Tag: chikkamagaluru BJP

  • ಎತ್ತಿಕಟ್ಟಿ ಅರಾಜಕತೆ ಸೃಷ್ಟಿ ಸುಲಭ, ಅದು ನಾಯಕತ್ವದ ಲಕ್ಷಣವಲ್ಲ: ಕೋಡಿಹಳ್ಳಿ ವಿರುದ್ಧ ಸಿ.ಟಿ.ರವಿ ಕಿಡಿ

    ಎತ್ತಿಕಟ್ಟಿ ಅರಾಜಕತೆ ಸೃಷ್ಟಿ ಸುಲಭ, ಅದು ನಾಯಕತ್ವದ ಲಕ್ಷಣವಲ್ಲ: ಕೋಡಿಹಳ್ಳಿ ವಿರುದ್ಧ ಸಿ.ಟಿ.ರವಿ ಕಿಡಿ

    – ಟಿಕೆಟ್ ನೀಡುವಾಗ ಯತ್ನಾಳ್‍ರನ್ನ ಬಿಎಸ್‍ವೈ ಸಮರ್ಥಿಸಿಕೊಂಡಿದ್ರು

    ಚಿಕ್ಕಮಗಳೂರು: ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕರಾಗಿದ್ದರು ಈಗ ಕಾರ್ಮಿಕ ನಾಯಕರಾಗಿದ್ದಾರೆ. ನೌಕರರನ್ನ ಎತ್ತಿಕಟ್ಟುವುದು ಅರಾಜಕತೆ ಸೃಷ್ಟಿಸುವುದು ಸುಲಭ. ಆದರೆ, ಹರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಡಾಂಬಾರೀಕರಣಗೊಂಡ ರಸ್ತೆಯನ್ನ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮೂರು ರೈತಪರವಾದ ಕೃಷಿ ಮಸೂದೆಗಳನ್ನು ಮಂಡಿಸಿದೆ. ಆದರೆ ಆ ಮಸೂದೆಗಳು ರೈತ ವಿರೋಧಿ ಮಸೂದೆಗಳು ಎನ್ನುತ್ತಿದ್ದಾರೆ. ಸರ್ಕಾರ ರೈತರ ಪರವಾಗಿ ತೆಗೆದುಕೊಂಡ ನಿಲುವುಗಳನ್ನು ರೈತ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದಿದ್ದರು. ಈಗ ಸರ್ಕಾರ ಮುಕ್ತ ಮಾರಾಟಕ್ಕೆ ಅವಕಾಶ ಕೊಟ್ಟಿದೆ. ಈಗ ರೈತ ವಿರೋಧಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸಲು ಸಾಧ್ಯವಿಲ್ಲ. ಸಾರಿಗೆ ಸಚಿವರು ಮೇ 2ರ ವರೆಗೆ ಸಮಯ ಕೊಡುವಂತೆ ಕೇಳಿಕೊಂಡಿದ್ದಾರೆ. ನೌಕರರು ಅಲ್ಲಿಯವರೆಗೆ ಸಮಯ ಕೊಟ್ಟು ನೋಡಬೇಕು. ಸರ್ಕಾರ ಹಾಗೂ ಬಿಜೆಪಿ ನಿಮ್ಮ ಬೇಡಿಕೆಯ ಪರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಹ ವೇಳೆಯಲ್ಲೂ ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ನೌಕರರಲ್ಲಿ ಮನವಿ ಮಾಡಿದರು. ಮೊದಲೇ ಸಂಕಷ್ಟದಲ್ಲಿದ್ದ ಸಾರಿಗೆ ಇಲಾಖೆ ಕೋವಿಡ್‍ನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ ವಿನಂತಿಸಿದರು.

    ಸೈನಿಕರ ಹತ್ಯೆ ದುರಾದೃಷ್ಟಕರ : ನಾನು ಗೌರಿ ಎಂದು ಮೊಂಬತ್ತಿ ಹಿಡಿದವರು 27 ಜನ ಸೈನಿಕರು ಸತ್ತಾಗ ಏಕೆ ಮೊಂಬತ್ತಿ ಹಿಡಿಯಲಿಲ್ಲ ಎಂದು ಟೀಕಿಸಿದರು. ಎಡಪಂಥೀಯ ನಿಲುಗಳಿಂದ ದುಷ್ಪ್ರೇರಣೆ ಪಡೆದ ಜನ ಛತ್ತಿಸ್‍ಗಢದಲ್ಲಿ 27 ಜನ ಸೈನಿಕರನ್ನ ಹತ್ಯೆ ಮಾಡಿದ್ದಾರೆ. ಇದು ದುರಾದೃಷ್ಟಕರ. ಸೈನಕರಿಗೆ ಶತ್ರುಗಳಾದವರು ದೇಶಕ್ಕೂ ಶತ್ರುಗಳೇ. ಯಾರು ಸಂವಿಧಾನವನ್ನ ಒಪ್ಪುವುದಿಲ್ಲವೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡಲ್ಲ. ಸಂವಿಧಾನದ ಮೇಲೆ ಯಾರಿಗೆ ನಂಬಿಕೆ ಇರುತ್ತೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡುತ್ತಾರೆ. ಬುಲೆಟ್ ಮೇಲೆ ನಂಬಿಕೆ ಇರುವವರಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಿಲ್ಲ ಎಂದರು.

    ಸೈನಿಕರನ್ನ ಶತ್ರು ಎಂದು ಪರಿಗಣಿಸುವವನು ದೇಶದಲ್ಲಿ ಇರುವುದಕ್ಕೆ ಅನರ್ಹ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಸಣ್ಣ-ಸಣ್ಣ ವಿಷಯಗಳನ್ನ ವೈಭವಿಕರಿಸಿ ಅರಾಜಕತೆ ಸೃಷ್ಟಿಸಿ ದೇಶವನ್ನು ಹೊಡೆಯುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ ಉಂಟು ಮಾಡುವ ಅನಿವಾರ್ಯತೆ ಇದೆ ಎಂದರು.

    ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಎಸ್‍ವೈ ಹಾಗೂ ಯತ್ನಾಳ್ ಸಂಬಂಧ ಚೆನ್ನಾಗಿದೆ. ಯತ್ನಾಳ್ ಸ್ವಭಾವದ ಬಗ್ಗೆ 2018ರಲ್ಲಿ ಟಿಕೆಟ್ ನೀಡುವಾಗ ಚರ್ಚೆಯಾಗಿತ್ತು. ಆಗ ಯತ್ನಾಳ್ ಪರ ಬಿ.ಎಸ್ ಯಡಿಯೂರಪ್ಪ ಸಮರ್ಥನೆ ಮಾಡಿ ಮಾತನಾಡಿದ್ದರು. ಅವರ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ ಎಂದರು.

  • ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಹೈಡ್ರಾಮ – `ಕೈ, ಕಮಲ’ ಕಾರ್ಯಕರ್ತರ ನಡ್ವೆ ಫೈಟ್

    ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಹೈಡ್ರಾಮ – `ಕೈ, ಕಮಲ’ ಕಾರ್ಯಕರ್ತರ ನಡ್ವೆ ಫೈಟ್

    ಚಿಕ್ಕಮಗಳೂರು: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಕ್ಷೇತ್ರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿ ಹೈಡ್ರಾಮ ನಡೆಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.

    ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಶಂಕು ಸ್ಥಾಪನೆ ನಡೆಸಲು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕ ಸುರೇಶ್ ಆಗಮಿಸಿದ್ದರು. ಈ ವೇಳೆ ಸಂಸದರು ಹಾಗೂ ಶಾಸಕರ ಎದುರೇ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

    ಮಾಜಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಶಾಸಕ ಸುರೇಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನೆಗೆ ಮುಂದಾದ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಮಾಡಿ ಕರೆದ್ಯೊಯ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ಹರಸಾಹಸ ಪಟ್ಟರು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಾಜಿ ಶಾಸಕ ಶ್ರೀನಿವಾಸ್ ಅವರು, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರುವ ಸುಮಾರು 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದ ವೇಳೆಯೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇಂದು ಬಿಜೆಪಿ ಶಾಸಕರು ಮತ್ತೆ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಯೋಜನೆ ಆರಂಭವಾಗಿಯೇ 6 ತಿಂಗಳು ಆಗಿದೆ ಎಂದು ಆರೋಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv