Tag: Chikkamagaluru

  • 50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್

    50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್

    ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಮಳೆ, ಇದೀಗ ಬಯಲುಸೀಮೆ ಭಾಗವಾದ ಕಡೂರು-ತರೀಕೆರೆಗೂ ಕಾಲಿಟ್ಟಿದೆ.

    ಕಳೆದ ಮೂರು ದಿನಗಳಿಂದ ತರೀಕೆರೆ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದ ಸೊಬಗನ್ನ ನೋಡಲು ಎರಡು ಕಣ್ಣು ಸಾಲದಂತಾಗಿದೆ. ಧುಮ್ಮಿಕ್ಕುತ್ತಿರುವ ಜಲಧಾರೆಯನ್ನ ವರ್ಣಿಸಲು ಪದಗಳೇ ಇಲ್ಲವಾಗಿದೆ.

    ತರೀಕೆರೆಯ ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಯಲ್ಲಿ ಜಲವೈಭವವೇ ಮನೆಮಾಡಿದೆ. ಸುಮಾರು 50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್‍ನ ನೋಡಲು ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಸುತ್ತಲೂ ಕಾಫಿ ತೋಟ ಹಾಗೂ ದಟ್ಟ ಕಾನನ. ಅದರ ಮಧ್ಯೆ ಹಕ್ಕಿಗಳ ಚಿಲಿಪಿಲಿ ಜತೆ ಧುಮ್ಮುಕುತ್ತಿರುವ ಜಲಧಾರೆ  ಪ್ರವಾಸಿಗರಿಗೆ ಹಾಟ್ ಸ್ಪಾಟ್ ಆಗಿದೆ.

  • ಚಿಕ್ಕಮಗ್ಳೂರಲ್ಲಿ 20ಕ್ಕೂ ಹೆಚ್ಚು ಯುವಕರು ಅರ್ಚಕ ವೃತ್ತಿಗೆ ಗುಡ್ ಬೈ!

    ಚಿಕ್ಕಮಗ್ಳೂರಲ್ಲಿ 20ಕ್ಕೂ ಹೆಚ್ಚು ಯುವಕರು ಅರ್ಚಕ ವೃತ್ತಿಗೆ ಗುಡ್ ಬೈ!

    ಚಿಕ್ಕಮಗಳೂರು: ಕೈ ತುಂಬಾ ದುಡ್ಡಿದೆ. ಬ್ಯಾಂಕ್ ಬ್ಯಾಲನ್ಸ್ ಇದೆ. ಓಡಾಡೋದಕ್ಕೆ ಕಾರು-ಬೈಕಿದೆ. ಆದ್ರೆ, ಅದೊಂದೇ ಒಂದು ವೃತ್ತಿ ಮಾಡ್ತಾರೆಂದು ಅವರನ್ನ ಹೆಣ್ಣೆತ್ತವರು, ಹೆಣ್ಮಕ್ಕಳು ಒಪ್ಪದ ಕಾರಣ ಆ ವರ್ಗ ಮೂಲ ವೃತ್ತಿಯನ್ನೇ ತ್ಯಜಿಸ್ತಾ, ದೇವರ ಮೇಲೆ ಸಿಟ್ಟಾಗ್ತಿದ್ದಾರೆ.

    ಹೌದು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕನೊಬ್ಬ ಮದುವೆಗೆ ಹೆಣ್ಣು ಕೊಡದ ಕಾರಣ ಅರ್ಚಕ ವೃತ್ತಿ ತ್ಯಜಿಸಿದ್ದಾರೆ. ಕಳೆದೊಂದು ದಶಕದಲ್ಲಿ ಮಲೆನಾಡಲ್ಲಿ 20ಕ್ಕೂ ಹೆಚ್ಚು ಯುವಕರು ಅರ್ಚಕ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ.

    ಹೆಣ್ಣು ಕೊಡ್ತಿಲ್ಲವೆಂದು ನಾವು ಪೂಜೆಯನ್ನೆ ಮಾಡೋದಿಲ್ಲ ಅಂತ ಪೌರೋಹಿತ್ಯ ವೃತ್ತಿಗೆ ಗುಡ್ ಬೈ ಹೇಳ್ತಿದ್ದಾರೆ. ಕಚ್ಚೆ ಪಂಜೆ, ಜನಿವಾರ, ಶಲ್ಯ ಹಾಕೊಂಡು ಪೌರೋಹಿತ್ಯ ವೃತ್ತಿ ಮಾಡ್ತಿರೋ ಅರ್ಚಕರನ್ನ ಆಧುನಿಕ ಹೆಣ್ಮಕ್ಕಳು ಮದುವೆಯಾಗಲು ನಿರಾಕರಿಸ್ತಿದ್ದಾರೆ. ಇದರಿಂದ 30 ದಾಟಿದ ಅರ್ಚಕ ಯುವಕರು, ಮದುವೆ, ಮಕ್ಕಳು, ವಂಶಕ್ಕಾಗಿ ಮೂಲ ವೃತ್ತಿಯನ್ನೇ ತ್ಯಜಿಸ್ತಿದ್ದಾರೆ.

    ಕೇವಲ ಹೆಣ್ಮಕ್ಕಳು ಮಾತ್ರ ಅರ್ಚಕ ಯುವಕರನ್ನ ಬೇಡ ಅಂತಿಲ್ಲ. ಹೆಣ್ಮಕ್ಕಳ ಪೋಷಕರು ಕೂಡ ಕಚ್ಚೆ ಪಂಜೆ, ಜನಿವಾರ ಶಲ್ಯ ಹಾಕೊಂಡ್ ಮಂತ್ರ ಪಠಿಸೋ ಅಳಿಯ ಬೇಡ. ಇನ್ ಶರ್ಟ್ ಮಾಡ್ಕೊಂಡು, ಸೂಟ್ ಹಾಕ್ಕಳೋ ಅಳಿಯನನ್ನು ಒಪ್ಪುತ್ತಿರೋದು ಈ ಬೆಳವಣಿಗೆಗೆ ಕಾರಣವಾಗಿದೆ. ಇಂದಿನ ಹೆಣ್ಮಕ್ಕಳು ಕನಿಷ್ಠ ಡಿಗ್ರಿ ಓದಿರ್ತಾರೆ. ಅವರ ಆಲೋಚನೆ, ಆಸೆಗಳು ಬೇರೆ ಇರೋದ್ರಿಂದ ಅರ್ಚಕ ವೃತ್ತಿ ಬಗ್ಗೆ ಅಸಡ್ಡೆ ಬಂದಿರೋದ್ರಲ್ಲಿ ಅನುಮಾನವಿಲ್ಲ. ದಿನಕ್ಕೆ ಮೂರ್ನಾಲ್ಕು ಸಾವಿರ ದುಡಿಯೋ ಅರ್ಚಕರಿದ್ದಾರೆ. ಆದ್ರೆ, ಆ ಹಣ ಅವ್ರ ವೃತ್ತಿಯ ಬಗ್ಗೆ ಗೌರವ ತಂದು ಕೊಡ್ತಿಲ್ಲ ಎಂದು ಹಿರಿಯ ಅರ್ಚಕರೇ ಹೇಳ್ತಾರೆ.

    ಇದು ಹೀಗೆ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಪೌರೋಹಿತ್ಯ ವೃತ್ತಿ ಮಾಡೋರೆ ಇಲ್ಲದಂತಾಗಿ ದೇವರಿಗೆ ಪೂಜೆ ಮಾಡೋರೇ ಇಲ್ಲದಂತಾಗ್ಬೋದು ಅನ್ನೋ ಆತಂಕ ಕೂಡ ಸಾರ್ವಜನಿಕರಲ್ಲಿ ಮನೆಮಾಡಿದೆ.

  • ನಿಲ್ಲದ ವರುಣನ ಅಬ್ಬರ- ಇಂದು, ನಾಳೆ ಭಾರೀ ಮಳೆ ಸಾಧ್ಯತೆ

    ನಿಲ್ಲದ ವರುಣನ ಅಬ್ಬರ- ಇಂದು, ನಾಳೆ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಮಲೆನಾಡಿನಲ್ಲಿ ವರುಣನ ಅಬ್ಬರ ಮುಂದುರಿದಿದೆ. ಇಂದು, ನಾಳೆ ಭಾರೀ ಮಳೆಯ ಮುನ್ಸೂಚನೆ ಇದ್ದು, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಲಾಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ತರೀಕೆರೆ ಪಟ್ಟಣದಲ್ಲಿ ಮಳೆಗೆ ಎರಡು ಮನೆಗಳ ಗೋಡೆ ಕುಸಿದಿದೆ.

    ಹಾಸನದಲ್ಲಿನ ವರ್ಷಧಾರೆಗೆ ಕೆಲವು ಕಡೆ ಭೂಕುಸಿತವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೇಮಾವತಿ ಡ್ಯಾಮ್ ಭರ್ತಿಗೆ ಕೇವಲ 7 ಅಡಿ ಬಾಕಿ ಇದೆ. ಯಾವುದೇ ಕ್ಷಣದಲ್ಲಾದ್ರೂ ಹೆಚ್ಚಿನ ನೀರು ಹೊರಬಿಡುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ. ಕೊಡಲಿನಲ್ಲೂ ಯಥಾ ಸ್ಥಿತಿ ಮುಂದುವರಿದೆ. ಇದನ್ನೂ ಒದಿ: ನಿಲ್ಲದ ಮಳೆ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಶಾಲಾ ಕಾಲೇಜು ರಜೆ

    ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿ, ಲಕ್ಮ್ಣಣ ತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಇಳಿಮುಖವಾಗಿದ್ರೂ, ಸಿದ್ದಾಪುರ ಭಾಗದ 250 ಎಕರೆ ಕೃಷಿ ಭೂಮಿ ಪ್ರದೇಶ ಜಲಾವೃತಗೊಂಡಿದೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೃಷ್ಣಾನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅತ್ತ, ಮುಂಬೈನಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ.

    ಮೈಸೂರಿನಲ್ಲಿ ಯುವಕ ನೀರುಪಾಲು:
    ಗುರುವಾರ ಕಪಿಲಾ ನದಿಯಲ್ಲಿ ಈಜಲು ಹಾರಿದ್ದ ಮೂವರು ಯುವಕರಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ. ಎಚ್.ಡಿ.ಕೋಟೆ ತಾಲೋಕಿನ ಮಾದಾಪುರ ಸೇತುವೆ ಬಳಿ ಈ ಘಟನೆ ನಡೆದಿದೆ. ಜಲಾಶಯದಿಂದ ಏಕಾಏಕಿ 50 ಕ್ಯೂಸೆಕ್ ನೀರು ಹೊರಬಿಟ್ಟ ಹಿನ್ನಲೆಯಲ್ಲಿ 24 ವರ್ಷದ ಉಮೇಶ್ ಕೊಚ್ಚಿ ಹೋಗಿದ್ದಾರೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ.

  • ವರುಣನ ಆರ್ಭಟ-ಮತ್ತೆ ಹೊಸ್ಮಠ ಸೇತುವೆ ಮುಳುಗಡೆ-ಇತ್ತ ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ

    ವರುಣನ ಆರ್ಭಟ-ಮತ್ತೆ ಹೊಸ್ಮಠ ಸೇತುವೆ ಮುಳುಗಡೆ-ಇತ್ತ ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ

    ಮಂಗಳೂರು/ಚಿಕ್ಕಮಗಳೂರು/ಕೊಡಗು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂರು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮಳೆಯ ಅವಾಂತರ ದಿನದಿಂದ ದಿನಕ್ಕೆ ಮುಂದುವರೆಯುತ್ತಲೇ ಹೋಗುತ್ತಿದೆ.

    ಮಂಗಳೂರಿನ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ರಸ್ತೆಯ ಹೊಸ್ಮಠ ಸೇತುವೆ ಮತ್ತೊಮ್ಮೆ ಮುಳುಗಡೆಯಾಗಿದೆ. ಹೊಸ್ಮಠ ಸೇತುವೆ ಮುಳುಗಡೆಯಿಂದಾಗಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದ ಕೆಲವೆಡೆ ವರುಣನ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಕಳಸ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ವರುಣನ ರೌದ್ರ ನರ್ತನ ತಾಂಡವವಾಡಿದೆ. ಕಳೆದ ಮೂರು ದಿನಗಳಿಂದ ಭಾರೀ ಮಳೆಯಿಂದ ಕಂಗಾಲಾಗಿದ್ದ ಎನ್.ಆರ್.ಪುರ, ಕೊಪ್ಪ, ಮೂಡಿಗೆರೆಯಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದೆ.

    ಮಲೆನಾಡು ಭಾಗದಲ್ಲಿ ಸೋಮವಾರ ಇಡೀ ದಿನ ಬಿಟ್ಟು-ಬಿಟ್ಟು ಸುರಿದ ವರುಣ ಧಾರಾಕಾರವಾಗಿ ಸುರಿದಿದ್ದಾನೆ. ಶೃಂಗೇರಿ, ಕುದುರೆಮುಖ, ಕಳಸಾದ ಮಳೆಗೆ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮೃದ್ಧ ಮಳೆ ನೋಡದ ಮಲೆನಾಡಿಗರು ಇದೀಗ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ಹೊಲ-ಗದ್ದೆಗಳು ಜಲಾವೃತಗೊಂಡು, ಕಾಫಿ, ಮೆಣಸು, ಅಡಿಕೆ ಬೆಳೆಗಳಲ್ಲಿ ಕೊಳೆ ರೋಗದ ಭೀತಿ ಎದುರಾಗಿದೆ.

    ಕಳೆದ ಎಂಟತ್ತು ವರ್ಷಗಳಲ್ಲೇ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಾಳೆಹೊನ್ನೂರಿನ ಮಹಲ್ಗೋಡು ಹಾಗೂ ಕೆಲ ಸೇತುವೆಗಳು ಏಳು ಬಾರಿ ಜಲಾವೃತಗೊಂಡಿದ್ದು, ಕಳಸ ಹೊರನಾಡು ಮಾರ್ಗದ ಮಾರ್ಗದ ಹೆಬ್ಬಾಳೆ ಸೇತುವೆ ಐದು ಬಾರಿ ಮುಳುಗಡೆಯಾಗಿದೆ. ಈ ಭಾಗದಲ್ಲಿ ವರುಣನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಅದೃಷ್ಟವಶಾತ್ ಮಳೆಯಿಂದಾಗಿ, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

    ಕೊಡಗಿನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಮಳೆ ಹಿನ್ನೆಲೆ ಸೋಮವಾರ ಶಾಲಾ ಕಾಲೇಜಿಗೆ ರಜೆ ನೀಡಿದ್ದ ಜಿಲ್ಲಾಧಿಕಾರಿಯವರು ನಿನ್ನೆ ಮಳೆಯ ಆರ್ಭಟ ತಗ್ಗಿದ್ದರಿಂದ ಇಂದು ರಜೆಯನ್ನು ರದ್ದುಗೊಳಿಸಿದ್ದರು. ಆದರೆ ಇಂದು ಮುಂಜಾನೆಯಿಂದ ಮತ್ತೆ ಆರ್ಭಟಿಸುತ್ತಿರುವ ಮಳೆಯಲ್ಲೇ ಶಾಲೆಯತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯ ಹಲವು ಕಡೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿರುವುದು ವರದಿಯಾಗಿದೆ.

    ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮದಿಂದ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಣಾಮ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಳೆ ಗಾಳಿ ಮತ್ತು ಚಳಿಗೆ ಕೊಡಗು ಜಿಲ್ಲೆಯ ಜನರು ಸಂಪೂರ್ಣ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದಾಗಿ ಭೂ ಕುಸಿತದಿಂದ ಬಂದ್ ಆಗಿದ್ದ ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

  • 4 ವರ್ಷಗಳ ಬಳಿಕ ತುಂಬಿದ ಹೇಮಾವತಿ ನದಿಗೆ ಬಾಗಿನ

    4 ವರ್ಷಗಳ ಬಳಿಕ ತುಂಬಿದ ಹೇಮಾವತಿ ನದಿಗೆ ಬಾಗಿನ

    ಚಿಕ್ಕಮಗಳೂರು: ಕಳೆದ ಮೂರು-ನಾಲ್ಕು ವರ್ಷಗಳಿಂದ ನೀರಿಲ್ಲದೆ ಸೊರಗಿದ್ದ ಹೇಮಾವತಿ ನದಿ ಕುಂಭದ್ರೋಣ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಹುಟ್ಟೋ ಹೇಮಾವತಿ ನದಿ ಕಳೆದ ಹದಿನೈದು ದಿನಗಳಿಂದು ಸುರಿಯುತ್ತಿರುವ ಮಳೆಗೆ ಮೈದುಂಬಿ ಹರಿಯುತ್ತಿದ್ದು, ನದಿಯ ಇಕ್ಕೆಲಗಳ ಜಮೀನು ಕೂಡ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೈದುಂಬಿ ಹರಿಯದ ಹೇಮಾವತಿ ನದಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಾಗಿನ ಅರ್ಪಿಸಿದ್ದಾರೆ.

    ಹೇಮಾವತಿ ಮೈದುಂಬಿ ಹರಿಯುತ್ತಿರುವುದರಿಂದ ಜನ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಮಲೆನಾಡಿನ ಜೀವನದಿಯ ಉಗಮ ಸ್ಥಾನವಾದ ಹೇಮಾವತಿ ನದಿ ಈ ಬಾರಿ ಮಳೆಯಿಂದ ಭರ್ತಿಯಾಗಿದೆ. ಸಮೃದ್ಧಿ ಮಳೆಯಾಗಿರುವುದರಿಂದ ಮೊಟ್ಟ ಮೊದಲ ಬಾರಿಗೆ ಈ ನದಿಗೆ ಬಾಗಿನ ಕೊಟ್ಟಿದ್ದೇವೆ. ಇಲ್ಲಿ ತುಂಬಿ ಮೈಸೂರು ನಗರದ ಕೆಆರ್ ಎಸ್ ಗೆ ಹೋಗಿ ತಲುಪುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿ ಎಂದು ಹೇಳಿದ್ದಾರೆ.

  • ವರುಣ ಗಂಡಾಂತರ..!!

    ವರುಣ ಗಂಡಾಂತರ..!!

    https://www.youtube.com/watch?v=L0GOYEXpDpA

  • ಮಳೆಯೋ ಮಳೆ..!

    ಮಳೆಯೋ ಮಳೆ..!

    https://www.youtube.com/watch?v=U_X1zNND338

  • ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪ ರಕ್ಷಣೆ

    ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪ ರಕ್ಷಣೆ

    ಚಿಕ್ಕಮಗಳೂರು: ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಉರಗ ತಜ್ಞರ ಸಹಾಯದಿಂದ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಮೇಗರಮಕ್ಕಿ ಗ್ರಾಮದ ಪೃಥ್ವಿ ಎಂಬವರ ಮನೆಯಲ್ಲಿ ಈ ಬೃಹತ್ ಕಾಳಿಂಗ ಸೆರೆಯಾಗಿದೆ. ಹಾವನ್ನು ಕಂಡ ಮನೆ ಮಂದಿ ಗೋದಾಮಿಗೆ ಬೀಗ ಹಾಕಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಕಾಳಿಂಗ ಸರ್ಪದ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಹಾಗೂ ಉರಗ ತಜ್ಞ ಹರೀಂದ್ರ ಅವರು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಸದ್ಯ ರಕ್ಷಣೆ ಮಾಡಿರುವ ಕಾಳಿಂಗ ಸರ್ಪವನ್ನು ಹತ್ತಿರ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದಾನೆ.

    ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದಲೂ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ನಡೆಸಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ.

    ತೀವ್ರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಸರ್ಕಾರಿ ಬಸ್ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದೊಂದು ಗಂಟೆಯಿಂದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ತೊಂದರೆಗೆ ಸಿಲುಕಿದ್ದಾರೆ. ಮಳೆಯ ನಡುವೆ ಪ್ರಯಾಣಿಕರ ಪರದಾಟ ನಡೆಸಿದ್ದು, ಮಂಗಳೂರಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಿಂದ ಧರ್ಮಸ್ಥಳ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು.

  • ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಿಸಿ ಮಾನವೀಯತೆ ಮೆರೆದ ಚಾಲಕ!

    ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಿಸಿ ಮಾನವೀಯತೆ ಮೆರೆದ ಚಾಲಕ!

    ಚಿಕ್ಕಮಗಳೂರು: ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಣೆ ಮಾಡಿ ಖಾಸಗಿ ಅಂಬುಲೆನ್ಸ್ ಚಾಲಕ ಮಾನವಿಯತೆ ಮೆರೆದಿದ್ದಾರೆ.

    ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿ ಜಿಶಾನ್ ಅಸಾದ್ ಮಾನವೀಯತೆ ಮೆರೆದ ಚಾಲಕ. ಚಿಕ್ಕಮಗಳೂರು ಹಾಸನ ಮಾರ್ಗದ ಕುಪ್ಪಳ್ಳಿ ಬಳಿ ಬರುತ್ತಿದ್ದಾಗ ಕೆಎಸ್‍ಆರ್ ಟಿಸಿ ಬಸ್ ಮತ್ತು ಮಿನಿ ಟೆಂಪೋ ನಡುವೆ ಡಿಕ್ಕಿಯಾಗಿದೆ. ಟೆಂಪೋದಲ್ಲಿದ್ದ 10 ಜನರಿಗೆ ಗಂಭೀರ ಗಾಯಗಳಾಗಿತ್ತು.

    10 ಜನ ಸವಾರರು ರಸ್ತೆಯಲ್ಲಿ ಬಿದ್ದು ರಕ್ತದ ಮಡುವಿನಲ್ಲಿ ನರಾಳಾಡುತ್ತಿದ್ದರು. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಅಪರಿಚಿತರನ್ನು ಜಿಶಾನ್ ಅಸಾದ್ ಕೂಡಲೇ ಹಾಸನದ ಜಿಲ್ಲಾಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಅಂಬುಲೆನ್ಸ್ ಆದರೂ ಜಿಶಾಬ್ ಬಿಡಿಗಾಸು ಪಡೆಯದೆ ವಾಪಾಸ್ ಆಗಿದ್ದಾರೆ.

    ಸದ್ಯ ಅಂಬುಲೈನ್ಸ್ ಚಾಲಕನ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಾತ್ರವಾಗಿದೆ.