Tag: Chikkamagaluru

  • ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಚಿಕ್ಕಮಗಳೂರು: ಜ್ಯೋತಿಷಿಯ ಮಾತು ಕೇಳಿ ಊರು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 50ಕ್ಕೂ ಹೆಚ್ಚು ಕುಟುಂಬಗಳು ಎನ್.ಆರ್.ಪುರಕ್ಕೆ ವಾಪಸ್ ಮರಳಿವೆ.

    ಊರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು, 50 ಕುಟುಂಬಗಳನ್ನು ಮನವೊಲಿಸುವಲ್ಲಿ ಶೃಂಗೇರಿ ಶಾಸಕ ರಾಜೇಗೌಡ ಯಶಸ್ವಿಯಾಗಿದ್ದಾರೆ.

    ಸಭೆಯಲ್ಲಿ ತಾತ್ಕಲಿಕವಾಗಿ ಎನ್‍ಆರ್ ಪುರ ದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಬೇರೆ ಕಡೆ ಜಾಗ ನೀಡುವುದಾಗಿ ಶಾಸಕರು ಹಾಗೂ ತಾಲೂಕು ಆಡಳಿತದಿಂದ ಭರವಸೆ ನೀಡಲಾಗಿದೆ. ಹೀಗಾಗಿ ಶಾಸಕರ ಮಾತಿಗೆ ಬೆಲೆಕೊಟ್ಟು 50 ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

    ಇತ್ತೀಚೆಗಷ್ಟೇ ಜ್ಯೋತಿಷಿಯೊಬ್ಬರ ಮಾತು ಕೇಳಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬ ಶಿಗುವಾನಿ ಗ್ರಾಮದಿಂದ ರಾತ್ರೋರಾತ್ರಿ ಹೋಗಿದ್ದರು. 8 ವರ್ಷದಲ್ಲಿ 25 ಜನ ನಿಧನ ಹೊಂದಿದ್ದರು. ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಯ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿತ್ತು. ಕೊನೆ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದ.

    ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಮಾಡಿದ್ದರು. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದರು.

  • ಇಂದು ಚಂದ್ರ ಗ್ರಹಣ – ಶೃಂಗೇರಿಯಲ್ಲಿ ವಿಶೇಷ ಪೂಜೆ, ಹೊರನಾಡಿನಲ್ಲಿ ನಿರಂತರ ಜಲಾಭಿಷೇಕ

    ಇಂದು ಚಂದ್ರ ಗ್ರಹಣ – ಶೃಂಗೇರಿಯಲ್ಲಿ ವಿಶೇಷ ಪೂಜೆ, ಹೊರನಾಡಿನಲ್ಲಿ ನಿರಂತರ ಜಲಾಭಿಷೇಕ

    ಚಿಕ್ಕಮಗಳೂರು: ಇಂದು ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಶಾರದಾಂಭೆ ಹಾಗೂ ಹೊರನಾಡು ಅನ್ನಪೂಣೇಶ್ವರಿ ದೇವಾಲಯದ ಪೂಜಾ ವಿಧಿ-ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಎಂದಿನಂತೆ ಪೂಜಾ-ಕೈಂಕರ್ಯಗಳು ನಡೆಯಲಿದ್ದು, ಬರುವ ಭಕ್ತರಿಗೆ ದೇವಿಯ ದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಇಂದು ಮಧ್ಯಾಹ್ನ 2 ಗಂಟೆಯ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಚಂದ್ರ ಗ್ರಹಣದ ಆರಂಭದ ಕ್ಷಣದಿಂದ ಗ್ರಹಣ ಸಂಪೂರ್ಣವಾಗಿ ಬಿಡುವ ಕ್ಷಣದವರೆಗೂ ಹೊರನಾಡಿನಲ್ಲಿ ಜಗನ್ಮಾತೆ ಅನ್ನಪೂರ್ಣೇಶ್ವರಿ ದೇವಿಗೆ ನಿರಂತರ ಜಲ ಅಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷಗೊಂಡ ಬಳಿಕ ವಿಶೇಷ ಪೂಜೆ ನಡೆಯಲಿದೆ.

    ಶೃಂಗೇರಿಯಲ್ಲೂ ಶಕ್ತಿದೇವತೆಯ ದರ್ಶನದ ಅವಕಾಶಕ್ಕೆ ಯಾವುದೇ ಅಡಚಣೆ ಇಲ್ಲ. ಎಂದಿನಂತೆ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 2.30ರ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಗ್ರಹಣದ ಆರಂಭದ ಕಾಲದಲ್ಲಿ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ನಡೆಯಲಿದ್ದು, ಗ್ರಹಣ ಸಂಪೂರ್ಣ ಮುಕ್ತಾಯಗೊಂಡ ಬಳಿಕವೂ ವಿಶೇಷ ಪೂಜೆ ನಡೆಯಲಿದೆ. ಬರುವ ಭಕ್ತರಿಗೆ ಪೂಜೆ ಮಾಡಿಸುವುದಕ್ಕಾಗಲಿ, ದೇವಿಯ ದರ್ಶನ ಮಾಡುವುದಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದು ಎರಡೂ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ. ಇದು ಖಗೋಳದ ಈ ಸಜಹ ಪ್ರಕ್ರಿಯೆ ಅಂತ ಗೊತ್ತಿದ್ದರೂ ಜನರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಕೆಡುಕುಂಟಾಗುತ್ತೆ ಅಂತ ಭಯಗೊಂಡಿದ್ದಾರೆ.

  • ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕಾಲುಜಾರಿ ಭದ್ರಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥದ ಬಳಿ ನಡೆದಿದೆ.

    ಕಿರಣ್ ಕೊಟ್ಯಾನ್(26) ನದಿಯಲ್ಲಿ ಕೊಚ್ಚಿ ಹೋದ ಯುವಕ. ಮಂಗಳೂರಿನಿಂದ 13 ಮಂದಿಯ ತಂಡ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿತ್ತು. ಈ ವೇಳೆ ಅಂಬುತೀರ್ಥದ ಬಳಿ ಕಿರಣ್ ಕೊಟ್ಯಾನ್ ಯುವಕ ಕಾಲು ಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಬಳಿಕ ಅವರ ಸ್ನೇಹಿತರು ಕಿರಣ್ ಕೊಟ್ಯಾನ್ ಅವರನ್ನು ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಕಳಸ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಕಿರಣ್ ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕಿರಣ್ ಜೊತೆಯಲ್ಲಿ ಬಂದಿದ್ದವರು ಸ್ಥಳದಲ್ಲಿದ್ದು, ಪೊಲೀಸರಿಗೆ ಶೋಧಕಾರ್ಯಕ್ಕಾಗಿ ಮಾಹಿತಿ ನೀಡುತ್ತಿದ್ದಾರೆ.

    ಕಿರಣ್ ಕೊಟ್ಯಾನ್ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

  • ಲಂಚ ನೀಡಲಿಲ್ಲವೆಂದು ರೋಗಿಗಳಿಗೆ ವೀಲ್‍ಚೇರ್ ನೀಡದ ಸಿಬ್ಬಂದಿ!

    ಲಂಚ ನೀಡಲಿಲ್ಲವೆಂದು ರೋಗಿಗಳಿಗೆ ವೀಲ್‍ಚೇರ್ ನೀಡದ ಸಿಬ್ಬಂದಿ!

    ಚಿಕ್ಕಮಗಳೂರು: ದಾನಿಗಳ ಹೆಸರಲ್ಲಿ ನಿರ್ಮಿಸಲಾಗಿರೋ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿಗೇನು ಕೊರತೆ ಇಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮಾತ್ರ ಮಾನವಿಯತೆಯ ಕೊರತೆ ಅಗಾಧವಾಗಿದೆ. ಇಲ್ಲಿನ ಸಿಬ್ಬಂದಿಗಳು ಲಂಚ ಕೇಳಿದ್ದಕ್ಕೆ ರೋಗಿಗಳ ಕಡೆಯವರು ಕೊಡಲಿಲ್ಲವೆಂದು ವೀಲ್ ಚೇರನ್ನೆ ಕೊಡದೆ ಅಮಾನವೀಯವಾಗಿ ವರ್ತಿಸಿದ್ದಾರೆ

    ಆಸ್ಪತ್ರೆ ಸಿಬ್ಬಂದಿ ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ರೋಗಿಯನ್ನು ಕುಟುಂಬಸ್ಥರು ಎತ್ತಿಕೊಂಡು ವೈದ್ಯರ ಬಳಿ ಹೋಗುತ್ತಿದ್ದಾರೆ. ಸಿಬ್ಬಂದಿಗಳ ಈ ವರ್ತನೆಗೆ ಸಾರ್ವಜನಿಕರು ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಜಿಲ್ಲಾಸ್ಪತ್ರೆಗೆ ಬರೋದೆ ಬಡ ರೋಗಿಗಳು. ಇಲ್ಲಿ ದಿನನಿತ್ಯ ಆಸ್ಪತ್ರೆ ಮೇಲಿನ ಆರೋಪಕ್ಕೆ ಪುಷ್ಟಿ ನೀಡುವಂತಹ ದೃಶ್ಯಗಳು ನಡೆಯುತ್ತಲೇ ಇರುತ್ತೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಯ ಸಂಬಂಧಿಗಳು ಅಂತಹ ವಿಡಿಯೋವನ್ನ ಸೆರೆ ಹಿಡಿಯುತ್ತಲೇ ಇರುತ್ತಾರೆ. ಇದೀಗ ಮಹಿಳೆಯನ್ನು ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

    ಅನಾರೋಗ್ಯದಿಂದ ನರಳಾಡುತ್ತಿದ್ದ ಮಹಿಳೆಯನ್ನ ಸಂಬಂಧಿಕರೇ ಎತ್ತಿಕೊಂಡು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಾರೆ. ಇಷ್ಟೆಲ್ಲಾ ನಡೆದರೂ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ಮಾತ್ರ ತಮಗೇನು ಗೊತ್ತಿಲ್ಲದಂತಿದ್ದು, ನಮ್ಮ ಆಸ್ಪತ್ರೆಯಲ್ಲಿ ಅಂತಹ ಘಟನೆ ನಡೆದಿಲ್ಲ. ಕೂಡಲೇ ಕೂಲಂಕುಶವಾಗಿ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ತೇನೆ ಎಂದು ಹೇಳುತ್ತಾರೆ.

  • ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ರೂ.

    ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ರೂ.

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕ ಅಶೋಕ್ ಕುಟುಂಬಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅವರು ಶಾಸಕರ ಪರಿಹಾರ ನಿಧಿಯಿಂದ 5 ಲಕ್ಷದ ಚೆಕ್ ವಿತರಿಸಿದ್ದಾರೆ.

    ಜುಲೈ 11 ರಂದು ಬಸ್ತಿ ಹಳ್ಳದ ಮೇಲೆ ಕೊಗ್ರೆ ಗ್ರಾಮಕ್ಕೆ ಹೋಗುತ್ತಿದ್ದ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ಎನ್.ಆಡಿ.ಆರ್.ಎಫ್ ತಂಡ ಮೂರು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿ, ನೀರಿನ ರಭಸ ಕಂಡು ವಾಪಸ್ಸಾಗಿದ್ದರು.

    ಸ್ಥಳೀಯರೇ ಚಂದಾ ಎತ್ತಿ ಖಾಸಗಿ ಈಜು ಪಟುಗಳನ್ನ ಕರೆಸಿ ಮೃತ ದೇಹ ಹುಡುಕಿಸಿದ್ದರು. 9 ದಿನಗಳ ಕಾಲ ನಿರಂತರವಾಗಿ ಶವ ಹುಡುಕಿದ್ದರಿಂದ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಬಸ್ತಿ ಹಳ್ಳದಿಂದ ಹತ್ತು ಕಿ.ಮೀ. ದೂರದ ಭದ್ರಾ ಗೇಟ್ ಬಳಿ ಅಶೋಕ್ ಮೃತ ದೇಹ ಪತ್ತೆಯಾಗಿತ್ತು.

    ಶುಕ್ರವಾರ ಮೃತ ಅಶೋಕ್ ಮನೆಗೆ ಭೇಟಿ ನೀಡಿದ್ದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅಶೋಕ್ ಕುಟುಂಬಕ್ಕೆ ಚೆಕ್ ನೀಡಿ ಸಾಂತ್ವಾನ ಹೇಳಿದ್ದಾರೆ.

  • 12 ವರ್ಷದ ಬಳಿಕ ಮೈದುಂಬಿ ಹರೀತಿದೆ ಬೃಹತ್ ಚೆಕ್ ಡ್ಯಾಂ

    12 ವರ್ಷದ ಬಳಿಕ ಮೈದುಂಬಿ ಹರೀತಿದೆ ಬೃಹತ್ ಚೆಕ್ ಡ್ಯಾಂ

    ಚಿಕ್ಕಮಗಳೂರು: ಕಳೆದ 12 ವರ್ಷಗಳಿಂದ ತುಂಬದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬೃಹತ್ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.

    ನೋಡೋಕೆ ಮಿನಿ ಡ್ಯಾಂನಂತಿರೋ ಈ ಬೃಹತ್ ಚೆಕ್ ಡ್ಯಾಂ ತುಂಬಿರೋದ್ರಿಂದ ಕುಡಿಯೋ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಥಳಿಯರಲ್ಲಿ ಸಂತಸ ಮೂಡಿದೆ. ಇದೊಂದೆ ಅಲ್ಲ, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು, ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂಗಳು, ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿದ್ರೆ, ನದಿಗಳು ತಿಂಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

    ಎನ್.ಆರ್.ಪುರ ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಭದ್ರಾ ಡ್ಯಾಂಗೂ ಕೂಡ ಅಪಾರ ಪ್ರಮಾಣದ ನೀರು ಹರಿದು ಹೋಗ್ತಿದೆ.

  • ಚಿಕ್ಕಮಗಳೂರು – ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿತ – ಪ್ರವಾಸಿಗರು, ಸ್ಥಳೀಯರು ಪರದಾಟ

    ಚಿಕ್ಕಮಗಳೂರು – ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿತ – ಪ್ರವಾಸಿಗರು, ಸ್ಥಳೀಯರು ಪರದಾಟ

    ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

    ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ಹೆಚ್ಚಿನ ಮಳೆ ಉಂಟಾಗುತ್ತಿದ್ದು, ಹದಿನೈದು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಹೆಚ್ಚಾಗಿದೆ. ಇದರಿಂದ ಎಂಟತ್ತು ದಿನಗಳಲ್ಲಿ ಸಣ್ಣ ಪ್ರಮಾಣದ ಗುಡ್ಡದ ಮಣ್ಣು ಕುಸಿತದ ಘಟನೆಗಳು ನಡೆದಿತ್ತು. ಆದರೆ ಇಂದು ಬೆಳಗ್ಗಿನ ಜಾವ ಕವಿಕಲ್ ಗಂಡಿ ಸಮೀಪ ಗುಡ್ಡ ಕುಸಿದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಈ ಮಾರ್ಗವಾಗಿ ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ವಾಹನಗಳಲ್ಲೇ ಉಳಿದುಕೊಂಡಿದ್ದಾರೆ. ಇನ್ನು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ತೋಟದೊಳಗಿನ ಕಾಲು ದಾರಿಯಲ್ಲಿ ನಡೆದೆ ಹೋಗುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮಾಂತರ ಪೊಲೀಸರು ಜೆಸಿಬಿ ಮೂಲಕ ಕುಸಿದಿರುವ ಗುಡ್ಡದ ಮಣ್ಣನ್ನು ಮತ್ತೊಂದು ಬದಿಗೆ ತಳ್ಳಿ ಸಂಚಾರವನ್ನು ಸುಗಮಗೊಳಿಸುತ್ತಿದ್ದಾರೆ. ಗುಡ್ಡ ಕುಸಿತದಿಂದ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

  • ಆಟೋ ಮೇಲೆ ಎಸ್‍ಪಿ ಅಣ್ಣಾಮಲೈ ಫೋಟೋ ಹಾಕಿಕೊಂಡ ಅಭಿಮಾನಿ

    ಆಟೋ ಮೇಲೆ ಎಸ್‍ಪಿ ಅಣ್ಣಾಮಲೈ ಫೋಟೋ ಹಾಕಿಕೊಂಡ ಅಭಿಮಾನಿ

    ಚಿಕ್ಕಮಗಳೂರು: ಸಿನಿಮಾ ಸ್ಟಾರ್ ಗಳು, ಕ್ರಿಕೆಟ್ ಪ್ಲೇಯರ್ಸ್‍ ಗಳು, ರಾಜಕಾರಣಿಗಳಿಗೆ ಅಭಿಮಾನಿಗಳಿರುವಂತೆ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ಜನ ತಮ್ಮ ನೆಚ್ಚಿನ ನಾಯಕನ ಭಾವಚಿತ್ರವನ್ನ ಆಟೋ, ಬೈಕ್, ಕಾರುಗಳ ಮೇಲೆ ಹಾಕಿಕೊಳ್ಳುವಂತೆ ಕಾಫಿನಾಡಿನ ಅಣ್ಣಾಮಲೈ ಅಭಿಮಾನಿಗಳು ತಮ್ಮ ಹೀರೋವಿನ ಫೋಟೋವನ್ನ ಆಟೋಗಳ ಮೇಲೆ ಹಾಕಿಸಿಕೊಂಡಿದ್ದಾರೆ.

    ನಗರದ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂಬದಿ ಅಣ್ಣಾಮಲೈ ಭಾವಚಿತ್ರ ಹಾಕಿದ್ದು, ಅದರ ಕೆಳಗೆ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಬದಿಯಲ್ಲಿ ಅಬ್ದುಲ್ ಕಲಾಂ ಭಾವಚಿತ್ರ ಹಾಕಿಸಿ ಅದರ ಕೆಳಗೆ ಸ್ವಾಭಿಮಾನಿ ಅಂತ ಬರೆದು ಕೊಂಡಿದ್ದಾನೆ.

    ಜನಸಾಮಾನ್ಯರು ಎಲ್ಲರ ಫೋಟೋವನ್ನೂ ಹೀಗೆ ಹಾಕಿಕೊಳ್ಳುವುದಿಲ್ಲ. ಜನರ ಮನಸ್ಸಿನಲ್ಲಿ ಉಳಿದವರ ಫೋಟೋವನ್ನ ಮಾತ್ರ ಹಾಕಿಕೊಳ್ಳುತ್ತಾರೆ. ಕಾಫಿನಾಡಿನ ಆಟೋ ರಾಜರಿಗೆ ಅಣ್ಣಾಮಲೈ ಕೂಡ ಜನರ ಮನಸ್ಸಿನಲ್ಲಿ ಉಳಿದ ವ್ಯಕ್ತಿಯಾಗಿದ್ದಾರೆ. ಕಾಫಿನಾಡಿಗೆ ನೂರಾರು ಎಸ್ಪಿಗಳು ಬಂದು ಹೋಗಿದ್ದಾರೆ. ಆದರೆ ಎಲ್ಲರನ್ನೂ ಗೌರವಿಸಿರುವ ಮಲೆನಾಡಿಗರು ಅಣ್ಣಾಮಲೈರನ್ನ ಪ್ರೀತಿಸಿದ್ದಾರೆ. ಆ ಮನದಾಳದ ಪ್ರೀತಿಯೇ ಈಗ ಆಟೋಗಳ ಮೇಲೆ ಅವರ ಭಾವಚಿತ್ರ ಹಾಕಿಕೊಳ್ಳುವಂತೆ ಮಾಡಿದೆ. ಐಪಿಎಸ್ ಆಫೀಸರ್ ಆದರೂ ಕೂಡ ಅಹಂಕಾರವಿಲ್ಲದ ಅಣ್ಣಾಮಲೈ ಅವರ ಸರಳತೆ ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

  • 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    ಚಿಕ್ಕಮಗಳೂರು: ಎಸ್.ಪಿ ಅಣ್ಣಾಮಲೈ ಇನ್ನು 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುವುದಿಲ್ಲ.

    ಎಸ್.ಪಿ ಅಣ್ಣಮಲೈ ಅವರನ್ನು ರಾಜ್ಯ ಸರ್ಕಾರ ಮಾನಸ ಸರೋವರದಲ್ಲಿ ಸ್ಪೆಷಲ್ ಇನ್‍ಚಾರ್ಜ್ ಆಫೀಸರ್ ಆಗಿ ನೇಮಿಸಿದ್ದಾರೆ. ಆದ್ದರಿಂದ 21 ದಿನಗಳ ಕಾಲ ಅವರು ಮಾನಸ ಸರೋವರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಈ 21 ದಿನಗಳ ಕಾಲ ಚಿಕ್ಕಮಗಳೂರು ಎಸ್ಪಿಯಾಗಿ ನಕ್ಸಲ್ ನಿಗ್ರಹ ದಳದ ಎಸ್.ಪಿ ಆಗಿದ್ದ ಲಕ್ಷ್ಮಿ ಪ್ರಸಾದ್ ಚಿಕ್ಕಮಗಳೂರು ಎಸ್‍ಪಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

  • ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಲಗದ್ದೆಗಳಲ್ಲಿ ಕಟೌಟ್ ಗಳಾಗುವ ಮೂಲಕ ರೈತ ಸ್ನೇಹಿಯಾಗಿದ್ದಾರೆ.

    ಹೌದು. ಚಿಕ್ಕಮಗಳೂರು ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಭತ್ತದ ಗದ್ದೆಯಲ್ಲಿ ಈ ಮೂವರು ಬಿಜೆಪಿ ನಾಯಕರ ಕಟೌಟ್ ಗಳನ್ನು ಕಾವಲು ಕಾಯಲು ಬಳಕೆ ಮಾಡಲಾಗಿದೆ.

    ಚುನಾವಣೆಯಲ್ಲಿ ಬಳಸಿದ ಕಟೌಟ್ ಗಳನ್ನು ಇದೀಗ ರೈತರು ತಮ್ಮ ಜಮೀನಿನಲ್ಲಿ ಬೆಳೆ ಹಾಳು ಮಾಡುವ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಬಳಸಿದ್ದಾರೆ. ರೈತರ ಜಮೀನಿನಲ್ಲಿ ಮೋದಿ, ಶಾ ಮತ್ತು ಬಿಎಸ್‍ವೈ ಕಟೌಟುಗಳು ರಾರಾಜಿಸುತ್ತಿದ್ದು, ನೋಡುಗರಿಗೆ ಮನರಂಜನೆ ನೀಡುತ್ತಿವೆ.