Tag: child trafficking

  • ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ನವದೆಹಲಿ: ಆಸ್ಪತ್ರೆಯು ನವಜಾತ ಶಿಶುಗಳ ಕಳ್ಳಸಾಗಣೆ (Child Trafficking) ಮಾಡಿದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು (License) ಕೂಡಲೇ ಅಮಾನತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ. ಅಲ್ಲದೇ ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ರಾಜ್ಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೋರ್ಟ್ ನಿಗದಿಪಡಿಸಿದೆ.

    ಉತ್ತರಪ್ರದೇಶದ ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಜೆ.ಬಿ ಪಾರ್ದ್ರಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಈ ನಿರ್ದೇಶನಗಳನ್ನು ನೀಡಿದೆ. ಈ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಅಲಹಾಬಾದ್ ಹೈಕೋರ್ಟ್ ಮತ್ತು ಉತ್ತರಪ್ರದೇಶ ಸರ್ಕಾರ ಎರಡನ್ನೂ ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

    ಬಳಿಕ ಈ ಬಗ್ಗೆ ನಿರ್ದೇಶನಗಳನ್ನು ನೀಡಿದ ಪೀಠ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಕೆಳ ನ್ಯಾಯಾಲಯಗಳಿಗೆ ನಿರ್ದೇಶನಗಳನ್ನು ನೀಡುವಂತೆ ದೇಶಾದ್ಯಂತದ ಹೈಕೋರ್ಟ್ಗಳಿಗೆ ನಿರ್ದೇಶನ ನೀಡಿತು. ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ನ್ಯಾಯಾಲಯದ ತಿರಸ್ಕಾರವೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ತಿಳಿಸಿದೆ. ಇದನ್ನೂ ಓದಿ: ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ರಾಜ್ಯ ಸರ್ಕಾರಗಳು ನಮ್ಮ ವಿವರವಾದ ಶಿಫಾರಸುಗಳನ್ನು ಪರಿಶೀಲಿಸಿ, ಭಾರತೀಯ ಸಂಸ್ಥೆ ಸಲ್ಲಿಸಿದ ವರದಿಯನ್ನು ಅಧ್ಯಯನ ಮಾಡಿ, ಆದಷ್ಟು ಬೇಗ ಅದನ್ನು ಜಾರಿಗೆ ತರಬೇಕು. ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಇರುವ ವಿಚಾರಣೆಯ ಸ್ಥಿತಿಗತಿಯನ್ನು ತಿಳಿಸಲು ದೇಶಾದ್ಯಂತದ ಹೈಕೋರ್ಟ್ಗಳಿಗೆ ನಿರ್ದೇಶನ ನೀಡಲಾಗಿದೆ. 6 ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ದಿನನಿತ್ಯದ ವಿಚಾರಣೆಯನ್ನು ನಡೆಸಲು ನಿರ್ದೇಶನಗಳನ್ನು ನೀಡಬೇಕು ಎಂದು ಪೀಠ ಆದೇಶಿಸಿತು. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

    ಕಠಿಣ ಕಾನೂನುಗಳ ಹೊರತಾಗಿಯೂ ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ ಮತ್ತು ಬಲವಂತದ ಬಾಲ ಕಾರ್ಮಿಕ ಪದ್ಧತಿ ಹೆಚ್ಚುತ್ತಿದೆ. 2020ರಿಂದ ಸುಮಾರು 36,000 ಮಕ್ಕಳು ಪತ್ತೆಯಾಗುತ್ತಿಲ್ಲ ಎಂದು ಕೇಂದ್ರವು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಮಾನಸಿಕ ಅಸ್ವಸ್ಥ: ಮುಂಬೈ ಪೊಲೀಸ್

  • ನಾಲ್ಕೈದು ಲಕ್ಷಕ್ಕೆ ಮಾರಾಟ- ಸಿಬಿಐ ದಾಳಿ ಮಾಡಿ ನವಜಾತ ಶಿಶುಗಳ ರಕ್ಷಣೆ

    ನಾಲ್ಕೈದು ಲಕ್ಷಕ್ಕೆ ಮಾರಾಟ- ಸಿಬಿಐ ದಾಳಿ ಮಾಡಿ ನವಜಾತ ಶಿಶುಗಳ ರಕ್ಷಣೆ

    ನವದೆಹಲಿ: ಮಕ್ಕಳ ಕಳ್ಳಸಾಗಣೆ (Child Trafficking) ಪ್ರಕರಣ ಸಂಬಂಧ ದೆಹಲಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಈ ಪ್ರಕರಣ ಸಂಬಂಧ ಕೆಲವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

    ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಶುಕ್ರವಾರ ಸಂಜೆ ದೆಹಲಿ-ಎನ್‌ಸಿಆರ್‌ನ ಹಲವೆಡೆ ಸಿಬಿಐ ದಾಳಿ ನಡೆಸಿತ್ತು. ದಾಳಿ ವೇಳೆ ಸಿಬಿಐ ತಂಡ ಕೇಶವಪುರಂನ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಿಸಿದೆ.

    ಸದ್ಯ ಸಿಬಿಐ ತಂಡ ಈ ಪ್ರಕರಣದಲ್ಲಿ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಹಾಗೂ ಖರೀದಿಸಿದ ವ್ಯಕ್ತಿಯ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಕೆಲವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಕರಾವಳಿಯಲ್ಲಿ ನಕ್ಸಲರ ಚಲನವಲನ – ಕಡಬದ ಮನೆಗೆ ಬಂದು ಊಟ ಮಾಡಿದ ಶಂಕಿತರು

    ನಾಲ್ಕೈದು ಲಕ್ಷಕ್ಕೆ ಮಕ್ಕಳ ಮಾರಾಟ: ಸಿಬಿಐ (CBI) ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು 10 ಮಕ್ಕಳನ್ನು ಮಾರಾಟ ಮಾಡಲಾಗಿದೆ. ಈ ಗ್ಯಾಂಗ್ ನ ನಂಟುಗಳು ಹಲವು ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಮಾಹಿತಿ ಪ್ರಕಾರ ನವಜಾತ ಶಿಶುಗಳನ್ನು 4 ರಿಂದ 5 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.

    ದೆಹಲಿಯ ಕೆಲವು ದೊಡ್ಡ ಆಸ್ಪತ್ರೆಗಳಿಂದ ಮಕ್ಕಳು ಕಾಣೆಯಾಗಿದ್ದಾರೆ ಎಂಬ ವರದಿಗಳು ಬಂದಿವೆ. ನಂತರ ಸಿಬಿಐ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ಮಹಿಳೆ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮಕ್ಕಳ ವ್ಯಾಪಾರದ ಬಗ್ಗೆ ಮಾಹಿತಿ ಪಡೆದ ಸಿಬಿಐ, ನಾಪತ್ತೆಯಾದ ಮಕ್ಕಳೊಂದಿಗೆ ಸಂಪರ್ಕ ಸಾಧಿಸಿ ದಾಳಿ ನಡೆಸಿತು.

  • ಮಕ್ಕಳ ಮಾರಾಟ ಪ್ರಕರಣ- ತರಕಾರಿ ಮಾರುತ್ತಲೇ ಡೀಲ್ ಮಾಡುತ್ತಿದ್ದ ಮಹಾಲಕ್ಷ್ಮಿ

    ಮಕ್ಕಳ ಮಾರಾಟ ಪ್ರಕರಣ- ತರಕಾರಿ ಮಾರುತ್ತಲೇ ಡೀಲ್ ಮಾಡುತ್ತಿದ್ದ ಮಹಾಲಕ್ಷ್ಮಿ

    ಬೆಂಗಳೂರು: ಹಸುಗೂಸುಗಳ ಮಾರಾಟ (Child Trafficking) ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ (Mahalakshmi) ಎಂಬಾಕೆ ತರಕಾರಿ ಮಾರಾಟ (Vegetable Selling) ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಆರೋಪಿ ಮಹಾಲಕ್ಷ್ಮಿ ಹಸುಗೂಸುಗಳನ್ನು ಮಾರಾಟ ಮಾಡಿ ಲಕ್ಷಲಕ್ಷ ದುಡ್ಡು ಮಾಡಿದ್ದರೂ ಬಡವರು ಎನ್ನುವಂತಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ತರಕಾರಿ ಮಾರುತ್ತಿದ್ದ ಈಕೆ, ತರಕಾರಿ ಮಾರಾಟ ಮಾಡುತ್ತಲೇ ಹಲವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. ಇದನ್ನೂ ಓದಿ: ಬೈಕ್ ಡಿಕ್ಕಿ- ವೃದ್ಧನ ತಲೆಯಲ್ಲಿದ್ದ ದಿನಸಿ ಚೀಲಕ್ಕೆ ಕೈತಾಗಿ ಬಿದ್ದಾಕೆಯ ಮೇಲೆ ಹರಿದ ಬಸ್!

    ಬಳಿಕ ಅವರ ನಂಬರ್ ಪಡೆದು ಪ್ರತಿನಿತ್ಯ ಮಾತನಾಡಲು ಶುರುಮಾಡುತ್ತಿದ್ದಳು. ನಂತರ ಮಕ್ಕಳು ಬೇಕು ಎಂದವರಿಗೆ ನನಗೆ ಪರಿಚಯ ಇರುವವರ ಬಳಿ ಸಿಗುತ್ತದೆ ಎಂದು ಹೇಳಿ ಅವರು ಓಕೆ ಅಂದರೆ ಆರೋಪಿಗಳ ಪೈಕಿ ತಮಿಳುನಾಡಿನ (Tamil Nadu) ರಾಧಾಳಿಗೆ ಕರೆ ಮಾಡುತ್ತಿದ್ದಳು. ಅಲ್ಲಿಂದ ಮಕ್ಕಳ ಫೋಟೋಗಳನ್ನು ಕಳುಹಿಸಿಕೊಂಡು ಮಹಾಲಕ್ಷ್ಮಿ ಡೀಲ್ ಮಾಡುತ್ತಿದ್ದು, ತರಕಾರಿ ಮಾರುತ್ತಲೇ ಗಾಳ ಹಾಕುತ್ತಿದ್ದಳು. ಇದನ್ನೂ ಓದಿ: ಮದುವೆ ಒಪ್ಪಂದಕ್ಕೆ ಒಪ್ಪದ ಶಿಕ್ಷಕಿಯ ಅಪಹರಣ

    ಇದೀಗ ಮಕ್ಕಳ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅದರಲ್ಲಿ ಕರ್ನಾಟಕದ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದುವರೆಗೆ 10 ಮಕ್ಕಳ ಬಗ್ಗೆ ಮಾತ್ರ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು, ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಲು ಸಿಗರೇಟ್‌ಗೆ ಸೀಕ್ರೆಟ್ ರೂಮ್‌ – ಬ್ರ‍್ಯಾಂಡೆಡ್ ಹೆಸರಿನ ನಕಲಿ ಸಿಗರೇಟ್ ಸೀಜ್..!

    ಭ್ರೂಣ ಹತ್ಯೆ (Foeticide) ಮತ್ತು ಮಕ್ಕಳ ಮಾರಾಟ ಜಾಲ ಪ್ರಕರಣ ಹೆಚ್ಚಿದ ಹಿನ್ನೆಲೆ ಮಕ್ಕಳ ಆಯೋಗ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯನ್ನು ವರದಿ ಕೇಳಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ನೀಡುವಂತೆ ಸರ್ಕಾರವನ್ನು ಕೇಳಿದೆ. ಪಿಸಿ ಮತ್ತು ಪಿನ್ ಡಿಟಿ ಕಾಯ್ದೆ ಅಡಿ ಮೇಲ್ವಿಚಾರಣೆ ಮಂಡಳಿ, ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿ, ರಾಜ್ಯ ತಪಾಸಣಾ, ಮೇಲ್ವಿಚಾರಣಾ ಸಮಿತಿ ಇದ್ದರೂ ಭ್ರೂಣ ಹತ್ಯೆ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಷ್ಟು ತಪಾಸಣೆ ಮಾಡಿದ್ದೀರಾ? ಎಷ್ಟು ಕ್ರಮ ಆಗಿದೆ ಎಂದು ಮಕ್ಕಳ ಆಯೋಗ ವರದಿ ಕೇಳಿದೆ. ಅಲ್ಲದೇ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ಕೊಟ್ಟು ಕ್ರಮ ವಹಿಸಲು ಆಗ್ರಹಿಸಿದೆ. ಮಕ್ಕಳ ಮಾರಾಟ ಜಾಲದ ವಿರುದ್ಧ ಇದುವರೆಗೂ ಏನು ಕ್ರಮ ಆಗಿದೆ ಎಂಬುದರ ಬಗ್ಗೆಯೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಕೇಳಿದೆ. ಇದನ್ನೂ ಓದಿ: ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ರೈತ – ಮೈಮೇಲೆ ಟ್ರ್ಯಾಕ್ಟರ್ ಹರಿದು ಸಾವು

  • ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ

    ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ

    ಬೆಂಗಳೂರು: ಮಕ್ಕಳ ಕಳ್ಳಸಾಗಾಣಿಕೆ (Child Trafficking) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ಹಸುಗೂಸು ಮಾರಾಟ ದಂಧೆಯನ್ನು ಭೇದಿಸಿದ್ದಾರೆ. ಇನ್ನೂ ಈ ಗ್ಯಾಂಗ್‌ನಲ್ಲಿದ್ದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿ ನೀಡಲಾಗಿದೆ.

    ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ಶರಣ್ಯ, ರಾಧ, ಸುಹಾಸಿನಿ, ಮಹಾಲಕ್ಷ್ಮಿ, ಗೋಮತಿ, ಹೇಮಲತಾ, ಕಣ್ಣನ್ ರಾಮಸ್ವಾಮಿ ಎಂಬವರನ್ನು ಬಂಧಿಸಲಾಗಿದೆ. ಈ 7 ಆರೋಪಿಗಳ ಪೈಕಿ ಮಹಾಲಕ್ಷ್ಮಿ ಮತ್ತು ರಾಧ ಪ್ರಮುಖ ಆರೋಪಿಗಳಾಗಿದ್ದಾರೆ. ಮಹಾಲಕ್ಷ್ಮಿ ಮಗು ಯಾರಿಗೆ ಬೇಕು ಎನ್ನುವುದನ್ನು ಹುಡುಕಿ ಡೀಲ್ ಮಾಡಿದರೇ ರಾಧ ಎಲ್ಲಿ ಮಗು ಇದೆ ಎಂಬುದನ್ನು ಹುಡುಕಿ ಅಲ್ಲಿಂದ ಡೀಲ್ ಮಾಡಿ ಮಹಾಲಕ್ಷ್ಮಿ ಹೇಳಿದ ಕಡೆಗೆ ಶರಣ್ಯ ಮತ್ತು ಇತರರ ಮೂಲಕ ಕಳುಹಿಸುತ್ತಿದ್ದಳು. ಇದನ್ನೂ ಓದಿ: ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ

    ಶರಣ್ಯ: ಈಕೆ ರಾಧ ಮಗು ಸೇಲ್ ಮಾಡುವಾಗ ಜೊತೆಗೆ ಹೋಗುತ್ತಿದ್ದಳು ಮತ್ತು ಮಗುವನ್ನು ಸೇಲ್ ಮಾಡಿದ ನಂತರ ಹಣವನ್ನು ಪಡೆಯುವುದು ಈಕೆಯ ಕೆಲಸವಾಗಿತ್ತು.

    ಸುಹಾಸಿನಿ: ಈಕೆ ಸರೋಗೆಸಿ ಏಜೆಂಟ್ ಮಕ್ಕಳು ಯಾರಿಗೆ ಬೇಕು ಮತ್ತು ಮಕ್ಕಳನ್ನು ಯಾರು ಕೊಡುತ್ತಾರೆ ಎನ್ನುವುದನ್ನು ಫೋಟೊಗಳ ಸಹಿತ ಕೆಲಸ ಮಾಡುತ್ತಿದ್ದಳು.

    ರಾಧ: ಹೇಮಲತ ಮತ್ತು ಶರಣ್ಯನನ್ನು ಕಳುಹಿಸಿ ಹಣ ಪಡೆಯುವುದು ಮತ್ತೆ ಮಗುವನ್ನು ಕೊಟ್ಟುಬರುವ ಕೆಲಸ ಈಕೆ ಮಾಡಿಸುತ್ತಿದ್ದಳು. ಈಕೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ಮಗುವನ್ನು ಮಾಡಿಕೊಂಡು ಸಾಕಲು ಆಗಲ್ಲಾ ಎನ್ನುವವರನ್ನು ಟಾರ್ಗೆಟ್ ಮಾಡಿ ಸಂಪರ್ಕ ಮಾಡುತ್ತಿದ್ದಳು.

    ಕಣ್ಣನ್ ರಾಮಸ್ವಾಮಿ: ಈತ ಸಹ ಒರ್ವ ಏಜೆಂಟ್ ಆಗಿದ್ದು, ಮಹಾಲಕ್ಷ್ಮಿ ಮಗು ಬೇಕು ಎಂದು ರಾಧಗೆ ಹೇಳಿದಾಗ ರಾಧ ಕಣ್ಣನ್‌ಗೆ ಮಾಹಿತಿ ನೀಡುತ್ತಾಳೆ. ಆಗ ಕಣ್ಣನ್ ಈ ವಿಚಾರವನ್ನು ಗೋಮತಿಗೆ ಹೇಳುತ್ತಿದ್ದ. ಗೋಮತಿ ಮಗುವಿನ ತಾಯಿಗೆ ಸಂಪರ್ಕ ಮಾಡುತ್ತಿದ್ದಳು.

    ಮಹಾಲಕ್ಷ್ಮಿ: ಈಕೆ ಕರ್ನಾಟಕದಲ್ಲಿ ಮಗು ಯಾರಿಗೆ ಬೇಕು ಎಂದು ಮಾಹಿತಿ ಪಡೆದು ನಂತರ ಆ ಮಾಹಿತಿಯನ್ನು ತಮಿಳುನಾಡಿನ (Tamil Nadu) ಗ್ಯಾಂಗ್‌ಗೆ ಹೇಳುತ್ತಿದ್ದಳು. ಆಗ ತಮಿಳುನಾಡಿನ ಗ್ಯಾಂಗ್ ಕೆಲಸ ಶುರು ಮಾಡುತ್ತಿತ್ತು.

    ಗೋಮತಿ: ಈಕೆ ತಮಿಳುನಾಡಿನಿಂದ ಮಗು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಬರುತ್ತಿದ್ದಳು.

    ಹೇಮಲತಾ: ರಾಧ ಹೇಳಿದಂತೆ ಮಗುವನ್ನು ತಂದು ಕೊಡುವ ಕೆಲಸ ಈಕೆಯದಾಗಿತ್ತು. ರಾಧ ಹೇಳುತ್ತಿದ್ದ ಪ್ರತಿಯೊಂದು ಕೆಲಸವನ್ನು ಈಕೆ ಮಾಡುತ್ತಿದ್ದಳು.

    ಇದಾದ ಬಳಿಕ ಆರೋಪಿಗಳು ಗರ್ಭಿಣಿಯರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಮಹಿಳೆಯರನ್ನು ಮನವೊಲಿಸಿ ಕರೆದುಕೊಂಡು ಹೋಗಿ ಅವರಿಗೆ ಇರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಹೀಗೆ ಮಗು ಹುಟ್ಟುವವರೆಗೆ ಕಾದು ಹೆರಿಗೆ ಮಾಡಿಸುತ್ತಾರೆ. ನಂತರ ಮಗುವಿನ ಫೋಟೋವನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಯಾರು ಮಕ್ಕಳು ಇಲ್ಲ ಎಂದು ಹುಡುಕುತ್ತಾರೋ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರಿಗೆ ಮಗುವಿನ ಫೋಟೋ ಕಳುಹಿಸಿ ಡೀಲ್ ಮಾಡುತ್ತಾರೆ. ಅಲ್ಲದೇ ಮಗುವಿಗೆ ಬೇಕಾದ ದಾಖಲಾತಿ ಸೃಷ್ಟಿ ಮಾಡುತ್ತಾರೆ. ಮಕ್ಕಳು ಹೇಗಿದ್ದಾರೆ? ಯಾವ ಬಣ್ಣ? ಲಿಂಗ ಯಾವುದು ಎಂಬ ಆಧಾರದ ಮೇಲೆ ಹಣವನ್ನು ನಿಗದಿ ಮಾಡಲಾಗುತ್ತದೆ. ಗಂಡು ಮಕ್ಕಳಾದರೆ 5ರಿಂದ 10 ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಾರೆ. ಹೆಣ್ಣುಮಗುವಾದರೆ 4ರಿಂದ 5 ಲಕ್ಷದವರೆಗೂ ಮಾರಾಟ ಮಾಡಲಾಗುತ್ತದೆ. ಮಗುವನ್ನು ಹೆತ್ತುಕೊಟ್ಟ ತಾಯಂದಿರಿಗೆ ಒಂದೂವರೆಯಿಂದ 2 ಲಕ್ಷ ರೂ. ಹಣ ನೀಡಿ ಕಳುಹಿಸುತ್ತಾರೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಇದಕ್ಕೂ ಮೊದಲು ಆರೋಪಿಗಳು ಡೋನರ್‌ಗಳನ್ನು ಕರೆದುಕೊಂಡು ಹೋಗಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಕಾಯ್ದೆ ಕಠಿಣ ಆಗಿತ್ತು. ಸೆರೋಗೆಸಿ ಕಾಯ್ದೆ ಕಠಿಣ ಆದ ಬಳಿಕ ಇವರೆಲ್ಲರಿಗೂ ಏಜೆಂಟ್ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಂತರ ಐವಿಎಫ್ ಆಸ್ಪತ್ರೆಗೆ ಡೋನರ್‌ಗಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಒಂದು ಡೋನರ್‌ಗೆ 25,000 ಕಮಿಷನ್ ಪಡೆಯುತ್ತಿರುತ್ತಾರೆ. ಡೋನರ್ ಮತ್ತು ಎಗ್ಸ್ ಪಡೆಯುವವರು ಭೇಟಿಯಾಗಬೇಕು ಎಂದರೆ ಅದನ್ನು ಮಾಡಿಸುತ್ತಿರಲಿಲ್ಲಾ. ಆರೋಪಿಗಳು ತಾವು ಕುಟುಂಬ ಎಂದು ಸಹಿ ಮಾಡುತ್ತಿದ್ದರು. 25-35 ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆ ಮಹಿಳೆಯರು ಸಿಕ್ಕಿಲ್ಲಾ ಎಂದಾಗ ಆಧಾರ್ ಕಾರ್ಡ್ ನಕಲಿ ಮಾಡಿ ಕೆಲಸ ಮಾಡಲಾಗುತ್ತಿತ್ತು. ತಮಿಳುನಾಡಿನ ಆಸ್ಪತ್ರೆ ಕೇಸ್ ಆದ ಬಳಿಕ ಈ ದಂಧೆಯೂ ಕಷ್ಟ ಆಯಿತು. ನಂತರ ಗರ್ಭಿಣಿರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನವೆಂಬರ್ 26ರಂದು ಆರ್‌ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅನುಮಾನದಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. 20 ದಿನದ ನವಜಾತ ಶಿಶುವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದರು. ಈ ಗ್ಯಾಂಗ್‌ನಲ್ಲಿ 7 ಜನ ಆರೋಪಿಗಳಿದ್ದಾರೆ. ಇವರು ಮಹಿಳೆಯರನ್ನು ಪುಸಲಾಯಿಸಿ ಮಗುವನ್ನು ಹೆತ್ತುಕೊಡಲು ಒಪ್ಪಿಸಿದ್ದರು. ಹಣಕ್ಕಾಗಿ ಬಾಡಿಗೆ ತಾಯಿಯನ್ನು ಮಾಡುತ್ತಿದ್ದರು. ಇದುವರೆಗೆ ಈ ಗ್ಯಾಂಗ್ 10 ಮಕ್ಕಳನ್ನು ಮಾರಾಟ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್

    8ರಿಂದ 10 ಲಕ್ಷ ರೂ.ಗೆ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು. ಅನಧಿಕೃತವಾಗಿ ದಾಖಲಾತಿಗಳನ್ನು ಮಾಡಿಕೊಡಲಾಗುತಿತ್ತು. ತಮಿಳುನಾಡಿನ ಪ್ರತಿಷ್ಠಿತ ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನ 4 ಆಸ್ಪತ್ರೆಗಳು ಇದರಲ್ಲಿ ಭಾಗಿಯಾಗಿದೆ. ಈಗಾಗಲೇ 3 ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, 1 ಆಸ್ಪತ್ರೆಯಲ್ಲಿ ಇನ್ನೂ ಈ ಅವ್ಯವಹಾರ ನಡೆಯುತ್ತಿದೆ. ಅಲ್ಲಿನ ಬಡ ಹೆಣ್ಣುಮಕ್ಕಳಿಗೆ ಪುಸಲಾಯಿಸಿ ಈ ರೀತಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಡಾಕ್ಟರ್‌ಗಳ ಬಂಧನ ಆಗಬೇಕು ಎಂದರು. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ

  • 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಲಂಡನ್: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಓಟಗಾರ ಮೊ ಫರಾ ತಮ್ಮ 9ನೇ ವಯಸ್ಸಿನಲ್ಲಿ ಜಿಬೌಟಿಯಿಂದ ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತಾನು ಹಿಂದೆಂದೂ ಭೇಟಿಯಾಗದ ಮಹಿಳೆ ತನ್ನ ನಕಲಿ ಪ್ರಯಾಣದ ದಾಖಲೆಗಳನ್ನು ಸೃಷ್ಟಿಸಿ ಬ್ರಿಟನ್‌ಗೆ ಕರೆದೊಯ್ದಿದ್ದಳು. ತನ್ನ ಹೊಟ್ಟೆಪಾಡಿಗಾಗಿ ಅಲ್ಲಿ ಮನೆಕೆಲಸ ಹಾಗೂ ಮಕ್ಕಳನ್ನು ಆರೈಕೆ ಮಾಡಲು ಒತ್ತಾಯಿಸಲಾಗಿತ್ತು. ಮಾತ್ರವಲ್ಲದೇ ತನ್ನ ನಿಜ ಹೆಸರು ಹುಸೇನ್ ಅಬ್ದಿ ಕಹಿನ್‌ನಿಂದ ಮೊಹಮ್ಮದ್ ಫರಾ ಎಂದು ಬದಲಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

    ತಾನು ಬ್ರಿಟನ್‌ಗೆ ಬಂದ ಬಳಿಕ ಮಹಿಳೆ ಪಶ್ಚಿಮ ಲಂಡನ್‌ನ ಹೌನ್ಸ್ಲೋನಲ್ಲಿರುವ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಳು. ತನ್ನ ಸಂಬಂಧಿಕರ ಸಂಪರ್ಕದ ದಾಖಲೆಗಳನ್ನು ಆಕೆ ಹರಿದು ಹಾಕಿದ್ದಳು. ತನಗೆ 12 ವರ್ಷಗಳ ವರೆಗೂ ಆಕೆ ಶಾಲೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹಿಂದಿನ ಘಟನೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಈ ಸಂದರ್ಭ ನನಗೆ ಅಲ್ಲಿಂದ ಹೊರ ಬರಬೇಕಿತ್ತು. ಆಗಾಗ ನಾನು ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡು ಅಳುತ್ತಿದ್ದೆ. ಬಳಿಕ ನಾನು ಈ ಪರಿಸ್ಥಿತಿಯಿಂದ ಓಡಿ ಹೋಗುವ ನಿರ್ಧಾರ ಮಾಡಿದೆ. ನನಗೆ ಆಗ ದೈಹಿಕ ಶಿಕ್ಷಕ ಅಲನ್ ವಾಟ್ಕಿನ್ಸನ್ ಅವರ ಪರಿಚಯವಾಗಿ, ಅವರು ನನಗಾಗಿ ಸಾಮಾಜಿಕ ಸೇವಾ ಕೇಂದ್ರವನ್ನು ಸಮಪರ್ಕಿಸಿದರು. ನನ್ನನ್ನು ಸಾಕಲು ಸೋಮಾಲಿ ಸಮುದಾಯದ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು ಎಂದರು.

    ಅವರ ಸಹಾಯದಿಂದ ನನಗೆ ನನ್ನ ಭುಜದಿಂದ ಒಂದು ದೊಡ್ಡ ಹೊರೆ ಇಳಿದಂತಾಗಿತ್ತು. ನನ್ನಂತಹ ಅದೆಷ್ಟೋ ಮಕ್ಕಳು ಇದೇ ರೀತಿ ಕಳ್ಳಸಾಗಣೆಗೊಳಪಟ್ಟಿದ್ದಾರೆ. ಆದರೆ ನಾನೊಬ್ಬ ಅದೃಷ್ಟಶಾಲಿಯಾಗಿದ್ದೆ. ಇದರಿಂದ ನಾನು ಉಳಿದುಕೊಂಡೆ, ಇತರರಿಗಿಂತ ಭಿನ್ನವಾದೆ ಎಂದು ಹೇಳಿದರು. ಇದನ್ನೂ ಓದಿ: ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    2012 ಹಾಗೂ 2016ರ ಒಲಿಂಪಿಕ್‌ನಲ್ಲಿ 5,000 ಹಾಗೂ 10,000 ಮೀ.ನ ಓಟದಲ್ಲಿ ಗೆದ್ದಿರುವ ಫರಾ ಈ ಬಾರಿ ಅಕ್ಟೋಬರ್‌ನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಲಂಡನ್‌ನ 10,000 ಮೀ. ಓಟದಲ್ಲಿ ರನ್ನರ್ ಅಪ್ ಆದ ಫರಾ ಈ ತಿಂಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಮೇ ತಿಂಗಳಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಶೀಘ್ರವೇ ವಿದಾಯ ಹೇಳುವ ಸುಳಿವನ್ನು ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]