Tag: Chikkamagaluru

  • ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ

    ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ

    ಚಿಕ್ಕಮಗಳೂರು: ಪೊಲೀಸ್ ಪೇದೆ ವೃದ್ಧರೊಬ್ಬರನ್ನು ದರದರನೆ ಎಳೆದು ದೇಗುಲದ ಬಳಿ ಬಿಸಾಡಿ ಖಾಕಿ ದರ್ಪ ತೋರಿರುವ ಅಮಾನವೀಯ ಘಟನೆ ಶೃಂಗೇರಿಯಲ್ಲಿ ನಡೆದಿದೆ.

    ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್. ಡಿ ದೇವೇಗೌಡ ಅವರ ಕುಟುಂಬ ಪೂರ್ಣಯಾಗ ಕಾರ್ಯಕ್ರಮ ಹಾಗೂ ಸಂಕ್ರಾಂತಿ ಹಿನ್ನಲೆ ಭಾನುವಾರ ಶಾರದಾ ಪೀಠ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವೃದ್ಧರೊಬ್ಬರು ದೇವಾಲಯಕ್ಕೆ ಆಗಮಿಸಿದ್ದಾರೆ. ಆದರೆ ಜನರು ಹೆಚ್ಚಾಗಿದ್ದ ಹಿನ್ನೆಲೆ ಮಹಾದ್ವಾರದ ಬಳಿ ಕುಳಿತು ಕೊಂಡಿದ್ದಾರೆ. ಆದರೆ ಅಲ್ಲಿಗೆ ಬಂದ ಪೊಲೀಸ್ ಪೇದೆ ವೃದ್ಧರನ್ನು ಎಳೆದು ಮಹಾದ್ವಾರದಿಂದ ಹೊರಗೆ ಬೀಸಾಡಿದ್ದಾರೆ.

    ವೃದ್ಧರನ್ನು ಎಳೆದು ಕೊಂಡು ಹೋಗುತ್ತಿರುವ ಪೊಲೀಸ್ ಪೇದೆಯ ದರ್ಪ ಕೃತ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

    ಈ ವೇಳೆ ಪೊಲೀಸ್ ಪೇದೆ ವರ್ತನೆ ಕಂಡು ವೃದ್ಧರು ಕಂಗಾಲಾಗಿದ್ದಾರೆ. ನೂರಾರು ಜನರು ಸ್ಥಳದಲ್ಲೇ ಇದ್ದರು ಯಾರು ಪೇದೆಯ ವರ್ತನೆಯನ್ನು ತಡೆಯಲು ಯತ್ನಿಸಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸ್ ಪೇದೆಯ ವರ್ತನೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=rbzFV1X9PZQ

  • ಸಿಎಂ ಕೂಡ ಒಬ್ಬ ಭಯೋತ್ಪಾದಕ- ಶಾಸಕ ಸಿಟಿ ರವಿಯಿಂದ ಗಂಭೀರ ಆರೋಪ

    ಸಿಎಂ ಕೂಡ ಒಬ್ಬ ಭಯೋತ್ಪಾದಕ- ಶಾಸಕ ಸಿಟಿ ರವಿಯಿಂದ ಗಂಭೀರ ಆರೋಪ

    ಚಿಕ್ಕಮಗಳೂರು: ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾನೆ ಅಂತ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಯೋತ್ಪಾದನೆ ರೀತಿಯಲ್ಲಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ. ಯಾಕಂದ್ರೆ ಅವರ ಮಾತಿನಲ್ಲಿ ಬೆದರಿಕೆ ಇದೆ. ದಾಸ್ಯ ಇದೆ. ದುರಹಾಂಕಾರ ಇದೆ. ನಾವು ಯಾವತ್ತು ದುರಹಾಂಕಾರ ಮಾತು ಆಗಲಿ, ಬೆದರಿಕೆ ರೀತಿ ಮಾತಾನಾಡಿಲ್ಲ ಅಂದ್ರು.

    ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂದ್ರೆ ಹೇಗೆ? ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂತಾ ಕರೆಯೋದಕ್ಕೆ ಯಾವ ಡಿಕ್ಷನರಿ ಓದಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಭಯೋತ್ಪಾದನೆ ಅನ್ನೋದಕ್ಕೆ ಡಿಕ್ಷನರಿ ಬೇರೆ ಅರ್ಥ ಅದನ್ನ ರಾಮಲಿಂಗಾರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಲಿ ಅಂತ ಟಾಂಗ್ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ತಾಲಿಬಾಲ್ ಹಾಗೂ ನಕ್ಸಲ್ ಜೊತೆ ನಂಟು ಇಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಯಾವತ್ತು ಉಗ್ರ ಆಗೋಕೆ ಸಾಧ್ಯವಿಲ್ಲ. ಹಿಂದೂ ಹಾಗೊಮ್ಮೆ ಹೀಗೊಮ್ಮೆ ವ್ಯಾಘ್ರವಾಗಬಹುದು ಆದ್ರೆ ಉಗ್ರ ಆಗೋಕೆ ಸಾಧ್ಯವಿಲ್ಲ ಅಂತ ಅವರು ಹೇಳಿದ್ದಾರೆ.

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಬಂಧನ

    ಚಿಕ್ಕಮಗಳೂರು: ಮೂಡಿಗೆರೆ ಧನ್ಯಶ್ರೀ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‍ನನ್ನು ಚಿಕ್ಕಮಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.

    ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೇಕಾರ್ ಗ್ರಾಮದವನೆಂದು ತಿಳಿದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಊರನ್ನು ಬಿಟ್ಟು ತಲೆಮರೆಸಿಕೊಂಡಿದ್ದ ಸಂತೋಷ್ ನನ್ನು ಮೂಡಿಗೆರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಧನ್ಯಶ್ರೀ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದ ಸಂತೋಷ್, ಅದನ್ನು ಸ್ಕ್ರೀನ್ ಶಾಟ್ ತೆಗೆದು ಹಿಂದೂಪರ ಸಂಘಟನೆಗಳ ಗ್ರೂಪ್ ಗೆ ಹಾಕಿದ್ದನು. ಅಲ್ಲದೇ ಕರೆ ಮಾಡಿ ಧನ್ಯಶ್ರೀ ಹಾಗೂ ತಾಯಿ ಸರಸ್ವತಿಗೆ ಧಮ್ಕಿ ಹಾಕಿದ್ದನು.

    ಏನಿದು ಪ್ರಕರಣ: ಕಳೆದ ಕೆಲ ದಿನಗಳ ಹಿಂದೆ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು. ಈ ಪ್ರಕರಣದಲ್ಲಿ ಯುವತಿ ಆತ್ಮಹತ್ಯಗೆ ಮಾಡಿಕೊಳ್ಳುವ ನೈತಿಕ ಪೊಲೀಸ್‍ಗಿರಿ ಕಾರಣ ಎಂದು ತಿಳಿದು ಬಂದಿತ್ತು.

    ಧನ್ಯಶ್ರೀ ಆತ್ಮಹತ್ಯೆ ನಂತರ ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರು, ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿರೋ ಸಂಘಟನಾಕಾರರು ಹಾಗೂ ವ್ಯಕ್ತಿಗಳ ಬಗ್ಗೆ ಹಾವಿನ ಜೊತೆ ಸರಸವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮೃತ ಧನ್ಯಶ್ರೀಗೆ ಸಂತೋಷ್ ಸೇರಿದಂತೆ ಐವರು ಸಂಘಟನೆ ಕಾರ್ಯಕರ್ತರು ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾವಿಗೂ ಮುನ್ನ 36 ಗಂಟೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆ ಇದ್ದದ್ದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಹೇಳಿದ್ದರು. ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ಹೋಗಿ ಬಂದಿರೋ ದಾಖಲೆ ಇದೆ. ಅವರ ಮನೆಗೆ ಹೋಗಿ ಹೆತ್ತವರ ಎದುರೇ ಸೊಂಟದ ಕೆಳಗಿನ ಭಾಷೆಯಲ್ಲಿ ಬಾಯಿಗೆ ಬಂದಂತೆ ಬಯ್ದಿರೋದು ಗೊತ್ತಾಗಿದೆ. ಎರಡು, ಮೂರು, ನಾಲ್ಕನೇ ತಾರೀಖು ಬೋಲ್ಡ್ ಆಗಿದ್ದ ಧನ್ಯಶ್ರೀ ಐದನೇ ತಾರೀಖು, ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    https://www.youtube.com/watch?v=RFSQfZFZs4Y

    https://youtu.be/H8lL8K6TcM8

  • ಹೊಸವರ್ಷದಂದು ಮನೆಗೆ ನುಗ್ಗಿ ಮಹಿಳೆ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಅತ್ಯಾಚಾರ

    ಹೊಸವರ್ಷದಂದು ಮನೆಗೆ ನುಗ್ಗಿ ಮಹಿಳೆ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಅತ್ಯಾಚಾರ

    ಚಿಕ್ಕಮಗಳೂರು: ಹೊಸ ವರ್ಷದಂದು ಮನೆಗೆ ನುಗ್ಗಿ ದಲಿತ ಮಹಿಳೆಯ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮದಲ್ಲಿ ನಡೆದಿದೆ.

    ಬಿಜಿಪಿ ಕಾರ್ಯಕರ್ತ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನರೇಂದ್ರ ಹೆಗ್ಗಡೆ ವಿರುದ್ಧ ದಲಿತ ಮಹಿಳೆ ದೂರು ನೀಡಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಡಿಸೆಂಬರ್ 31 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ನರೇಂದ್ರ ಹೆಗ್ಗಡೆ ವಿದ್ಯಾರಣ್ಯಪುರ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷನಾಗಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಸಕ್ರೀಯವಾಗಿ ಬಿಜೆಪಿ ಕಾರ್ಯಕರ್ತನಾಗಿದ್ದನು. ಡಿಸೆಂಬರ್ 31ರಂದು ನಾನು ಒಬ್ಬಳೇ ಇರುವುದನ್ನು ತಿಳಿದುಕೊಂಡು ಮನೆಗೆ ನುಗ್ಗಿ ಕುಡಿದ ಮತ್ತಿನಲ್ಲಿ ಏಕಾಏಕಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಮಂಗಳವಾರ ಶೃಂಗೇರಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

    ಶೃಂಗೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ನರೇಂದ್ರ ಹೆಗ್ಗಡೆ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

    ಚಿಕ್ಕಮಗಳೂರು: ಜಿಲ್ಲೆಯ ಧನ್ಯಶ್ರೀ ಸಾವಿಗೆ ಕಾರಣ ನೈತಿಕ ಪೊಲೀಸ್‍ಗಿರಿ ಎಂಬುದು ಬಹಿರಂಗವಾಗಿದೆ. ಹಿಂದೂ ಪರ ಸಂಘಟನೆಗಳ ಹೆಸರಿನಲ್ಲಿ ಕರೆ ಬಂದಿದ್ದು ನಿಜ ಎಂದು ಧನ್ಯಶ್ರೀ ತಾಯಿ ಸರಸ್ವತಿ ಒಪ್ಪಿಕೊಂಡಿದ್ದಾರೆ.

    15 ನಿಮಿಷಗಳ ಆಡಿಯೋದಲ್ಲಿ ಮನಬಿಚ್ಚಿ ಮಾತನಾಡಿರುವ ಧನ್ಯಶ್ರೀ ತಾಯಿ ಸರಸ್ವತಿ, ಹಿಂದೂ ಪರ ಸಂಘಟನೆಗಳು ಬೆದರಿಕೆ ಹಾಕಿದ್ದು ನಿಜ. ಆದ್ರೆ ಧಮ್ಕಿ ಹಾಕಿದ್ದು ಮೂಡಿಗೆರೆ ಬಜರಂಗದಳದವರಲ್ಲ. ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿಯ ಬಜರಂಗದಳದವರು ಅಂತಾ ಹೇಳಿದ್ದಾರೆ. ಅಲ್ಲದೆ ನನ್ನ ಮಗಳು ಡೆತ್‍ನೋಟ್‍ನಲ್ಲಿ ಎಲ್ಲವನ್ನೂ ಬರೆದಿದ್ದಾಳೆ. ಬಜರಂಗದಳದ ಹೆಸರಿನಲ್ಲಿ ನನ್ನ ಗಂಡನಿಗೆ ಕರೆ ಮಾಡಿ ಧಮ್ಕಿ ಹಾಕಲಾಗಿತ್ತು ಅಂತ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಆಡಿಯೋದಲ್ಲೇನಿದೆ?: ಬಜರಂಗದಳದವರು ಅಂತ ಹೇಳಿಕೊಂಡು ನನ್ನ ಮನೆಯವರ ಮೊಬೈಲ್ ಗೊಂದು ಕರೆ ಬಂತು. ಅದನ್ನು ನಾನು ಪಿಕ್ ಮಾಡಿ ಮಾತನಾಡಿದೆ. ನಿನ್ನೆಯಿಂದ ಕರೆ ಮಾಡುತ್ತಿರಲ್ವ ನೀವು ಯಾರು ಅಂದೆ. ಅದಕ್ಕೆ ಆತ ನಾನು ಬೆಳ್ತಂಗಡಿಯಿಂದ. ನೀವು ಧನ್ಯ ಶ್ರೀ ತಾಯಿಯಲ್ವ ಎಂದು ಕೇಳಿದ್ರು. ಆವಾಗ ಹೌದು ನಾನು ತಾಯಿನೇ ಏನಾಗ್ಬೇಕಿತ್ತು? ನೀವು ಯಾರು ಅಂದೆ. ಆದ್ರೆ ಆ ವ್ಯಕ್ತಿ ಹೆಸರು ಹೇಳಲಿಲ್ಲ. ಆದ್ರೆ ಆತ ನಾನು ಬಜರಂಗದಳದವನು. ನಿಮ್ಮ ಮಗಳನ್ನು ಏನು ಮುಸ್ಲಿಮ್ಸ್ ಗೆ ಸಹಾಯ ಮಾಡಕೆ ಬಿಡ್ತೀರಾ ಅಂತ ಕೇಳಿದ. ಅದಕ್ಕೆ ನಾನು ಯಾಕೆ. ನನ್ನ ಮಗಳು ಆ ಥರದವಳಲ್ಲ. ನನ್ನ ಮಗಳು ಏನು? ಹೇಗೆ? ಅಂತ ನನಗೆ ಚೆನ್ನಾಗಿ ತಿಳಿದಿದೆ ಅಂದೆ. ಆವಾಗ ಆತ ನೋಡಿ ದಯವಿಟ್ಟು ನಿಮ್ಮ ಕಾಲು ಹಿಡಿಯುತ್ತೀನಿ. ಮುಸ್ಲಿಮ್ಸ್ ಗೆ ಸಪೋರ್ಟ್ ಮಾಡ್ಬೇಡಿ ಅಂದ. ಇದನ್ನೂ ಓದಿ: ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

    ಬಳಿಕ ಮಗಳು ಕಾಲೇಜಿನಿಂದ ಬಂದ ಬಳಿಕ ನಾನು ಆಕೆಯಲ್ಲಿ ನೀನು ವಾಟ್ಸಪ್ ನಲ್ಲಿ ಫೋಟೋ ಹಾಕಿದ್ದಿಯಾ ಅಂತ ಕೇಳಿದೆ. ಅದಕ್ಕವಳು ನಿನಗೆ ತೋರಿಸಿದೆ ಅಲ್ವ ಅಮ್ಮಾ ವಾಟ್ಸಪ್ ಡಿಪಿಗೆ ಕಣ್ಣಿನ ಫೋಟೋ ಹಾಕಿದ್ದೆ ಅಂದ್ಳು. ಇದಾದ ಬಳಿಕ ಮತ್ತೆ ಮತ್ತೆ ಅದೇ ನಂಬರಿನಿಂದ ಕರೆ ಬರುತ್ತಾ ಇತ್ತು. ಅಲ್ಲದೇ ಆತ ಹೆದರಿಸುತ್ತಾ ಇದ್ದನಂತೆ. ನಮ್ಮ ಮನೆಯವರಿಗೆ ಬೈದನಂತೆ. ಮುಸ್ಲಿಮ್ ಹುಡುಗರಿಗೆ ಯಾಕ್ ಮದುವೆ ಮಾಡಿಕೊಡ್ತೀರಿ. ನಿಮಗೆ ಹಿಂದೂ ಹುಡುಗರು ಸಿಕ್ಕಿಲ್ವ ಅಂತೆಲ್ಲಾ ಹೇಳಿದ್ದಾನಂತೆ. ಬಜರಂಗದಳದವರು ವಿಚಾರಿಸ್ತೀನಿ ಅಂತ ಹೇಳಿದ್ದಾರಂತೆ. ನಿನ್ನ ಮೆಸೇಜ್ ಎಲ್ಲಾ ಕಡೆ ಹರಡಿದೆ ಅಂತ ಹೇಳಿದವರು ನಮ್ಮ ಮನೆಗೆ ಬಂದು ಸರಿಮಾಡಬಹುದಿತ್ತು. ಈ ಘಟನೆ ನಡೆದ ಮಾರನೇ ದಿನವೇ ಮಗಳ ಜೀವವೇ ಹೋಯ್ತಲ್ಲ ಅಂತ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯ ಶ್ರೀ ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

    https://www.youtube.com/watch?v=bPDNxnjLe6E

    https://www.youtube.com/watch?v=bFv6ywT51-Y

  • ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

    ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನೈತಿಕ ಪೊಲೀಸ್‍ಗಿರಿಗೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

    ಈ ಪ್ರಕರಣದ ಸಂಬಂಧ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅನಿಲ್ ನನ್ನು ಬಂಧಿಸಲಾಗಿದೆ. ವಾಟ್ಸಪ್ ಸಂದೇಶ ನೋಡಿ ಅನಿಲ್ ಧನ್ಯಶ್ರೀ ಜೊತೆ ಮಾತನಾಡಿ ಬಳಿಕ ಪೋಷಕರಿಗೆ ವಿಚಾರ ತಿಳಿಸಿ ಮಗಳಿಗೆ ಬುದ್ಧಿವಾದ ಹೇಳುವಂತೆ ಹೇಳಿದ್ದಾನೆ. ಈ ಎಲ್ಲ ಘಟನೆಯಿಂದ ಮನನೊಂದು ಧನ್ಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವ ಪ್ರಾಥಮಿಕ ಮಾಹಿತಿ ಪೊಲೀಸ್ ತನಿಖೆಯಿಂದ ಈಗ ಬೆಳಕಿಗೆ ಬಂದಿದೆ.

    ಮೆಸೇಜ್ ನಲ್ಲಿ ಏನಿತ್ತು?
    ಧನ್ಯಶ್ರೀ ವಾಟ್ಸಪ್ ನಲ್ಲಿ ಮಂಗಳೂರು ಮೂಲದ ಸಂತೋಷ್ ಎಂಬಾತನ ಜೊತೆ ಚಾಟ್ ಮಾಡಿದ್ದಾಳೆ. ಧನ್ಯಶ್ರೀ ಮೆಸೇಜ್‍ಗಳಲ್ಲಿ ಅನ್ಯಕೋಮಿನ ಪರ ಮಾತನಾಡಿದ್ದಾಳೆ. ಅಷ್ಟೇ ಅಲ್ಲದೇ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದಾಳೆ. ಜೊತೆಗೆ ಇದೇ ವಿಚಾರವಾಗಿ ಆತನೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾಳೆ. ಅವಳೊಂದಿಗೆ ಮೆಸೇಜ್‍ನಲ್ಲಿ ಮಾತನಾಡಿದ ಸ್ನೇಹಿತ ಆ ಸಂದೇಶಗಳನ್ನ ಸ್ಕ್ರೀನ್ ಶಾಟ್ ತೆಗೆದು ಮೂಡಿಗೆರೆ ಬಜರಂಗದಳದ, ಹಿಂದೂಪರ ಸಂಘಟನೆಗಳ ಗುಂಪಿಗೆ ಹಾಕಿದ್ದ. ಈ ಮೆಸೇಜ್ ನೋಡಿ ಅನಿಲ್ ಧನ್ಯಶ್ರೀ ಪೋಷಕರ ಜೊತೆ ಮಾತನಾಡಿ ಮಗಳಿಗೆ ಬುದ್ಧಿವಾದ ಹೇಳುವಂತೆ ಹೇಳಿದ್ದ.

    ಮೊದಲಿಗೆ ಯಾವಾಗಲು ಮೊಬೈಲ್‍ ನಲ್ಲಿ ಇರುತ್ತೀಯ, ಓದುವುದಿಲ್ಲ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಧನ್ಯಶ್ರೀ ತಂದೆ ಮೂಡಿಗೆರೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಘಟನೆ ಸಂಬಂಧ ಎಫ್‍ಐಆರ್ ಕೂಡ ಅದೇ ರೀತಿ ದಾಖಲಾಗಿತ್ತು. ಆದರೆ ಧನ್ಯಶ್ರೀ ಮೊಬೈಲ್‍ನಲ್ಲಿ ತನ್ನ ಸ್ನೇಹಿತನ ಜೊತೆ ತುಳುವಿನಲ್ಲಿ ಮಾಡಿರುವ ಮೆಸೇಜ್‍ಗಳು ದೊರೆತ್ತಿದ್ದು, ಈ ಸಾವು ಮೊಬೈಲ್‍ಗಾಗಿ ಆಗಿರುವಂತದ್ದಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

    ಸಂಘಟನೆಯವರು ಧನ್ಯಶ್ರೀ ಮನೆಗೆ ಹೋಗಿ ನಿಮ್ಮ ಮಗಳು ಅನ್ಯಕೋಮಿನ ಹುಡುಗನ ಜೊತೆ ಓಡಾಡುತ್ತಿದ್ದಾಳೆ. ಸ್ವಲ್ಪ ಬುದ್ಧಿ ಹೇಳಿ ಎಂದಿದ್ದು, ಆಕೆಗೂ ಹೆದರಿಸಿದ್ದರು. ಈ ವಿಷಯ ತಿಳಿದ ತಂದೆ ಆಕೆಗೆ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಸಾಲದಕ್ಕೆ ಈ ವಿಷಯ ಮನೆಯ ಅಕ್ಕಪಕ್ಕದವರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ಗೊತ್ತಾಗಿದೆ ಎಂದು ಧನ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

    ಧನ್ಯಶ್ರೀ ಜೊತೆ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದ ಮಂಗಳೂರಿನ ಸಂತೋಷ್ ಯಾರು ಎನ್ನುವುದು ತಿಳಿದುಬಂದಿಲ್ಲ. ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನು ಓದಿ: ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

     

  • ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ- ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿದ್ದ ಯುವತಿ

    ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧನ್ಯಶ್ರೀ ಸಾವಿಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

    ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯಶ್ರೀ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯಾವಾಗಲು ಮೊಬೈಲ್‍ಲ್ಲಿ ಇರುತ್ತೀಯ, ಓದುವುದಿಲ್ಲ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಂದೆ ಮೂಡಿಗೆರೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಘಟನೆ ಸಂಬಂಧ ಎಫ್‍ಐಆರ್ ಕೂಡ ಅದೇ ರೀತಿ ದಾಖಲಾಗಿತ್ತು. ಆದರೆ ಧನ್ಯಶ್ರೀ ಮೊಬೈಲ್‍ನಲ್ಲಿ ತನ್ನ ಸ್ನೇಹಿತನ ಜೊತೆ ತುಳುವಿನಲ್ಲಿ ಮಾಡಿರುವ ಮೆಸೇಜ್‍ಗಳು ದೊರೆತ್ತಿದ್ದು, ಈ ಸಾವು ಮೊಬೈಲ್‍ಗಾಗಿ ಆಗಿರುವಂತದ್ದಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

    ಧನ್ಯಶ್ರೀ ಆ ಮೇಸೆಜ್‍ಗಳಲ್ಲಿ ಅನ್ಯಕೋಮಿನ ಪರ ಮಾತನಾಡಿದ್ದಾಳೆ. ಅಷ್ಟೇ ಅಲ್ಲದೇ ಐ ಲವ್ ಮುಸ್ಲಿಮ್ಸ್ ಎಂದು ಮೇಸೆಜ್ ಮಾಡಿದ್ದಾಳೆ. ಜೊತೆಗೆ ಇದೇ ವಿಚಾರವಾಗಿ ಆತನೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾಳೆ. ಅವಳೊಂದಿಗೆ ಮೆಸೇಜ್‍ನಲ್ಲಿ ಮಾತನಾಡಿದ ಸ್ನೇಹಿತ ಆ ಸಂದೇಶಗಳನ್ನ ಸ್ಕ್ರೀನ್ ಶಾಟ್ ತೆಗೆದು ಕೆಲ ಸಂಘಟನೆಗಳ ಗುಂಪಿಗೆ ಹಾಕಿದ್ದಾನೆ. ಆ ಸಂಘಟನೆಯವರು ಧನ್ಯಶ್ರೀ ಮನೆಗೆ ಹೋಗಿ ನಿಮ್ಮ ಮಗಳು ಅನ್ಯಕೋಮಿನ ಹುಡುಗನ ಜೊತೆ ಓಡಾಡುತ್ತಿದ್ದಾಳೆ. ಸ್ವಲ್ಪ ಬುದ್ಧಿ ಹೇಳಿ ಎಂದಿದ್ದು, ಆಕೆಗೂ ಹೆದರಿಸಿದ್ದಾರೆ.

    ಈ ವಿಷಯ ತಿಳಿದ ತಂದೆ ಆಕೆಗೆ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಸಾಲದಕ್ಕೆ ಈ ವಿಷಯ ಮನೆಯ ಅಕ್ಕಪಕ್ಕದವರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ಗೊತ್ತಾಗಿದೆ ಎಂದು ಧನ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಧನ್ಯಶ್ರೀ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆಂದು ಹೇಳಲಾಗುತ್ತಿದೆ. ಆದರೆ ಆ ಡೆತ್ ನೋಟ್ ಎಲ್ಲಿದೆ, ಏನಾಯ್ತು ಎಂಬ ಮಾಹಿತಿ ಇದುವರೆಗೂ ಹೊರಬಂದಿಲ್ಲ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆಯಿಂದ ಧನ್ಯಶ್ರಿ ಸಾವಿಗೆ ಸೂಕ್ತ ಕಾರಣ ತಿಳಿದು ಬರಬೇಕಿದೆ.

     

  • ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

    ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರ ಸಾಧನ ಸಮಾವೇಶದ ವೇಳೆ ತನ್ನ ನೋವು ತೋಡಿಕೊಳ್ಳಲು ಬಂದ ವಿಕಲಚೇತನರೊಬ್ಬರನ್ನು ಪೊಲೀಸರು ಎಳೆದು ಹೊರಹಾಕಿರೋ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಕಡೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸಾರುತ್ತಿರೋ ಸಾಧನಾ ಸಮಾವೇಶ ನಡೆಯುತ್ತಿತ್ತು. ಈ ವೇಳೆ ವಿಕಲಚೇತನರೊಬ್ಬರು ತಮಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದರ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗದಿರುವುದರಿಂದ ಮನನೊಂದು ಸಿಎಂ ಅವರಿಗೆ ಕೊಡಲೆಂದು ಮನವಿ ಪತ್ರ ಹಿಡಿದು ಹೋಗುತ್ತಿದ್ದರು. ಇದನ್ನೂ ಓದಿ: ಬಿಎಸ್‍ವೈ ಅವರಲ್ಲಿ ರಕ್ತ ಎಷ್ಟಿದೆ: ಸಿಎಂ ಪ್ರಶ್ನೆ

    ಈ ವೇಳೆ ಅಲ್ಲಿದ್ದಂತಹ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ಇದ್ದರೂ ವಿಕಲಚೇತನರ ಮನವಿಯೇನೆಂದು ಕೇಳಲಿಲ್ಲ. ಅಲ್ಲದೇ ಅವರತ್ತ ತಮ್ಮ ಗಮನವನ್ನೂ ಹರಿಸಿಲ್ಲ. ಇನ್ನು ಪೊಲೀಸರು ಮಾನವೀಯತೆ ಮರೆತವರಂತೆ ಅವರನ್ನು ಎಳೆದು ಹೊರಹಾಕಿದ್ದಾರೆ.

    https://www.youtube.com/watch?v=0xSkqyPkZZU

  • ಚುನಾವಣೆಗೂ ಮೊದ್ಲು ಅತಿರುದ್ರ ಮಹಾಯಾಗ- ಶೃಂಗೇರಿ ಮಠದಲ್ಲಿ ದೇವೇಗೌಡ, ರೇವಣ್ಣ ಪೂಜೆ

    ಚುನಾವಣೆಗೂ ಮೊದ್ಲು ಅತಿರುದ್ರ ಮಹಾಯಾಗ- ಶೃಂಗೇರಿ ಮಠದಲ್ಲಿ ದೇವೇಗೌಡ, ರೇವಣ್ಣ ಪೂಜೆ

    ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಜೊತೆ ಜಿಲ್ಲೆಯ ಶೃಂಗೇರಿಗೆ ಅಗಮಿಸಿದ್ದಾರೆ.

    ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಅಗಮಿಸಿದ ಹೆಚ್‍ಡಿಡಿ ಕುಟುಂಬ, ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ಅವರನ್ನ ಭೇಟಿ ಮಾಡಿದ್ದಾರೆ.

    ಬಳಿಕ ಶಾರಾದಾಂಬೆಯ ದರ್ಶನ ಪಡೆದಿದ್ದಾರೆ. ನಾಳೆಯಿಂದ ಶ್ರೀ ಮಠದ 150 ಪುರೋಹಿತರ ನೇತೃತ್ವದಲ್ಲಿ ಅತಿ ರುದ್ರ ಮಹಾಯಾಗ ನಡೆಯಲಿದೆ. ಈ ಯಾಗ 12 ದಿನ ನಡೆಯಲಿದ್ದು, ಜನವರಿ 14 ರಂದು ಪೂರ್ಣಾಹುತಿಯಾಗಲಿದೆ.

    ಶ್ರೀಮಠದ ಅವರಣದಲ್ಲಿರುವ ಯಾಗ ಮಂಟಪ ನಡೆಯಲಿರುವ ಅತಿ ಮಹಾರುದ್ರಯಾಗವನ್ನು ಕುಟುಂಬ ಹಿತದೃಷ್ಟಿಯಿಂದ ನಡೆಯಲಿದೆ. ಜನವರಿ 14 ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.

  • ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಚಿಕ್ಕಮಗಳೂರು: 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ದಲಿತರ ಪರ ಹೋರಾಟಗಾರ, ಗುಜರಾತ್ ಈ ಬಾರಿ ಆಯ್ಕೆಯಾದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.

    ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಕರ್ನಾಟಕದಲ್ಲಿ ನನಗೆ ಗೌರಿಲಂಕೇಶ್ ಸೇರಿದಂತೆ ಬಹಳಷ್ಟು ಹೋರಾಟಗಾರರ ಪರಿಚಯವಿತ್ತು, ನಮ್ಮ ಹೋರಾಟ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕರ್ನಾಟಕ ಹಾಗೂ ಕೇರಳಲ್ಲಿರುವವರು ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ. ಇಂದು ನಾವು ಇಲ್ಲಿ ಕೋಮು ಸೌಹಾರ್ದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೆಯೇ 2018ರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲೂ ಚರ್ಚೆ ನಡೆಸಲಾಗಿದೆ. ಗುಜರಾತ್ ನಲ್ಲಿರುವ ನನ್ನ ಸ್ವಕ್ಷೇತ್ರದಲ್ಲೂ ಹಲವು ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳು ನಮಗೆ ಬೆಂಬಲ ನೀಡಿದ್ದವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವ ಪಕ್ಷ ಪರ ಸಹ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆ ನಡೆಸುವವರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಸಂವಿಧಾನ ವಿರೋಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಘ ಪರಿವಾರ ಹಾಗೂ ಬಿಜೆಪಿಯವರಿಗೆ ಮಧ್ಯವರ್ತಿ ರೀತಿಯಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿಯವರೂ ಕೂಡಾ ಇದೇ ಕೆಲಸದಲ್ಲಿ ತೊಡಗಿದ್ದಾರೆ. ನಾವು ಕರ್ನಾಟಕದಲ್ಲಿ ಸಮಾನತೆ, ಸಹಬಾಳ್ವೆಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.