದರೆ ಈ ಶಾಲೆಯಲ್ಲಿ ನೀಡುವ ಅಡ್ಮಿಷನ್ ಫಾರ್ಮ್‌ಗೆ ಪಾಲಕರು ರಾತ್ರಿಯಿಡೀ ನಿದ್ದೆಗೆಟ್ಟು ಶಾಲಾ ಆವರಣದಲ್ಲಿ ಕಾದು ಕಳಿತು ಘಟನೆ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೆಂಟ್ ಅಂಥೋನಿ ಎಲ್‍ಕೆಜಿ ಸ್ಕೂಲ್, ಶಿರಸಿಯಲ್ಲಿಯೇ ಮೊದಲು ಪ್ರಾರಂಭವಾದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿದೆ. ಇಲ್ಲಿ ಪ್ರತಿ ವರ್ಷವೂ ಅಡ್ಮಿಷನ್‍ಗೆ ಸಾಕಷ್ಟು ಬೇಡಿಕೆ ಇದೆ. ವರ್ಷದಲ್ಲೊಮ್ಮೆ ನೀಡುವ ಅಡ್ಮಿಷನ್ ಫಾರ್ಮ್ ಪಡೆಯೋಕೆ 500ಕ್ಕೂ ಹೆಚ್ಚು ಪಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಾರೆ.

    ಸೇಂಟ್ ಅಂಥೋನಿ ಶಾಲೆಯಲ್ಲಿ 160 ರಿಂದ 200 ಮಕ್ಕಳನ್ನು ಎಲ್‍ಕೆಜಿಗೆ ಅಡ್ಮಿಷನ್ ಮಾಡಿಸಿಕೊಳ್ತಾರೆ. ಆ 200 ಮಕ್ಕಳಲ್ಲಿ ತಮ್ಮ ಮಕ್ಕಳೂ ಒಬ್ಬರಾಗಬೇಕು ಎನ್ನುವ ಆಸೆಯಲ್ಲಿ ಪೋಷಕರು ಕಾಯುತ್ತಿರುತ್ತಾರೆ. ಬೆಳಗ್ಗೆ 10 ಗಂಟೆಗೆ ನೀಡುವ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಂದಲೇ ಕ್ರಮ ಸಂಖ್ಯೆ ಬರೆದು ಚೀಟಿ ಇಟ್ಟು ರಾತ್ರಿಯಿಡೀ ಕಾದು, ಶಾಲಾ ಆವರಣದಲ್ಲೇ ಕೂತಿರೋದು ನಿಜಕ್ಕೂ ಆಶ್ಚರ್ಯ ಎನಿಸಿದೆ.

    ಪ್ರತಿ ವರ್ಷ ಯಾರು ಮೊದಲು ಹೆಸರು ನೋಂದಾಯಿಸುತ್ತಾರೋ ಆ ಮಕ್ಕಳಿಗೆ ಇಲ್ಲಿ ಸೀಟು ಸಿಗುತ್ತದೆ. ಅಡ್ಮಿಷನ್ ಬೇರೆಯವರ ವರ್ಚಸ್ಸಿನ ಮೇಲೆ ನಡೆದು ಗಲಾಟೆ ಆಗಬಾರದೆಂದು ಎನ್ನುವ ಕಾರಣಕ್ಕೆ ಪೋಷಕರೇ ಈ ನಿಯಮವನ್ನು ಹಾಕಿಕೊಂಡಿದ್ದಾರೆ. ವರ್ಷ ಪೂರ್ತಿ ಮಕ್ಕಳ ಭವಿಷ್ಯಕ್ಕೆ ಏನೆಲ್ಲ ಮಾಡುತ್ತೇವೆ. ಆದ್ರೆ ಒಂದು ರಾತ್ರಿ ನಿದ್ರೆ ಬಿಟ್ಟು ಕಷ್ಟ ಆದ್ರುನೂ ಪರವಾಗಿಲ್ಲ. ಇದೇ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಅಡ್ಮಿಷನ್ ಸಿಗಲಿ ಎಂದು ಕಾದು ಕುಳಿತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.

    ನಮ್ಮ ಮಕ್ಕಳ ಭವಿಷ್ಯ ಮುಖ್ಯ ಎನ್ನುವ ಇಲ್ಲಿಯ ಪೋಷಕರು ರಾತ್ರಿಯಿಂದ ಬೆಳಗ್ಗೆವರೆಗೂ ಕಾದು ಕುಳಿತು ತಮ್ಮ ಸಂಖ್ಯೆಗೆ ತಕ್ಕಂತೆ ಫಾರ್ಮ್ ಪಡೆಯಲು ಮುಗಿಬಿದ್ದಿದ್ದಾರೆ. ಇಂಗ್ಲೀಷ್ ವ್ಯಾಮೋಹ ಮತ್ತು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಪೋಷಕರು ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಹಾಗಂತ ಬೇರೆಲ್ಲೂ ಇಂಗ್ಲಿಷ್ ಮೀಡಿಯಂ ಶಾಲೆ ಇಲ್ಲ ಎಂದೇನೂ ಅಲ್ಲ. ಇದ್ದರೂ ಕೂಡ ಶಿರಸಿಯಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಈ ಶಾಲೆ ಬ್ರಾಂಡ್ ಆಗಿದ್ದು ಈ ಕಾರಣದಿಂದ ಪೋಷಕರು ಮುಗಿಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv