Tag: Chikkana

  • ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ,  ‘ಕರ್ವ’ ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಛೂ‌ ಮಂತರ್’ ಚಿತ್ರ ಇದೇ ಏಪ್ರಿಲ್ 5 ರಂದು ರಾಜ್ಯಾದ್ಯಂತ. ಬಿಡುಗಡೆಯಾಗುತ್ತಿದೆ.

    ಈಗಾಗಲೇ  ಟೀಸರ್ ಮೂಲಕ ಮನೆಮಾತಾಗಿರುವ ಛೂ ಮಂತರ್ ಚಿತ್ರದ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದೊಂದು ಹಾರಾರ್ ಚಿತ್ರವಾಗಿದ್ದು, ಈ ಹಿಂದೆ ಬಂದಿರುವ ಹಾರಾರ್ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಮೇಕಿಂಗ್ ನೋಡಿದಾಗ ಹಾಲಿವುಡ್ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಗುತ್ತದೆ.

     

    ಶರಣ್ ಅವರ ಪಾತ್ರ ಕೂಡ ಈ ಹಿಂದಿನ ಚಿತ್ರಗಳಿಗಿಂತ ಬೇರೆ ರೀತಿಯಲ್ಲಿಯೇ ಇದೆ. ಉಪಾಧ್ಯಕ್ಷನಾಗಿ ಯಶಸ್ಸು ಕಂಡಿರುವ ಚಿಕ್ಕಣ್ಣ ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ. ಮತ್ತೊಮ್ಮೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸಮ್ಮಿಲನ ಈ ಚಿತ್ರದಲ್ಲಾಗಿದೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ,  ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ.

  • ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ನೂರಾರು ಸಲ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಡಿವೆ. ನಿರೂಪಕಿ ಅನುಶ್ರೀ ಅವರ ಜೊತೆ ಮದುವೆಯಾಗಿದ್ದಾರೆ ಎನ್ನುವುದರಿಂದ ಹಿಡಿದು, ನಾನಾ ನಟಿಯರ ಹೆಸರು ಅವರ ಮದುವೆಯ ಯಾದಿಯಲ್ಲಿ ಕಾಣಿಸಿಕೊಂಡಿವೆ. ಅವೆಲ್ಲವೂ ಈವರೆಗೂ ಸುಳ್ಳಾಗಿದ್ದವು. ಈ ಬಾರಿ ನಿಜ ಸಂಗತಿಯೊಂದು ತೇಲಿ ಬಂದಿದೆ. ಮುಂದಿನ ವರ್ಷ ಪಕ್ಕಾ ಚಿಕ್ಕಣ್ಣ ಮದುವೆಯಾಗಲಿದ್ದಾರಂತೆ. ಅದಕ್ಕೆ ಕಾರಣ ಅವರ ಕುಟುಂಬದ ಒತ್ತಡ.

    ಸದ್ಯ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಅವರು, ಎರಡನೇ ಹಂತದ ಶೂಟಿಂಗ್ ಗಾಗಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಅವರು ಹಸೆಮಣೆ ಏರಲಿದ್ದಾರಂತೆ. ಈ ಸಲ ಮಾತ್ರ ಮದುವೆ ವಿಚಾರ ಯಾವುದೇ ಕಾರಣಕ್ಕೂ ಗಾಸಿಪ್ ಆಗಲ್ಲ ಎಂದು ನಿಜ ನುಡಿದಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಚಿಕ್ಕಣ್ಣ ಮದುವೆ ಆಗುತ್ತಿರುವ ಹುಡುಗಿ ಯಾರು? ಸಿನಿಮಾ ರಂಗದಲ್ಲೇ ಇದ್ದಾರಾ ಅಥವಾ ಕುಟುಂಬದವರು ಹುಡುಗಿಯನ್ನು ಹುಡುಕಿದ್ದಾರೆ? ಈ ಕುರಿತು ಅವರು ಏನನ್ನೂ ಹೇಳಿಲ್ಲ. ಆದರೆ, ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಮದುವೆ ಪಕ್ಕಾ ಎಂದು ಮಾತ್ರ ಹೇಳಿಕೊಂಡಿದ್ದಾರೆ. ಹಲವು ದಿನಗಳಿಂದ ಚಿಕ್ಕಣ್ಣ ಮದುವೆ ವಿಚಾರ ಓಡಾಡುತ್ತಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡಲು ಅವರು ನಿರ್ಧಾರ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಚಿಕ್ಕಣ್ಣ ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ಮೈಸೂರು ಸುತ್ತಮುತ್ತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶೂಟಿಂಗ್ ಸ್ಥಳಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ಮಾಡಿ ಕೆಲ ಹೊತ್ತು ಕಳೆದಿದ್ದಾರೆ. ಬೈರಾಗಿ ಸಿನಿಮಾದ ಪ್ರಚಾರಕ್ಕಾಗಿ ಇಂದು ಮೈಸೂರು ಮತ್ತು ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಶಿವರಾಜ್ ಕುಮಾರ್, ಈ ಸಂದರ್ಭದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ  ದೇವಿಯ ದರ್ಶನ ಕೂಡ ಪಡೆದಿದ್ದಾರೆ.

    ಚಾಮುಂಡಿ ದರ್ಶನದ ನಂತರ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ತೆರಳಿದ ಶಿವರಾಜ್ ಕುಮಾರ್, ಕೆಲ ಹೊತ್ತು ಸಿನಿಮಾ ತಂಡದೊಂದಿಗೆ ಕಳೆದರು. ಈ ಸಂದರ್ಭದಲ್ಲಿ ಡಾಲಿ ಧನಂಜಯ್ ಕೂಡ ಶಿವಣ್ಣನಿಗೆ ಸಾಥ್ ನೀಡಿದರು. ಶೂಟಿಂಗ್ ಸ್ಥಳದಲ್ಲಿ ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಹಾಜರಿದ್ದರು. ಉಪಾಧ್ಯಕ್ಷ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿ, ಬೈರಾಗಿ ಟೀಮ್ ಜೊತೆ ಶಿವರಾಜ್ ಕುಮಾರ್ ಚಾಮರಾಜನಗರದತ್ತ ಹೊರಟರು. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಇಂದು ಚಾಮರಾಜನಗರದಲ್ಲಿ ಬೈರಾಗಿ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಆಯೋಜನೆಯಾಗಿದೆ. ಆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಡಾಲಿ, ಪೃಥ್ವಿ ಅಂಬರ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದ ಅನೇಕ ಗಣ್ಯರು ಕೂಡ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇಂದು ಸಂಜೆ ಪ್ರಿ ರಿಲೀಸ್ ಇವೆಂಟ್ ಚಾಮರಾಜನಗರದಲ್ಲಿ ನಡೆಯಲಿದೆ.

    Live Tv

  • ಚಿಕ್ಕಣ್ಣ ಜೊತೆ ಮದುವೆ – ಟಗರು ಸರೋಜ ಸ್ಪಷ್ಟನೆ

    ಚಿಕ್ಕಣ್ಣ ಜೊತೆ ಮದುವೆ – ಟಗರು ಸರೋಜ ಸ್ಪಷ್ಟನೆ

    ಬೆಂಗಳೂರು: ಕೆಲವು ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ‘ಟಗರು’ ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಅವರಿಗೆ ವಿವಾಹವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ನಟಿ ತ್ರಿವೇಣಿ ರಾವ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ನಟಿ ತ್ರಿವೇಣಿ ರಾವ್ ‘ಟಗರು’ ಸಿನಿಮಾದಲ್ಲಿ ಸರೋಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಂದಿನಿಂದ ಟಗರು ಸರೋಜ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಟಗರು ಸರೋಜ ವಧು-ವರರ ಉಡುಪಿನಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ನೋಡಿ ಇವರಿಬ್ಬರಿಗೂ ಮದುವೆಯಾಗಿದೆ ಎಂದು ಅನೇಕರು ಶುಭಾಶಯ ಕೋರುತ್ತಿದ್ದರು. ಇದೀಗ ಈ ಸುದ್ದಿ ಸುಳ್ಳು ಎಂದು ಟಗರು ಸರೋಜ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

    “ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಟಗರು ಸಿನಿಮಾದ ಸರೋಜ ಮಾತನಾಡುತ್ತಿದ್ದೇನೆ. ಇದೇ ತಿಂಗಳು ಚಿಕ್ಕಣ್ಣ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಬರ್ತ್ ಡೇ ದಿನ ನಾನು ಒಂದು ಪೋಸ್ಟ್ ಶೇರ್ ಮಾಡಿದ್ದೆ. ಆ ಫೋಸ್ಟ್ ನಿಂದ ನನಗೆ ಮತ್ತು ಚಿಕ್ಕಣ್ಣ ಅವರಿಗೆ ಮದುವೆಯಾಗಿದೆ ಎಂಬ ಸುಳ್ಳು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ನನಗೆ ಮತ್ತು ಅವರಿಗೆ ಅಧಿಕೃತವಾಗಿ ಮದುವೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದರು.

    https://www.instagram.com/p/CB9k7DjgMUf/?igshid=2x7ucns55c3k

    ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯವಾಗಿದೆ. ಹೀಗಾಗಿ ಇದನ್ನು ಯಾರು ನಂಬಬೇಡಿ. ಖಂಡಿತಾ ನನಗೆ ಮದುವೆ ನಿಶ್ಚಯವಾದಾಗ ನಿಮ್ಮೆಲ್ಲರಿಗೂ ಅಧಿಕೃತವಾಗಿ ಹೇಳಿ ನಾನು ಮದುವೆಯಾಗುತ್ತೀನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಬೇಕು. ಎಲ್ಲರೂ ಮನೆಯಲ್ಲಿರಿ, ಸುರಕ್ಷಿತವಾಗಿರಿ” ಎಂದು ಮನವಿ ಮಾಡಿಕೊಂಡರು.

    ಅಷ್ಟೇ ಅಲ್ಲದೇ ಟ್ರೋಲ್ ಮಾಡಿರುವ ಫೋಟೋವನ್ನು ಪೋಸ್ಟ್ ಮಾಡಿ, “ನಾನು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ. ಇದು ಸಿನಿಮಾವೊಂದರ ದೃಶ್ಯವಾಗಿದೆ. ದಯವಿಟ್ಟು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ” ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CB9kf9CACyE/?igshid=gyi2i0xlpbkd

  • ಲಾಕ್ ಡೌನ್ ನಿಂದ ಬೇಸರ ಎಂಬುವವರಿಗೆ ‘ಶ್ರೀ ಭರತ ಬಾಹುಬಲಿ’ಯಿಂದ ಮನರಂಜನೆ!

    ಲಾಕ್ ಡೌನ್ ನಿಂದ ಬೇಸರ ಎಂಬುವವರಿಗೆ ‘ಶ್ರೀ ಭರತ ಬಾಹುಬಲಿ’ಯಿಂದ ಮನರಂಜನೆ!

    ಮಂಜು ಮಾಂಡವ್ಯ ನಾಯಕನಾಗಿ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ‘ಶ್ರೀ ಭರತ ಬಾಹುಬಲಿ’. ಚಿಕ್ಕಣ್ಣ ಹಾಗೂ ಮಂಜು ಮಾಂಡವ್ಯ ಭರತ-ಬಾಹುಬಲಿಯಾಗಿ ಜನರನ್ನು ಮನರಂಜಿಸಿದ್ದ ಸಿನಿಮಾ. ಅದೆಷ್ಟೋ ಜನ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಆಗಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸುತ್ತಿದ್ರು. ಇದೀಗ ಆ ಬೇಸರವನ್ನ ಹೋಗಲಾಡಿಸುವಂತ ಸಮಯ ಬಂದಿದೆ. ಹೌದು ಅಮೆಜಾನ್ ಪ್ರೈಮ್ ನಲ್ಲಿ ‘ಶ್ರೀ ಭರತ ಬಾಹುಬಲಿ’ ಸಿನಿಮಾ ನೋಡುಗರಿಗೆ ಸಿಕ್ತಾ ಇದೆ.

    ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಪ್ರೈಮ್ ನಲ್ಲಿ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಚಿತ್ರಮಂದಿರದಲ್ಲಿ ಇಂತ ಒಳ್ಳೆ ಮನರಂಜನೆಯ ಸಿನಿಮಾ ನೋಡುವುದಕ್ಕೆ ಆಗಲಿಲ್ಲವಲ್ಲ ಎಂಬ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೊರೋನಾ ವೈರಸ್ ನಿಂದಾಗಿ ಎಲ್ಲೆಡೆ ಲಾಕ್ ಡೌನ್ ಮುಂದುವರಿದಿದೆ. ಈಗ ಏನಿದ್ರು ಮನೆಯಲ್ಲಿ ಲಾಕ್ ಆಗಿ ಟೈಮ್ ಪಾಸ್ ಗೆ ಏನಾದ್ರೂ ಮಾಡ್ಬೇಕು ಅಂತ ಹುಡುಕ್ತಾ ಇರ್ತಾರೆ. ಇಷ್ಟು ದಿನ ಮನೆಯಲ್ಲೇ ಲಾಕ್ ಆಗಿ ಬೇಸರವೆನಿಸಿದ ಮನಸ್ಸಿಗೆ ಮುದ ನೀಡಿ, ನಕ್ಕ ನಲಿಸಲು ‘ಶ್ರೀ ಭರತ ಬಾಹುಬಲಿ’ ಸೂಕ್ತವಾದ ಸಿನಿಮಾ. ಮನೆ ಮಂದಿಯೆಲ್ಲಾ ಒಂದೆಡೆ ಕುಳಿತು ನಗು ಬಯಸುವವರಿಗಾಗಿ ‘ಶ್ರೀ ಭರತ ಬಾಹುಬಲಿ’ಯನ್ನು ಪ್ರೈಮ್ ನಲ್ಲಿ ಬಿಡುಗಡೆ ಮಾಡಲಾಗಿದೆ.

    ‘ಮಾಸ್ಟರ್ ಪೀಸ್’ ಅಂತ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನ ನಟನೆ ಒಂದು ಕಡೆ, ಹಾಸ್ಯದಲ್ಲಿ ಖ್ಯಾತಿ ಪಡೆದಿರುವ ಚಿಕ್ಕಣ್ಣ ಇನ್ನೊಂದು ಕಡೆ. ಸೀರಿಯಸ್ ಮ್ಯಾಟರ್ ಇಟ್ಟುಕೊಂಡು ಕಾಮಿಡಿ ಕಾನ್ಸೆಪ್ಟ್ ನಲ್ಲಿ ಮನರಂಜನೆ ನೀಡಿದ ಸಿನಿಮಾವಿದು. ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್, ಶ್ರೇಯಾ ಶೆಟ್ಟಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಮಂಜು ಮಾಂಡವ್ಯ ಹೊಸಬರನ್ನೇ ತೆರೆ ಮೇಲೆ ತಂದಿದ್ದರು, ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಈ ಸಿನಿಮಾ ಕಂಪ್ಲೀಟ್ ಮನರಂಜನೆಯ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ.