Tag: Chikkamgaluru

  • ಕರಂದ್ಲಾಜೆ ಕಳೆದ ಬಾರಿಯ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ : ಬಿಎಸ್‌ವೈ ಭವಿಷ್ಯ

    ಕರಂದ್ಲಾಜೆ ಕಳೆದ ಬಾರಿಯ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ : ಬಿಎಸ್‌ವೈ ಭವಿಷ್ಯ

    ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಹಾಗೂ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಳೆದ ಬಾರಿ 3.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅದೇ ಅಂತರ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa) ಭವಿಷ್ಯ ನುಡಿದಿದ್ದಾರೆ.

    ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಬಾರಿ ಶೋಭಾ ಕರಂದ್ಲಾಜೆ ಗೆದ್ದೇ ಗೆಲ್ಲುತ್ತಾರೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಮೋದಿಯಿಂದಾಗಿ (Narendra Modi) ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ (BJP) ಪರ ವಾತಾವರಣವಿದೆ.‌ ನಾವು ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ದೇವಾಲಯದ ಹಣ ಸರ್ಕಾರದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ: ಬಿಜೆಪಿ ವಿರುದ್ಧ ಅರ್ಚಕರ ಸಂಘ ಕಿಡಿ

    ರಾಜ್ಯದಲ್ಲೂ ಕೂಡ ಅದೇ ವಾತಾವರಣವಿದೆ. ಶೋಭಾ ಕರಂದ್ಲಾಜೆ ವಿರುದ್ಧದ ಪಿತೂರಿ ಅದೊಂದು ಷಡ್ಯಂತ್ರ. ಅದನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಆದರೆ ಅವರು ಯಾವುದಕ್ಕೂ ಧೃತಿಗೆಡಲ್ಲ. ಕೇಂದ್ರ ಸಚಿವೆಯಾಗಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಎಂದ ಹೆಗಡೆ ವಿರುದ್ಧ ಸುಮೊಟೋ ಕೇಸ್ ದಾಖಲು

    ಮಂಡ್ಯ (Mandya) ಟಿಕೆಟ್ ಗೊಂದಲದ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ ಮಂಡ್ಯ ಟಿಕೆಟ್ ಕುರಿತು ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ. ಬಿಜೆಪಿಯ ಮೊದಲ ಪಟ್ಟಿ ಮುಂದಿನ ಮೂರು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಭಾವಿಸಿದ್ದೇನೆ ಎಂದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಜಯಗಳಿಸಿದ್ದರು. ಕರಂದ್ಲಾಜೆ 7,18,916 ಮತಗಳನ್ನು ಪಡೆದರೆ ಪ್ರಮೋದ್‌ ಮಧ್ವರಾಜ್‌ 3,69,317 ಮತಗಳನ್ನು ಪಡೆದಿದ್ದರು.

  • 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

    200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

    ಚಿಕ್ಕಮಗಳೂರು: ಬಿಗಿ ಪೊಲೀಸ್‌ ಭದ್ರತೆ ಮಧ್ಯೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ (Chakravarty Sulibele) ನಮೋ ಭಾರತ್‌ ಕಾರ್ಯಕ್ರಮ ಆಲ್ದೂರು (Aldur) ಪಟ್ಟಣದಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ.

    ಚಿಕ್ಕಮಗಳೂರು ನಗರದಲ್ಲಿ ನಮೋ ಭಾರತ್‌ (Namo Bharat) ಕಾರ್ಯಕ್ರಮ ನಡೆದಾಗ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆಲ್ದೂರು ಚಿಕ್ಕಮಗಳೂರು ಜಿಲ್ಲೆಯ ಸೂಕ್ಷ್ಮ ಪಟ್ಟಣವಾಗಿದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದನ್ನೂ ಓದಿ: 70 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಭಾರತ ಪ್ರಗತಿ ಕಂಡಿಲ್ಲ: ಜಗದೀಶ್ ಶೆಟ್ಟರ್

    ಒಬ್ಬರು ಎಸ್‌ಪಿ, ಐದು ಪಿಎಸ್‌ಐ, ಇಬ್ಬರು ಇನ್ಸ್‌ಪೆಕ್ಟರ್‌, 200ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ನಮೋ ಭಾರತ್ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.  ಇದನ್ನೂ ಓದಿ: ವಿರುಷ್ಕಾ ದಂಪತಿ ಪುತ್ರ ‘ಅಕಾಯ್‌’ ಹೆಸರಿನ ಅರ್ಥವೇನು ಗೊತ್ತಾ?

    ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ನಡೆದಾಗ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ, ಚಕ್ರವರ್ತಿ ಸೂಲೆಬೆಲೆ ವಿರುದ್ಧ ಅವಹೇಳನಕಾರಿ ಬ್ಯಾನರ್ ಹಾಕಿದ್ದರು. ಸೂಲಿಬೆಲೆ ಭಾಷಣದ ಹಿಂಭಾಗದಲ್ಲಿ ಬ್ಯಾನರ್ ಹಾಕಿದ್ದರಿಂದ ನೋಡ ನೋಡುತ್ತಿದ್ದಂತೆಯೇ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಉದ್ರಿಕ್ತರಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರು‌. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

    ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್‌ ಒಬ್ಬರು ಎಎಸ್‌ಪಿ, ಪಿಎಸ್ಐ, ಸಿಪಿಐ, ಡಿವೈಎಸ್‌ಪಿ ಸೇರಿ 200ಕ್ಕೂ ಅಧಿಕ ಪೊಲೀಸರನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿತ್ತು.

     

  • 2 ದಶಕಗಳಿಂದ ನಾಪತ್ತೆಯಾಗಿದ್ದ ನಕ್ಸಲ್‌ ಶ್ರೀಮತಿಗೆ ನ್ಯಾಯಾಂಗ ಬಂಧನ

    2 ದಶಕಗಳಿಂದ ನಾಪತ್ತೆಯಾಗಿದ್ದ ನಕ್ಸಲ್‌ ಶ್ರೀಮತಿಗೆ ನ್ಯಾಯಾಂಗ ಬಂಧನ

    ಚಿಕ್ಕಮಗಳೂರು: ಹಲವು ವರ್ಷಗಳಿಂದ ಭೂಗತಳಾಗಿದ್ದ ಜಿಲ್ಲೆಯ ಶೃಂಗೇರಿ ತಾಲೂಕಿನ ನಕ್ಸಲ್ (Naxal) ಶ್ರೀಮತಿಗೆ (Shrimati) ಎನ್.ಆರ್.ಪುರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

    ಕಳೆದ ಎರಡು ದಶಕಗಳಿಂದ ಶ್ರೀಮತಿ 2002ರಿಂದ ನಾಪತ್ತೆಯಾಗಿದ್ದಳು. ಆಕೆ ಮೇಲೆ ಚಿಕ್ಕಮಗಳೂರು (Chikkmagaluru) ಜಿಲ್ಲೆಯೊಂದರಲ್ಲೇ 12ಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿದ್ದವು.

    ಮಲೆನಾಡಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿಯನ್ನ ನಷ್ಟ ಮಾಡಿದ್ದು, ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಆಯುಧಗಳನ್ನ ಶೇಖರಣೆ ಮಾಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿ ಹಣ, ಆಹಾರ ಸಾಮಗ್ರಿಗಳನ್ನ ತೆಗೆದುಕೊಂಡು ಹೋಗಿದ್ದು, ಪೊಲೀಸರನ್ನು ಬೆಂಬಲಿಸದಂತೆ ಹಳ್ಳಿಗರನ್ನ ಹೆದರಿಸಿದ ಪ್ರಕರಣ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.  ಇದನ್ನೂ ಓದಿ: ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್‌ – ಸುರಂಗ, ಸ್ಕೈಡೆಕ್‌ ಯೋಜನೆಗೆ ಸಿಕ್ಕಿಲ್ಲ ಸ್ಪಷ್ಪತೆ

    ಕಳೆದ ತಿಂಗಳ ಹಿಂದೆ ಕೇರಳದಲ್ಲಿ ಕಾಡಿನಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ ಕೂಂಬಿಂಗ್ ಮಾಡುತ್ತಿದ್ದ ವೇಳೆ ಶ್ರೀಮತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಕೇರಳ ಪೊಲೀಸರು ತನಿಖೆ ಬಳಿಕ ಆಕೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರಿಗೆ ನೀಡಿದ್ದರು.

    ವಿಚಾರಣೆ ಬಳಿಕ ಆಕೆಯನ್ನ ಶೃಂಗೇರಿ ಪೊಲೀಸರ ಸುಪರ್ದಿಗೆ ನೀಡಿದ್ದರು. ಶೃಂಗೇರಿ ಪೊಲೀಸರು ಶೃಂಗೇರಿ ನ್ಯಾಯಾಧೀಶರು ಇಲ್ಲದ ಕಾರಣ ಎನ್.ಆರ್.ಪುರ ಕೋರ್ಟಿಗೆ ಹಾಜರುಪಡಿಸಿದ್ದರು. ಇದನ್ನೂ ಓದಿ: ಕಾಂತಾರ-2ನಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಉಗ್ರ ಹೋರಾಟ – ರಿಷಬ್ ಶೆಟ್ಟಿಗೆ ವಿಹೆಚ್‌ಪಿ, ಬಜರಂಗ ದಳ ಎಚ್ಚರಿಕೆ

    ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಇಂದು ಆಕೆ ಮೇಲಿರುವ ಪ್ರಕರಣಗಳ ಸಂಬಂಧ ಸ್ಥಳ ಮಹಜರ್ ಗೆ ಕರೆದೊಯ್ದಿದ್ದಾರೆ. ತನಿಖೆ ಬಳಿ ಆಕೆಯನ್ನ ಕೇರಳ ಪೊಲೀಸರಿಗೆ ಹಿಂದಿರುಗಿಸಲಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ- ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ

    ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ- ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ

    – ಖಾಕಿಗಳಿಂದ ಹೈ ಅಲರ್ಟ್

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ (Datta Jayanthi) ಕೊನೆ ದಿನವಾದ ಇಂದು ಪಾದುಕೆ ದರ್ಶನ ನಡೆಯಲಿದೆ.

    ಹೌದು. ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ (Baba Budan giri) ಸ್ವಾಮಿ ದರ್ಗಾದಲ್ಲಿ ದತ್ತಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆ. ದತ್ತ ಗುಹೆ ಮುಂಭಾಗದ ತುಳಸಿ ಕಟ್ಟೆಯ ಬಳಿ ಹೋಮ-ಹವನ-ಪೂಜೆ ನಡೆಯುತ್ತಿದೆ.

    ದತ್ತಜಯಂತಿ (Dattajayanthi) ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳು ಬಂದ್ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ದತ್ತಜಯಂತಿಯ ಶೋಭಾಯಾತ್ರೆಯಲ್ಲಿ 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿ

    ನಿನ್ನೆ ದತ್ತ ಜಯಂತಿಯ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಾಯ್ತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ್ರು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಂಡಿತು.

    ಶೋಭಾಯಾತ್ರೆಯಲ್ಲಿ 20 ರಿಂದ 25 ಸಾವಿರ ದತ್ತ ಭಕ್ತರು ಪಾಲ್ಗೊಂಡಿದ್ರು. ವೀರಭದ್ರ ವೇಷಧಾರಿಗಳ ಜೊತೆ ವೀರಗಾಸೆ ಕತ್ತಿ ಹಿಡಿದು ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು. ಮೂರು ಡಿಜೆ ಶಬ್ಧಕ್ಕೆ ಯುವಜನತೆ ಯುವಕ-ಯುವತಿಯರು ಎನ್ನದೆ ಎಲ್ಲರೂ ಒಂದೆಡೆ ಸೇರಿ ಮನಸ್ಸೋ ಇಚ್ಛೆ ಕುಣಿದು ಕುಪ್ಪಳಿಸಿದರು. ಈ ಮನಮೋಹಕ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಮಧ್ಯೆ ದತ್ತಪೀಠವನ್ನ ಹಿಂದೂಗಳಿಗೆ ವಹಿಸಿಕೊಡಬೇಕು ಎಂದು ಕೂಗಿ…ಕೂಗಿ ಹೇಳಿದ್ರು.

  • ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲಿನಲ್ಲಿ (Non Veg Hotel) ಕುರಿ ಬದಲು ದನದ ಮಾಂಸ (Beef Meat) ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

    ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗಲೇ ಪೊಲೀಸರು (Police) ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಎರಡು ಹೋಟೆಲ್‍ನಲ್ಲಿ ಊಟ ಮಾಡಿದ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಐದು ಕೆಜಿ ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿ ಕಾಲೇಜು ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ – ಗುಜರಾತ್ FSLಗೆ ಮೊಬೈಲ್ ರವಾನೆ

    ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್‌ ಅಡುಗೆ ಮಾಡುತ್ತಿದ್ದಾರೆ.

    ಕುರಿ ಮಟನ್ ಕೆ.ಜಿ.ಗೆ 700-800 ರೂ. ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂ. ಸಿಗುತ್ತದೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ 5 ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು: ಬಿಜೆಪಿಯ (BJP) ಭದ್ರಕೋಟೆಯಾದ ಚಿಕ್ಕಮಗಳೂರು (Chikmagaluru) ತಾಲೂಕಿನಲ್ಲಿ ಈ ಬಾರಿ ಗುರು-ಶಿಷ್ಯರ ಕಾಳಗದಲ್ಲಿ ಚುನಾವಣಾ ಕಣ ರಂಗೇರಿದೆ. ಒಂದೆಡೆ ಹಿಂದೂ ಹುಲಿ ಎಂದೇ ಕರೆಸಿಕೊಳ್ಳುವ ಬಿಜೆಪಿಯ ಸಿ.ಟಿ.ರವಿ (CT Ravi) ಮತ್ತೊಂದೆಡೆ ಅದೇ ಹಿಂದೂ ಹುಲಿ ಗರಡಿಯಲ್ಲಿ ಕಾಂಗ್ರೆಸ್ಸಿನ ಹೆಚ್.ಡಿ.ತಮ್ಮಯ್ಯ (H D Thammaiah) ಪಳಗಿದ್ದು ಇಬ್ಬರ 20 ವರ್ಷಗಳ ಸ್ನೇಹ ಇದೀಗ ನಾನಾ-ನೀನಾ ಎನ್ನುವಂತಿದೆ.

    2004ರ ಚುನಾವಣೆಯಿಂದ ಸತತ ಗೆಲ್ಲುತ್ತಿರುವ ಸಿ.ಟಿ.ರವಿಗೆ ಈ ಚುನಾವಣೆ ಒಂದಷ್ಟು ಟೆನ್ಷನ್ ತಂದಿರುವುದು ಸತ್ಯ. ಸಿ.ಟಿ.ರವಿಯ ಜೊತೆಗೆ ಇದ್ದು ರಾಜಕೀಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಮಾಜಿ ಬಿಜೆಪಿ ನಾಯಕ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಇದೀಗ ಅದೇ ರಾಜಕೀಯ ಒಳ ಏಟುಗಳನ್ನು ಸಿ.ಟಿ.ರವಿಗೆ ಕೊಡುತ್ತಿರುವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗಿದೆ.

     

    ಹೆಚ್.ಡಿ.ತಮ್ಮಯ್ಯನವರ ಗೆಲುವು ಅಷ್ಟು ಸುಲಭವಿಲ್ಲ. ಪಕ್ಷಕ್ಕೆ ಸೇರಿದ ಎರಡೇ ತಿಂಗಳಲ್ಲಿ ಅರ್ಜಿ ಹಾಕದೇ ಟಿಕೆಟ್ ತಂದ ಹೆಚ್.ಡಿ.ತಮ್ಮಯ್ಯನವರ ಪರ ಮೂಲ ಕಾಂಗ್ರೆಸ್ಸಿಗರು ಮನಸ್ಸು ಬಿಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರಿಗೆ ಸಿ.ಟಿ.ರವಿ ಮೇಲಿದ್ದ ಕೋಪಕ್ಕೆ ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಬಲಿಯಾದರು ಎಂಬ ಮಾತು ಇದೆ. ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಡಿಕೆಶಿ ಜೊತೆ ಅರ್ಧ ರಾತ್ರಿವರೆಗೂ ಸಭೆ ನಡೆಸಿದರೂ ಕೈ ನಾಯಕರು ತಮ್ಮಯ್ಯಗೆ ಮಣೆ ಹಾಕಿರುವುದು ಬ್ಯಾನರ್ ಕಟ್ಟಿದ ಕೈ ಕಟ್ಟಾಳುಗಳಿಗೆ ಬೇಸರ ತರಿಸಿದೆ. ಇಬ್ಬರು ಲಿಂಗಾಯುತ ಸಮುದಾಯದ ನಾಯಕರಿದ್ದರೂ ಕೂಡ ತಮ್ಮಯ್ಯಗೆ ಮಣೆ ಹಾಕಿರುವುದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

    ಸಿ.ಟಿ.ರವಿ ಅಭಿವೃದ್ಧಿಯೇ ನನ್ನ ಶ್ರೀರಕ್ಷೆ ಎಂದು ಅಖಾಡಕ್ಕಿಳಿದು ಶಿಷ್ಯನಿಗೆ ಮತ್ತೊಂದು ರಾಜಕೀಯ ಪಾಠ ಮಾಡುತ್ತಿದ್ದಾರೆ. 12, 13 ಸಾವಿರ ಜಾತಿ ಮತದ ಸಿ.ಟಿ.ರವಿ 20 ವರ್ಷ ಗೆದ್ದು ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸಿ.ಟಿ.ರವಿಯ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ, ಮಾತಿನ ಶೈಲಿ, ಹಿಂದುತ್ವದ ಬ್ರಾಂಡ್ ಮಧ್ಯೆ ಶಿವಮೊಗ್ಗ-ಹಾಸನ-ಮೈಸೂರು-ಮಂಗಳೂರು-ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ಸಿಎಂ ಕುರ್ಚಿ ಕಾಫಿನಾಡಿಗೂ ಬರಬಹುದು ಎನ್ನುವುದು ಸಿಟಿ ರವಿ ಬೆಂಬಲಿಗರ ಅಭಿಪ್ರಾಯ.

    ಈ ಮಧ್ಯೆ ಜೆಡಿಎಸ್‌ ಪರಿಷತ್‌ ಸದಸ್ಯ ಬೋಜೇಗೌಡ ಬಹಿರಂಗವಾಗಿಯೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿಕ್ಕಮಗಳೂರಿನಲ್ಲಿ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರಾ ನೇರ ಸ್ಪರ್ಧೆ ನಡೆಯುತ್ತಿದೆ.


    2018ರ ಚುನಾವಣೆ ಯಾರಿಗೆ ಎಷ್ಟು ಮತ?
    ಒಟ್ಟು ಮತದಾರರು : 2,16,230
    ಚುಲಾವಣೆಯಾದ ಮತಗಳು : 1,61,387
    ನೋಟಾ : 1,224

    ಸಿ.ಟಿ.ರವಿ : ಬಿಜೆಪಿ : 70,863
    ಬಿ.ಎಲ್. ಶಂಕರ್ : ಕಾಂಗ್ರೆಸ್ : 44,549
    ಬಿ.ಹೆಚ್.ಹರೀಶ್ : ಜೆಡಿಎಸ್ : 3,8317
    ಅಂತರ – 26,314

    ಚಿಕ್ಕಮಗಳೂರು ಕ್ಷೇತ್ರದ ಜಾತಿ ವಿವರ :
    ಲಿಂಗಾಯಿತರು : 45,291
    ಒಕ್ಕಲಿಗರು : 15,629
    ಮುಸ್ಲಿಂರು : 35,902
    ಕುರುಬರು : 32.212
    ಪ.ಜಾತಿ /ಪ.ಪಂ : 48,820
    ಬ್ರಾಹ್ಮಣರು : 6,122
    ಕ್ರಿಶ್ಚಿಯನ್ : 5,100
    ತಮಿಳರು : 6,640

     

  • 4 ಚುನಾವಣೆಯಲ್ಲೂ ಜಾತಿ ದಂಡ, ಸಿಟಿ ರವಿ ಗೆಲುವಿಗೆ ಹಿಂದುತ್ವ – ಅಭಿವೃದ್ಧಿಯೇ ಮಾನದಂಡ

    4 ಚುನಾವಣೆಯಲ್ಲೂ ಜಾತಿ ದಂಡ, ಸಿಟಿ ರವಿ ಗೆಲುವಿಗೆ ಹಿಂದುತ್ವ – ಅಭಿವೃದ್ಧಿಯೇ ಮಾನದಂಡ

    – ಹೌದು, ನಾನು ಲೂಟಿ ರವಿ, ಕೋಟಿ ರವಿನೇ, ಆ ಲೂಟಿ-ಕೋಟಿ ಏನು?

    ಚಿಕ್ಕಮಗಳೂರು: ಹಿಂದುತ್ವದ ಅಡಿಯಲ್ಲಿ ವಿಧಾನಸೌಧ ಪ್ರವೇಶಿಸಿದ ಸಿಟಿ ರವಿ ಸತತ ನಾಲ್ಕು ಬಾರಿ ಗೆದ್ದು ಈಗ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ ದತ್ತಪೀಠದ ಹೋರಾಟವನ್ನೇ ರಾಜಕೀಯದ ಮೆಟ್ಟಿಲು ಮಾಡಿಕೊಂಡು ಎಬಿವಿಪಿಯಿಂದ ರಾಷ್ಟ್ರ ರಾಜಕಾರಣಕ್ಕೆ ಹೋದ ಅಪ್ಪಟ ರಾಜಕೀಯ ವ್ಯವಹಾರಸ್ಥ.

    ಮಾಜಿ ಸಚಿವ ಸಗೀರ್ ಅಹಮದ್ ಅವರ ಎದುರು ನಿರಂತರವಾಗಿ ಮೂರು ಬಾರಿ ಸೋಲುಂಡರೂ ಏಳು-ಬೀಳು-ಸೋಲುಗಳ ಮಧ್ಯೆಯು 2004ರಲ್ಲಿ ವಿಧಾನಸೌಧ ಪ್ರವೇಶಿಸಿದ ಸಿ.ಟಿ.ರವಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. 2004, 2008, 2013, 2018 ನಾಲ್ಕು ಬಾರಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಎರಡು ಬಾರಿ ಸಚಿವರು ಆಗಿದ್ದಾರೆ. 20 ವರ್ಷಗಳ ರಾಜಕೀಯ ಜೀವನದಲ್ಲಿ ಕೊಟ್ಟ ಮಾತಿನಂತೆ ತನ್ನ ಬೆಳವಣಿಗೆಗೆ ಪೂರಕವಾದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಿಸಿ ಹತ್ತಿದ ಏಣಿಯನ್ನು ಒದೆಯದೇ ದತ್ತಾತ್ರೇಯ ಋಣ ತೀರಿಸಿ, ಇದೀಗ ಮತ್ತದೇ ದತ್ತಾತ್ತೇಯ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಐದನೇ ಬಾರಿ ವಿಧಾನಸೌಧ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.

     

    ಹಾಗೇ ನೋಡಿದರೆ ಲಿಂಗಾಯುತರು, ಕುರುಬರು, ಮುಸಲ್ಮಾನರು ಹಾಗೂ ಹಿಂದುಳಿದ ವರ್ಗಗಳ ಮತಗಳಿಗೆ ಹೋಲಿಸಿಕೊಂಡರೆ ಸಿ.ಟಿ.ರವಿಗೆ ಸಮುದಾಯದ ಮತಗಳು ಅಂತ ಇರೋದು ಕೇವಲ 15 ಸಾವಿರ. ಲಿಂಗಾಯುತರು 38 ಸಾವಿರ, ಕುರುಬರು-ಮುಸ್ಲಿಮರು 30 ಸಾವಿರ ಮತಗಳಿವೆ. ಹಿಂದುಗಳಿದ ವರ್ಗಗಳ ಮತಗಳು ಸರಿಸುಮಾರು 50 ಸಾವಿರ. ಆದರೆ ಸಿ.ಟಿ.ರವಿ ಪ್ರತಿನಿಧಿಸುವ ಒಕ್ಕಲಿಗ ಸಮುದಾಯಕ್ಕೆ ಕೇವಲ 15 ಸಾವಿರ ಮತಗಳಿವೆ. 2004ರಲ್ಲಿ ಸಿ.ಟಿ.ರವಿ ಮೊದಲ ಬಾರಿ ಗೆದ್ದಾಗ 35 ಸಾವಿರ ಒಕ್ಕಲಿಗ ಮತಗಳಿದ್ದವು. ಅದಾದ ಬಳಿಕ ಕ್ಷೇತ್ರ ವಿಂಗಡಣೆಯ ಬಳಿಕ ಇವರಿಗೆ ಉಳಿದ ಜಾತಿ ಮತಗಳು 15 ಸಾವಿರಕ್ಕೆ ಇಳಿಕೆಯಾಗಿದೆ. ಆ 15 ಸಾವಿರ ಮತಗಳು ಸಿ.ಟಿ.ರವಿ ಬಿದ್ದಿವೆ, ಬೀಳುತ್ತವೆ ಅನ್ನೋದು ಶುದ್ಧ ಸುಳ್ಳು. ಆದರೂ ನಾಲ್ಕು ಬಾರಿ ಗೆಲುವಿನ ಹಿಂದೆ ಹಲವಾರು ಕಾರಣಗಳು ಸಿಗುತ್ತವೆ.

    ಚಿಕ್ಕಮಾಗರವಳ್ಳಿ ತಿಮ್ಮೇಗೌಡ ರವಿ ರಾತ್ರೋರಾತ್ರಿ ಸಿ.ಟಿ.ರವಿ ಆದದ್ದಲ್ಲ. ಜೆಡಿಎಸ್‌, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರಲ್ಲಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದ ಹಲವು ನಾಯಕರಲ್ಲಿ ಸಿ.ಟಿ.ರವಿ ಕೂಡ ಒಬ್ಬರು. ಮೂರು ಬಾರಿ ಸೋತಾಗಲೂ ಹೋರಾಡಿದ್ದಾರೆ. ಹೊಡೆದಾಡಿದ್ದಾರೆ. ಪೊಲೀಸರ ಲಾಠಿ-ಬೂಟಿನೇಟು ತಿಂದಿದ್ದಾರೆ. ಜೈಲಲ್ಲಿ ಮುದ್ದೆ ಮುರಿದಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೂರು ಬಾರಿ ಸೋಲಿಲ್ಲದ ಸರದಾರರಾಗಿದ್ದ ಸಗೀರ್ ಅಹಮದ್ ಎದುರು ಸಿ.ಟಿ.ರವಿಗೆ ಚುನಾವಣೆ ಎದುರಿಸೋದು ಸುಲಭದ ಮಾತಾಗಿರಲಿಲ್ಲ. ಹಣ-ಜಾತಿ-ತೋಳ್ಬಲ ಯಾವುದೂ ಇರಲಿಲ್ಲ. ಸಿ.ಟಿ.ರವಿ ಅವೆಲ್ಲವನ್ನೂ ತಂದುಕೊಟ್ಟದ್ದು ದತ್ತಪೀಠದ ಹೋರಾಟ. ಸಿ.ಟಿ.ರವಿಗೆ ಮಾತ್ರವಲ್ಲ. ಕಾರ್ಕಳ ಶಾಸಕ ಸುನಿಲ್ ಕುಮಾರ್‌ ಅವರನ್ನು ಮುನ್ನೆಲೆಗೆ ತಂದು ಕೊಟ್ಟಿದ್ದೇ ಈ ಹೋರಾಟ. 2004ರಲ್ಲಿ ಮೊದಲ ಬಾರಿಗೆ ಗೆದ್ದ ಬಳಿಕ ಮತ್ತೆಂದೂ ಹಿಂದೆ ತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ಜಾತಿ ಬಲ ಇಲ್ಲದಿದ್ದರೂ ಬಲಿಷ್ಠ ಕಾರ್ಯಕರ್ತರ ಪಡೆ, ದತ್ತಪೀಠದ ಹೋರಾಟ ಅವರನ್ನ ಇಲ್ಲಿಗೆ ತಂದು ನಿಲ್ಲಿಸಿದೆ.

    ಕೇವಲ ಸಗೀರ್ ಅಹಮದ್ ಅಷ್ಟೇ ಅಲ್ಲದೆ ಕುರುಬ ಸಮುದಾಯ ಗಾಯತ್ರಿ ಶಾಂತೇಗೌಡ, ಶಾಂತೇಗೌಡ, ಒಕ್ಕಲಿಗ ಸಮುದಾಯ ಹಾಗೂ ಚಿಕ್ಕಮಗಳೂರು ತಾಲೂಕಿನ ಕಣಿವೆ ಭಾಗದಲ್ಲಿ ಬಲಿಷ್ಠ ಹಿಡಿತ ಸಾಧಿಸಿದ್ದ ದಿ.ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಬಿ.ಎಲ್.ಶಂಕರ್ ಇವರನ್ನೆಲ್ಲಾ ಎದುರಿಸಿಕೊಂಡು ಜಾತಿ ಮತಗಳಿಲ್ಲದಿದ್ದರೂ ಅಭಿವೃದ್ಧಿಯ ಮತಗಳಿಂದ ಶಾಸಕರಾಗಿದ್ದ ಸಿ.ಟಿ.ರವಿ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ

    30 ಸಾವಿರ ಕುರುಬ ಸಮುದಾಯದ ಮತಗಳ ಜೊತೆ, ಕಾಂಗ್ರೆಸ್ಸಿನ ಸಂಪ್ರಾದಾಯಿಕ ಮತಗಳ ಗಾಯತ್ರಿ ಶಾಂತೇಗೌಡ ಕೂಡ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. 2018ರಲ್ಲಿ ಸಿ.ಟಿ.ರವಿಯನ್ನ ಸೋಲಿಸಲೇಬೇಕು ಎಂದು ಕಾಂಗ್ರೆಸ್ ವಾಗ್ಮಿ ಬಿ.ಎಲ್.ಶಂಕರ್ ಅವರನ್ನ ಕಣಕ್ಕಿಳಿಸಿದ್ದರೆ, ಜೆಡಿಎಸ್ ಪಕ್ಷದ ಮತಗಳ ಜೊತೆ ಲಿಂಗಾಯಿತ ಮತಗಳು ಒನ್ ಸೈಡಾದರೆ ಗೆಲುವು ಸಾಧಿಸಬಹುದು ಎಂದು ಲಿಂಗಾಯಿತ ಸಮುದಾಯದ ಬಿ.ಎಚ್.ಹರೀಶ್‍ರನ್ನ ಕಣಕ್ಕಿಳಿಸಿತ್ತು. ಆದರೆ, ಆಗಲೂ ಸಿ.ಟಿ.ರವಿ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

    ಸಿ.ಟಿ.ರವಿಗೆ ಮಾತೇ ಬಂಡವಾಳ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಅದು ಬರೆದಿಟ್ಟ ಸತ್ಯ. ಕಟ್ಟಿಟ್ಟ ಬುತ್ತಿ. ಆದರೆ, ಕ್ಷೇತ್ರದ ಮಟ್ಟಿಗೆ ಸಣ್ಣ ಸಮುದಾಯದ ಸಿ.ಟಿ.ರವಿ ಆ ಮಾತಿನ ಬಂಡವಾಳವನ್ನೇ ರಾಜಕೀಯದ ಕೃಷಿ ಮಾಡೋದಕ್ಕೆ ಬಳಸಿಕೊಂಡ ಪರಿಣಾಮವೇ ಇಂದು ರಾಷ್ಟ್ರಮಟ್ಟದ ನಾಯಕರಾಗೋದಕ್ಕೆ ಸಾಧ್ಯವಾಗಿದೆ. ಎದುರಾಳಿಗಳಿಗೆ ಸಿ.ಟಿ.ರವಿಯನ್ನ ಮಣಿಸೋದಕ್ಕೆ ಸಾಧ್ಯವಾಗದಿರೋದಕ್ಕೆ ಅದೂ ಒಂದು ಕಾರಣವಾಗಿರೋದು ಅಷ್ಟೇ ಸತ್ಯ. ತನ್ನ ವಿಭಿನ್ನವಾದ ಮಾತಿನ ಶೈಲಿ, ನಿರರ್ಗಳವಾದ ಮಾತು, ಜನರೊಂದಿಗೆ ಬೆರೆಯುವ ರೀತಿ ಹಾಗೂ ಹಿಂದುತ್ವವನ್ನ ಮೈಗತ್ತಿಸಿಕೊಂಡ ಪರಿ ಕೂಡ ಅವರನ್ನ ಜಾತ್ಯಾತೀತ ನಾಯಕ ಹಾಗೂ ಸೋಲಿಲ್ಲದ ಸರದಾರನಾಗೋಕೆ ಸಾಧ್ಯವಾಗಿಸಿದೆ. ವಿರೋಧ ಪಕ್ಷಗಳಲ್ಲಿ ಬಲಿಷ್ಠ ನಾಯಕತ್ವ, ಹೊಂದಾಣಿಕೆಯ ಮನೋಭಾವ ಇಲ್ಲದಿರೋದು ಕೂಡ ಸಿ.ಟಿ.ರವಿ ಅವರನ್ನು ವರ್ಷದಿಂದ ವರ್ಷಕ್ಕೆ ಗಟ್ಟಿಗೊಳಿಸುತ್ತಲೇ ಇದೆ.

    ವಿರೋಧ ಪಕ್ಷಗಳು ಸಿ.ಟಿ.ರವಿಯನ್ನ ಕೋಟಿ ರವಿ, ಲೂಟಿ ರವಿ ಎಂದೆಲ್ಲಾ ಬಣ್ಣಿಸುತ್ತಿದ್ದಾರೆ. ಅದನ್ನ ಸಿ.ಟಿ.ರವಿ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ನಾನು ಲೂಟಿ ರವಿನೂ ಹೌದು. ಕೋಟಿ ರವಿಯೂ ಹೌದು ಎಂದು ಅವರೇ ಒಪ್ಪಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಮತದಾರರು ನನ್ನನ್ನ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲೀಡ್‍ನಲ್ಲಿ ಗೆಲ್ಲಿಸುತ್ತಿದ್ದಾರೆ. ನಾನು ಅವರ ನಂಬಿಕೆ-ಪ್ರೀತಿಯನ್ನ ಲೂಟಿ ಮಾಡಿರೋ ಲೂಟಿ ರವಿ. ಸರ್ಕಾರ ಯಾವುದೇ ಇರಲಿ. ಯಾರೇ ಮುಖ್ಯಮಂತ್ರಿ ಇದ್ದರೂ ಕಾಡಿ-ಬೇಡಿ ಕೋಟಿ-ಕೋಟಿ ಅನುದಾನ ತಂದಿದ್ದಾನೆ. ಅದಕ್ಕೆ ನಾನು ಕೋಟಿ ರವಿಯೂ ಹೌದು ಎಂದು ವಿರೋಧ ಪಕ್ಷದ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಚಿಕ್ಕಮಗಳೂರು ಜನ ಜಾತಿ-ಮತ-ಧರ್ಮ ನೋಡದೇ ಬೆಳೆಸಿದ್ದರಿಂದ ಸಿ.ಟಿ.ರವಿ ಬೆಳೆದಿರೋದು ಗುಟ್ಟಾಗೇನು ಉಳಿದಿಲ್ಲ. ಜನರ ನಂಬಿಕೆಯನ್ನ ಎಲ್ಲೂ ಹುಸಿಗೊಳಿಸದೇ ಬುದ್ಧಿವಂತಿಕೆಯಿಂದ ಸಿಟಿ ರವಿ ಮ್ಯಾನೇಜ್‌ ಮಾಡಿಕೊಂಡು ಬರುತ್ತಿದ್ದಾರೆ.

    ಎಂದಿನಂತೆ ಈ ಬಾರಿಯೂ ಜನ ಬದಲಾವಣೆ ಅಂತಿದ್ದಾರೆ. ಆದರೆ ಅಷ್ಟೇ ಜನ ಈ ಸಲ ಸಾಕಷ್ಟು ಕೆಲಸ ಮಾಡಿದ್ದಾರೆ ಅವರೇ ಇರಲಿ ಎಂಬ ಮಾತುಗಳು ಬಲವಾಗಿವೆ. ಪಬ್ಲಿಕ್ ಟಿವಿಯ ಬುಲೆಟ್ ರಿಪೋರ್ಟರ್ ಸಂದರ್ಭದಲ್ಲೂ ಮೆಡಿಕಲ್ ಕಾಲೇಜು, ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ, ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳ ಸಿಮೆಂಟ್ ರಸ್ತೆ, ಮನೆ ಬಾಗಿಲಿಗೆ ಕುಡಿಯೋ ನೀರಿನ ಅಮೃತ್ ಕುಡಿಯೋ ನೀರಿನ ಯೋಜನೆ ಸೇರಿದಂತೆ ಜನ ಹಲವು ಯೋಜನೆಗಳ ಫಲಾನುಭವಿಗಳಾಗಿದ್ದು ಮತ್ತೆ ಸಿ.ಟಿ.ರವಿಯನ್ನು ಜಾತಿ ಮೀರಿದ ನಾಯಕನಾಗಿಸಲು ಹೊರಟಿದ್ದಾರೆ.

    ಸಿ.ಟಿ.ರವಿಯನ್ನ ಜಾತ್ಯಾತೀತ ನಾಯಕನನ್ನಾಗಿಸಿರುವುದರಲ್ಲಿ ಕಾಂಗ್ರೆಸ್-ಜೆಡಿಎಸ್ ಪಾತ್ರವೂ ದೊಡ್ಡದ್ದು. ಎರಡೂ ಪಕ್ಷಗಳು ಒಂದೊಂದು ಚುನಾವಣೆಯಲ್ಲಿ ಒಬ್ಬಬ್ಬ ಕ್ಯಾಂಡಿಡೇಟ್ ತಂದು ನಿಲ್ಲಿಸಿ ಸಿ.ಟಿ.ರವಿಯನ್ನ ಬೆಳೆಸುತ್ತಿದ್ದಾರೆ. 2008ರಲ್ಲಿ ಕಾಂಗ್ರೆಸ್‍ನಿಂದ ಶಾಂತೇಗೌಡ, 2013ರಲ್ಲಿ ಗಾಯತ್ರಿ ಶಾಂತೇಗೌಡ, 2018ರಲ್ಲಿ ಬಿ.ಎಲ್.ಶಂಕರ್. ಇನ್ನು ಈ ಸಲ ಸಿ.ಟಿ.ರವಿ ಆಪ್ತ ತಮ್ಮಯ್ಯ ಎಂದು ಹೇಳಲಾಗುತ್ತಿದೆ. ಇನ್ನು ಜೆಡಿಎಸ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಿ.ಟಿ.ರವಿ ಬೆಳವಣಿಗೆಯಲ್ಲಿ ಅವರ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ವಿರೋಧ ಪಕ್ಷಗಳದ್ದೂ ಇದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿಯೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಿ.ಟಿ.ರವಿ ಐದನೇ ಬಾರಿ ವಿಧಾನಸೌಧ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ.

  • ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಸಾಕ್ಷ್ಯ ಮಂಗಳೂರಿನಲ್ಲಿ ಸಿಕ್ಕಿದೆ: ಸಿ.ಟಿ ರವಿ

    ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಸಾಕ್ಷ್ಯ ಮಂಗಳೂರಿನಲ್ಲಿ ಸಿಕ್ಕಿದೆ: ಸಿ.ಟಿ ರವಿ

    ಚಿಕ್ಕಮಗಳೂರು: ದೇವಾಲಯ ಒಡೆದು ಮಸೀದಿ ನಿರ್ಮಾಣ ಮಾಡಿದ್ದಕ್ಕೆ ಮಂಗಳೂರಿನಲ್ಲಿ ಸಾಕ್ಷ್ಯ ಸಿಕ್ಕಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿದ್ದಾರೆ ಎಂದು ಹೇಳುತ್ತಿದ್ವಿ. ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೇ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ. ಶಿವ, ವಿಷ್ಣು, ರಾಮ ಮಂದಿರ ನಾಶ ಮಾಡಿದೆವು ಎಂದು ಅವರೇ ಹೇಳಿಕೊಂಡಿದ್ದಾರೆ. ಸಾಕ್ಷಿ ಕೇಳುವ ಜಾತ್ಯಾತೀತ ಸೋಗಲಾಡಿ ಮೂರ್ಖರಿಗೆ ಮಂಗಳೂರಲ್ಲಿ ಸಾಕ್ಷಿ ಸಿಕ್ಕಿದೆ ಎಂದು ತಿಳಿಸಿದರು.  ಇದನ್ನೂ ಓದಿ: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಪ್ರಾಚೀನ ಕಾಲದ ದೇವಸ್ಥಾನ ಪತ್ತೆ

    ಈಗಲೂ ಇಸ್ಲಾಂ ಶಾಂತಿಗಾಗಿ ಎಂದು ಯಾರಾದರೂ ಹೇಳಿದರೆ ಅವರಿಂದ ರಾಷ್ಟ್ರ ಉಳಿಯಲು ಸಾಧ್ಯವಿಲ್ಲ. ನಾಶ ಮಾಡಿಯೇ ಅದು ಬೆಳೆದಿರೋದು, ಮತ್ತೆ ಹೇಳ್ತೀನಿ ನಾಶ ಮಾಡಿಯೇ ಅದು ಬೆಳೆದಿರೋದು. 28 ದೇಶದ ನಾಗರೀಕತೆ ನಾಶ ಮಾಡಿ ಅದು ಬೆಳೆದಿದೆ. ಭಾರತದ ಬಹುಭಾಗವನ್ನ ನಾವು ಕಳೆದುಕೊಂಡಿದ್ದೇವೆ. ಸಿಂಧೂ ನದಿ ನಾಗರೀಕತೆಯನ್ನ ಯಾರು ನಾಶ ಮಾಡಿದ್ದು, ಇಸ್ಲಾಂ ನಾಶ ಮಾಡಿದ್ದು. ಅದನ್ನ ಹೇಳಲು ಕೆಲವರಿಗೆ ಗೊತ್ತು ಹೇಳಲ್ಲ ಎಂದರು. ಇದನ್ನೂ ಓದಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ ಬಗ್ಗೆ ಬೋರಿಸ್‌ ಹೇಳಿದ್ದೇನು?

     

    ನಮಗೆ ಗೊತ್ತು ಆ ಸತ್ಯವನ್ನ ಹೇಳುತ್ತೇವೆ. ಯಾಕಂದ್ರೆ, ಗಲಾಭೆ ಹುಟ್ಟಾಕಲು ಅಲ್ಲ, ದೇಶ ಉಳಿಯಲು. ಸತ್ಯ ಒಪ್ಪಿಕೊಳ್ಳಲಿ ಇಲ್ಲ ಈಗಲೇ ಮತಾಂತರ ಆಗೋರಿದ್ರೆ ಆಗಲಿ, ನಾವು ನೇರವಾಗಿ ಎದುರಿಸುತ್ತೇವೆ. ಹಿಂದೂ ಹೆಸರಲ್ಲಿ ಹಿಂದೂ ಧರ್ಮಕ್ಕೆ ದ್ರೋಹ ಮಾಡೋದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ, ಬಾಂಬ್ ಹಾಕೋರು ಟೋಪಿ ಹಾಕಿದವರು: ಸಿ.ಟಿ ರವಿ

  • ಅಡಿಕೆ ಕದಿಯಲು ಮರಗಳನ್ನೇ ಕಡಿದವನನ್ನು ದಾರಿಯುದ್ದಕ್ಕೂ ಥಳಿಸಿ ಠಾಣೆಗೆ ಕರೆದೊಯ್ದ ಗ್ರಾಮಸ್ಥರು

    ಅಡಿಕೆ ಕದಿಯಲು ಮರಗಳನ್ನೇ ಕಡಿದವನನ್ನು ದಾರಿಯುದ್ದಕ್ಕೂ ಥಳಿಸಿ ಠಾಣೆಗೆ ಕರೆದೊಯ್ದ ಗ್ರಾಮಸ್ಥರು

    ಚಿಕ್ಕಮಗಳೂರು: ಅಡಿಕೆ ಕದಿಯಲು ಹೋಗಿ ಸುಮಾರು 70 ಮರಗಳನ್ನೇ ಕಡಿದಿದ್ದ ಕಳ್ಳನನ್ನು ಹಿಡಿದು ಸ್ಥಳೀಯರು ರಸ್ತೆಯುದ್ದಕ್ಕೂ ಥಳಿಸಿ ಠಾಣೆಗೆ ಕರೆದೊಯ್ದ ಘಟನೆ ಎನ್‌ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

    ಶ್ರೀನಿವಾಸ್ ಹಲ್ಲೆಗೊಳಗಾದ ಆರೋಪಿ. ಈತ ಬಾಳೆಹೊನ್ನೂರಿನಲ್ಲಿ ಹಲವು ದಿನಗಳಿಂದ ಅಡಿಕೆ ಕಳ್ಳತನ ಮಾಡುತ್ತಿದ್ದ. ಅಡಿಕೆಗಳನ್ನು ಕದಿಯಲು ಮರಗಳನ್ನೇ ಕಡಿಯುತ್ತಿದ್ದ. ತೋಟದ ಮಾಲೀಕರು ಮರಗಳು ಧರೆಗುರುಳಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

     

    ಹತ್ತಾರು ವರ್ಷಗಳಿಂದ ಬೆಳೆಸಿದ್ದ 70 ಅಡಿಕೆ ಮರಗಳನ್ನು ಕಡಿದುಹಾಕಿದ್ದಾನೆ. 3,500 ಕೆಜಿಗೂ ಅಧಿಕ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಬಾಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಬಡವನೆಂದು ತಿಳಿದಿದ್ದರೆ ನಾವು ಕಳ್ಳತನ ಮಾಡುತ್ತಿರಲಿಲ್ಲ- ಕ್ಷಮಾಪಣಾ ಪತ್ರ ಬರೆದ ಕಳ್ಳರು

  • ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯನ್ನ ರಕ್ಷಿಸಿದ ಯುವಕರು

    ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯನ್ನ ರಕ್ಷಿಸಿದ ಯುವಕರು

    ಚಿಕ್ಕಮಗಳೂರು: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನ ಸ್ಥಳೀಯ ಯುವಕರು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಶೈಲಾ ಎಂಬವರು ಹೇಮಾವತಿ ನದಿ ತಟದಲ್ಲಿ ಕೂತಿದ್ದವರು ಆಯ ತಪ್ಪಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದರ ಗಮನಿಸಿದ ಸ್ಥಳೀಯ ಯುವಕರು ನೀರಿಗೆ ಹಾರಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನ ರಕ್ಷಿಸಿದ್ದಾರೆ. ಮಹಿಳೆ ಶೈಲಾ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದುದ್ದನ್ನ ಫಲ್ಗುಣಿ ಗ್ರಾಮದ ಲೋಹಿತ್ ಕಂಡು ನೋಡಿ ಅಲ್ಲೇ ಇದ್ದ ಹುಡುಗರನ್ನ ಕರೆದು ಎಲ್ಲರೂ ನೀರಿಗೆ ಇಳಿದು ಮಹಿಳೆಯನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆ ಬಳಿಕ ನೀರಿನಲ್ಲಿ ಕೊಚ್ಚಿ ಹೋಗುವ ವೇಳೆ ನೀರು ಕುಡಿದು ಅಸ್ವಸ್ಥರಾಗಿದ್ದ ಮಹಿಳೆಗೆ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

    ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಸಾಧಾರಣ ಮಳೆ ಇದೆ. ನದಿಗಳು-ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗುವಾಗ ಸೂಕ್ತ ಸಂದರ್ಭದಲ್ಲಿ ನೀರಿಗೆ ಧುಮುಕಿ ಮಹಿಳೆಯ ಜೀವ ಉಳಿಸಿದ ಶೌರ್ಯ ವಿಪತ್ತು ನಿರ್ವಹಣ ತಂಡದ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎನ್.ಆರ್.ಪುರ-ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