ಬೆಂಗಳೂರು: ನವೆಂಬರ್ 14ರ ಮಕ್ಕಳ ದಿನಾಚರಣೆಯ(Children’s Day) ಪ್ರಯುಕ್ತ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ(Orchids The International School) ಮೋಜಿನ ಮೇಳವು ನಡೆಯಿತು. ಭಾರತದ ಹತ್ತು ನಗರಗಳಲ್ಲಿ, ಒಟ್ಟು 32 ಆರ್ಕಿಡ್ಸ್ ಶಾಖೆಗಳಲ್ಲಿ ಯಶಸ್ವಿಯಾಗಿ ನಡೆದ ಮೋಜಿನ ಮೇಳವು, ಪೋಷಕರಿಗೆ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಿತು.
80 ಹಾಗೂ 90 ರ ದಶಕದ ಆಟಗಳನ್ನು ಆಡುವುದರ ಮೂಲಕ ಪೋಷಕರು(Parents) ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. ಮ್ಯಾಜಿಕ್ ಶೋ, ಸಂಗೀತ ಕುರ್ಚಿ, ರಿಂಗ್ ಟಾಸ್ಕ್ ಸೇರಿದಂತೆ ಪೋಷಕರು ಹಾಗೂ ಮಕ್ಕಳನ್ನು ಮನರಂಜಿಸುವ ಹಲವು ಆಟಗಳು, ಚಟುವಟಿಕೆಗಳು ನಡೆದವು. ಇದನ್ನೂ ಓದಿ: KSRTC ನೌಕರರಿಗೆ ಗುಡ್‌ನ್ಯೂಸ್ – 1 ಕೋಟಿ ಮೌಲ್ಯದ ವಿಮೆ ಸೌಲಭ್ಯ ಜಾರಿ
ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರಲ್ಲಿರುವ ಆರ್ಕಿಡ್ಸ್‌ನ ಯಲಹಂಕ, ನಾಗರಬಾವಿ, ಜಾಲಹಳ್ಳಿ, ಸರ್ಜಾಪುರ, ಸಹಕಾರನಗರ, ಜೆಪಿನಗರ, ಬನ್ನೇರುಘಟ್ಟ ಶಾಖೆಗಳಲ್ಲಿ ಮೋಜಿನ ಮೇಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ ನಡೆದ 32 ಶಾಖೆಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಇಂದಿನ ಮಕ್ಕಳು ನಾಳಿನ ಭಾರತ ಮತ್ತು ಈ ದೇಶದ ಭವಿಷ್ಯದ ನಿರ್ಮಾಪಕರು, ಆದ್ದರಿಂದ ಅವರ ಶಿಕ್ಷಣ ಮತ್ತು ಕಲ್ಯಾಣ ಮತ್ತು ಅವರಲ್ಲಿ ನೈತಿಕ ಗುಣಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ರಾಜ್ಯಪಾಲ ಎಂದು ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಹೇಳಿದರು.
ನಗರದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜವಾಹರ ಬಾಲಭವನ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಂದು ಮಗುವೂ ತನ್ನ ಮೂಲಭೂತ ಮಕ್ಕಳ ಹಕ್ಕುಗಳನ್ನು ಪಡೆಯಬೇಕು, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿ (Chid Labour) ಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಆರ್ಥಿಕ ಕಾರಣಗಳಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Jawaharlal Nehru) ಅವರ ಜನ್ಮದಿನವನ್ನು ನವೆಂಬರ್ 14 ರಂದು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನ (Childrens Day) ವನ್ನು ಆಚರಿಸಲಾಗುತ್ತದೆ. ವಿಶ್ವದ ಸುಮಾರು 50 ದೇಶಗಳು ಜೂನ್ 1 ರಂದು ಮಕ್ಕಳ ದಿನವನ್ನು ಆಚರಿಸುತ್ತವೆ ಎಂದು ಮಾಹಿತಿ ನೀಡಿದರು.
ಮಕ್ಕಳ ದಿನಾಚರಣೆಯಂದು ಕರ್ನಾಟಕ ಸರ್ಕಾರವು ಪ್ರತಿಭಾವಂತ ಮಕ್ಕಳನ್ನು ಅವರ ಶೌರ್ಯಕ್ಕಾಗಿ ಗೌರವಿಸುವ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ಪ್ರಶಸ್ತಿ ಪಡೆದ ಮಕ್ಕಳು, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಭಿನಂದನೆಗಳು ಎಂದರು.
ಕುಟುಂಬ, ಸಮಾಜ ಮತ್ತು ದೇಶದಲ್ಲಿ ಮಕ್ಕಳ ಪ್ರಾಮುಖ್ಯತೆಯನ್ನು ನೆನಪಿಸುವ ದಿನ ಮಕ್ಕಳ ದಿನಾಚರಣೆಯಾಗಿದೆ. ಇದರ ಜೊತೆಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುತ್ತದೆ. ಕುಟುಂಬ, ಸಮಾಜದ ಹಾಗೂ ರಾಷ್ಟ್ರದ ಸಂತೋಷ ಮಕ್ಕಳು. ಈ ಮಕ್ಕಳಿಂದಲೇ ನಾವು ದೇಶದ ಮುಂದಿನ ಭವಿಷ್ಯ ಮತ್ತು ನಾಳೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮಗುವಿನ ಮೊದಲ ಗುರು ಅವನ ಹೆತ್ತವರು ಮತ್ತು ಕುಟುಂಬ. ಮಕ್ಕಳು ತಮ್ಮ ಕುಟುಂಬದಿಂದ ತಮ್ಮ ಮೊದಲ ಶಿಕ್ಷಣವನ್ನು ಪಡೆಯುತ್ತಾರೆ. ಅವನು ತನ್ನ ಸಂಸ್ಕೃತಿಯನ್ನು ತನ್ನ ಕುಟುಂಬದಿಂದ ಪಡೆಯುತ್ತಾನೆ. ಈ ಅಡಿಪಾಯದ ಮೇಲೆ ಮಗುವಿನ ಶಿಕ್ಷಣ ಮತ್ತು ಇಡೀ ಜೀವನದ ಸಾಮಥ್ರ್ಯ ಮತ್ತು ಜ್ಞಾನವಿದೆ. ಬಾಲ್ಯದಲ್ಲಿ ಮಗುವಿಗೆ ಹೇಳಿದ ಸ್ಪೂರ್ತಿದಾಯಕ ಕಥೆಗಳು, ಬೋಧನೆಗಳು ಮತ್ತು ಜ್ಞಾನವು ಅವನ ಜೀವನದುದ್ದಕ್ಕೂ ಅವನಿಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.
ಮಗುವಿನ ಮೆದುಳಿನ ಬೆಳವಣಿಗೆಯು ಗರ್ಭಾವಸ್ಥೆಯ ಸಮಯದಲ್ಲಿ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ, ನನಗೆ ಒಂದು ಘಟನೆ ನೆನಪಿದೆ – ವೀರ ಅಭಿಮನ್ಯು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಅರ್ಜುನನ ಬಾಯಿಯಿಂದ ಚಕ್ರವ್ಯೂಹವನ್ನು ಭೇದಿಸುವ ರಹಸ್ಯವನ್ನು ಕಲಿತನು. ಬಾಲ್ಯದ ಆರಂಭಿಕ ಕ್ಷಣಗಳು ಮುಖ್ಯವಾಗಿವೆ ಮತ್ತು ಅವುಗಳ ಪ್ರಭಾವವು ಜೀವಿತಾವಧಿಯಲ್ಲಿ ಇರುತ್ತದೆ. ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಹಾಗೂ ಶಿಸ್ತಿನ ದೃಷ್ಟಿಯಿಂದ ಕ್ರೀಡೆಗೆ ಹೆಚ್ಚಿನ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳನ್ನು ಸುರಕ್ಷಿತ, ವಿದ್ಯಾವಂತ, ಉತ್ತಮ ಪೋಷಣೆ ಮತ್ತು ಸಬಲರನ್ನಾಗಿ ಮಾಡುವ ಕಡೆಗೆ. ಮಕ್ಕಳ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳು ಸರಿಯಾಗಿ ಮಕ್ಕಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಿ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವಂತೆ ಪೋಷಕರಿಗೆ ಮನವಿ ಮಾಡುತ್ತೇನೆ. ಇಂದಿಗೂ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಈ ದಿನ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು, ಎಸ್ ಎಸ್ ಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಾಲಮಂದಿರ ಮಕ್ಕಳು ಸಾಧನೆ ಪ್ರಶಂಸನೀಯ. ಈ ಮಕ್ಕಳು ಇತರ ಮಕ್ಕಳಿಗೆ ಪ್ರೇರಣೆಯಾಗಲಿದ್ದಾರೆ. ಇತರೆ ಮಕ್ಕಳು ಈ ಮಕ್ಕಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಧೈರ್ಯ, ಶೌರ್ಯ, ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದ ಜನರು ಮತ್ತು ಭಾರತದ ಖ್ಯಾತ ಪ್ರಧಾನಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಬದ್ಧರಾಗಿದ್ದಾರೆ. ದೇಶವನ್ನು ಭವ್ಯ ಭಾರತ, ಸ್ವಾವಲಂಬಿ ಭಾರತವನ್ನಾಗಿ ಮಾಡಲು ಸಕ್ರಿಯವಾಗಿ ಕೊಡುಗೆ ನೀಡಬೇಕು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀ ಆಚಾರ್ ಹಾಲಪ್ಪ ಬಸಪ್ಪ, ಶಾಸಕರಾದ ರಿಜ್ವಾನ್ ಅರ್ಷದ್, ಸಂಸದರಾದ ಲೆಹರ್ ಸಿಂಗ್ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಮಂಜುಳ ಎನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಕೀವ್: ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು 100ನೇ ದಿನ ಸಮೀಪಿಸುತ್ತಿದೆ. ಈ ಹೊತ್ತಿನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸುಮಾರು 2 ಲಕ್ಷ ಮಕ್ಕಳನ್ನು ಬಲವಂತವಾಗಿ ಕರೆದೊಯ್ದಿದೆ, 1 ಕೋಟಿಗೂ ಅಧಿಕ ಜನರು ವಲಸೆ ಹೋಗುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಅಂತಾರಾಷ್ಟ್ರೀಯ ಮಕ್ಕಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಝಲೆನ್ಸ್ಕಿ, ರಷ್ಯಾದ ಕ್ರಿಮಿನಲ್ ಉದ್ದೇಶವು ಮಕ್ಕಳನ್ನು ಅಪಹರಣ ಮಾಡಿರುವುದು ಮಾತ್ರವಲ್ಲದೆ ವಲಸೆ ಹೋದವರು ಮತ್ತೆ ಉಕ್ರೇನ್‌ಗೆ ಮರಳದಂತೆ ಮಾಡಿದೆ. ಆದರೂ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಎಂದಿಗೂ ಶರಣಾಗುವುದಿಲ್ಲ. ನಮ್ಮ ದೇಶದ ಮಕ್ಕಳು ಆಕ್ರಮಣಕಾರರ ಆಸ್ತಿಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಯುದ್ಧದ ನಡುವೆ ರಷ್ಯಾದ ಪಡೆಗಳು ಪೂರ್ವ ಡೊನ್ಬಾಸ್ ಪ್ರದೇಶದ ಮೇಲೆ ತಮ್ಮ ಹಿಡಿತ ಗಟ್ಟಿಗೊಳಿಸುತ್ತಿವೆ. ಇದಕ್ಕೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ ಸೈನ್ಯವೂ ವಾಸ್ತವಿಕ ಆಡಳಿತ ಕೇಂದ್ರವಾದ ಕ್ರಾಮಾಟೋರ್ಸ್ಕ್ ಕಡೆಗೆ ಸ್ಥಿರವಾಗಿ ಹಿಮ್ಮೆಟ್ಟಿಸುತ್ತಿವೆ. ಕಳೆದ ಮೂರು ತಿಂಗಳಿನಿಂದ ರಷ್ಯಾದ ಆಕ್ರಮಣ 1.25 ಲಕ್ಷ ಚದರ ಕಿ.ಮೀ ವರೆಗೆ ಹೆಚ್ಚಾಗಿದೆ. ಸುಮಾರು 3 ಲಕ್ಷ ಕಿ.ಮೀ ಗಳಷ್ಟು ಸ್ಫೋಟಗೊಂಡ ಶಸ್ತ್ರಾಸ್ತ್ರಗಳಿಂದ ಕಲುಷಿತಗೊಂಡಿದೆ. ಒಟ್ಟಾರೆ ಶೇ.20 ರಷ್ಟು ಪ್ರದೇಶವನ್ನು ರಷ್ಯಾ ಸೈನ್ಯ ವಶಪಡಿಸಿಕೊಂಡಿದೆ. ಇದರಿಂದಾಗಿ 1.2 ಕೋಟಿ ಉಕ್ರೇನಿಯನ್ನರು ವಲಸೆ ಹೋಗಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಮಂದಿ ವಿದೇಶಗಳಿಗೆ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಸ್ವತಂತ್ರ ಭಾರತದ ಮೊದಲ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಗಣ್ಯರು ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭ ಕೋರುತ್ತಿದ್ದಾರೆ.
ಇಂದು ನವೆಂಬರ್ 14 ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜವಾಹರ್ ಲಾಲ್ ನೆಹರು ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದ್ದು ಮಕ್ಕಳ ದಿನಾಚರಣೆಯ ಅಂಗವಾಗಿ ಗಣ್ಯರು ಶುಭಕೋರಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ
ದೇಶದ ಪ್ರಥಮ ಪ್ರಧಾನಮಂತ್ರಿ ಪಂ. ಶ್ರೀ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು. #ChildrensDay2021pic.twitter.com/IpkoWFemT1
ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು ಎಂದು ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡುವ ಮೂಲಕವಾಗಿ ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ.
Tributes to Pandit Jawaharlal Nehru Ji on his birth anniversary.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೇ ಸಾಲಿನಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?
ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು, ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಾಡಿನ ಎಲ್ಲ ನಲ್ಮೆಯ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಭವ್ಯಭಾರತದ ನಿರ್ಮಾಣಕಾರರಾದ ಮಕ್ಕಳ ಬೌದ್ಧಿಕ, ಶೈಕ್ಷಣಿಕ ಪ್ರಗತಿಗೆ ನೆರವಾಗುವ ಮೂಲಕ ಮಕ್ಕಳ ಬಾಳು ಬೆಳಗೋಣ. ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಜಯಂತಿಯ ನಮನಗಳನ್ನು ತಿಳಿಸಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್ ಅವರು ನಾವು ನೋಡದ ಭವಿಷ್ಯದ ಸಮಯಕ್ಕೆ ನಾವು ಕಳುಹಿಸುವ ಜೀವಂತ ಸಂದೇಶಗಳೆಂದರೆ ಮಕ್ಕಳು. ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಶುಭಾಷಯ ತಿಳಿಸಿದ್ದಾರೆ.
ಬೆಂಗಳೂರು: ಇಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಕಲಾವಿದರು ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ನಟಿ ರಾಧಿಕಾ ಪಂಡಿತ್ ಹಾಗೂ ನಟ ಅಜಯ್ ರಾವ್ ತಮ್ಮ ಮುದ್ದು ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮಕ್ಕಳ ದಿನಾಚರಣೆ ವಿಶೇಷವಾಗಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾದಲ್ಲಿ ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ. ಈ ಫೋಟೋದಲ್ಲಿ ಕಾಣುವ ಇಬ್ಬರು ನನ್ನ ಮೊದಲ ಮಕ್ಕಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟ ಯಶ್ ತಮ್ಮ ಪುತ್ರಿ ಐರಾ ಜೊತೆ ಆಟವಾಡುತ್ತಿದ್ದಾರೆ.
ಇತ್ತ ಕೃಷ್ಣ ಅಜಯ್ ರಾವ್ ಅವರು ಕೂಡ ತಮ್ಮ ಮಗಳು ಸಿಂಹಿಣಿಯಂತೆ ಗರ್ಜಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಅಜಯ್ ಅದಕ್ಕೆ, “ಚೆರಿಷ್ಮಾ. ಈ ಭೂಮಿಯ ಮುದ್ದಾದ ಸಿಂಹಿಣಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಹಲವು ಕಲಾವಿದರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಕೂಡ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಮಕ್ಕಳ ನಗು ಅತ್ಯಂತ ಸುಂದರ ಧ್ವನಿ ಎಂದು ಬರೆದುಕೊಂಡಿದ್ದಾರೆ. ಇತ್ತ ನಟಿ ಸಂಯುಕ್ತ ಹೊರನಾಡು ಅವರು ಮಕ್ಕಳೊಂದಿಗೆ ಸಂತಸದಿಂದಿರುವ ವಿಡಿಯೋವನ್ನು ಇನ್‍ಸ್ಟಾದಲ್ಲಿ ಹಾಕಿ ಶುಭಕೋರಿದ್ದಾರೆ.
ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ 12 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್‍ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾಳೆ.
ಓಜಲ್ ಎಸ್ ನಲವಡಿ ಇಲ್ಲಿನ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ಸಾಧನೆ ಮಾಡಿದ್ದಾಳೆ. ಈ ಸಾಧನೆಯನ್ನು ನೋಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬೆಳ್ಳಂಬೆಳಗ್ಗೆ ನಡೆದ ಈ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.
ವಿಆರ್‌ಎಲ್ ಕಂಪನಿಯ ಸಿಎಫ್‍ಒ ಆಗಿರುವ ಸುನೀಲ್ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾದ ಓಜಲ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾಳೆ.
ಇದೀಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಓಜಲ್‍ಳಿಗೆ ಅಕ್ಷಯ ಸೂರ್ಯವಂಶಿ ಎಂಬವರು ತರಬೇತಿ ನೀಡಿದ್ದರು.
ಮೈಸೂರು: ಸಾಂಸ್ಕೃತಿಕ ನಗರಿಯ ಮೈಸೂರಿನ ಅರಮನೆ ಆವರಣದಲ್ಲಿ ಭಾನುವಾರ ಬರೀ ಮಕ್ಕಳದೇ ಕಲರವ ಕೇಳಿ ಬಂದಿದ್ದು, ಯದುವೀರ್ ಮಕ್ಕಳೊಂದಿಗೆ ಮಗುವಾಗಿದ್ದಾರೆ.
ಮಕ್ಕಳ ಜೊತೆ ರಾಜವಂಶಸ್ಥರಾದ ಯದುವೀರ್ ಅವರು ಬೆರೆತು ಮಕ್ಕಳ ಸಂತೋಷ ಹೆಚ್ಚಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ಭೇರುಂಡ ಸಂಸ್ಥೆ ವತಿಯಿಂದ ಅರಮನೆಯ ಆವರಣದಲ್ಲಿ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.
ಭೇರುಂಡ ಸಂಸ್ಥೆಯ ಸ್ಥಾಪಕ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರಕ್ಕೆ ಬಣ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು.
ಸದ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಕ್ಕಳ ಕುಂಚದಲ್ಲಿ ಮೈಸೂರಿನ ಐತಿಹಾಸಿಕ ತಾಣಗಳು ಹಾಗೂ ಪ್ರಾಕೃತಿಕ ಚಿತ್ರಗಳು ಮೂಡಿ ಬಂದವು.
ತುಮಕೂರು/ಯಾದಗಿರಿ: ಮಕ್ಕಳ ದಿನಾಚರಣೆಯಂದು ತುಮಕೂರಿನಲ್ಲಿ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ, ಯಾದಗಿರಿಯಲ್ಲಿ ತಾಯಿಯೇ ತನ್ನ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯಂದೇ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 24 ವರ್ಷದ ಶೈಲಾ ಅವರು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯದಿಂದ ಇದ್ದಾರೆ. ಡಾ. ಶಿಲ್ಪಾಶ್ರೀ ನೇತೃತ್ವದ ವೈದ್ಯರ ತಂಡದಿಂದ ಡೆಲಿವರಿ ಮಾಡಿಸಿದೆ.
ಇತ್ತ ಯಾದಗಿರಿಯಲ್ಲಿ ಮಕ್ಕಳ ದಿನಾಚರಣೆ ದಿನವೇ ತಾಯಿಯೊಬ್ಬರು ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿದ್ದಳು. ಹೆರಿಗೆ ನಂತರ ಬೆಳಿಗ್ಗೆ ತಾಯಿ ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿದ್ದಾಳೆ.
ಸದ್ಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಂದ ನವಜಾತ ಹೆಣ್ಣು ಶಿಶು ರಕ್ಷಿಸಿದ್ದು, ಹೆತ್ತಮ್ಮಳ ಮಡಿಲು ಸೇರಲು ಮಗು ಹಂಬಲಿಸುತ್ತಿದೆ. ಮಗುವನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಉಡುಪಿ: ಭತ್ತ ಎಲ್ಲಿ ಬೆಳೆಯುತ್ತೆ ಮಕ್ಕಳೇ..? ಅಂತ ಮೇಷ್ಟ್ರು ಕೇಳಿದ್ದಕ್ಕೆ ಮಕ್ಕಳು ಕೊಟ್ಟ ಉತ್ತರ ಆ ಶಿಕ್ಷಕರನ್ನು ದಂಗು ಬಡಿಸಿತ್ತು. ಹೀಗೆ ಆದ್ರೆ ಮುಂದೆ ಮಕ್ಕಳ ಜೀವನ ಕಷ್ಟ ಇದೆ ಅಂತ ಅರಿತ ಮೇಷ್ಟ್ರು ಮಕ್ಕಳನ್ನು ಕೆಸರು ಗದ್ದೆಗೆ ಇಳಿಸಿ ಪೈರಿನ ಮೂಟೆಯನ್ನು ಹೊರಿಸಿ ಸತ್ಯದರ್ಶನ ಮಾಡಿಸಿದ್ದಾರೆ.
ದೇಶದ ಬೆನ್ನೆಲುಬು ರೈತನಿಗಿರುವ ಕಷ್ಟ ಎಷ್ಟಿದೆ ಎಂಬ ಪ್ರ್ಯಾಕ್ಟಿಕಲ್ ನಾಲೇಜ್ ಕೊಡಿಸುವ ಮೂಲಕ ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಣೆ ಮಾಡಲಾಗಿದೆ.
ಪ್ರೌಢಶಾಲೆಯ ವಿದ್ಯಾರ್ಥಿಗಳು ಗದ್ದೆಯನ್ನು ಉತ್ತು, ಬಿತ್ತಿ, ನಾಟಿ ಮಾಡಿ ನಾಲ್ಕು ತಿಂಗಳು ಅದು ಬೆಳೆದ ನಂತರ ಕಟಾವು ಮಾಡುವ ಪ್ರ್ಯಾಕ್ಟಿಕಲ್ ಪಾಠ ಮಾಡಲಾಗಿದೆ. ಮೂರು ಹೊತ್ತು ಪುಸ್ತಕ ಹಿಡ್ಕೊಂಡು ಪಾಠ ಓದುತ್ತಿದ್ದ ಮಕ್ಕಳಿಗೆ ಕೃಷಿ ಅಂದ್ರೆ ಏನು..? ರೈತನೊಬ್ಬ ಎಷ್ಟು ಕಷ್ಟ ಪಡುತ್ತಾನೆ. ಇಡೀ ಜೀವನವನ್ನು ಕೆಸರು ಗದ್ದೆಯಲ್ಲಿ ಕಳೆದು ಭತ್ತ ಬೆಳೆದು ಅಕ್ಕಿಯಾಗಿ ಅನ್ನ ಬಟ್ಟಲಿಗೆ ಬರುವ ತನಕ ಎಷ್ಟು ಕಷ್ಟಪಡುತ್ತಾನೆ ಅನ್ನೋದನ್ನು ಗದ್ದೆಯಲ್ಲಿ ಕೃಷಿ ಪಾಠದ ಮೂಲಕ ತಿಳಿಸಲಾಯ್ತು ಅಂತ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕಳೆದ 5 ವರ್ಷದಿಂದ ಬೇರೆ ಬೇರೆ ಕೃಷಿ ಚಟುವಟಿಕೆಯಲ್ಲಿ ಮಕ್ಕಳನ್ನು ಶಿಕ್ಷಕರು ತೊಡಗಿಸುತ್ತಾರೆ. ಈ ಬಾರಿ ನಾಟಿ, ಬಿತ್ತನೆ ನಂತರ ಕಟಾವು ಕೆಲಸದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಪೂರ್ಣವಾಗಿ ಭತ್ತ ಬೆಳೆಸುವ ಪ್ರಕ್ರಿಯೆಯನ್ನು ಮಕ್ಕಳು ಹತ್ತಿರದಿಂದ ನೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಕೂಡಾ ಭತ್ತದ ಮೂಟೆ ಹೊತ್ತು- ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸುವಲ್ಲಿ ಮಕ್ಕಳ ಜೊತೆ ಪಾಲ್ಗೊಂಡರು. ನಾವು ಕೂಡ ಖುಷಿ ಖುಷಿಯಿಂದ ಎಲ್ಲಾ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದಾಗಿ ವಿದ್ಯಾರ್ಥಿನಿ ದೃಶ್ಯ ತಿಳಿಸಿದ್ದಾಳೆ.
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಾವು ಮೊದಲ ಬಾರಿಗೆ ವಯಸ್ಕರ ಚಿತ್ರವನ್ನು ನೋಡಿದ ಅನುಭವವನ್ನು ಮಕ್ಕಳ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.
ಪರಿಕ್ಕರ್ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳೊಂದಿಗೆ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ನೀವು ಯುವಕರಾಗಿದ್ದಾಗ ಯಾವ ತರಹದ ಸಿನಿಮಾಗಳನ್ನು ನೋಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಪರಿಕ್ಕರ್, ನಾನು ಯುವಕನಿದ್ದಾಗ ಕೇವಲ ಸಿನಿಮಾಗಳಲ್ಲ, ಅದರ ಜೊತೆಗೆ ವಯಸ್ಕರ ಚಿತ್ರಗಳನ್ನು ನೋಡುತ್ತಿದ್ದೆವು. ಅಂದು ನಾವು ಏನು ವಯಸ್ಕರ ಚಿತ್ರಗಳು ಎಂದು ಕರೆಯಲ್ಪಡುತ್ತಿದ್ದ ಆ ಚಿತ್ರಗಳ ಹೆಚ್ಚಿನ ದೃಶ್ಯಗಳು ಈಗ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದೆ ಎಂದು ಉತ್ತರಿಸಿದ್ದಾರೆ.
ನಾನು ಯುವಕನಾಗಿದ್ದಾಗ ಪಾಪ್ಯೂಲರ್ ಅಡಲ್ಟ್ ಮೂವಿ ಬಂದಿತ್ತು. ನಾನು ಮತ್ತು ನನ್ನ ಸಹೋದರ ಇಬ್ಬರೂ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದೆವು. ಸಿನಿಮಾದಲ್ಲಿ ಇಂಟರ್ ವೆಲ್ ನಲ್ಲಿ ಥಿಯೇಟರ್ ಲೈಟ್ ಗಳೆಲ್ಲಾ ಹಚ್ಚಲಾಯಿತು. ನೋಡಿದರೆ ನಮ್ಮ ನೆರೆ ಮನೆಯ ವ್ಯಕ್ತಿಯೊಬ್ಬ ನಮ್ಮ ಪಕ್ಕದಲ್ಲಿಯೇ ಕುಳಿತಿದ್ದ. ಆ ವ್ಯಕ್ತಿ ಪ್ರತಿದಿನ ನನ್ನ ತಾಯಿಯ ಜೊತೆ ಮಾತನಾಡುತ್ತಿದ್ದರಿಂದ ಅವರಿಗೆ ನಮ್ಮಿಬ್ಬರ ಪರಿಚಯವಿತ್ತು. ಆ ಕ್ಷಣದಲ್ಲಿ ಭಯಗೊಂಡ ನಾನು ನಾವು ಸತ್ತೆ ಹೋದೆವು ಎಂದು ಹೇಳಿದೆ ಅಂತಾ ಪರಿಕ್ಕರ್ ತಿಳಿಸಿದರು.
ಥಿಯೇಟರ್ ನಲ್ಲಿ ನೆರೆಮನೆಯ ವ್ಯಕ್ತಿಯನ್ನು ನೋಡುತ್ತಲೇ ನಾವಿಬ್ಬರು ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಓಡಿ ಬಂದೆವು. ಮನೆಗೆ ಹೋಗುವ ದಾರಿ ಮಧ್ಯೆಯೇ ಈ ಸಮಸ್ಯೆಯನ್ನು ಬಗಹರಿಸುವ ಪ್ಲಾನ್ ಮಾಡಿಕೊಂಡು ಹೊರಟೆವು. ಮನೆಗೆ ಹೋದ ಮೇಲೆ ತಾಯಿಯ ಜೊತೆ, ನಾವು ಇವತ್ತು ಸಿನಿಮಾಗೆ ಹೋಗಿದ್ದೆವು. ಆದರೆ ನಮಗೆ ಅದು ಯಾವ ಸಿನಿಮಾ ಎಂದು ಗೊತ್ತಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಅದು ಕೆಟ್ಟ ಸಿನಿಮಾ ಎಂದು ಗೊತ್ತಾಯಿತು. ಕೂಡಲೇ ಚಿತ್ರ ನೋಡುವುದನ್ನು ಬಿಟ್ಟು ಅರ್ಧಕ್ಕೆ ಚಿತ್ರ ಮಂದಿರದಿಂದ ಹೊರ ಬಂದೆವು. ಮತ್ತೆ ನಿಧಾನವಾಗಿ ನಮ್ಮ ನೆರೆಮನೆಯ ವ್ಯಕ್ತಿಯೂ ಆ ಸಿನಿಮಾವನ್ನು ನೋಡಲು ಬಂದಿದ್ದ ಎನ್ನುವುದನ್ನು ಎಂದು ತಿಳಿಸಿದೆವು ಎಂದರು.
ಮರುದಿನ ಆ ವ್ಯಕ್ತಿ ನಮ್ಮ ತಾಯಿಯನ್ನು ಕರೆದು ನಿಮ್ಮ ಮಕ್ಕಳಿಬ್ಬರು ಥಿಯೇಟರ್ ಗೆ ಬಂದಿದ್ದರು ಎಂದು ಹೇಳಿದರು. ಕೂಡಲೇ ನಮ್ಮ ತಾಯಿ ನನ್ನ ಮಕ್ಕಳು ಯಾವ ಸಿನಿಮಾಗೆ ಹೋಗಿದ್ದರು ಎಂದು ನನಗೆ ಗೊತ್ತಿದೆ. ಆದರೆ ನೀವ್ಯಾಕೆ ಅಂತಹ ಸಿನಿಮಾ ನೋಡಲು ಹೋಗಿದ್ರಿ ಎಂದು ಮರು ಪ್ರಶ್ನೆ ಮಾಡಿದರು. ನಾವು ಮೊದಲೇ ಎಲ್ಲವನ್ನು ಪ್ಲಾನ್ ಮಾಡಿದ್ದರಿಂದ ನಾವು ಬಚಾವ್ ಆಗಿದ್ದೆವು ಎಂದು ಹೇಳಿ ಪರಿಕ್ಕರ್ ನಕ್ಕರು.