Tag: Chikkamangaluru

  • ಕಾಂಗ್ರೆಸ್ ಬಿದ್ದು ಹೋಗುವ ನುಗ್ಗೆ ಮರ: ಆರ್.ಅಶೋಕ್ ಲೇವಡಿ

    ಕಾಂಗ್ರೆಸ್ ಬಿದ್ದು ಹೋಗುವ ನುಗ್ಗೆ ಮರ: ಆರ್.ಅಶೋಕ್ ಲೇವಡಿ

    – ರಾಜ್ಯದಲ್ಲಿ ಹುಟ್ಟಿದ್ರೂ, ಸತ್ರೂ ಟ್ಯಾಕ್ಸ್; ವಿಪಕ್ಷ ನಾಯಕ ಕಿಡಿ

    ಚಿಕ್ಕಮಗಳೂರು: ಕಾಂಗ್ರೆಸ್ ಕೋಮಾ ಸ್ಟೇಜಲ್ಲಿರೋ ಬೀಳೋ ನುಗ್ಗೆ ಮರ ಇದ್ದ ಹಾಗೆ. ಅವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಲೇವಡಿ ಮಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ(Chikkamagaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನ ಕಾಂಗ್ರೆಸ್‌ನವರು ನೇಮಿಸಿದ್ರೆ, ಅವರು ಹೇಳಿದ ಹಾಗೆ ರಾಜೀನಾಮೆ ಕೊಡಬಹುದಿತ್ತು. ನನ್ನನ್ನು ನೇಮಿಸಿರುವುದು ಬಿಜೆಪಿ(BJP), ಈ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿರುವ ಪಾರ್ಟಿ ಬಿಜೆಪಿ. ಕಾಂಗ್ರೆಸ್‌ನವರು ಎಲ್ಲೋ ಎರಡು ಕಡೆ ಕ್ರಾಸ್ ಆಗಿ ಅಧಿಕಾರದಲ್ಲಿ ಇದ್ದಾರೆ. ಆ ಎರಡು ರಾಜ್ಯದಲ್ಲೂ ಯಾವಾಗ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: 2006ರಲ್ಲಿ RSS ಕಚೇರಿ ಮೇಲಿನ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಕಾಂಗ್ರೆಸ್(Congress) ಸರ್ಕಾರ ಬೀಳೋ ಹಂತದಲ್ಲಿರುವ ನುಗ್ಗೆ ಮರ ಇದ್ದ ಹಾಗೆ. ಕಾಂಗ್ರೆಸ್‌ನವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ನಮ್ಮದು ಇಡೀ ಪ್ರಪಂಚದಲ್ಲಿರುವ ನಂಬರ್ ಒನ್ ಪಾರ್ಟಿ. ಕೋಮಾ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಾರ್ಟಿಯಿಂದ ಬುದ್ಧಿವಾದ ಕಲಿಯುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ – ಸಂಸತ್ ಅಧಿವೇಶನ ಕರೆಯಲು ಪ್ರಿಯಾಂಕ್ ಖರ್ಗೆ ಒತ್ತಾಯ

    ಬೆಲೆ ಏರಿಕೆ ಅನ್ನೋದು ಕಾಂಗ್ರೆಸ್ಸಿನ ದಿನ ನಿತ್ಯದ ಕಸುಬಾಗಿದೆ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಮೋದಿ ಜನೌಷಧಿ ತಂದು ಬಡವರಿಗೆ ಸಹಾಯ ಮಾಡಿದ್ರು. ಆದರೆ, ಈಗ ಅದಕ್ಕೆ ಎಳ್ಳು ನೀರು ಬಿಟ್ರು. ಮೂರನೇ ಬಾರಿ ಬಿಯರ್ ದರ ಏರಿಸಿದ್ದಾರೆ. ಸಿದ್ದರಾಮಯ್ಯ ನೋಡಿದ್ರೆ ಗಾಂಧಿ ಶ್ಲೋಕ ಹೇಳ್ತಾರೆ ಎಂದರು. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

    ಕಡಿಮೆ ದರ ಅಂತ ಜನ ಬಿಯರ್ ಕುಡಿಯುತ್ತಿದ್ರು. ರಾಜ್ಯದಲ್ಲಿ ಎಣ್ಣೆ ರೇಟ್ ಜಾಸ್ತಿ ಆದ ಮೇಲೆ ಕಳ್ಳತನ ಜಾಸ್ತಿಯಾಗಿದೆ. ಕಬ್ಬಿಣದ ಗೇಟ್‌ಗಳನ್ನೇ ಎತ್ಕೊಂಡು ಹೋಗಿ ಮಾರಿ ಕುಡಿತ ಇದ್ದಾರೆ. ರಾಜ್ಯದಲ್ಲಿ ಹುಟ್ಟಿದ್ರು ತೆರಿಗೆ, ಸತ್ರು ತೆರಿಗೆ. ಯಾವ ಪುರುಷಾರ್ಥಕ್ಕೆ 2 ವರ್ಷದ ಸಾಧನೆ ಎಂದು ಟೀಕಿಸಿದರು.

    ಯಾರನ್ನೋ ನಿಲ್ಲಿಸಿ 2000 ರೂ. ಗ್ಯಾರಂಟಿ ಹಣ ಕೊಟ್ಟು, ಬೋರ್‌ವೆಲ್ ಕೊರೆಸಿದ್ವಿ ಅಂತಾ ಬುರುಡೆ ಬಿಡಿಸೋದು. ಈ ರೀತಿ ಅಪಪ್ರಚಾರ ಮಾಡುವ ಮೂಲಕ ಸರ್ಕಾರವನ್ನ ನಡೆಸ್ತಾ ಇದ್ದಾರೆ. ಈಗ ಸಂಭ್ರಮಾಚರಣೆ ಮಾಡ್ತಾ ಇರೋದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.

  • ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು – 26 ಕುಟುಂಬಕ್ಕೆ ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ

    ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು – 26 ಕುಟುಂಬಕ್ಕೆ ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ

    ಚಿಕ್ಕಮಗಳೂರು: ಕಾಶ್ಮೀರದ ಪೆಹಲ್ಗಾಮ್ ಬಳಿ (Pahalgam Attack) ನಡೆದ ಭಯೋತ್ಪಾದಕ ದಾಳಿಯನ್ನ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ (Sringeri Sharada Mutt) ಕಿರಿಯ ಶ್ರೀ ವಿಧುಶೇಖರ ಶ್ರೀಗಳು (Sri Vidhushekhara Bharati Swamiji) ಖಂಡಿಸಿದ್ದು, ಮೃತಪಟ್ಟಿರುವ 26 ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

    ಅಕ್ಷಯ ತೃತೀಯದ ಸಂದರ್ಭದಲ್ಲಿ ಮಾತನಾಡಿದ ಅವರು, ಉಗ್ರರ ದಾಳಿಗೆ ತಮ್ಮ ಮನೆಯವರನ್ನು ಕಳೆದುಕೊಂಡ ನೋವಿನಲ್ಲಿ 26 ಕುಟುಂಬಸ್ಥರು ಇದ್ದಾರೆ. ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು. ಹಾಗಾಗಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಣವನ್ನು ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ

    ದುಃಖದಲ್ಲಿರುವ ಕುಟುಂಬದಲ್ಲಿ ಸಂತೋಷ, ಶ್ರೇಯಸ್ಸು ವೃದ್ಧಿಸಲಿ ಎಂದು ಶ್ರೀಗಳು ತಿಳಿಸಿದ್ದಾರೆ. ಈಗಾಗಲೇ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ನಾಗರೀಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ಮಠದ ವತಿಯಿಂದಲೂ 26 ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು. ಮಠದ ಆಡಳಿತಾಧಿಕಾರಿ ಅದನ್ನ ನೋಡಿಕೊಂಡು ಆ ಕುಟುಂಬಗಳಿಗೆ ತಲುಪಿಸುತ್ತಾರೆ ಎಂದು ತಿಳಿಸಿದರು.

  • ಮೀನು ಸಾರು, ಕಡುಬು ತಿಂದು 35 ವರ್ಷಗಳ ಬಳಿಕ ಹೋಟೆಲ್ ಬಿಲ್ ಪಾವತಿಸಿದ ವ್ಯಕ್ತಿ!

    ಮೀನು ಸಾರು, ಕಡುಬು ತಿಂದು 35 ವರ್ಷಗಳ ಬಳಿಕ ಹೋಟೆಲ್ ಬಿಲ್ ಪಾವತಿಸಿದ ವ್ಯಕ್ತಿ!

    ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಹೋಟೆಲ್‌ ಒಂದರಲ್ಲಿ ಊಟ ಮಾಡಿದ್ದಕ್ಕೆ 35 ವರ್ಷಗಳ ಬಳಿಕ ಬಿಲ್‌ ಪಾವತಿಸಿದ ಅಪರೂಪದ ಘಟನೆ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    35 ವರ್ಷಗಳ ಹಿಂದೆ ಹೋಟೆಲ್ ಒಂದರಲ್ಲಿ ಊಟ ಮಾಡಿ ಬಿಲ್ ನೀಡದೆ ಮರೆತು ಹೋಗಿದ್ದ ವ್ಯಕ್ತಿಯೊಬ್ಬರು ಅದನ್ನು ಮರೆಯದೆ ಅದೇ ಹೋಟೆಲ್ ಹುಡುಕಿಕೊಂಡು ಬಂದು ತಾನು ಊಟ ಮಾಡಿದ್ದ ಬಿಲ್ ಪಾವತಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ಮಂಗಳೂರಿನ ದೇರಲಕಟ್ಟೆ ನಿವಾಸಿ ಮೊಹಮದ್ ಎಂಬವರು 35 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಮೂಡಿಗೆರೆಗೆ ಬಂದಿದ್ದರು. ಕೆಲಸದ ನಂತರ ಮಂಗಳೂರಿಗೆ (Mangaluru) ಹಿಂದಿರುಗುವಾಗ ಹೊಟ್ಟೆ ಹಸಿವಿದ್ದರಿಂದ ಕೊಟ್ಟಿಗೆಹಾರದ ಹಳೆಯ ಭಾರತ್ ಹೋಟೆಲ್‌ನಲ್ಲಿ ಕಡುಬು, ಮೀನು ಸಾರು ಊಟ ಮಾಡಿದ್ದರು. ಊಟ ಮಾಡಿದ್ದ ಬಳಿಕ ಬಿಲ್ ನೀಡಲು ಮರೆತಿದ್ದ ಅವರು ಬಸ್ ಹತ್ತಿ ಮಂಗಳೂರಿಗೆ ಹೋಗಿದ್ದರು.

    ಬಸ್ ಹತ್ತಿದ ಬಳಿಕ ಅವರಿಗೆ ತಾನು ಕೊಟ್ಟಿಗೆಹಾರದಲ್ಲಿ ಊಟ ಮಾಡಿದ್ದ ಬಿಲ್ ನೀಡದಿರುವುದು ಅರಿವಾಗಿತ್ತು. ಈ ಬಗ್ಗೆ ಅವರಿಗೆ ಬೇಸರವೂ ಆಗಿತ್ತು. ಮತ್ತೆ ಕೊಟ್ಟಿಗೆಹಾರ ಹೋದಾಗ ಬಿಲ್ ನೀಡೋಣ ಎಂದುಕೊಂಡಿದ್ದರು. ಆದರೆ, ಅವರಿಗೆ ಕೊಟ್ಟಿಗೆಹಾರದ ಕಡೆ ಬರುವ ಸಂದರ್ಭವೇ ಬಂದಿರಲಿಲ್ಲ. ಆದ್ದರಿಂದ ಅವರು ಈ ಬಿಲ್ ವಿಚಾರ ಮರೆತಿದ್ದರು.

    ಭಾನುವಾರ (ಫೆ.17) ಕೆಲಸದ ನಿಮಿತ್ತ ಕೊಟ್ಟಿಗೆಹಾರಕ್ಕೆ ಬಂದಿದ್ದ ಅವರು, ತಾನು 35 ವರ್ಷದ ಹಿಂದೆ ಊಟ ಮಾಡಿ ಬಿಲ್ ನೀಡದೆ ಹೋಗಿದ್ದ ವಿಚಾರ ನೆನಪಾಗಿ ಕೊಟ್ಟಿಗೆಹಾರದ ಭಾರತ್ ಹೊಟೇಲ್ ಹೋಗಿ ವಿಷಯ ತಿಳಿಸಿ ಬಿಲ್ ನೀಡಿದ್ದಾರೆ. ಈ ವೇಳೆ ಭಾರತ್ ಹೋಟೆಲ್ ಮಾಲೀಕರ ಮಗ ಅಬ್ದುಲ್ ಅಜೀದ್ ಎಂಬವರು ಅಲ್ಲಿದ್ದರು. ಅವರ ಬಳಿ ತನ್ನ ಬಿಲ್ ನ ವಿಚಾರ ಹೇಳಿದ್ದಲ್ಲದೆ, ಕ್ಷಮೆ ಕೂಡ ಕೇಳಿ, ಬಿಲ್ ಪಾವತಿ ಮಾಡಿ ಮತ್ತೆ ಅಲ್ಲೇ ಅದೇ ಕಡುಬು, ಮೀನು ಸಾರು ಊಟ ಮಾಡಿ ತೆರಳಿದ್ದಾರೆ.

    ಮೊಹಮದ್ ಅವರು ಅನ್ನದ ಋಣ ಮರೆಯದೇ ದಶಕಗಳ ಬಳಿಕ ಬಿಲ್‌ ಪಾವತಿಸಿದ್ದಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕರ್ತವ್ಯನಿರತ ಪೊಲೀಸರಿಗೆ ಬಿರಿಯಾನಿ ಊಟ ನೀಡಿದ ಕಾಫಿನಾಡ ಯುವಕರು

    ಕರ್ತವ್ಯನಿರತ ಪೊಲೀಸರಿಗೆ ಬಿರಿಯಾನಿ ಊಟ ನೀಡಿದ ಕಾಫಿನಾಡ ಯುವಕರು

    ಚಿಕ್ಕಮಗಳೂರು: ಇಡೀ ದಿನ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವುದರ ಜೊತೆ ಕೊರೊನಾ ನಿಯಂತ್ರಣಕ್ಕೆ ಜನರನ್ನು ಗುಂಪು ಸೇರದಂತೆ ರಸ್ತೆ ಕಾಯುವ ಪೊಲೀಸರಿಗೆ ಕಾಫಿನಾಡಿನ ಯುವಕರು ಇಂದು ಮಧ್ಯಾಹ್ನ ಬಿರಿಯಾನಿ ಊಟ ನೀಡಿದ್ದಾರೆ.

    ಚಿಕ್ಕಮಗಳೂರು ನಗರದ ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಅವರ ಸ್ನೇಹಿತರು ವೆಜ್ ಬಿರಿಯಾನಿ ಹಾಗೂ ಚಿಕನ್ ಬಿರಿಯಾನಿ ಎರಡೂ ಊಟವನ್ನ ತಯಾರಿಸಿಕೊಂಡು ಎಲ್ಲಾ ಪೊಲೀಸರಿಗೂ ವಿತರಿಸಿದ್ದಾರೆ. ನಗರದ ಮುಖ್ಯ ಸರ್ಕಲ್, ಪೊಲೀಸ್ ಠಾಣೆ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಡ್ಯೂಟಿ ಮಾಡುವ 18 ಸರ್ಕಲ್‍ಗಳಿಗೂ ಹೋಗಿ ಊಟ ಹಾಗೂ ನೀರಿನ ಬಾಟಲಿ ನೀಡಿದ್ದಾರೆ.

    ಕೊರೊನಾ ಮೊದಲ ಅಲೆಯಲ್ಲೂ ಕೂಡ ಇದೇ ತಂಡ ಆಗಲೂ ಪೊಲೀಸರಿಗೆ ಮಧ್ಯಾಹ್ನದ ಊಟವಾಗಿ ಬಿರಿಯಾನಿ ನೀಡಿದ್ದರು. ಇದೇ ವೇಳೆ, ಕೇವಲ ಪೊಲೀಸರಿಗಷ್ಟೇ ಅಲ್ಲದೆ ನಗರದಲ್ಲಿ ಠಾಣೆಯಿಂದ ಠಾಣೆಗೆ ಸಂಚರಿಸುತ್ತಿರುವಾಗ ದಾರಿಯುದ್ಧಕ್ಕೂ ಸಿಕ್ಕ ಜನಸಾಮಾನ್ಯರು, ನಿರ್ಗತಿಕರು, ನಿರಾಶ್ರಿತರಿಗೂ ಬಿರಿಯಾನಿ ಹಾಗೂ ನೀರಿನ ಬಾಟಲಿ ನೀಡಿದ್ದಾರೆ. ಜೊತೆಗೆ ಇದೇ ಯುವಕರ ತಂಡ ಕೆಲ ಬಡವರಿಗೆ ಆಹಾರ ಸಾಮಾಗ್ರಿಯ ಕಿಟ್ ಕೂಡ ಹಂಚಿದ್ದಾರೆ.

    ಪೊಲೀಸರು ಗೂಂಡಾಗಳಲ್ಲ. ಹೊಡೆಯುತ್ತಾರೆ ಎಂದು ಹೇಳೋದು ತಪ್ಪು. ಅವರು ಹೊಡೆಯುವು ನಮ್ಮ ಜೀವ ಉಳಿಸಲು. ಜನಸಾಮಾನ್ಯರು ಬೇಕಾಬಿಟ್ಟಿ ಓಡಾಡಬಾರದು. ಸರ್ಕಾರ ಹಾಗೂ ಪೊಲೀಸರಿಗೆ ಸಹಕಾರ ಕೊಡಬೇಕು. ಪೊಲೀಸರು ಇಡೀ ದಿನ ಬಿಸಿಲಲ್ಲಿ ನಿಂತು ನಮ್ಮನ್ನ ಕಾಯುತ್ತಾರೆ. ಅವರು ಹೊಡೆಯುವುದು ಕೂಡ ನಮ್ಮ ಒಳ್ಳೆದಕ್ಕೆ ಅವರೊಂದಿಗೆ ಸಹಕರಿಸುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.

    ಇಂತಹಾ ಕಾಲದಲ್ಲ ಒಬ್ಬರು ಒಬ್ಬರಿಗೆ ಸಹಾಯ ಮಾಡಬೇಕು. ನಾವು ಮಾನವೀಯತೆಯಿಂದ ಈ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನ ನೋಡಿ ಮತ್ತಷ್ಟು ಜನ ಬಡವರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಉದ್ದೇಶ ಎನ್ನುವುದು ಯುವಕರ ಅಭಿಪ್ರಾಯ.

  • ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ. ಆದರೆ ಊಟ ಮಾತ್ರ ತಿನ್ನೋಕೆ ಆಗಲ್ಲ, ಈ ಊಟ ತಿಂದು ನಮಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಕೊಡುವ ಊಟ ತಿಂದು ನಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಬೆಳಗ್ಗೆ ಟೊಮೊಟೋ ಬಾತ್ ತಿಂಡಿ ಕೊಟ್ಟಿದ್ದರು ತಿನ್ನುವಂತಿರಲಿಲ್ಲ. ಮಧ್ಯಾಹ್ನ ಕೋಸು-ಬೇಳೆ ಸಾರು ಕೊಟ್ಟಿದ್ದರು. ಈಗಲೂ ಅದನ್ನೇ ಕೊಟ್ಟಿದ್ದಾರೆ. ಸಾಂಬರ್ ಯಾವುದೇ ರುಚಿ ಇಲ್ಲ. ಇಲ್ಲಿ ಊಟವನ್ನೇ ಮಾಡಲು ಆಗುತ್ತಿಲ್ಲ. ವೈದ್ಯರು, ವೈದ್ಯಕೀಯ ಸಲಕರಣೆ ಯಾವುದೇ ತೊಂದರೆ ಇಲ್ಲ. ಊಟದ್ದು ಮಾತ್ರ ತುಂಬಾ ಸಮಸ್ಯೆ ಇದೆ. ಔಷಧಿಯನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದಾರೆ. ಆಗಾಗ ಚೆಕ್ ಅಪ್ ಎಲ್ಲಾ ಮಾಡುತ್ತಾರೆ. ನರ್ಸ್‍ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ. ಕುಡಿಯೋಕೆ ಬಿಸಿ ನೀರು ಸೇರಿದಂತೆ ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ, ಊಟದ ವ್ಯವಸ್ಥೆ ಮಾತ್ರ ಸರಿ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.