Tag: Chikodi

  • ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

    ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

    ಚಿಕ್ಕೋಡಿ: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗುವುದು ನಿಶ್ಚಿತ ಎಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್‌ ಗುರೂಜಿ (Vinay Guruji) ಭವಿಷ್ಯ ನುಡಿದಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ʻಪಬ್ಲಿಕ್‌ ಟಿವಿ ಜೊತೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಬಹಳ ಕೆಲಸ ಮಾಡಿದ್ದಾರೆ. ಅವರು ನಾಟಕ ಮಾಡದ ರಾಜಕಾರಣಿ, ಅವರಿಗೆ ನಾಟಕ ಮಾಡಲು ಬರುವುದಿಲ್ಲ. ಅವರು ಸಿಎಂ ಆದರೆ ಖುಷಿ ಪಡುತ್ತೇವೆ‌. ಅವರು ಸಿಎಂ ಆಗಲಿ ಎಂದು ವೈಕುಂಠ ಏಕಾದಶಿ ದಿನ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

    ಅಜ್ಜಯ್ಯನ ಮೇಲೆ ನಿಷ್ಠೆ, ಧರ್ಮದ ಮೇಲೆ ಗೌರವ ಅವರಿಗಿದೆ. ಗುರುಗಳ ಅನುಗ್ರಹದಿಂದ ಇದೇ ಸರ್ಕಾರದ ಅವಧಿಯಲ್ಲಿ ಅವರು ಸಿಎಂ ಸೀಟಲ್ಲಿ ಕೂರುತ್ತಾರೆ ಎಂದಿದ್ದಾರೆ.

  • ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಚಿಕ್ಕೋಡಿ: ಮಾಜಿ ಸಚಿವ ಹಾಗೂ ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ. ಮಲ್ದಾರಿಗೌಡ ಪಾಟೀಲ್ ಇವರ ಸ್ಮರಣಾರ್ಥ ಜ.11ರಂದು ಸಂಕೇಶ್ವರ (Sankeshwar) ಪಟ್ಟಣದ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಕುಣಾಲ್ ಪಾಟೀಲ್ ತಿಳಿಸಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಶಾಸಕರಾಗಿ, ನೀರಾವರಿ ಸಚಿವರಾಗಿ ಈ ಭಾಗದ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿ, ಗಡಿ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಮಲ್ದಾರಿಗೌಡ ಪಾಟೀಲ್‌ರ ಸೇವೆ ಸ್ಮರಣೀಯವಾಗಿದ್ದು, ಅವರ ಸೇವಾ ಕೈಂಕರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಹಾಗೂ ಗಡಿ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಧಾರವಾಡದ ಕರಾವಳಿ ಟೀಚರ್ಸ್ ಹೆಲ್ಸ್ಲೈನ್‌ನವರ ಸಹಯೋಗದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜಾಬ್ ಜಂಕ್ಷನ್, ಯುಥ್, ಅಪ್ಟಿಮಂ, ಮ್ಯಾನ್ ಪವರ್ ಸಂಸ್ಥೆಗಳು ಭಾಗವಹಿಸಲಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಎನ್ ಟಿಸಿ, ಡಿಇಡಿ, ಬಿಇಡಿ, ಬಿಪಿಇಡಿ, ಎಂ.ಕಾಂ, ಬಿಎ, ಬಿಎಸ್ಸಿ, ಎಂಎಸ್ಸಿ , ಎಂಕಾಂ, ಎಂಎಸ್ಸಿ, ಬಿಬಿಎ, ಬಿಸಿಎ, ಐಟಿಐ, ಫಾರ್ಮಸಿ, ಬಿಇ, ಎಂಟೆಕ್, ಎಂಎಸ್‌ಡಬ್ಲ್ಯೂ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.‌

    ಹೆಚ್ಚಿನ ಮಾಹಿತಿಗೆ ಮತ್ತು ಹೆಸರು ನೋಂದಾಯಿಸಲು . 9743218480, 483585840, 8762903585, 9980116526 ಸಂಪರ್ಕಿಸಬಹುದು.

  • ಚಿಕ್ಕೋಡಿಯಲ್ಲಿ ಮಕ್ಕಳ ಕಳ್ಳರ ಆತಂಕ – 2ನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

    ಚಿಕ್ಕೋಡಿಯಲ್ಲಿ ಮಕ್ಕಳ ಕಳ್ಳರ ಆತಂಕ – 2ನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

    ಬೆಳಗಾವಿ: ಶಾಲೆ ಬಳಿ ಎರಡನೇ ತರಗತಿ ವಿದ್ಯಾರ್ಥಿನಿಯ (Student) ಅಪಹರಣಕ್ಕೆ (Kidnap) ಪ್ರಯತ್ನಿಸಿದ್ದು, ಅದು ವಿಫಲವಾಗಿರುವ ಘಟನೆ ಚಿಕ್ಕೋಡಿ (Chikodi) ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.

    ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಲಾಗಿದ್ದು, ಬೈಕ್ ಮೇಲೆ ಬಂದು ಅಪಹರಿಸಲು ವಿಫಲ ಯತ್ನ ನಡೆಸಿ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ಶಾಲೆ ಕಾಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಕಿಡ್ನಾಪರ್ಸ್ ವಿದ್ಯಾರ್ಥಿನಿ ಬರುವುದನ್ನೇ ಕಾಯುತ್ತಿದ್ದ. ಶಾಲೆಯಿಂದ ವಿದ್ಯಾರ್ಥಿನಿ ಹೊರ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಾಲಕಿಯನ್ನು ಅಪಹರಿಸಿ 200 ಮೀಟರ್ ಓಡಿದ್ದಾನೆ. ಬಳಿಕ ವಿದ್ಯಾರ್ಥಿ ವ್ಯಕ್ತಿಯ ಕೈಗೆ ಕಚ್ಚಿ ಆತನಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಇದನ್ನೂ ಓದಿ: ಪೋರ್ನ್‌ ವೀಡಿಯೋ ನೋಡಿ ಉದ್ರೇಕ – ಸ್ವಂತ ತಂಗಿಯ ಮೇಲೆ ಅತ್ಯಾಚಾರಗೈದ ಕಾಮುಕ ಅಣ್ಣ

    ನಂತರ ವಿದ್ಯಾರ್ಥಿನಿ ಕಿರುಚಾಟದಿಂದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಆವರಣದ ಸಿಸಿಟಿವಿ ಪರಿಶೀಲನೆ ನಡೆಸಿ ಮಕ್ಕಳ ಕಳ್ಳರ ಕುರಿತು ಪೊಲೀಸ್ ಪ್ರಕಟಣೆ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಗ್ರಾಪಂ ಸದಸ್ಯನಿಂದ 120 ಎಕರೆ ಕೆರೆ ಭೂಮಿ ಕಬಳಿಕೆ!

  • ಚಿಂಚಣಿ ಮಠದ ಅಲ್ಲಮಪ್ರಭು ಮಹಾಸ್ವಾಮೀಜಿ ಲಿಂಗೈಕ್ಯ

    ಚಿಂಚಣಿ ಮಠದ ಅಲ್ಲಮಪ್ರಭು ಮಹಾಸ್ವಾಮೀಜಿ ಲಿಂಗೈಕ್ಯ

    ಚಿಕ್ಕೋಡಿ (ಬೆಳಗಾವಿ): ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮೀಜಿ (63) (Sri Allamaprabhu Swamiji) ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ.

    ಚಿಂಚಣಿ ಶ್ರೀಗಳು ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಬೆಳಗಾವಿಯ (Belagavi) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಭಾನುವಾರ) ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ- 9 ದಿನಗಳಲ್ಲಿ 4,56,22,580 ರೂ. ಸಂಗ್ರಹ

    ಗಡಿಭಾಗದಲ್ಲಿ ಕನ್ನಡದ ಸ್ವಾಮೀಜಿ ಎಂದೇ ಅವರು ಖ್ಯಾತಿಯಾಗಿದ್ದರು. ಸ್ವಾಮೀಜಿಗಳ ಅಗಲಿಕೆಯಿಂದ ಭಕ್ತ ವೃಂದದಲ್ಲಿ ಶೋಕ ಮನೆಮಾಡಿದೆ. ಇದನ್ನೂ ಓದಿ: ಅತಿವೃಷ್ಠಿಯಲ್ಲಿ ಬಿಎಸ್‍ವೈ ಭಿಕ್ಷೆ ಬೇಡಿದ್ದರು, ಸಿದ್ದರಾಮಯ್ಯರಂತೆ ಡ್ಯಾನ್ಸ್ ಮಾಡಿರಲಿಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

  • ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ಚಿಕ್ಕೋಡಿ: ಟೊಮೆಟೋ (Tomato) ಕಳ್ಳತನ ಮಾಡುವಾಗ ವ್ಯಕ್ತಿಯೋರ್ವ ರೆಡ್ ಹ್ಯಾಂಡ್ ಆಗಿ ರೈತನ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ (Belegavi) ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ.

    ಟೊಮೆಟೋ ಬೆಳೆದಿದ್ದ ರೈತ ಕುಮಾರ್ ಅಲಗೌಂಡ ಗೂಡೋಡಗಿ ಕೈಯಲ್ಲಿ ಟೊಮೆಟೋ ಕಳ್ಳತನ (Theft) ಮಾಡುವಾಗ ಕಳ್ಳ ಭುಜಪ್ಪ ಗಾಣೀಗೇರ ಸಿಕ್ಕಿಬಿದ್ದಿದ್ದಾನೆ. ಯಲ್ಪಾರಟ್ಟಿ ಗ್ರಾಮದಲ್ಲಿ ಅರ್ಧ ಎಕರೆ ಜಾಗದಲ್ಲಿ ರೈತ ಟೊಮೆಟೋ ಬೆಳೆದಿದ್ದ. ಕಳೆದ 2 ಬಾರಿ 25 ಕೆಜಿಯ 200 ಟ್ರೇ ಟೊಮೆಟೋ ಕಳ್ಳತನವಾಗಿದ್ದರಿಂದ ರೈತ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಬೆಳ್ಳಂ ಬೆಳಗ್ಗೆ 5:30ರ ಸುಮಾರಿಗೆ ಕಳ್ಳತನ ಮಾಡುವಾಗ ಭುಜಪ್ಪ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಯುವಕ

    ಯಲ್ಪಾರಟ್ಟಿ ಗ್ರಾಮದ ಪಕ್ಕದ ಗ್ರಾಮ ಸಿದ್ದಾಪುರ ನಿವಾಸಿ ಭುಜಪ್ಪ ಗಾಣಿಗೇರ ಕಳೆದ ಹಲವು ದಿನಗಳಿಂದ ಟೊಮೆಟೋ ಕಳ್ಳತನ ಮಾಡುತ್ತಿದ್ದ ಎಂದು ರೈತ ಕುಮಾರ್ ಆರೋಪಿಸಿದ್ದಾರೆ. ಕಳ್ಳತನ ಮಾಡುವದನ್ನು ಗಮನಿಸಿ 112ಕ್ಕೆ ಕರೆ ಮಾಡಿದ್ದು, ಟೊಮೆಟೋ ಕಳ್ಳ ಭುಜಪ್ಪ ಗಾಣಿಗೇರನನ್ನು ಸ್ಥಳೀಯರ ಸಹಾಯದಿಂದ ಪೋಲಿಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಚಿಕ್ಕೋಡಿ: ನಿಮ್ಮ ಅಂಗಡಿಗಳಲ್ಲಿ ನೀವು ಫೋನ್ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದ್ರೆ ಈ ಸ್ಟೋರಿನಾ ನೀವು ಮಿಸ್ ಮಾಡದೇ ನೋಡಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ ಬಂಗಾರದ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ಗ್ಯಾಂಗ್ ಒಂದು ಈಗ ಪೊಲೀಸರ ಬಲೆಗೆ ಬಿದ್ದಿದೆ.

    ಡಿಜಿಟಲ್ ಇಂಡಿಯಾ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ. ನಗದು ವ್ಯವಹಾರವನ್ನು ಕಡಿಮೆ ಮಾಡಬೇಕು. ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಆದರೆ ಇದನ್ನೆ ದಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ 

    ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್‍ನ ಪತ್ತೆ ಮಾಡಿದ್ದಾರೆ. ಬಂಗಾರದ ಅಂಗಡಿಗಳನ್ನು ಟಾರ್ಗೆಟ್ ಮಾಡ್ತಿದ್ದ ಖದೀಮರ ತಂಡ ಮೊದಲು ಒಂದು ತೊಲ ಬಂಗಾರ(10 ಗ್ರಾಂ) ಖರೀದಿ ಮಾಡಿ ಅದರ ಸಂಪೂರ್ಣ ಅಮೌಂಟ್ ಫೋನ್ ಪೇ ಮೂಲಕ ಸಂದಾಯ ಮಾಡಿ ಅವರ ವಿಶ್ವಾಸ ಗಳಿಸಿ ನಂತರ ಅದೇ ಅಂಗಡಿಗಳಲ್ಲಿ ಹೆಚ್ಚು ಬಂಗಾರ ಖರೀದಿ ಮಾಡುತ್ತಾರೆ.

    ಹಣ ಸಂದಾಯ ಮಾಡದೇ ಅಷ್ಟೇ ಅಮೌಂಟ್ ಸ್ಕ್ರೀನ್ ಶಾಟ್‌ನ್ನು ಮಾಲೀಕರಿಗೆ ತೋರಿಸಿ ಮಕ್ಮಲ್ ಟೋಪಿ ಹಾಕಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಠಾಣೆ, ರಾಯಭಾಗ ಠಾಣೆ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ 8 ಪ್ರಕರಣ ದಾಖಲಾಗಿದ್ದವು.

    ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಹಾರಾಷ್ಟ್ರ ಮೂಲದ ಹಾಗೂ ಕರ್ನಾಟಕದ ಕಾಗವಾಡ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲಕ್ಷ ರೂಪಾಯಿ ಮೌಲ್ಯದ 421 ಗ್ರಾಂ. ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ: ಅಮಿತ್ ಶಾ

    ಬಂಗಾರ ಖರೀದಿಸಿ ಹಣ ಜಮೆ ಮಾಡಿದ ಸ್ಕ್ರೀನ್ ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕುವ ಜನರ ಬಗ್ಗೆ ಎಚ್ಚರವಾಗಿರಿ. ಹಣ ಜಮೆ ಆಗಿದ್ದನ್ನು ಕನ್ಫರ್ಮ್ ಮಾಡಿಕೊಂಡು ವ್ಯವಹಾರ ಮಾಡಿ ಅಂತ ಎಸ್‍ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ ಕಿಡಿ

    ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ ಕಿಡಿ

    ಚಿಕ್ಕೋಡಿ: ಕಾಂಗ್ರೆಸ್ ಪಕ್ಷದವರು ಎಂದೂ ಸತ್ಯ ಹೇಳುವುದಿಲ್ಲ. ಅವರು ಸತ್ಯ ಮಾತನಾಡಿದ ದಿನ ಅವರಿಗೆ ಸಾವು ಬರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಚಿಕ್ಕೋಡಿಯಲ್ಲಿ ಪ್ರವಾಹ ಕುರಿತು ಅಧಿಕಾರಿಗಳೊಂದಿಗೆ ಮುಂಜಾಗೃತಾ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಬಾಂಬ್ ಹಾರಿಸಿ ಪಾಕಿಸ್ತಾನ ಹೆಸರು ಹೇಳುತ್ತಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಸಿದ್ದರಾಮಯ್ಯ ಅವರು 7 ಕೆಜಿ ಅಕ್ಕಿ ನೀಡಿದ್ದಾರೆ. ಆದರೆ ನರೇಂದ್ರ ಮೋದಿ ಅವರು 10 ಕೆಜಿ ಅಕ್ಕಿ ನೀಡಿದರೂ ಪ್ರಚಾರ ಪಡೆದಿಲ್ಲ. ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ: ಮಲ್ಲಿಕಾರ್ಜುನ್ 

    ಇತ್ತೀಚಿನ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾಗೂ ಮನೆಹಾನಿ ಬಗ್ಗೆ ನಿಖರವಾಗಿ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಇತ್ತೀಚಿನ ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತ ಹೊಂದಿರುವುದರಿಂದ ನೀರು ಸರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸೂಚಿಸಿದರು.

    ಹಾನಿಗೊಳಗಾಗಿರುವ ಒಟ್ಟಾರೆ 775 ಮನೆಗಳಿಗೂ ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು. ನೋಡಲ್ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ಅಧಿಕಾರಿಗಳಿಗೂ ರಜೆ ನೀಡಬಾರದು ಎಂದು ತಿಳಿಸಿದರು.

    ಯಾವುದೇ ಪ್ರವಾಹದ ಆತಂಕವಿಲ್ಲ. ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ. ಸಂಭವನೀಯ ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ 

    ಬಳಿಕ ಮಾಂಜರಿ ಸೇತುವೆಗೆ ತೆರಳಿ ಕೃಷ್ಣಾ ನದಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ಚಿಕ್ಕೋಡಿ: ಶ್ರೀ ರಾಮಸೇನಾ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕುಟುಂಬದವರ ಶ್ರೀ ಬನಶಂಕರಿ ಫೌಂಡೇಶನ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಸಿರು ಬೋರ್ಡ್ ವಿತರಣಾ ಸಮಾರಂಭ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಜರುಗಿತು.

    ಪಟ್ಟಣದ ಹಳ್ಳದಕೆರಿಯಲ್ಲಿರಯವ ಕೋಟೆ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಟ್ರಸ್ಟ್ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಹಾಗೂ ಕ್ಯಾರಗುಡ್ಡದ ಅಭಿನವ ಮಂಜುನಾಥ್ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಪ್ರತಿ ವರ್ಗ ಕೊಠಡಿಗಳಿಗೆ ಗ್ರೀನ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಪೆಟ್ ವಾಟರ್ ಬಾಟಲ್‍ಗಳನ್ನ ವಿತರಿಸಿದರು. ಇದನ್ನೂ ಓದಿ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್ 

    ಈ ಸಂದರ್ಭದಲ್ಲಿ ಮಾತನಾಡಿದ ಮುತಾಲಿಕ್ ಅವರು, ನಮ್ಮ ತಂದೆ ತಾಯಿಗಳ ಸ್ಮರಣಾರ್ಥವಾಗಿ ಕಳೆದ ಎರಡು ವರ್ಷಗಳಿಂದ ನಾನು, ನಮ್ಮ ಸಹೋದರಿ ಹಾಗೂ ಸಹೋದರು ಶ್ರೀ ಬನಶಂಕರಿ ಫೌಂಡೇಶನ್ ಸ್ಥಾಪಿಸಿ ಸಾಮಾಜಿಕ ಕಾರ್ಯ ಮಾಡುತ್ತಿದ್ದೇವೆ. ಈ ವರ್ಷ ನಾವು ಕಲಿತ ಶಾಲೆಯ ಪ್ರತಿ ಕೊಠಡಿಗೆ ಆಧುನಿಕ ಹಸಿರು ಫಲಕ ನೀಡಿದ್ದೇವೆ ಎಂದು ವಿವರಿಸಿದರು.

    ಕೋಟೆ ಭಾಗ ಶಾಲೆಯು ಶತಮಾನೋತ್ಸವ ಗತಿಸಿ ನಮ್ಮೆಲ್ಲರಿಗೆ ವಿದ್ಯಾದಾನ ಮಾಡಿದ ಈ ಶಾಲೆಯನ್ನು ಇಂದಿನಿಂದ ದತ್ತು ಪಡೆದು ತಾಲೂಕಿನಲ್ಲಿ, ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಮಾಡುವ ಗುರಿ ಹೊಂದಿದ್ದೇವೆ. ಶಾಲೆ ಕಟ್ಟಡ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ವತಿಯಿಂದ ಶ್ರಮಿಸುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ:  ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ವಹಿಸಿಕೊಂಡಿದ್ದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ್, ಉಪಾಧ್ಯಕ್ಷ ಆನಂದ್ ಗಂಧ, ಟ್ರಸ್ಟ್‌ನ ಸದಸ್ಯರಾದ ವಿನೋದ್ ಮುತಾಲಿಕ್, ಅನಂತ್ ಮುತಾಲಿಕ್, ತೇಜೆಶ್ವಿನಿ ಜೋಶಿ, ಸಂಜೀವ್ ಮುತಾಲಿಕ್ ಅರವಿಂದ್ ದೇಶಪಾಂಡೆ, ಮುಖ್ಯೋಪಾಧ್ಯಾಯೆ ಎಸ್.ಎಸ್.ನೋಗನಿಹಾಳ, ಮಂಜುಳಾ ಅಡಿಕೆ, ಮಹಾಂತೇಶ್ ಸಂಭಾಳ ಮುಂತಾದವರು ಉಪಸ್ಥಿತರಿದ್ದರು.

    Live Tv

  • ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

    ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

    ಚಿಕ್ಕೋಡಿ(ಬೆಳಗಾವಿ): ವಿಷಕಾರಿ ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ.

    SNAKE

    ಇಶಾಂತ್ ರಾಘವೇಂದ್ರ ಕಾಂಬಳೆ (04) ಮೃತ ಮಗು. ಯರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಗು ಮನೆಯಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ. ಹಾವು ಕಚ್ಚಿದ ಪರಿಣಾಮ ಮಗು ಅಳಲು ಆರಂಭಿಸಿದಾಗ ಮಗುವನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇದನ್ನೂ ಓದಿ: ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟೀ ಅಂಗಡಿಯಲ್ಲಿ ಅಗ್ನಿ ಅವಘಡ- ಬಾಲಕಿ ಗಂಭೀರ

  • ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

    ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

    ಚಿಕ್ಕೋಡಿ: ತಾಯಿಯೊಬ್ಬರು ಎಂಟು ವರ್ಷಗಳ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ.

    SUICIDE

    ಸವೀತಾ ಮದಗೋಂಡ ಬೆಳಗಲಿ (24) ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ 

    ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಎಲ್ಲ ನಾಮಪತ್ರಗಳು ಕ್ರಮಬದ್ಧ