Tag: child marriage

  • 15 ವರ್ಷದ ಬಾಲಕಿ ವಿವಾಹವಾಗಿ ಸಿಕ್ಕಿಬಿದ್ದ ಗ್ರಾಮ ‌ಪಂಚಾಯಿತಿ ಅಧ್ಯಕ್ಷ

    15 ವರ್ಷದ ಬಾಲಕಿ ವಿವಾಹವಾಗಿ ಸಿಕ್ಕಿಬಿದ್ದ ಗ್ರಾಮ ‌ಪಂಚಾಯಿತಿ ಅಧ್ಯಕ್ಷ

    – ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

    ಚಿಕ್ಕೋಡಿ: ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಚಿವ ಸತೀಶ್‌ ಜಾರಕಿಹೊಳಿ‌ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸ್ಸಾಪುರ ಗ್ರಾಮ ಇದು.

    ಬಸ್ಸಾಪುರ ಗ್ರಾಪಂ ಅಧ್ಯಕ್ಷ ‌ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಬಾಲ್ಯ ವಿವಾಹ ಮಾಡಿಕೊಂಡ ಗ್ರಾಪಂ ಅಧ್ಯಕ್ಷ ಭೀಮಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 2023ರ ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ.

    ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಾಟ ನಡೆಸುತ್ತಿದ್ದಾನೆ‌. ದೂರು ಬಂದ ತಕ್ಷಣವೇ ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಸಲ ಮಕ್ಕಳ ರಕ್ಷಣಾ ತಂಡ ಹೋಗಿದೆ. ಜಿಲ್ಲಾ ‌ಮಕ್ಕಳ ರಕ್ಷಣಾಧಿಕಾರಿ ಡಾ. ಪ್ರವೀಣ ನೇತೃತ್ವದ ತಂಡ ನಾಲ್ಕು ಸಲ ಬಸ್ಸಾಪುರಕ್ಕೆ ಭೇಟಿ ನೀಡಿದೆ. ಆದರೂ, ಬಾಲಕಿ ಪತ್ತೆಹಚ್ಚಲು ಮಕ್ಕಳ ರಕ್ಷಣಾ ‌ತಂಡ ವಿಫಲವಾಗಿದೆ. ಈ ಮಧ್ಯೆಯೇ ಆಕೆ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನು ಅಧ್ಯಕ್ಷ ಬಿಡುಗಡೆ ಮಾಡಿದ್ದ.

    ಅಧ್ಯಕ್ಷ ಬಂಧನದ ಭೀತಿಯಿಂದ ‌ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿದ್ದ ಎನ್ನಲಾಗಿದೆ. ಶಾಲಾ‌ ಟ್ರಾನ್ಸ್‌ಫರ್ ಸರ್ಟಿಫಿಕೇಟ್ ಜೊತೆಗೆ ಹೊಸ ಜನನ ಪ್ರಮಾಣದ ‌ದಾಖಲೆ‌ ಹೋಲಿಕೆ ಮಾಡಿದ ಅಧಿಕಾರಿಗಳು‌, ಗ್ರಾಪಂ ಅಧ್ಯಕ್ಷ ‌ಭೀಮಶಿ ಕಾಲಿಮಣಿ ಬಾಲ್ಯ ವಿವಾಹ ಆಗಿರುವುದು ದೃಢವಾಗಿದೆ. ಕೃತ್ಯ‌ ಎಸಗಿರುವುದು ದೃಢವಾದ ಹಿನ್ನೆಲೆಯಲ್ಲಿ ಗ್ರಾಪಂ ‌ಅಧ್ಯಕ್ಷನ‌ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ.

  • ವಿಧಾನ ಪರಿಷತ್‌ನಲ್ಲಿ ಬಾಲ್ಯವಿವಾಹ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಪಾಸ್

    ವಿಧಾನ ಪರಿಷತ್‌ನಲ್ಲಿ ಬಾಲ್ಯವಿವಾಹ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಪಾಸ್

    ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆ ಹಾಗೂ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ವಿಧಾನ ಪರಿಷತ್‌ನಲ್ಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರೊಂದಿಗೆ ಸಾಮಾಜಿಕ ಪೀಡುಗಾಗಿರುವ ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿ ನಿಷೇಧಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.

    ಮುಂಗಾರು ಅಧಿವೇಶನದ 7ನೇ ದಿನವಾದ ಬುಧವಾರ (ಆ.20) ವಿಧಾನ ಪರಿಷತ್‌ನಲ್ಲಿ ಈ ಎರಡೂ ಕಾಯ್ದೆಗಳ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆಸಲಾಯಿತು.ಇದನ್ನೂ ಓದಿ: ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್

    ಕರ್ನಾಟಕದಲ್ಲಿ ಬಾಲ್ಯವಿವಾಹ ಎಂಬುದು ಸಾಮಾಜಿಕ ಪೀಡುಗಾಗಿದ್ದು, ಯಾವುದೇ ಸರ್ಕಾರಗಳು ಬಂದರೂ, ಕಠಿಣ ಕಾನೂನು ತಂದರೂ ಇದುವರೆಗೂ ಸಂಪೂರ್ಣ ತಡೆ ಸಾಧ್ಯವಾಗಿಲ್ಲ. ಬಾಲ್ಯವಿವಾಹವನ್ನು ಬೇರು ಸಮೇತ ಕಿತ್ತೊಗೆಯಬೇಕು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದೆ.

    ಹೊಸ ಕಾಯ್ದೆಯ ನಿಯಮಗಳ ಪ್ರಕಾರ, ನಿಶ್ಚಿತಾರ್ಥ ಮಾಡಿದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ಒಂದು ಲಕ್ಷ ರೂ. ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗುವುದು. ಜೊತೆಗೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ.

    ಬಳಿಕ ಕರ್ನಾಟಕ ದೇವದಾಸಿ ಪದ್ಧತಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ದೇವದಾಸಿ ಪದದ ನಿರ್ದಿಷ್ಟ ವ್ಯಾಖ್ಯಾನವನ್ನು ಈ ಕಾಯ್ದೆಯಲ್ಲಿ ಮಾಡಲಾಗಿದ್ದು, ಇದರಿಂದ ನೈಜ ಫಲಾನುಭವಿಯನ್ನು ಗುರುತಿಸಲು ಹಾಗೂ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗೆ ನೆರವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.ಇದನ್ನೂ ಓದಿ: ಅಫ್ಘಾನಿಸ್ತಾನ | ಬಸ್‌ಗೆ ಬೆಂಕಿ ತಗುಲಿ 17 ಮಕ್ಕಳು ಸೇರಿ 76 ಮಂದಿ ಸುಟ್ಟು ಕರಕಲು

  • ಪೋಷಕರಿಗೆ ಸೆಡ್ಡು – ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನೇ ನಿಲ್ಲಿಸಿದ ಬಾಲಕಿ

    ಪೋಷಕರಿಗೆ ಸೆಡ್ಡು – ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನೇ ನಿಲ್ಲಿಸಿದ ಬಾಲಕಿ

    – ಎಸ್‌ಎಸ್‌ಎಲ್‌ಸಿಯಲ್ಲಿ 94% ಅಂಕ ಪಡೆದಿದ್ದ ವಿದ್ಯಾರ್ಥಿನಿ
    – ಮನೆಗೆ ಅಧಿಕಾರಿಗಳ ಭೇಟಿ, ಶಿಕ್ಷಣಕ್ಕೆ ಸಹಾಯ

    ಬಳ್ಳಾರಿ: ಪೋಷಕರ ನಿರ್ಧಾರಕ್ಕೆ ಸೆಡ್ಡು ಹೊಡೆದು ಬಾಲಕಿಯೇ ತನ್ನ ಬಾಲ್ಯ ವಿವಾಹವನ್ನು ನಿಲ್ಲಿಸಿದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

    ಪೋಷಕರು ವಿವಾಹ ಮಾಡುತ್ತಿರುವ ವಿಚಾರ ಗೊತ್ತಾಗಿ ಬಾಲಕಿಯೇ ಧೈರ್ಯ ಮಾಡಿ ತನ್ನ ಮದುವೆ ನಿಲ್ಲಿಸಿ ಎಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಳು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದ ತಹಶೀಲ್ದಾರ್‌, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮದುವೆಗೆ ಬ್ರೇಕ್ ಹಾಕಿದ್ದಾರೆ.

     

    ಎಸ್‌ಎಸ್‌ಎಲ್‌ಸಿಯಲ್ಲಿ 94% ಅಂಕ ಪಡೆದಿದ್ದ ಬಾಲಕಿ ಉನ್ನತ ವ್ಯಾಸಂಗದ ಕನಸು ಕಂಡಿದ್ದಳು. ಆದರೆ ಪೋಷಕರು ಮದುವೆ ಮಾಡಿ ಕೈ ತೊಳೆದುಕೊಳ್ಳಲು ಯೋಚನೆ ಮಾಡಿದ್ದರು. ಹುಡುಗನನ್ನು ನೋಡಿ ಇನ್ನೇನು ಒಂದು ತಿಂಗಳೊಳಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು.   ಇದನ್ನೂ ಓದಿ: ಟೀಚರ್ಮೇಲೆ ಸಿಕ್ಕಾಪಟ್ಟೆ ಲವ್ ದೂರು ನೀಡಿದ್ದಕ್ಕೆ ಪೆಟ್ರೋಲ್ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ತನ್ನ ಮದುವೆಯಾಗಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆಕೆ ಧೈರ್ಯ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ತಕ್ಷಣ ಎಚ್ಚೆತ್ತ ಹಗರಿಬೊಮ್ಮನಹಳ್ಳಿಯ ತಾಲೂಕು ಆಡಳಿತ ಬಾಲಕಿ ಮನೆಗೆ ದೌಡಾಯಿಸಿದ್ದಾರೆ.

    ಪೋಷಕರಿಗೆ ಬುದ್ಧಿ ಹೇಳುವ ಮೂಲಕ ಅಧಿಕಾರಿಗಳು ಬಾಲಕಿಗೆ ಕಾಲೇಜೊಂದರಲ್ಲಿ ಸೀಟ್ ಕೊಡಿಸಿ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದಾರೆ. ಬಾಲಕಿಯ ದಿಟ್ಟ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

  • ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್

    ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್

    – ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ

    ಬೆಂಗಳೂರು: ಶಾಲಾ – ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆ (Women’s Safety) ದೃಷ್ಟಿಯಿಂದ ಮಹಿಳಾ ಪೊಲೀಸ್ ಒಳಗೊಂಡ ಅಕ್ಕ ಪಡೆ (Akka Pade) ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

    ಮಳೆಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗಸ್ಟ್ 15ರಿಂದ ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ತೆಲಂಗಾಣ | ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ

    ಕೆಲವು ಸಮುದಾಯ ಮತ್ತು ಪಂಗಡಗಳಲ್ಲಿ ಆಚರಣೆಯಲ್ಲಿರುವ ಸಾಮಾಜಿಕ ಪದ್ಧತಿಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಇದರಿಂದಾಗಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದ ಹೆಸರು ಹಾಳು ಮಾಡೋಕೆ ನೋಡಿದವರು ಯಾರು ಅಂತ ಗೊತ್ತಾಗ್ಬೇಕು: ಬೇಳೂರು ಗೋಪಾಲಕೃಷ್ಣ

    ಬಾಲ್ಯವಿವಾಹಗಳನ್ನು ತಡೆಗಟ್ಟಲು ಸರ್ಕಾರ ಈಗಾಗಲೇ ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ (ಸಿಡಬ್ಲ್ಯುಸಿ) ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 4 ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಸಿಡಬ್ಲ್ಯುಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ | ರಾಜ್ಯಾದ್ಯಂತ ಪ್ರತಿಭಟನೆ – ವಿಧಾನಸೌಧದಲ್ಲಿ ಹೆಣ ಇದೆ ಅಂದ್ರೆ ಅಗೆಯುತ್ತಾರಾ? ಭಕ್ತರ ಆಕ್ರೋಶ

    ಬಾಲ್ಯ ವಿವಾಹ ತಡೆಗಟ್ಟುವ ಸಲುವಾಗಿ ಸೋಷಿಯಲ್ ಮೀಡಿಯಾಗಳಿಗೆ ಕಡಿವಾಣ ಹಾಕಬೇಕು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗೃಹ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ನುಡಿದರು. ಇದನ್ನೂ ಓದಿ: ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಯೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಗುವಿನ ಬಗ್ಗೆ ಯಾವುದೇ ಸಮಯದಲ್ಲಿ ಕರೆ ಬಂದರೂ ತಕ್ಷಣ ಮಗುವನ್ನು ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

    ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

  • 7ನೇ ತರಗತಿ ವಿದ್ಯಾರ್ಥಿನಿಗೆ ಬಾಲ್ಯವಿವಾಹ – ಬರಲ್ಲ ಅಂತ ಕಿರುಚಾಡಿದ್ರೂ ಹೊತ್ತೊಯ್ದ ಪಾಪಿಗಳು

    7ನೇ ತರಗತಿ ವಿದ್ಯಾರ್ಥಿನಿಗೆ ಬಾಲ್ಯವಿವಾಹ – ಬರಲ್ಲ ಅಂತ ಕಿರುಚಾಡಿದ್ರೂ ಹೊತ್ತೊಯ್ದ ಪಾಪಿಗಳು

    -ರಾಜ್ಯದ ಗಡಿಭಾಗದಲ್ಲಿ ಅಮಾನವೀಯ ಘಟನೆ 

    ಚೆನ್ನೈ/ಬೆಂಗಳೂರು: 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ (Child Marriage) ಮಾಡಿಸಿದ್ದಲ್ಲದೇ ಬಾಲಕಿ ಬರಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಅಮಾನವೀಯ ಘಟನೆ ತಮಿಳುನಾಡಿನ (Tamil Nadu) ಅಂಚೆಟ್ಟಿ (Anchetty) ಗ್ರಾಮದಲ್ಲಿ ನಡೆದಿದೆ.

    ರಾಜ್ಯದ ಗಡಿಭಾಗವಾದ ಅಂಚೆಟ್ಟಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಬಾಲಕಿ ಅಳುತ್ತಾ ಕಿರುಚಾಡಿದರೂ ಸಹ ಬಿಡದೇ ಎಳೆದೊಯ್ದು ಮೃಗಗಳ ರೀತಿ ವರ್ತಿಸಿದ್ದಾರೆ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಸಹ ಆಕೆಯ ಪೋಷಕರು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾಲಕಿಯ ತಾಯಿಯ ಸ್ವಂತ ತಮ್ಮನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ ಅಂಚೆಟ್ಟಿಯ ಮನೆಗೆ ಬಂದಿದ್ದರು. ಅಲ್ಲಿಂದ ಆಕೆಯನ್ನು ಯುವಕನ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಬಾಲಕಿ ಬರಲು ಒಪ್ಪದಿದ್ದಾಗ ಆಕೆಯನ್ನು ಭುಜದ ಮೇಲೆ ಹಾಕಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ದರ ಏರಿಕೆ ಜೊತೆಗೆ ಹೆಚ್ಚುವರಿ ಹಾಲು ಕಡಿತ?

    ದಾರಿಯುದ್ದಕ್ಕೂ ಬಾಲಕಿ ಕಿರುಚಾಡಿದರೂ ಕೂಡ ಪಾಪಿಗಳ ಮನಸ್ಸು ಕರಗಲಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಘಟನೆ ಸಂಬಂಧ ಡೆಂಕಣಿಕೋಟೆ ಮಹಿಳಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹವಾಗಿದ್ದ ಮಾದೇಶ್, ಆತನ ಅಣ್ಣ ಮಲ್ಲೇಶ್, ಪತ್ನಿ ಮುನಿಯಮ್ನಲ್, ಬಾಲಕಿ ತಾಯಿ ನಾಗಮ್ಮ, ಸಂಬಂಧಿ ಮುನಿಯಪ್ಪನ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?

  • ಸಾಲ ಪಾವತಿಸದ್ದಕ್ಕೆ ಸಿಟ್ಟು – ಮಹಿಳೆಯ ಅಪ್ರಾಪ್ತೆ ಮಗಳನ್ನು ತನ್ನ ಮಗನ ಜೊತೆ ಮದ್ವೆ ಮಾಡಿಸಿದ್ಳು!

    ಸಾಲ ಪಾವತಿಸದ್ದಕ್ಕೆ ಸಿಟ್ಟು – ಮಹಿಳೆಯ ಅಪ್ರಾಪ್ತೆ ಮಗಳನ್ನು ತನ್ನ ಮಗನ ಜೊತೆ ಮದ್ವೆ ಮಾಡಿಸಿದ್ಳು!

    ಬೆಳಗಾವಿ:  ಕೊಟ್ಟ ಸಾಲಕ್ಕೆ ಸರಿಯಾಗಿ ಬಡ್ಡಿ (Interest) ಕಟ್ಟದ್ದಕ್ಕೆ ಸಾಲ ಪಡೆದ ಮಹಿಳೆಯ ಮಗಳನ್ನು ಮಗನ (Son)  ಜೊತೆ ಮದುವೆ ಮಾಡಿಸಿದ ಘಟನೆ ಬೆಳಗಾವಿಯಲ್ಲಿ (Belagavi) ನಗರ ವ್ಯಾಪ್ತಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    50 ಸಾವಿರ ರೂ. ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದೇ ಇದ್ದಾಗ ಹೆತ್ತಮ್ಮನ ಕಿವಿಯೋಲೆಯನ್ನೂ ಸಹ ಕಸಿದಿರುವ ಕಿರಾತಕಿ ಕಡೆಗೆ ಸಾಲ ಪಡೆದವಳ ಅಪ್ರಾಪ್ತೆಯನ್ನು ತನ್ನ ಮಗನ ಜೊತೆ ಮದುವೆ (Marriage) ಮಾಡಿಸಿದ್ದಾಳೆ.

     

    ಮದುವೆಯಾದ ವ್ಯಕ್ತಿ ತನ್ನ ಜೊತೆ ಬಲವಂತದ ದೈಹಿಕ‌ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆ ದೂರಿದ್ದಾಳೆ. ಅನ್ಯಾಯಕ್ಕೊಳಗಾಗಿರುವ ಅಪ್ರಾಪ್ತೆ ತನಗೆ ನ್ಯಾಯ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನೂ ಓದಿ: ಒಬಿಸಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಕೊಕ್ಕೆ?- ವಿದ್ಯಾರ್ಥಿವೇತನ ಬಾರದೇ ವಿದ್ಯಾರ್ಥಿಗಳು ಪರದಾಟ

    ಬಲವಂತದ ಮದುವೆ ಮಾಡಿಸಿದ ಅತ್ತೆ, ಮಾವ ಹಾಗೂ ಬಲವಂತದ ದೈಹಿಕ ಸಂಪರ್ಕ ಸಾಧಿಸಿದ ಗಂಡನ ವಿರುದ್ಧ ಟಿಳಕವಾಡಿ ಪೊಲೀಸ್‌ ಠಾಣೆಯನ್ನು ದೂರು ದಾಖಲಿಸಿದ್ದಾಳೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಜ.17 ರಂದು ಖುದ್ದು ಅಪ್ರಾಪ್ತೆ ದೂರು ನೀಡಿದ್ದಾಳೆ. ಆಕೆಯ ತಾಯಿ ಮಾಡಿದ ಸಾಲಕ್ಕೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ದೂರಿದ್ದಾಳೆ.‌ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು ಸದ್ಯ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಪ್ರಾಪ್ತೆ ಓದಬೇಕು ಎಂದು ಆಸೆ ಪಟ್ಟಿದ್ದಾಳೆ. ಆಕೆಯನ್ನು ಈಗ ರಕ್ಷಿಸಲಾಗಿದೆ. ಅಪ್ರಾಪ್ತೆಯ ಜೊತೆಗೆ ನಾವೂ ಸಹ ಮಾತನಾಡಿದ್ದೇವೆ. ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

     

  • ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ

    ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ

    ಗುವಾಹಟಿ: ಬಾಲ್ಯ ವಿವಾಹದ (Child Marriage) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವ ಅಸ್ಸಾಂನ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ನೇತೃತ್ವದ ಸರ್ಕಾರ ಇಂದು ಎರಡನೇ ಹಂತದ ಕಾರ್ಯಾಚರಣೆ ನಡೆಸಿದ್ದು, ಕಾನೂನಿನ ವಿರುದ್ಧ ಅಪ್ರಾಪ್ತರ ಮದುವೆ ಮಾಡಿಸುತ್ತಿದ್ದ 800ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ ಈ ವರ್ಷದ ಆರಂಭದಲ್ಲಿ ಮೊದಲ ಸುತ್ತಿನ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಮಂದಿಯನ್ನು ಬಂಧಿಸಲಾಯಿತು. ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಕಳೆದ ಐದು ವರ್ಷಗಳಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಟ್ಟು 3,907 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 3,319 ಜನರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ (POCSO) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಸೆಪ್ಟೆಂಬರ್ 11 ರಂದು ಅಸ್ಸಾಂ ವಿಧಾನಸಭೆಗೆ ಶರ್ಮಾ ತಿಳಿಸಿದ್ದರು. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನ್ಮದಿನಾಂಕ ತಿದ್ದಿ ಆಧಾರ್ ಕಾರ್ಡ್ ಮಾಡಿಸಿದ ಪೋಷಕರು – ಬಾಲ್ಯವಿವಾಹ ತಡೆದು ಬಾಲಕಿಯ ರಕ್ಷಣೆ

    ಜನ್ಮದಿನಾಂಕ ತಿದ್ದಿ ಆಧಾರ್ ಕಾರ್ಡ್ ಮಾಡಿಸಿದ ಪೋಷಕರು – ಬಾಲ್ಯವಿವಾಹ ತಡೆದು ಬಾಲಕಿಯ ರಕ್ಷಣೆ

    ರಾಯಚೂರು: ಆಧಾರ್ ಕಾರ್ಡ್‌ನಲ್ಲಿ (Aadhaar Card) ಜನ್ಮದಿನಾಂಕವನ್ನು ತಿದ್ದಿ ಅಪ್ರಾಪ್ತ ಮಗಳ ಮದುವೆ (Child Marriage) ಮಾಡಿಸಲು ಹೊರಟಿದ್ದ ಪೋಷಕರನ್ನು ತಡೆದು ಬಾಲಕಿಯನ್ನು (Minor Girl) ರಕ್ಷಣೆ ಮಾಡಿರುವ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗದ ಗಲಗ ಗ್ರಾಮದಲ್ಲಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪೊಲೀಸರ ತಂಡ ಬಾಲಕಿಯ ವಿವಾಹವನ್ನು ತಡೆದು ರಕ್ಷಣೆ ಮಾಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ 16 ವರ್ಷದ ಬಾಲಕಿಗೆ ಮದುವೆ ನಿಶ್ಚಯವಾಗಿತ್ತು. ಗಲಗ ಗ್ರಾಮದ ಯುವಕ ವಿನೋದ್ ಕುಮಾರ್ ಜೊತೆ ನಡೆಯಬೇಕಿದ್ದ ಬಾಲಕಿಯ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು

    ಬಾಲಕಿಗೆ ಕೇವಲ 16 ವರ್ಷವಾಗಿದ್ದು ಆಧಾರ್ ಕಾರ್ಡ್‌ನಲ್ಲಿ 18 ವರ್ಷವಾಗಿರುವಂತೆ ತಿದ್ದಿ, ಮದುವೆ ನಿಶ್ಚಯಿಸಿದ್ದಾಗಿ ಆಕೆಯ ಪೋಷಕರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಕಾನೂನು ಮೀರಿ ಬಾಲಕಿಗೆ ಮದುವೆ ಮಾಡಿಸುವುದಿಲ್ಲ ಎಂದು ಪೋಷಕರಿಂದ ಅಧಿಕಾರಿಗಳು ಪತ್ರ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

    ಇದೀಗ ಬಾಲಕಿಯನ್ನು ರಾಯಚೂರಿನ ಬಾಲಮಂದಿರದಲ್ಲಿ ರಕ್ಷಣೆ ಮಾಡಲಾಗಿದೆ.

  • ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    ದಿಸ್ಪುರ್: ಅಸ್ಸಾಂ ಸರ್ಕಾರ (Assam Government) ಬಾಲ್ಯವಿವಾಹ (Child Marriage) ವಿರುದ್ಧ ಕಠಿಣ ಕಾರ್ಯಾಚರಣೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ತನ್ನ ಪತಿಯನ್ನು ಬಂಧಿಸುತ್ತಾರೆ ಅಂತಾ ಹೆದರಿ 3 ತಿಂಗಳ ಹಿಂದೆಯಷ್ಟೇ ಮದುವೆಯಾದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಹಿಳೆಯನ್ನ ದಕ್ಷಿಣ ಸಾಲ್ಮರ ಪೊಲೀಸ್ ಠಾಣಾ (Salmar Police Station) ವ್ಯಾಪ್ತಿಯ ಕಮರ್ ಪದ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಸ್ಸಾಂ ಸರ್ಕಾರ ಕಠಿಣ ಕಾರ್ಯಾಚರಣೆ ಕೈಗೊಂಡ ಬಳಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ 2ನೇ ಪ್ರಕರಣ ಇದಾಗಿದೆ. ಇದನ್ನೂ ಓದಿ: ಮದುವೆ ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ವಧು

    Child Marriage Bride

    ಈ ತಿಂಗಳ ಆರಂಭದಲ್ಲಿ, ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ಪೋಷಕರು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮತ್ತೊಂದು ಪ್ರಕರಣದಲ್ಲಿ, ಧುಬ್ರಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣದಲ್ಲಿ ಬಂಧಿಸಿರುವ ತನ್ನ ಪತಿ ಮತ್ತು ತಂದೆಯನ್ನ ಬಿಡುಗಡೆ ಮಾಡದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಂಪಾಟ ಮಾಡಿದ್ದಳು. ಹೊರತಾಗಿಯೂ ಪೊಲೀಸರು ತನ್ನ ಪತಿ ಮತ್ತು ತಂದೆಯನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದನ್ನ ಕಂಡು ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು.

    ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸುವ ಸಲುವಾಗಿ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿದೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಆರೋಪಿಗಳನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ. ಇನ್ನಷ್ಟು ಆರೋಪಿಗಳನ್ನ ಬಂಧಿಸುವ ಕಾರ್ಯಾಚರಣೆ ಮುಂದುವರಿದಿದೆ. ಸರ್ಕಾರದ ಈ ನಡೆ ವಿರುದ್ಧ ಅಸ್ಸಾಂ ರಾಜ್ಯಾದ್ಯಂತ ವಿವಿಧೆಡೆ ಮಹಿಳೆಯರು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ. ಇದನ್ನೂ ಓದಿ: ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 4 ದಂಪತಿ – ಜಡ್ಜ್ ಎದುರೇ ವಿರಸ ಮರೆತು ಮತ್ತೆ ಒಂದಾದ ಜೋಡಿಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    ದಿಸ್ಪುರ್: ಅಸ್ಸಾಂ ಸರ್ಕಾರ (Assam Government) ಬಾಲ್ಯ ವಿವಾಹದ (Child Marriage) ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಬೆನ್ನಲ್ಲೇ ಪೋಷಕರು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿದ್ದು, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿಕೊಳ್ಳುತ್ತಿದ್ದಾರೆ.

    ಸರ್ಕಾರದ ಕಠಿಣ ನೀತಿಗೆ ಹೆದರಿ ಕುಟುಂಬವೊಂದು ತಮ್ಮ ಮಗಳ ಮದುವೆ ಮಾಡಲು ನಿರಾಕರಿಸಿದೆ. ಇದರಿಂದ 17 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.

    ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ತನ್ನ ಪೋಷಕರು ಭರವಸೆ ಮುರಿದು ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

    ಕ್ಯಾಚಾರ್‌ನ ಧಲೈ ಪೊಲೀಸ್ (Assam Police) ಠಾಣಾ ವ್ಯಾಪ್ತಿಯ ಖಾಸ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹುಡುಗಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದಳು. ಪೋಷಕರು ಸಹ ಮದುವೆಗೆ ಒಪ್ಪಿದ್ದರು. ಆದರೆ ಅಸ್ಸಾಂ ಸರ್ಕಾರ ಬಾಲ್ಯ ವಿವಾಹಕ್ಕೆ ಕಾನೂನು ನಿರ್ಬಂಧ ಹೇರಿದ ಬಳಿಕ ಹುಡುಗಿ ಪೋಷಕರು ಮದುವೆ ಮಾಡಲು ನಿರಾಕರಿಸಿದರು. ಇದರಿಂದ ಮನನೊಂದ ಹುಡುಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

    ಧುಬ್ರಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಂಧಿಸಿರುವ ತನ್ನ ಪುರುಷ ಹಾಗೂ ತಂದೆಯನ್ನು ಬಿಡುಗಡೆ ಮಾಡುವಂತೆ 23 ವರ್ಷದ ಮಹಿಳೆ ರಂಪಾಟ ಮಾಡಿದ್ದಾಳೆ. ಪೊಲೀಸ್ ಠಾಣೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಇಬ್ಬರನ್ನೂ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

    ಅಫ್ರೋಜಾ ಖಾತುನ್ ಎಂಬಾಕೆ ತಾನು 1999ರಲ್ಲಿ ಜನಿಸಿದ್ದೇನೆ 2018ರಲ್ಲಿ ಮದುವೆಯಾಗಿದ್ದೇನೆ. ಸರಿಯಾಗಿ 19ನೇ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ. ನಾನು ವಯಸ್ಕಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

    ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ನನ್ನ ಪತಿಯನ್ನು ಏಕೆ ಬಂಧಿಸಲು ಹೇಳಿದ್ದಾರೆ? ನನ್ನ ಪತಿ ಮತ್ತು ತಂದೆಯನ್ನ ಜೈಲಿಂದ ಬಿಡುಗಡೆ ಮಾಡದೇ ಇದ್ದರೇ ನಾನು ನ್ಯಾಯಾಲಯ ಆವರಣದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

    ಇದರ ಹೊರತಾಗಿಯೂ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ಅಸ್ಸಾಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಬಂಧಿತರ ಸಂಖ್ಯೆ 2,441ಕ್ಕೆ ಏರಿಕೆಯಾಗಿದೆ. ಅಲ್ಲದೇ ಈ ಕಾರ್ಯಾಚರಣೆ 2026ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k