Tag: Chikkmagaluru

  • ಏರ್ ಶೋ ತಂದು ಭದ್ರತೆ ನೀಡದೇ ಇದ್ರೆ ಏನು ಪ್ರಯೋಜನ: ಕರಂದ್ಲಾಜೆ ಪ್ರಶ್ನೆ

    ಏರ್ ಶೋ ತಂದು ಭದ್ರತೆ ನೀಡದೇ ಇದ್ರೆ ಏನು ಪ್ರಯೋಜನ: ಕರಂದ್ಲಾಜೆ ಪ್ರಶ್ನೆ

    ಚಿಕ್ಕಮಗಳೂರು: ಏರ್ ಶೋ ಬೇರೆ ಕಡೆ ಶಿಫ್ಟ್ ಆಗುತ್ತೆ ಅಂದಾಗ ಸಿಎಂ ಮತ್ತು ನಾವೆಲ್ಲರೂ ಒಗ್ಗೂಡಿ ಬೆಂಗಳೂರಿಗೆ ತಂದಿದ್ದೇವೆ. ಶೋ ಆಯೋಜಸಿದ ಬಳಿಕ ಅದಕ್ಕೆ ಸೂಕ್ತ ಭದ್ರತೆ ನೀಡದೇ ಇದ್ದರೆ ಏನು ಪ್ರಯೋಜನ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ.

    ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಅಗ್ನಿಶಾಮಕದ ವಾಹನಗಳು ಮತ್ತು ಪೊಲೀಸರು ಇರಲಿಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, 300 ಕಾರುಗಳು ಸುಟ್ಟು ಹೋದಾಗ ಎಲ್ಲಿ ಹೋಗಿದ್ದರು? ಗುಂಡೂರಾವ್ ಸಹ ಒಂದು ಪಕ್ಷದ ಅಧ್ಯಕ್ಷರಾಗಿದ್ದು, ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದರು.

    ಮಂತ್ರಿಗಳು ಸರ್ಕಾರದ ವೈಫಲ್ಯವನ್ನ ಬಿಜೆಪಿ ತಲೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ರಾಜ್ಯದಲ್ಲಿ ಯಾರು ಕೆಲಸ ಮಾಡುತ್ತಿಲ್ಲ. ಆರು-ಹತ್ತು ತಿಂಗಳಿಗೊಮ್ಮೆ ಅಧಿಕಾರಿಗಳನ್ನ ವರ್ಗಾವಣೆ ಮಾಡಿ, ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ವರ್ಗಾವಣೆಯಾದ ಏರ್ ಶೋನ ಬೆಂಗಳೂರಿಗೆ ತಂದ್ರೆ ಸರ್ಕಾರದ ಬೇಜವಾಬ್ದಾರಿಯಿಂದ ಕರ್ನಾಟಕಕ್ಕೆ ಅವಮಾನವಾಗಿದೆ. ಮೊದಲಿಗೆ ಒಂದು ಕಾರಿಗೆ ಬೆಂಕಿ ಹತ್ತಿಕೊಂಡು ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಅವರ ಕಣ್ಣಿಗೆ ಅದು ಕಾಣಿಸಿಲ್ವಾ? ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.

    https://www.youtube.com/watch?v=BUA3pczdc3w

    https://twitter.com/ShobhaBJP/status/1099924539759194112

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿ ನಾಡಿನಲ್ಲಿ ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ

    ಕಾಫಿ ನಾಡಿನಲ್ಲಿ ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ

    ಚಿಕ್ಕಮಗಳೂರು: ಕಾರ್ ರ‍್ಯಾಲಿಯಂದರೆ ನಾವು-ನೀವು ಸ್ಪೋರ್ಟ್ಸ್ ಚಾನೆಲ್‍ಗಳಲ್ಲಿ ನೋಡಿರುತ್ತೇವೆ. ಕಾಫಿನಾಡಲ್ಲಿ ನಡೆದ ಕಾರ್ ರ‍್ಯಾಲಿ ಅಷ್ಟೆ ಪ್ರಮಾಣದ ಮನೋರಂಜನೆ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದ ಹಾಗೆ ಜನ ಹುಚ್ಚೆದ್ದು ಕುಣಿದಿದ್ದಾರೆ. ರಾಷ್ಟ್ರೀಯ ಮಟ್ಟದ ಡ್ರೈವರ್ ಗಳ ಜೊತೆ ಸ್ಥಳೀಯ ಪ್ರತಿಭೆಗಳು ತೊಡೆ ತಟ್ಟಿದ್ದು ಈ ರ‍್ಯಾಲಿಯ ಮತ್ತೊಂದು ವಿಶೇಷ.

