Tag: Childrean

  • ಮಕ್ಕಳಿಬ್ಬರನ್ನು ತಳ್ಳಿ ಬಾವಿಗೆ ಹಾರಿದ ತಾಯಿ – ಮಕ್ಕಳ ಸಾವು, ತಾಯಿ ಬಚಾವ್

    ಮಕ್ಕಳಿಬ್ಬರನ್ನು ತಳ್ಳಿ ಬಾವಿಗೆ ಹಾರಿದ ತಾಯಿ – ಮಕ್ಕಳ ಸಾವು, ತಾಯಿ ಬಚಾವ್

    ಕಲಬುರಗಿ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಮಕ್ಕಳು ಸಾವಿಗೀಡಾಗಿ ತಾಯಿ ಬದುಕುಳಿದಂತಹ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ತಾಯಿ ಭಾಗಮ್ಮ ಮಕ್ಕಳಾದ ಒಂದುವರೆ ವರ್ಷದ ದಾಕ್ಷಾಯಿಣಿ ಮತ್ತು ಎರಡುವರೆ ತಿಂಗಳ ಹಸುಗೂಸುನ್ನು ಬಾವಿಗೆ ಹಾಕಿ ನಂತರ ತಾನು ಬಾವಿಗೆ ಹಾರಿದ್ದಾಳೆ. ಬಾವಿಗೆ ಹಾರುತ್ತಿರುವುನದನ್ನು ನೋಡಿದ ಗ್ರಾಮಸ್ಥರು, ತಕ್ಷಣ ಬಾವಿಗೆ ಜಿಗಿದು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಕ್ಕಳಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಭಾಗಮ್ಮಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ- ವೇತನ 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ

    ಘಟನೆ ನಿನ್ನೆ ನಡೆದಿದ್ದು, ಯಾರಿಗೂ ಗೊತ್ತಾಗಬಾರದು ಅಂತಾ ತರಾತುರಿಯಲ್ಲಿ ನಿನ್ನೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ ಇಂದು ಪ್ರಕರಣ ಬೆಳಕಿಗೆ ಬಂದ ಕೂಡಲೇ ದೇವಲಗಾಣಗಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