ಚಿಕ್ಕಮಗಳೂರು: ತರೀಕೆರೆ (Tarikere) ತಾಲೂಕಿನ ಲಕ್ಕವಳ್ಳಿ (Lakkavalli) ಬಳಿ ದೇವರ ದರ್ಶನಕ್ಕೆ ತೆರಳಿದ್ದ ದಂಪತಿ ಭದ್ರಾ ಜಲಾಶಯದ (Bhadra Dam) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಮೃತರನ್ನ ವಿಠಲ (48) ಹಾಗೂ ಗಂಗಮ್ಮ (40) ಎಂದು ಗುರುತಿಸಲಾಗಿದೆ. ಮೃತ ದಂಪತಿ ಮೂಲತಃ ಶಿವಮೊಗ್ಗದ ಭದ್ರಾವತಿ (Bhadravathi) ತಾಲೂಕಿನ ಶಂಕರಪುರ ನಿವಾಸಿಗಳು. ದಂಪತಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಜಗದಾಂಭಾ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬಂದವರು ಭದ್ರಾ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ
ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಭದ್ರಾ ಜಲಾಶಯದ ಬಳಿ ಗಂಗೆ ಪೂಜೆ ಮಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೋ ಗೊತ್ತಾಗಿಲ್ಲ. ಆದರೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ನಾಲೆ ಬಳಿ ಹೋಗಿದ್ದನ್ನ ಸ್ಥಳಿಯರು ನೋಡಿದ್ದಾರೆ. ಹಾಗಾಗಿ, ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೂ ಕೂಡ ಲಕ್ಕವಳ್ಳಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳಿಯರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಗಂಗಮ್ಮ ಮೃತದೇಹ ಪತ್ತೆಯಾಗಿದ್ದು, ವಿಠಲ ಅವರ ಮೃತದೇಹ ಪತ್ತೆಯಾಗಿಲ್ಲ.
ಚಿಕ್ಕಮಗಳೂರು: ಸದ್ಯ ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಜನರನ್ನ ಬೆಚ್ಚಿಬೀಳಿಸಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿ (Chikkamagaluru) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಜ್ಜಂಪುರ (Ajjampura) ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ನಡೆದಿದೆ. ತನು (25) ಕೊಲೆಯಾದ ಮಹಿಳೆ, ರಮೇಶ್ ಕೊಲೆಗೈದ ಪತಿ. ಮನೆಯ ರೂಮಿನ ತುಂಬೆಲ್ಲ ರಕ್ತ ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ.
ತನು & ರಮೇಶ್ 7 ವರ್ಷಗಳ ಹಿಂದೆ ಮದ್ವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗು ಇದೆ. ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ತನು ಕಳೆದ 2 ವರ್ಷದಿಂದ ತೋಟದ ಮನೆಯಲ್ಲಿ ಪ್ರತ್ಯೇಕ ವಾಸವಿದ್ದಳು. ಹೀಗಾಗಿ ಇಬ್ಬರ ನಡುವೆ ಕಲಹ ಇತ್ತು. ಬುಧವಾರ ರಾತ್ರಿ ಕುಡಿದು ಬಂದಿದ್ದ ರಮೇಶ್, ಪತ್ನಿಯನ್ನ ಕ್ರೂರವಾಗಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನ ಕೊಂದ ಬಳಿಕ ತಾನೂ ಕೂಡ ಕೈ ಕೊಯ್ದುಕೊಂದು ಅಪಘಾತವಾಗಿದೆ ಎಂದು ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಅಪಘಾತವಲ್ಲ ಎಂದು ಹೇಳಿದಾಗ ನನ್ನ ಮೇಲೆ ನನ್ನ ಪತ್ನಿಯಿಂದ ಕೊಲೆ ಯತ್ನ ನಡೆದಿದೆ ಎಂದು ಕಥೆ ಹೇಳಿದ್ದಾನೆ. ವಿಷಯ ಗೊತ್ತಾಗಿ ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ.
ತನುಜಾ ಪೋಷಕರು ಗಂಡ, ಅತ್ತೆ-ಮಾವ ಸೇರಿ ಒಂಬತ್ತು ಜನರ ವಿರುದ್ಧ ದೂರು ನೀಡಿದ್ದಾರೆ. ರಮೇಶ್ ಆತನ ಅಪ್ಪ-ಅಮ್ಮ, ಅಕ್ಕ-ತಂಗಿಯ ಮಾತು ಕೇಳಿ ಹಿಂದೆ ತನುಜಾಳಿಗೆ ಹಿಂಸೆ ಕೊಡುತ್ತಿದ್ದ. ಈಗ ಪ್ರಾಣವನ್ನೇ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ. ಅಜ್ಜಂಪುರ ಪೊಲೀಸರು (Ajjampura Police Station) ಪ್ರಕರಣ ದಾಖಲಿಸಿಕೊಂಡು 9 ಜನರಲ್ಲಿ ಗಂಡ ರಮೇಶ್ ಹಾಗೂ ಆತನ ಅಪ್ಪ-ಅಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
– ಹೆಂಡ್ತಿ ದೆವ್ವ ಆಗಬಾರದು, ತಾನು ಪೊಲೀಸರಿಗೆ ಸಿಗಬಾರ್ದು ಅಂತ ಪ್ರಾಣಿಬಲಿ
ಚಿಕ್ಕಮಗಳೂರು: ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ (Animal sacrifice) ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವೈಫಲ್ಯ ಆಗಬೇಕು, ಕೋರ್ಟಿನಿಲ್ಲಿ ಕೇಸ್ ನಿಲ್ಲಬಾರದು ಎಂದು ಬರೆದು ಹೆಂಡತಿ ಫೋಟೋವನ್ನ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಕೇಡಿ-ಕಿರಾತಕ ಪತಿ ಬಂಧನವಾಗಿರೋ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತಳನ್ನ 28 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಹೆಂಡತಿಯನ್ನ ಕೊಂದಿದ್ದ ಗಂಡ ವಿಜಯ್ ಯಾರಿಗೂ ತಿಳಿಯಂತೆ ತಮ್ಮ ತೋಟದ ಕೊಳವೆ ಬಾವಿಯಲ್ಲಿ ಆಕೆಯನ್ನ ಹೂತಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಎಲ್ಲೋ ಹೋಗಿದ್ದಾಳೆ. ಹುಡುಕಿಕೊಡಿ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಆದ್ರೆ, ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಬೆನ್ನು ಬಿದ್ದಿದ್ದರು. ಹುಡುಗಿಯ ಪೋಷಕರು ಕೂಡ ನಮಗೆ ನಮ್ಮ ಮಗಳನ್ನ ಹುಡುಕಿಕೊಂಡು ಎಂದು ಕೈಮುಗಿದಿದ್ದರು. ಇದೀಗ ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂಬುದು ಸಾಬೀತಾಗಿದ್ದು, ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಹಾರರ್ ಸ್ಟೋರಿ?
ಮೃತ ಭಾರತಿ ತನ್ನ ಅಜ್ಜಿ ನೋಡಲು ಶಿವಮೊಗ್ಗಕ್ಕೆ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ ಎಂದು ಸೆಪ್ಟೆಂಬರ್ 5ರಂದು ಪಾಪಿ ಗಂಡ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೋಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಸುಮಾರು ಒಂದೂವರೆ ತಿಂಗಳ ಬಳಿಕ ಅಕ್ಟೋಬರ್ 13 ರಂದು ಭಾರತಿಯ ತಾಯಿ ಎಮ್ಮೆದೊಡ್ಡಿ ಪ್ರದೇಶದ ಪರದೇಶಿಹಾಳ್ ನಿವಾಸಿ ಲಲಿತಮ್ಮ ಅವರು ಕಡೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನನ್ನ ಮಗಳು ಭಾರತಿಯನ್ನ 6 ವರ್ಷಗಳ ಹಿಂದೆ ಆಲಘಟ್ಟದ ವಿಜಯಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆವು. ನಂತರ ಹಲವಾರು ಬಾರಿ ವರದಕ್ಷಿಣೆ ವಿಚಾರವಾಗಿ ಭಾರತಿಗೆ ಹೊಡೆದು ಹಿಂಸೆ ನೀಡಿದ್ದರು. ಈಗ ಕೆಲ ದಿನಗಳ ಹಿಂದೆಯೂ ವರದಕ್ಷಿಣೆ ವಿಚಾರವಾಗಿ ಆಕೆಯ ಕಾಲು ಮುರಿಯುವಂತೆ ಹೊಡೆದಿದ್ದರು. ರಾಜಿ ಪಂಚಾಯಿತಿ ಮಾಡಿ ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದೆವು. ಹತ್ತು ದಿನಗಳ ಹಿಂದೆ ಮತ್ತೆ ಭಾರತಿಗೆ ಬಹಳ ಹಿಂಸೆ ನೀಡಿದ್ದಾರೆಂಬ ವಿಚಾರ ತಿಳಿದು ಅವರ ಮನೆಗೆ ಹೋದಾಗ ಅವರ ಅಜ್ಜಿಗೆ ಹುಷಾರಿಲ್ಲ. ಹಾಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೋಡಲು ಹೋಗಿದ್ದಾಳೆ ಎಂದು ಹೇಳಿದ್ದರು.
ಆ ನಂತರ ನಮಗೆ ತಿಳಿಯದಂತೆ ಭಾರತಿ ನಾಪತ್ತೆಯಾಗಿದ್ದಾಳೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ತಿಳಿದು ಮತ್ತೆ ಆಲಘಟ್ಟಕ್ಕೆ ಹೋಗಿ ಕೇಳಿದಾಗ ನಿಮ್ಮ ಮಗಳು ಬರುವುದಿಲ್ಲ. ಆಕೆಯನ್ನು ಮರೆತು ಬಿಡಿ ಎಂದು ಹೇಳಿದ್ದರಂತೆ. ನನ್ನ ಮಗಳನ್ನು ಇವರು ಕೊಲೆ ಮಾಡಿದ್ದಾರೆ. ಶವ ಎಲ್ಲಿದೆ? ಎಂದು ಹೇಳಿಲ್ಲ ಎಂದು ಭಾರತಿಯ ಪತಿ ವಿಜಯ ಕುಮಾರ್, ಆತನ ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅಂತಿಮವಾಗಿ ದೂರು ನೀಡಿದ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ತಂದೆ ತಾಯಿಯನ್ನೂ ಬಂಧಿಸಲಾಗಿದೆ.
ಆರೋಪಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕೊಲೆ ಮಾಡಿದ ನಂತರ ಹೆಂಡತಿಯ ಮೃತ ದೇಹವನ್ನು ತನ್ನದೇ ಜಮೀನಿನಲ್ಲಿ ಹಿಂದೆ ತೆಗೆಸಿ ನೀರು ಬಾರದೇ ಹಾಗೆಯೇ ಮುಚ್ಚದೇ ಬಿಟ್ಟಿದ್ದ ಕೊಳವೆ ಬಾವಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಡೂರು ಪೊಲೀಸರು ಮೃತದೇಹ ಹಾಕಿದ್ದಾರೆ ಎನ್ನಲಾದ ಕೊಳವೆ ಬಾವಿ ಮುಂತಾದೆಡೆ ಮಹಜರು ನಡೆಸಿದರು. ಮೃತದೇಹವನ್ನು ಹೊರತೆಗೆಯಲು ಅಗತ್ಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು: ಪತಿಯೇ (Husband) ಪತ್ನಿಯನ್ನು (Wife) ಚಾಕು ಇರಿದು ಹತ್ಯೆಗೈದಿರುವುದು ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದೆ. ಪತಿ ನವೀನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಐದು ತಿಂಗಳ ಹಿಂದಷ್ಟೇ ಇವರಿಬ್ಬರ ಮದುವೆಯಾಗಿತ್ತು. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಮೂರು ತಿಂಗಳ ಹಿಂದೆ ಪತಿ ಜೊತೆ ಜಗಳವಾಡಿ ನೇತ್ರಾ ತವರು ಸೇರಿದ್ದಳು. ಆಕೆಯ ತವರು ಮನೆಗೆ ಹೋಗಿ ಪತಿ ಚಾಕು ಇರಿದಿದ್ದಾನೆ ಎಂದು ನೇತ್ರಾ ಪೋಷಕರು ಆರೋಪಿಸಿದ್ದಾರೆ.
ಚಿಕ್ಕಮಗಳೂರು: ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಹಾಗೂ ಅತಿವೃಷ್ಠಿ ಇವೆಲ್ಲಾ ರಾಜ್ಯದ ದಾಖಲೆಯಾಗಿದ್ದು ಅದರ ಸಂಭ್ರಮಕ್ಕೆ ಔತಣಕೂಟ ಮಾಡುತ್ತಿದ್ದಾರೆ ಎಂದು ಸಿಎಂ ಡಿನ್ನರ್ ಮೀಟಿಂಗ್‌ಗೆ ಎಂಎಲ್‌ಸಿ ಸಿ.ಟಿ ರವಿ (C.T Ravi) ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ (Siddaramaiah) ಔತಣಕೂಟ (Dinner Meeting) ಆಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರು ಪ್ರೇಮಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 10 ಜಿಲ್ಲೆಗಳು ಅತಿವೃಷ್ಠಿಯಿಂದ ಕಂಗೆಟ್ಟು ಹೋಗಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಇದನ್ನೆಲ್ಲಾ ಸಂಭ್ರಮಾಚರಣೆ ಮಾಡಬೇಕಲ್ವಾ ಅದಕ್ಕೆ ಔತಣಕೂಟ ಆಯೋಜಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಯಾಕೆ ಅಂತ ಗೊತ್ತಿಲ್ಲ: ಚೆಲುವರಾಯಸ್ವಾಮಿ
ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್ ವಿಚಾರವಾಗಿ, ರಾಜ್ಯದಲ್ಲಿ ಮಂತ್ರಿಯಾಗಲು ಬಿಹಾರ ಚುನಾವಣೆಗೆ 300 ಕೋಟಿ ರೂ. ದೇಣಿಗೆ ಆರೋಪವಿದೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆಯಾಗಿದೆ. ಭ್ರಷ್ಟಾಚಾರರಿಗಳಿಗೆ, ಕಾಳಸಂತೆಕೋರರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಬಂದಿದೆ. 60ರ ದಶಕದಿಂದಲೂ ಕಾಂಗ್ರೆಸ್ ಕಾಳಸಂತೆಕೋರರಿಗೆ ಪ್ರೋತ್ಸಾಹ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲಾ ಕಾಳಸಂತೆಯ ಪ್ರಮಾಣ ಹೆಚ್ಚು ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವ ಮೂಲದಿಂದ ಬೇಕಾದರೂ ಹಣ ಮಾಡಲಿ, ಒಟ್ಟು ಹಣ ಮಾಡಿದ್ದರೆ ಕಾಂಗ್ರೆಸ್ ಅವರಿಗೆ ಮಣೆ ಹಾಕುತ್ತೆ. ಇದು ಕಾಂಗ್ರೆಸ್‌ನಲ್ಲಿರುವ ವ್ಯವಸ್ಥೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆ. ಅನುಮಾನವಿದ್ದರೆ 40 ಜನರ ಟ್ರ್ಯಾಕ್ ರೆಕಾರ್ಡ್ ನೋಡಿ ನಿಮಗೆ ಅರ್ಥವಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ
ಚಿಕ್ಕಮಗಳೂರು: ಸಾಮಾಜಿಕ – ಶೈಕ್ಷಣಿಕ ಸರ್ವೇ (Caste Survey) ಕಾರ್ಯಕ್ಕೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ (Stray Dog) ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಸರ್ವೇ ಕಾರ್ಯದ ಭಾಗವಾಗಿ ಕೆಲ ಮನೆಗಳಲ್ಲಿನ ಯು.ಹೆಚ್.ಐ.ಡಿ. ನಂಬರ್ ಪೆಂಡಿಂಗ್ ತೋರಿಸುತ್ತಿತ್ತು. ಈ ಕಾರಣಕ್ಕೆ ಮೀಟರ್ ಬೋರ್ಡಿನಲ್ಲಿರುವ ಆರ್.ಆರ್ ನಂಬರ್ ಪಡೆಯಲು ಕೃಷ್ಣಪ್ಪ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ನಾಯಿ ದಾಳಿ ನಡೆಸಿದೆ.
ಕೃಷ್ಣಪ್ಪ ಅವರ ಪರವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಕೆಲ ಶಿಕ್ಷಕರು, ಸರ್ವೇಯಲ್ಲಿನ ತಾಂತ್ರಿಕ ಅಡಚಣೆಗಳೇ ನಾಯಿ ದಾಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ಸುರಕ್ಷತಾ ಕೊರತೆಯಿಂದಾಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಜಿಲ್ಲೆಯ ಎನ್‍ಆರ್‌ಪುರ (NR Pura) ಸುತ್ತಮುತ್ತ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಹಾಗೂ ಕಾಡಂಚಿನ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು (Elephant) ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಪುಂಡಾನೆ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಉಪಟಳ ನೀಡುತ್ತಿತ್ತು. ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಈ ಸಲಗವು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿತ್ತು. ಇದರಿಂದ ರೈತರ ತೋಟಗಳಿಗೆ ಅಪಾರ ನಷ್ಟ ಉಂಟಾಗಿತ್ತು. ಇದನ್ನೂ ಓದಿ: ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು
ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಶೃಂಗೇರಿ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆನೆ ಸೆರೆ ಹಿಡಿಯುವಂತೆ ಆದೇಶಿಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಮೂರು ಕುಮ್ಕಿ ಆನೆಗಳು ಹಾಗೂ ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು 6 ಕುಮ್ಕಿ ಆನೆಗಳು ಕಾರ್ಯಾಚರಣೆಯಗೆ ಆಗಮಿಸಿದ್ದವು. ಇಂದು (ಅ.6) ಬೆಳಿಗ್ಗೆ ಗುಡ್ಡೆಹಳ್ಳ ಬಳಿ ಅರವಳಿಕೆ ನೀಡಿ ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ `ಆನೆಪಥ’: ಈಶ್ವರ್ ಖಂಡ್ರೆ
ವಿಕೃತಿ ಮೆರೆದ ಬಾಲಕನ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನಿಗೆ ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೂ ಬಾಲಕನ ತಾಯಿ ದೂರು ನೀಡಿದ್ದಾಳೆ. ಅಪ್ರಾಪ್ತ ಬಾಲಕನ ಮನಸ್ಥಿತಿ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ.
ಚಿಕ್ಕಮಗಳೂರು: ಇತ್ತೀಚಿಗೆ ಏಳೆಂಟು ಜನ ನಕ್ಸಲರು (Naxalites) ಸೆರೆಂಡರ್ ಆಗುವಾಗ ಸರ್ಕಾರಕ್ಕೆ ಮಲೆನಾಡು (Malenadu) ಅಭಿವೃದ್ಧಿ ಆಗಬೇಕು, ಶರಣಾದ ನಕ್ಸಲರಿಗೆ ಕೊಡುವ ಪ್ಯಾಕೇಜ್ ಕೊಡಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿತ್ತು. ಅದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಿಲ್ ಕೊಟ್ಟಿತ್ತು. ಹಾಗಾಗಿಯೇ ಇತಿಹಾಸದಲ್ಲಿ ಮೊಟ್ಟ-ಮೊದಲು ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಸರ್ಕಾರ ಇಂದು ಮಲೆನಾಡಿಗೆ 7 ಕೋಟಿ ಹಣ ಕೊಟ್ಟಿರೋದು ನೋಡಿದರೆ ಶರಣಾದ ನಕ್ಸಲರಿಗೆ ಕೊಟ್ಟ ಮಾತು ಉಳಿಸಿಕೊಂಡಿತಾ ಎಂಬ ಅನುಮಾನ ದಟ್ಟವಾಗಿದೆ.
ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ಕಾಫಿನಾಡಿಗೆ 7 ಕೋಟಿ 12 ಲಕ್ಷ ಹಣ ಬಿಡುಗಡೆ ಮಾಡಿದೆ. ನಕ್ಸಲರು ಮಲೆನಾಡು ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತೋ ಹಲವೆಡೆ ಇಂದಿಗೂ ಹಾಗೇ ಇದೆ. ಕಾಡಂಚಿನ ಕುಗ್ರಾಮಗಳ ರಸ್ತೆ-ನೀರು-ಕರೆಂಟ್-ಕಾಲುಸಂಕ ಸೇರಿದಂತೆ ವಿವಿಧ ಸೌಲಭ್ಯ ನೀಡಲು ಸರ್ಕಾರ 7 ಕೋಟಿ ಹಣ ಬಿಡುಗಡೆ ಮಾಡಿದೆ. ಮಲೆನಾಡಿನ ಎಷ್ಟೋ ಗ್ರಾಮಗಳು ಈಗ ರಸ್ತೆ ನೋಡೋ ಅಂತಹಾ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ; ದಿಢೀರ್ ಪ್ರತಿಭಟನೆ
ಇನ್ನು ಸರ್ಕಾರ ನಕ್ಸಲರು ಸರ್ಕಾರ-ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದಾಗಲೇ ಸರ್ಕಾರ ಕಾಡಂಚಿನ ಕುಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ನಕ್ಸಲರು-ಪೊಲೀಸರು-ಮಾಹಿತಿದಾರರ ಹೆಸರಲ್ಲಿ ಜನಸಾಮಾನ್ಯರು ಸಾಯುತ್ತಿರಲಿಲ್ಲ. ಆಗ ಸರ್ಕಾರ ನಕ್ಸಲರನ್ನು ಹುಡುಕೋದಕ್ಕೆ, ಸಿಕ್ಕಿದ್ರೆ ಸಾಯ್ಸೋದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿತ್ತು. ಅವರು ಆಚೆ ಬರುತ್ತೇವೆ ಅಂದಾಗ ಮತ್ತದೇ ಲಕ್ಷ-ಲಕ್ಷ ಹಣ ಕೊಟ್ಟು, ಸ್ಟೇಫಂಡ್, ಜಮೀನು ಅಂತ ಮತ್ತದೇ ಸರ್ಕಾರದ ಹಣವನ್ನ ಅವರಿಗೆ ಕೊಟ್ಟಿತು. ಸರ್ಕಾರಗಳು ಇದೇ ಕೆಲಸ ಅಂದೇ ಮಾಡಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗುತ್ತಿತ್ತು. ಯಾರೂ ಸಾಯುತ್ತಿರಲಿಲ್ಲ. ಎಎನ್‌ಎಫ್ ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಡು-ಮೇಡು ಅಲೆಯೋದು ತಪ್ಪುತ್ತಿತ್ತು. ಸರ್ಕಾರ ಈಗ್ಲಾದ್ರು ಎಚ್ಚೆತ್ತುಕೊಂಡಿರೋದು ಸಂತೋಷದ ಸಂಗತಿ. ಈಗಾಗಲೇ 7.12 ಕೋಟಿ ಬಿಡುಗಡೆಯಾಗಿದ್ದು, ಸರ್ಕಾರ ಎಲ್ಲೆಲ್ಲಿಗೆ ಏನೇನು ಬೇಕೆಂದು ಡಿ.ಪಿ.ಆರ್. ತಯಾರಿಸಿ ಸರ್ಕಾರದ ಅನುಮೋದನೆಯೊಂದಿಗೆ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್
ಒಟ್ಟಾರೆ, ಅಂತು-ಇಂತು ಮಲೆನಾಡ ಕುಗ್ರಾಮ ಹಾಗೂ ಕಾಡಂಚಿನ ಗ್ರಾಮಗಳಿಗೆ ಅಭಿವೃದ್ಧಿ ನೋಡುವ ಭಾಗ್ಯ ಬಂದಿದೆ. 75 ವರ್ಷಗಳ ಬಳಿಕ ಎಷ್ಟೋ ಗ್ರಾಮಗಳು ರಸ್ತೆ-ಕಾಲುಸಂಕ-ಶುದ್ಧ ನೀರು-ಚರಂಡಿ-ಕರೆಂಟ್ ನೋಡೋ ಭಾಗ್ಯ ಸಿಗಲಿದೆ. ಇದನ್ನೂ ಓದಿ:ಚುನಾವಣೆಗೂ ಮುನ್ನವೇ ಬಿಹಾರ ಯುವಜನಕ್ಕೆ ಮೋದಿ ಭರ್ಜರಿ ಗಿಫ್ಟ್