    ಕಾಫಿ ಡೇ ಗ್ಲೋಬಲ್‍ರವರ ಪ್ರಯೋಜತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‍ನ ಎಂಆರ್‍ಎಫ್ ಹಾಗೂ ಎಫ್‍ಎಂಎಸ್‍ಸಿಐ ರ‍್ಯಾಲಿ ಇದಾಗಿದೆ. ಏಕ ಕಾಲದಲ್ಲಿ ಮೂರು ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಮಾರುತಿ ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್, ಸ್ಕೊಡ ಕಾರುಗಳ ಜೊತೆ ಜಿಪ್ಸಿ ಕೂಡ ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗಿವೆ. ಮೊದಲ ದಿನದ ಅಂಕಗಳಿಗಾಗಿ ಅಖಾಡಕ್ಕಿಳಿದಿದ್ದ ಕಾರುಗಳು ನೋಡುಗರಿಗೆ ಸಖತ್ ಥ್ರಿಲ್ ನೀಡಿವೆ.

    ನೋಡುಗರ ಮನೋರಂಜನೆಗಾಗಿ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದರು. 2.2 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡುಗರ ಎದೆ ಮೇಲೆ ಹೋದಂತಿತ್ತು. ಹೆಸರು ನೋಂದಾಯಿಸಿದ್ದ 47 ಸ್ಪರ್ಧಿಗಳಲ್ಲಿ 47 ರೈಡರ್‍ಳು ಕೂಡ ನೋಡುಗರಿಗೆ ಮನೋರಂಜನೆ ನೀಡಿದರು. ಈ ಬಾರಿಯ ರ್ಯಾಲಿಯಲ್ಲಿ ದೆಹಲಿ, ದುಬೈ, ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈಡರ್ ಗಳಿಗೆ ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆಗಳು ಸೆಡ್ಡು ಹೊಡೆದರು. ಅರುಣಾಚಲ ಪ್ರದೇಶ, ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ರ್ಯಾಲಿ ನಡೆದಿದ್ದು, ನಾಲ್ಕನೇ ಹಂತದಲ್ಲಿ ನಡೆಯುತ್ತಿರುವ ಇಲ್ಲಿನ ಗೆಲುವು ಕಂಡವರು ರ್ಯಾಲಿಯ ಚಾಂಪಿಯನ್ ಆಗುತ್ತಾರೆ.

    ಪ್ರೇಕ್ಷಕರ ರಂಜನೆಗಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡುತ್ತಿರೋ ಕಾರುಗಳನ್ನ ನೋಡಿ ಜನ ಫುಲ್ ಫಿದಾ ಆಗಿದ್ದಾರೆ. ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡುವ ಕಾರುಗಳು ನೋಡುಗರಿಗೆ ಮತ್ತಷ್ಟು ಮನೋರಂಜನೆ ನೀಡಲಿದ್ದು, ಜನ ಆ ರಮಣೀಯ ದೃಶ್ಯಗಳನ್ನ ನೋಡೋದಕ್ಕೂ ಕಾತರುರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬರದ ವಿರುದ್ಧವೇ ತೊಡೆ ತಟ್ಟಿದ ಗ್ರಾಮಸ್ಥರು

    ಬರದ ವಿರುದ್ಧವೇ ತೊಡೆ ತಟ್ಟಿದ ಗ್ರಾಮಸ್ಥರು

    – ಜನಪ್ರತಿನಿಧಿ, ಅಧಿಕಾರಿಗಳೇ ನಾಚುವಂತೆ ಮಾಡಿದ್ದಾರೆ ಗ್ರಾಮಸ್ಥರು

    ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಹತ್ತಾರು ವರ್ಷಗಳಿಂದ ಕೊರಗುತ್ತಿದೆ. ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಮೂರು ಹವಾಮಾನವನ್ನ ಹೊಂದಿರುವ ಕಾಫಿನಾಡಿನ ಕಡೂರು ಶಾಶ್ಚತ ಬರಗಾಲಕ್ಕೆ ತುತ್ತಾದ ತಾಲೂಕು. ಇಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ. ಆದರೆ ಕಡೂರಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಶಾಪವಾಗಿದ್ದ ಬರಗಾಲವನ್ನ ತಾವೇ ಮೆಟ್ಟಿ ನಿಂತು, ಗ್ರಾಮವನ್ನ ಹಸಿರಾಗಿಸಿಕೊಂಡಿದ್ದಾರೆ.

    ಪಿಳ್ಳೇನಹಳ್ಳಿಯಿಂದ 6 ಕಿ.ಮೀ. ದೂರದಲ್ಲಿರೋ ವೇದಾವತಿ ನದಿಯಿಂದ ತಮ್ಮ ಗ್ರಾಮಕ್ಕೆ ನೀರು ತಂದುಕೊಂಡಿದ್ದಾರೆ. ಊರಿನ ಜನರೇ ಚಂದಾ ಎತ್ತಿ ಒಂದು ಲಕ್ಷಕ್ಕೂ ಅಧಿಕ ಹಣವನ್ನ ಸಂಗ್ರಹಿಸಿಕೊಂಡು ಪೈಪ್ ಹಾಗೂ ಮೋಟರ್‍ಗಳನ್ನ ತಾವೇ ತಂದು ಶ್ರಮದಾನದ ಮೂಲಕ ಆರು ಕಿ.ಮೀ. ಪೈಪ್ ಹಾಕಿಕೊಂಡು ನೀರು ತಂದಿದ್ದಾರೆ. ಹಳ್ಳಿಗರ ಭಗೀರಥ ಪ್ರಯತ್ನದಿಂದ ಇಂದು ಗ್ರಾಮದಲ್ಲಿನ ಕೆರೆಗಳು ತುಂಬಿದ್ದು ಜನ-ಜಾನುವಾರುಗಳಿಗೆ ಕುಡಿಯೋಕೆ ನೀರು ಸಿಗುವಂತಾಗಿದೆ.

    ವೇದಾವತಿ ನದಿ ಕೂಡ 12 ವರ್ಷಗಳಿಂದ ಬತ್ತಿದ್ದು, ಈ ವರ್ಷ ಮೈದುಂಬಿ ಹರಿಯುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾಗಿದ್ದ ಹಳ್ಳಿಗರು, ತಮ್ಮ ದಾಹವನ್ನ ತಾವೇ ನೀಗಿಸಿಕೊಳ್ಳೋಕೆ ಮುಂದಾಗಿ ಸೈ ಎನ್ನಿಸಿಕೊಂಡಿದ್ದಾರೆ. ಗ್ರಾಮಸ್ಥರೇ ಮುಂದೆ ನಿಂತು ಕೃತಕ ನಾಲೆ ನಿರ್ಮಿಸಿಕೊಂಡು 6 ಕಿ.ಮೀ. ದೂರದಿಂದ ತಮ್ಮ ಊರಿಗೆ ನೀರು ತಂದುಕೊಂಡಿದ್ದಾರೆ. ಅಲ್ಲಿಂದ 15 ಹೆಚ್.ಪಿ. ಸಾಮರ್ಥ್ಯದ ಎರಡು ಮೋಟರ್ ಗಳನ್ನ ಬಳಸಿಕೊಂಡು ಗ್ರಾಮಕ್ಕೆ ನೀರು ಹಾಯಿಸಿಕೊಂಡಿದ್ದಾರೆ.

    ಗ್ರಾಮಸ್ಥರು ಹಾಗೂ ಗ್ರಾಮದ ಯುವಕರ ಕೆಲಸಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಹಕರಿಸಿದರೆ ಗ್ರಾಮಕ್ಕೆ ಶಾಶ್ವತ ನೀರಿನ ಮೂಲ ಸಿಗುವುದರಲ್ಲಿ ಅನುಮಾನವಿಲ್ಲ. ಶಾಸಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಲಹೆ ನೀಡುವುದರ ಜೊತೆ ಈ ಯೋಜನೆಯನ್ನ ಶಾಶ್ವತ ಯೋಜನೆಯನ್ನಾಗಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಗ್ರಾಮದ ಜನರ ಕೆಲಸ ರಾಜ್ಯಕ್ಕೆ ಮಾದರಿಯಾಗುವಂತದ್ದು. ಶಾಶ್ಚತ ನೀರಾವರಿ ಯೋಜನೆಗೆ ಹತ್ತಾರು ವರ್ಷ ಸಮಯ ಕೇಳುವ ಅಧಿಕಾರಿಗಳು ಹಾಗೂ ರೈತರ ಉದ್ಧಾರವೇ ನಮ್ಮ ಗುರಿ ಅಂತಾ ಮಾರುದ್ಧ ಭಾಷಣ ಬಿಗಿಯೋ ರಾಜಕಾರಣಿಗಳಿಗೂ ಈ ಗ್ರಾಮದ ಜನ ಮಾದರಿಯಾಗಿದ್ದಾರೆ. ರೈತರೇ ಮಾಡಿಕೊಂಡಿರೋ ಈ ಯೋಜನೆಗೂ ಸರ್ಕಾರ ಕಲ್ಲು ಹಾಕದೆ, ಅಭಿವೃದ್ಧಿಪಡಿಸೋ ನಿಟ್ಟಿನಲ್ಲಿ ಯೋಚಿಸಲಿ ಅನ್ನೋದು ಬಯಲುಸೀಮೆಯ ಜನರ ಆಶಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 10 ಕಿ.ಮೀ. ಬಸ್ ಗೆ ಸೈಡ್ ಕೊಡದೇ ಸತಾಯಿಸಿದ ಬೈಕ್ ಸವಾರ

    10 ಕಿ.ಮೀ. ಬಸ್ ಗೆ ಸೈಡ್ ಕೊಡದೇ ಸತಾಯಿಸಿದ ಬೈಕ್ ಸವಾರ

    ಚಿಕ್ಕಮಗಳೂರು: ಬೈಕ್ ಸವಾರನೋರ್ವ ಸಾರಿಗೆ ವಾಹನಕ್ಕೆ 10 ಕಿ.ಮೀ. ಸೈಡ್ ಕೊಡದೇ ಪುಂಡತನ ಮೆರೆದಿದ್ದಾನೆ. ಈ ಘಟನೆ ಜಿಲ್ಲೆಯ ಮೂಡಿಗೆರೆಯಲ್ಲಿ ಇಂದು ನಡೆದಿದ್ದು, ಬೈಕ್ ಸವಾರನ ಪುಂಡಾಟವನ್ನು ಬಸ್ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ.

    ಬಸ್ ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿತ್ತು. ಈ ವೇಳೆ ಮೂಡಿಗೆರೆಯಿಂದ ಬರೋಬ್ಬರಿ 10 ಕಿ.ಮೀ. ತನ್ನ ಪುಂಡಾಟವನ್ನು ಮರೆದಿದ್ದಾನೆ. ಬಸ್ ಚಾಲಕ ಹಾರನ್ ಹಾಕಿದರೂ ಸೈಡ್ ಕೊಟ್ಟಿಲ್ಲ. ಕೊನಗೆ ಬಸ್ ನಲ್ಲಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಯಾಣಿಕರು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೈಕ್ ಸವಾರ ಕೂಡಲೇ ಪರಾರಿಯಾಗಿದ್ದಾನೆ. ಮೂಡುಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿ – 10 ಕಿ.ಮೀ ದೂರದವರೆಗೂ ಸಾಲಾಗಿ ನಿಂತ ವಾಹನಗಳು

    ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿ – 10 ಕಿ.ಮೀ ದೂರದವರೆಗೂ ಸಾಲಾಗಿ ನಿಂತ ವಾಹನಗಳು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ಯ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಇಂದು ಬೆಳಿಗ್ಗೆ 10 ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಲಾರಿ ಪಲ್ಟಿಯಾಗಿದ್ದರಿಂದ ಸುಮಾರು 10 ಕಿ.ಮೀ.ನಷ್ಟು ದೂರ ಸಾಲುಗಟ್ಟಿ ವಾಹನಗಳು ನಿಂತಿದ್ದು, ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೂ ಟ್ರಾಫಿಕ್ ಜಾಮ್ ಆಗಿದೆ. ಲಾರಿ ಪಲ್ಟಿಯಾದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

    ಚಾರ್ಮಾಡಿ ಘಾಟ್ ಚಿಕ್ಕಮಗಳೂರು-ಧರ್ಮಸ್ಥಳ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ. ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಕರಾವಳಿ ಮತ್ತು ಬೆಂಗಳೂರಿನ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ. ಆದ್ದರಿಂದ ಈ ಮಾರ್ಗದಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತವೆ.

    ಲಘು-ಘನ ಎನ್ನದೇ ಎಲ್ಲಾ ವಾಹನಗಳು ಇದೇ ಮಾರ್ಗವಾಗಿ ಬೆಂಗಳೂರು ಸೇರುತ್ತಿದ್ದವು. ಹೀಗಾಗಿ ಹಲವು ದಿನಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ನರಕಯಾತನೆ ಅನುಭವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ, ನಿಮ್ಮ ಮಕ್ಕಳ ಚಲನ-ವಲನಗಳ ಮೇಲೆ ಗಮನವಿರಲಿ

    ಪೋಷಕರೇ, ನಿಮ್ಮ ಮಕ್ಕಳ ಚಲನ-ವಲನಗಳ ಮೇಲೆ ಗಮನವಿರಲಿ

    ಚಿಕ್ಕಮಗಳೂರು: ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಕಾಫಿನಾಡಲ್ಲಿ ದಿನವೊಂದಕ್ಕೆ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಸೇರಿದಂತೆ ಹತ್ತಾರು ವಸ್ತುಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ.

    ಚಿಕ್ಕಮಗಳೂರಿನ ಶಂಕರಪುರ, ಟಿಪ್ಪುನಗರ, ಶರೀಫ್‍ ಗಲ್ಲಿ, ಮಾರ್ಕೇಟ್ ರಸ್ತೆ ಸೇರಿದಂತೆ ಕೊಳಚೆ ಪ್ರದೇಶದ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ. ಕಡಿಮೆ ಬೆಲೆಯಲ್ಲಿ ಸಿಗುವ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಗಳಿಂದ ನಶೆ ಏರಿಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ 14 ರಿಂದ 20 ವರ್ಷದ ಮಕ್ಕಳೇ ಹೆಚ್ಚು ಅನ್ನೋದು ಆಘಾತಕಾರಿ ಅಂಶವಾಗಿದೆ.

    ಶಾಲೆಗೆ ಹೋಗುವ, ಹೋಗದಿರುವ ಇಲ್ಲಿನ ಮಕ್ಕಳು ಸೇರಿದಂತೆ 20 ರಿಂದ 30 ವರ್ಷದವರು ಇವುಗಳನ್ನ ಖರೀದಿಸಿ ಅದನ್ನ ಬಟ್ಟೆಯೊಳಗೆ ಹಾಕಿ ಅದರ ವಾಸನೆ ಸೇವಿಸುವ ದುಷ್ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಬಾಟಲಿ ಮದ್ಯ ಸೇವಿಸಿದ್ದಕ್ಕಿಂತ ಹೆಚ್ಚು ನಶೆ ಬರುತ್ತದೆ. ಸಾಲದಕ್ಕೆ ಹಣವು ಹೆಚ್ಚು ಬೇಕಿಲ್ಲ. ಹತ್ತಿಪ್ಪತ್ತು ರೂಪಾಯಿ ಇದ್ದರೆ ಸಾಕಾಗಿದೆ. ಇತ್ತೀಚೆಗೆ 22 ವರ್ಷದ ಯುವಕನೊಬ್ಬ ಈ ದುಷ್ಟಟಕ್ಕೆ ಬಿದ್ದು, ಮಾನಸಿಕ ಖಿನ್ನತೆಯಿಂದ ಪೊಲೀಸ್ ಠಾಣೆ ಪಕ್ಕದಲ್ಲೇ ಟವೆಲ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.

    ಪುಸ್ತಕ ಮಳಿಗೆ, ಹಾರ್ಡ್‍ವೇರ್, ಬಣ್ಣದ ಅಂಗಡಿಗಳಲ್ಲಿ ಸಿಗುವ ಇವುಗಳಿಂದ ಬೆಳೆಯೋ ಹಂತದಲ್ಲೇ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದನ್ನ ಒಮ್ಮೆ ಸೇವಿಸಿದರೆ ಮತ್ತೆ-ಮತ್ತೆ ಸೇವಿಸಬೇಕೆಂದನಿಸುತ್ತದೆ. ಜೇಬಲ್ಲಿ 20 ರೂಪಾಯಿ ಇದ್ರೆ ಸಾಕು ಒಂದ್ ಟ್ಯೂಬ್ ಸಿಗುತ್ತದೆ. ಪಾಳು ಬಿದ್ದ ಮಳಿಗೆ, ಗಿಡಗಂಟೆಗಳ ಮರೆಯಲ್ಲಿ ಐದೇ ನಿಮಿಷಕ್ಕೆ ವಾಸನೆ ಸೇವಿಸಿದರೆ ಅದರ ನಶೆ 6 ರಿಂದ 8 ಗಂಟೆ ಇರುತ್ತದೆ. ಈ ದುಷ್ಟಕ್ಕೆ ಬಿದ್ದಿರುವ ದಿನಕ್ಕೆ ಕನಿಷ್ಠ ಮೂರು ಬಾರಿ ವಾಸನೆ ಎಳೆಯುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಮಾನಸಿಕ ಖಿನ್ನತೆ ಒಳಗಾಗಿ ವ್ಯಕ್ತಿತ್ವ, ಬೆಳವಣಿಗೆ ಎಲ್ಲವೂ ಕ್ರಮೇಣ ಕುಗ್ಗುತ್ತದೆ. ಪಿಡ್ಸ್ ಬಂದಂತಾಗುತ್ತದೆ. ನಮ್ಮ ಬಳಿ ದಿನಕ್ಕೆ ಇಂತಹಾ ನಾಲ್ಕೈದು ಕೇಸ್ ಬರುತ್ತಿದ್ದು, ಇದಕ್ಕೆ ಔಷಧಿ ಇಲ್ಲ. ಕೌನ್ಸಿಲಿಂಗ್ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಮನೋರೋಗ ತಜ್ಞ ವೆಂಕಟೇಶ್ ಹೇಳಿದ್ದಾರೆ.

    ಆಧುನಿಕತೆ ಬೆಳೆದಂತೆ ಯುವಜನತೆ ಕೂಡ ಹಾದಿ ತಪ್ಪುತ್ತಿದ್ದಾರೆ. ಎಲ್ಲಾ ಸಮಸ್ಯೆಗೂ ಸರ್ಕಾರವೇ ಕಾರಣ ಅನ್ನೋದಕ್ಕಿಂತ ಪೋಷಕರು ಕೂಡ ಮಕ್ಕಳ ಚಲನ-ವಲನಗಳ ಮೇಲೆ ಗಮನ ಹರಿಸಬೇಕಿದೆ. ಇಲ್ಲವಾದರೆ ಇಂತಹಾ ಅನಾಹುತಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಈಗಾಗಲೇ ನಾಲ್ಕೈದು ಯುವಕರು ಈ ದುಶ್ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಂಡತಿ ತಲೆ ಕಡಿದು ಸ್ಟೇಷನ್‍ಗೆ ತಂದ ಭೂಪ

    ಹೆಂಡತಿ ತಲೆ ಕಡಿದು ಸ್ಟೇಷನ್‍ಗೆ ತಂದ ಭೂಪ

    -ತಲೆಯೊಂದಿಗೆ ಬಸ್ಸಿನಲ್ಲಿ 20 ಕಿ.ಮೀ ಪ್ರಯಾಣಿಸಿದ ಪತಿ

    ಚಿಕ್ಕಮಗಳೂರು: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ತಂದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

    ಈ ಘಟನೆ ಅಜ್ಜಂಪುರ ಹೋಬಳಿಯ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ರೂಪ (30) ಕೊಲೆಯಾದ ಹೆಂಡತಿ. ಪತಿ ಸತೀಶ್ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನ ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ರೂಪ ಅದೇ ಗ್ರಾಮದಲ್ಲಿ ಸುನೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ಅನುಮಾನ ಪಟ್ಟಿದ್ದನು. ಆದರೆ ಭಾನುವಾರ ಇಬ್ಬರು ಒಟ್ಟಿಗೆ ಇದ್ದರು ಎಂದು ಶಂಕಿಸಿ ಕೋಪಗೊಂಡು ಆಕ್ರೋಶದಿಂದ ಕತ್ತಿಯಿಂದ ಹೆಂಡತಿಯ ತಲೆ ಕತ್ತರಿಸಿದ್ದಾನೆ.

    ಈ ವೇಳೆ ಸುನೀಲ್ ತಪ್ಪಿಕೊಂಡಿದ್ದಾನೆ. ಬಳಿಕ ಸತೀಶ್ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ವರೆಗೂ ಬಸ್ ಸಂಚಾರ ಮಾಡಿ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದಿದ್ದು, ಕತ್ತಿ ಹಾಗೂ ತಲೆ ಎರಡನ್ನೂ ಪೊಲೀಸ್ ಠಾಣೆಗೆ ತಂದು  ಸತೀಶ್ ಸರೆಂಡರ್ ಆಗಿದ್ದಾನೆ.

    ಅಷ್ಟೇ ಅಲ್ಲದೇ ನನಗೆ ಯಾವ ಶಿಕ್ಷೆ ಕೊಡಬೇಕೋ ಕೊಡಿ, ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಆತನನ್ನು ಹುಡುಕಿ ಬಂದು ಕೊಲೆ ಮಾಡಿ ಮತ್ತೆ ಬರುತ್ತೇನೆ ಎಂದು ಹೇಳಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬುಲೆನ್ಸ್‌ಗೆ ದಾರಿ ಬಿಡದೇ ದರ್ಪ- 10 ಕಿ.ಮೀ ಸತಾಯಿಸಿದ ಚಾಲಕ

    ಅಂಬುಲೆನ್ಸ್‌ಗೆ ದಾರಿ ಬಿಡದೇ ದರ್ಪ- 10 ಕಿ.ಮೀ ಸತಾಯಿಸಿದ ಚಾಲಕ

    ಚಿಕ್ಕಮಗಳೂರು: ಸೈರನ್ ಹಾಕಿಕೊಂಡು, ಎಷ್ಟೇ ಹಾರ್ನ್ ಮಾಡಿದರೂ ಅಂಬುಲೆನ್ಸ್‌ಗೆ ದಾರಿ ಬಿಡದೇ ಮಂಗಳೂರು ನೋಂದಣಿಯ ಕಾರು ಚಾಲಕ ಅಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‍ನಲ್ಲಿ ನಡೆದಿದೆ.

    ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ 45 ವರ್ಷದ ಅಮಿರ್‍ಜಾನ್ ಎಂಬುವರನ್ನು ಗುರುವಾರ ಮಧ್ಯಾಹ್ನ ಚಿಕ್ಕಮಗಳೂರಿನಿಂದ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಬಿಸಿರೋಡ್ ಬಳಿ ಕೆಎ 19 ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಸುಮಾರು 10 ಕಿ.ಮೀ. ಅಂಬುಲೆನ್ಸ್‍ಗೆ ದಾರಿ ಬಿಡದೇ ಸತಾಯಿಸಿದ್ದಾನೆ.

    ಅಂಬುಲೆನ್ಸ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಬಹುಬೇಗ ಆಸ್ಪತ್ರೆಗೆ ದಾಖಲಿಸಲು ಚಾಲಕ ತೀವ್ರ ಪ್ರಯತ್ನ ಪಟ್ಟಿದ್ದು, ವಾಹನ ಸೈರನ್ ಹಾಕಿದ್ದರೂ ಕಾರು ಚಾಲಕ ಮಾತ್ರ ದಾಡಿ ಬಿಡಲೇ ಇಲ್ಲ. ಅಂಬುಲೆನ್ಸ್ ಸೈರನ್ ಕೇಳಿ ನೂರಾರು ವಾಹನಗಳು ದಾರಿ ಬಿಟ್ಟರೂ ಚಾಲಕ ಮಾತ್ರ ದಾರಿ ಬಿಟ್ಟಿಲ್ಲ. ಈ ಕುರಿತು ಮಾಹಿತಿ ನೀಡಿದ ಅಂಬುಲೆನ್ಸ್ ಚಾಲಕ ಬಿ.ಸಿ.ರೋಡ್‍ನಿಂದ ಐದು ಕಿ.ಮೀ. ಹಿಂದೆ ನಿಂತಿದ್ದ ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಂಗಳೂರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿದ್ದಾರೆ.

    ಅಂಬುಲೆನ್ಸ್‌ಗೆ ದಾರಿ ಬಿಡದೇ ಅಮಾನವೀಯತೆ ಮೆರೆದ ಕಾರು ಚಾಲಕನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಹಲವರು ಕಾರು ಚಾಲಕನ ವರ್ತನೆಗೆ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XXGYCOFBuss

  • ರಸ್ತೆಗುರುಳಿದ ಬೃಹತ್ ಮರ – ಮುಳ್ಳಯ್ಯನಗಿರಿ ಸಂಚಾರ ಬಂದ್

    ರಸ್ತೆಗುರುಳಿದ ಬೃಹತ್ ಮರ – ಮುಳ್ಳಯ್ಯನಗಿರಿ ಸಂಚಾರ ಬಂದ್

    ಚಿಕ್ಕಮಗಳೂರು: ಗಿರಿ ಭಾಗದಲ್ಲಿ ಮುಂದುವರಿದ ಮಳೆಯಿಂದಾಗಿ ಮುಳ್ಯಯ್ಯನಗಿರಿ ತಿರುವಿನಲ್ಲಿ ಬೃಹತ್ ಮರಗಳು ಬಿದ್ದು ರಸ್ತೆ ಮಾರ್ಗ ಸಂಪೂರ್ಣ ಬಂದ್ ಅಗಿದೆ.

    ಚಿಕ್ಕಮಗಳೂರು ತಾಲೂಕಿನ ಮುಳ್ಯಯ್ಯನಗಿರಿ ದತ್ತಪೀಠದ ಮಾರ್ಗದಲ್ಲಿ ಬೃಹತ್ ಮರ ಬಿದ್ದಿರುವುದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಗಿರಿ ಶ್ರೇಣಿ ಸಾಲನಲ್ಲಿಯೇ ಮರ ಬಿದ್ದಿರುವುದರಿಂದ ಗಿರಿಗೆ ತೆರಳಲು ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡುತ್ತಿದ್ದಾರೆ.

    ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಇತ್ತ ಶೃಂಗೇರಿಯ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರುವ ಗಾಳಿ-ಮಳೆಯಿಂದಾಗಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆಗೆ ಗುಡ್ಡದ ಮಣ್ಣು ಜಾರಿ ಬೆಳೆ ಸಂಪೂರ್ಣ ಹಾನಿಯಾಗಿದೆ.

    ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದರೂ ಭಾರೀ ಗಾಳಿಯೊಂದಿಗೆ ಸುರಿಯುತ್ತಿರುವ ಸೋನೆ ಮಳೆಯಿಂದ ಗುಡ್ಡದ ಮಣ್ಣು ಸವೆದು ಇಡೀ ಜಮೀನಿಗೆ ಆವರಿಸಿಕೊಂಡಿದೆ. ತಿಂಗಳಿಂದ ಮಡಿ ಮಾಡಿ, ಸಸಿ ನೆಟ್ಟಿದ ರೈತರೀಗ ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ಉಂಟಾಗಿದ್ದು, ಭೂ ಕುಸಿತದಿಂದ ಮಲೆನಾಡು ಜನ ತತ್ತರಿಸಿದ್ದಾರೆ.

    ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಈಚಲಬೈಲ್ ಗ್ರಾಮದಲ್ಲಿ ಭೂ ಕುಸಿತದಿಂದ ಟ್ರಾನ್ಸ್ ಫರ್ಮರ್ ಹಾಗೂ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಭಾರೀ ದುರಂತ ತಪ್ಪಿದಂತಾಗಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ನಾಲ್ಕು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಫಿ ನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ -ಮಂಗಳೂರಿಗೆ ಪ್ರಯಾಣ ಕಷ್ಟಕರ

    ಕಾಫಿ ನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ -ಮಂಗಳೂರಿಗೆ ಪ್ರಯಾಣ ಕಷ್ಟಕರ

