Tag: child

  • ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

    ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

    ಹುಬ್ಬಳ್ಳಿ: ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ (Hubballi) ಕೆಎಂಸಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಪತ್ತೆಯಾಗಿದೆ.’

    ಸೆ.23 ರಂದು ಕುಂದಗೋಳ ತಾಲೂಕಿನ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕೆಎಂಸಿಗೆ ದಾಖಲಾಗಿದ್ದರು. ಸುರಕ್ಷಿತವಾಗಿ ಮಹಿಳೆಗೆ ಹೆರಿಗೆ ಸಹ ಆಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿತ್ತು. ಇದನ್ನೂ ಓದಿ: ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ

    ಮಗುವಿನ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡುಬಂದಿವೆ. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆಯ ಬೆಳೆವಣಿಗೆ ಆಗುತ್ತಿರುವುದು ವೈದ್ಯರು ಗುರುತಿಸಿದ್ದಾರೆ.

    ಇದು ಬಹಳಷ್ಟು ಅಪರೂಪದ ಪ್ರಕರಣ ಅಸಹಜ ದ್ರವ್ಯ ಸಂಗ್ರಹಣೆ ಇಂತಹ ಬೆಳವಣಿಗೆ ಆಗುತ್ತವೆ. ಅದು ಪೂರ್ಣಗೊಂಡು ಮಗುವಿನ ರೂಪ ಪಡೆದುಕೊಳ್ಳುವುದು ಅಸಾಧ್ಯ. ಹೀಗಾಗಿ ಇನ್ನೂ ಕೆಲವೊಂದು ತಪಾಸಣೆ ಮಾಡಿ, ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅಂತ ಕೆಎಂಸಿ ಆಡಳಿತ ಮಂಡಳಿ ಹೇಳಿದೆ.

  • ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

    ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

    ಭೋಪಾಲ್: ಅಬ್ಬಬ್ಬಾ ಎಂಥಾ ಜನರೆಲ್ಲ ಪ್ರಪಂಚದಲ್ಲಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಇಲ್ಲೊಂದು ದಂಪತಿ ತಮ್ಮ ಸರ್ಕಾರಿ ಕೆಲಸ ಉಳಿಸಿಕೊಳ್ಳಲು ನಾಲ್ಕನೇ ಮಗುವನ್ನು ಕಾಡಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಛಿಂದ್ವಾರಾದಲ್ಲಿ ನಡೆದಿದೆ.

    ಬಬ್ಲು ದಾಂಡೋಲಿಯಾ ಹಾಗೂ ರಾಜಕುಮಾರಿ ದಾಂಡೋಲಿಯಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದರು (Teachers). ಮಧ್ಯಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಸರ್ಕಾರಿ ನೌಕರಿಯನ್ನು ಕಳೆದುಕೊಳ್ಳುತ್ತಾರೆ ಎಂಬ ನಿಯಮವಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

    ಈಗಾಗಲೇ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ತನ್ನ ನಾಲ್ಕನೆಯ ಗರ್ಭಧಾರಣೆಯನ್ನು ಮುಚ್ಚಿಟ್ಟಿದ್ದ ಶಿಕ್ಷಕಿ, ಸೆ.23 ರಂದು ಮಗುವಿಗೆ ಜನ್ಮ ನೀಡಿದ್ದಳು. ಈಗಾಗಲೇ ಮೂವರು ಮಕ್ಕಳಿರುವುದರಿಂದ, ನಾಲ್ಕನೇ ಮಗುವಿದೆ ಎಂದು ಗೊತ್ತಾದರೆ ಖಂಡಿತ ಕೆಲಸ ಕಳೆದುಕೊಳ್ಳುತ್ತೇವೆ ಎಂದು ಭಯಭೀತರಾಗಿ ಆಗಷ್ಟೇ ಹುಟ್ಟಿದ ಕಂದಮ್ಮನನ್ನು ದಂಪತಿಯು ಕಾಡಿನಲ್ಲಿ ಎಸೆದು ಬಂದಿದ್ದರು. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್‌ ಚಾಲಕ ಅರೆಸ್ಟ್‌

    ನAದನವಾಡಿ ಗ್ರಾಮದಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರಿಗೆ ಮೊದಲು ಮಗುವಿನ ಕೂಗುವುದು ಕೇಳಿಸಿತ್ತು. ಇದು ಪ್ರಾಣಿಯ ಚೀರಾಟ ಎಂದು ಭಾವಿಸಿದ್ದರು. ಬಳಿಕ ಚೀರಾಟದ ಶಬ್ಧವನ್ನು ಆಲಿಸಿ, ಹಿಂಬಾಲಿಸಿದಾಗ ಮೈಯೆಲ್ಲ ರಕ್ತದ ಕಲೆಯಿದ್ದ ಮಗೊಂದು ಕಲ್ಲಿನ ಹಿಂದಿರುವುದು ಕಾಣಿಸಿತ್ತು.

    ಬಳಿಕ ಗ್ರಾಮಸ್ಥರು ಮಗುವನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಪೊಲೀಸರ ತನಿಖೆ ವೇಳೆ ದಂಪತಿಯು ಸರ್ಕಾರಿ ಕೆಲಸದಾಸೆಗೆ ಮಗುವನ್ನು ಕಾಡಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಪೊಲೀಸರು ದಂಪತಿ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

    Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

    ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಮನೆಗೆ ಬೆಂಕಿ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಸ್ಯಾಂಕಿ ರಸ್ತೆಯ (Sankey Road) ಸಮ್ಮಿಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

    ಅನು ಮೃತ ಮಗು. ಅನು, ಪುಷ್ಕರ್ ಕುಮಾರ್ (25 ) ಹಾಗು ಜ್ಯೋತಿಕುಮಾರಿ (22) ದಂಪತಿಯ ಪುತ್ರಿ. ನೇಪಾಳ ಮೂಲದ ದಂಪತಿ ಕಳೆದ 8 ವರ್ಷಗಳಿಂದ ಇಲ್ಲೇ ವಾಸಮಾಡುತ್ತಿದ್ದರು. ಅಪಾರ್ಟ್ ಮೆಂಟ್ ಸೆಲ್ಲರ್‌ನ 10*10 ಅಳತೆಯ ರೂಮ್‌ನಲ್ಲಿ ವಾಸ ಮಾಡ್ತಿದ್ದ ದಂಪತಿ ಮನೆಯಲ್ಲಿ ಮಗು ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಇಫ್ತಾರ್ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? – ಸಿದ್ದರಾಮಯ್ಯಗೆ ಜೋಶಿ ತಿರುಗೇಟು

    ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

  • ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

    ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

    ನೆಲಮಂಗಲ: ಗಂಡ- ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಹೆತ್ತ ತಾಯಿ (Mother) ಮನನೊಂದು ಐದು ವರ್ಷದ ತನ್ನ ಮಗುವನ್ನ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ನೆಲಮಂಗಲ (Nelamangala) ಪೊಲೀಸ್ ಉಪವಿಭಾಗದ ಬೆಂಗಳೂರು ಉತ್ತರ ತಾಲೂಕಿನ ಕೆ.ಜಿ.ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    5 ವರ್ಷ ಸಿರಿ ಕೊಲೆಯಾದ ಮಗು. ಜಯರಾಂ ಹಾಗೂ ಮಹಾಲಕ್ಷ್ಮಿ 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷದಿಂದ ಕೆಲಸವಿಲ್ಲದೆ ಕುಡಿತಕ್ಕೆ ದಾಸನಾಗಿದ್ದ ಜಯರಾಂ, ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದ. ಮನೆಯಲ್ಲಿ ಆಗಾಗ ಗಂಡ-ಹೆಂಡತಿ ನಡುವೆ ಜಗಳ ನಡೆದು ಬುಧವಾರ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಬಳಿಕ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಮಹಾಲಕ್ಷ್ಮಿ ಮಗುವಿನ ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.  ಇದನ್ನೂ ಓದಿ: ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    ಕೂಡಲೇ ಮನೆಯವರು ಡೋರ್ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ತಾಯಿ ಮಹಾಲಕ್ಷ್ಮಿಯನ್ನ ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ಡಾ.ವೆಂಕಟೇಶ್ ಪ್ರಸನ್ನ, ಸಿಪಿಐ ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ ಪತಿ ಜಯರಾಮ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ | RCB ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕ್ಯಾಬಿನೆಟ್‌ ಒಪ್ಪಿಗೆ

  • ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

    ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

    – ಹೃದಯಾಘಾತಕ್ಕೆ 35 ವರ್ಷದ ವ್ಯಕ್ತಿ ಸಾವು

    ಬಳ್ಳಾರಿ: ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರು (Sandur) ತಾಲೂಕಿನ ಕಾಳಿಂಗೇರಿಯಲ್ಲಿ ನಡೆದಿದೆ.

    ಕಾಳಂಗೇರಿಯ ದೀಕ್ಷಾ (12) ಮೃತ ಬಾಲಕಿ. 6ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಎಂದಿನಂತೆ ಸಿದ್ಧಳಾಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ತೆರಳುವಾಗ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕಿ ದೀಕ್ಷಾಳನ್ನ ಕೂಡಲೇ ಕುಟುಂಬಸ್ಥರು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ದೀಕ್ಷಾ ಮೃತಪಟ್ಟಿದ್ದಾಳೆ. ದೀಕ್ಷಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರೀ ಮಳೆ- ದಕ್ಷಿಣ ಕನ್ನಡದ ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಇನ್ನೂ ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿ ನಡೆದಿದೆ. 35 ವರ್ಷದ ರಾಜೇಶ್ ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. ರಾಜೇಶ್ ಸೋಮವಾರ ಸಂಜೆ ತಾರಾನಗರ ಗ್ರಾಮದ ಮನೆಲ್ಲಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

    ಹಾರ್ಟ್ ಅಟ್ಯಾಕ್ ಲಕ್ಷಣಗಳು ಇದ್ದ ಹಿನ್ನೆಲೆ, ಕೂಡಲೇ ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಗಿದೆ. ತಾರಾನಗರದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ರಾಜೇಶ್ ಸಾವನ್ನಪ್ಪಿದ್ದಾನೆ. ಜಿಂದಾಲ್ ಕಾರ್ಖಾನೆಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್‌ಗೆ ಇನ್ನೂ ವಿವಾಹವೂ ಆಗಿರಲಿಲ್ಲ. ಘಟನೆ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದು ಶಕ್ತಿ ಪ್ರದರ್ಶನಕ್ಕೆ ಸಜ್ಜು – 1 ಬಸ್ಸಿಗೆ 6 ಸಾವಿರ ಕೊಡುತ್ತಿದ್ದಾರೆ ಕೈ ನಾಯಕರು

  • ಮಂಡ್ಯ | ಚಾಕೊಲೇಟ್ ಆಸೆ ತೋರಿಸಿ 4 ವರ್ಷದ ಮಗುವಿನ ಮೇಲೆ ರೇಪ್

    ಮಂಡ್ಯ | ಚಾಕೊಲೇಟ್ ಆಸೆ ತೋರಿಸಿ 4 ವರ್ಷದ ಮಗುವಿನ ಮೇಲೆ ರೇಪ್

    ಮಂಡ್ಯ: ಚಾಕೊಲೇಟ್ ಕೊಡಿಸುವುದಾಗಿ ಹೇಳಿ 4 ವರ್ಷದ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.

    ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಕೋಲೇಟ್ ಕೊಡಿಸುವುದಾಗಿ ಹೇಳಿ ಮಗುವನ್ನು ಪುಸಲಾಯಿಸಿ ಕರೆದೊಯ್ದ ಕಾಮುಕ, ಅತ್ಯಾಚಾರವೆಸಗಿದ್ದ. ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್‌ ಕೇಸ್‌ – ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

    ಸಂತ್ರಸ್ತ ಮಗುವಿನ ಪೋಷಕರು ಬಿಹಾರ ಮೂಲದವರೆಂದು ತಿಳಿದುಬಂದಿದೆ. ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

  • Uttara Kannada | ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

    Uttara Kannada | ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

    ಕಾರವಾರ: ತಂದೆಯ ನಿರ್ಲಕ್ಷ್ಯದಿಂದ ಗೊಬ್ಬರದ ಗುಂಡಿಗೆ (Manure Pit) ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.

    ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಮೃತ ಹೆಣ್ಣುಮಗು. ಶ್ರೀಕಾಂತ್ ಹೆಬ್ಬಾರ್ ದನದ ಕೊಟ್ಟಿಗೆ ಕೆಲಸಕ್ಕಾಗಿ ಕೊಟ್ಟಿಗೆಗೆ ತೆರಳಿದ್ದು, ಇವರೊಂದಿಗೆ ಪುಟ್ಟ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕೊಟ್ಟಿಗೆ ಬಳಿ ಇದ್ದ ಗೊಬ್ಬರದ ಗುಂಡಿಗೆ ಬಿದ್ದಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆ ಅಗತ್ಯವಿಲ್ಲ – ತೆಲಂಗಾಣ ಹೈಕೋರ್ಟ್

    ಕೊಟ್ಟಿಗೆಯಲ್ಲಿ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಮಗುವಿನ ಚಲನವಲನದ ಬಗ್ಗೆ ಗಮನ ಹರಿಸಿರಲಿಲ್ಲ. ಮಗು ಸದ್ದು ಮಾಡದಿದ್ದುದನ್ನು ಗಮನಿಸಿ ಹುಡುಕಿದಾಗ ಗೊಬ್ಬರದ ಗುಂಡಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಅಂಕೋಲದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ಭಯೋತ್ಪಾದನೆ, ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ ಗುಡುಗು

  • ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    – ತಂದೆ, ತಾಯಿ ಕೂಡ ಅಸ್ವಸ್ಥ

    ಬೆಂಗಳೂರು: ನಗರದ ಕೆಪಿ ಅಗ್ರಹಾರದಲ್ಲಿ (KP Agrahara) ತಂದೆ, ತಾಯಿ ಅಸ್ವಸ್ಥರಾಗಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು ಈ ಸ್ಥಿತಿಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.

    ವಿನಯ್ (6) ಮೃತ ಮಗು. ಕೇಕ್ ತಿಂದು ಮಂಗಳವಾರ ತೀವ್ರವಾಗಿ ಅಸ್ವಸ್ಥಗೊಂಡು, ಇಂದು ಬೆಳಗ್ಗೆ ಸಾವನ್ನಪ್ಪಿದೆ.ಇದನ್ನೂ ಓದಿ: Uttar Pradesh | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ – ಐವರು ಸಜೀವ ದಹನ

    ಕುಟುಂಬದಲ್ಲಿ ನಾಲ್ವರು ಇದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮನೆಯಲ್ಲಿ ಮೂವರೇ ಇದ್ದ ಕಾರಣ ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ಕೇಕ್ ತರಿಸಿದ್ದರು. ಕೇಕ್ ತಿಂದ ಬಳಿಕ ಮಗು ತೀವ್ರವಾಗಿ ಅಸ್ವಸ್ಥಗೊಂಡು, ಬೆಳಿಗ್ಗೆ ಅಷ್ಟರಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ತಂದೆ, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಕಿಮ್ಸ್ ವೈದ್ಯರು ದೇಹದ ಇತರೆ ಭಾಗಗಳನ್ನು ಪರೀಕ್ಷೆಗೆ ಒಳಪಡಿಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

  • Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕಾರವಾರ: ಪೋಷಕರ ನಿರ್ಲಕ್ಷ್ಯದಿಂದ ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ (Canal) ಮಗು ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ.

    ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಶನಿವಾರ ಮಧ್ಯಾಹ್ನದ ವೇಳೆ ಮನೆಯ ಹೊರಗೆ ಆಟವಾಡುತಿದ್ದ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಬಿದ್ದಿದೆ. ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದೆ. ಇದನ್ನೂ ಓದಿ: Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಘಟನೆ ಕುರಿತು ಪೋಷಕರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ. ಇದೀಗ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಹೊರಬಿದ್ದಿದ್ದು ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

  • Vijayapura | ತೆರೆದ ಬಾವಿಗೆ ಬಿದ್ದು ಮಗು ಸಾವು

    Vijayapura | ತೆರೆದ ಬಾವಿಗೆ ಬಿದ್ದು ಮಗು ಸಾವು

    ವಿಜಯಪುರ: ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ (Open Well) ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ (Muddebihala) ಪಟ್ಟಣದಲ್ಲಿ ನಡೆದಿದೆ.

    ಮೂರು ವರ್ಷದ ಹರ್ಷಿತ್ ಪಾಟೀಲ್ ಬಾವಿಗೆ ಬಿದ್ದು ಸಾವನ್ನಪ್ಪಿರುವ ಮಗು. ಶುಕ್ರವಾರ ಮಗು ಮನೆಯಿಂದ ನಾಪತ್ತೆಯಾಗಿತ್ತು. ಮಗು ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಹರ್ಷಿತ್ ಹುಡುಕಾಟದಲ್ಲಿ ತೊಡಗಿದ್ದರು. ಇಂದು ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರು ಪೋರ್ಟ್‌ ಧ್ವಂಸ ಮಾಡಿದ್ದೇವೆ – ಮತ್ತೆ ಪಾಕ್‌ ಫುಲ್‌ ಟ್ರೋಲ್‌

    ಕುಟುಂಬಸ್ಥರು ಮಗುವನ್ನು ತೆರೆದ ಬಾವಿಯ ಆಸುಪಾಸಲ್ಲಿ ಆಡಲು ಬಿಟ್ಟಾಗ ಅನಾಹುತ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತಕ್ಕೆ ಬೇಕಿದ್ದ 5 ಉಗ್ರರು ಮಟಾಶ್