Tag: Chikkamagaluru

  • ಕಾಫಿ ಎಸ್ಟೇಟ್‍ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು

    ಚಿಕ್ಕಮಗಳೂರು: ಕಾಫಿ ಎಸ್ಟೇಟ್‍ನಲ್ಲಿ 13 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ.

    ವನಜಾಕ್ಷಿ (13) ಮೃತಪಟ್ಟ ಬಾಲಕಿ. ಕಳಸ ಸಮೀಪದ ಅಲಂದೂರು ಎಸ್ಟೇಟ್‍ನಲ್ಲಿ ಕಾಫಿ ಗಿಡಗಳಿಗೆ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಲಾಗಿದೆ ಎಂದು ತಿಳಿದು ಬಂದಿದೆ. ಬಾಲಕಿ ವನಜಾಕ್ಷಿ ಚಿತ್ರದುರ್ಗ ಮೂಲದವಳಾಗಿದ್ದು, ಸ್ಥಳೀಯರ ಜೊತೆ ಕಾಫಿ ಎಸ್ಟೇಟ್‍ಗೆ ಕೆಲಸಕ್ಕೆ ಬಂದಿದ್ದಳು.

    ಸ್ಥಳೀಯರು ಎಸ್ಟೇಟ್ ಮಾಲೀಕ ವೆಂಕಟೇಶ್ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿದ್ದಾರೆ. ಬಾಲಕಿಯ ಪಾಲಕರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಬಾಲಕಿಯ ಶವವನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

  • ಅಕ್ಕನಿಗೆ ಬೇಡವಾದ ತಂಗಿಗೆ ಅಣ್ಣನಾದ ಎಸ್‍ಪಿ ಅಣ್ಣಾ ಮಲೈ

    ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ ನನ್ನ ತಮ್ಮ-ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದ ಮಹಿಳಾ ಪೇದೆಯ ತಂಗಿಗೆ ಚಿಕ್ಕಮಗಳೂರು ಎಸ್‍ಪಿ ಅಣ್ಣಾ ಮಲೈ ಅಣ್ಣನಾಗಿ ನಿಂತಿರೋ ಘಟನೆಗೆ ಚಿಕ್ಕಮಗಳೂರು ಎಸ್‍ಪಿ ಕಚೇರಿ ಸಾಕ್ಷಿಯಾಗಿದೆ.

    ಬಾಳೂರು ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡ್ತಿದ್ದ ರೇಣುಕಾ ಅದೇ ಠಾಣೆಯ ಮಹಮದ್ ನೌಫರ್‍ನನ್ನ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದಳು. ತಂದೆ-ತಾಯಿ ಇಲ್ಲದ ರೇಣುಕಾ ಮದುವೆಯ ಮುಂಚೆ ತಮ್ಮ ಹಾಗೂ ತಂಗಿಯನ್ನ ಸಾಕುತ್ತಿದ್ದಳು. ಆದ್ರೆ, ಮದುವೆಯ ಬಳಿಕ ರೇಣುಕಾ, ತಮ್ಮ ಹಾಗೂ ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದಳು. ಅಪ್ಪ-ಅಮ್ಮ ಇಲ್ಲದ ರೇಣುಕಾಳ ತಂಗಿ-ತಮ್ಮನ ಕಣ್ಣೀರು ಆಕೆಗೆ ಕಾಣಿಸಲೇ ಇಲ್ಲ. ಕೂಡಲೇ ಹೆಣ್ಣುಮಗಳ ಕಣ್ಣೀರಿಗೆ ಕರಗಿದ ಎಸ್‍ಪಿ ಅಣ್ಣಾಮಲೈ, ನೀನು ಓದೋವರೆಗೂ ಓದಿಸಿ ನಿನಗೆ ಕೆಲಸ ಕೊಡಿಸೋ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ.

    ರೇಣುಕಾಗಿ ಸಂಬಂಧದಲ್ಲೇ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಮದುವೆಗೆ 10 ದಿನ ಬಾಕಿ ಇರೋವಾಗ್ಲೆ ಆಕೆ ನೌಫರ್‍ನೊಂದಿಗೆ ವಿವಾಹವಾಗಿ ಬಂದಿದ್ದಾಳೆ. ಮದುವೆಗೆ ರೇಣುಕಾ ಸಹೋದರರು ಹಾಗೂ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ರು. ಸಂಬಂಧಿಕರು ನೌಫರ್ ಹಾಗೂ ರೇಣುಕಾರನ್ನ ಪೊಲೀಸ್ ಠಾಣೆಗೆ ಕರೆಸಿ ಎಸ್‍ಪಿ ಎದುರು ವಿಚಾರಣೆ ಮಾಡಿದ್ರು. ದಿಕ್ಕಿಲ್ಲದ ಸಂಸಾರದಲ್ಲಿ ಕಡುಬಡತನದಲ್ಲಿರುವ ನಮಗೆ ಇನ್ಯಾರು ದಿಕ್ಕು ಅಂತಾ ರೇಣುಕಾಳ ತಂಗಿ ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟಳು. ಆಕೆಯ ಕಣ್ಣೀರಿಗೆ ಕರಗಿದ ಅಣ್ಣಾಮಲೈ ಅಣ್ಣನ ಸ್ಥಾನದಲ್ಲಿ ನಿಂತು ಆಕೆಯ ಜವಾಬ್ದಾರಿ ಹೊತ್ತಿದ್ದಾರೆ.

  • ವಿಶ್ವನಾಥ್‍ಗೆ ಇರೋ ಮಾನ, ಮರ್ಯಾದೆಯನ್ನೆ ಹಂಚಿಕೊಳ್ಳೋಣ: ಪರಮೇಶ್ವರ್

    ಚಿಕ್ಕಮಗಳೂರು: ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವ ವಿಚಾರ ಹಾಗೂ ನಂಜನಗೂಡು ಟಿಕೆಟ್‍ಗೆ ಸಂಬಂಧಿಸಿದಂತೆ ಮಾಜಿ ಸಂಸದ ವಿಶ್ವನಾಥ್ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ವಿಶ್ವನಾಥ್‍ಗೆ ಇರುವ ಮಾನ-ಮರ್ಯಾದೆ ಹಂಚಿಕೊಳ್ಳೋಣ ಅಂತಾ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂಬ ಆಪೇಕ್ಷೆ ಜನಾರ್ದನ ಪೂಜಾರಿಯವರದ್ದೇ ವಿನಾಃ ನನ್ನದಲ್ಲ. ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜೀನಾಮೆ ಹಿಂಪಡೆಯುವಂತೆ ನಾನು ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದು, ರಾಷ್ಟ್ರೀಯ ನಾಯಕರು ಕೂಡ ಮಾತುಕತೆ ನಡೆಸುತ್ತಿದ್ದಾರೆ ಎಂದರು.

    ಉಗಾಂಡ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಪರಮೇಶ್ವರ್‍ಗೆ ಮಾನ ಮರ್ಯಾದೆ ಇಲ್ವಾ: ವಿಶ್ವನಾಥ್ ಪ್ರಶ್ನೆ