Tag: Chikmagalur

  • ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

    ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

    – ನಕ್ಸಲ್‌ ಪೀಡಿತ ಪ್ರದೇಶದಲ್ಲಿ ರೆಸಾರ್ಟ್‌ ಹೇಗೆ ಮಾಡಿದ?
    – ಎಡಪಂಥೀಯರ ತಂಡದಿಂದ ವ್ಯವಸ್ಥಿತ ಪಿತೂರಿ; ಆರೋಪ

    ಚಿಕ್ಕಮಗಳೂರು: ಧರ್ಮಸ್ಥಳ ಪ್ರಕರಣದ (Dharmasthala Case) ಬಗ್ಗೆ ನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಕಥೆ ಹೇಳ್ತಿರುವ ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ನಕ್ಸಲ್‌ ಪೀಡಿತ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ. ಈತನಿಗೆ ಎಲ್ಲಿಂದ ಆದಾಯ ಬಂತು? ಅಂತ ರಾಜ್ಯ ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತ ಪರಿಷತ್‌ನ ಉಪಾಧ್ಯಕ್ಷ ರಘುಪತಿ ಭಟ್‌ ಗಂಭೀರ ಆರೋಪ ಮಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಮಾಧ್ಯಮ ಹೇಳಿಕೆ ನೀಡಿರುವ ಅವರು, ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ

    ಗಿರೀಶ್‌ ಮಟ್ಟಣ್ಣನವರ್‌ ಶೃಂಗೇರಿ ಸಿರಿಮನೆ ಫಾಲ್ಸ್ *(Sirimane Falls) ಹತ್ತಿರ ಹತ್ತಾರು ಎಕ್ರೆಯಲ್ಲಿ ರೆಸಾರ್ಟ್ ಮಾಡಿದ್ದಾನೆ. ಇವನಿಗೆ ಆದಾಯ ಎಲ್ಲಿಂದ ಬರುತ್ತೆ? ಸಿರಿಮನೆ, ಕಿಗ್ಗಾ, ಬುಕ್ಕಡಿಬೈಲ್ ಸುತ್ತಮುತ್ತಲಿನ ಪ್ರದೇಶ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಆ ನಕ್ಸಲ್ ಪೀಡಿತ ಜಾಗದಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾನೆ. ಸರ್ಕಾರ ಅದಿವಾಸಿಗಳಿಗೆ ನೀಡಿದ ವಸತಿ ಪ್ರದೇಶದಲ್ಲಿ ರೆಸಾರ್ಟ್ ಮಾಡಿದ್ದಾನೆ. ಇದೆಲ್ಲವನ್ನ ಹೇಗೆ ಮಾಡಿದ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ

    ಎಡಪಂಥೀಯರ ತಂಡದಿಂದ ವ್ಯವಸ್ಥಿತ ಪಿತೂರಿ
    ಇದು ಧರ್ಮಸ್ಥಳ ಹಾಗೂ ಧರ್ಮದ ಮೇಲೆ ಆಗ್ತಿರೋ ಗದಾ ಪ್ರಹಾರ. ದೇಶ ವಿರೋಧಿಗಳು, ಮತಾಂದರು ಹಿಂದೂಗಳ ಮೇಲೆ ಭಯೋತ್ಪಾದನೆ ಮಾಡ್ತಿದ್ದಾರೆ. ಅದಕ್ಕೆ ತತ್ಸಮಾನವಾಗಿ ಎಡಪಂಥಿಯರ ತಂಡ ಧರ್ಮದ ಮೇಲೆ ದಾಳಿ ಮಾಡ್ತಿದ್ದಾರೆ. ನಗರ ನಕ್ಸಲರು, ಕಾಡಿನಲ್ಲಿದ್ದವರಿಗೆ ಪರಿಹಾರ ನೀಡಿದ್ದು ಎಲ್ಲರೂ ನಗರದಲ್ಲಿದ್ದಾರೆ. ಅವರೆಲ್ಲರ ಸಹಕಾರದಿಂದ ಎಡಪಂಥೀಯರು ಸೇರಿ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

    ಸಾವಿರಾರು ಶವ ಹೂಳಲು ಸಾಧ್ಯವೇ?
    ಧರ್ಮಸ್ಥಳ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆಗೆ ನಮ್ಮ ವಿರೋಧ ಇಲ್ಲ. ಕಾನೂನು ಪ್ರಕಾರ ತನಿಖೆಯಾಗಲಿ. ಯಾವನೋ ಒಬ್ಬ ಅನಾಮಿಕ ತಲೆಬುರುಡೆ ತಂದ ತಕ್ಷಣ ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡ್ತಿದ್ದಾರೆ. ತಂದವರ ಬಗ್ಗೆ ಯಾವ ಕ್ರಮವಿಲ್ಲ, ಒಬ್ಬ ವ್ಯಕ್ತಿ ಸಾವಿರಾರು ಶವ ಹೂಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ ರಘುಪತಿ ಭಟ್. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

  • ಚಿಕ್ಕಮಗಳೂರು | ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿ

    ಚಿಕ್ಕಮಗಳೂರು | ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿ

    ಚಿಕ್ಕಮಗಳೂರು: ಕಾಡ್ಗಿಚ್ಚಿನ ಪರಿಣಾಮ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ಕಳಸ (Kalasa) ತಾಲೂಕಿನ ಹೊರನಾಡು (Horanadu) ಸಮೀಪದ ಮಾವಿನಹೊಳ-ಬಲಿಗೆ ಗುಡ್ಡದಲ್ಲಿ ನಡೆದಿದೆ.

    ಮಂಗಳವಾರ ಸಂಜೆ ಕಾಡಿಗೆ ಬೆಂಕಿ ಹಬ್ಬಿದ್ದು ನೋಡನೋಡ್ತಿದ್ದಂತೆ ಅರಣ್ಯ ಹೊತ್ತಿ ಉರಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಗಾಳಿಗೆ ವೇಗಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಇತ್ತು. ಇದನ್ನೂ ಓದಿ: ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

    ಕಳಸ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಮುಗಿಲೆತ್ತರದ ಬೆಟ್ಟಗುಡ್ಡಗಳಲ್ಲಿ ಬೆಂಕಿ ಬಿದ್ದ ಪರಿಣಾಮ ಗಾಳಿಯ ವೇಗಕ್ಕೆ ಬೆಂಕಿ ಒಂದು ಗುಡ್ಡದಿಂದ ಮತ್ತೊಂದು ಗುಡ್ಡಕ್ಕೆ ಹಬ್ಬಿದ್ದು ಅರಣ್ಯ ಇಲಾಖೆಗೆ ಬೆಂಕಿ ನಂದಿಸುವುದು ಸವಾಲಾಗಿತ್ತು. ಇದನ್ನೂ ಓದಿ: ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಕೊನೆಗೂ ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಜೊತೆ ಸಸ್ಯಸಂಪತ್ತು ನಾಶವಾಗಿರುವ ಜೊತೆಗೆ ಪ್ರಾಣಿ-ಪಕ್ಷಿಗಳು ಕೂಡ ಸುಟ್ಟುಕರಕಲಾಗಿವೆ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

  • Chikkamagaluru | ಹಣಕ್ಕಾಗಿ ಮಲೆನಾಡಲ್ಲಿ ನಡೆಯಿತು ಜೋಡಿ ಕೊಲೆ

    Chikkamagaluru | ಹಣಕ್ಕಾಗಿ ಮಲೆನಾಡಲ್ಲಿ ನಡೆಯಿತು ಜೋಡಿ ಕೊಲೆ

    ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ಮಲೆನಾಡಿನಲ್ಲಿ ನೆತ್ತರು ಹರಿದಿದೆ. ಸಂಬಂಧಿಕನೇ ವೃದ್ಧ ದಂಪತಿಯನ್ನ ಕೊಂದು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು (Chikmagalur) ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.

