Tag: Child Care Center

  • ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಕೀವ್: ಉಕ್ರೇನ್‍ನ ಶಿಶುಪಾಲನಾ ಕೇಂದ್ರ ಸೇರಿದಂತೆ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, 7 ವರ್ಷದ ಬಾಲಕಿ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.

    ಉಕ್ರೇನ್‍ನ ಈಶಾನ್ಯ ನಗರದ ಓಖ್ಟಿರ್ಕಾದಲ್ಲಿ ರಷ್ಯಾದ ದಾಳಿ ನಡೆಸಿದ ಪರಿಣಾಮವಾಗಿ ಏಳು ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಶಿಶುವಿಹಾರ ಶಾಲೆ ಮತ್ತು ಅನಾಥಾಶ್ರಮದಲ್ಲಿ ಘಟನೆ ನಡೆದಿದೆ ಎಂದು ಗವರ್ನರ್ ಡಿಮಿಟ್ರಿ ಝಿವಿಟ್ಸ್ಕಿ ತಿಳಿಸಿದರು.

    ಉಕ್ರೇನ್, ರಷ್ಯಾ ಯುದ್ಧ 4ನೇ ದಿನಕ್ಕೆ ಕಾಲಿಟ್ಟಿದ್ದು, ದಿನೇ ದಿನೇ ಉಗ್ರಸ್ವರೂಪ ಪಡೆದುಕೊಳ್ಳುತ್ತಿದೆ. ಉಕ್ರೇನ್‍ನಲ್ಲಿ ಅಪಾರ ಸಾವು, ನೋವುಗಳು ಆಗುತ್ತಿವೆ. ಈಗ ಶಿಶು ಪಾಲನಾಕೇಂದ್ರ, ಅನಾಥಾಶ್ರಮಗಳ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ್ದಾರೆ. ಇದರಲ್ಲಿ ರಷ್ಯಾ ಬಾಂಬ್ ದಾಳಿಗೆ 7 ವರ್ಷದ ಬಾಲಕಿ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಅಂತಾರಾಷ್ಟ್ರೀಯ ತನಿಖೆಗೆ ಉಕ್ರೇನ್ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

    ನಿನ್ನೆ ಬಂಕರ್‌ಗಳಲ್ಲಿ ರಷ್ಯಾ ಬಾಂಬ್ ದಾಳಿಯನ್ನು ನಡೆಸಿತ್ತು. ಇದೀಗ ಶಿಶುಪಾಲನಾ ಕೇಂದ್ರದಲ್ಲಿ ದಾಳಿ ನಡೆಸಿದೆ. ಈ ಮೊದಲು ಕೈವಾದ ಜೂಲಿಯಾನಿ ವಿಮಾನ ನಿಲ್ದಾಣದ ಪಕ್ಕ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಉಕ್ರೇನ್‍ನ ಹಲವು ಪ್ರದೇಶಗಳನ್ನು ರಷ್ಯಾ ಮಿಲಿಟರಿ ಪಡೆ ಸುತ್ತುವರಿದಿದ್ದು, ಅಲ್ಲಲ್ಲಿ ಬಾಂಬ್‍ಗಳ ದಾಳಿ ನಡೆಯುತ್ತಿದೆ. ಉಕ್ರೇನ್‍ನಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

  • ಉಳ್ಳಾಲದ ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ : ಉಸ್ತಾದ್ ಬಂಧನ

    ಉಳ್ಳಾಲದ ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ : ಉಸ್ತಾದ್ ಬಂಧನ

    ಮಂಗಳೂರು: ಚೈಲ್ಡ್ ಕೇರ್ ಕೇಂದ್ರದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಒಂದು ಚೈಲ್ಡ್ ಕೇರ್ ಕೇಂದ್ರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕನಿಗೆ ಕೇಂದ್ರದ ಉಸ್ತಾದ್ ನಿಂದಲೇ ಕಿರುಕುಳ ಆಗಿದೆ. ಕಿರುಕುಳ ನೀಡಿದ ಕೋಣಾಜೆ ಮೂಲದ ಆರೋಪಿ ಉಸ್ತಾದ್ ಆಯೂಬ್ ಮೇಲೆ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ಚೈಲ್ಡ್ ಕೇರ್ ಸೆಂಟರ್‌ಗಳಲ್ಲಿ ತಂದೆ ತಾಯಿಯಿಲ್ಲದ ಅನಾಥ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಅನಾಥರಾಗಿರುವ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಜವಾಬ್ದಾರಿಯುತವಾಗಿ ಚೈಲ್ಡ್ ಕೇರ್ ಸೆಂಟರ್ಗಳು ಆರೈಕೆ ಮಾಡಬೇಕಾಗುತ್ತದೆ.

    ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ  ಖಚಿತ ಮಾಹಿತಿ ಕಮೀಷನರ್ ಶಶಿಕುಮಾರ್ ಅವರಿಗೆ ಬಂದಿತ್ತು. ಇದಕ್ಕಾಗಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಅರಿವು ನೆರವು ಎಂಬ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮದ ಹೆಸರಲ್ಲಿ ಚೈಲ್ಡ್ ಕೇರ್ ಸೆಂಟರಿನ ಮಕ್ಕಳನ್ನು ಕರೆಸಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಮನೋವೈದ್ಯರು, ಮಕ್ಕಳ ವೈದ್ಯರನ್ನು ಬಳಸಿಕೊಳ್ಳಲಾಯಿತು.

    ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗೆಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಲಾಯಿತು. ಒಂದಷ್ಟು ಪ್ರಶ್ನೋತ್ತರಗಳ ಪತ್ರಿಕೆಯನ್ನು ನೀಡಿ ಮಕ್ಕಳಿಂದ ಉತ್ತರ ಪಡೆಯಲಾಯಿತು. ಮಕ್ಕಳಿಂದ ಬಂದ ಉತ್ತರದ ಬಳಿಕ ಚೈಲ್ಡ್ ಕೇರ್ ಸೆಂಟರ್‍ನಲ್ಲಿ ನಡೆಯುತ್ತಿದ್ದ ಕರ್ಮಕಾಂಡಗಳು ಗೊತ್ತಾಗಿದೆ.

    ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಚೈಲ್ಡ್ ಕೇರ್ ಸೆಂಟರ್ ಇದ್ದು ಸುಮಾರು 500 ಮಕ್ಕಳು ಇದ್ದಾರೆ. ಇಡೀ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಈ ರೀತಿಯ  ಸೆಂಟರ್‌ಗಳಿದ್ದು 1,024 ಮಕ್ಕಳಿದ್ದಾರೆ. ಸದ್ಯ ಮಂಗಳೂರು ವ್ಯಾಪ್ತಿಯ ನಿಗಾ ಘಟಕಗಳ ಮಕ್ಕಳ ಪರೀಕ್ಷೆ ನಡೆಸಲಾಗಿದ್ದು, ಕಿರುಕುಳ ನೀಡುತ್ತಿದ್ದ  ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ.