Tag: Chikkamagaluru Crime News

  • ಕಾವಿ ವೇಷದಲ್ಲಿ ಮನೆಗೆ ನುಗ್ಗಿ ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದರೋಡೆ

    ಕಾವಿ ವೇಷದಲ್ಲಿ ಮನೆಗೆ ನುಗ್ಗಿ ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದರೋಡೆ

    – ಸಾರ್ವಜನಿಕರಿಂದ ಅಮಾಯಕ ಕಾವಿಧಾರಿ ಮೇಲೆ ಹಲ್ಲೆ

    ಚಿಕ್ಕಮಗಳೂರು: ಸಾಧು ಸಂತರಂತೆ ಕಾವಿ ಧರಿಸಿ ಮನೆಯೊಂದಕ್ಕೆ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ (Gold) ಕಳ್ಳತನ ಮಾಡಿದ ಘಟನೆ ತರೀಕೆರೆಯಲ್ಲಿ (Tarikere) ನಡೆದಿದೆ.

    ನಾಲ್ವರು ಕಾವಿಧಾರಿಗಳು ಮಹಿಳೆಯ ಮನೆಗೆ ಬಂದಿದ್ದಾರೆ. ಬಳಿಕ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯ ಎಚ್ಚರ ತಪ್ಪಿಸಿ, ಮಹಿಳೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಹಿಳೆಗೆ ಎಚ್ಚರವಾದ ಮೇಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೆರೆಹೊರೆಯವರಿಗೆ ನಡೆದ ಘಟನೆ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ – 9 ಮಂದಿ ದುರ್ಮರಣ

    ಕಳ್ಳರನ್ನು ಹುಡುಕಿ ಹೋದ ಜನ, ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕ ಬುಡುಬುಡುಕೆ ಕಾವಿಧಾರಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತ ತಪ್ಪಿತಸ್ಥನಲ್ಲ ಎಂಬುದು ತಿಳಿದು ಬಂದಿದೆ.

    ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಾಲೂಕಿನಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