Tag: Chikkamagaluru

  • ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಚಿಕ್ಕಮಗಳೂರು: ಲಾಡ್ಜ್‌ನಲ್ಲಿದ್ದ ಏಸಿ ಬ್ಲಾಸ್ಟ್ ಆದ ಪರಿಣಾಮ ರೂಂನಲ್ಲಿದ್ದ ಕಾಟ್, ಬೆಡ್ ಹಾಗೂ ಸೋಫಾ ಸೆಟ್ ಸುಟ್ಟು ಕರಕಲಾಗಿರುವ ಘಟನೆ ಲೋಟಸ್ ಲಾಡ್ಜ್‌ನಲ್ಲಿ ನಡೆದಿದೆ.

    ನಗರದ ಐಜಿ ರಸ್ತೆಯಲ್ಲಿರುವ ಲೋಟಸ್ ಹೋಟಲ್‍ನ ರೂಂ ನಂಬರ್ 205ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೋಟೆಲ್ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಹೋಟೆಲ್ ಮಾಲೀಕರು ಅಗ್ನಿ ಸುರಕ್ಷತಾ ಪತ್ರವನ್ನೇ ಪಡೆದಿಲ್ಲ. ಅಗ್ನಿ ದುರಂತವಾದರೆ ನಾವು ಜವಾಬ್ದಾರರಲ್ಲ, ಕೂಡಲೇ ಅಗ್ನಿ ಸುರಕ್ಷತಾ ಪತ್ರ ಪಡೆಯುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.

    ಈ ಅವಘಡದಿಂದ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಮೂಲಕ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

  • ಭದ್ರಾ ಹಿನ್ನೀರಿನಲ್ಲಿ ಮುಳುಗಿ ಯುವಕರಿಬ್ಬರು ಸಾವು

    ಭದ್ರಾ ಹಿನ್ನೀರಿನಲ್ಲಿ ಮುಳುಗಿ ಯುವಕರಿಬ್ಬರು ಸಾವು

    ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ದಾಟುವಾಗ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೂರು ಕಣ್ಣಿನ ಸೇತುವೆ ಬಳಿ ನಡೆದಿದೆ.

    ಸಂತೋಷ್(19) ಮತ್ತು ದಮ್ಮೂರ್(24) ಮೃತ ದುರ್ದೈವಿಗಳು. ಈ ಘಟನೆ ಶನಿವಾರ ಸಂಜೆ ನಡೆದಿದ್ದು, ಇಂದು ಮೃತದೇಹಗಳು ಸಿಕ್ಕಿವೆ. ಸಂತೋಷ್ ನೇಪಾಳದಿಂದ ಬಂದು ಎನ್‍.ಆರ್.ಪುರದಲ್ಲಿ ಸೆಂಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.

    ನೇಪಾಳದಿಂದ ಸಂತೋಷ್ ಮನೆಗೆ ಸಂಬಂಧಿ ದಮ್ಮೂರ್ ಬಂದಿದ್ದನು. ಆತನನ್ನು ಕರೆದುಕೊಂಡು ಹೋಗುತ್ತಿದ್ದಾಗ ಭದ್ರಾ ಹಿನ್ನೀರಿನಲ್ಲಿ ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಶನಿವಾರ ಸಂಜೆಯಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಕತ್ತಲಾಗಿದ್ದರಿಂದ ಶೋಧಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಇಂದು ಬೆಳಗ್ಗೆಯಿಂದ ಮತ್ತೆ ಶೋಧಕಾರ್ಯ ಮಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿವೆ.

    ಈ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಚಿಕ್ಕಮಗಳೂರು: ಪ್ರೇಮ ವಿವಾಹವಾಗಿ ಆರೇ ತಿಂಗಳಿಗೆ ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಶಿವನಿ ಸಮೀಪದ ದಂದೂರು ಗ್ರಾಮದಲ್ಲಿ ನಡೆದಿದೆ.

    ಮೃತ ಯುವತಿಯನ್ನ ಲತಾ(19) ಎಂದು ಗುರುತಿಸಲಾಗಿದೆ. ದಂದೂರಿನ ನಿವಾಸಿಯಾಗಿದ್ದ ಲತಾ ಅದೇ ಊರಿನ ಧರ್ಮರಾಜ್‍ನನ್ನು ಪ್ರೀತಿಸುತ್ತಿದ್ದಳು. ಲತಾಳ ಪ್ರೀತಿ ಆಕೆಯ ಅಪ್ಪ-ಅಮ್ಮನಿಗೆ ಇಷ್ಟರವಿರಲಿಲ್ಲ. ಆದ್ರೆ, ಧರ್ಮರಾಜ್ ಪೋಷಕರು ಮುಂದೆ ನಿಂತು ತರೀಕೆರೆಯ ಕಲ್ಲತ್ತಿಗಿರಿ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಿದ್ದರು.

    ಮದುವೆಯಾದ ಆರೇ ತಿಂಗಳಿಗೆ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ, ಮೃತ ಲತಾಳ ಪೋಷಕರು ಲತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ನೇಣು ಬಿಗಿದುಕೊಂಡಿರುವ ಆಕೆಯ ಕಾಲುಗಳು ನೆಲದ ಮೇಲೆಯೇ ಇವೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಗೆ ಲತಾ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಚಿಕ್ಕಮಗಳೂರು: ಉತ್ತರಾಖಂಡ್ ರಾಜ್ಯದ ಹರಿದ್ವಾರ ಮೂಲದ ಮಹಿಳೆಯೊಬ್ಬರನ್ನು ಚಿಕ್ಕಮಗಳೂರಿನ ಜನತೆ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ-ನೀರು ಇಲ್ಲದೆ ನಿತ್ರಾಣಗೊಂಡು ಮೂಡಿಗೆರೆ ತಾಲೂಕಿನ ಬಾಳೂರಿನ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಈ ಮಹಿಳೆಯೊಬ್ಬರು ಬಿದ್ದಿದ್ದರು. ಉರ್ದು ಮಾತನಾಡುತ್ತಿರುವ ಇವರು ತನ್ನ ಹೆಸರು ಅನಿಸ್ ಕೋಟಾನ್ ಎಂದು ಹೇಳುತ್ತಿದ್ದಾರೆ.

    ಪತಿ ನಿಸಾರ್ ಅಹಮದ್ ತೀರಿಕೊಂಡ ಬಳಿಕ ದಾರಿ ತಪ್ಪಿ ಬಸ್ಸೊಂದನ್ನ ಹತ್ತಿ ಇಲ್ಲಿಗೆ ಬಂದಿರೋದಾಗಿ ಹೇಳುತ್ತಿದ್ದಾರೆ. ನನ್ನ ಸ್ವಂತ ಊರು ಹರಿದ್ವಾರದ ಬಳಿ ಇರೋದು. ನಾನು ಹರಿದ್ವಾರಕ್ಕೆ ಹೋದ್ರೆ ಅಲ್ಲಿಂದ ನನ್ನ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲೇ ತಂಗಿದ್ದ ಈಕೆಯನ್ನು ಸ್ಥಳೀಯರು ಉಪಚರಿಸಿ, ಊಟ ಹಾಕಿ, ಹೊಸ ಬಟ್ಟೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಸೇತುವೆಗೆ ಡಿಕ್ಕಿ ಹೊಡೆದು ಪೆಟ್ರೋಲ್ ಟ್ಯಾಂಕರ್ ಪಲ್ಟಿ – ಚಾಲಕ ಸಾವು

    ಸೇತುವೆಗೆ ಡಿಕ್ಕಿ ಹೊಡೆದು ಪೆಟ್ರೋಲ್ ಟ್ಯಾಂಕರ್ ಪಲ್ಟಿ – ಚಾಲಕ ಸಾವು

    ಚಿಕ್ಕಮಗಳೂರು: ಸೇತುವೆಗೆ ಡಿಕ್ಕಿ ಹೊಡೆದು ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ದೋಗೆಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮೃತ ಚಾಲಕನನ್ನ ಹಾಸನ ಮೂಲದ ಲಿಂಗರಾಜು(50) ಎಂದು ಗುರುತಿಸಲಾಗಿದೆ. ಲಾರಿ ಪಕ್ಕದಲ್ಲೇ ಟ್ರಾನ್ಸ್ ಫಾರ್ಮರ್ ಇದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

    ಟ್ಯಾಂಕರ್ ಅನ್‍ಲೋಡ್ ಮಾಡಿಕೊಂಡು ದಾವಣಗೆರೆಯಿಂದ ಬೀರೂರಿಗೆ ಹಿಂದಿರುಗುತ್ತಿತ್ತು. ಇದೇ ವೇಳೆ ಬೀರೂರಿನ ದೋಗೆಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಚಾಲಕ ಲಾರಿಯಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಮಾರ್ಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಜನ ಜೀವವನ್ನ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ-ಬೀರೂರಿನ ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆ ಯಾವುದೇ ಹಂಪ್ ಹಾಕದಿರುವುದರಿಂದ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಟವೇರಾ – ಇಕೋ ಮುಖಾಮುಖಿ ಡಿಕ್ಕಿ – ದೇವರ ದರ್ಶನ ಮುಗಿಸಿ ಬರ್ತಿದ್ದ ಮೂವರ ದುರ್ಮರಣ

    ಟವೇರಾ – ಇಕೋ ಮುಖಾಮುಖಿ ಡಿಕ್ಕಿ – ದೇವರ ದರ್ಶನ ಮುಗಿಸಿ ಬರ್ತಿದ್ದ ಮೂವರ ದುರ್ಮರಣ

    ಚಿಕ್ಕಮಗಳೂರು: ಟವೇರಾ ಹಾಗೂ ಮಾರುತಿ ಇಕೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಶಿವಪುರ ಗ್ರಾಮದ ಡಾಬಾ ಬಳಿ ನಡೆದಿದೆ.

    ಮೃತರನ್ನ ಮುನಿರಾಜು(65), ಜ್ಯೋತಿ (14) ಹಾಗೂ ಸುಬ್ಬಲಕ್ಷ್ಮಿ (60) ಎಂದು ಗುರುತಿಸಲಾಗಿದೆ. ಜಿಲ್ಲೆಯ ಶಿಡ್ಲಘಟ್ಟ ಮೂಲದ ಆರು ಮಂದಿ ಮಾರುತಿ ಇಕೋ ಕಾರಿನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ಚಿಕ್ಕಬಳ್ಳಾಪುರಕ್ಕೆ ಹಿಂದಿರುಗುವಾಗ ಬೆಂಗಳೂರು ಕಡೆಯಿಂದ ಬರುತ್ತಿದ್ದ ಟವೇರಾ ಮುಖಾಮುಖಿ ಡಿಕ್ಕಿಯಾಗಿದೆ.

    ಡಿಕ್ಕಿ ಹೊಡೆದ ಪರಿಣಾಮ ಮಾರುತಿ ಇಕೋ ಕಾರಿನಲ್ಲಿದ್ದ ಶಿಡ್ಲಘಟ್ಟ ಮೂಲದ ಮುನಿರಾಜು, ಜ್ಯೋತಿ ಹಾಗೂ ಸುಬ್ಬಲಕ್ಷ್ಮಿ ಮೂವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೂ ಗಂಭೀರ ಗಾಯಗಳಾಗಿವೆ. ಇನ್ನು ಟವೇರಾ ಕಾರಿನಲ್ಲಿದ್ದ ಐವರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಬೀರೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ಚಿಕ್ಕಮಗಳೂರು: ರಣಬಿಸಿಲ ಮಧ್ಯೆಯೂ ದೇಶಾದ್ಯಂತ ಚುನಾವಣ ಕಾವು ಜೋರಾಗಿಯೇ ಇದೆ. ಆದ್ರೆ, ಚುನಾವಣೆ ಅನ್ನೋದು ಗೊತ್ತಿಲ್ಲದೆ ರಜೆ ಸಿಕ್ಕಿದೆ ಎಂದು ಪ್ರವಾಸಕ್ಕೆ ಬಂದವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನದ ಅರಿವು ಮೂಡಿಸಿದ್ದಾರೆ.

    ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಚಿಕ್ಕಮಗಳೂರಿಗೆ ಬರುತ್ತಿರೋ ಪ್ರವಾಸಿಗರ ವಾಹನಗಳನ್ನ ಮಾಗಡಿ ಹ್ಯಾಂಡ್‍ಪೋಸ್ಟ್ ಬಳಿ ಅಡ್ಡಗಟ್ಟಿ ಸುಮಾರು 800-1000 ಜನರನ್ನ ಮತದಾನ ಮಾಡಿರೋ ಬಗ್ಗೆ ಕೈ ಬೆರಳು ನೋಡಿದಾಗ ಬಹುತೇಕರು ಮತದಾನವನ್ನೇ ಮಾಡಿಲ್ಲ. ಎಷ್ಟೋ ಜನಕ್ಕೆ ಇಂದು ಮತದಾನ ಅನ್ನೋದೇ ಗೊತ್ತಿಲ್ಲ. ಹೀಗೆ ಪ್ರವಾಸಕ್ಕೆ ಬಂದವರಲ್ಲಿ ವಿದ್ಯಾವಂತರು ಹಾಗೂ ಐಟಿ-ಬಿಟಿಯ ಇಂಜಿನಿಯರ್ ಗಳೇ ಹೆಚ್ಚಿದ್ದರು. ಹೀಗಾಗಿ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನ ಜಾಗೃತಿ ಮೂಡಿಸಿದ್ದಾರೆ.

    ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಎಂದು ಸರ್ಕಾರದ ಎಲ್ಲಾ ಸೌಲಭ್ಯ ಪಡೆದುಕೊಳ್ಳೋ ಯುವಜನತೆ ಮತದಾನಕ್ಕೆ ಮಾತ್ರ ಹಿಂದೇಟು ಹಾಕಿ ಮೋಜು-ಮಸ್ತಿಗಾಗಿ ಊರೂರು ಸುತ್ತುತ್ತಿದ್ದಾರೆ. ಸೌಲಭ್ಯ ಮಾತ್ರ ಬೇಕು ಅನ್ನೋ ಪ್ರವಾಸಿಗರಿಗೆ ನಡುರಸ್ತೆಯಲ್ಲಿ ಎಲ್ಲಾ ರೀತಿಯ ಕಾರ್ಡ್ ಗಳ ಜೆರಾಕ್ಸ್ ಪ್ರತಿಗಳ ಹಾರ ಹಾಕಿ, ಶಾಲು ಹೊದಿಸಿ ವ್ಯಂಗ್ಯ ಸನ್ಮಾನ ಮಾಡುವ ಮೂಲಕ ಮತದಾನದ ಬಗ್ಗೆ ಅರಿವು ಹಾಗೂ ಅದರ ಮಹತ್ವವನ್ನು ತಿಳಿಸಲಾಗಿದೆ.

  • ಶೃಂಗೇರಿಯ ಮೂರು ಗ್ರಾಮದ ಜನರಿಂದ ಮತದಾನ ಬಹಿಷ್ಕಾರ

    ಶೃಂಗೇರಿಯ ಮೂರು ಗ್ರಾಮದ ಜನರಿಂದ ಮತದಾನ ಬಹಿಷ್ಕಾರ

    ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನೆಮ್ನಾರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಮ್ಮಿಗೆ, ಗೂಳಿಮಕ್ಕಿ ಹಾಗೂ ಅಬ್ಬಿವರೆ ಗ್ರಾಮದ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.

    ಗ್ರಾಮದ ಸೇತುವೆಯನ್ನು ನಕ್ಸಲ್ ಪ್ಯಾಕೇಜಿನಲ್ಲಿ ಸರ್ಕಾರ ಮಾಡುತಿತ್ತು. ಆದ್ರೆ ಕಾಮಗಾರಿ ನಡೆಯುತ್ತಿರುವಾಗ ಅರಣ್ಯ ಇಲಾಖೆಯವರು ಬಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಗ್ರಾಮದ ಮಕ್ಕಳು ಶಾಲೆಗೆ ತೆರಳಲು ಮಳೆಗಾಲದಲ್ಲಿ ಪರದಾಡುವ ಸ್ಥಿತಿ ಎದುರಾಗಲಿದೆ.

    ಈ ಹಿನ್ನೆಲೆಯಲ್ಲಿ 3 ಗ್ರಾಮದ ಜನ ಈ ಬಾರಿಯ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ನಮಗೆ ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ ಕಾರಣಕ್ಕೂ ಮತಾದಾನ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ನಾವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ಯಾಕೆ ಮತದಾನ ಮಾಡಬೇಕು ಎಂದು ಗ್ರಾಮಸ್ಥರಾದ ವಿಜೇಂದ್ರ ಹಿಮ್ನಿಗೆ ಹಾಗೂ ಶಂಕ್ರಪ್ಪ ಗೌಡ ಹಿಮ್ನಿಗೆ ಆಕ್ರೋಶ ಹೊರಹಾಕಿದ್ದಾರೆ.

  • ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರಾದ್ರೆ ನಾವೆಲ್ಲ ಏನು: ಸಿದ್ದರಾಮಯ್ಯ ಟಾಂಗ್

    ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರಾದ್ರೆ ನಾವೆಲ್ಲ ಏನು: ಸಿದ್ದರಾಮಯ್ಯ ಟಾಂಗ್

    -ಮೋದಿ ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ನೀವು ಚೌಕಿದಾರ ಹೇಗಾಗ್ತೀರಾ?

    ಚಿಕ್ಕಮಗಳೂರು: ಒಂದೆಡೆ ಕೋಮುವಾದವನ್ನ ಪ್ರಮೋಟ್ ಮಾಡ್ತಿದ್ದೀರಾ, ಮತ್ತೊಂದೆಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದೀರಾ, ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ ಎಂದು ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಒಂದೆಡೆ ಕೋಮುವಾದವನ್ನ ಪ್ರಮೋಟ್ ಮಾಡ್ತಿದ್ದೀರಾ, ಮತ್ತೊಂದೆಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದೀರಾ, ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ? ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮೋದಿಗೆ ಮತ್ತೆ ಪ್ರಧಾನಿ ಮಾಡ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಮೋದಿ ಹೇಳಿದ ಮೇಲೆ ಆ ಯಡಿಯೂರಪ್ಪ, ಶೋಭಾ ಎಲ್ಲರೂ ನಾನು ಚೌಕಿದಾರ್ ಅಂತಿದ್ದಾರೆ. ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಜೈಲಿಗೆ ಹೋಗಿ ಬಂದೋರು. ಜೈಲಿಗೆ ಹೋಗಿ ಬಂದೋರೆಲ್ಲಾ ಚೌಕಿದಾರರಾದ್ರೆ ನಾವೆಲ್ಲಾ ಏನು ಎಂದು ಪ್ರಶ್ನೆ ಮಾಡಿದರು. ನನ್ನ ಪ್ರಕಾರ ಆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಗ್ರಾಮ ಪಂಚಾಯಿತಿ ಮೆಂಬರ್ ಆಗೋದಕ್ಕೂ ನಾಲಾಯಕ್ ಎಂದು ಕಿಡಿಕಾರಿದರು.

    ಮೋದಿಯಂತ ಡೊಂಗಿ ರಾಜಕಾರಣಿಯನ್ನ ದೇಶದ ಇತಿಹಾಸದಲ್ಲಿ ಇಂದಿಗೂ ನಾನು ನೋಡಿಲ್ಲ. ನಿಮಗೆ ಬರೀ ಜೆಡಿಎಸ್-ಕಾಂಗ್ರೆಸ್ಸಿಗರೇ ಕಾಣೋದಾ? ಯಡಿಯೂರಪ್ಪ, ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಯಾಕೆ ಐಟಿ ದಾಳಿಯಾಗಿಲ್ಲ? ಇವರೆಲ್ಲಾ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಒಂದು ರಾಷ್ಟ್ರ, ಭಾಷೆ, ಧರ್ಮ ಅಂತ ಅಮಿತ್ ಶಾ ಹೇಳುತ್ತಾನೆ. ಹಾಗಾದರೆ ಹಿಂದು, ಬೌದ್ದ ಹಾಗೂ ಸಿಖ್‍ರು ಮಾತ್ರ ಈ ದೇಶದಲ್ಲಿ ಇರಬೇಕು. ಬೇರೆಯವರು ಎಲ್ಲಿಗೆ ಹೋಗಬೇಕು. ಈ ಗಿರಾಕಿ ಜೈಲಿಗೆ ಹೋಗಿ ಬಂದವ. ಮರ್ಡರ್ ಕೇಸಲ್ಲಿ ಸಿಕ್ಕಿಬಿದ್ದು ಮೂರು ವರ್ಷ ಜೈಲಿನಲ್ಲಿದ್ದ ಎಂದು ಅಮಿತ್ ಶಾ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

  • ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಈಗಿನ ಯುವಕರು ಮೋದಿ, ಮೋದಿ ಅಂತಾರೆ – ನಾನು ನೋಡದ ಮೋದಿನಾ: ಎಚ್‍ಡಿಡಿ ಗುಡುಗು

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ಹೆಚ್ಚಿಸಿದೆ. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಗಿನ ಯುವಕರು ಮೋದಿ, ಮೋದಿ ಅಂತಿದ್ದಾರೆ. ಆದರೆ ನಾನು ನೋಡದ ಮೋದಿನಾ ಎಂದು ಹೇಳಿ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ನಾನು ಪಾರ್ಲಿಮೆಂಟ್ ಹೋಗೋದು ಸತ್ಯ. ಮೋದಿ ಅವರನ್ನು ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನ ಈ ದೇಶಕ್ಕೆ ತರುತ್ತೇನೆ ಎಂದ ಆ ಮನುಷ್ಯ ರೈತರಿಗೆ ಏನು ಮಾಡಿದ್ದಾರೆ. ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೆಟ್ ಇರಲ್ಲಿಲ್ಲ ನಾವು ಕೊಟ್ಟೆವು ಅಂತಿದ್ದಾರೆ. ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ ಎಂದು ಪ್ರಶ್ನೆ ಮಾಡಿ, ಸೈನಿಕರಿಗೆ ನಾವೇ ಎಲ್ಲವನ್ನು ನೀಡಿದ್ದೇವೆ ಎನ್ನುವವರಿಗೆ ನಾಚಿಕೆ ಆಗಬೇಕು ಎಂದರು.

    ಯುವಕರು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದು ಮೋಸ ಹೋಗಬಾರದು. ನಾವೇ ಯುದ್ಧ ಮಾಡಿದ್ದು ಎಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಏನು ಇವರೊಬ್ಬರೇ ಯುದ್ಧ ಮಾಡಿದರಾ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಿಂದೆ ಹಿಂದೆ ಕಾಂಗ್ರೆಸ್ ಬೇರೆ ಪಕ್ಷಗಳು ಇದ್ದಾಗಲೂ ದೇಶದಲ್ಲಿ ಯುದ್ಧ ನಡೆದಿದೆ. ಇದು ಸೈನ್ಯದ ಶಕ್ತಿ ಹಾಗೂ ಸಾಮಥ್ರ್ಯ ಆಗಿದ್ದು, ಇದರಿಂದ ರೈತರ ಮಕ್ಕಳು ಮೋಸ ಹೋಗಬಾರದು. ಈ ದೇಶ ಆಳುವ ಶಕ್ತಿ ನಮಗೆ ಅಥವಾ ಸಿದ್ದರಾಮಯ್ಯ ರಂತಹ ನಾಯಕರಿಗೆ ಇಲ್ವಾ ಎಂದರು.

    ಏನೋ ದೊಡ್ಡದಾಗಿ ಕಡಿದು ಕಟ್ಟೆ ಹಾಕಿದ್ದೇನೆಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಮೋದಿ-ಮೋದಿ ಅಂತರೆ ಎಂದು ದೇವೇಗೌಡರು ತಲೆ ಚಚ್ಚಿಕೊಂಡರು. ನಾಲ್ಕು ವರ್ಷದ ಹಿಂದ ರಾಹುಲ್ ಏನೂ ಪ್ರಯೋಜನವಿಲ್ಲ ಎಂದು ಬಿಂಬಿಸಿದ್ದಾರೆ. ಆತ ಇಂದು ರಫೆಲ್‍ನಲ್ಲಿ 30 ಸಾವಿರ ಕೋಟಿ ಅಕ್ರಮ ಮಾಡಿದ್ದಾರೆ ಎಂದು ಸವಾಲು ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಮನುಷ್ಯ ಪಾರ್ಲಿಮೆಂಟ್ ಒಳಗೆ ಬರಲಿಲ್ಲ ಎಂದು ವ್ಯಂಗ್ಯವಾಡಿದರು.