    ಬಸಪ್ಪ (65), ಲಲಿತಮ್ಮ (58) ಮೃತ ದುರ್ದೈವಿಗಳು. ತುಮಕೂರು (Tumkur) ಜಿಲ್ಲೆ ಗುಬ್ಬಿ ಮೂಲದ ದಂಪತಿ, ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

    ವೃದ್ಧ ದಂಪತಿಯ ಸಂಬಂಧಿಕನೊಬ್ಬ ಆಗಾಗ್ಗೆ ಹಣಕ್ಕೆ ಪೀಡಿಸುತ್ತಿದ್ದ. ಅದೇ ರೀತಿ ಇಂದು (ಗುರುವಾರ) ಸಹ ಹಣಕ್ಕಾಗಿ ಪೀಡಿಸಿದ್ದಾನೆ, ಹಣ ಕೊಡದಿದ್ದಕ್ಕೆ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‌ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲಂದೂರು ಠಾಣೆ ಪೊಲೀಸರು (Mallandur Police) ಕೊಲೆ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಂ ಗೌಡನದ್ದು ಫೇಕ್ ಎನ್‌ಕೌಂಟರ್‌ – ಸಿಎಂ, ಗೃಹ ಸಚಿವರ ವಿರುದ್ಧ ಮಾಜಿ ನಕ್ಸಲ್ ಕಿಡಿ 

  • ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ

    ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ

    ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ದತ್ತಪೀಠದಲ್ಲಿ (Dattapeeta) ಉತ್ಸವದ ಹಿನ್ನೆಲೆ ನಾಗೇನಹಳ್ಳಿಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ದತ್ತಪೀಠದ ದತ್ತಾತ್ರೇಯ ಸ್ವಾಮಿಯ ಉತ್ಸವ (Datta Jayanti) ಈ ಬಾರಿ ಹೊಸ ರೂಪ ಪಡೆದುಕೊಂಡಿದೆ. ವಿ.ಎಚ್.ಪಿ, ಹಾಗೂ ಬಜರಂಗದಳ ದತ್ತಪೀಠದಲ್ಲಿ ದತ್ತಜಯಂತಿ ಮಾಡುತ್ತಿದ್ದರೆ, ಶ್ರೀರಾಮಸೇನೆ (Sri Ram Sena) ದರ್ಗಾದಲ್ಲಿ ದತ್ತಜಯಂತಿಗೆ ಮುಂದಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆಯು ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಜಿಲ್ಲೆಗೆ ಬರಲು ನಿರ್ಬಂಧ ವಿಧಿಸಿದೆ. ಈ ಮಧ್ಯೆ ಸಾವಿರಾರು ಜನರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದನ್ನೂ ಓದಿ: ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

    ದರ್ಗಾ ಇರುವ ನಾಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 57ರ 200 ಮೀಟರ್ ಸುತ್ತಮುತ್ತ 4 ದಿನಗಳ ಕಾಲ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆ ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಮುಂದಿನ ಜ.5ರವರೆಗೆ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿದೆ.

    ದತ್ತಜಯಂತಿಯ ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಭಾನುವಾರ ಶಾಂತಿಯುತವಾಗಿ ತೆರೆಕಂಡಿದೆ. ಉಳಿದ ಎರಡು ದಿನಗಳಲ್ಲಿ ಭಕ್ತರು ಹೆಚ್ಚಾಗಿ ಬರಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 4,000 ಪೊಲೀಸರನ್ನು ನಿಯೋಜಿಸಲಾಗಿದೆ.

    ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಇಂದು (ಸೋಮವಾರ) ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾಗುವ ಯಾತ್ರೆ ಕೆಇಬಿ ಸರ್ಕಲ್, ಬಸವನಹಳ್ಳಿ, ಹನುಮಂತಪ್ಪ ಸರ್ಕಲ್, ಎಂ.ಜಿ.ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್‍ವರೆಗೆ ಸುಮಾರು 4 ಕಿ.ಮೀ. ನಡೆಯಲಿದೆ.

    ಇನ್ನೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಂತ್ರ ಹೆಣೆಯುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್ ಇದೇ ಮೊದಲ ಬಾರಿಗೆ ದತ್ತ ಮಾಲೆ ಧರಿಸಿ ದತ್ತಭಕ್ತರಾಗಿದ್ದಾರೆ. ಮಾಲಾಧಾರಿ ವಿಪಕ್ಷ ನಾಯಕ ಅಶೋಕ್, ದತ್ತಪೀಠ ಅತಿಕ್ರಮಣವಾಗಿದೆ. ದತ್ತಪೀಠ ದತ್ತಪೀಠವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಶಾಸಕ ಸಿ.ಟಿ.ರವಿ ದತ್ತಪೀಠ ಹಿಂದೂಗಳ ಪೀಠ, ಹಿಂದೂಗಳಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

  • ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ಚಿಕ್ಕಮಗಳೂರು: ನಾಯಿ (Dog) ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ (Acid Attack) ನಡೆಸಿರುವ ಘಟನೆ ಜಿಲ್ಲೆಯ ಎನ್‌ಆರ್ ಪುರ (NR Pura) ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.

    ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು.

    dog

    ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು. ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಆಸಿಡ್ ದಾಳಿಗೆ ಸುಂದರ್ ರಾಜ್ ಮುಖ ಬಹುತೇಕ ಸುಟ್ಟಿದ್ದು ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಅರ್ಧ ಮುಖ ಸಂಪೂರ್ಣ ಸುಟ್ಟುಹೋಗಿದೆ. ಕೂಡಲೇ ಅವರನ್ನು ಎನ್‌ಆರ್ ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಿವಮೊಗ್ಗದಲ್ಲಿ ವೈದ್ಯರು ಸುಂದರ್ ರಾಜ್ ಅವರ ಎಡಗಣ್ಣಿನ ಪದರ ಸಂಪೂರ್ಣ ಡ್ಯಾಮೇಜ್ ಆಗಿದೆ, ಕಣ್ಣಿನ ಪದರವನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಸುಂದರ್ ರಾಜ್ ಕುಟುಂಬ ಇದೀಗ ಚಿಕಿತ್ಸೆಯ ಹಣಕ್ಕಾಗಿ ಕಂಗಾಲಾಗಿದ್ದಾರೆ. ಆಸಿಡ್ ದಾಳಿ ಬಳಿಕ ಜೇಮ್ಸ್ ದಂಪತಿ ನಾಪತ್ತೆಯಾಗಿದ್ದಾರೆ. ಎನ್‌ಆರ್ ಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

  • ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು

    ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು

    ಚಿಕ್ಕಮಗಳೂರು: ನರಕ ಚತುರ್ದಶಿ ದಿನ ಮಾತ್ರ ದರ್ಶನ ಕೊಡುವ ಮಲ್ಲೇನಹಳ್ಳಿಯ ಬೆಟ್ಟದ ತುದಿಯಲ್ಲಿ ನೆಲೆಸಿರುವ ಬಿಂಡಿಗಾ ದೇವಿರಮ್ಮನ (Deviramma) ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದಾರೆ.

    3 ಸಾವಿರ ಅಡಿಗಳ ಅಡಿ ಎತ್ತರವಿರುವ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ರಾತ್ರಿಯಿಂದಲೇ ದೇವಿಯ ದರ್ಶನಕ್ಕಾಗಿ ಬರಿಗಾಲಲ್ಲೇ ಬೆಟ್ಟ ಹತ್ತಿ ಬರುತ್ತಿದ್ದಾರೆ. ಸುಮಾರು 50 ಸಾವಿರ ಜನ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ- 9 ದಿನಗಳಲ್ಲಿ 4,56,22,580 ರೂ. ಸಂಗ್ರಹ

    ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಬಂದೊಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು

  • ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ (Elephant Attack) ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಹಿಳೆಯ ಶವವಿಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

    ಜನಪ್ರತಿನಿಧಿ ಎಂಬುದನ್ನೂ ನೋಡದೆ, ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹಿಗ್ಗಾಮುಗ್ಗ ಥಳಿಸಿ ಬಟ್ಟೆಯನ್ನೂ ಹರಿದುಹಾಕಿದ್ದಾರೆ. ಬಳಿಕ ಹರಿದ ಬಟ್ಟೆಯಲ್ಲೇ ಹೇಳಿಕೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು (Police) ವಿಫಲರಾಗಿದ್ದಾರೆ. ನಾನು ಅಲ್ಲೇ ಇರ್ತಿದ್ದೆ ಪೊಲೀಸರು ಮಿಸ್‌ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ನಾವು. ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJP ಎಸ್ಟಿ ಸಮಾವೇಶಕ್ಕೆ ತೆರಳಿದ್ದ 26ರ ಯುವಕ ನೀರುಪಾಲು

    ಏನಿದು ಘಟನೆ?
    ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಮಹಿಳೆ ಶೋಭಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು, ಕಾಫಿ ಬೆಳೆಗಾರರು, ರೈತ ಮುಖಂಡರು (Farmers) ಸ್ಥಳದಲ್ಲಿ ಜಮಾಯಿಸಿದ್ದರು. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್‌ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್‌ ಫ್ಯಾನ್ಸ್‌

    ಈ ವೇಳೆ ಮೃತ ಮಹಿಳೆಯ ಶವ ಮುಂದಿಟ್ಟುಕೊಂಡು ಸರ್ಕಾರ (Government of Karnataka) ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಕಾಡಾನೆ ದಾಳಿಗಳಿಗೆ ರಾಜ್ಯ ಸರ್ಕಾರ, ಅರಣ್ಯ ಇಲಾಖೆಯೇ (Forest Department) ಹೊಣೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟ ಹಿಡಿದರು.

    ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಜನರ ಆಕ್ರೋಶ ಕಡಿಮೆಯಾಗಲಿಲ್ಲ. ಘಟನೆ ನಡೆದು ಸುಮಾರು 2 ಗಂಟೆ ಬಳಿಕ ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯ ವಿಭಾಗದ ಡಿಎಫ್‌ಒ ಕ್ರಾಂತಿ ತೆರಳಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಪ್ರದರ್ಶನದ ವೇಳೆ ಲಾಂಗ್ ಹಿಡಿದು ಯುವಕರ ಮಾರಾಮಾರಿ

    ವಿಕ್ರಾಂತ್ ರೋಣ ಪ್ರದರ್ಶನದ ವೇಳೆ ಲಾಂಗ್ ಹಿಡಿದು ಯುವಕರ ಮಾರಾಮಾರಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಥಿಯೇಟರ್ ನಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಇತ್ತ ಚಿಕ್ಕ ಮಗಳೂರಿನಲ್ಲಿ ಅಹಿತಕರ ಘಟನೆ ನಡೆದಿದೆ. ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

    ಚಿಕ್ಕಮಗಳೂರಿನ ಮಿಲನ ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನವಾಗುತ್ತಿತ್ತು. ಈ ಸಮಯದಲ್ಲಿ ಹುಡುಗರ ಗುಂಪೊಂದು ಚಿತ್ರಮಂದಿರದ ಹೊರಗೆ ಲಾಂಗ್ ನೊಂದಿಗೆ ಕಾಣಿಸಿಕೊಂಡಿದೆ. ಸಿನಿಮಾ ನೋಡುವುದಕ್ಕಾಗಿ ಬಂದಿದ್ದ ಭರತ್ ಎನ್ನುವವನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ಥಿಯೇಟರ್ ಹೊರಾಂಗಣದಲ್ಲಿ ಈ ಮಾರಾಮಾರಿ ನಡೆದಿದ್ದು ಹಲ್ಲೆಗೊಳಗಾದ ಭರತ್ ನೆಲಕ್ಕೆ ಬಿದ್ದರೂ, ಬಿಡದ ಗುಂಪು ಮಾರಣಾಂತಿಕ ಹಲ್ಲೆ ಮಾಡಿದೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ನೋಡು ನೋಡುತ್ತಿದ್ದಂತೆಯೇ ಥಿಯೇಟರ್ ಹೊರಾಂಗಣ ರಣರಂಗವಾಗಿ ಮಾರ್ಪಟ್ಟಿದ್ದು, ಥಿಯೇಟರ್ ನಲ್ಲಿ ನೆರದಿದ್ದವರು ಅವರನ್ನು ಬಿಡಿಸುವಂತಹ ಪ್ರಯತ್ನ ಕೂಡ ಮಾಡಿದ್ದಾರೆ. ಹಲ್ಲೆಯ ನಂತರ ತೀವ್ರ ಗಾಯಗೊಂಡಿದ್ದ ಭರತ್ ನನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ್ ಗೆ ರವಾನೆ ಮಾಡಲಾಗಿದೆ. ಹಾಸನದ ಆಸ್ಪತ್ರೆಯಲ್ಲಿ ಭರತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ

    ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ

    ಚಿಕ್ಕಮಗಳೂರು: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ರಾಸುಗಳು ಜೀವಂತವಾಗಿ ಸುಟ್ಟು ಹೋಗಿರುವ ಘಟನೆ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ನಡೆದಿದೆ.

    ರೈತ ನಾಗೇಶ್ ಅವರಿಗೆ ಸೇರಿದ ಎರಡು ಹಸುಗಳು ಸಜೀವ ದಹನವಾಗಿದೆ. ಶನಿವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿದೆ. ಶುಕ್ರವಾರ ರಾತ್ರಿ ಶಿವಪುರ ಗ್ರಾಮದ ನಾಗೇಶ್ ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಎರಡು ರಾಸುಗಳನ್ನು ಕಟ್ಟಿದ್ದರು. ಈ ವೇಳೆ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ.

    ರಾಸುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಉಸಿರು ಬಿಟ್ಟಿವೆ. ಮನೆ ಮೇಲೆ ಹಾಗೂ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಬೆಂಕಿ ತಗುಲಿರುವುದು ತಿಳಿದುಬಂದಿದೆ. ಸ್ಥಳೀಯರು ರಾಸುಗಳನ್ನ ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜ

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ವೇಳೆಗಾಗಲೇ ರಾಸುಗಳು ಬೆಂಕಿಯಲ್ಲಿ ಬೆಂದು ಉಸಿರು ಚೆಲ್ಲಿದ್ದವು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅಭಿಷೇಕ್, ಕೊಪ್ಪ ಪಿ.ಎಸ್.ಐ.ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ – ಸ್ಥಳೀಯರ ಆಕ್ರೋಶ

    ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ – ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು: ಚೀಲದಲ್ಲೇ ಹುಳ ಬಿದ್ದ ಅಕ್ಕಿ ಬಳಸಿ ಅಡುಗೆ ಮಾಡಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದ ಶಿಕ್ಷಕಿಯ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ ನಡೆದಿದೆ.

    ಹುಳ ಬಿದ್ದ ಅಕ್ಕಿಯಲ್ಲೇ ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವ ಶಿಕ್ಷಕಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಚೀಲದಲ್ಲಿರುವ ಅಕ್ಕಿಯನ್ನು ಬೇಸನ್‍ನಲ್ಲಿ ತುಂಬಿದಾಗ ಅಕ್ಕಿಯಿಂದ ಚಿಕ್ಕ-ಚಿಕ್ಕ ಕಪ್ಪು ಹುಳಗಳು ಓಡಾಡುತ್ತಿವೆ. ಒಂದೆರಡು ಹುಳಗಳಲ್ಲ. ಅಕ್ಕಿಗಿಂತ ಹೆಚ್ಚಾಗಿಯೇ ಹುಳ ಹಿಡಿದಿದೆ. ಅದನ್ನು ವಾಪಸ್ ಕಳಿಸಬಹುದು ಅಥವಾ ಶುಚಿ ಮಾಡಿ ಅಡುಗೆ ಮಾಡಬಹುದು. ಆದರೆ ಅದೇ ಅಕ್ಕಿ ಬಳಸಿ ಅನ್ನ ಮಾಡಿ ಮಕ್ಕಳಿಗೆ ನೀಡುತ್ತಿದ್ದಾರೆ. ಇದನ್ನೂ ಓದಿ: ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

    ಅನ್ನದಲ್ಲಿ ಹುಳ ಕಂಡ ಮಕ್ಕಳು ಮನೆಗೆ ಬಂದು ಪೋಷಕರಿಗೆ ಹೇಳಿದ್ದಾರೆ. ಪೋಷಕರು ಕೂಡ ಹಲವಾರು ಬಾರಿ ಶಾಲೆಗೆ ಬಂದು ವಿಷಯ ತಿಳಿಸಿ ಹೋಗಿದ್ದಾರೆ. ಆದರೆ ಶಿಕ್ಷಕರು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಅದೇ ಹುಳ ಬಿದ್ದ ಅಕ್ಕಿಯಲ್ಲೇ ಅನ್ನ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದರು. ಮಕ್ಕಳ ಆರೋಗ್ಯದ ಜೊತೆ ಹುಡುಗಾಟ ಆಡುತ್ತಿರುವ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಈ ಹಿಂದೆ ಹಲವು ಬಾರಿ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಅವರು ಅದನ್ನ ಮುಂದುವರೆಸಿದ್ದಾರೆಂದು ಆರೋಪಿಸಿರುವ ಪೋಷಕರು ಕೂಡಲೇ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.