Tag: Chikmagalur

  • ಸಾಕಾನೆಯಿಂದ ಕಾಡಾನೆ ಕಾಡಿಗಟ್ಟೋ ಕಾರ್ಯಚರಣೆ – ಅಂಬಾರಿ ಹೊರುವ ಭೀಮ-ಅರ್ಜುನ ಭಾಗಿ

    ಸಾಕಾನೆಯಿಂದ ಕಾಡಾನೆ ಕಾಡಿಗಟ್ಟೋ ಕಾರ್ಯಚರಣೆ – ಅಂಬಾರಿ ಹೊರುವ ಭೀಮ-ಅರ್ಜುನ ಭಾಗಿ

    ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಂತಿರುವ ಬೀಕನಹಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಯಿಂದ ಕಾಡಾನೆಯನ್ನ ಕಾಡಿಗಟ್ಟಲು ಮುಂದಾಗಿದ್ದಾರೆ. ಈ ಎಲಿಫೆಂಟ್ ಆಪರೇಷನ್‍ಗೆ ಮೈಸೂರಿನ ಅಂಬಾರಿ ಆನೆಗಳಾದ ಭೀಮ ಹಾಗೂ ಅರ್ಜುನ ಆಗಮಿಸಿದ್ದು, ಕಾರ್ಯಚರಣೆ ಆರಂಭಿಸಲಾಗಿದೆ.

    ತಾಲೂಕಿನ ಬೀಕನಹಳ್ಳಿ ಕಾಡಂಚಿನ ಗ್ರಾಮದಲ್ಲಿ ಕಾಡು ಹಾಗೂ ಹೊಲ-ಗದ್ದೆ, ತೋಟಗಳು ಹೊಂದಿಕೊಂಡಂತಿವೆ. ಹಾಗಾಗಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರಿತ್ತು. ಅದರಲ್ಲೂ ಕಳೆದ ಎರಡು ತಿಂಗಳಿಂದ ಈ ಭಾಗದ ರೈತರು ಕಣ್ತುಂಬಿ ನಿದ್ದೆ ಮಾಡಿದ್ದೇ ಇಲ್ಲ. ಪಟಾಕಿ ಸಿಡಿಸಿ ಏನೇ ಮಾಡಿದರು ರೈತರು ಮನೆಗೆ ಬರುವಷ್ಟರಲ್ಲಿ ಮತ್ತದೇ ಜಾಗಕ್ಕೆ ಬಂದು ನಿಂತಿರುತ್ತಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್

    ಹಾಗಾಗಿ, ಆನೆ ಹಾವಳಿಯಿಂದ ಇಲ್ಲಿನ ರೈತರು ಕಂಗಾಲಾಗಿದ್ದರು. ಅಡಿಕೆ-ಬಾಳೆ, ತೆಂಗು, ಮೆಣಸು, ಕಾಫಿ, ಭತ್ತ ಸೇರಿದಂತೆ ಯಾವುದೇ ಬೆಳೆಗಳು ಕೂಡ ರೈತರ ಕೈ ಸೇರಿದ್ದಕ್ಕಿಂತ ಆನೆ ಕಾಲಿಗೆ ಸಿಕ್ಕಿ ಮಣ್ಣಾಗಿದ್ದೇ ಹೆಚ್ಚು. ಹಾಗಾಗಿ, ಈ ಭಾಗದ ರೈತರು ಆನೆ ಹಾವಳಿಯಿಂದ ಹೊಲ-ಗದ್ದೆ, ತೋಟಗಳತ್ತ ಮುಖ ಮಾಡೋದನ್ನೇ ಬಿಟ್ಟಿದ್ದರು.

    ಮತ್ತಲವು ಬೆಳೆಗಾರರು ಒಂದು ಪ್ರಯತ್ನ ಮಾಡೋಣ ಎಂದು ತೋಟದಲ್ಲಿ ದೊಡ್ಡ-ದೊಡ್ಡ ಸಿಸ್ಟಮ್ ಇಟ್ಟು ಸದಾ ಕಾಲ ಹಾಡನ್ನು ಹಾಕುತ್ತಿದ್ದರು. ಆದರೂ ಆನೆ ಹಾವಾಳಿ ನಿಂತಿರಲಿಲ್ಲ. ಆದರೆ, ಕಳೆದ ಎರಡು ದಿನಗಳ ಹಿಂದಷ್ಟೆ ತಾಲೂಕಿನ ಆಲ್ದೂರು ಸಮೀಪ ಕಾಫಿತೋಟದಲ್ಲಿ ಮೆಣಸು ಕೊಯ್ಯುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಆಕೆಯನ್ನ ಕೊಂದು ಮತ್ತೋರ್ವನಿಗೆ ಗಂಭೀರ ಗಾಯಗೊಳಿಸುತ್ತು.

    ಬೀಕನಹಳ್ಳಿಯೂ ಕಾಡಂಚಿನ ಗ್ರಾಮ ರೈತರು ಸದಾ ಕಾಲ ಓಡಾಡುತ್ತಿರುತ್ತಾರೆ ಎಂದು ಮನಗಂಡ ಅರಣ್ಯ ಇಲಾಖೆ ನಾಳೆ ಮತ್ತೊಂದು ಅನಾಹುತ ನಡೆದು ಜನರ ಆಕ್ರೋಶಕ್ಕೆ ಇಲಾಖೆ ಕಾರಣವಾಗುವುದು ಬೇಡ ಎಂದು ಆನೆ ಕಾರ್ಯಚರಣೆ ಮುಂದಾಗಿದ್ದಾರೆ. ಎರಡು ಸಾಕಾನೆ ಭೀಮ ಹಾಗೂ ಅರ್ಜುನನ ಜೊತೆ ಮೂರು ತಂಡಗಳಾಗಿರೋ ಅರಣ್ಯ ಇಲಾಖೆಯ 60 ಸಿಬ್ಬಂದಿಗಳು ಒಂಟಿ ಸಲಗವನ್ನ ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ

    ಒಂದೆರಡು ದಿನಗಳ ಕಾರ್ಯಾಚರಣೆಯ ಬಳಿಕ ಬೀಕನಹಳ್ಳಿ ರೈತರಿಗೆ ತಲೆನೋವಾಗಿರೋ ಕಾಡಾನೆಯನ್ನ ಕಾಡಿಗಟ್ಟಲಿದ್ದಾರೆ.

  • ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ

    ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ

    ಚಿಕ್ಕಮಗಳೂರು: `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಟೀಕಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು `ಕಾಶ್ಮೀರದಲ್ಲಿ ಸಿದ್ದರಾಮಯ್ಯ ಅವರ ಮಕ್ಕಳು, ಮೊಮ್ಮೊಕ್ಕಳು ಉಳಿಯುತ್ತಿರಲಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಸಿದ್ರಾಮುಲ್ಲಾ ಖಾನ್ ಆಗಿದ್ದರೆ ಮಾತ್ರ ಉಳಿದಕೊಳ್ಳೋರು ಎಂದು ವ್ಯಂಗ್ಯವಾಡಿದರು.

    ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, `ದಿ ಕಾಶ್ಮೀರ್ ಫೈಲ್ಸ್’ ಸತ್ಯದ ಘಟನೆಗಳನ್ನು ಆಧರಿಸಿದ ಚಿತ್ರ. ಸಿದ್ದರಾಮಯ್ಯ ಅವರು ವಕೀಲರಿದ್ದಾರೆ, ತಿಳಿವಳಿಕೆಯುಳ್ಳವರಾಗಿದ್ದಾರೆ. ಎಲ್ಲ ಕಾಲಘಟ್ಟಕ್ಕೂ ಸರ್ಕಾರಿ ದಾಖಲೆಗಳನ್ನಿಟ್ಟಿದ್ದಾರೆ. ಎಲ್ಲ ದಾಖಲೆಗಳನ್ನು ಒಳಗೊಂಡಂತೆಯೇ ಈ ಚಿತ್ರವನ್ನು ತೆರೆಗೆ ತಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ: ತನ್ವೀರ್ ಸೇಠ್

    ಅಂದಿನ ಬಾಮಿಯಾನ್‍ನಲ್ಲಿ ಬುದ್ಧನನ್ನೂ ತಾಲಿಬಾನ್‍ಗಳು ಫಿರಂಗಿ ಇಟ್ಟು ಉಡಾಯಿಸಿದರು. ಅದೇ ಜನ ಕಾಶ್ಮೀರಿ ಪಂಡಿತರನ್ನು, ಹಿಂದೂಗಳನ್ನೂ ಕಾಶ್ಮೀರಿ ಕಣಿವೆ ತೊರೆಯಿರಿ ಎಂದು ಮೈಕ್‍ನಲ್ಲಿ ಸಾರಿದರು. ಅದೇ ಜನ ಭಯ ಹುಟ್ಟಿಸಲು ಕೊಂದರು. ಗರಗಸದಲ್ಲಿ ಕೊಯ್ದು ಕೊಂದರು. ಅದಕ್ಕೆ ಸಾಕ್ಷಿ ಬೇಕು ಅಂದರೆ ಸಾವಿರ ಸಾಕ್ಷಿಗಳು ಸಿಗುತ್ತವೆ ಎಂದು ಸ್ಪಷ್ಟಪಡಿಸಿದರು.

    ಆ ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ, ನಿರಾಶ್ರಿತರಾಗಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹ ಮನಸ್ಥಿತಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ನೋಡಿ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಸತ್ಯವನ್ನೂ ನೋಡಿ ಒಪ್ಪಿಕೊಳ್ಳುವ ಮನಸ್ಸು, ಮನಸ್ಥಿತಿಯಿಲ್ಲ ಎಂದು ಟೀಕಿಸಿದರು.

    ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ:
    ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ, ಬದಲಿಗೆ ಜೀವನದ ಸಾರ್ಥಕತೆ ಮೆರೆದಿದ್ದಾರೆ. ಜಗತ್ತಿನ ಇತಿಹಾಸದಲ್ಲಿಯೂ ಭಗವದ್ಗೀತೆ ಓದಿ ಭಯೋತ್ಪಾದಕರಾದ ಒಬ್ಬ ವ್ಯಕ್ತಿಯ ಉದಾಹರಣೆಯಿಲ್ಲ. ಏಕೆಂದರೆ ಭಗವದ್ಗೀತೆ ಪ್ರೇರಣೆ ಕೊಡುತ್ತದೆಯೇ ಹೊರತು ಪ್ರಚೋದಿಸಲ್ಲ. ಮಹಾತ್ಮ ಗಾಂಧೀಜಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ಭಗವದ್ಗೀತೆ ಪ್ರೇರಣೆ ನೀಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

    ಹಿಜಾಬ್ ಬ್ಯಾನ್ ಮಾಡಿ ಎಂದು ಹೇಳಿಲ್ಲ:
    ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ಬ್ಯಾನ್ ಮಾಡಿ ಎಂದು ನ್ಯಾಯಾಲಯ ಅಥವಾ ಸರ್ಕಾರ ಎಲ್ಲೂ ಹೇಳಿಲ್ಲ. ಶಾಲೆಯಲ್ಲಿ ಮಾತ್ರ ಧರಿಸಬಾರದು ಎಂದು ಹೇಳಲಾಗಿದೆ. ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡುವುದಕ್ಕೆ ಸಂವಿಧಾನ ಎಲ್ಲರಿಗೂ ಅಧಿಕಾರ ಕೊಟ್ಟಿದೆ. ಆದರೆ ಮತ್ತೆ ಮತ್ತೆ ಆದೇಶ ಉಲ್ಲಂಘಿಸುವುದು ಪ್ರಚೋದನೆ ನೀಡಿದಂತಾಗುತ್ತದೆ. ವಿವಾದವನ್ನು ಜೀವಂತವಾಗಿಡುವ ದುರುದ್ದೇಶವಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ : ಪ್ರತಾಪ್ ಸಿಂಹ

    ಬಿಸಿಯೂಟದಲ್ಲಿ ಜಾತಿ ಇದೆಯೇ?
    ಮುಗ್ಧ ಮಕ್ಕಳ ಮನಸ್ಸನ್ನು ಒಡೆಯಬಾರದೆಂದು ಶಾಲೆಯಲ್ಲಿ ಸಮವಸ್ತ್ರ ತರಲಾಗಿದೆ. ಒಡೆಯುವ ಕೆಲಸ ಮಾಡಿದವರು ಯಾರು? ಮಕ್ಕಳ ಬಿಸಿಯೂಟದಲ್ಲಿ ಜಾತಿಯಿದೆಯೇ? ಜೀನವಕ್ಕೆ ಪ್ರೇರಣೆ ನೀಡುವ ಅಂತಃಸತ್ವಗಳೇ ಬೇರೆ. ಬಸವಣ್ಣ, ಕಬೀರ, ಕನಕದಾಸರು, ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂರವರ ಬದುಕಿನಿಂದಲೇ ಒಂದು ಪ್ರೇರಣೆ ಸಿಗುತ್ತದೆ. ಇದನ್ನು ಜಾತಿಯಿಂದ ನೋಡಲಾಗುತ್ತದೆಯೇ ಎಂದು ಪ್ರಶ್ನಿಸಿದರು.

  • ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ 4ನೇ ಕ್ಲಾಸ್ ವಿದ್ಯಾರ್ಥಿ

    ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ 4ನೇ ಕ್ಲಾಸ್ ವಿದ್ಯಾರ್ಥಿ

    ಚಿಕ್ಕಮಗಳೂರು: ಅಪ್ಪನ ಜೊತೆ ಜಗಳವಾಡಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.

    ಚೇತನ್ (9) ಮೃತ ಬಾಲಕ. ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಗ್ರಾಮದವರಾಗಿರುವ ಬಾಲಕನ ಪೋಷಕರು ಕಳೆದ ನಾಲ್ಕೈದು ವರ್ಷಗಳ ಹಿಂದೆ ಕುಟುಂಬವು ಆಲ್ದೂರಿಗೆ ಬಂದಿತ್ತು. ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಾಫಿತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿರೋ ಉಕ್ರೇನ್ ರಿಟರ್ನ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ..?

    ಕುಟುಂಬವು ಆಗಾಗ್ಗೆ ರಾಣಿಬೆನ್ನೂರಿಗೆ ಹೋಗಿ ಬರುತ್ತಿತ್ತು. ಮೃತನು ತುಸು ಸಿಟ್ಟಿನ ಬಾಲಕನಾಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆಗಾಗ್ಗೆ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದನು. ಇದನ್ನೂ ಓದಿ: ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

    ನಾಲ್ಕು ದಿನಗಳ ಹಿಂದೆ ಸ್ವಂತ ಊರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಎಲ್ಲರೂ ಹೋಗಿದ್ದರು. ಈ ವೇಳೆ ಅಪ್ಪನ ಜೊತೆ ಜಗಳವಾಡಿದ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಓದಿನಲ್ಲಿ ಚುರುಕು ಹಾಗೂ ಸದಾ ಲವಲವಿಕೆಯಿಂದ ಇರುತ್ತಿದ್ದ. ಬಾಲಕನ ಸಾವಿಗೆ ಶಾಲೆಯ ಶಿಕ್ಷಕ ವರ್ಗ ಕೂಡ ಬೇಸರ ವ್ಯಕ್ತಪಡಿಸಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಆತ್ಮಹತ್ಯೆ ಪದದ ಅರ್ಥವೇ ತಿಳಿಯದ ಎಳೆ ವಯಸ್ಸಿನ ಮಕ್ಕಳು ಈ ರೀತಿಯ ದುಸ್ಸಾಹಕ್ಕೆ ಕೈಹಾಕುತ್ತಿದ್ದಾರೆ ಎಂದರೆ ಆಧುನಿಕ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿದೆ.

  • ಕ್ರಿಕೆಟ್ ಬೆಟ್ಟಿಂಗ್, ಕಾರ್ಡ್ಸ್‌ ಆಡಲು ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳ ಅರೆಸ್ಟ್

    ಕ್ರಿಕೆಟ್ ಬೆಟ್ಟಿಂಗ್, ಕಾರ್ಡ್ಸ್‌ ಆಡಲು ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳ ಅರೆಸ್ಟ್

    ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡಲೆಂದೇ ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳನೊಬ್ಬನನ್ನು ನಗರದ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಸಂತೋಷ್ (30) ಬಂಧಿತ ಆರೋಪಿ. ಈ ಕಿಲಾಡಿ ಕೇಡಿ ಅರ್ಧ ಕರ್ನಾಟಕದ ಖಾಕಿಗಳಿಗೆ ಬೇಕಾಗಿದ್ದಾನೆ. ಈತನ ಮೇಲೆ ಚಿಕ್ಕಮಗಳೂರು 6, ಮಂಡ್ಯ 2, ಹಾಸನ, ತುಮಕೂರು, ಮೈಸೂರಲ್ಲಿ ತಲಾ ಒಂದು ಪ್ರಕರಣಗಳಿವೆ. ರಾಮನಗರದಲ್ಲಿ ಬರೋಬ್ಬರಿ 18 ಪ್ರಕರಣಗಳಿದ್ದು, ಆರು ತಿಂಗಳ ಹಿಂದೆ ಈತ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.

    BRIBE

    ಆದರೂ ಸಹಿತ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದು ಶುಕ್ರವಾರ ಪೊಲೀಸರ ಅತಿಥಿಯಾಗಿದ್ದಾನೆ. ಈತ ಕೇವಲ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡುವುದಕ್ಕೆ ಕಳ್ಳತನ ಮಾಡುತ್ತಿದ್ದನು. ಅವನೋಬ್ಬ ಮೋಜಿನ ಕಳ್ಳ. ಒಬ್ಬನೇ ಕಳ್ಳತನ ಮಾಡುತ್ತಿದ್ದ. ಕದ್ದ ದುಡ್ಡಲ್ಲಿ ಲಕ್ಷ-ಲಕ್ಷ ಕಾಡ್ರ್ಸ್ ಆಡುತ್ತಿದ್ದ. ಒಂದೂರಲ್ಲಿ ಕಳ್ಳತನ ಮಾಡಿದರೆ ಮತ್ತೊಂದು ಊರಲ್ಲಿ ಕಾರ್ಡ್ಸ್‌ ಆಡುತ್ತಿದ್ದ. ಬಳ್ಳಾರಿ, ರಾಯಚೂರಿನಲ್ಲಂತು ಎಲ್ಲರಿಗೂ ಈತ ಚಿರಪರಿಚಿತನಾಗಿದ್ದಾನೆ.

    ಕಳ್ಳತನ ಮಾಡಲು ಈತ ಒಬ್ಬನೇ ಹೋಗುತ್ತಿದ್ದ. ತನ್ನ ಜುಪಿಟರ್ ಬೈಕಿನಲ್ಲಿ ಒಂದು ರೌಂಡ್ ಹಾಕಿ ಯಾವ ಮನೆ ಬೀಗ ಹಾಕಿದೆ ಎಂದು ನೋಡಿಕೊಳ್ಳತ್ತಿದ್ದನು. ನಂತರ ಲಾಕ್ ಮುರಿದು ಸಲೀಸಾಗಿ ಕೆಲಸ ಮುಗಿಸಿಕೊಂಡು ಅದೇ ಬೈಕಿನ ಡಿಕ್ಕಿಯಲ್ಲಿ ಎಲ್ಲಾ ತುಂಬಿಕೊಂಡು ಹೋಗುತ್ತಿದ್ದ. ಕಳೆದ ತಿಂಗಳು ನಗರದ ದಂಟರಮಕ್ಕಿ, ಮೂಗ್ತಿಹಳ್ಳಿಯಲ್ಲಿ ಕಳ್ಳತನವಾಗಿತ್ತು. ಎರಡೂ ಕಳ್ಳತನ ಶೈಲಿ ಒಂದೇ ರೀತಿಯಲ್ಲಿತ್ತು. ಪೊಲೀಸರು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಇವನ ಟ್ರಾಕ್ ರೆಕಾರ್ಡ್ ಬೆನ್ನತ್ತಿದಾಗ ಖಾಕಿಗಳ ಕೈಗೆ ಸಿಕ್ಕಿಬಿದ್ದಿದಾನೆ. ಅದು 52 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ-ಹಣದ ಸಮೇತ.

    ಸಂತೋಷ್ ರಾತ್ರಿ ಫುಲ್ ಪಾರ್ಟಿ ಮಾಡುತ್ತಿದ್ದ, ಹಗಲಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದ. ಕದ್ದ ಒಡವೆಗಳನ್ನು ಪರಿಚಿತ ಮಹಿಳೆಯರನ್ನು ಪುಸಲಾಯಿಸಿ ಅವರ ಕೈನಲ್ಲಿ ಅಡಮಾನವಿಡಿಸುತ್ತಿದ್ದ. ನಾನು ಹೋದರೆ ಕಳ್ಳ ಅಂತಾರೆ. ನೀವೇ ಕದ್ದಿದ್ದೀರಾ ಅಂತಾರೆ. ನಾನು ಗ್ಯಾಂಬ್ಲಿಂಗ್ ಆಡ್ತೀನಿ. ಕಾರ್ಡ್ಸ್‌ ಆಟದಲ್ಲಿ ಸೋತು ದುಡ್ಡಿಲ್ಲ ಅಂತ ಒಡವೆ ಅಡವಿಡುತ್ತಿದ್ದೇನೆ ಎಂದು ಮಹಿಳೆಯರ ದಾರಿ ತಪ್ಪಿಸುತ್ತಿದ್ದ.

    ಪ್ರಕರಣದ ಬೆನ್ನತ್ತಿದ್ದ ಕಾಫಿನಾಡ ಪೊಲೀಸರು ಇವನ ಹೆಜ್ಜೆ ಗುರುತುಗಳನ್ನ ಕಂಡು ದಂಗಾಗಿದ್ದಾರೆ. ಒಂದು ಕೇಸ್‍ನಲ್ಲಿ ಕರೆದುಕೊಂಡು ಹೋದರೆ ಮತ್ತೊಂದು ಕೇಸಲ್ಲಿ ಸಿಕ್ಕಿಬೀಳುತ್ತಿದ್ದ. ಒಂದು ಜ್ಯುವೆಲ್ಲರಿ ಶಾಪ್‍ಗೆ ಹೋದರೆ ಮತ್ತೆರಡರಲ್ಲಿ ಸಿಗುತ್ತಿದ್ದ. ಹೀಗೆ ನಗರದ ಕಳ್ಳತನ ಪ್ರಕರಣದ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಐದು ಜಿಲ್ಲೆಯ 11 ಕೇಸ್‍ಗಳಲ್ಲಿ ಸಿಕ್ಕಿಬಿದ್ದಿದ್ದಾನೆ.

    ಕ್ರಿಕೆಟ್ ಬೆಟ್ಟಿಂಗ್ ಆಡೋದರಲ್ಲಿ ಇವನು ಪಂಟರ್. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಹುಡುಗಿಯರ ಮ್ಯಾಚ್ ಯಾವುದನ್ನೂ ಬಿಡುತ್ತಿರಲಿಲ್ಲ. ಕದ್ದ ದುಡ್ಡಲ್ಲಿ ಎಲ್ಲದಕ್ಕೂ ಲಕ್ಷ-ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದನು. ಆನ್‍ಲೈನ್ ಸೈಬರ್ ಮ್ಯಾಚ್ ಕೂಡ ಬಿಡದೇ ಬೆಟ್ಟಿಂಗ್ ಆಡುತ್ತಿದ್ದ. ಮೋಜಿಗೋಸ್ಕರವೇ ಕದ್ದು ಕಂಡವರ ದುಡ್ಡಲ್ಲಿ ಮಜಾ ಮಾಡುತ್ತಿದ್ದ. ಈತನನ್ನ ಕಾಫಿನಾಡ ಪೊಲೀಸರು ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುಲು ಬಿಟ್ಟಿದ್ದಾರೆ.

  • 40 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಪ್ರೊಜೆಕ್ಟರ್ ಕಳ್ಳತನ!

    40 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಪ್ರೊಜೆಕ್ಟರ್ ಕಳ್ಳತನ!

    ಚಿಕ್ಕಮಗಳೂರು: ಶಾಲೆ, ಕೋಳಿ ಅಂಗಡಿ ಹಾಗೂ ಗ್ಯಾರೇಜ್ ಸೇರಿದಂತೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಅತ್ತಿಗೆರೆ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದೆ.

    ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಡೇ ಕಾರ್ಯಕ್ರಮ ಮುಗಿಸಿ ಎಲ್ಲ ಉಪಕರಣಗಳನ್ನು ಒಂದು ರೂಮಿನಲ್ಲಿ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು. ಅದೇ ದಿನ ರಾತ್ರಿ ಕಳ್ಳರು ಶಾಲೆಯ ಬೀಗ ಒಡೆದು ಸುಮಾರು 40 ಸಾವಿರ ಮೌಲ್ಯದ ಪ್ರೊಜೆಕ್ಟರ್, ಎರಡು ಸಾವಿರ ಹಣ ಹಾಗೂ ಉಳಿದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಇದನ್ನೂ ಓದಿ: ಇನ್ನೋವಾ ಕಾರಲ್ಲಿ ಬಂದು ಕಳ್ಳತನ – ಸಿಸಿಟಿವಿಯಲ್ಲಿ ಶ್ರೀಮಂತ ಕಳ್ಳರ ಕೈಚಳಕ ಸೆರೆ

    ಜೊತೆಗೆ, ಕೊಟ್ಟಿಗೆಹಾರದ ಕೋಳಿ ಅಂಗಡಿ ಹಾಗೂ ಗ್ಯಾರೇಜ್‍ನಲ್ಲೂ ಹಣವನ್ನು ದೋಚಿದ್ದಾರೆ. ಹೀಗೆ ಸರಣಿ ಕಳ್ಳತನ ನಡೆಯಲು ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕೊಟ್ಟಿಗೆಹಾರದ ಜನ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೊಟ್ಟಿಗೆಹಾರದಲ್ಲಿ ಈ ಹಿಂದೆ ಕೂಡ ಸರಣಿ ಕಳ್ಳತನ ನಡೆದಿದೆ. ಪೊಲೀಸರು ಯಾರನ್ನೂ ಬಂಧಿಸಿಲ್ಲ. ಅತ್ತಿಗೆರೆಯ ಸೋಮೇಶ್ವರ್ ದೇವಸ್ಥಾನದಲ್ಲಿ 18 ಗಂಟೆಗಳನ್ನ ಕಳ್ಳತನ ಮಾಡಿದ್ದರು. ಅವರನ್ನೂ ಹಿಡಿಯಲಿಲ್ಲ. ಗ್ಯಾಸ್ ವ್ಯಾಪಾರಿ ದುಗ್ಗಪ್ಪ ಅವರ ಮನೆಯಲ್ಲಿ ಸುಮಾರು ಮೂರು ಲಕ್ಷ ಹಣ ದೋಚಿದ್ದರು. ಆ ಕಳ್ಳರನ್ನೂ ಹಿಡಿಯಲಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

    ಪೊಲೀಸರ ವೈಫಲ್ಯವೇ ಹೀಗೆ ಸರಣಿ ಕಳ್ಳತನ ನಡೆಯಲು ಕಾರಣ. ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕಳ್ಳರನ್ನ ಹಿಡಿಯದಿದ್ದರೆ ಕಳ್ಳರಿಗೆ ಪೊಲೀಸರ ಮೇಲೆ ಭಯ ಇರುವುದಿಲ್ಲ. ಸರಣಿ ಕಳ್ಳತನ ನಡೆಯುವುದದರಿಂದ ಕೊಟ್ಟಿಗೆಹಾರದ ಜನ ಕೂಡ ಆತಂಕದಿದ್ದಾರೆ. ಕೂಡಲೇ ಪೊಲೀಸರು ಕಳ್ಳರನ್ನ ಬಂಧಿಸಬೇಕೆಂದು ಕೊಟ್ಟಿಗೆಹಾರದ ಜನ ಪೊಲೀಸರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಉಕ್ರೇನ್‌ನಿಂದ ಬಂದ ಕರ್ನಾಟಕ ವಿದ್ಯಾರ್ಥಿಗಳ ಭವಿಷ್ಯ ಏನು?: ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪ

    ಪ್ರಕರಣ ದಾಖಲಿಸಿಕೊಂಡ ಬಣಕಲ್ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಪೊಲೀಸ್ ಶ್ವಾನದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಕಳ್ಳತನಕ್ಕೆ ಬಂದಿದ್ದ ಕಳ್ಳರು ತಂದಿದ್ದ ರಾಡ್‍ಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಪೊಲೀಸರು ಅವುಗಳನ್ನೂ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಸಿಕ್ಕಿಬಿದ್ದ ವೃದ್ಧ- ಕಾರಣ ಕೇಳಿ ಅಧಿಕಾರಿಗಳೇ ಶಾಕ್!

    ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಸಿಕ್ಕಿಬಿದ್ದ ವೃದ್ಧ- ಕಾರಣ ಕೇಳಿ ಅಧಿಕಾರಿಗಳೇ ಶಾಕ್!

    ಚಿಕ್ಕಮಗಳೂರು: ವೃದ್ಧನೊಬ್ಬ ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ.

    ಬಂಧಿತನನ್ನು ಸುಮಾರು 60 ವರ್ಷದ ಬಸವೇಗೌಡ ಎಂದು ಗುರುತಿಸಲಾಗಿದೆ. ವೃದ್ಧನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವೃದ್ಧನ ಉತ್ತರ ಕೇಳಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

    ವೃದ್ಧ ನಿಸಿದ ಉತ್ತರವೇನು..?
    ಬೇರೆ ಯಾರದರೂ ಬೆಂಕಿ ನೀಡಿದರೆ ಬೆಂಕಿ ನನ್ನ ಹೊಲಕ್ಕೂ ಬರಬಹುದು. ಅದಕ್ಕೆ ನಾನೇ ನನ್ನ ಹೊಲಕ್ಕೆ ಬೆಂಕಿ ಬಾರದಿರಲಿ ಎಂದು ಬೆಂಕಿ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ವೃದ್ಧನ ಮಾತು ಕೇಳಿದ ಅರಣ್ಯ ಅಧಿಕಾರಿಗಳು ಆತನಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಬೆಂಕಿ ಬೀಳುತ್ತಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿಯಿಂದ ಕಾಡನ್ನ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳು ಈಗಾಗಲೇ ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಕೆಲವರ ಅಜ್ಞಾನದಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಬಂಧಿತ ಬಸವೇಗೌಡ ಬೆಂಕಿ ನೀಡಿದ್ದರಿಂದ ಸುಮಾರು 10 ಎಕರೆಯಷ್ಟು ಅರಣ್ಯ ಸುಟ್ಟು ಹೋಗಿದೆ. ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ. ಬಯಲುಸೀಮೆ ಭಾಗದಲ್ಲಿ ದನ-ಕುರಿಗಳನ್ನು ಸಾಕುವವರ ಸಂಖ್ಯೆಯೂ ಹೆಚ್ಚಿದೆ. ಅರಣ್ಯ ಬೆಂಕಿ ನೀಡಿದರೆ ಮಳೆ ಬಂದ ಕೂಡಲೇ ಹುಲ್ಲು ಹುಲುಸಾಗಿ ಬೆಳೆಯುತ್ತೆ ಎಂದು ಕೆಲ ಸ್ಥಳಿಯರೇ ಅರಣ್ಯ ಬೆಂಕಿ ಕೊಡುತ್ತಾರೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ಅರಣ್ಯಕ್ಕೆ ಬೆಂಕಿ ಕೊಡುವುದು ತುಂಬಾ ಸುಲಭ. ಅದರಿಂದ ಆಗುವ ಆನಾಹುತ, ಅದನ್ನ ಆರಿಸಲು ಎಷ್ಟು ಕಷ್ಟ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ, ಅಧಿಕಾರಿಗಳು ಕೂಡ ಸ್ಥಳೀಯರಲ್ಲಿ ಅರಣ್ಯಕ್ಕೆ ಬೆಂಕಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕ ಆದರ್ಶ್ ಹಾಗೂ ಅರಣ್ಯ ವೀಕ್ಷಕ ಗಿರೀಶ್ ಪಾಲ್ಗೊಂಡಿದ್ದರು.

  • ಕೊಟ್ಟಿಗೆಹಾರದಲ್ಲಿ ಹೊತ್ತಿ ಉರಿದ ಅರಣ್ಯ – ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳ ಹರಸಾಹಸ

    ಕೊಟ್ಟಿಗೆಹಾರದಲ್ಲಿ ಹೊತ್ತಿ ಉರಿದ ಅರಣ್ಯ – ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳ ಹರಸಾಹಸ

    ಚಿಕ್ಕಮಗಳೂರು: ಗುಡ್ಡಕ್ಕೆ ಬೆಂಕಿ ತಗುಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಎಂಬ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆ ಸುರಿದಿತ್ತು. ಈಗ ಅಷ್ಟೇ ಪ್ರಮಾಣದ ರಣಬಿಸಿಲು ಕೂಡಾ ಇದೆ. ಭಾರೀ ಬಿಸಿಲಿಗೆ ಬೆಟ್ಟಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಕಿಡಿ ಬೆಂಕಿ ಸಿಕ್ಕರೂ ಇಡೀ ಕಾಡೇ ಹೊತ್ತಿ ಉರಿಯುವ ಸ್ಥಿತಿಯಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕಾಡನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ದೇವನಗೂಲ್ ಸಮೀಪ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಟ್ಟ ಕಾನನದ ಈ ಭಾಗದಲ್ಲಿ ಅಪಾರ ಪ್ರಮಾಣದ ಅಪರೂಪದ ಸಸ್ಯ ಸಂಪತ್ತು ಕೂಡ ಇದೆ. ಆದರೆ, ಬೆಂಕಿಯ ಕೆನ್ನಾಲಿಗೆ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ.

    ವಿಷಯ ತಿಳಿದ ಕೂಡಲೇ ಅರಣ್ಯ ಪ್ರದೇಶಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಕೂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನ ನಂದಿಸಿದ್ದಾರೆ. ಅರಣ್ಯ ಅಧಿಕಾರಿಗಳು ಮರದ ಟೊಂಗೆಗಳ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಅರಣ್ಯದ ಜೊತೆ ಸಾವಿರಾರು ಜೀವಸಂಕುಲ ಕೂಡ ಅಪಾಯದಿಂದ ಪಾರಾಗಿವೆ.

    ಮೂಡಿಗೆರೆ ಸಂಪೂರ್ಣ ಮಲೆನಾಡದರೂ ಮಾರ್ಚ್-ಏಪ್ರಿಲ್ ಬಿರುಬಿಸಲು ಕಾಲ. ಈ ವೇಳೆ ಅರಣ್ಯ ಅಧಿಕಾರಿಗಳು ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಕಟ್ಟಿಟ್ಟಬುತ್ತಿ. ಜಿಲ್ಲೆಯ ಅರಣ್ಯ ಇಲಾಖೆ ಕೂಡ ಕಾಡನ್ನ ರಕ್ಷಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಆದರೂ ಕೂಡ ಕೆಲ ಕಿಡಿಗೇಡಿಗಳಿಂದ ಪ್ರತಿ ವರ್ಷ ಅಲ್ಲಲ್ಲೇ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಸಂಪೂರ್ಣ ನಾಶವಾಗುತ್ತಿದೆ. ಜನಸಾಮಾನ್ಯರಲ್ಲಿ ಅರಣ್ಯದ ಮಹತ್ವದ ಅರಿವಾಗುವವರೆಗೂ ಈ ಅನಾಹುತ ತಪ್ಪಿದ್ದಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಕೂಡ ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ.

  • ಡಿಜೆ ಸೌಂಡ್ ಹಾಕಿ ಆನೆ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಅನ್ನದಾತರು

    ಡಿಜೆ ಸೌಂಡ್ ಹಾಕಿ ಆನೆ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಅನ್ನದಾತರು

    ಚಿಕ್ಕಮಗಳೂರು: ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ತಾಲೂಕಿನ ಹಂಪಾಪುರ, ಬೀಕನಹಳ್ಳಿಯ ರೈತರು ತೋಟದಲ್ಲಿ ಮೈಕ್ ಸೆಟ್ ಹಾಕಿ ಆನೆ ಹಾವಳಿಗೆ ವಿರಾಮ ಹಾಕಲು ಮುಂದಾಗಿದ್ದಾರೆ.

    ತಾಲೂಕಿನ ಬೀಕನಹಳ್ಳಿ, ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಆನೆ ಹಾವಳಿ ಮಿತಿ ಮೀರಿದೆ. ಆನೆ ಹಾವಳಿಯಿಂದ ರೈತರು ಹೊಲ-ಗದ್ದೆ-ತೋಟಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೆಳೆಗಳನ್ನ ಉಳಿಸಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ರೈತರೇ ಆನೆ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ರೈತರಿಗೆ ಪ್ರಕೃತಿಯಿಂದ ಬೆಳೆ ಉಳಿಸಿಕೊಳ್ಳುವುದಕ್ಕಿಂತ ಕಾಡಾನೆ, ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಬೀಕನಹಳ್ಳಿ ಹಾಗೂ ಹಂಪಾಪುರ ಗ್ರಾಮದ ತೋಟಗಳಲ್ಲಿ ಸುಮಾರು 30 ಕಡೆ ಅಲ್ಲಲ್ಲೇ ಮೈಕ್ ಸೆಟ್ ಕಟ್ಟಿದ್ದಾರೆ. ಈ ಮೈಕ್ ಸೆಟ್‍ನಲ್ಲಿ ಆನೆ ಬಂತು ಓಡಿಸ್ರೋ…. ಈ ಕಡೆ ಬಂತು…. ಆ ಕಡೆ ಬಂತು… ಅಂತ ಕೂಗುವ ಶಬ್ಧ. ಪಟಾಕಿ ಸಿಡಿಯುವ ಶಬ್ಧ. ಕಾಡು ಪ್ರಾಣಿಗಳು ಕೂಗುವ ಶಬ್ಧ ಬರುತ್ತಿರುತ್ತೆ. ಇದರಿಂದ ಆನೆ ಹಾವಳಿ ತಕ್ಕ ಮಟ್ಟಿಗೆ ಕಡಿಮೆಯಾಗುತ್ತೆ ಅನ್ನೋದು ರೈತರ ನಂಬಿಕೆ.

    ಸದ್ಯಕ್ಕೆ ಆನೆ ಹಾವಳಿಯೂ ತಕ್ಕ ಮಟ್ಟಿಗೆ ಕಡಿಮೆಯಾಗಿದೆ. ಈಗಾಗಲೇ, ಕೆಲ ತೋಟದ ಮರಗಳಲ್ಲಿ ಮೈಕ್ ಸೆಟ್ ಜೋತು ಬಿದ್ದಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೂ ಕಾಡಾನೆಗಳ ಅಬ್ಬರ ಜೋರಿತ್ತು. ಹಲವು ವರ್ಷಗಳಿಂದ ಇದೆ. ಈಗಲೂ ಇದೆ. ಹಳ್ಳಿಗಳಲ್ಲಿ ರೈತರಂತೆ ಠಿಕಾಣಿ ಹೂಡಿವೆ. ಆನೆಯಿಂದ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈಗ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಕ್ಕೆರಡು ಬಾರಿ ಫ್ಯಾಮಿಲಿ ಸಮೇತ ಆನೆಗಳ ಹಿಂಡು ಬಂದು ಹೋಗುವುದು ಸಾಮಾನ್ಯವಾಗಿದೆ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಹೀಗಾಗಿ ಗುಡ್ಡದ ಪಕ್ಕದಲ್ಲಿರುವ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಾಗದಂತೆ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಶುರುವಾಗುತ್ತೆ. ಶಬ್ಧಕ್ಕೆ ಹೆದರುವ ಕಾಡಾನೆಗಳು ಜಮೀನಿನತ್ತ ಬರುವುದಿಲ್ಲ ಅನ್ನೋದು ರೈತರೇ ಕಂಡುಕೊಂಡ ಮಾಸ್ಟರ್ ಪ್ಲಾನ್. ಆದರೆ ಆನೆಗಳಿಗೂ ಬುದ್ಧಿ ಇರುತ್ತೆ. ಆನೆಗಳಿಗೆ ಈ ಮೈಕ್ ನಮ್ಮನ್ನ ಯಾಮಾರಿಸೋಕೆ ಹಾಕಿರುವುದು ಎಂದು ಗೊತ್ತಾದರೆ ಮೊದಲು ಕಿತ್ತಾಕೋದು ಮೈಕ್‍ಗಳನ್ನ. ಆಗ ಮತ್ತೆ ಆನೆ ಹಾವಳಿ ಹೆಚ್ಚಾಗುವದರಲ್ಲಿ ಸಂಶಯವೇ ಇಲ್ಲ. ಹೀಗಾಗಿ, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಎರಡನ್ನೂ ಉಳಿಸುವುದಕ್ಕೆ ಮುಂದಾಗಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

  • ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಚಿಕ್ಕಮಗಳೂರು: ಒಂದೇ ವಾರದಲ್ಲಿ ಮೂರು ಕಡೆ ಇಟ್ಟಿದ್ದ ಬೋನಿಗೆ ಬೀಳದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಕ್ಕರ್ ಕೊಟ್ಟುಕೊಂಡು ಓಡಾಡುತ್ತಿತ್ತು. ಆದರೆ ನಾಲ್ಕನೇ ಜಾಗದಲ್ಲಿ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.

    ಬೀರೂರಿನ ಸುತ್ತಮುತ್ತಲಿನ ಬ್ಯಾಗಡೇಹಳ್ಳಿ, ಹುಲ್ಲೇಹಳ್ಳಿ, ಜೋಗಿಹಟ್ಟಿ, ಸೀಗೆಹಡ್ಲು, ದಾಸರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನರಿಗೆ ಈ ಚಿರತೆ ತಲೆನೋವು ತರಿಸಿತ್ತು. ಕಳೆದೊಂದು ತಿಂಗಳಿಂದ ಊರಿನ ಜನರ ಕಣ್ಣಿಗೆ ಬಿದ್ದು ಮಾಯವಾಗುತ್ತಿತ್ತು. ಇದರಿಂದ ಹಳ್ಳಿಯ ಜನ ಹೊಲಗದ್ದೆಗಳಿಗೆ ತೋಟಕ್ಕೆ ಹೋಗಲು ಭಯ ಪಡುತ್ತಿದ್ದರು. ಹಳ್ಳಿಯಲ್ಲಿ ನಾಯಿ-ಕುರಿಗಳನ್ನ ಹೊತ್ತೊಯ್ದು ಒಂದೆರಡು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಅಲ್ಲಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೆಲ ಹಳ್ಳಿಗಳಲ್ಲಿ ಜಾನುವಾರುಗಳನ್ನೂ ಬೇಟೆಯಾಡಿತ್ತು. ಇದರಿಂದ ಭಯಗೊಂಡು ಹಳ್ಳಿಗರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.

    ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಮೂರು ಕಡೆ ಬೋನಿಟ್ಟರು ಕೂಡ ಚಿರತೆ ಸೆರೆಯಾಗಿರಲಿಲ್ಲ. ಕಡೆಯದಾಗಿ ಬೀರೂರಿನ ಕಾವಲು ಚೌಡೇಶ್ವರಿ ದೇವಾಲಯದ ಬಳಿ ಅರಣ್ಯ ಇಲಾಖೆ ನಾಲ್ಕನೇ ಬಾರಿ ಇಟ್ಟ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು 12-14 ವರ್ಷದ ಚಿರತೆ ಪ್ರಾಯದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು. ಕಳೆದೊಂದು ತಿಂಗಳಿಂದ ಹತ್ತಾರು ಹಳ್ಳಿಗರಿಗೆ ಭಯ ಹುಟ್ಟಿಸಿದ ಚಿರತೆ ಸೆರೆಯಾಗಿದ್ದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.

  • ಕಾಫಿ ಕೊಯ್ಯಲು ಕಾರ್ಮಿಕರಿಲ್ಲ – ಆತಂಕದಲ್ಲಿ ಬೆಳೆಗಾರರು

    ಕಾಫಿ ಕೊಯ್ಯಲು ಕಾರ್ಮಿಕರಿಲ್ಲ – ಆತಂಕದಲ್ಲಿ ಬೆಳೆಗಾರರು

    ಚಿಕ್ಕಮಗಳೂರು : ಕಾಫಿ ಬೆಳೆಯನ್ನು ಹೇರಳವಾಗಿ ಬೆಳೆಯಲಾಗುವ ಮಲೆನಾಡು ಭಾಗಗಳಲ್ಲಿ ಕಾಫಿ ಕೊಯ್ಯಲು ಕಾರ್ಮಿಕರಿಲ್ಲದೇ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ವರ್ಷ ಕಾಫಿ ಚೆನ್ನಾಗಿ ಫಸಲು ನೀಡಿದ್ದರೂ ಕೊಯ್ಯಲು ಕಾರ್ಮಿಕರಿಲ್ಲದೇ ಗಿಡದಲ್ಲೇ ಕೊಳೆತು ಹೋಗುತ್ತಿರುವ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ.

    ಪ್ರತಿ ವರ್ಷ ಈ ವೇಳೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.50-60 ರಷ್ಟು ಕಾಫಿ ಹಣ್ಣನ್ನ ಕೊಯ್ಯಲಾಗುತ್ತದೆ. ಆದರೆ ಈ ಬಾರಿ ಕೇವಲ ಶೇ.20-30 ರಷ್ಟು ಕಾಫಿಯನ್ನು ಕೊಯ್ಯಲಾಗಿದೆ. ಪ್ರತಿ ವರ್ಷ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಕಾಫಿ ಕೊಯ್ಯುವ ವೇಳೆ ಕೆಲಸಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾದ ಮೂರನೇ ಅಲೆಯಿಂದ ಪ್ರವಾಸಿಗರು ಬರಲು ಸಾಧ್ಯವಾಗಿಲ್ಲ. ಇದರಿಂದ ಕಾಫಿ ಕೊಯ್ಯಲು ಕಾರ್ಮಿಕರ ಕೊರತೆ ಉಂಟಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

    ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಾಫಿ ಬೆಳೆ ಮಣ್ಣು ಪಾಲಾಗಿತ್ತು. 2021ರಲ್ಲೂ ವರ್ಷವಿಡೀ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ನಷ್ಟವಾಗಿತ್ತು. ಆದರೆ ಈ ವರ್ಷ ಮಳೆಗಾಳಿಯಿಂದ ಅಳಿದುಳಿದ ಕಾಫಿಯನ್ನು ಕೊಯ್ಯುವುದಕ್ಕೆ ಜನ ಸಿಗದೆ ಬೆಳೆಗಾರರು ಆಂತಕಕ್ಕೀಡಾಗಿದ್ದಾರೆ.

    ಮಲೆನಾಡಿನ ತೋಟಗಳಲ್ಲಿ ಕಾಫಿ ಚೆನ್ನಾಗಿ ಫಸಲು ನೀಡಿದೆ. ಜಿಲ್ಲೆಯಲ್ಲಿ ಸರಿಸುಮಾರು ಒಂದು ಲಕ್ಷ ಹೆಕ್ಟೆರ್ ಜಾಗದಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನು ಬೆಳೆಯಲಾಗಿದೆ. ಆದರೆ ಕಾಫಿ ಕೊಯ್ಲಿಗೆ ಕಾರ್ಮಿಕರೇ ಇಲ್ಲದಂತಾಗಿದೆ. ಹತ್ತಾರು ಎಕರೆ ಕಾಫಿ ತೋಟಗಳಲ್ಲಿ ಕೇವಲ ನಾಲ್ಕೈದು ಕಾರ್ಮಿಕರಷ್ಟೇ ಕೆಲಸ ಮಾಡುವಂತಾಗಿದೆ. ಕೆಲವೆಡೆ ಮನೆಯವರೇ ಕೊಯ್ಯುವಂತಹಾ ಸ್ಥಿತಿಯೂ ನಿರ್ಮಾಣವಾಗಿದೆ. ಇದನ್ನೂ ಓದಿ: ಡಿಕೆಶಿ Vs ಸಿದ್ದು ಬಣಗಳ ಕಿತ್ತಾಟ: ಲಾಭ ಪಡೆಯಲು ಮುಂದಾದ ಹಿರಿಯ ನಾಯಕರು

    2021ರಲ್ಲೂ ಮಳೆ-ಗಾಳಿಗೆ ಉದುರಿ ಗಿಡಕ್ಕೆ ಗೊಬ್ಬರವಾದ ಕಾಫಿಯೇ ಹೆಚ್ಚು. ಆದರೆ ಇದೀಗ ಕಾರ್ಮಿಕರ ಕೊರತೆಯಿಂದ ಉಳಿಸಿಕೊಂಡಿದ್ದ ಬೆಳೆಯನ್ನೂ ಕೊಯ್ಲು ಮಾಡಲಾಗದಂತಹಾ ಪರಿಸ್ಥಿತಿ ಎದುರಾಗಿದೆ. ಕೆಲ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರು ನಮ್ಮ ತೋಟಕ್ಕೆ ನೀವು ಬನ್ನಿ ನಿಮ್ಮ ತೋಟಕ್ಕೆ ನಾವು ಬರ್ತೀವಿ ಎಂದು ಒಬ್ಬರ ತೋಟದಲ್ಲೊಬ್ಬರು ಕಾಫಿಯನ್ನು ಕೊಯ್ಯುವಂತಾಗಿದೆ.

    2021ರಲ್ಲಿ ವರ್ಷವಿಡೀ ಮಳೆಯಾಗಿದ್ದರಿಂದ ನವೆಂಬರ್‌ನಲ್ಲಿ ಕಾಫಿ ಫಸಲು ಬಂದಿದೆ. ಈ ವೇಳೆಗೆ ಶೇ.80 ರಷ್ಟು ಕೊಯ್ಲು ಆಗಬೇಕಿತ್ತು. ಕಾಫಿಯನ್ನು ಸೂಕ್ತ ಸಮಯದಲ್ಲಿ ಕೊಯ್ಯದಿರುವುದರಿಂದ ಮತ್ತೆ ಉದುರುವುದಕ್ಕೆ ಪ್ರಾರಂಭವಾಗಿದೆ. ಇನ್ನೊಂದೆಡೆ ಕಾರ್ಮಿಕರ ಕೊರತೆಯಿಂದ ಇರುವ ಬೆಳೆಯನ್ನೂ ಕೊಯ್ಲು ಮಾಡದ ಸಂಕಷ್ಟ ಬೆಳೆಗಾರರದ್ದಾಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ

    ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಬೆಳೆ ಇಲ್ಲ. ಇದ್ದರೂ ಸಮರ್ಪಕವಾಗಿ ಕೊಯ್ಯಲು ಸಾಧ್ಯವಾಗುತ್ತಿಲ್ಲ. ಇರುವ ಫಸಲು ಕೊಯ್ಯಲು ಆಗದಿರುವುದು ಬೆಳೆಗಾರರಿಗೆ ಬಿಸಿತುಪ್ಪವಾಗಿದೆ. ಈ ಮಧ್ಯೆ ಆಗಾಗ ಒಂದಷ್ಟು ಮಳೆ ಬಂದು ಹೋಗುತ್ತಿರುವುದು ಕೂಡ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.