Tag: Chikkamagaluru

  • ಸಿಎಂ ಎಚ್‍ಡಿಕೆ ವಿರುದ್ಧ ಸಿಡಿದ ಶಾಸಕ ಸಿಟಿ ರವಿ

    ಸಿಎಂ ಎಚ್‍ಡಿಕೆ ವಿರುದ್ಧ ಸಿಡಿದ ಶಾಸಕ ಸಿಟಿ ರವಿ

    ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಶಾಸಕ ಸಿಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ

    ಸಾಲ ಮನ್ನ ಮಾಡಬೇಕೆಂದು ಬಿಜೆಪಿ ಕರೆ ನೀಡಿದ್ದ ಬಂದ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ಸಿನ ಮುಲಾಜಿನಲ್ಲಿ ಇದ್ದೇನೆ ಅನ್ನೋದಾದ್ರೆ, ಅವರು ಖರ್ಚು ಮಾಡುತ್ತಿರುವ ಹಣ ದೇವೇಗೌಡರ ಮನೆಯದ್ದೂ ಅಲ್ಲ, ಸೋನಿಯಾ ಗಾಂಧಿ ಮನೆಯದ್ದೂ ಅಲ್ಲ. ಆರೂವರೆ ಕೋಟಿ ಜನರ ತೆರಿಗೆ ಹಣ. ಜನರ ಹಣವನ್ನ ಖರ್ಚು ಮಾಡಿದ ಮೇಲೆ ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕುಮಾರಸ್ವಾಮಿಗೆ ರೈತರು ಒಂದು ತಿಂಗಳ ಸಮಯ ನೀಡಲು ಸಿದ್ಧರಿದ್ರು. ಆದ್ರೆ, ಅವ್ರು ನಿಯೋಜಿತ ಸಿಎಂ ಆಗಿದ್ದಾಗ್ಲೆ, ನನಗೆ ಜನಾದೇಶ ನೀಡಿಲ್ಲ. ನಾನು ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂದು ಮಾತಿನ ವರಸೆ ಚೆಂಜ್ ಮಾಡಿದ್ರಿಂದಾಗಿ, ಅವರು ಕೊಟ್ಟ ಮಾತನ್ನ ಮಾರೆಯಬಾರದು. ರೈತರಿಗೆ ಅನ್ಯಾಯವಾಗಬಾರದೆಂದು ಈ ಪ್ರತಿಭಟನೆ ಎಂದ್ರು.

    ಒಂದು ವಾರದಲ್ಲಿ ಸಾಲ ಮನ್ನಾ ಮಾಡದಿದ್ರೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಕುತ್ತಿಗೆ ಪಟ್ಟು ಹಿಡಿದು, ಜುಟ್ಟು ಹಿಡಿದಾಗ್ಲಿ ಸಾಲ ಮನ್ನ ಮಾಡ್ಸೋ ಕೆಲಸ ಮಾಡ್ತಾರೆಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

  • ಕಾಂಗ್ರೆಸ್ `C Six’ ರೋಗದಿಂದ ರಾಜ್ಯವನ್ನು ರಕ್ಷಿಸಿ: ಪ್ರಧಾನಿ ಮೋದಿ

    ಕಾಂಗ್ರೆಸ್ `C Six’ ರೋಗದಿಂದ ರಾಜ್ಯವನ್ನು ರಕ್ಷಿಸಿ: ಪ್ರಧಾನಿ ಮೋದಿ

    ಬೆಳಗಾವಿ/ಕೋಲಾರ/ಚಿಕ್ಕಮಗಳೂರು: ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ನಿರ್ಧಾರವಾಗುವ ದಿನಕ್ಕೆ ಇರುವುದು ಕೇವಲ ಮೂರು ದಿನ ಮಾತ್ರ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಒಂದು ದಿನ ಮೊದಲು ರಾಜ್ಯದ ಎಲ್ಲೆಡೆ ಪ್ರಚಾರದ ಕಾವು ಹೆಚ್ಚಾಗಿತ್ತು.

    ಇಂದು ಪ್ರಧಾನಿ ಮೋದಿ ನಾಲ್ಕು ಕಡೆ ಬಿರುಸಿನ ಪ್ರಚಾರ ನಡೆಸುವ ಮೂಲಕ ಕೇತ್ರಗಳಲ್ಲಿ ಮತದಾರರ ಮನ ಗೆಲ್ಲಲು ಯತ್ನಿಸಿದರು. ತಮ್ಮ ನಾಲ್ಕು ಪ್ರಚಾರ ಸಮಾವೇಶಗಳಲ್ಲಿ ಕಾಂಗ್ರೆಸ್ ಟಾರ್ಗೆಟ್ ಮಾಡಿದ್ದ ಮೋದಿ ಆರೋಪಗಳ ಸುರಿಮಳೆಗೈದರು.

    ಚಿಕ್ಕಮಗಳೂರಿನ ಸಮಾವೇಶದಲ್ಲಿ ಬೆಂಗಳೂರಿನ ಜಾಲಹಳ್ಳಿ ಅಪಾರ್ಟ್‍ಮೆಂಟ್‍ನಲ್ಲಿ ದೊರೆತ ರಾಶಿ ರಾಶಿ ವೋಟರ್ ಐಡಿ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷ ಆಕ್ರಮ ಮತದಾನ ಮಾಡಲು ಪ್ಲಾನ್ ಮಾಡಿದೆ ಎಂದು ಆರೋಪಿಸಿದರು. ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹಣ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಕೋಲಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ `ಸಿ ಸಿಕ್ಸ್’ ವೈರಸ್ ದಾಳಿ ಮಾಡಿದೆ. ಸಿ ಸಿಕ್ಸ್ ಅಂದರೆ ಕಾಂಗ್ರೆಸ್, ಕಮ್ಯುನಲ್, ಕ್ಯಾಸ್ಟಿಸಮ್, ಕರಪ್ಶನ್, ಕ್ರೈಂ, ಕಂಟ್ರಾಕ್ಟ್ ರೋಗಗಳಿಂದ ರಾಜ್ಯದ ವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸಂವಿಧಾನದ ರೀತಿ ನೀತಿಗಳನ್ನೇ ಹಾಳುಮಾಡಿದೆ, ಇವೆಲ್ಲವೂ ಕರ್ನಾಟಕದ ಭವಿಷ್ಯವನ್ನೇ ಹಾಳು ಮಾಡುತ್ತಿದೆ. ಮೈತ್ರಿ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೇ ನಾನೇ ಮುಂದಿನ ಪ್ರಧಾನಿ ಎಂದು ಹೇಳುವ ಮೂಲಕ ರಾಹುಲ್ ಅಹಂಕಾರ ತೋರಿದ್ದಾರೆ. ಕಾಂಗ್ರೆಸ್ ಡೀಲ್ ಪಾರ್ಟಿ. ಇದನ್ನು ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರದ ಮೊಯ್ಲಿ ಅವರು ಹೇಳಿದ್ದಾರೆ ಎಂದರು.

    ಬೆಳಗಾವಿಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಭಾವಚಿತ್ರವೊಂದಿರುವ ಕುಕ್ಕರ್ ವಶಕ್ಕೆ ಪಡೆದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ಪವಿತ್ರ ಚುನಾವಣೆಯೇ, ಇದು ಶೇ.10 ರಷ್ಟು ಪಡೆದ ಹಣವೇ ಎಂದು ಪ್ರಶ್ನಿಸಿದರು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿಯೇ ಬೆಳಗಾವಿ ನಗರ ಆಯ್ಕೆ ಆಗಿತ್ತು. ಆದರೇ ಕರ್ನಾಟಕದಲ್ಲಿ ನಿದ್ರೆ ಮಾಡುವ ಸರ್ಕಾರವಿದೆ. ಸ್ಮಾಟ್ ಸಿಟಿ ನಿರ್ಮಾಣ ಮಾಡಲು ನೀಡಲಾಗಿದ್ದ 836 ಕೋಟಿ ರೂ. ಗಳಲ್ಲಿ ಕೇವಲ 12 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಜಿಲ್ಲೆಯಲ್ಲಿ ಹರಿಯುವ ಐದು ನದಿಗಳನ್ನು ಪ್ರಸ್ತಾಪಿಸಿದ ಅವರು, ಬೆಳಗಾವಿಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯ ಕೇಶಿ, ಮಾರ್ಖಂಡೇಯ ಪ್ರಮುಖ ಐದು 5 ನದಿ ಹರಿಯುತ್ತಿವೆ. ಆದ್ರು ಈ ಭಾಗದಲ್ಲಿ ನೀರಿನ ಸಮಸ್ಯೆ ಇದೇ. ಇದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

    https://www.youtube.com/watch?v=xNBtimUAH3s

    https://www.youtube.com/watch?v=VWX-Sv-6dpo

     

  • ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಚಿಕ್ಕಮಗಳೂರು: ಬೇರೆ ಪಕ್ಷ ಅಧಿಕಾರಕ್ಕೆ ಬಂದ್ರೆ ಜೆಡಿಎಸ್ ಶಾಸಕರು ಅವರ ಮನೆ ಮುಂದೆ ನಿಲ್ಲುವಂತಹ ಸ್ಥಿತಿ ಬರುತ್ತೆ, ಆಗ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತೆ ಅದಕ್ಕೆ ಜೆಡಿಎಸ್‍ಗೆ ಮತ ನೀಡಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ನಟ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಹೇಳಿದ್ರು.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಹೋಬಳಿಯಲ್ಲಿ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪರ ಮತಯಾಚಿಸಿದ ಅವರು, ಜೆಡಿಎಸ್ ರೈತ ಪರ ಸರ್ಕಾರ, ಕುಮಾರಸ್ವಾಮಿಯ ಜನಪರ ಯೋಜನೆಗಳು ಜಾರಿಗೆ ಬರಬೇಕಾದ್ರೆ ಅವರು ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್‍ಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

    ಇದೇ ವೇಳೆ, ಮಾತನಾಡಿದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ದೇಶದ ಪ್ರಧಾನಿ ಕೂಡ ಇದು 10 ಪರ್ಸೆಂಟ್ ಸರ್ಕಾರ ಅಂತಾರೆ. ಅವರು ಓರ್ವ ಪ್ರಧಾನಿ ಹಗುರವಾಗಿ ಮಾತನಾಡಲು ಆಗುವುದಿಲ್ಲ. ಅವರಿಗಿರುವ ಮಾಹಿತಿಯನ್ನ ಆಧರಿಸಿ ಮಾತನಾಡಿರಬಹುದು ಎಂದು ಬಿಜೆಪಿ ಪರ ಮೃದು ಧೋರಣೆ ತಾಳಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

  • ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಸುಮಾರು 16 ಸಾವಿರ ಕ್ಕೂ ಹೆಚ್ಚು ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಮುಂದಿನ ತಿಂಗಳ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಿಜೆಪಿಯವರು ಭಾರೀ ಪ್ರಮಾಣದ ಸೀರೆಗಳನ್ನ ತರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.

    ದೂರು ಆಧರಿಸಿ ಚುನಾವಣೆ ಕರ್ತವ್ಯ ಅಧಿಕಾರಿ ಪ್ರಕಾಶ್ ಆಗಮಿಸಿ ಪರಿಶೀಲಿಸಿದ ಬಳಿಕ ತನಿಖಾ ತಂಡದ ತುಷಾರಾ ಮಣಿ, ಆದಾಯ ತೆರಿಗೆ ಸಹಾಯಕ ಅಧಿಕಾರಿ ಪೂರ್ಣಿಮ, ಠಾಣಾಧಿಕಾರಿ ರಕ್ಷಿತ್ ಗೋದಾಮು ಪರಿಶೀಲಿಸಿ ತಪಾಸಣೆ ನಡೆಸಿದ್ದಾರೆ. ಸುಮಾರು 15 ಲಕ್ಷ ರೂ. ಬೆಲೆಯ 16 ಸಾವಿರ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಸುಮಾರು 15 ಲಕ್ಷ ಬೆಲೆ ಬಾಳುವ 16 ಸಾವಿರ ಸೀರೆಗಳನ್ನು ಸರಕು ಸಾಗಣೆ ಸಂಸ್ಥೆ ಲಾರಿಯಲ್ಲಿ ತರಿಸಿದ್ದಾರೆ. ಪ್ರತಿ ಸೀರೆ ಬೆಲೆ 80 ರೂ. ಇದ್ದು, ಈ ಕುರಿತು ಮಾಲೀಕರು ದಾಖಲೆಯನ್ನು ಸಲ್ಲಿಸಿದ್ದಾರೆ. ಆದರೆ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಕ್ರಮಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಜಪ್ತಿ ಮಾಡಲಾಗಿರುವ ಸೀರೆಗಳನ್ನು ಅಧಿಕಾರಿಗಳ ವಶದಲ್ಲೇ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ವಿದ್ಯುತ್ ತಂತಿ ಸ್ಪರ್ಶಿಸಿ 10 ವರ್ಷದ ಗಂಡಾನೆ ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ 10 ವರ್ಷದ ಗಂಡಾನೆ ಸಾವು

    ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ 10 ವರ್ಷದ ಗಂಡಾನೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೆಬೈಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

    ಆನೆಯ ದೇಹದ ಮೇಲೆ ವಿದ್ಯುತ್ ತಂತಿ ಸ್ಪರ್ಶಿಸಿರುವ ಗುರುತು ಪತ್ತೆಯಾಗಿದೆ. ಹಾಗಾಗಿ ಆನೆ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಆನೆ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಓಡಾಡುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ಕೂಡ ತಣಿಗೇಬೈಲು ವ್ಯಾಪ್ತಿಯಲ್ಲಿ ಕಾಡಾನೆ ಸಾವಿಗೀಡಾಗಿತ್ತು. ಆನೆಯ ಮರಣೋತ್ತರ ಪರೀಕ್ಷೆಯ ನಂತರ ಎರಡೂ ದಂತವನ್ನ ಹೊರತೆಗೆದಿದ್ದಾರೆ. ಸದ್ಯಕ್ಕೆ ತಣಿಗೇಬೈಲು ಅರಣ್ಯಾಧಿಕಾರಿ ಹಾಗೂ ಭದ್ರಾ ಹುಲಿ ಸಂರಕ್ಷಿತ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆಯಿಂದ ಜಮೀನುಗಳಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಸಿರುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ನಾಮಪತ್ರ ಸಲ್ಲಿಸಿ ಹಿಂದಿರುಗುವಾಗ ಟಾಟಾ ಏಸ್ ಪಲ್ಟಿ – ಮೂವರ ದುರ್ಮರಣ

    ನಾಮಪತ್ರ ಸಲ್ಲಿಸಿ ಹಿಂದಿರುಗುವಾಗ ಟಾಟಾ ಏಸ್ ಪಲ್ಟಿ – ಮೂವರ ದುರ್ಮರಣ

    ಚಿಕ್ಕಮಗಳೂರು: ನಾಯಕರ ನಾಮಪತ್ರ ಸಲ್ಲಿಸಿ ತಮ್ಮ ಹಳ್ಳಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಗಾಡಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗೇಟ್ ಬಳಿ ನಡೆದಿದೆ.

    ಜಲಧಿಹಳ್ಳಿ ನಿವಾಸಿಗಳಾದ ಆಂಜನೇಯ, ಸುರೇಶ್ ಹಾಗೂ ಆನಂದ ಮೃತ ದುರ್ದೈವಿಗಳು. ಇವರು ಅಭ್ಯರ್ಥಿ ಡಿ.ಎಸ್.ಸುರೇಶ್ ಬೆಂಬಲಿಗರು. ಸೋಮವಾರ ತರೀಕೆರೆಯ ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ನಂತರ ಹಳ್ಳಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಗಾಡಿ ಪಲ್ಟಿಯಾಗಿದೆ. ಪರಿಣಾಮ ಸುರೇಶ್ ಗೆ ಬೆಂಬಲ ವ್ಯಕ್ತಪಡಿಸಲು ಬಂದಿದ್ದ ಆಂಜನೇಯ, ಸುರೇಶ್ ಹಾಗೂ ಆನಂದ ಮಧ್ಯವಯಸ್ಸಿನ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗಾಡಿಯಲ್ಲಿದ್ದ ಒಟ್ಟು ಎಂಟು ಜನರು ಇದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು ಐವರಿಗೆ ಗಾಯವಾಗಿದ್ದು, ಇವರಲ್ಲಿ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳನ್ನ ಸಮೀಪದ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಚಿಕ್ಕಮಗಳೂರು: ಇಂದು ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಮುಖಂಡರ  ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಮುರುಳಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಸತೀಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಕೊಪ್ಪದ ತಿಲಕ್ ನಗರದ ಬಳಿ ಇರುವ ಸುಧೀರ್ ಅವರ ಮನೆ ಮೇಲೆ ದಾಳಿ ನಡೆದಿದೆ.

    ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪದಲ್ಲಿ ಐಟಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು ಮೂವರು ಕಾಂಗ್ರೆಸ್ ಮುಖಂಡರ ಮನೆಯಲ್ಲಿ ದಾಖಲೆ ಪತ್ರ ಪರಿಶೀಲನೆ ನಡೆಸುತ್ತಿದ್ದಾರೆ.

  • ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ.

    ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ ಸಚಿನ್ ಕಡವೆಯನ್ನ ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಣಿಗೆಬೈಲು ಅರಣ್ಯಾಧಿಕಾರಿ ಉಲ್ಲಾಸ್ ಹಾಗೂ ಸಿಬ್ಬಂದಿಗಳು ಕಡವೆಗೆ ಚಿಕಿತ್ಸೆ ನೀಡಿ, ನೀರು ಕುಡಿಸಿ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.

  • ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 12ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ!

    ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 12ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ!

    ಚಿಕ್ಕಮಗಳೂರು: ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಆಕೆಯನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೆಸಗೋಡು ಗ್ರಾಮದಲ್ಲಿ ನಡೆದಿದೆ.

    ಶ್ರೀರಕ್ಷಾ (12) ಮೃತ ದುರ್ದೈವಿ ಬಾಲಕಿ. ಈಕೆ ಸ್ಥಳೀಯ ಶಾಲೆಯೊಂದರಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮುಖ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆ ವಿವರ: ಬಾಲಕಿ ಶ್ರೀರಕ್ಷಾ ಪ್ರತಿ ದಿನದಂತೆ ಶನಿವಾರ ಮಧ್ಯಾಹ್ನ ಆಟೋ ಇಳಿದು ಕಾಡಿನ ದಾರಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ ಕಾಮುಕ ಬಾಲಕಿಯನ್ನು ಬಲವಂತವಾಗಿ ಪೊದೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಇದನ್ನು ವಿರೋಧಿಸಿದ್ದಕ್ಕೆ ಕೋಪಕೊಂಡ ಆರೋಪಿ ಕಲ್ಲಿನಿಂದ ಜಜ್ಜಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

    ಕೊಲೆ ಮಾಡಿದ ಬಳಿಕ ಸುಮುಖ ಮನೆಗೆ ಹೋಗಿ ಸ್ನಾನ ಮಾಡಿ ಮತ್ತೆ ಅದೇ ಸ್ಥಳಕ್ಕೆ ಬಂದಿದ್ದಾನೆ. ಅಷ್ಟರಲ್ಲಿ ಸುತ್ತಮುತ್ತಲಿನ ಜನರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ಆಗ ಗ್ರಾಮಸ್ಥರು ಸುಮುಖನ ಹೆಸರು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಒಂಟಿಯಾಗಿ ಓಡಾಡುವ ಹುಡುಗಿಯರ ಜೊತೆ ಆತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು ಎಂದು ಆರೋಪಿಸಿದ್ದಾರೆ.

    ಹರಿಹರಪುರ ಪೊಲೀಸರು ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ಅನುಮಾನದ ಮೇರೆಗೆ ಸುಮುಖನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದು, ಆಸ್ಪತ್ರೆ ಮುಂಭಾಗ ಹೆಣ್ಣು ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಬಾಬಾ ಬುಡನ್‍ಗಿರಿ ದರ್ಗಾದ ಆಡಳಿತ ಶಾಖಾದ್ರಿಗೆ – ಸುಪ್ರೀಂ ಅನುಮೋದನೆ

    ಬಾಬಾ ಬುಡನ್‍ಗಿರಿ ದರ್ಗಾದ ಆಡಳಿತ ಶಾಖಾದ್ರಿಗೆ – ಸುಪ್ರೀಂ ಅನುಮೋದನೆ

    ಚಿಕ್ಕಮಗಳೂರು: ಮೂರು ದಶಕಗಳ ಬಾಬಾಬುಡನ್‍ಗಿರಿ ವಿವಾದಕ್ಕೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ ವರದಿಯನ್ನು ಸುಪ್ರೀಂಕೋರ್ಟ್ ಅನುಮೋದಿಸಿದ್ದು ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ರಂಜನ್ ಗೊಗಯ್, ನ್ಯಾ.ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠ, ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿಗೆ ಹೊಣೆ ವಹಿಸಿದೆ. ಪೂಜಾ ಕೈಂಕರ್ಯ, ನಮಾಜ್ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆಗಳ ಶಾಖಾದ್ರಿ ನೇತೃತ್ವದಲ್ಲಿ ನಡೆಯಬೇಕು. ಇದೊಂದು ಭಾವನಾತ್ಮಕ ವಿಷಯ. ಯಾವುದೇ ಕೋಮಿಗೆ ಧಕ್ಕೆಯಾಗಬಾರದು. ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು ಶಾಖಾದ್ರಿ ನಿರ್ವಹಣೆ ಮಾಡಲಿ ಅಂತ ಹೇಳಿದೆ.

    1977ರ ಹಿಂದೆ ಶಾಖಾದ್ರಿಗಳ ನೇತೃತ್ವದಲ್ಲಿ ಊರೂಸ್ ನಡೆಯುತ್ತಿತ್ತು, ಯಾವುದೇ ರೀತಿಯ ಹೋಮ-ಹವನ ನಡೆಯುತ್ತಿರಲಿಲ್ಲ ಎಂದು ನಾಗಮೋಹನ್ ದಾಸ್ ನೀಡಿರುವ ಅನ್ವಯ ಸುಪ್ರೀಂ ಕೋರ್ಟ್, 1977ರ ಹಿಂದೆ ಅಲ್ಲಿ ನಡೆಯುತ್ತಿದ್ದ ಪೂಜಾ-ವಿಧಿ-ವಿಧಾನಗಳನ್ನ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದೆ. ಇನ್ನು ಮುಂದೆ ಬಾಬಾ ಬುಡನ್‍ಗಿರಿ ದರ್ಗಾದಲ್ಲಿ ಮುಜಾವರ್ ನೇತೃತ್ವದಲ್ಲಿ ಪೂಜೆ-ಪುನಸ್ಕಾರಗಳು ನಡೆಯಲಿವೆ.

    ಸುಪ್ರೀಂ ಕೋರ್ಟ್ ನ್ಯಾಯಾಲಯ ನಾಗಮೋಹನ್ ದಾಸ್ ವರದಿಯನ್ನು ಎತ್ತಿ ಹಿಡಿದಿರುವ ಕಾರಣ ಕಾಫಿನಾಡಿನಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಸುಪ್ರೀಂ ಈ ತೀರ್ಪನ್ನು ಜಿಲ್ಲೆಯ ಕೋಮು ಸೌಹಾರ್ದ ವೇದಿಕೆ ಹಾಗೂ ಕೆಲ ಸಂಘಟನೆಗಳು ಸ್ವಾಗತಿಸಿವೆ. ದತ್ತಪೀಠವನ್ನು ಕೇಸರಿಕರಣ ಮಾಡುವ ಹೋದ ಕೋಮು ಶಕ್ತಿಗಳಿಗೆ ಹಿನ್ನಡ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟಿವೆ.

    ನ್ಯಾಯಾಲಯದ ತೀರ್ಪಿನ ವಿರುದ್ಧ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ. ದತ್ತಪೀಠ ಸಂಪೂರ್ಣ ಹಿಂದುಗಳಿಗೆ ಸಲ್ಲಬೇಕು, ಸುಪ್ರೀಂ ತೀರ್ಪೀನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ತಿಳಿಸಿವೆ.

    ಇದೇ ವೇಳೆ ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನದಾಸ್ ವರದಿ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸಿಟಿ ರವಿ, ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.