ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಜೊತೆಗಿನ ಆಡಿಯೋ ವೈರಲ್ ಆದ ಬೆನ್ನಲ್ಲೇ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದೀಪ್ ಅವರಿಗೆ ಕೊಕ್ ನೀಡಲಾಗಿದೆ.
ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸಂದೀಪ್ ಅವರು ರಾಜೀನಾಮೆ ನೀಡಿದ್ದರು. ಈವರ ರಾಜೀನಾಮೆ ಬಳಿಕ ಹಲವು ಯುವ ಮೋರ್ಚಾ ಸದಸ್ಯರು ರಾಜೀನಾಮೆ ನೀಡತೊಡಗಿದರು. ಇದನ್ನೂ ಓದಿ: ಇದೊಂದು ಬಾರಿ ನನ್ನನ್ನು ಗೆಲ್ಲಿಸಿ – ಚುನಾವಣೆಗೂ ಮುನ್ನವೇ ಶ್ರೀರಾಮುಲುಗೆ ಢವಢವ
ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಅವರು ಕರೆ ಮಾಡಿ ಸಂದೀಪ್ ಅವರ ಜೊತೆ ಮಾತನಾಡಿದ್ದರು. ಕರೆಯಲ್ಲಿ ಮಾತನಾಡುವಾಗ,”ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತು” ಎಂದು ಹೇಳಿದ್ದರು.
ಈ ಆಡಿಯೋ ತೇಜಸ್ವಿ ಸೂರ್ಯ ಮತ್ತು ಬಿಜೆಪಿಗೆ ಮುಜುಗರ ತಂದಿತ್ತು. ವಿಪಕ್ಷಗಳು ಟೀಕೆ ಮಾಡಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಸಂದೀಪ್ ಅವರಿಗೆ ಕೊಕ್ ನೀಡಿ ಸಂತೋಷ್ ಕೊಟ್ಯಾನ್ ಅವರನ್ನು ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ನೇಮಕ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಅಕ್ರಮ ಗೋಮಾಂಸ ಶೆಡ್ ಮೇಲೆ ಜೆಸಿಬಿ ದಾಳಿ ಮಾಡಿರುವ ಘಟನೆ ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.
ನಗರಸಭೆ ಇಂದು ಎಂದಿನಂತೆ ತಮಿಳು ಕಾಲೋನಿ ಹಾಗೂ ಷರೀಫ್ ಗಲ್ಲಿಯಲ್ಲಿ ಅಲ್ಲಲ್ಲೇ ಬೆಳೆದಿದ್ದ ಗಿಡ-ಘಂಟೆಗಳ ತೆರವಿಗೆ ಮುಂದಾಗಿತ್ತು. ಆಗ ತಮಿಳು ಕಾಲೋನಿಯ ಜನನಿಬಿಡ ಪ್ರದೇಶದಲ್ಲಿದ್ದ ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಗೋಮಾಂಸವೂ ಅಲ್ಲಿ ಇತ್ತು ಎಂದು ಹೇಳಲಾಗಿದೆ. ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗೋಮಾಂಸ ಮಳಿಗೆಯನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್
ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡುತ್ತಿದ್ದಂತೆ ಗೋಮಾಂಸದ ಶೆಡ್‌ನಲ್ಲಿದ್ದ ಮೂವರು ನಾಪತ್ತೆಯಾಗಿದ್ದಾರೆ. ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬೀಳುತ್ತಿದ್ದಂತೆ ಆ ಕಟ್ಟಡವನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳನ್ನು ಕಂಡು ಓಡಿ ಹೋದ ಅಕ್ರಮ ಗೋಮಾಂಸ ಶೆಡ್‍ನಲ್ಲಿದ್ದ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರ್ 20 ಅಡಿಯ ಕಂದಕಕ್ಕೆ ಪಲ್ಟಿಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಮಾರ್ಗದ ಬಿದಿರುತಳದ ಬಳಿ ನಡೆದಿದೆ.
ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಗಂಧೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಾಯಕಾರಿ ತಿರುವಿನ ಈ ಮಾರ್ಗದಲ್ಲಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಪತಿ ಎಂದು ತಿಳಿದು 4 ದಿನ ಚಾಪೆ ಮೇಲೆ ಹಾವಿನ ಜೊತೆಗಿದ್ದ ವೃದ್ಧೆ
ಕಾರು ಸಂಪೂರ್ಣ ಪಲ್ಟಿಯಾಗಿ ಬಿದ್ದಿದ್ದು ಕಾರಿನ ನಾಲ್ಕು ಚಕ್ರಗಳು ಆಕಾಶ ನೋಡುತ್ತಿವೆ. ಆ ಪ್ರಮಾಣದಲ್ಲಿ ಕಾರು ಪಲ್ಟಿಯಾಗಿದೆ. ಕಾರು ಕಂದಕಕ್ಕೆ ಪಲ್ಟಿಯಾಗುತ್ತಿದ್ದಂತೆ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ಪೂಜೆಗೆ ಮುಸ್ಲಿಂ ಮೌಲ್ವಿ (ಮುಜಾವರ್) ಸೈಯದ್ ಗೌಸ್ ಮೊಹಿನುದ್ದಿನ್‍ರನ್ನ ನೇಮಿಸಿ ಆದೇಶ ಹೊರಡಿಸಿದ್ದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶವನ್ನ ಉಚ್ಛ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ. ಹೈಕೋರ್ಟಿನ ಈ ತೀರ್ಪನ್ನ ಹಿಂದೂಪರ ಸಂಘಟನೆಗಳು, ದತ್ತಪೀಠ ಮುಕ್ತಿಯ ಹೋರಾಟದ ಮುನ್ನೆಲೆ ನಾಯಕರು ಇದು ನಮ್ಮ ಮೊದಲ ಗೆಲುವೆಂದೇ ಬಣ್ಣಿಸಿದ್ದಾರೆ.
2018ರಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ವರದಿ ಅನ್ವಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಮಾಹಿತಿ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದತ್ತಪೀಠದಲ್ಲಿ ಪೂಜೆಗೆ ಮುಜಾವರ್ ರನ್ನ ನೇಮಕ ಮಾಡಿತ್ತು. ಸರ್ಕಾರ ಈ ನಡೆ ಹಿಂದೂ ಸಂಘಟನೆಗಳ ಕಣ್ಣನ್ನ ಕೆಂಪಾಗಿಸಿದ್ದರಿಂದ ದತ್ತಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್ ಮೊರೆ ಹೋಗಿತ್ತು. ಮೂರು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಮಾನ್ಯ ಹೈಕೋರ್ಟ್ ಕಾಂಗ್ರೆಸ್ ಸರ್ಕಾರ ನೇಮಕಾತಿಯನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ದತ್ತಪೀಠದ ಹೋರಾಟಗಾರರು ಹಾಗೂ ದತ್ತಭಕ್ತರು 2018ರ ಮಾರ್ಚ್ 19ನೇ ರಂದು ಹಿಂದೂಗಳ ಕರಾಳ ದಿನವೆಂದೇ ಬಣ್ಣಿಸಿದ್ದರು. ಏಕೆಂದರೆ ಕಂದಾಯ, ಮುಜರಾಯಿ ಹಾಗೂ ಸಸ್ತಿಕಣವೂ ದತ್ತಾತ್ರೇಯನ ಹೆಸರಲ್ಲೇ ಇದೆ. ಆದರೂ, ಅಂದಿನ ಸಿದ್ದರಾಮಯ್ಯ ಸರ್ಕಾರ ದತ್ತಪೀಠದಲ್ಲಿ ಪೂಜೆಗೆ ಮೌಲ್ವಿಯನ್ನ ನೇಮಿಸಿತ್ತು. ಹಾಗಾಗಿ ದತ್ತಭಕ್ತರು ಈ ದಿನವನ್ನ ಕರಾಳ ದಿನವೆಂದೇ ಕರೆದಿದ್ದರು. ಅಂದು ದತ್ತಪೀಠದ ಪೂಜಾ-ವಿಧಿವಿಧಾನ ಹೈಕೋರ್ಟ್ ಮೇಟ್ಟಿಲೇರಿತ್ತು. ಇಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ಮುಜರಾಯಿ ಆಯುಕ್ತರ ಹೊರಡಿಸಿದ್ದ ಆದೇಶವನ್ನ ರದ್ದು ಮಾಡಿದೆ. ಕೋರ್ಟ್ ತೀರ್ಪನ್ನ ಹಿಂದೂ ಸಂಘಟನೆಗಳು ಇದು ನಮ್ಮ ಮೊಲದ ಜಯ ಎಂದಿವೆ. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು
ಇಂದಿನ ತೀರ್ಪೀನ ಬಗ್ಗೆ ಛತ್ತಿಸ್‍ಗಢ ಪ್ರವಾಸದಲ್ಲಿರುವ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವೀಡಿಯೋ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹೋರಾಟಕ್ಕೆ 3 ತಲೆಮಾರಿನ ಇತಿಹಾಸವಿದೆ. ಎಲ್ಲಾ ದಾಖಲೆಗಳು ದತ್ತಾತ್ರೇಯನ ಹೆಸರಲ್ಲೇ ಇದೆ. ಹಿಂದೂ ಅರ್ಚಕರಿಲ್ಲದಿರೋದು ಅನ್ಯಾಯ. ಈ ಅನ್ಯಾಯವನ್ನ ಸರಿಪಡಿಸುವ ದಾಖಲೆಯನ್ನ ಮುಜರಾಯಿ ಸಚಿವರು ನೀಡಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರ ನ್ಯಾಯಕ್ಕೆ ವಿರುದ್ಧವಾಗಿ ಅನ್ಯಾಯ ಮಾಡಿತ್ತು. ಸತ್ಯಕ್ಕೆ ವಿರುದ್ಧವಾಗಿ ಸುಳ್ಳಿನ ಸರಪಳಿ ಹೆಣೆದು ಹಿಂದೂಗಳಿಗೆ ಅನ್ಯಾಯ ಮಾಡಿತ್ತು. ಈಗ ನ್ಯಾಯಾಲಯ ಮತ್ತೆ ರಾಜ್ಯ ಸರ್ಕಾರದ ಅಂಗಳಕ್ಕೆ ಮುಜರಾಯಿ ಆಯುಕ್ತರ ವರದಿಯನ್ನ ಆಧರಿಸಿ ಕ್ರಮ ಕೈಗೊಳ್ಳುವ ಆದೇಶ ನೀಡಿದೆ. ಹಿಂದೂ ಅರ್ಚಕರ ನೇಮಕವಾಗುವ ವಿಶ್ವಾಸವಿದೆ ಎಂದಿದ್ದಾರೆ.
ದತ್ತಪೀಠ ಹೋರಾಟದ ಮುನ್ನೆಲೆ ನಾಯಕ ಶೃಂಗೇರಿ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಕೂಡ ಇಂದಿನ ಹೈಕೋರ್ಟ್ ತೀರ್ಪನ್ನ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಇದು 35 ವರ್ಷಗಳಿಂದ ಧರ್ಮದ ಪರ ನಡೆಯುತ್ತಿರುವ ಹೋರಾಟ. ದತ್ತಾತ್ರೇಯರ ಪಾದುಕೆಗಳಿಗೆ, ಅನುಸೂಯ ದೇವಿಗೆ ಹಿಂದೂ ಅರ್ಚಕರಿಂದ ಪೂಜೆ ಆಗುತ್ತೆ ಅನ್ನೋದು ನಮ್ಮೆಲ್ಲರ ಭಾವನೆ ಹಾಗೂ ಧರ್ಮಕ್ಕೆ ಸಿಕ್ಕಂತಹ ನಮ್ಮ ಮೊದಲ ಜಯ. ಈ ಹೋರಾಟ ಇಷ್ಟಕ್ಕೆ ನಿಲ್ಲಲ್ಲ. ದತ್ತಪೀಠ ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟಿನಲ್ಲೂ ಕೂಡ ನಮ್ಮ ಪರವಾದ ತೀರ್ಪು ಬರುತ್ತೆ ಎಂಬ ನಂಬಿಕೆ ಇದೆ. ಯಾಕಂದ್ರೆ ಅದು ವಾಸ್ತವಿಕ ಹಿಂದೂಗಳ ಶ್ರದ್ಧಾ ಕೇಂದ್ರ. ಆ ತೀರ್ಪು ಬೇಗ ಬರಲಿ ಅನ್ನೋ ನಮ್ಮ ಬಯಕೆ ಎಂದು ನ್ಯಾಯಾಲಯದ ತೀರ್ಪನ್ನ ಸ್ವಾಗತಿಸಿದ್ದಾರೆ.
ಹೈಕೋರ್ಟಿನ ಇಂದಿನ ಈ ತೀರ್ಪು ದತ್ತಪೀಠದ ಮುಕ್ತಿಗಾಗಿ ಹೋರಾಡ್ತಿರೋರು ನಮ್ಮ ಮೊದಲ ಜಯ ಅಂತಿದ್ದಾರೆ. ಆದರೆ ದತ್ತಪೀಠದ ದತ್ತಾತ್ರೇಯ ಸ್ವಾಮಿ ಕ್ಷೇತ್ರ ಎಷ್ಟು ಧಾರ್ಮಿಕ ಕ್ಷೇತ್ರವೋ ರಾಜಕೀಯಕ್ಕೂ ಅಷ್ಟೆ ಬಳಕೆಯಾಗಿರುವುದರ ಬಗ್ಗೆ ಹಿಂದೂಗಳು, ಹಿಂದೂ ಸಂಘಟಕರಿಗೆ ಬೇಸರವಿದೆ. ಅದರ ಹೊರತಾಗಿಯೂ ಹೋರಾಟ ನಿರಂತರವಾಗಿದೆ. ಹಿಂದೂ-ಮುಸ್ಲಿಂ ಎರಡೂ ಸಮುದಾಯದವರು ಇನಾಂ ದತ್ತಾತ್ರೇಯ ಬಾಬಾಬುಡನ್‍ಗಿರಿ ದರ್ಗಾ ನಮಗೆ ಸೇರಬೇಕೆಂದು ಹೇಳುತ್ತಿದ್ದಾರೆ. ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಅಂತಿಮವಾಗಿ ಯಾರಿಗೆ ಸೇರುತ್ತೋ ಗೊತ್ತಿಲ್ಲ. ಯಾರಿಗೆ ಸೇರಿದರೂ ಕೂಲ್ ಸಿಟಿ ಕಾಫಿನಾಡು ಕೂಲಾಗೇ ಇರಲಿ ಅನ್ನೋದು ಜಿಲ್ಲೆಯ ಜನರ ಬಯಕೆ.
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೆಲ ಭಾಗದಲ್ಲಿ ಮಳೆರಾಯ ಅಪ್ಪರಿಸಿ ಬೊಬ್ಬಿರಿದಿದ್ದಾನೆ. ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪ ತಾಲೂಕಿನ ಜಯಪುರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಮಳೆಯ ಅಬ್ಬರ ಎಷ್ಟು ಜೋರಾಗಿತ್ತು ಎಂದರೆ, ಸುಮಾರು ಒಂದು ಗಂಟೆಗೆ ಒಂದೂಕಾಲು ಇಂಚಿನಷ್ಟು ಮಳೆ ಸುರಿದಿದೆ. ಮಳೆಯ ಅಬ್ಬರ ಕಂಡು ಜಯಪುರ ಸುತ್ತಮುತ್ತಲ್ಲಿನ ಜನ ಆತಂಕಕ್ಕೀಡಾಗಿದ್ದರು. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆ 5.30ರ ತನಕವೂ ಒಂದೇ ಸಮನೆ ಸುರಿದಿದೆ. ಭಾರೀ ಮಳೆಗಾಳಿಗೆ ರಸ್ತೆ ಬದಿಯ ಮರದ ಟೊಂಗೆಗಳು ಮುರಿದು ಬಿದ್ದಿವೆ. ಜಯಪುರ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.
ಇನ್ನೂ ಮಲೆನಾಡು ಭಾಗಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲೂ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲೆ ಸಾಧಾರಣ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದಲೂ ಮಲೆನಾಡಲ್ಲಿ ಮೋಡಕವಿಯುತ್ತಿದ್ದು ಅಷ್ಟಾಗಿ ಮಳೆಯಾಗಿರಲಿಲ್ಲ. ಇಂದು ಜಯಪುರದಲ್ಲಿ ಸುರಿದ ಮಳೆ ಕಂಡು ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಇನ್ನೇನು ಮಲೆನಾಡಲ್ಲಿ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲದ ಆರಂಭವಾಗಲಿದೆ.
ಮಳೆಗಾಲದ ಆರಂಭದ ಮೊದಲ ಮಳೆಯೇ ಈ ಪ್ರಮಾಣದಲ್ಲಿ ಸುರಿದಿದೆ ಅಂದರೆ, ಈ ಬಾರಿಯ ಮಳೆಗಾಲ ಹೇಗಿರಬಹುದು ಎಂದು ಜನ ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಯಾಕಂದರೆ ಕಾಫಿನಾಡಲ್ಲಿ ಕಳೆದ ಎರಡ್ಮೂರು ವರ್ಷಗಳ ಮಳೆ ಮಲೆನಾಡಿಗರಿಗೆ ಮಳೆ ಎಂದರೆ ಭಯಪಡುವಂತಹಾ ಸ್ಥಿತಿ ನಿರ್ಮಿಸಿತ್ತು.