Tag: Chikkamagaluru

  • ಅಂಗಡಿಯಲ್ಲಿ ಕೆಲ್ಸ, ಫ್ರೀ ಟೈಮಲ್ಲಿ ಶಾಸನ ಸಂಶೋಧಕ- ನಿವೃತ್ತಿ ವಯಸ್ಸಲ್ಲೂ ಕನ್ನಡದ ಕಾಯಕ ಮಾಡ್ತಿದ್ದಾರೆ ಬೀರೂರಿನ ಇಸ್ಮಾಯಿಲ್

    ಅಂಗಡಿಯಲ್ಲಿ ಕೆಲ್ಸ, ಫ್ರೀ ಟೈಮಲ್ಲಿ ಶಾಸನ ಸಂಶೋಧಕ- ನಿವೃತ್ತಿ ವಯಸ್ಸಲ್ಲೂ ಕನ್ನಡದ ಕಾಯಕ ಮಾಡ್ತಿದ್ದಾರೆ ಬೀರೂರಿನ ಇಸ್ಮಾಯಿಲ್

    ಚಿಕ್ಕಮಗಳೂರು: ಓದಿರೋದು ಪಿಯುಸಿ. ಮಾಡೋದು ಅಂಗಡಿಯಲ್ಲಿ ಕವರ್ ಕಟ್ಟುವ ಕೆಲಸ. ವಯಸ್ಸು ಐವತ್ತೆಂಟಾದ್ರು ಸಂಶೋಧಿಸುವ ಗೀಳು ಮಾತ್ರ ಹೋಗಿಲ್ಲ. ಮನೆಯವ್ರಿಗೆ ಬೇಸರ ತರಿಸುವಷ್ಟು ಇವ್ರ ಓದುವ ಹುಚ್ಚೆ ಇವರನ್ನ ಅಸಮಾನ್ಯನನ್ನಾಗಿಸಿದೆ. 1901ರಲ್ಲಿ ರೈಸ್ ಬರೆದ ಪುಸ್ತಕದಲ್ಲೂ ಇಲ್ಲ, ಮೈಸೂರು ವಿಶ್ವವಿದ್ಯಾಲಯ ಹೊರತಂದ ಎಪಿಗ್ರಫಿ ಆಫ್ ಕರ್ನಾಟಕದ ಸಂಚಿಕೆಯಲ್ಲೂ ಇಲ್ಲದ ಸುಮಾರು 30 ಶಾಸನಗಳನ್ನ ಬೆಳಕಿಗೆ ತಂದು, ಮನೆಯವ್ರಿಗೆ ಬೇಸರಿಸಿ, ರಾಜ-ಮಹಾರಾಜರ ಕಾಲದ ಭಾರತದ ಸಾರ್ವಭೌಮತೆಯನ್ನ ಸಾರಿ ಹೇಳ್ತಿರೊ ಕಾಫಿನಾಡಿನ ಇಸ್ಮಾಯಿಲ್ ಪಬ್ಲಿಕ್ ಹೀರೋ ಆಗಿದ್ದಾರೆ.

    ಚಿಕ್ಕಮಗಳೂರಿನ ಬೀರೂರು ನಿವಾಸಿ ಮಹಮದ್ ಇಸ್ಮಾಯಿಲ್ ಓದಿರೋದು ಪಿಯುಸಿ. ಹೊಟ್ಟೆಪಾಡಿಗೆ ಅಂಗಡಿಯಲ್ಲಿ ಕೆಲಸ ಮಾಡೋ ಇವರು ಟೈಂ ಸಿಕ್ಕಾಗಲೆಲ್ಲಾ ಹಳೆಯ ದೇಗುಲಗಳಿಗೆ ಹೋಗುತ್ತಾರೆ. ಯಾಕಂದ್ರೆ ಇಸ್ಮಾಯಿಲ್ ಸಾಹೇಬ್ರಿಗೆ ಶಾಸನಗಳನ್ನು ಓದೋದು ಅಂದ್ರೆ ಪ್ರಾಣ. ಫ್ರೀ ಟೈಮಲ್ಲೆಲ್ಲಾ ಇವರು ಮಸಿ, ವಿಭೂತಿ, ಬಿಳಿ ಪೇಪರ್ ಇಟ್ಕೊಂಡು ಶಾಸನಗಳನ್ನು ಹುಡುಕಿ ಹೊರಡ್ತಾರೆ. ಮನೆಯಲ್ಲಿದ್ರೂ ಇವರು ಮಾಡೋ ಕೆಲಸ ಓದೋದು. ಬೆಳಗ್ಗೆಯಿಂದ ರಾತ್ರಿ 9ರವರೆಗೆ ಅಂಗಡಿಯಲ್ಲಿ ಕೆಲಸ ಮಾಡೋ ಸಾಹೇಬ್ರು, ಮಧ್ಯರಾತ್ರಿ 1 ಗಂಟೆಯವರೆಗೂ ಕುಳಿತು ಓದುತ್ತಾರೆ.

    ಶಾಸನಗಳ ಕುರಿತಂತೆ ಇಸ್ಮಾಯಿಲ್ ಸಾಹೇಬ್ರು ಎಸ್‍ಜೆಎಂ, ಜೆಎಸ್‍ಎಸ್, ಸಾಹಿತ್ಯ ಪರಿಷತ್, ಧಾರವಾಡ ಹಾಗೂ ಬೆಂಗಳೂರು ವಿವಿಗಳಿಗೆ ಸುಮಾರು 30 ಲೇಖನ ಬರೆದಿದ್ದಾರೆ. ಚಿದಾನಂದ ಮೂರ್ತಿ ಜೊತೆ ಪತ್ರ ವ್ಯವಹಾರ ಇಟ್ಕೊಂಡಿದ್ದಾರೆ. ಕನ್ನಡ ಎಂ.ಎ ಓದುತ್ತಿರೋರು, ಶಾಸನಗಳ ಅಭ್ಯಾಸ ಮಾಡ್ತಿರೋರು ಇವರಿಂದ ಸಾಕಷ್ಟು ಕಲಿಯುತ್ತಿದ್ದಾರೆ. ಹೊಟ್ಟೆ ತುಂಬಿಸದ ಇವರ ಪ್ರವೃತ್ತಿ ಬಗ್ಗೆ ಮನೆಯವರಿಗೆ ಬೇಸರ ಇದ್ಯಂತೆ. ಆದ್ರೆ ಬೀರೂರಿನ ಮಂದಿಗೆ ಇವರಂದ್ರೆ ಪ್ರೀತಿ ಅಂತ ನಿವಾಸಿ ಗಿರೀಶ್ ಹೇಳಿದ್ದಾರೆ.

    ಪ್ರಚಾರಪ್ರಿಯರಲ್ಲದ ಇವರು ಆರಂಭದಲ್ಲಿ ತಮ್ಮ ಲೇಖನಗಳಿಗೆ ‘ಕನ್ನಡತನಯ’ ಎಂದು ಹೆಸರಿಡ್ತಿದ್ರು. ನಂತರ ಸ್ಥಳೀಯರ ಒತ್ತಾಯಕ್ಕೆ ಮಣಿದು ಬೀರೂರು ಇಸ್ಮಾಯಿಲ್ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದಾರೆ.

    https://www.youtube.com/watch?v=tJHM5NVJP-s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೃಹತ್ ಕೋಣ ಕಂಡು ಭಯಗೊಂಡ ಜನ!

    ಬೃಹತ್ ಕೋಣ ಕಂಡು ಭಯಗೊಂಡ ಜನ!

    ಚಿಕ್ಕಮಗಳೂರು: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡುಕೋಣಗಳು ಹಾಗೂ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಜನಸಾಮಾನ್ಯರು ಕೂಲಿ ಕಾರ್ಮಿಕರು ಆತಂಕದಲ್ಲಿ ಬದುಕುವಂತಾಗಿದೆ.

    ಭಾನುವಾರ ಕೂಡ ಮೂಡಿಗೆರೆ ತಾಲೂಕಿನ ದುಂಡುಗ ಎಂಬ ಗ್ರಾಮದಲ್ಲಿ ಪ್ರಮೋದ್ ಎಂಬವರ ಕಾಫಿತೋಟದಲ್ಲಿ ಬೃಹತ್ ಕಾಡುಕೋಣ ಕಾಣಿಸಿಕೊಂಡಿದೆ. ತೋಟದ ಕೂಲಿ ಕಾರ್ಮಿಕರು ಹಾಗೂ ಮಾಲೀಕರು ಗಾಬರಿಗೊಂಡಿದ್ದಾರೆ. ಕಾಡು ಕೋಣಗಳು ಹೆಚ್ಚಾಗಿ ಕಾಫಿತೋಟದೊಳಗೆ ಕಾಣಿಸಿಕೊಳ್ಳುತ್ತಿರುವುದರಿಂದ ತೋಟದ ಕಾರ್ಮಿಕರು ಮತ್ತುಷ್ಟು ಆತಂಕದಲ್ಲಿ ಬದುಕುತ್ತಿದ್ದಾರೆ.

    ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆಗಾಗಾ ಕಾಡುಕೋಣ ಹಾಗೂ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಮಲೆನಾಡಿಗರು ಜೀವಭಯದಲ್ಲಿ ಬದುಕುತ್ತಿದ್ದಾರೆ.

    ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಕಾರು – ತಪ್ಪಿದ ಅನಾಹುತ

    ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಕಾರು – ತಪ್ಪಿದ ಅನಾಹುತ

    ಚಿಕ್ಕಮಗಳೂರು: ಪ್ರವಾಸಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಪ್ರವಾಸಿಗರ ಮಹೀಂದ್ರಾ ಎಕ್ಸ್‍ಯುವಿ 500 ಕಾರು ಬ್ರೇಕ್ ಫೇಲಾಗಿ ಕಾಫಿ ತೋಟಕ್ಕೆ ನುಗ್ಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದ ಬಳಿ ನಡೆದಿದೆ.

    ಘಟನೆ ವೇಳೆ ಅದೃಷ್ಟವಶಾತ್ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಆರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಫಿ ತೋಟಕ್ಕೆ ನುಗ್ಗಿದ ಕಾರು ಸಿನಿಮೀಯ ರೀತಿಯಲ್ಲಿ ಗಿಡಗಳ ಮಧ್ಯೆ ಸಿಲುಕಿ ಮುಂಭಾಗ ನೆಲಕ್ಕೆ ಹೂತುಕೊಂಡಂತೆ ನಿಂತಿದೆ. ಘಟನೆಯಲ್ಲಿ ಚಾಲಕ ಹಾಗೂ ಪ್ರವಾಸಿಗರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

    ನಿಯಂತ್ರಣ ಕಳೆದುಕೊಂಡ ಕಾರು ಗಿಡಗಳ ಮಧ್ಯೆ ನೆಲಕ್ಕೆ ಹೂತುಕೊಂಡಂತೆ ನಿಂತುಕೊಂಡ ಪರಿಣಾಮ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ್ದು, ಒಂದೊಮ್ಮೆ ಕಾರು ತೋಟದೊಳಗೆ ಪಲ್ಟಿಯಾಗಿ ಉರುಳಿ ಹೋಗಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿ ನಾಡಿನಲ್ಲಿ ಕಾರ್ ರ‍್ಯಾಲಿ- ಜಿಪ್ಸಿ, ಕಾರ್ ಪಲ್ಟಿ

    ಕಾಫಿ ನಾಡಿನಲ್ಲಿ ಕಾರ್ ರ‍್ಯಾಲಿ- ಜಿಪ್ಸಿ, ಕಾರ್ ಪಲ್ಟಿ

    ಚಿಕ್ಕಮಗಳೂರು: ಐ.ಎನ್.ಆರ್.ಸಿ ಕಾರ್ ರ‍್ಯಾಲಿ ವೇಳೆ ವೇಗವಾಗಿದ್ದ ಜಿಪ್ಸಿ ಹಾಗೂ ಕಾರ್ ಪಲ್ಟಿಯಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಾಪುರ ಎಸ್ಟೇಟ್‍ನಲ್ಲಿ ನಡೆದಿದೆ.

    ಕಾಫಿ ಡೇ ಪ್ರಾಯೋಜಕತ್ವದಲ್ಲಿ ನಡೆಯುತ್ತಿರೋ ಐ.ಎನ್.ಆರ್.ಸಿ ಕಾರ್ ರ‍್ಯಾಲಿಯ ನಾಲ್ಕನೇ ಸುತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಎರಡನೇ ದಿನ ಕಾರ್ ರ‍್ಯಾಲಿಯ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಕಾರು ಹಾಗೂ ಜಿಪ್ಸಿಯ ಡ್ರೈವರ್ ಹಾಗೂ ಕೋ-ಡ್ರೈವರ್ ಅನಾಹುತದಿಂದ ಪಾರಾಗಿದ್ದು, ಕಾರಿನಲ್ಲಿ ಡ್ರೈವರ್ ಧ್ರುವ ಹಾಗೂ ಕೋ-ಡ್ರೈವರ್ ಅರ್ಜುನ್ ಮತ್ತೆ ಅದೇ ಕಾರನ್ನ ಓಡಿಸಿದ್ದಾರೆ. ಕಾಫಿ ಕಣಿಯ ಹಾವುಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಈ ರ‍್ಯಾಲಿ ನಡೆಯುತ್ತಿದ್ದು, ಕಾರುಗಳು ಅತಿ ವೇಗವಾಗಿ ಓಡೋದ್ರಿಂದ ಈ ಅವಘಡ ಸಂಭವಿಸಿದೆ.

    ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ:
    ಕಾಫಿ ಡೇ ಗ್ಲೋಬಲ್‍ರವರ ಪ್ರಯೋಜತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‍ನ ಎಂಆರ್‍ಎಫ್ ಹಾಗೂ ಎಫ್‍ಎಂಎಸ್‍ಸಿಐ ರ‍್ಯಾಲಿ ಇದಾಗಿದೆ. ಏಕ ಕಾಲದಲ್ಲಿ ಮೂರು ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ವ್ಯಾಗನ್, ಸ್ಕೋಡ ಕಾರುಗಳ ಜೊತೆ ಜಿಪ್ಸಿ ಕೂಡ ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗ್ಗಿದ್ದವು. ಮೊದಲ ದಿನದ ಅಂಕಗಳಿಗಾಗಿ ಅಖಾಡಕ್ಕಿಳಿದಿದ್ದ ಕಾರುಗಳು ನೋಡುಗರಿಗೆ ಸಖತ್ ಥ್ರಿಲ್ ನೀಡಿತ್ತು.

    2.2 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡುಗರ ಎದೆ ಮೇಲೆ ಹೋದಂತಿತ್ತು. ಹೆಸರು ನೊಂದಾಯಿಸಿದ್ದ 47 ಸ್ಪರ್ಧಿಗಳಲ್ಲಿ 47 ರೈಡರ್‍ಳು ಕೂಡ ನೋಡುಗರಿಗೆ ಮನೋರಂಜನೆ ನೀಡಿದರು. ಈ ಬಾರಿಯ ರ‍್ಯಾಲಿಯಲ್ಲಿ ದೆಹಲಿ, ದುಬೈ, ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈಡರ್ ಗಳಿಗೆ ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆಗಳು ಸೆಡ್ಡು ಹೊಡೆದರು. ಅರುಣಾಚಲ ಪ್ರದೇಶ, ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ರ‍್ಯಾಲಿ ನಡೆದಿದ್ದು, ನಾಲ್ಕನೇ ಹಂತದಲ್ಲಿ ನಡೆಯುತ್ತಿರುವ ಇಲ್ಲಿನ ಗೆಲುವು ಕಂಡವರು ರ‍್ಯಾಲಿಯ ಚಾಂಪಿಯನ್ ಆಗುತ್ತಾರೆ.

    ಪ್ರೇಕ್ಷಕರ ರಂಜನೆಗಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. ಗಂಟೆಗೆ 150 ರಿಂದ 200 ಕಿ.ಮೀ. ವೇಗದಲ್ಲಿ ಓಡುತ್ತಿರೋ ಕಾರುಗಳನ್ನ ನೋಡಿ ಜನ ಫುಲ್ ಫಿದಾ ಆಗಿದ್ದಾರೆ.

    https://www.youtube.com/watch?v=bujems-COc0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಸ್ತೆ ಅಗಲೀಕರಣದ ವೇಳೆ ಜೆಸಿಬಿಗೆ ಸಿಲುಕಿದ್ದ ನಾಗರಾಜನ ರಕ್ಷಣೆ

    ರಸ್ತೆ ಅಗಲೀಕರಣದ ವೇಳೆ ಜೆಸಿಬಿಗೆ ಸಿಲುಕಿದ್ದ ನಾಗರಾಜನ ರಕ್ಷಣೆ

    ಚಿಕ್ಕಮಗಳೂರು: ರಸ್ತೆ ಅಗಲೀಕರಣದ ಕಾಮಗಾರಿ ವೇಳೆ ಜೆಸಿಬಿಗೆ ಸಿಲುಕಿದ್ದ ನಾಗರಹಾವನ್ನು ಸ್ಥಳೀಯರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಬಳಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ 7 ಅಡಿ ಉದ್ದದ ನಾಗರಹಾವು ಕಾರ್ಯ ನಿರ್ವಹಿಸುತ್ತಿದ್ದ ಜೆಸಿಬಿ ಅಡಿ ಸಿಲುಕಿತ್ತು. ಗಾಯಗೊಂಡಿದ್ದ ನಾಗರಹಾವನ್ನು ನೋಡಿದ ಸ್ಥಳೀಯರು ಕೂಡಲೇ ಉರಗ ತಜ್ಞ ಆರೀಫ್ ಎಂಬವರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆರೀಫ್ ಗಾಯಗೊಂಡಿದ್ದ ಹಾವಿಗೆ ಮೊದಲಿಗೆ ನೀರು ಕುಡಿಸಿದ್ದಾರೆ. ನಿಧಾನವಾಗಿ ಹಾವನ್ನು ಸೆರೆ ಹಿಡಿದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹಾವು ಸುಧಾರಿಸಿಕೊಳ್ಳುತ್ತಿದ್ದಂತೆ ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    https://youtu.be/CP307VET23I

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದ ವ್ಯಕ್ತಿ ಅರೆಸ್ಟ್

    ಮದ್ವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದ ವ್ಯಕ್ತಿ ಅರೆಸ್ಟ್

    ಚಿಕ್ಕಮಗಳೂರು: ಮದುವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಇದೀಗ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು 52 ವರ್ಷದ ರಾಮಕೃಷ್ಣ ಎಂದು ಗುರುತಿಸಲಾಗಿದ್ದು, ಈತ ಮಂಡ್ಯದ ಮೂಲದವನು ಎಂಬುದಾಗಿ ತಿಳಿದುಬಂದಿದೆ. ರಾಮಕೃಷ್ಣ ಜಾಹಿರಾತು ಮೂಲಕ ಮಹಿಳೆಯರನ್ನ ವಂಚಿಸುತ್ತಿದ್ದನು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿಕ್ಷಕಿಯೊಬ್ಬರಿಗೆ ಇದೇ ರೀತಿ ಮೋಸ ಮಾಡಿ ಮೋಸ ಮಾಡಿದ್ದು, ಇದೀಗ ರಾಮಕೃಷ್ಣ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಮದುವೆಯ ನೆಪದಲ್ಲಿ ವರನನ್ನ ಹುಡುಕಿಕೊಂಡು ಬಂದವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೇ ಮಹಿಳೆಯರಿಂದ ಹಣ, ಬಂಗಾರ ದೋಚುತ್ತಿದ್ದನು. ರಾಮಕೃಷ್ಣ ಸರ್ಕಾರಿ ನೌಕರಿಯ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಎರಡನೇ ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು.

    ಸದ್ಯ ರಾಮಕೃಷ್ಣ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿತ್ತಾಡಿಕೊಂಡ ಪಿಎಸ್‍ಐ, ಪೇದೆ- ಇಬ್ಬರ ವಿರುದ್ಧ ಎಫ್‍ಐಆರ್ ದಾಖಲು

    ಕಿತ್ತಾಡಿಕೊಂಡ ಪಿಎಸ್‍ಐ, ಪೇದೆ- ಇಬ್ಬರ ವಿರುದ್ಧ ಎಫ್‍ಐಆರ್ ದಾಖಲು

    ಚಿಕ್ಕಮಗಳೂರು: ಕಾಫಿನಾಡಿನ ಪಿಎಸ್‍ಐ ಹಾಗೂ ಪೇದೆ ಮಧ್ಯದ ಶೀತಲ ಸಮರಕ್ಕೆ ತೆರೆ ಬಿದ್ದಿದ್ದು ಇಬ್ಬರ ಮೇಲೂ ಎಫ್‍ಐಆರ್ ದಾಖಲಾಗಿದೆ.

    ಪಿಎಸ್‍ಐ ರಫೀಕ್ ಹಾಗೂ ಪೇದೆ ಶಿವಣ್ಣ ಅವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಇಬ್ಬರ ಸಿಬ್ಬಂದಿ ಜಗಳ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿತ್ತು. ಹೀಗಾಗಿ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್‍ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಆದೇಶ ನೀಡಿದ್ದರು. ಎಸ್‍ಪಿ ಆದೇಶದ ಮೇರೆಗೆ ರವೀಂದ್ರನಾಥ್ ತನಿಖೆ ನಡೆಸಿ, ವರದಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‍ಪಿ ಹರೀಶ್ ಪಾಂಡೆ ಇಬ್ಬರ ವಿರುದ್ಧವೂ ಎಫ್‍ಐಆರ್ ದಾಖಲಿಸಿದ್ದಾರೆ.

    ಏನಿದು ಪ್ರಕರಣ?:
    ಆರೋಪಿಗಳಾದ ಪೇದೆ ಶಿವಣ್ಣ ಹಾಗೂ ಪಿಎಸ್‍ಐ ರಫೀಕ್ ಇಬ್ಬರೂ ಬೇರೆ ಬೇರೆ ಠಾಣೆಯವರು. ಅಜ್ಜಂಪುರದ ಬಕ್ಕನಕಟ್ಟೆ ಜಾತ್ರೆಯ ನಿಮಿತ್ತ ನವಂಬರ್ 20ರಂದು ಲಕ್ಕವಳ್ಳಿ ಠಾಣೆಯಿಂದ ಶಿವಣ್ಣ ಅವರನ್ನು ನಿಯೋಜನೆ ಮಾಡಲಾಗಿತ್ತು. ಅಂದು ಶಿವಣ್ಣನ ಮೇಲೆ ಅಜ್ಜಂಪುರದ ಪಿಎಸ್‍ಐ ರಫೀಕ್ ಸಾರ್ವಜನಿಕ ಪ್ರದೇಶದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಇದರಿಂದಾಗಿ ಶಿವಣ್ಣ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

    ಪತಿಗೆ ಆಗಿರುವ ಅನ್ಯಾಯ ಪ್ರಶ್ನಿಸಿ ಶಿವಣ್ಣರ ಪತ್ನಿ ಆಶಾ ಅಜ್ಜಂಪುರದ ಠಾಣೆಯಲ್ಲಿ ರಫೀಕ್ ವಿರುದ್ಧ ದೂರು ನೀಡಿದ್ದರೂ, ಕೇಸ್ ದಾಖಲಿಸಿಕೊಂಡಿರಲಿಲ್ಲ. ಇದರಿಂದಾಗಿ ಆಶಾ ಹಾಗೂ ಅತ್ತೆ ರಾತ್ರಿ 12.30ರವರೆಗೂ ಠಾಣೆ ಬಾಗಿಲಲ್ಲಿಯೇ ಕುಳಿತಿದ್ದರು. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಬಳಿಕ ಬೇಸತ್ತ ಆಶಾ ಅತ್ತೆಯ ಜೊತೆಗೆ ಎಸ್‍ಪಿ ಕಚೇರಿಗೆ ಬಂದು, ಧರಣಿ ನಡೆಸಿದ್ದರು. ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್‍ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಶನಿವಾರ ಆದೇಶ ನೀಡಿದ್ದರು.

    ಬಕ್ಕನಕಟ್ಟೆ ಜಾತ್ರೆಯಗೆ ನಿಯೋಜಿಸಿದ್ದ ಶಿವಣ್ಣ ಕೆಲಸ ನಿರ್ವಹಿಸದೆ ಮಹಿಳೆಯ ಜೊತೆಗೆ ಹೋಗಿದ್ದರು. ಊಟ ಮಾಡಿ, ತಿರುಗಾಡಿ ಕಾಲ ಕಳೆಯುತ್ತಿದ್ದರು. ಇದರಿಂದಾಗಿ ಕರೆದು ಎಚ್ಚರಿಕೆ ನೀಡಿರುವೆ ಅಷ್ಟೇ ಎಂದು ರಫೀಕ್ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿ ಎಸ್ಟೇಟ್ ಬಳಿ ರೆಕ್ಕೆ ಇರುವ ಅಪರೂಪದ ಹಾರುವ ಬೆಕ್ಕೊಂದು ಗೋಚರವಾಗಿ ಜನರನ್ನು ಅಚ್ಚರಿಗೊಳಿಸಿದೆ.

    ಹಿಂದೆಂದೂ ಕಂಡುಬರದ ರೆಕ್ಕೆ ಇರುವ ಬೆಕ್ಕೊಂದು ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಹೆಚ್ಚಾಗಿ ದಟ್ಟಾರಣ್ಯದಲ್ಲಿ ವಾಸ ಮಾಡುವ ಹಾರುವ ಬೆಕ್ಕು ಮೊದಲ ಬಾರಿ ಜನರಿರುವ ಪ್ರದೇಶದಲ್ಲಿ ಕಂಡಿದೆ. ಕಾಡಂಚಿನ ಗ್ರಾಮದ ತೋಟಕ್ಕೆ ಬಂದು ಹಾರುವಾಗ ಸುತ್ತು ಹಾಕಿದ್ದ ತಂತಿ ಬೇಲಿಗೆ ಸಿಲುಕಿ ನರಳಾಡಿದೆ. ಈ ವೇಳೆ ನರಳುತ್ತಿದ್ದ ಬೆಕ್ಕನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಬೇಲಿಯಿಂದ ಬೆಕ್ಕನ್ನು ಬಿಡಿಸಿದ ತಕ್ಷಣವೇ ಅದು ಕಾಡಿನೆಡೆಗೆ ಹಾರಿ ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ತರಹದ ಅಪರೂಪದ ಹಾರುವ ಬೆಕ್ಕನ್ನು ಕಂಡ ಮಲೆನಾಡಿಗರು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಹಕ್ಕಿಗಳಂತೆ ಎರಡು ರೆಕ್ಕೆಯನ್ನು ಹೊಂದಿರುವ ಬೆಕ್ಕನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದು, ಮೊಬೈಲ್‍ನಲ್ಲಿ ಈ ಅಪರೂಪದ ಪ್ರಾಣಿಯ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ.

    ಪ್ರಸ್ತುತ ಕಾಲಮಾನದಲ್ಲಿ ಅಪರೂಪದ ಹಾರುವ ಬೆಕ್ಕಿನ ಸಂತತಿ ಅಳಿವಿನಂಚಿನಲ್ಲಿದೆ. ಸದ್ಯ ಈ ಅಪರೂಪದ ಹಾರುವ ಬೆಕ್ಕನ್ನು ನೋಡಿ ಜನರು ಖುಷಿ ಪಟ್ಟಿದಾರೆ.

    https://www.youtube.com/watch?v=fKktPY1wQQs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಯುವಕನ ಕೊಲೆ!

    ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಯುವಕನ ಕೊಲೆ!

    ಚಿಕ್ಕಮಗಳೂರು: ದಾರಿಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ಮಾಡಿ, ಓರ್ವನಿಗೆ ಚಾಕು ಇರಿದು ಕೊಲೆಗೈದ ಘಟನೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಬಳಿ ನಡೆದಿದೆ.

    ಕದ್ರಿಮಿದ್ರಿ ನಿವಾಸಿ ಪವನ್ (22) ಮೃತ ದುರ್ದೈವಿ ಯುವಕ. ಗವನಹಳ್ಳಿ ನಿವಾಸಿ ಕಿರಣ್ ಕೊಲೆಗೈದ ಆರೋಪಿ. ಘಟನೆಯಲ್ಲಿ ಇನ್ನೋರ್ವ ಪವನ್ (28) ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಪರಿಣಾಮ ಆತನೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆಯ ವಿವರ: ಕಿರಣ್ ಹಾಗೂ ಆತನ ಕೆಲವು ಸ್ನೇಹಿತು ಮದ್ಯ ಸೇವಸಿ, ಎರಡು ಕಾರಿನಲ್ಲಿ ಕದ್ರಿಮಿದ್ರಿ ಸಮೀಪದ ಹೊರ ವಲಯದಲ್ಲಿ ನಿಂತಿದ್ದರು. ಮದ್ಯದ ಮತ್ತಿನಲ್ಲಿದ್ದ ಯುವಕರು ಕಾರಿನಲ್ಲಿದ್ದ ಸಿಸ್ಟಮ್ ಹಚ್ಚಿ, ಜೋರಾಗಿ ಸೌಂಡ್ ಕೊಟ್ಟುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು. ಈ ವೇಳೆ ಪವನ್ ತನ್ನ ಸ್ನೇಹಿತ ಅಮಿತ್ ಜೊತೆಗೆ ಕದ್ರಿಮದ್ರಿ ಸಮೀಪದ ಕೆರೆಯೊಂದರ ಬಳಿ ನಾಯಿಯ ಫೋಟೋ ಶೂಟ್‍ಗೆ ತೆರಳಿದ್ದರು.

    ಕಿರಣ್ ಸ್ನೇಹಿತರ ಕಾರ್ ಬಳಿಗೆ ಬಂದ ಪವನ್ ಸ್ನೇಹಿತರಿಗೂ ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದರಿಂದ ಕೋಪಗೊಂಡ ಪವನ್ ಅವರ ನಡತೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡಿದಿದೆ. ಇದನ್ನು ಮತ್ತೊಂದು ಕಾರಿನಲ್ಲಿ ಕುಳಿತಿದ್ದ ಕಿರಣ್ ನೋಡಿ, ಅಲ್ಲಿಂದ ಬಂದವನೇ ಏಕಾಏಕಿ ಪವನ್‍ಗೆ ಚಾಕು ಹಾಕಿದ್ದಾನೆ. ಪರಿಣಾಮ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆಯಲ್ಲಿ ಇನ್ನೋರ್ವ ಪವನ್ ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕಿರಣ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಚಿಕ್ಕಮಗಳೂರು: ಜಾಯಿಂಟ್ ಅಕೌಂಟ್ ಇದ್ದಿದ್ದೇ ವರವಾಯ್ತು. 150 ಲೈಟ್‍ಗೆ 12 ಲಕ್ಷ, ನೈಸರ್ಗಿಕವಾಗಿ ಹರಿಯೋ ನೀರಿಗೆ ಲಕ್ಷ-ಲಕ್ಷ. ಖರ್ಚಿನ ಲೆಕ್ಕ ನೋಡೋಕೆ ಪಾಸ್ ಬುಕ್ ಕೇಳದ್ರೆ ಸದಸ್ಯರೇ ಅಲಕ್ಷ್ಯ. ಸಿಎಂ, ಡಿಸಿ, ಸಿಇಓ, ಇಓ, ಎಸಿಬಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದ್ರೂ ಅವರ್ಯಾರು ಹತ್ತಿರವೂ ಸುಳಿಯಲಿಲ್ಲ. ಅಧ್ಯಕ್ಷೆ ಹಾಗೂ ಪಿಡಿಓ ಬಾಯ್ಬಿಟ್ರೆ ಸಿಗಲಿದೆ ಎಲ್ಲದಕ್ಕೂ ಉತ್ತರ. ಇದು ಕಾಫಿನಾಡಿನ ಗ್ರಾಮ ಪಂಚಾಯಿತಿ ಸದಸ್ಯರ ನೋವಾಗಿದೆ.

    ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮ ಪಂಚಾಯಿತಿಗೆ ಸೇರಿದ ಹಣವನ್ನು ಲೂಟಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ ಹಾಗೂ ಪಿಡಿಓ ಮಹೇಶ್ ಹೆಸರಲ್ಲಿ ಬ್ಯಾಂಕ್‍ನಲ್ಲಿ ಜಂಟಿ ಖಾತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ಇಬ್ಬರೂ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನ ಸ್ವಾಹ ಮಾಡಿದ್ದಾರೆ.

    ಪಂಚಾಯಿತಿ ವ್ಯಾಪ್ತಿಯಲ್ಲಿ 300 ಲೈಟ್ ಪಾಯಿಂಟ್‍ಗಳಿವೆ. ಇದಕ್ಕಾಗಿ 2 ವರ್ಷದಲ್ಲಿ ಬಲ್ಬ್ ಗಾಗಿಯೇ 12 ಲಕ್ಷ ಬಿಲ್ ಮಾಡಿದ್ದಾರೆ. 25 ಸಾವಿರ ರೂಪಾಯಿ ಮೌಲ್ಯದ ಪೈಪ್ ತಂದು 1 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಮಂಜುನಾಥ್ ಈ ಹಿಂದಿನ ಪಿಡಿಓ ಮಹೇಶ್ ಹಾಗೂ ಹಾಲಿ ಅಧ್ಯಕ್ಷೆ ಸುಮಿತ ವಿರುದ್ಧ ಆರೋಪಿಸಿದ್ದಾರೆ.

    ಈ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ. ಇರೋ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. 2 ವರ್ಷದಿಂದ ತಿಂಗಳಿಗೆ 6.500 ರೂಪಾಯಿಯ ಬಾಡಿಗೆ ಕಟ್ಟಡದಲ್ಲಿದ್ದಾರೆ. ಪಂಚಾಯ್ತಿಗೆ ಒಂದು ಲಕ್ಷ ಅನುದಾನ ಬರುತ್ತದೆ. ಅದರಲ್ಲಿ 25 ಸಾವಿರ ಅಭಿವೃದ್ಧಿ ಪಾಲಾದ್ರೆ, ಉಳಿದ 75 ಸಾವಿರ ಅಧ್ಯಕ್ಷೆ ಹಾಗೂ ಪಿಡಿಓಗೆ ಸೇರುತ್ತದೆ. ಅಭಿವೃದ್ಧಿಯ ಸಭೆಗೆ ಗೈರಾಗುವ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ 2015 ರಿಂದ 2017ನೇ ಸಾಲಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಅಂತ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

    ಒಟ್ಟಾರೆ ಸರ್ಕಾರದಿಂದ ಬರುವ ಅನುದಾನದಲ್ಲಿ ಪಂಚಾಯ್ತಿ ಅಭಿವೃದ್ಧಿ ಮಾಡುವ ಬದಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮತ್ತು ಪಿಡಿಓ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇನ್ನಾದರೂ ಡಿಸಿ ಹಣವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews