Tag: children thieves

  • ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

    ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

    ವಿಜಯಪುರ: ಮಕ್ಕಳ ಕಳ್ಳ ಎಂದು ತಿಳಿದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ಮೃತ ದೇಹವನ್ನು ರಾಜ್ಯಕ್ಕೆ ತರಲಾಗಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಗುಂದಾವನ ಗ್ರಾಮದ ರಾಜು ಭೋಸ್ಲೆ (45) ಹತ್ಯೆಗೀಡಾದ ದುರ್ದೈವಿ. ಜುಲೈ 1ರಂದು ಮಹಾರಾಷ್ಟ್ರದ ಧೂಳೆ ಎಂಬ ಗ್ರಾಮದ ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ 5 ಮಂದಿಯನ್ನು ಹೊಡೆದು ಕೊಲೆ ಮಾಡಿದ್ದರು. ಅಂದು ಮೃತಪಟ್ಟ ಐವರಲ್ಲಿ ರಾಜು ಕೂಡ ಒಬ್ಬರಾಗಿದ್ದರು. ರಾಜು ಮಹಾರಾಷ್ಟ್ರದಲ್ಲಿ ಭಿಕ್ಷಾಟನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ರಂಜಾನ್ ಪ್ರಯುಕ್ತ ಭಿಕ್ಷಾಟನೆಗೆ ಬಂದಿದ್ದ ಐವರು ಮಹಿಳೆಯರನ್ನು ಮಕ್ಕಳ ಕಳ್ಳರೆಂದು ತಿಳಿದು ಒಂದು ದಿನ ಕೂಡಿ ಹಾಕಿದ್ರು

    ಧೂಳೆ ಗ್ರಾಮದ ಜನರ ತಪ್ಪು ತಿಳುವಳಿಕೆಯಿಂದ ರಾಜು ಭೋಸ್ಲೆ ಕೂಡ ಘಟನೆಯಲ್ಲಿ ಹತ್ಯೆಗೀಡಾಗಿದ್ದರು. ಘಟನೆ ಸಂಬಂಧ ಮಂಗಳವಾರ ರಾಜು ಭೋಸ್ಲೆ ಶವವನ್ನು ಝಳಕಿ ಪೊಲೀಸರ ಸಮ್ಮುಖದಲ್ಲಿ ಮಹಾರಾಷ್ಟ್ರದ ಪೊಲೀಸರು ಹಸ್ತಾಂತರಿಸಿದ್ದಾರೆ. ರಾಜು ಭೋಸ್ಲೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

  • ಮಕ್ಕಳ ಕಳ್ಳರ ವದಂತಿ – ಐದು ಜನರನ್ನು ಬಡಿದು ಕೊಂದ ಗ್ರಾಮಸ್ಥರು

    ಮಕ್ಕಳ ಕಳ್ಳರ ವದಂತಿ – ಐದು ಜನರನ್ನು ಬಡಿದು ಕೊಂದ ಗ್ರಾಮಸ್ಥರು

    ಮುಂಬೈ: ಮಕ್ಕಳ ಅಪರಹರಣಕಾರರೆಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸುವ ಕೊಲೆ ಮಾಡುವ ಪರಿಪಾಠ ಮುಂದುವರಿದಿದ್ದು, ಇದೀಗ ಮಹಾರಾಷ್ಟ್ರದ ಧುಲೆ ಎಂಬಲ್ಲಿ ಐವರನ್ನು ಹಿಡಿದು ಗ್ರಾಮಸ್ಥರು ಕೊಲೆ ಮಾಡಿದ್ದಾರೆ.

    ಸೋಲ್ಲಾಪುರ ಜಿಲ್ಲೆಯ ರೈನ್‍ಪಾದಾ ಎಂಬ ಹಳ್ಳಿಯ ಸಂತೆಗೆ ಬಂದ ಐವರಲ್ಲಿ ಒಬ್ಬಾತ ಮಕ್ಕಳನ್ನು ಮಾತನಾಡಿಸಲು ಮುಂದಾಗಿದ್ದಾನೆ. ಇದ್ದರಿಂದ ಅನುಮಾನಗೊಂಡ ಜನ ಮಕ್ಕಳ ಕಳ್ಳರೆಂದು ಭಾವಿಸಿ ಐವರನ್ನು ಹಿಗ್ಗಾಮುಗ್ಗಾ ಬಡಿದು ಕೊಂದಿದ್ದಾರೆ.

    ಸದ್ಯ ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಗುಂಪಿನಲ್ಲಿ ಒಟ್ಟು 7 ಜನರಿದ್ದು ಇದರಲ್ಲಿ ಇಬ್ಬರು ಜನರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮೃತರು ಏಕೆ ಹಳ್ಳಿಗೆ ತೆರಳಿದ್ದರು ಎಂಬ ಮಾಹಿತಿ ಖಚಿತವಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಈಗಾಗಲೇ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಮಕ್ಕಳ ಕಳ್ಳರ ವಂದತಿಯೇ ಪ್ರಮುಖ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು. ಕೊಲೆಯಾದ ಐವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.