Tag: Chikkamagaluru

  • ಕೊಡಗಿನ ಜನರಿಗೆ ಸ್ವಲ್ಪ ನಿರಾಳ- ಮಲೆನಾಡಿನಲ್ಲಿ ಭಾರೀ ಗಾಳಿಗೆ ಕುಸಿದ ಧರೆ

    ಕೊಡಗಿನ ಜನರಿಗೆ ಸ್ವಲ್ಪ ನಿರಾಳ- ಮಲೆನಾಡಿನಲ್ಲಿ ಭಾರೀ ಗಾಳಿಗೆ ಕುಸಿದ ಧರೆ

    ಮಡಿಕೇರಿ: ಕೊಡಗಿನ ಜನರಿಗೆ ಸ್ವಲ್ಪ ನಿರಾಳರಾಗಿದ್ದು, ಮಹಾಮಳೆಯ ತೀವ್ರತೆಯ ಪ್ರಮಾಣ ಕಡಿಮೆಯಾಗಿದೆ.

    ಶುಕ್ರವಾರ ಬೆಳಗ್ಗೆಯಿಂದ ಇಂದು ಶನಿವಾರದವರೆಗೆ 28 ಮಿಮೀ ಮಳೆಯಾಗಿದೆ. ಇದು ಸರಾಸರಿ ಮಳೆಯ ಪ್ರಮಾಣಯಾಗಿದ್ದು, ಮೊನ್ನೆ 100 ಮಿಮೀ ಮಳೆಯಾಗಿತ್ತು. ಸದ್ಯ ಈಗ ಶೇ. 70ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುತ್ತೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

    ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ನಿಂತ ಮೇಲೆ ಮಲೆನಾಡಿನ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ತಡೆಗೋಡೆ ಸಮೇತ ಧರೆ ಕುಸಿದು ಬಿದಿದ್ದೆ. ಅಲ್ಲದೇ ರಸ್ತೆ ಪಕ್ಕದಲ್ಲೇ ಭೂ ಕುಸಿತವಾಗಿದೆ. ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಲ್ಲಿ ಚಲಿಸುತ್ತಿದ್ದಾರೆ.

    ದೂಬಳ ಕೈಮರದಿಂದ ದೂಬಳ ಎಸ್ಟೇಟ್ ನ ರಸ್ತೆ ಇದ್ದಾಗಿದ್ದು, ಐದಕ್ಕೂ ಅಧಿಕ ಗ್ರಾಮಗಳಿಗೆ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಪಕ್ಕದಲ್ಲೇ ಕುಸಿದಿರೋದ್ರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಲ್ಲದೇ ಸಿಮೆಂಟ್ ತಡೆಗೋಡೆ ಇಪ್ಪತ್ತು ಅಡಿಯಾಚೆಗೆ ಕುಸಿದು ಹೋಗಿದೆ. ಸಿಮೆಂಟ್ ತಡೆಗೋಡೆ ದಾರಿಗಿಂತ ಕೆಳಭಾಗಕ್ಕೆ ಕುಸಿದಿದ್ದು, ಬದಲಿ ಮಾರ್ಗವಿಲ್ಲದ ಕಾರಣ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಮಹಾಮಳೆಯಲ್ಲಿ ಸಿಲುಕಿದ್ದ 3 ಸಾವಿರ ಜನರನ್ನು ರಕ್ಷಿಸಲಾಗಿದೆ. ಇನ್ನೂ 600 ಮಂದಿಯ ರಕ್ಷಣೆಯಾಗಬೇಕಿದೆ, ಜಿಲ್ಲೆಯಲ್ಲಿ 31 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ರಕ್ಷಣಾ ತಂಡಗಳಿಂದ ಭರದ ಕಾರ್ಯಾಚರಣೆ ನಡೀತಿದೆ ಅಂತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಇಂದು ಸಿಎಂ ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

    ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದೆರಡು ತಿಂಗಳಿನಿಂದ ಸುರಿಯುತ್ತಿದ್ದ ವರುಣ ದೇವ, ಒಂಬತ್ತು ದಿನಗಳಿಂದ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಪರಿಣಾಮ ಮಹಾಮಳೆಗೆ ಭೂ ಕುಸಿತ ಉಂಟಾಗಿದೆ.

    ಕೊಪ್ಪ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಧರೆ ಕುಸಿತ ಉಂಟಾಗಿದ್ದು, ಇದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮೇಲ್ಪಾಲ್, ಹೊದಸಾಳು ಮತ್ತು ಕೆರೆಹಕ್ಲು ಗ್ರಾಮಕ್ಕೆ ದಾರಿಯೇ ಇಲ್ಲದಂತಾಗಿದೆ. ರಸ್ತೆ ಸಂಪೂರ್ಣ ಕುಸಿದಿರುವುದರಿಂದ ಬದಲಿ ಮಾರ್ಗವಿಲ್ಲದ ಕಾರಣ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ ಜಿಲ್ಲಾಡಳಿತ ಮತ್ತು ಶಾಸಕರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಪುನರ್ವಸು ಹಾಗೂ ಕುಂಭದ್ರೋಣ ಮಳೆ ಕಂಡು ಕಂಗಾಲಾಗಿದ್ದ ಮಲೆನಾಡಿಗರು ಇದೀಗ, ಆಶ್ಲೇಷನ ಆರ್ಭಟಕ್ಕೆ ಕಂಗೆಟ್ಟಿದ್ದಾರೆ. ಜಿಲ್ಲೆಯ ಕೊಪ್ಪ, ಮೂಡಿಗೆರೆಯಲ್ಲಿ ಜೋರು ಮಳೆ ಇದ್ದರೆ, ಕಳಸ, ಕುದುರೆಮುಖ, ಕೆರೆಕಟ್ಟೆ ಹಾಗೂ ಶೃಂಗೇರಿ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಹೇಳತೀರದ್ದಾಗಿದೆ.

    ಬುಧವಾರ ಭದ್ರಾ ಅಣೆಕಟ್ಟಿನಿಂದ 1 ಲಕ್ಷಕ್ಕೂ ಅತಿ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ತರೀಕೇರಿ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೇತುವೆಯ ಮುಳುಗಡೆಯಾಗಿದೆ. ಭಾರೀ ಮಳೆಯಿಂದ ಜೀವನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಸಾಕಷ್ಟು ಅನಾಹುತಗಳನ್ನ ಸೃಷ್ಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೇಗವಾಗಿ ಬಂದ ಬೈಕ್ ವೃದ್ಧೆಗೆ ಡಿಕ್ಕಿ- ಮೂವರಿಗೂ ಗಾಯ

    ವೇಗವಾಗಿ ಬಂದ ಬೈಕ್ ವೃದ್ಧೆಗೆ ಡಿಕ್ಕಿ- ಮೂವರಿಗೂ ಗಾಯ

    ಚಿಕ್ಕಮಗಳೂರು: ವೇಗವಾಗಿ ಬಂದ ಬೈಕ್ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಜಿಲ್ಲೆಯ ಕಳಸ ಸಮೀಪದ ಬಾಳೆಹೊಳೆ ಪಟ್ಟಣದಲ್ಲಿ ಈ ನಡೆದಿದೆ. ವೃದ್ಧೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ರಸ್ತೆ ದಾಟುವ ಆತುರದಲ್ಲಿದ್ದ ವೃದ್ಧೆ ಎದುರಿನಿಂದ ಬರುತ್ತಿದ್ದ ಬೈಕನ್ನು ಗಮನಿಸದೇ ಇರುವುದರಿಂದ ರಭಸದಿಂದ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ಧೆ ಹಾರಿ ಬಿದ್ದಿದ್ದಾರೆ. ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಘಟನೆಯಿಂದಾಗಿ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿವೆ. ಸದ್ಯ ಮೂವರು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಧರೆಗುರುಳಿದ ಮರ, ಕುಸಿದ ಗುಡ್ಡ

    ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಧರೆಗುರುಳಿದ ಮರ, ಕುಸಿದ ಗುಡ್ಡ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿಗರು ತತ್ತರಿಸಿದ್ದಾರೆ. ಇತ್ತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಬೃಹತ್ ಮರಗಳು, ರಸ್ತೆ ಬದಿಯ ಗುಡ್ಡಗಳು ಧರೆಗುರುಳಿದ್ದು, ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

    ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರ ಹಾಂದಿ ಬಳಿ ಬೃಹತ್ ಮರವೊಂದು ರಸ್ತೆ ಬಿದ್ದ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಡ್ಡ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಭಾನುವಾರವಾದ್ದರಿಂದ ಸಾವಿರಾರು ಪ್ರವಾಸಿಗರು ಗಿರಿಭಾಗ ಮತ್ತು ದತ್ತಪೀಠಕ್ಕೆ ಬಂದಿದ್ದರು. ಆದರೆ ಮಾರ್ಗ ಮಧ್ಯೆ ಅಂದರೆ ಚಿಕ್ಕಮಗಳೂರಿನ ಕೈಮರ ಸಮೀಪ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ಗಿರಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಮತ್ತು ಸ್ಥಳಿಯರು ಪರದಾಟ ಮಾಡಿದ್ದಾರೆ.

    ಕುದುರೆಮುಖ, ಕಳಸದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಕಳೆದ 40 ದಿನದಲ್ಲಿ 12 ಬಾರಿ ಮುಳುಗಿರುವ ಈ ಸೇತುವೆ ಇದೀಗ 13ನೇ ಬಾರಿ ಮುಳುಗುವ ಸಾಧ್ಯತೆ ಇದೆ. ಭದ್ರೆಯ ಒಡಲಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಹೇರೂರು ಬಳಿಯೂ ಗುಡ್ಡ ಕುಸಿದಿದ್ದು, ಹೇರೂರು-ಬಸರಿಕಟ್ಟೆ ಮಾರ್ಗ ಕೂಡ ಬಂದ್ ಆಗಿದೆ. ಇತ್ತ ಸುರಿಯುತ್ತಿರುವ ಮಳೆ ಕಾರ್ಯಚರಣೆಗೂ ಅಡ್ಡಿಯುಂಟು ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಸಮೀಪ ನಡೆದಿದೆ.

    ದಾವಣಗೆರೆ ಮೂಲದ ಪ್ರವಾಸಿ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಬಸವರಾಜ್ ತನ್ನ ಐವರು ಸ್ನೇಹಿತರೊಂದಿಗೆ ಎರಡು ದಿನಗಳ ಹಿಂದೆ ಪ್ರವಾಸಕ್ಕೆಂದು ಲಕ್ಕವಳ್ಳಿ ಡ್ಯಾಂಗೆ ಬಂದಿದ್ದರು. ಈ ವೇಳೆ ಸಹ ಸ್ನೇಹಿತರು ಅಲ್ಲೇ ನಾಲೆಯ ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವ ವೇಳೆ ಬಸವರಾಜ್ ಏಕಾಂಗಿಯಾಗಿ ಈಜುತ್ತಿದ್ದರು. ಅವರ ಸ್ನೇಹಿತರು ಬೇಡ ಬಾ ಎಂದ್ರು ಬಾರದ ಬಸವರಾಜ್ ಈಜುತ್ತಲೇ ಸ್ನೇಹಿತರು ನೋಡುತ್ತಿದ್ದಂತೆಯೇ ಮುಳುಗಿ ಹೋಗಿದ್ದಾರೆ.

    ಈ ಸನ್ನಿವೇಶವನ್ನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮೃತದೇಹ ಸಿಗುವ ಲಕ್ಷಣಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ನಾಲೆ ದಾವಣಗೆರೆಗೆ ಹೋಗಿ ವಾಣಿವಿಲಾಸ ಸಾಗರದವರೆಗೂ ಹರಿಯಲಿದೆ.

    ದಾವಣಗೆರೆಯಿಂದ ಕೂಡ ನೂರಾರು ಜನ ಬಂದು ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ನಲ್ಲೂರು ಬಳಿ ನಾಲೆ ಎರಡು ವಿಭಾಗವಾಗಿ ಹರಿಯಲಿದೆ. ಒಂದು ವಾಣಿವಿಲಾಸ ಸಾಗರಕ್ಕೆ ಹೋದರೆ ಮತ್ತೊಂದು ಬೇರೆ ಕಡೆ ಹೋಗುತ್ತೆದೆ. ಸದ್ಯಕ್ಕೆ ಪೊಲೀಸರು ಮಾರ್ಗದುದ್ದಕ್ಕೂ ಹುಡುಕುತ್ತಿದ್ದಾರೆ.

    ನಲ್ಲೂರು ಪೊಲೀಸರು, ಸ್ಥಳಿಯರು ಮತ್ತು ಈಜು ತಜ್ಞರು ಮೃತದೇಹ ತೇಲಿಬರಬಹುದೆಂದು ಕಾಯುತ್ತಿದ್ದಾರೆ. ಈ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಚಿಕ್ಕಮಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅದಾಗೇ ಬೀಳುವವರೆಗೂ, ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಹೊಟ್ಟೆ ತುಂಬುವವರೆಗೂ ಅಥವಾ ಹಿಟ್ಟು ಖಾಲಿಯಾಗೋವರೆಗೂ ಈ ಸರ್ಕಾರ ಇರಬಹುದು. ಈ ಸರ್ಕಾರ ಅದಾಗೇ ಅದು ಬೀಳೂವವರೆಗೂ, ನಾವು ಬೀಳಿಸುವ ಕೆಲಕ್ಕೆ ಕೈ ಹಾಕಲ್ಲ ಎಂದರು.

    ಜನರ ಬಯಕೆಯಲ್ಲೂ ಈ ಸರ್ಕಾರ ಇರಬೇಕೆಂದು ಇಲ್ಲ. ಅಷ್ಟೇ ಅಲ್ಲದೆ ಇರಬೇಕೆಂಬ ರೀತಿಯಲ್ಲಿ ಕೆಲಸ, ಕಾರ್ಯಗಳನ್ನ ಈ ಸರ್ಕಾರ ಮಾಡುತ್ತಿಲ್ಲ. ನಾನು ಮೊದಲೇ ಹೇಳಿದಂತೆ ಹಿಟ್ಟು ಹಳಸಿತ್ತು ನಾಯಿ ಕಾದಿತ್ತು ಎಂಬಂತಾಗಿದೆ ಈ ಸರ್ಕಾರದ ಪಾಡು ಎಂದು ವ್ಯಂಗ್ಯವಾಡಿದರು.

    ಈ ವೇಳೆ ವಿವೇಕಾನಂದರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಭಗವಾನರ ಹೇಳಿಕೆಗೂ ತಿರುಗೇಟು ನೀಡಿದ ಅವರು, ಕೆಲವರು ಪ್ರಚಾರದಲ್ಲಿ ಇರಲು ಹಾಗೂ ನಮಗೆ ಈ ರೀತಿಯೂ ಬುದ್ಧಿ ಭ್ರಮಣೆಯಾಗಿದೆ ಎಂದು ತೋರಿಸೋದಕ್ಕೆ ಕೆಲ ಹೇಳಿಕೆಯನ್ನ ಕೊಡುತ್ತಿರುತ್ತಾರೆ. ಭಗವಾನ್ ಹೇಳಿಕೆ ಹೊಸದೇನಲ್ಲ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಚಿಕ್ಕಮಗಳೂರು: ನೀರಿನ ಮಧ್ಯೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕನ ಮೃತದೇಹ 11 ದಿನಗಳಾದರೂ ಪತ್ತೆಯಾಗಿಲ್ಲ.

    ಕಿರಣ್ ನದಿಯಲ್ಲಿ ಕೊಚ್ಚಿ ಹೋಗಿ 9 ದಿನಗಳ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ತಂಡ ಬಂದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಾ ಸಮೀಪದ ಅಂಬುತೀರ್ಥ ಜಲಪಾತಕ್ಕೆ ಜುಲೈ 26ರಂದು ಮಂಗಳೂರು ಸಮೀಪದ ತುಂಬೆ ನಿವಾಸಿ ಎಂಜಿನಿಯರ್ ಕಿರಣ್ ಕೊಟ್ಯಾನ್ ತನ್ನ 12 ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದನು. ಆಗ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ಸೆಲ್ಫಿ ತೆಗೆದು ಕೊಳ್ಳುವಾಗ ಕಾಲು ಜಾರಿಗೆ ನದಿಗೆ ಬಿದ್ದು ಕೊಚ್ಚಿ ಹೋಗಿದ್ದನು.

    ಪೊಲೀಸರು, ಸ್ಥಳೀಯರು ಹಾಗೂ ಸಂಬಂಧಿಕರು ಕಿರಣ್ ಮೃತದೇಹಕ್ಕಾಗಿ ಶೋಧ ನಡೆಸಿದ್ದರು ಸಿಕ್ಕಿರಲಿಲ್ಲ. ಕಳೆದ 11 ದಿನಗಳಿಂದಲೂ ಸ್ಥಳೀಯರು ಹಾಗೂ ಪೊಲೀಸರು ನದಿಯ ದಡದಲ್ಲಿ ಮೃತದೇಹ ಸಿಲುಕಿರಬಹುದೆಂದು ಶೋಧ ನಡೆಸುತ್ತಿದ್ದರು. ಆದರೆ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ನಂತರ ಕಿರಣ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಶನಿವಾರ ಎನ್‍ಡಿಆರ್ ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ನದಿಗೆ ಇಳಿದು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ. ಆದರೆ ನೀರಿನ ರಭಸ ಕೂಡ ಅಷ್ಟೇ ವೇಗವಾಗಿದೆ. ಆದರೂ ಎನ್‍ಡಿಆರ್ ಎಫ್ ತಂಡ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಬಸ್ತಿಮಠ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಗಲೂ ಎನ್‍ಡಿಆರ್ ಎಫ್ ತಂಡ ನಾಲ್ಕು ದಿನ ಮೃತದೇಹಕ್ಕಾಗಿ ಶೋಧ ನಡೆಸಿ ನೀರಿನ ವೇಗ ಕಂಡು ವಾಪಸ್ಸಾಗಿತ್ತು.

  • ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮಕ್ಕೆ ಕಾಡೆಮ್ಮೆಯೊಂದು ರಾಜಗಾಂಭೀರ್ಯವಾಗಿ ಓಡಾಡುತ್ತಿದೆ.

    ಕಳೆದೊಂದು ತಿಂಗಳಿಂದ ಈ ಕಾಡೆಮ್ಮೆ ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದೆ. ಕಾಡೆಮ್ಮೆ ಬಂದು ಹೋಗೋದನ್ನು ಜನ ನಿಂತು ನೋಡುತ್ತಿದ್ದಾರೆ. ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡರೆ ಹೆದರಿ ಓಡಿ ಹೋಗುತ್ತದೆ. ಆದರೆ ಈ ಕಾಡೆಮ್ಮೆ ಆಗಲ್ಲ. ಗ್ರಾಮಕ್ಕೆ ಬಂದು ಒಂದು ರೌಂಡ್ ಹಾಕಿ ಹೋಗುತ್ತದೆ.

    ಕಳೆದೊಂದು ತಿಂಗಳಿಂದ ಆಗಾಗ ಗ್ರಾಮದ ಮುಖ್ಯ ರಸ್ತೆಗೆ ಬರುತ್ತಿರುವ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತಿದೆ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರುವುದರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದರೆ ಊರೊಳಗೆ ಬರುವುದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರುತ್ತವೆ. ಗ್ರಾಮಕ್ಕೆ ಈ ಕಾಡೆಮ್ಮೆ ಬಂದು ಏನು ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯವಾಗಿ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಕ್ಕೀಡಾಗಿದ್ದಾರೆ.

    https://www.youtube.com/watch?v=ggLOcvSx75g

  • ಸಿಎಂ ಎಚ್‍ಡಿಕೆಗಾಗಿ ಹರಕೆ ಹೊತ್ತಿದ್ದ ಮಂದಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

    ಸಿಎಂ ಎಚ್‍ಡಿಕೆಗಾಗಿ ಹರಕೆ ಹೊತ್ತಿದ್ದ ಮಂದಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

    ಚಿಕ್ಕಮಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದ ಜಿಲ್ಲೆಯ ಕಂಚೀಪುರ ಗ್ರಾಮದ ಹತ್ತು ಜನ 219 ಕಿ.ಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ.

    ಏಳು ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ ಮೂರು ದಿನ ಕಳೆದಿದ್ದು, ಪ್ರತಿ ರಾತ್ರಿ ದೇವಸ್ಥಾನಗಳಲ್ಲಿ ಆಶ್ರಯ ಪಡೆದು ಮುಂದೆ ಸಾಗುತ್ತಿದ್ದಾರೆ. ಸದ್ಯ ಇವರ ಪಾದಯಾತ್ರೆ ಚಿಕ್ಕಮಗಳೂರಿನಲ್ಲಿ ಸಾಗುತ್ತಿದೆ. ಕಾಲ್ನಡಿಗೆ ಮೂಲಕ ಸಾಗುತ್ತಿರುವ ಇವರು ಕುಮಾರಸ್ವಾಮಿಗೆ ಎಲ್ಲಾ ಸವಾಲುಗಳನ್ನ ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರಿಸುವ ಶಕ್ತಿ ನೀಡಲೆಂದು ಬೇಡಿಕೊಳ್ಳುತ್ತೇವೆ ಅಂತ ಅವರು ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೂ ಹಲವು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸಲೆಂದೇ ಬಿಜೆಪಿ ಹಲವು ಆರೋಪಗಳನ್ನ ಮಾಡುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೂಡ ಕುಮಾರಸ್ವಾಮಿ ಅವರಿಗೆ ತೊಂದರೆ ಕೊಡಲೆಂದೇ ಮಾಡುತ್ತಿರುವ ಹಿಡನ್ ಅಜೆಂಡಾ ಎಂದು ಅವರು ಆರೋಪಿಸಿದರು.

    ಕುಮಾರಸ್ವಾಮಿಯ ಅಪ್ಪಟ ಭಕ್ತರಂತೆ ಹತ್ತು ಜನರೂ ಎಚ್‍ಡಿಕೆಯ ಭಾವಚಿತ್ರವಿರುವ ಒಂದೇ ರೀತಿಯ ಟೀ ಶರ್ಟ್ ಧರಿಸಿಕೊಂಡು ಪಾದಯಾತ್ರೆ ತೆರಳುತ್ತಿದ್ದಾರೆ.

  • ಶಿಥಿಲಾವಸ್ಥೆ ತಲುಪಿದ ಹೆಬ್ಬಾಳೆ ಸೇತುವೆ- ಹೊರನಾಡು ದೇಗುಲಕ್ಕೆ ಹೋಗೋ ಪ್ರವಾಸಿಗರೇ ಎಚ್ಚರ

    ಶಿಥಿಲಾವಸ್ಥೆ ತಲುಪಿದ ಹೆಬ್ಬಾಳೆ ಸೇತುವೆ- ಹೊರನಾಡು ದೇಗುಲಕ್ಕೆ ಹೋಗೋ ಪ್ರವಾಸಿಗರೇ ಎಚ್ಚರ

    ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗೋ ಪ್ರವಾಸಿಗರೇ ಎಚ್ಚರವಾಗಿರಿ ಹೆಬ್ಬಾಳೆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

    ಮೂಡಿಗೆರೆ ತಾಲೂಕಿನ ಹೆಬ್ಬಾಳೆ ಸೇತುವೆ ಭದ್ರಾ ನದಿಯ ರಭಸಕ್ಕೆ ಸೇತುವೆ ಮೇಲಿನ ಸಿಮೆಂಟ್ ಕಿತ್ತು ಹೋಗಿದೆ. ಸಿಮೆಂಟ್ ಕಿತ್ತು ಸೇತುವೆಯ ಕಬ್ಬಿಣದ ಸರಳುಗಳು ಕಾಣುತ್ತಿವೆ. ಅಷ್ಟೇ ಅಲ್ಲದೇ ಸೇತವೆಯ ಮಧ್ಯದಲ್ಲಿ ರಂಧ್ರಗಳಾಗಿವೆ. ಜೊತೆಗೆ ಸೇತುವೆ ಅಲ್ಲಲ್ಲೇ ಬಿರುಕು ಬಿಟ್ಟಿದ್ದು, ಸೇತುವೆಗೆ ತಡೆಗೋಡೆ ಕೂಡ ಇಲ್ಲ. ಸೇತುಗೆ ಇದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿವೆ. ಪ್ರವಾಸಿಗರು ಹಾಗೂ ಭಕ್ತರು ಎಚ್ಚರಿಕೆಯಿಂದ ಸಂಚರಿಸೋದು ಒಳ್ಳೆಯದು.

    ಕೆಲವು ದಿನಗಳಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಎಲ್ಲ ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಭದ್ರಾ ನದಿಯೂ ತುಂಬಿ ಹೆಬ್ಬಾಳೆ ಸೇತುವೆ ಕೂಡ ಮುಳುಗಿತ್ತು. 1992ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ತೀರಾ ಕೆಳಮಟ್ಟದಲ್ಲಿರುವುದರಿಂದ ಭದ್ರಾ ನದಿ ಉಕ್ಕಿ ಹರಿದರೆ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.