Tag: Chikkamagaluru

  • ಮನೆ, ತೋಟಕ್ಕೆ ದಯವಿಟ್ಟು ರಕ್ಷಣೆ ಕೊಡಿ- ಶಾಸಕರಿಂದ ಗೃಹ ಸಚಿವರಿಗೆ ಪತ್ರ

    ಮನೆ, ತೋಟಕ್ಕೆ ದಯವಿಟ್ಟು ರಕ್ಷಣೆ ಕೊಡಿ- ಶಾಸಕರಿಂದ ಗೃಹ ಸಚಿವರಿಗೆ ಪತ್ರ

    ಚಿಕ್ಕಮಗಳೂರು: ನನಗೆ ಜೀವ ಬೆದರಿಕೆ ಇದೆ. ದಯವಿಟ್ಟು ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೊಡಿ ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

    ಮೂಡಿಗೆರೆ ತಾಲೂಕಿನ ಕಲ್ಮನೆ ಗ್ರಾಮದ 27 ಎಕರೆ ಜಮೀನಿನಲ್ಲಿ 5 ಎಕರೆ ಜಮೀನು ನನಗೆ ಸೇರಬೇಕೆಂದು ಶಾಸಕ ಕುಮಾರಸ್ವಾಮಿ ಹಾಗೂ ಲೋಕೇಶ್ ಮಧ್ಯೆ ವಾರ್ ನಡೆಯುತ್ತಿದ್ದು, ಈ ಸಂಬಂಧ ಶಾಸಕರು ಪತ್ರ ಬರೆದಿದ್ದಾರೆ.

    ಏನಿದು ವಾರ್..?
    ಜಮೀನು ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ನನ್ನಂತೆ ಬಂದಿದೆ. ಈ ಮಧ್ಯೆ ಲೋಕೇಶ್ ಅಪೀಲ್ ಹೋಗಿದ್ದು ವಿಚಾರಣೆ ನಡೆಯುತ್ತಿದೆ. ಆದ್ರೆ, ನನ್ನ ಏಳಿಗೆಯನ್ನ ಸಹಿಸಲಾಗದೆ ಈ ಹಿಂದೆ ಕೂಡ ನನ್ನ ಮೇಲೆ ಹಲ್ಲೆ ಮಾಡಿದ್ದ ರವಿ ಹಾಗೂ ಲಕ್ಷ್ಮಣರಿಂದ ಯಾವ ಸಮಯದಲ್ಲಾದ್ರೂ ಬೆದರಿಕೆ ಬರಬಹುದು. ಹೀಗಾಗಿ ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೋರಿ ಹೋಂ ಮಿನಿಸ್ಟರ್‍ಗೆ ಪತ್ರ ಬರೆದಿರುವುದಾಗಿ ಶಾಸಕರು ತಿಳಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!


    ಈ ಜಾಗ ನನ್ನದು, ನಿಮ್ಮದಲ್ಲ ಎಂದು ಶಾಸಕರು ತಮ್ಮ ಬೆಂಬಲಿಗರನ್ನ ಕಳುಹಿಸಿ ನಮ್ಮ ಮನೆಯನ್ನ ಕಿತ್ತಾಕಿ, ನಮ್ಮನ್ನ ಜಮೀನಿನಿಂದ ಹೊರಹಾಕಿದ್ರು. ಅವರ ಬೆಂಬಲಿಗರು ಮಾಡುವ ದಬ್ಬಾಳಿಕೆಯ ಒಂದು ಫೋಟೋ ಕೂಡ ತೆಗೆಯಲು ಬಿಡಲಿಲ್ಲ. ನಾನು ಬಾಳೂರು ಠಾಣೆಗೆ ದೂರು ನೀಡಿದ್ದೇನೆ. ಆದ್ರೆ ಇಲ್ಲಿವರೆಗೂ ಯಾರೂ ಕ್ರಮ ಕೈಗೊಂಡಿಲ್ಲ. ನನ್ನ ಪರ ಬರುವವರ ವಿರುದ್ಧವೂ ಕೇಸ್ ಹಾಕಿಸುತ್ತಾರೆ. ಅವರು ನಮ್ಮ ಮನೆಯನ್ನ ಧ್ವಂಸ ಮಾಡಿದ್ದು ಇಂದಿಗೂ ಎಲ್ಲವೂ ಹಾಗೇ ಇದೆ. ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಶಾಸಕರೇ ಈ ರೀತಿ ದೌರ್ಜನ್ಯ ಮಾಡೋದು ಎಷ್ಟು ಸರಿ. ಆದ್ರೆ ಓರ್ವ ಶಾಸಕ ಹೀಗೆ ಮತದಾರರಿಂದಲೇ ನಂಗೇ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವರಿಗೆ ಪತ್ರ ಬರೆದಿರೋದು ಜನಸಾಮಾನ್ಯರೆದುರು ನಗೆಪಾಟಲಿಗೀಡಾಗಿರೋದ್ರಲ್ಲಿ ಅನುಮಾನವಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.

    ಒಟ್ಟಾರೆ, ಇತ್ತೀಚೆಗಷ್ಟೇ ಫುಲ್ ವೈಲೆಂಟಾಗಿ ಅಬ್ಬರಿಸಿದ್ದ ಶಾಸಕರು ಇದೀಗ ಸೈಲೆಂಟಾಗಿ ಗೃಹ ಸಚಿವರಿಂದ ರಕ್ಷಣೆ ಕೋರಿದ್ದಾರೆ. ಆದ್ರೆ ಅಂದು ಅವರಿಂದಲೇ ಗೆದ್ದ ಶಾಸಕರು ಇಂದು ಅವರಿಂದಲೇ ಭಯ ಎಂದು ಸರ್ಕಾರದ ರಕ್ಷಣೆ ಕೋರಿರೋದು ಮಾತ್ರ ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ – ಚಿಕ್ಕಮಗ್ಳೂರು, ಉಡುಪಿಯಲ್ಲಿ ಹೈ ಅಲರ್ಟ್

    ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ – ಚಿಕ್ಕಮಗ್ಳೂರು, ಉಡುಪಿಯಲ್ಲಿ ಹೈ ಅಲರ್ಟ್

    ಚಿಕ್ಕಮಗಳೂರು: ಕುದುರೆಮುಖದ ಬಸರೀಕಲ್ ಚೆಕ್ ಪೋಸ್ಟ್ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿಕ್ಕಮಗಳೂರು – ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ದಾಳಿ ಹಿಂದೆ ನಕ್ಸಲ್ ಬೆಂಬಲಿಗರ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ (ಎಎನ್‍ಎಫ್) ದಿಂದ ಈ ಕೂಂಬಿಂಗ್ ಕಾರ್ಯ ಚುರುಕುಗೊಂಡಿದೆ. ಕೇರಳದ ನಕ್ಸಲರು ಮಲೆನಾಡಲ್ಲಿ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಹೀಗಾಗಿ ಚಿಕ್ಕಮಗಳೂರು- ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ.

    ಬಸರೀಕಲ್, ಸಂಸೆ ಮೆಣಸಿನಹಾಡ್ಯ, ಗುಳ್ಯ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ, ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಎಎನ್‍ಎಫ್ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

    ಭಾನುವಾರ ಏನಾಯ್ತು..?
    ಕಚೇರಿಯ ಮೇಲೆ ಭಾನುವಾರ ಬೆಳಗ್ಗಿನ ಜಾವ 3.30ಕ್ಕೆ ಅರಣ್ಯ ಇಲಾಖೆಯ ದಾಳಿ ಮಾಡಿದ್ದರಿಂದ ಕತ್ತಲಿನಲ್ಲಿ ದುಷ್ಕರ್ಮಿಗಳು ಕಾಣಲಿಲ್ಲ. ಸುಮಾರು 6 ಪೆಟ್ರೋಲ್ ಬಾಂಬ್ ಗಳನ್ನು ದುಷ್ಕರ್ಮಿಗಳು ಕಚೇರಿಯ ಮೇಲೆ ಎಸೆದಿದ್ದಾರೆ. ಪರಿಣಾಮ ಕೆಲ ಪೆಟ್ರೋಲ್ ಬಾಂಬ್‍ಗಳು ಕಚೇರಿಯ ಕಿಟಕಿಗೆ ತಗುಲಿದ್ದು, ಅಲ್ಲಿದ್ದ ರಿಜಿಸ್ಟರ್ ಪುಸ್ತಕಕ್ಕೆ ಬೆಂಕಿ ತಗುಲಿತ್ತು. ಅದೃಷ್ಟವಶಾತ್ ಈ ವೇಳೆ ಎಲ್ಲ ಸಿಬ್ಬಂದಿ ಕಚೇರಿಯ ಒಳಗೆ ಇದ್ದಿದ್ದರಿಂದ ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ.

    ದುಷ್ಕರ್ಮಿಗಳು ಖಾಲಿ ಬಾಟಲಿಗೆ ಮರಳು ಹಾಗೂ ಸೀಮೆಎಣ್ಣೆ ತುಂಬಿ ಬೆಂಕಿ ಹಚ್ಚಿ ಎಸೆದಿದ್ದಾರೆ. ಬಾಟಲ್‍ಗಳು ಒಡೆದಿದ್ದು, ಒಟ್ಟು ಆರು ಪೆಟ್ರೋಲ್ ಬಾಂಬ್ ಎಸೆದಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಯೋಜಿತವಾಗಿ, ಚೆಕ್‍ಪೋಸ್ಟ್ ಕಚೇರಿಯ ಸಮೀಪದ ಮರದ ಕೆಳಗೆ ನಿಂತು ಕೃತ್ಯವನ್ನು ಎಸಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಚಿಕ್ಕಮಗಳೂರು: ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ ತೋರಿಸಿದ್ದು, ಈ ಮೂಲಕ ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ಬಿಜೆಪಿ ಶಾಸಕರು ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಅರಣ್ಯ ಅಧಿಕಾರಿಗಳು ಹುಲಿ ಉಗುರು ಮಾರುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ತನ್ನ ಹಿಂಬಾಲಕರನ್ನ ಬಂಧಿಸಿದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಫುಲ್ ಗರಂ ಆಗಿ ಅರಣ್ಯಾಧಿಕಾರಿಗಳ ಜೊತೆ ಜಗಳ ಮಾಡಿ ಅವರಿಗೆ ಅವಾಜ್ ಹಾಕಿದ್ದಾರೆ.

    ರಂಪಾಟ ಮಾಡಿಬಿಡುತ್ತೇನೆ. ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡದೇ ಇದ್ದರೆ ಆಫೀಸ್ ಬಾಗಿಲು ಹಾಕಿಸುತ್ತೇನೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ಕುಮಾರಸ್ವಾಮಿ ರಂಪಾಟ ಮಾಡಿ ಕಿರುಚಾಟ ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಪ್ರಕರಣ ಸಂಬಂಧ, ಅಪಘಾತದಿಂದ ದುರ್ಮರಣ ಹೊಂದಿರುವ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಆದ್ರೆ ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ. ಹೀಗಾಗಿ ಮದ್ಯಪಾನ ಹೇಗೆ ಮಾಡ್ತಾರೆ ಎಂದು ಸಿ.ಟಿ ರವಿ ಅವರ ಪತ್ನಿ ಪಲ್ಲವಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತನ್ನ ಪತಿ ಮದ್ಯ ಸೇವಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಮಾಧ್ಯಮದಲ್ಲಿ ಈ ಬಗ್ಗೆ ನೋಡಿ ನನಗೆ ಬೇಸರವಾಗಿ, ಶಾಕ್ ಆಯ್ತು. ಅವರು ನೀರು ಕುಡಿಯೋದು ಬಿಟ್ಟು, ಬೇರೆ ಏನು ಕುಡಿದಿರೋದು ನನಗೆ ಗೊತ್ತಿಲ್ಲ. ಬೆಳಗ್ಗೆ 6.30ಕ್ಕೆ ವಿಮಾನ ಇತ್ತು. ಹಾಗಾಗಿ ಕಾರಿನಲ್ಲಿ ರಾತ್ರಿ 12 ಗಂಟೆಗೆ ಮನೆಯಿಂದ ಹೊರಟ್ಟಿದ್ದರು. ನನ್ನ ಪತಿ ಕಾರು ಡ್ರೈವ್ ಮಾಡುವುದನ್ನು ಬಿಟ್ಟು 15 ವರ್ಷ ಆಗಿದೆ. ಬಹುಷ: ಅವರಿಗೆ ಡ್ರೈವಿಂಗ್ ಮರೆತೇ ಹೋಗಿದೆ. ಕಾರನ್ನು ಡ್ರೈವರ್ ಓಡಿಸುತ್ತಿದ್ದರು ಎಂದು ಪಲ್ಲವಿ ಅವರು ತಿಳಿಸಿದ್ದಾರೆ.  ಇದನ್ನೂ ಓದಿ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ

    ಅಪಘಾತದಿಂದ ಸ್ವಲ್ಪ ಎದೆಗೆ ಪೆಟ್ಟು ಬಿದ್ದಿದೆ ಎಂದು ಪತಿ ಹೇಳಿದ್ದರು. ಮೃತರ ಕುಟುಂಬಕ್ಕೆ ನಮ್ಮ ಕೈಯಲ್ಲಿ ಏನಾಗುತ್ತೋ ಆ ರೀತಿಯ ಸಹಾಯ ಮಾಡ್ತೇವೆ. ಅಪಘಾತದಿಂದ ನನಗೆ ಶಾಕ್ ಆಯ್ತು. ಎರಡು ಯುವಕರು ಜೀವ ಕಳೆದುಕೊಂಡಿದ್ದಾರೆ. ಅದು ನಿಜವಾಗಿಯೂ ಬೇಸರದ ವಿಷಯ. ಈ ಅಪಘಾತ ಆಕಸ್ಮಿಕ, ಈ ಅಪಘಾತದಿಂದ ನಮಗೆ ನೋವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=YPEOa75NnvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 80 ಅಡಿಯ ಕಂದಕಕ್ಕೆ ಕಾರ್ ಪಲ್ಟಿ- ದಂಪತಿ ಸೇರಿ ನಾಲ್ವರು ದುರ್ಮರಣ

    80 ಅಡಿಯ ಕಂದಕಕ್ಕೆ ಕಾರ್ ಪಲ್ಟಿ- ದಂಪತಿ ಸೇರಿ ನಾಲ್ವರು ದುರ್ಮರಣ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ವ್ಯಾಗನರ್ ಕಾರೊಂದು 80 ಅಡಿಯ ಕಂದಕಕ್ಕೆ ಬಿದ್ದು ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೀರೇಬೈಲು ಗ್ರಾಮದ ಬಳಿ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ವಿಶ್ವನಾಥ್ (55), ಪುಷ್ಪಾವತಿ (48) ದಂಪತಿ ಹಾಗೂ ರಾಹುಲ್ ರೈ (58) ಮಮತಾ (51) ದಂಪತಿ ಮೃತ ದುರ್ದೈವಿಗಳು. ಈ ಅಪಘಾತದ ಸಂಜು ಶೆಟ್ಟಿ ಎಂಬರಿಗೆ ಗಾಯವಾಗಿದ್ದು, ಅವರನ್ನು ಕಳಸ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿಶ್ವನಾಥ್ ಸೇರಿದಂತೆ ಒಟ್ಟು 5 ಜನರು ಮೂಡಿಗೆರೆ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಯಕ್ಷಗಾನ ನೋಡಲು ವ್ಯಾಗನರ್ ಕಾರಿನಲ್ಲಿ ಬರುತ್ತಿದ್ದರು. ಕಳಸದಿಂದ ಬಾಳೆಹೊಳೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು 80 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರಿಂದ ಕಾರಿನಲ್ಲಿದ್ದವರು ಕುಳಿತ್ತಿದ್ದ ಜಾಗದಲ್ಲೇ ಪ್ರಾಣ ಬಿಟ್ಟಿದ್ದರು.

    ಈ ಘಟನೆಯ ಕುರಿತು ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಗಂಭೀರ ಗಾಯಗೊಂಡಿದ್ದ ಸಂಜು ಶೆಟ್ಟಿ ಅವರನ್ನು ಕಳಸದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮೇಲೆ 6 ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

    ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮೇಲೆ 6 ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

    ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮೇಲೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್‍ನಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಲ್ ಚೆಕ್‍ಪೋಸ್ಟ್ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಅವರೇ ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

    ಕಚೇರಿಯ ಮೇಲೆ ಭಾನುವಾರ ಬೆಳಗಿನ ಜಾವ 3.30ಕ್ಕೆ ದಾಳಿ ಮಾಡಿದ್ದರಿಂದ ಕತ್ತಲಿನಲ್ಲಿ ದುಷ್ಕರ್ಮಿಗಳು ಕಾಣಲಿಲ್ಲ. ಸುಮಾರು 6 ಪೆಟ್ರೋಲ್ ಬಾಂಬ್ ಗಳನ್ನು ದುಷ್ಕರ್ಮಿಗಳು ಕಚೇರಿಯ ಮೇಲೆ ಎಸೆದಿದ್ದಾರೆ. ಪರಿಣಾಮ ಕೆಲ ಪೆಟ್ರೋಲ್ ಬಾಂಬ್‍ಗಳು ಕಚೇರಿಯ ಕಿಟಕಿಗೆ ತಗುಲಿದ್ದು, ಅಲ್ಲಿದ್ದ ರಿಜಿಸ್ಟರ್ ಪುಸ್ತಕಕ್ಕೆ ಬೆಂಕಿ ತಗುಲಿತ್ತು. ಅದೃಷ್ಟವಶಾತ್ ಈ ವೇಳೆ ಎಲ್ಲ ಸಿಬ್ಬಂದಿ ಕಚೇರಿಯ ಒಳಗೆ ಇದ್ದಿದ್ದರಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದುಷ್ಕರ್ಮಿಗಳು ಖಾಲಿ ಬಾಟಲಿಗೆ ಮರಳು ಹಾಗೂ ಸೀಮೆಎಣ್ಣೆ ತುಂಬಿ ಬೆಂಕಿ ಹಚ್ಚಿ ಎಸೆದಿದ್ದಾರೆ. ಬಾಟಲ್‍ಗಳು ಒಡೆದಿದ್ದು, ಒಟ್ಟು ಆರು ಪೆಟ್ರೋಲ್ ಬಾಂಬ್ ಎಸೆದಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಯೋಜಿತವಾಗಿ, ಚೆಕ್‍ಪೋಸ್ಟ್ ಕಚೇರಿಯ ಸಮೀಪದ ಮರದ ಕೆಳಗೆ ನಿಂತು ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

    ಈ ದಾಳಿಯಿಂದಾಗಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಇತ್ತ ಭಯೋತ್ಪಾದನ ನಿಗ್ರಹ ದಳ (ANF) ಸಿಬ್ಬಂದಿಯಿಂದ ಕೂಂಬಿಂಗ್ ಕಾರ್ಯಚರಣೆ ಕೂಡ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಚಿಕ್ಕಮಗಳೂರು: ಕಾಫಿನಾಡನಲ್ಲಿ ವಿಶಿಷ್ಟ ಜಾಗವೊಂದಿದೆ. ಅಲ್ಲಿ ಎಂದಿಗೂ ನೀರು ಹರಿಯುವುದು ನಿಂತಿಲ್ಲ. ಹಾಗೆಯೇ ಎಂತಹ ಮಳೆಗಾಲ ಬಂದ್ರೂ ಇಲ್ಲಿ ನೀರು ಜಾಸ್ತಿಯಾಗಲ್ಲ. ಅದೆಂತದ್ದೇ ಬರ ಬಂದ್ರೂ ನೀರು ಹರಿಯುವುದು ಕಡಿಮೆಯಾಗಲ್ಲ.

    ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿ ಈ ವಿಶಿಷ್ಟ ಜಾಗದ ಹೆಸರೇ ಸೀತಾವನ. ನೋಡೋಕೆ ದೊಡ್ಡ ಜಲಪಾತದಂತಿಲ್ಲದಿದ್ದರು ಈ ವನ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಈ ಜಾಗದಲ್ಲಿ ನೀವು ಕಲ್ಲು, ನಾಣ್ಯ ಅಥವ ಮರದ ಕೋಲು ಏನನ್ನೇ ಹಾಕಿದರೂ ನಾಲ್ಕೈದು ದಿನದಲ್ಲಿ ಅದರ ಮೇಲೆ ಸುಣ್ಣದ ಅಂಶದಂತೆ ಬೆಳೆಯುತ್ತದೆ. ಹೀಗೆ ಬೆಳೆಯೋದಕ್ಕೂ ಶತಮಾನಗಳ ಆಯಸ್ಸಿದೆ. ರಾಮಾಯಣದ ಕಾಲದಲ್ಲಿ ಸೀತೆ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸ್ನಾನ ಮಾಡಿದ್ದಳು. ಆಗ ಎಲೆ-ಅಡಿಕೆ ಹಾಕಿಕೊಂಡ ಸೀತೆ ಇಲ್ಲಿ ಸುಣ್ಣವನ್ನ ಹಾಕಿದ್ದಳು. ಅಂದಿನಿಂದ ಈ ಜಾಗದಲ್ಲಿ ಏನೇ ವಸ್ತುಬಿದ್ರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತೆ ಅನ್ನೋದು ಸ್ಥಳೀಯರ ನಂಬಿಕೆ. ಸುತ್ತಲೂ ಕಾಫಿತೋಟದ ಮಧ್ಯದಲ್ಲಿ ಹಂತ ಹಂತವಾಗಿ ಧುಮ್ಮಿಕ್ಕುವ ನೀರು ಘಳಿಗೆಗೊಂದು ಹೊಸ-ಹೊಸ ಸಂಗೀತ ಸೃಷ್ಠಿಸುತ್ತೆ. ಈ ಜಾಗ ಅಷ್ಟಾಗಿ ಪರಿಚಿತವಲ್ಲದಿರೋದರಿಂದ ಸ್ಥಳೀಯ ಪ್ರವಾಸಿ ಪ್ರಿಯರಷ್ಟೆ ಆಗಾಗ ಭೇಟಿ ನೀಡಿ ಎಂಜಾಯ್ ಮಾಡ್ತಾರೆ.

    ಜಯಪುರದಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಅಲಗೇಶ್ವರ ಎಸ್ಟೇಟ್ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸಾಗಿದ್ರೆ ಸೀತಾವನ ಸಿಗುತ್ತದೆ. ಐದನೇ ಶತಮಾನದಲ್ಲಿ ಸೀತೆ ಸ್ನಾನ ಮಾಡಿದಾಗ ಈ ಜಾಗ ಹೇಗಿತ್ತೋ ಇಂದಿಗೂ ಹಾಗೇ ಇದೆ. ನೀರು ಹರಿಯುವ ಜಾಗದ ಸುತ್ತಲೂ ಸುಣ್ಣದಂತೆ ಭಾಸವಾಗುವ ಪಾಚಿ ಬೆಳೆದಿದ್ದು, ತೇವಾಂಶ ಎಷ್ಟೇ ಹೆಚ್ಚಿದ್ರು ಮಣ್ಣು ಜರುಗದಂತೆ ಕಲ್ಲಿನಂತಾಗಿದೆ. ಸುಣ್ಣದ ಅಂಶದಿಂದ ಗಟ್ಟಿಯಾಗಿರುವುದರಿಂದ ಸದಾ ನೀರು ಹರಿಯುತ್ತಿದ್ದರು ಇದರ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ನೀರು ನಿಂತಿರೋದನ್ನಾಗಲಿ ಅಥವ ಕಡಿಮೆಯಾಗಿರೋದನ್ನಾಗಲಿ ಇಲ್ಲಿವರೆಗೂ ಯಾರೂ ನೋಡಿಲ್ಲ. ವರ್ಷಪೂರ್ತಿ ನೀರು ಇಷ್ಟೇ ಪ್ರಮಾಣದಲ್ಲಿ ಹರಿಯುತ್ತದೆ. ಕಡಿಮೆಯೂ ಆಗಲ್ಲ, ಹೆಚ್ಚು ಆಗಲ್ಲ. ಆದ್ರೆ, ಈ ಜಾಗ ಅಷ್ಟಾಗಿ ಜನಮಾನಸಕ್ಕೆ ಬಂದಿಲ್ಲ. ಸ್ಥಳೀಯರಿಗಷ್ಟೆ ಗೊತ್ತು. ಅಲ್ಲದೆ ತೋಟದ ಮಾಲೀಕರು ಕೂಡ ಯಾವುದೇ ನಿರ್ಬಂಧ ಹೇರದಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.

    ಇಲ್ಲಿ ಸೀತೆ ಸ್ನಾನ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಸುಣ್ಣ ಹಾಕಿದ್ದಳೋ ಇಲ್ಲವೋ ಅದೂ ಗೊತ್ತಿಲ್ಲ. ಅದನ್ನ ಕಣ್ಣಾರೆ ಕಂಡೋರು ಇಲ್ಲ. ಆದ್ರೆ ಅದೊಂದು ನೂರಾರು ವರ್ಷಗಳಿಂದ ಜನರ ನಂಬಿಕೆಯಷ್ಟೆ. ಆದ್ರೆ, ಇಲ್ಲಿ ಶತಮಾನಗಳಿಂದ ನೀರು ನಿರಂತರವಾಗಿ ಹರಿಯುತ್ತಿರೋದಂತು ಸತ್ಯ. ಸೀತೆಯ ಹೆಸರನ್ನಿಟ್ಟಿಕೊಂಡಿರೋ ಈ ಜಾಗವಂತು ಅದ್ಭುತ. ನೋಡೋಕೆ ತುಸು ಚಿಕ್ಕದಿದ್ದರೂ ಈ ಜಾಗದ ಅನುಭವವೇ ಬೇರೆ. ಹೀಗಾಗಿ ನೆಕ್ಸ್ಟ್ ಟೈಂ ಕಾಫಿನಾಡಿಗೆ ಬಂದಾಗ ಈ ತಾಣವನ್ನ ಮಿಸ್ ಮಾಡ್ಕೋಬೇಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ವಿರುದ್ಧ ಮತ್ತೊಂದು ದೂರು ದಾಖಲು

    ಬಿಎಸ್‍ವೈ ವಿರುದ್ಧ ಮತ್ತೊಂದು ದೂರು ದಾಖಲು

    ಚಿಕ್ಕಮಗಳೂರು: ಬಿಜೆಪಿ ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸಿಬಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಲಾಗಿತ್ತು. ಆದರೆ ಈಗ ಬಿಎಸ್‍ವೈ ವಿರುದ್ಧ ಮತ್ತೊಂದು ದೂರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿದೆ.

    ಜಿಲ್ಲಾ ಯೂತ್ ಕಾಂಗ್ರೆಸ್ ಮುಖಂಡ ಶಿವಕುಮಾರ್ ನೇತೃತ್ವದಲ್ಲಿ ಬಿಎಸ್‍ವೈ ವಿರುದ್ಧ ದೂರು ದಾಖಲಾಗಿದೆ. ಶಾಸಕರ ಖರೀದಿಗೆ 10 ಕೋಟಿ ರೂ. ಆಮಿಷವೊಡ್ಡಿದ್ದಾರೆ. ಹೀಗಾಗಿ ತನಿಖೆ ಮಾಡಿ ಅವರು ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರ ಮುಂದೆ ಆಗ್ರಹಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಈಗಾಗಲೇ ಬಿಎಸ್‍ವೈ ಮತ್ತು ಜೆಡಿಎಸ್ ಶಾಸಕನ ಪುತ್ರನ ನಡುವಿನ ಮಾತುಕತೆಯ ಟೇಪ್ ರಾಜ್ಯದಲ್ಲಿ ಸುದ್ದಿಯಾಗಿದೆ. ಸಂವಿಧಾನಿಕವಾಗಿ ರಚನೆಯಾಗಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಯಡಿಯೂರಪ್ಪ ಅವರು ಕಳೆದ 6 ತಿಂಗಳಿನಿಂದಲೂ ಸತತ ಪ್ರಯತ್ನ ಪಡುತ್ತಿದ್ದಾರೆ. ಜನ ತಂತ್ರವನ್ನು ದುರ್ಬಲಗೊಳಿಸಲು ವಾಮಾಮಾರ್ಗವನ್ನು ಅನುಸರಿಸುತ್ತಿದ್ದಾರೆ.

    ಪ್ರತಿ ಶಾಸಕರಿಗೆ 10ಕೋಟಿ ಹಣ ಕೊಡುತ್ತೇನೆಂಬ ಆಮಿಷ, ಆಶ್ವಾಸನೆಯಿಂದ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇವರಿಬ್ಬರ ಸಂವಾದದಲ್ಲಿ ರಾಜ್ಯದ ಗೌರವಾನ್ವಿತ ಶಾಸಕ ಸಭೆಯ ಸಭಾಧ್ಯಕ್ಷರ ಹೆಸರು ಮತ್ತು ದೇಶದ ಪ್ರಧಾನಿ ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರ ಹೆಸರನ್ನು ಪ್ರಸ್ತಾಪಿಸಿ ರಾಜ್ಯದ ನಾಗರಿಕರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ.

    ಪ್ರಜಾತಂತ್ರ ರಕ್ಷಣೆ ಇಂದು ದೇಶದಲ್ಲಿನ ಅತ್ಯಂತ ಜರೂರಿನ ಕೆಲಸವಾಗಿದೆ. ಪ್ರಜಾತಂತ್ರ ಇದ್ದರೆ ಮಾತ್ರ ನಾಗರಿಕ ಸರ್ಕಾರಗಳು ಕೆಲಸ ಮಾಡಬಲ್ಲವು. ಬಿಜೆಪಿ ಪಕ್ಷದ ಇಂದಿನ ಕಾರ್ಯಸೂಚಿ ಸಂವಿಧಾನಿಕ ಸಂಸ್ಥೆಗಳು ಮತ್ತು ಶಾಸಕ ಸಭೆಗಳ ಮೇಲೆ ಪಿತೂರಿ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ ಹೆಜ್ಜೆ ಮತ್ತು ಸ್ವತಂತ್ರಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನಗಳಾಗಿವೆ.

    ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯೂ ಬಿಜೆಪಿ ಪಕ್ಷದ ಈ ಅಪಾಯ ಕಾರ್ಯಸೂಚಿಯ ಬಗ್ಗೆ ಗಂಭೀರವಾಗಿ ಚರ್ಚಿಸಿದ ನಂತರ ಬಿಎಸ್‍ವೈ ಮತ್ತು ಬಿಜೆಪಿ ಪಕ್ಷದ ಮೇಲೆ ಕಾನೂನು ಕ್ರಮಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಯೂಟ ಸೇವಿಸಿ 17 ಮಕ್ಕಳು ಅಸ್ವಸ್ಥ!

    ಬಿಸಿಯೂಟ ಸೇವಿಸಿ 17 ಮಕ್ಕಳು ಅಸ್ವಸ್ಥ!

    ಚಿಕ್ಕಮಗಳೂರು: ಶಾಲೆಯಲ್ಲಿ ಮಕ್ಕಳಿಗೆ ನೀಡಿದ್ದ ಬಿಸಿಯೂಟದ ಪುಳಿಯೊಗರೆ ತಿಂದು, ಹಾಲು ಕುಡಿದ 17 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಶಿರವಾಸೆಯಲ್ಲಿ ನಡೆದಿದೆ.

    ಶಿರವಾಸೆ ಗ್ರಾಮದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಮಧ್ಯಾಹ್ನ ಊಟದ ಬಳಿಕ ಮಕ್ಕಳಿಗೆ ಹಾಲನ್ನು ನೀಡಲಾಗಿತ್ತು. ಮಕ್ಕಳು ಊಟ ಮಾಡಿ ಹಾಲು ಕುಡಿಯುತ್ತಿದ್ದಂತೆ ತಲೆಸುತ್ತು, ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಕೂಡಲೇ ಎಚ್ಚೆತ್ತ ಶಿಕ್ಷಕರು ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಅಲ್ಲಿಂದ ಎಲ್ಲಾ ಮಕ್ಕಳನ್ನ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಆಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಾಧ್ಯಹ್ನದ ಊಟಕ್ಕೆ ತಯಾರು ಮಾಡಲಾಗಿದ್ದ ಪುಳಿಯೊಗರೆ ಹಾಗೂ ಹಾಲನ್ನು ಪರೀಕ್ಷೆಗೆಂದು ಲ್ಯಾಬ್‍ಗೆ ಕಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

    ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

    ಚಿಕ್ಕಮಗಳೂರು: ಕೈ ನಾಯಕರ ಬಂಡಾಯದ ನಡುವೆ ದೇವೇಗೌಡರ ಕುಟುಂಬ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದೆ.

    ಸಚಿವ ಎಚ್.ಡಿ.ರೇವಣ್ಣ ಶೃಂಗೇರಿಯಲ್ಲಿ ಕೃತ್ತಿಮಿ ಶಕ್ತಿ ದೋಷ ಪರಿಹಾರಾರ್ಥ ಸುದರ್ಶನ ಹೋಮ ನಡೆಸಿದ್ದು, ಮೂರು ದಿನಗಳ ಹೋಮ ಕಳೆದ ರಾತ್ರಿ ಪೂರ್ಣಾಹುತಿ ಆಗಿದೆ. ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಾಕಭಿಷೇಕ ಸಂಭ್ರಮಕ್ಕೆ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

    ಧರ್ಮಸ್ಥಳದಲ್ಲಿ ಮಾತನಾಡಿದ ಸಚಿವ ರೇವಣ್ಣ, ಬಿಸಿ ಪಾಟೀಲ್ ಮುಂಬೈಗೆ ಹೋದರೆ ಏನು ಆಗುವುದಿಲ್ಲ. ಬಜೆಟ್ ಅನುಮೋದನೆ ಆಗಿಯೇ ಆಗುತ್ತದೆ. ದೇವರ ಅನುಗ್ರಹ ಸರ್ಕಾರದ ಮೇಲಿದೆ. ಕುಮಾರಸ್ವಾಮಿಯನ್ನು ಅಲುಗಾಡಿಸೋಕೆ ಆಗಲ್ಲ ಎಂದಿದ್ದರು.

    ಈ ಹಿಂದೆ ದೇವೇಗೌಡರ ಕುಟುಂಬ ಅತಿರುದ್ರ ಮಹಾಯಾಗ ನಡೆಸಿದ್ದು ಬಳಿಕ ಕುಮಾರಸ್ವಾಮಿ ಸಿಎಂ ಆದ ಮೇಲೆ ಐದು ಬಾರಿ ಶೃಂಗೇರಿಗೆ ಹೋಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗ ಮಾಡಿಸಿದ್ದರು. ಇಲ್ಲಿಗೆ ಬಂದಾಗಲೆಲ್ಲ ಒಂದೊಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv