Tag: Childhood Photo

  • ತಾಯಿ ಜೊತೆಗಿನ ಬಾಲ್ಯದ ನೆನಪನ್ನು ಹಂಚಿಕೊಂಡ ಮೇಘನಾ

    ತಾಯಿ ಜೊತೆಗಿನ ಬಾಲ್ಯದ ನೆನಪನ್ನು ಹಂಚಿಕೊಂಡ ಮೇಘನಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಾಗಿ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೇಘನಾ ತಮ್ಮ ತಾಯಿ ಪ್ರಮೀಳಾ ಜೋಷಾಯ್ ಜೊತೆ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಮೇಘನಾ ತಂದೆ ಸುಂದರ್ ರಾಜ್ ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.

     

    ಆಗಾಗ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಅಭಿಮಾನಿಗಳನ್ನು ಮತ್ತು ಪತಿ ಚಿರಂಜೀವಿ ಸರ್ಜಾ ಫೋಟೋ ನೋಡುತ್ತಿದ್ದ ಮೇಘನಾ ರಾಜ್ ಈ ಬಾರಿ ಇನ್ ಸ್ಟಾಗ್ರಾಮ್ ಸ್ಟೋರಿಯಾಗಿ ತಮ್ಮ ಬಾಲ್ಯದ ಫೋಟೋವನ್ನು ಹಾಕಿದ್ದಾರೆ. ಈ ಫೋಟೋವನ್ನು ವೀಕ್ಷಿಸಿದ ನಂತರ ಮೇಘನಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಹಾಸ್ಯಮಯವಾದ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.

     

    ಈ ಫೋಟೋನಲ್ಲಿ ಮೇಘನಾ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ. ಟಾಪ್ ಟೂ ಬಾಟಂ ಕಪ್ಪು ಬಣ್ಣದ ಉಡುಪು ಧರಿಸಿರುವ ಮೇಘನಾ ಪ್ರಮೀಳಾ ಜೋಷಾಯ್ ಅವರ ಪಕ್ಕ ನಡೆದುಕೊಂಡು ಬರುತ್ತಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ನನ್ನ ತಂದೆ ಛಾಯಾಗ್ರಹಕರಾಗಿದ್ದಾಗ ನಾನು ಫೋಟೋಗಳಿಗೆ ಪೋಸ್ ನೀಡುವಂತೆ ನಟಿಸುತ್ತಿದ್ದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಅಲ್ಲದೆ ಫೆಬ್ರವರಿ 2ರಂದು ಮೇಘನಾ ತಂದೆ ಸುಂದರ್ ರಾಜ್ ಪ್ರೀತಿಯಿಂದ ತಮ್ಮ ಕೆನ್ನೆಗೆ ಚುಂಬಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿಕೊಳ್ಳುವುದರ ಮೂಲಕ ಸುಂದರ್ ರಾಜ್‍ಗೆ ಜನ್ಮ ದಿನದ ಶುಭಾಶಯವನ್ನು ಕೋರಿದ್ದರು.

     

    View this post on Instagram

     

    A post shared by Meghana Raj Sarja (@megsraj)

    ಜೊತೆಗೆ ಪ್ರೀತಿಯ ಅಪ್ಪ ನಾನು ಅವಲಂಬಿತವಾಗಿರುವ ಏಕೈಕ ಭುಜ ಅಂದರೆ ಅದು ನಿಮ್ಮದು. ಈ ವಿಚಾರವನ್ನು ನಿಮ್ಮ ಹುಟ್ಟುಹಬ್ಬದ ದಿನ ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನೀವು ಒಂದು ಸಣ್ಣ ಹೆಣ್ಣು ಮಗುವಿದ್ದಂತೆ ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

  • ಬಾಲ್ಯದ ಫೋಟೋ ಹಾಕಿ ಐಶ್ವರ್ಯಾ ಅರ್ಜುನ್ ಭಾವುಕ

    ಬಾಲ್ಯದ ಫೋಟೋ ಹಾಕಿ ಐಶ್ವರ್ಯಾ ಅರ್ಜುನ್ ಭಾವುಕ

    ಚೆನ್ನೈ: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದು, ಇಡೀ ಕುಟುಂಬದವರು ದುಃಖದಲ್ಲಿದ್ದಾರೆ. ಅಣ್ಣನ ಅಗಲಿಕೆಯ ಐದು ದಿನಗಳ ನಂತರ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ನಟಿ ಐಶ್ವರ್ಯಾ ಅರ್ಜುನ್ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.

    ನಟ ಅರ್ಜುನ್ ಅವರ ಪುತ್ರಿ ಐಶ್ವರ್ಯಾ ಇನ್‍ಸ್ಟಾಗ್ರಾಂನಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗಿನ ಬಾಲ್ಯದ ಫೋಟೋವನ್ನು ಹಾಕುವ ಮೂಲಕ ಕಂಬನಿ ಮಿಡಿದಿದ್ದಾರೆ. ಸರ್ಜಾ ಕುಟುಂಬದ ಮಕ್ಕಳೆಲ್ಲರು ಒಟ್ಟಿಗೆ ಬೆಳೆದವರು. ಅರ್ಜುನ್ ಸರ್ಜಾ ಅವರ ಸಹೋದರಿ ಅಮ್ಮಾಜಿ ಅವರ ಮಕ್ಕಳಾದ ಚಿರು, ಧ್ರುವ, ಕಿಶೋರ್ ಸರ್ಜಾ, ಅರ್ಜುನ್ ಪುತ್ರಿಯರಾದ ಐಶ್ವರ್ಯಾ ಮತ್ತು ಅಂಜನಾ ಹೀಗೆ ಎಲ್ಲರು ಒಟ್ಟಿಗೆ ಆಡಿಕೊಂಡು ಬೆಳೆದವರು.

    ಇದೀಗ ಇಡೀ ಕುಟುಂಬ ಚಿರು ಅವರನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಹೀಗಾಗಿ ಬಾಲ್ಯದಲ್ಲಿ ಚಿರು ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಐಶ್ವರ್ಯಾ, ತಮ್ಮ ಇನ್‍ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಚಿರು, ಧ್ರುವ, ಐಶ್ವರ್ಯಾ, ಅವರ ಸಹೋದರಿ ಅಂಜನಾ, ಸೂರಜ್ ಇದ್ದಾರೆ. ಈ ಫೋಟೋಗೆ ‘ಚಿರಂಜೀವಿ’ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ ಕ್ಯಾಪ್ಶನ್ ಕೊಟ್ಟಿದ್ದಾರೆ.

    ನಟಿ ಐಶ್ವರ್ಯಾ ಅಭಿನಯಿಸಿರುವ ‘ಪ್ರೇಮ ಬರಹ’ ಸಿನಿಮಾದ ಹಾಡೋಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ, ಚಿರಂಜೀವಿ ಜೊತೆಗೆ ಅರ್ಜುನ್ ಸರ್ಜಾ ಕೂಡ ಮಿಂಚಿದ್ದರು. ಈ ಮೂಲಕ ಐಶ್ವರ್ಯಾ ನಟನೆಯ ಕನ್ನಡ ಸಿನಿಮಾಕ್ಕೆ ಚಿರು ಸಾಥ್ ನೀಡಿದ್ದರು.

    https://www.instagram.com/p/CBVOUWtJF34/?igshid=1mg3oio32tqnq

    ಅಣ್ಣನನ್ನು ಕಳೆದುಕೊಂಡು ಐದು ದಿನಗಳ ಬಳಿಕ ಧ್ರುವ ಸರ್ಜಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಚಿರಂಜೀವಿ ಸರ್ಜಾ ಸಾವಿಗೂ ಒಂದು ದಿನ ಮುನ್ನ ಶೇರ್ ಮಾಡಿಕೊಂಡಿದ್ದ ಫೋಟೋ ನೋಡಿ ನೋವನ್ನು ತೋಡಿಕೊಂಡಿದ್ದರು. ‘ನೀನು ನನಗೆ ವಾಪಸ್ ಬೇಕು. ನೀ ಇರದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ’ ಎಂದು ಧ್ರುವ ಸರ್ಜಾ ನೋವಿನ ನುಡಿಗಳನ್ನು ಸ್ಟೇಟಸ್‍ನಲ್ಲಿ ಬರೆದುಕೊಂಡಿದ್ದರು.