Tag: Children’s Food

  • 7 ರಿಂದ 12 ತಿಂಗ್ಳ ಮಗುವಿಗೆ ಸುಲಭವಾದ ಆಹಾರ ಇಲ್ಲಿದೆ

    7 ರಿಂದ 12 ತಿಂಗ್ಳ ಮಗುವಿಗೆ ಸುಲಭವಾದ ಆಹಾರ ಇಲ್ಲಿದೆ

    ಮಕ್ಕಳಿಗೆ ಆಹಾರ ಕೊಡುವುದು ಅಂದರೆ ತುಂಬಾ ಕಷ್ಟ. ಅದರಲ್ಲೂ ತಿಂಗಳ ಮಗುವಿಗೆ ಆಹಾರ ಕೊಡಲು ತಾಯಂದಿರು ಹರಸಾಹಸ ಪಡುತ್ತಾರೆ. ಯಾವ ರೀತಿ ಆಹಾರ ಕೊಡಬೇಕು, ನಾವು ಕೊಡುವ ಆಹಾರದಿಂದ ಏನು ತೊಂದರೆಯಾಗಬಹುದಾ ಎಂದು ಅನೇಕ ಬಾರಿ ಯೋಚಿಸಿ ಕೊಡಬೇಕಾಗುತ್ತದೆ. ಆದ್ದರಿಂದ ಆರೋಗ್ಯವಾದ, ಸುಲಭವಾಗಿ ಮಾಡಬಹುದು ಮೂರು ರೀತಿ ಆಹಾರಗಳು ಇಲ್ಲಿವೆ…

    1. ಕ್ಯಾರೆಟ್ ಪೋಟೋಟೋ ರೈಸ್

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ – 2 ಚಮಚ
    2. ಕ್ಯಾರೆಟ್ – 1
    3. ಆಲೂಗೆಡ್ಡೆ – 1

    ಮಾಡುವ ವಿಧಾನ:
    * ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
    * ಕ್ಯಾರೆಟ್ ಮತ್ತು ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.
    * ನಂತ್ರ ಅಕ್ಕಿ, ಆಲೂಗಡ್ಡೆ ಮತ್ತು ಕ್ಯಾರೆಟ್ ತೊಳೆದು ಕುಕ್ಕರಿಗೆ ಹಾಕಿ ನಾಲ್ಕು ವಿಶಲ್ ಬರುವರೆಗೂ ಬೇಯಿಸಿರಿ.
    * ಬೇಯಿಸಿದ ಬಳಿಕ ಅದನ್ನು ಸ್ಮ್ಯಾಶ್ ಮಾಡಿಕೊಳ್ಳಿ.
    * ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಕ್ಯಾರೆಟ್ ಪೋಟೋಟೋ ರೈಸ್ ರೆಡಿ.

    2. ಸೇಬು ಮತ್ತು ಬಾಳೆಹಣ್ಣು ಗಂಜಿ

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ – ಎರಡು ಚಮಚ
    2. ಸೇಬು -1
    3. ಬಾಳೆಹಣ್ಣು – 1

    ಮಾಡುವ ವಿಧಾನ
    * ಮೊದಲಿಗೆ ಅಕ್ಕಿಯನ್ನು ಎರಡು ಬಾರಿ ತೊಳೆದುಕೊಳ್ಳಿ.
    * ನಂತರ ಸೇಬಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ.
    * ಅಕ್ಕಿ ಮತ್ತು ಸೇಬನ್ನು ಕುಕ್ಕರಿಗೆ ಹಾಕಿ 4 ವಿಶಲ್ ಬರುವವರೆಗೂ ಬೇಯಿಸಿ.
    * ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
    * ಮತ್ತೆ ಅದಕ್ಕೆ ಬಾಳೆಹಣ್ಣನ್ನು ಪೀಸ್ ಪೀಸ್ ಮಾಡಿ ಹಾಕಿ ರುಬ್ಬಿಕೊಳ್ಳಿ.
    * ಬಳಿಕ ಒಂದು ಬೌಲ್ ಗೆ ಹಾಕಿ ಮಕ್ಕಳಿಗೆ ತಿನ್ನಿಸಿ.

    3. ಓಟ್ಸ್ ಮತ್ತು ಸೇಬು ಗಂಜಿ

    ಬೇಕಾಗುವ ಸಾಮಾಗ್ರಿಗಳು
    1. ಓಟ್ಸ್ – ಕಾಲ್ ಕಪ್
    2. ಸೇಬು – ಎರಡು ಚಮಚ
    3. ಬಾದಾಮಿ – 1
    4. ಕರ್ಜೂರ – 2

    ಮಾಡುವ ವಿಧಾನ
    * ಮೊದಲಿಗೆ ಸೇಬಿನ ಸಿಪ್ಪೆ ತೆಗೆದು ತುರಿದುಕೊಳ್ಳಿ.(ಎರಡು ಚಮಚ ಸಾಕು)
    * ಬಾದಾಮಿಯನ್ನು ತುರಿದುಕೊಳ್ಳಿ.
    * ನಂತರ ಎರಡು ಕರ್ಜೂರವನ್ನು ತುಂಬಾ ಸಣ್ಣಗೆ ಕತ್ತರಿಕೊಳ್ಳಿ.
    * ಒಂದೂವರೆ ಕಪ್ ನೀರು, ಓಟ್ಸ್ ಹಾಕಿ ಅದಕ್ಕೆ ಸೇಬು, ಬಾದಾಮಿ, ಖರ್ಜೂರ ಹಾಕಿ ಮುಚ್ಚಳ ಮುಚ್ಚದೆ 8 ರಿಂದ 10 ನಿಮಿಷ ಬೇಯಿಸಿರಿ
    * ಈಗ ಒಂದು ಬೌಲ್ ಗೆ ಹಾಕಿಕೊಂಡು ಮಕ್ಕಳಿಗೆ ತಿನ್ನಿಸಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv