Tag: Chikkamagaluru

  • ಚಿಕ್ಕಮಗಳೂರಿಗೆ ಇಂದು ಜಿಗ್ನೇಶ್ ಮೇವಾನಿ ಆಗಮನ- ಮೋದಿ ಕರ್ನಾಟಕ ಕನಸಿಗೆ ಆಗುತ್ತಾ ಅಡ್ಡಿ?

    ಚಿಕ್ಕಮಗಳೂರಿಗೆ ಇಂದು ಜಿಗ್ನೇಶ್ ಮೇವಾನಿ ಆಗಮನ- ಮೋದಿ ಕರ್ನಾಟಕ ಕನಸಿಗೆ ಆಗುತ್ತಾ ಅಡ್ಡಿ?

    ಚಿಕ್ಕಮಗಳೂರು: ಕಾಂಗ್ರೆಸ್ ಮುಕ್ತ ದೇಶ ನಿರ್ಮಿಸೋ ಬಿಜೆಪಿ ನಾಯಕರಿಗೆ ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಅಡ್ಡಿಯಾಗ್ತಿದ್ದಾರಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಯಾಕಂದ್ರೆ ಮೋದಿಯ ನಾಗಾಲೋಟಕ್ಕೆ ಗುಜರಾತ್‍ನಲ್ಲಿ ಕೊಂಚ ಮಟ್ಟಿಗೆ ತಡೆಯೊಡ್ಡಿರೋ ಜಿಗ್ನೇಶ್ ಮೇವಾನಿ ಇದೀಗ ಕರ್ನಾಟಕಕ್ಕೆ ಬರ್ತಿದ್ದಾರೆ.

    ಗುಜರಾತ್ ಬಳಿಕ ಕರ್ನಾಟಕದ ಮೇಲೆ ಕಣ್ಣು ನೆಟ್ಟಿರೋ ಬಿಜೆಪಿ ನಾಯಕರಿಗೆ ಮೇವಾನಿ ಕೊಂಚ ತಲೆ ಬಿಸಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದೀಗ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ತುಂಬಿರೋ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಜಿಗ್ನೇಶ್ ಇವತ್ತು ಬರ್ತಿದ್ದಾರೆ.

    ಈ ವೇಳೆ, ಬಡವರು, ದಲಿತರು, ಹಿಂದುಳಿದ ವರ್ಗಗಳ ಪರ ಜಿಗ್ನೇಶ್ ವೀರಾವೇಶದ ಭಾಷಣ ಮಾಡಲಿದ್ದಾರೆ. ಈ ಮೂಲಕ ಪ್ರಧಾನಿ ರಾಜ್ಯದಲ್ಲೇ ಗೆದ್ದ ಮೇವಾನಿಯ ಭಾಷಣದಿಂದ ಮತ್ತೊಮ್ಮೆ ಕರ್ನಾಟಕದಲ್ಲೂ ಮೋದಿಯ ನಿಲುವಿಗೆ ಮುಖಭಂಗವಾಗುತ್ತಾ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

  • ದೇವಸ್ಥಾನದಲ್ಲಿ ದೇವರ ಮೂರ್ತಿಗೆ ವಾಮಾಚಾರದಿಂದ ದಿಗ್ಬಂಧನ ವಿಧಿಸಿ ಕಳ್ಳತನ

    ದೇವಸ್ಥಾನದಲ್ಲಿ ದೇವರ ಮೂರ್ತಿಗೆ ವಾಮಾಚಾರದಿಂದ ದಿಗ್ಬಂಧನ ವಿಧಿಸಿ ಕಳ್ಳತನ

    ಚಿಕ್ಕಮಗಳೂರು: ದೇವಸ್ಥಾನದಲ್ಲಿ ದೇವರಿಗೆ ವಾಮಾಚಾರ ಮಾಡಿ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಇಲ್ಲಿನ ಇಂದಾವರ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಾಲಯದ ಸುತ್ತ ದಿಗ್ಬಂಧನ ಮಾಡಿ, ದೇವರ ಮೂರ್ತಿಯನ್ನು ತಂತಿಯಿಂದ ಸುತ್ತಿದ್ದಾರೆ. ದೇವಸ್ಥಾನದದಲ್ಲಿ ವಾಮಾಚಾರಕ್ಕೆ ಬಳಸಲಾಗಿರುವ ನಿಂಬೆಹಣ್ಣು, ಅರಿಶಿಣ, ಕುಂಕುಮ ಪತ್ತೆಯಾಗಿವೆ.

    ಕಳ್ಳರು ದೇವರ ಬೆಳ್ಳಿ ವಿಗ್ರಹ ಸೇರಿ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದೆ.

     

  • ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಚಿಕ್ಕಮಗಳೂರು: ಅಂದು ರೈತರ ಮೇಲೆ ಜೀಪ್ ಹತ್ತಿಸೋಕೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತೆ ತಮ್ಮ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ.

    ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಎಂಸಿ.ಹಳ್ಳಿಯ ಸರ್ವೆ ನಂಬರ್ 4ರಲ್ಲಿ 438 ಎಕರೆ ಜಾಗಕ್ಕೆ ನಾಲ್ಕು ದಶಕಗಳಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇದನ್ನೂ ಓದಿ: ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

    ಈಗ ಮತ್ತೆ ಈ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ರೈತರ ತೆಂಗಿನ ಮರಗಳನ್ನು ಕಡಿದು ಹಾಕಿ, ಅವರನ್ನ ಬಂಧಿಸಿ ಮನಸ್ಸೋ ಇಚ್ಛೆ ಮೈಮೇಲೆ ಬಾಸುಂಡೆ ಬರೋ ರೀತಿ ಥಳಿಸಿದ್ದಾರೆ. ಅರಣ್ಯ ಇಲಾಖೆ ಕಂದಾಯ ಭೂಮಿಗೆ ಬೇಲಿ ಹಾಕೋಕೆ ರೈತರ ಮೇಲೆ ದರ್ಪ ತೋರ್ತಿದ್ದಾರೆ. ಇದ್ರಿಂದ ರೋಸಿ ಹೋಗಿರೋ ರೈತರು, ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮಧ್ಯ ಪ್ರವೇಶಸಿ ಈ ಜಾಗ ಯಾರದ್ದೆಂದು ಸ್ಪಷ್ಟಪಡಿಸಲಿ, ಇಲ್ಲವಾದ್ರೆ ನಮಗೆ ಇಚ್ಛಾಮರಣಕ್ಕೆ ಅನುಮತಿ ನೀಡಿಲಿ ಎಂದು ಆಗ್ರಹಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.

  • ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಚಿಕ್ಕಬಳ್ಳಾಪುರ: ಆಶಾಕಾರ್ಯಕರ್ತೆಯೊಬ್ಬಳು ಜ್ವರದಿಂದ ಬಳಲುತ್ತಿದ್ದವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪವೊಂದು ಶಿಡ್ಲಘಟ್ಟ ತಾಲೂಕಿನಲ್ಲಿ ಕೇಳಿಬಂದಿದೆ

    ತಾಲೂಕಿನ ಮಾರಪ್ಪನಹಳ್ಳಿ ನಿವಾಸಿಗಳಾದ ನರಸಿಂಹಮೂರ್ತಿ ಹಾಗೂ ಬ್ಯಾಟಪ್ಪ ಎಂಬವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎನ್ನಲಾಗಿದೆ.

    ಏನಿದು ಘಟನೆ?: ಗ್ರಾಮದ ಆಶಾ ಕಾರ್ಯಕರ್ತೆ ಪದ್ಮಾವತಿ, ಜ್ವರ ಹಾಗೂ ಬಾಯಿ ಹುಣ್ಣಿನಿಂದ ಬಳಲುತ್ತಿದ್ದ 30 ವರ್ಷದ ನರಸಿಂಹಮೂರ್ತಿ ಹಾಗೂ 70 ವರ್ಷದ ಬ್ಯಾಟಪ್ಪ ಎಂಬವರನ್ನು ಕಳೆದ ಶುಕ್ರವಾರ ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾಳೆ. ಇದೀಗ ಶಸ್ತ್ರ ಚಿಕಿತ್ಸೆ ನಂತರ ನರಸಿಂಹಮೂರ್ತಿ ಪತ್ನಿ ಛಾಯಾ ಆಶಾಕಾರ್ಯಕರ್ತೆ ಪದ್ಮಾವತಿ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಆದ್ರೆ ಇದನ್ನ ನಿರಾಕರಿಸಿರುವ ಆಶಾಕಾರ್ಯಕರ್ತೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ಶುಕ್ರವಾರದ ಕ್ಯಾಂಪಿನಲ್ಲಿ 20 ಮಂದಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಎಲ್ಲರ ಒಪ್ಪಿಗೆಯನ್ನ ಪಡೆದೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಲವಂತವಾಗಿ ಯಾರಿಗೂ ಮಾಡಲು ಆಗುವುದಿಲ್ಲ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ವ್ಯಾಸೆಕ್ಟೆಮಿ ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರಿಗೂ ಸರ್ಕಾರದಿಂದ 1200 ರೂಪಾಯಿ ಹಾಗೂ ಆಶಾ ಕಾರ್ಯಕರ್ತೆಗೆ 200 ರೂಪಾಯಿ ಗೌರವಧನ ನೀಡಲಾಗುತ್ತದೆ. ಹೀಗಾಗಿ ಹಣದ ಆಸೆಗೆ ಆಶಾಕಾರ್ಯಕರ್ತೆ ಹೀಗೆ ಮಾಡಿದ್ದಾಳೆ ಅಂತ ನರಸಿಂಹಮೂರ್ತಿ ಸಂಬಂಧಿಕರು ದೂರಿದ್ದಾರೆ. ಈ ಕುರಿತು ಆಶಾಕಾರ್ಯಕರ್ತೆ ಮೇಲೆ ದೂರು ದಾಖಲಾಗುತ್ತಿದ್ದಂತೆ ಆಶಾ ಕಾರ್ಯಕರ್ತೆ ನರಸಿಂಹಮೂರ್ತಿಯವರ ಕಡೆಯ ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲು ಮುಂದಾಗಿದ್ದಾರೆ.

    ಸದ್ಯ ಈ ಘಟನೆ ಮಾರಪ್ಪನಹಳ್ಳಿ ಗ್ರಾಮದಲ್ಲಿ ರಾಜಕೀಯ ಬಣ್ಣ ಸಹ ಪಡೆದುಕೊಂಡಿದೆ. ಪರ ವಿರೋಧದ ನಡುವೆ ವಾದ-ವಿವಾದ ವಾಗ್ವಾದಗಳು ಜೋರಾಗಿ ನಡೆದಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.

  • ಹೆಸ್ರು, ಮನೆದೇವ್ರು ಒಂದೇ ಆಗಿರೋ ಸಿಎಂ ಅವರೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು- ಸಿ.ಟಿ ರವಿ

    ಹೆಸ್ರು, ಮನೆದೇವ್ರು ಒಂದೇ ಆಗಿರೋ ಸಿಎಂ ಅವರೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು- ಸಿ.ಟಿ ರವಿ

    ಚಿಕ್ಕಮಗಳೂರು: ಮುಖ್ಯಮಂತ್ರಿಗಳೇ ನಿಮ್ಮ ಹೆಸರು ಸಿದ್ದರಾಮಯ್ಯ, ಮನೆದೇವರು ಸಿದ್ದರಾಮೇಶ್ವರ. ದತ್ತಪೀಠವನ್ನ ನೀವೇ ಹಿಂದೂಗಳಿಗೆ ಒಪ್ಪಿಸಬೇಕು ಅಂತ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.

    ದತ್ತಜಯಂತಿ ಅಂಗವಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ ಬಳಿಕ ಮಾತನಾಡಿದ ಅವರು, ಓಟ್ ಬ್ಯಾಂಕ್ ರಾಜಕಾರಣ ಮಾಡೋದು ಬಿಟ್ಟು ಕಾನೂನಾತ್ಮಕ ಹಾಗೂ ದಾಖಲೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಿ. ನಾವ್ಯಾರು ದತ್ತಪೀಠವನ್ನ ಗುತ್ತೆಗೆ ಪಡೆದುಕೊಂಡಿಲ್ಲ. ಸಿಎಂ ಸಿದ್ದರಾಮಯ್ಯನವರೇ ಮುಂದೆ ನಿಂತು ದತ್ತಜಯಂತಿಯನ್ನ ಆಚರಿಸಬೇಕಿತ್ತು ಅಂತ ಹೇಳಿದ್ರು.

    ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ದತ್ತಪೀಠದ ವಿವಾದವನ್ನ ಬಗೆಹರಿಸುತ್ತೇವೆ. ದತ್ತಪೀಠವನ್ನ ಹಿಂದೂಗಳಿಗೆ ನೀಡಿ. ಬಾಬಾಬುಡನ್ ದರ್ಗಾವನ್ನ ಮುಸ್ಲಿಮರಿಗೆ ಒಪ್ಪಿಸುತ್ತೇವೆ ಎಂದರು. ಎರಡೂ ಸಮುದಾಯದವರಿಗೂ ಪ್ರಾರ್ಥನೆ ಸಲ್ಲಿಸೋದಕ್ಕೆ ಎರಡೂ ಕಡೆಯೂ ಪ್ರಾರ್ಥನಾ ಮಂದಿರವನ್ನ ನಿರ್ಮಿಸೋದಾಗಿ ಹೇಳಿದ್ರು.

  • ಸಿಎಂ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್‍ಪಿಗೆ ಹೃದಯಾಘಾತ

    ಸಿಎಂ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್‍ಪಿಗೆ ಹೃದಯಾಘಾತ

    ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್ಪಿಗೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

    ಶೇಖ್ ಹುಸೇನ್ ಮೃತಪಟ್ಟ ಡಿವೈಎಸ್ಪಿಯಾಗಿದ್ದು, ಇವರು ಇಂದು ಬೆಳಗ್ಗೆ ಹೃದಯಾಘಾತವಾಗಿ ಎನ್.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಹುಸೇನ್ ಅವರು ಚಿಕ್ಕಮಗಳೂರು ಗುಪ್ತಚರ ಇಲಾಖೆ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಸಿಎಂ ಎಲಿಕಾಪ್ಟರ್ ಟೆಕ್ ಆಫ್ ಆದ ಮೇಲೆ ಲೋ ಬಿಪಿ ಹಾಗೂ ಶುಗರ್ ನಿಂದ ಹೃದಯಾಘಾತವಾಗಿದೆ. ಕಳೆದ ರಾತ್ರಿ ಎನ್.ಆರ್.ಪುರದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಅವರು ಅಲ್ಲಿಂದ ಹುಬ್ಬಳ್ಳಿ ಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ.

  • ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಚಿಕ್ಕಮಗಳೂರು: ಡಿಸೆಂಬರ್ 1 ರಿಂದ 3ರವರೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಡಿಸೆಂಬರ್ 2ರಂದು ಬಾಬಾ ಬುಡನ್‍ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಅದೇ ದಿನ ಮುಸ್ಲಿಮರಿಗೆ ಈದ್‍ಮಿಲಾದ್ ಸಂಭ್ರಮ ಕೂಡಾ ಇದೆ. ದತ್ತಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆದ್ರೆ, ಅಂದೇ ಈದ್‍ಮಿಲಾದ್ ಅಂಗವಾಗಿ ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ.

    ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರಿಗೆ ಮೆರವಣಿಗೆಗೆ ಅನುಮತಿ ನೀಡಿದ್ದು, ಮಧ್ನಾಹ್ನದ ನಂತರ ಶೋಭಾಯಾತ್ರೆಗೆ ಅವಕಾಶ ಕಲ್ಪಿಸಿದೆ. 3 ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದೆ.

  • ತರಿಕೇರಿಯಲ್ಲಿ 20 ಅಡಿ ಆಳದ ಚಾನಲ್ ಗೆ ಬಿದ್ದ ಟ್ರ್ಯಾಕ್ಟರ್- ಓರ್ವ ಸಾವು

    ತರಿಕೇರಿಯಲ್ಲಿ 20 ಅಡಿ ಆಳದ ಚಾನಲ್ ಗೆ ಬಿದ್ದ ಟ್ರ್ಯಾಕ್ಟರ್- ಓರ್ವ ಸಾವು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಚಾನಲ್‍ಗೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ ಇಬ್ಬರಿಗೆ ಗಂಭೀರ ಗಾಯವಾಗಿರೋ ಘಟನೆ ನಡೆದಿದೆ.

    ಈ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಬಳಿ ನಡೆದಿದೆ. ಘಟನೆಯಿಂದಾಗಿ ಎಂ ಸಿ ಹಳ್ಳಿ ನಿವಾಸಿ ಬಸವರಾಜ್(46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಶಿವಲಿಂಗ ಹಾಗೂ ತಿಮ್ಮಯ್ಯ ಎಂಬವರು ಗಾಯಗೊಂಡಿದ್ದು, ಸದ್ಯ ಅವರನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಟ್ರ್ಯಾಕ್ಟರ್ ಎಂಸಿ ಹಳ್ಳಿಯಿಂದ ಚಾನಲ್ ದಾಟಿ ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ಪಲ್ಟಿಯಾಗುತ್ತಿದ್ದಂತೆಯೇ ಇಬ್ಬರು ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಚಾನಲ್‍ನಲ್ಲಿ ನೀರು ಇರುತ್ತಿದ್ದರೆ ಮೂವರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆ ಬಾಡಿಗೆಗೆ ಬಂದು ವಾಮಾಚಾರ – ಮಾಟ ತೆಗೆಸ್ತೀವೆಂದು 46 ಲಕ್ಷ ಪೀಕಿದ ಖದೀಮ ಜೋಡಿ

    ಮನೆ ಬಾಡಿಗೆಗೆ ಬಂದು ವಾಮಾಚಾರ – ಮಾಟ ತೆಗೆಸ್ತೀವೆಂದು 46 ಲಕ್ಷ ಪೀಕಿದ ಖದೀಮ ಜೋಡಿ

    ಚಿಕ್ಕಮಗಳೂರು: ಮನೆ ಬಾಡಿಗೆಗೆ ಬಂದ ಜೋಡಿ ಮನೆ ಮಾಲೀಕರಿಂದಲೇ 46 ಲಕ್ಷ ರುಪಾಯಿ ವಸೂಲಿ ಮಾಡಿದ ಘಟನೆ ಚಿಕ್ಕಮಗಳೂರಿನ ಶಂಕರಪುರದಲ್ಲಿ ನಡೆದಿದೆ.

    ಅಜೀಜ್ ಹಾಗು ಜ್ಯೋತಿ ಅನ್ನೋರು ಲಿವಿಂಗ್ ಟುಗೆದರ್ ರಿಲೇಷನ್‍ಶಿಪ್ ಇಟ್ಕೊಂಡಿದ್ದು, ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದೀವಿ ಅಂತ ಹೇಳಿ ರೇಣುಕಮ್ಮ ಅನ್ನೋರ ಮನೆಗೆ ಬಾಡಿಗೆಗೆ ಬಂದ್ರು. ಆದ್ರೆ ರೇಣುಕಮ್ಮನವರ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಖತರ್ನಾಕ್ ಜೋಡಿ ನಿಮ್ಮ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದಕ್ಕೆ ಅವರು ಸತ್ತು ಹೋದ್ರು ಎಂದೆಲ್ಲಾ ಹೇಳಿದ್ದರು.

    ನಿಮಗೂ, ನಿಮ್ಮ ಮಕ್ಕಳಿಗೂ ಮಾಟ-ಮಂತ್ರ ಮಾಡಿಸಿದ್ದಾರೆ. ಆಂಧ್ರದಲ್ಲಿ ಪವರ್‍ಫುಲ್ ಸ್ವಾಮೀಜಿ ಹತ್ರ ಹೋದ್ರೆ ನಿಮ್ಮ ಕಷ್ಟವೆಲ್ಲಾ ಬಗೆಹರಿಯುತ್ತೆ ಅಂತ ಹೇಳಿ 46 ಲಕ್ಷ ಹಣ ಕಿತ್ತಿದ್ದರು.

    ಕೊನೆಗೆ ಸಿಸಿಟಿವಿ ಪರಿಶೀಲಿಸಿದಾಗ ಇವರೇ ಆ ಕೆಲಸ ಮಾಡಿರೋದು ಗೊತ್ತಾಗಿದೆ. ಈ ನಯವಂಚಕರ ಬಗ್ಗೆ ಗೊತ್ತಾಗ್ತಿದ್ದಂತೆ ರೇಣುಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

  • ಬೇಲಿ ಪಕ್ಕ ಒದ್ದಾಡ್ತಾ ತೆವಳ್ತಿದ್ದ ನಾಗರಹಾವು- ಬಾಲ ಹಿಡಿದು ಮೇಲೆತ್ತಿದಾಗ ಮತ್ತೊಂದು ನಾಗರಹಾವನ್ನ ಕಕ್ಕಿತು

    ಬೇಲಿ ಪಕ್ಕ ಒದ್ದಾಡ್ತಾ ತೆವಳ್ತಿದ್ದ ನಾಗರಹಾವು- ಬಾಲ ಹಿಡಿದು ಮೇಲೆತ್ತಿದಾಗ ಮತ್ತೊಂದು ನಾಗರಹಾವನ್ನ ಕಕ್ಕಿತು

    ಚಿಕ್ಕಮಗಳೂರು: ಒಂದು ಹಾವು ಮತ್ತೊಂದು ಹಾವನ್ನು ನುಂಗೋದು ಸಹಜ. ಆದರೆ ಒಂದು ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗೋದಿಲ್ಲ. ಒಂದು ವೇಳೆ ನುಂಗಿದರೂ ಅದು ಅಪರೂಪ. ಅಂತಹಾ ಒಂದು ಅಪರೂಪದ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.

    ನಗರದ ಹೌಸಿಂಗ್ ಬೋರ್ಡ್‍ನಲ್ಲಿ ನಾಗರ ಹಾವೊಂದು ಮತ್ತೊಂದು ನಾಗರಹಾವನ್ನು ನುಂಗಿ ಸಂಚರಿಸೋಕೆ ಆಗದೆ ಬೇಲಿಯ ಪಕ್ಕದಲ್ಲಿ ನಿಧಾನವಾಗಿ ಒದ್ದಾಡಿಕೊಂಡು ತೆವಳುತ್ತಿತ್ತು. ಕೂಡಲೇ ಸ್ಥಳೀಯರು ಇದನ್ನು ಗಮನಿಸಿದ್ದು, ತಕ್ಷಣ ಸ್ನೇಕ್ ನರೇಶ್ ಎಂಬವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ವಿಚಾರ ತಿಳಿದ ನರೇಶ್ ಅವರು ಸ್ಥಳಕ್ಕೆ ಬಂದು ಹಾವನ್ನು ನೋಡಿ ರಕ್ಷಣೆ ಮಾಡಿದ್ದಾರೆ. ಆದರೆ ಅದು ಮತ್ತೊಂದು ಹಾವನ್ನು ನುಂಗಿದೆ ಎಂದು ಅವರಿಗೂ ಕೂಡ ಮೊದಲು ತಿಳಿದಿರಲಿಲ್ಲ. ನಂತರ ಹಾವಿನ ಬಾಲವನ್ನು ಹಿಡಿದು ಮೇಲೆತ್ತಿದ ಕೂಡಲೇ ಹೊಟ್ಟೆಯೊಳಗಿದ್ದ ಹಾವನ್ನು ಕಕ್ಕಿ ಹೊರಬೀಳಿಸಿದೆ.

    ಹೊಟ್ಟೆ ಒಳಗಿದ್ದ ಹಾವು ಸತ್ತು ಹೋಗಿತ್ತು. ಬದುಕಿರುವ ನಾಗರಹಾವನ್ನು ಸ್ನೇಕ್ ನರೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.