    ಚಿಕ್ಕಮಗಳೂರು: ಕುಂಭದ್ರೋಣ, ಪುನರ್ವಸು, ಆಶ್ಲೇಷ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರು ಒಂದೇ ರಾತ್ರಿ ಮಳೆಯ ಆರ್ಭಟಕ್ಕೆ ಕಂಗಾಲಾಗಿದ್ದಾರೆ. 2 ದಿನ ಸೂರ್ಯನ ಕಂಡು ನಿಟ್ಟುಸಿರಿ ಬಿಟ್ಟಿದ್ದ ಮಲೆನಾಡಿಗರು ಮತ್ತೆ ಉಸಿರು ಬಿಗಿ ಹಿಡಿದಿದ್ದಾರೆ. ರಾತ್ರಿಯಿಂದ ಒಂದೇ ಸುಮನೆ ಸುರಿಯುತ್ತಿರೋ ಮಳೆಗೆ ನೆರೆಭೀತಿ ಎದುರಾಗಿದೆ.

    ಕಾಫಿನಾಡಿನ ಪರಿಸ್ಥಿತಿ ಕೊಡಗಿಗಿಂತ ಭಿನ್ನವಾಗೇನು ಇಲ್ಲ. ಚಿಕ್ಕಮಗಳೂರಿನಲ್ಲಿ ಮೂರು ದಶಕಗಳ ಬಳಿಕ ಕಂಡು ಕೇಳರಿಯದ ರೀತಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ವಾರ್ಷಿಕ ಮಳೆ 1757 ಮಿ.ಮೀ. ಆದ್ರೆ, ಆಗಸ್ಟ್ 15ರ ವೇಳೆಗೆ 1,873 ಮಿ.ಮೀ. ಮಳೆಯಾಗಿರೋದು ಕಾಫಿನಾಡನ್ನ ಕಂಗೇಡಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮಗಳಲ್ಲಿ ಗುಡ್ಡ ಕುಸಿದು ಮಣ್ಣು ಮನೆಗೆ ಅಪ್ಪಳಿಸಿದೆ. ಜಯಪುರ ಸಮೀಪದ ಬಸರೀಕಟ್ಟೆ ಬಳಿ ಭೂಕುಸಿತ ಉಂಟಾಗಿದ್ದು, ಜನಸಾಮಾನ್ಯರು ದಾರಿ ಇಲ್ಲದೆ ಪರದಾಡುವಂತಾಗಿದೆ.

    ಮಂಗಳೂರಿಗೆ ಪ್ರಯಾಣ ಕಷ್ಟಕರ: ಭಾರೀ ಮಳೆಯಿಂದ ಮಂಗಳೂರು, ಬೆಂಗಳೂರಿನ ಸಂಚಾರವೇ ಅಲ್ಲೋಲ-ಕಲ್ಲೋಲವಾಗಿದೆ. ಯಾಕಂದ್ರೆ ಶಿರಾಡಿ, ಸಂಪಾಜೆ ಘಾಟ್ ಬಂದ್ ಆದ ಮೇಲೆ ಮಂಗಳೂರಿನಿಂದ ಬೆಂಗಳೂರಿಗೆ ಇರೋದು ಚಾರ್ಮಾಡಿ ಮಾರ್ಗವೇ ಬಳಸಬೇಕು. ಆದರೆ ಅಲ್ಲೂ ಭಾರೀ ಮಳೆ, ಗಾಳಿ ಇರೋದ್ರಿಂದ ಗುಡ್ಡ ಕುಸಿದ್ರೆ ಆ ಮಾರ್ಗವೂ ಬಂದ್ ಆಗುತ್ತೆಂದು ಐರಾವತ, ರಾಜಹಂಸ ಹಾಗೂ 08, 10, 12 ಚಕ್ರದ ಗಾಡಿಗಳನ್ನ ಕಳಸ-ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಬಿಡಲಾಗಿತ್ತು. ಆದರೆ ಮಹಾಮಳೆಗೆ ಕುದುರೆಮುಖ ಮಾರ್ಗದಲ್ಲೂ 4 ಗುಡ್ಡ ಕುಸಿದಿದ್ದು ಬೆಂಗಳೂರು-ಮಂಗಳೂರಿಗೆ ಮಾರ್ಗವೇ ಇಲ್ಲದಂತಾಗಿದೆ.

    ಇತ್ತ ಕಾವೇರಿ ಹಾಗೂ ಕಪಿಲಾ ನದಿ ಪ್ರವಾಹ ಹಿನ್ನೆಲೆ ಸಂಗಮ ಸ್ಥಳ ಟಿ.ನರಸೀಪುರದಲ್ಲಿ ಹಲವು ಪ್ರದೇಶ ಜಲಾವೃವಾಗಿದೆ. ಟಿ.ನರಸೀಪುರ ಬಳಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿದೆ. ಒಟ್ಟಿನಲ್ಲಿ ಮಡಿಕೇರಿ ಮಾತ್ರವಲ್ಲದೇ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರವ ಮಳೆ ಅವಾಂತರವನ್ನೇ ಸೃಷ್ಠಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv