Tag: Chikkamagalur

  • ಸಿದ್ದಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ – ಓರ್ವ ಸಾವು

    ಸಿದ್ದಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ – ಓರ್ವ ಸಾವು

    ಚಿಕ್ಕಮಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿ ನಡೆದಿದೆ.

    ಪರಮೇಶ್ವರಪ್ಪ(40) ಸ್ಥಳದಲ್ಲೇ ಮೃತ ವ್ಯಕ್ತಿ. ಕಡೂರಿನ ಮಲ್ಲೇಶ್ವರ ಗ್ರಾಮದ ಏಳು ಮಂದಿ ಬೊಲೆರೋ ಮಾಡಿಕೊಂಡು ಶ್ರೀಗಳ ಅಂತಿಮ ದರ್ಶನಕ್ಕೆಂದು ಸೋಮವಾರ ಮಧ್ಯಾಹ್ನ ತೆರಳಿದ್ದರು. ಸೋಮವಾರ ರಾತ್ರಿಯೇ ದರ್ಶನ ಮಾಡಿಕೊಂಡು ವಾಪಸ್ ಮರಳುವಾಗ ಈ ಅಪಘಾತ ಸಂಭವಿಸಿದೆ.

    ಈ ಘಟನೆಯಲ್ಲಿ ಪರಮೇಶ್ವರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಡ್ರೈವರ್ ಸೇರಿ ಆರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಡ್ಡಾದಿಡ್ಡಿ ಕಾರು ಚಾಲನೆ- ರೊಚ್ಚಿಗೆದ್ದ ಸ್ಥಳೀಯರಿಂದ ವಾಹನ ಪುಡಿ ಪುಡಿ

    ಅಡ್ಡಾದಿಡ್ಡಿ ಕಾರು ಚಾಲನೆ- ರೊಚ್ಚಿಗೆದ್ದ ಸ್ಥಳೀಯರಿಂದ ವಾಹನ ಪುಡಿ ಪುಡಿ

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಬೈಕ್ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ನಡೆದಿದೆ.

    ವ್ಯಕ್ತಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಬೈಕ್ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕಿನಲ್ಲಿದ್ದ ಮಗು ಸೇರಿದಂತೆ ಇಬ್ಬರಿಗೆ ಗಂಭೀರ ಗಾಯವಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವ್ಯಕ್ತಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದಕ್ಕೆ ಅಲ್ಲಿದ್ದ ಸ್ಥಳೀಯರು ರೊಚ್ಚಿಗೆದ್ದು ಆತನ ಕಾರನ್ನು ಪುಡಿ ಪುಡಿ ಮಾಡಿದ್ದಾರೆ. ಆತನ ಕಾರನ್ನು ಧ್ವಂಸ ಮಾಡಿದಲ್ಲದೇ ಸ್ಥಳೀಯರು ಆತನ ಕಾರನ್ನು ಉಲ್ಟಾ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ: ಸಿದ್ದರಾಮಯ್ಯ

    ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ: ಸಿದ್ದರಾಮಯ್ಯ

    ಚಿಕ್ಕಮಗಳೂರು: ಬಿಜೆಪಿಯವರು ಅತ್ಯಂತ ಮಾನಗೆಟ್ಟವರು, ಲಜ್ಜೆಗೆಟ್ಟವರು. ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಕಡೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ 6 ತಿಂಗಳಿನಿಂದ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್ ನೀಡಿದ್ದಾರೆ. ಅವರ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದಾರೆ. ನಾಳೆ ಸರ್ಕಾರ ಮಾಡುತ್ತೇವೆ, ನಾಡಿದ್ದು ಸರ್ಕಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಎಲ್ಲಾ ಬರೀ ಸುಳ್ಳು, ದಯವಿಟ್ಟು ಅವರು ಏನೇ ಹೇಳಿದರೂ ಅದೆಲ್ಲಾ ಸುಳ್ಳೆಂದು ಪ್ರಚಾರ ಮಾಡಿ ಎಂದರು.

    ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಜನ ವಿರೋಧ ಪಕ್ಷದಲ್ಲಿ ಕೂರುವಂತೆ ಹೇಳಿದ್ದಾರೆ. ಅಧಿಕಾರ ಮಾಡಲು ತೀರ್ಪು ನೀಡಿಲ್ಲ. ಆದರೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬರುತ್ತಿದ್ದಾರೆ. ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೆದ 10 ವರ್ಷಗಳಲ್ಲಿ ಕಾಫಿನಾಡಲ್ಲಿ ಚಳಿಯ ಪ್ರಮಾಣ ಕನಿಷ್ಟ ಮಟ್ಟಕ್ಕೆ ಕುಸಿತ

    ಕಳೆದ 10 ವರ್ಷಗಳಲ್ಲಿ ಕಾಫಿನಾಡಲ್ಲಿ ಚಳಿಯ ಪ್ರಮಾಣ ಕನಿಷ್ಟ ಮಟ್ಟಕ್ಕೆ ಕುಸಿತ

    ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳ ಅವಧಿಯಲ್ಲೇ ಕಾಫಿನಾಡಲ್ಲಿ ಚಳಿಯ ಪ್ರಮಾಣ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದಿದ್ದು, ಜನಸಾಮಾನ್ಯರು ಭಾರೀ ಚಳಿಯಲ್ಲಿ ನಡುಗುತ್ತಿದ್ದಾರೆ.

    ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ಚಳಿ ಇಂದು 11 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿದೆ. ಎರಡು ದಿನದ ಹಿಂದೆ ಈ ಮಾಗಿಯ ಚಳಿ 9 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿತ್ತು. ಜಿಲ್ಲೆಯ ಜನ ಸೂರ್ಯ ನೆತ್ತಿಯ ಮೇಲೆ ಬರುವತನಕ ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ. ಸೂರ್ಯ ಸುಡುತ್ತಿದ್ದರೂ ಕೂಡ ಜನ ಸ್ವೆಟರ್, ಜರ್ಕಿನ್ ಹಾಗೂ ಟೋಪಿ ಇಲ್ಲದೆ ಹೊರಗೆ ಬರುತ್ತಿಲ್ಲ.

    ಸಂಜೆ ನಾಲ್ಕು ಗಂಟೆಗೆ ಚಳಿಯ ಪ್ರಮಾಣ ಮಿತಿ ಮೀರುತ್ತಿದ್ದು, ಜನ ಬೇಗ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ. ಸ್ವೆಟರ್, ಟೋಪಿ ಹಾಗೂ ಜರ್ಕಿನ್ ಹಾಕಿಕೊಂಡು ಜನ ಬಿಸಿಲು ಕಾಯಿಸುವ ಸ್ಥಿತಿ ನಿರ್ಮಾಣವಾಗಿದೆ.

    ಬೆಳ್ಳಂಬೆಳ್ಳಗೆಯೇ ಕೂಲಿ ಕೆಲಸ ಹಾಗೂ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಜನಸಾಮಾನ್ಯರು ರಸ್ತೆ ಬದಿಯಲ್ಲಿ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುವ ದೃಶ್ಯಗಳು ಮಲೆನಾಡಲ್ಲಿ ಸಾಮಾನ್ಯವಾಗಿದೆ. ಬೆಳಗ್ಗೆ, ಸಂಜೆ ವಾಕ್ ಮಾಡುವ ವೃದ್ಧರು, ಮಧ್ಯ ವಯಸ್ಕರು ಹಾಗೂ ಜಾಗಿಂಗ್ ಮಾಡುವ ಯುವಜನತೆ ಕೂಡ ಸಂಪೂರ್ಣ ಪ್ಯಾಕ್ ಆಗಿ ಕ್ರೀಡಾಂಗಣಕ್ಕೆ ಬರುವುದು ಕೂಡ ಮಾಮೂಲಿಯಾಗಿದೆ. ಈ ಚಳಿಯ ಪ್ರಮಾಣ ಇನ್ನೆರಡು ದಿನದಲ್ಲಿ ಮತ್ತುಷ್ಟು ಹೆಚ್ಚಾಗುವ ಸಂಭವವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಲ್ಲಿ ಸಂಸಾರ ಸಮೇತ ಕಾಣಿಸಿಕೊಂಡ ಗಜಪಡೆ- ವಿಡಿಯೋ ನೋಡಿ

    ಕಾಫಿನಾಡಲ್ಲಿ ಸಂಸಾರ ಸಮೇತ ಕಾಣಿಸಿಕೊಂಡ ಗಜಪಡೆ- ವಿಡಿಯೋ ನೋಡಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಜಪಡೆ ತನ್ನ ಸಂಸಾರ ಸಮೇತ ಕಾಣಿಸಿಕೊಂಡಿದೆ.

    ಚಿಕ್ಕಮಗಳೂರಿನ ಭದ್ರಾ ಅರಣ್ಯ ವ್ಯಾಪ್ತಿಯ ಮುತ್ತೋಡಿ ಅರಣ್ಯದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಒಂದೇ ಜಾಗದಲ್ಲಿ ಸಲಗ, ಹೆಣ್ಣಾನೆ ಹಾಗೂ ಮರಿಗಳು ಗೋಚರವಾಗಿದೆ. ಪ್ರವಾಸಿಗರು ಸಫಾರಿಗೆ ಹೋದ ವೇಳೆ 10ಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿದೆ.

    ಆನೆಗಳ ಹಿಂಡು ಕಾಣಿಸುತ್ತಿದ್ದಂತೆ ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸಂಸಾರ ಸಮೇತ ಬಂದ ಗಜಪಡೆಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಕಾಡೆಮ್ಮೆಯೂ ಆನೆಗಳ ಹಿಂಡಿನಲ್ಲಿ ಪ್ರತ್ಯಕ್ಷವಾಗಿದೆ.

    ಗಜಪಡೆಯ ಗಾಂಭೀರ್ಯ ಕಂಡು ಪ್ರವಾಸಿಗರು ಖುಷಿಯಾಗಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಇತ್ತೀಚೆಗೆ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಹೆಚ್ಚಾಗುತ್ತಿದೆ. ಆನೆಗಳ ಹಿಂಡು ಕಾಣಿಸಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=TlPr-RWDBDI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಚಿಕ್ಕಮಗಳೂರು: ಕರುವನ್ನು ಹೊತ್ತೊಯ್ದಿದ್ದಕ್ಕೆ ತಾಯಿ ಹಸು ಗೋಕಳ್ಳರ ಕಾರನ್ನು ಅಟ್ಟಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ.

    ಗುರುವಾರ ರಾತ್ರಿ ಮೂವರು ಗೋ ಕಳ್ಳರು ಹಸುಗಳ ಕಳ್ಳತನಕ್ಕೆಂದು ಝೈಲೋ ಕಾರಿನಲ್ಲಿ ಕೊಪ್ಪ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಿಡಾಡಿ ಹಸುವನ್ನು ಕಾರಿನೊಳಗೆ ತುಂಬಲು ಯತ್ನಿಸಿದಾಗ ಹಸು ಓಡುವ ವೇಗಕ್ಕೆ ಅದರೊಂದಿಗೆ ಓಡಲಾಗದೆ ಅದನ್ನು ಹಿಡಿಯಲೂ ಆಗದೇ ಕೈಬಿಟ್ಟಿದ್ದಾರೆ.

    ಹಸುವಿನ ಕರುವನ್ನು ಕಾರಿನೊಳಗೆ ತುಂಬಿಕೊಂಡು ಹೋಗೋದನ್ನು ಕಂಡ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋಗಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕರುಗಿಂತ ಮೊದಲೇ ತಾಯಿ ಹಸುವನ್ನು ಹಿಡಿಯಲೆತ್ನಿಸಿದ ಕಳ್ಳರಿಗೆ ಹಸು ಚೆನ್ನಾಗಿ ಪಾಠ ಕಲಿಸಿದೆ. ಎರ್ರಾ ಬಿರ್ರಿ ಓಡಿ ಗೋಕಳ್ಳನನ್ನು ಹೈರಾಣು ಮಾಡಿದೆ.

    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳರು ಯಾರೆಂದು ತಿಳಿದು ಬಂದಿಲ್ಲ. ಆದರೆ ಕಾರು ಝೈಲೋ ಅನ್ನೋದು ಪತ್ತೆಯಾಗಿದೆ. ಮುಂದೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    https://www.youtube.com/watch?v=WRPMx1dEJvs&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರು: 3 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗದೆ.

    ಡಿಸೆಂಬರ್ 19ರಿಂದ 22ರ ವರೆಗೆ ಚಿಕ್ಕಮಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಅಂದರೆ ಗುರುವಾರದಿಂದ ಕಾಫಿನಾಡಲ್ಲಿ 3 ದಿನ ದತ್ತ ಜಯಂತಿ ಸಂಭ್ರಮಿಸಲಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ.

    ದತ್ತಜಯಂತಿ ಹಿನ್ನೆಲೆಯಲ್ಲಿ ಗಿರಿಶ್ರೇಣಿ ನೋಡಲು ಬರುವ ಪ್ರವಾಸಿಗರಿಗೂ ಜಿಲ್ಲಾಡಳಿತ ಮೂರು ದಿನಗಳ ಕಾಲ ನಿರ್ಬಂಧ ಹೇರಿದೆ. ಹೀಗಾಗಿ ಈ ಮೂರು ದಿನಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರವೇಶಕ್ಕೆ ಅನುಮತಿ ಇಲ್ಲ.

    ವಿ.ಎಚ್.ಪಿ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ದತ್ತ ಜಯಂತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ದತ್ತ ಜಯಂತಿ ಪ್ರಯುಕ್ತ ದತ್ತ ಪೀಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿಯುವ ನೀರಿಗೆ ಪರದಾಡಿ ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿದ ಹಸು: ವಿಡಿಯೋ ವೈರಲ್

    ಕುಡಿಯುವ ನೀರಿಗೆ ಪರದಾಡಿ ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿದ ಹಸು: ವಿಡಿಯೋ ವೈರಲ್

    ಚಿಕ್ಕಮಗಳೂರು: ಕುಡಿಯಲು ನೀರಿಲ್ಲದೆ ಹಸುವೊಂದು ಪರದಾಡಿ, ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿಯುತ್ತಿರುವ ಮನಕಲಕುವ ದೃಶ್ಯವೊಂದು ಸೆರೆಯಾಗಿದೆ.

    ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆಯಲ್ಲಿ ಕುಡಿಯಲು ನೀರಿಲ್ಲದೆ ಹಸುವೊಂದು ಕೆಲಕಾಲ ಪರದಾಡಿದೆ. ನಂತರ ಹಸು ರಸ್ತೆಯ ಪಕ್ಕದಲ್ಲಿದ್ದ ನಲ್ಲಿಯನ್ನು ಗಮನಿಸಿದೆ. ಹಸು ಸ್ಥಳಕ್ಕೆ ತೆರಳಿ ನಲ್ಲಿಯನ್ನು ತಿರುಗಿಸಿ ಸುಮಾರು ಐದು ನಿಮಿಷಗಳ ನೀರು ಕುಡಿದಿದೆ.

    ಹಸು ನೀರನ್ನು ಕುಡಿದ ಬಳಿಕ ನಲ್ಲಿಯನ್ನ ಮತ್ತೆ ತಿರುಗಿಸಿ ಆಫ್ ಮಾಡಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಿಗದೇ ಇರುವ ಕಾರಣ ಕುಡಿಯುವ ನೀರಿಗಾಗಿ ಪರದಾಡಿದ ಹಸು ಕೊನೆಗೆ ನಲ್ಲಿ ನೀರು ಕುಡಿದಿದೆ.

    ಹಸು ನಲ್ಲಿ ತಿರುಗಿಸಿ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    https://www.youtube.com/watch?v=2LaHhnS5FZY&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸ್ಟೆಲ್ ಕಾಂಪೌಂಡೊಳಗೆ ನಾಗರಹಾವು- ಬೆಚ್ಚಿಬಿದ್ದು ಓಟಕ್ಕಿತ್ತ ವಿದ್ಯಾರ್ಥಿನಿಯರು

    ಹಾಸ್ಟೆಲ್ ಕಾಂಪೌಂಡೊಳಗೆ ನಾಗರಹಾವು- ಬೆಚ್ಚಿಬಿದ್ದು ಓಟಕ್ಕಿತ್ತ ವಿದ್ಯಾರ್ಥಿನಿಯರು

    ಚಿಕ್ಕಮಗಳೂರು: ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಂಪೌಂಡ್ ಒಳಗೆ ಮಂದಗತಿಯಲ್ಲಿ ಸಾಗುತ್ತಿದ್ದ ನಾಗರಹಾವನ್ನು ನೋಡಿ ಆಟವಾಡುತ್ತಿದ್ದ ಬಾಲಕಿಯರು ಗಾಬರಿಗೊಂಡು ಕಿರುಚಿಕೊಂಡು ಓಡಿ ಹೋಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹಾವು ಕಂಡು ಬಂದಿದ್ದು, ಭಾನುವಾರ ರಜೆ ಇದ್ದಿದರಿಂದ ಸಂಜೆ ಬಾಲಕಿಯರು ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಹಾವನ್ನು ನೋಡಿ ಗಾಬರಿಯಾಗಿ ಕಿರುಚಿಕೊಂಡು ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ.

    ಕೂಡಲೇ ಹಾಸ್ಟೆಲ್ ವಾರ್ಡನ್ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಅರ್ಧಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ ನಂದಿಗಿರಿಧಾಮ

    ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ ನಂದಿಗಿರಿಧಾಮ

    – ನಂದಿಗಿರಿಧಾಮದ ಪ್ರವಾಸಿಗರಿಗೆ ಬೀಳಿಲಿದೆ ಜಿಎಸ್‍ಟಿ ಬರೆ-ಹೊರೆ

    ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗತಾಣ, ಪ್ರೇಮಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಇನ್ನು ಮುಂದೆ ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ.

    ಹೌದು.. ಈಗಾಗಲೇ ಸದ್ದಿಲ್ಲದೇ ಸರ್ಕಾರ ನಂದಿಗಿರಿಧಾಮದ ಪ್ರವೇಶ ಶುಲ್ಕ ಏರಿಕೆಗೆ ಮುಂದಾಗಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಪ್ರವಾಸಿಗರಿಗೆ ಬರೆ ಬೀಳಲಿದೆ. ತೋಟಗಾರಿಕಾ ಇಲಾಖಾ ಅಧೀನದ ನಂದಿಗಿರಿಧಾಮದಲ್ಲಿ ಇರುವ ಪ್ರವೇಶ ದರ ದುಬಾರಿ ಅಂತ ಪ್ರವಾಸಿಗರು ಹೇಳುತ್ತಿದ್ದರು. ಈಗ ಜಿಎಸ್‍ಟಿ ನೆಪವೊಡ್ಡಿರುವ ತೋಟಗಾರಿಕಾ ಇಲಾಖೆ ಪ್ರವೇಶ ದರ ಹೆಚ್ಚಳ ಮಾಡಲು ಮುಂದಾಗಿದೆ.

    ಹಿಂದಿನ ಹಾಗೂ ಮುಂದಿನ ಪ್ರವೇಶ ದರ:
    ಸದ್ಯಕ್ಕೆ ನಂದಿಗಿರಿಧಾಮಕ್ಕೆ ತಲಾ ಒಬ್ಬರ ಪ್ರವೇಶಕ್ಕೆ 10 ರೂ. ಶುಲ್ಕವಿದೆ. ಆದರೆ ಈ ಶುಲ್ಕ 10 ರಿಂದ 20 ರೂ. ಗೆ ಏರಿಕೆಯಾಗಲಿದೆ. ಒಂದು ದ್ವಿಚಕ್ರವಾಹನಕ್ಕೆ 20 ರೂ. ಇದ್ದು, ಈಗ 30 ರೂ. ಆಗಲಿದೆ. ಹೀಗಾಗಿ ಒಂದು ಬೈಕ್ ಹಾಗೂ ಓರ್ವ ವ್ಯಕ್ತಿಗೆ ನೂತನ ದರ 50 ರೂಪಾಯಿಯಾಗಿದೆ. ಒಂದು ಬೈಕ್ ಹಾಗೂ ಇಬ್ಬರಿಗೆ 70 ರೂಪಾಯಿ ಆಗಲಿದೆ. ಇನ್ನೂ ದ್ವಿಚಕ್ರ ವಾಹನದ ದರ ಪಟ್ಟಿ ಇದಾದರೇ ಕಾರುಗಳ ದರಪಟ್ಟಿಯೂ ಸಖತ್ ಏರಿಕೆ ಆಗಿದೆ.

    ಅಂದಹಾಗೆ 4 ಪ್ಲಸ್ 1 ಸೀಟ್ ಕೆಪಾಸಿಟಿ ನಾಲ್ಕು ಚಕ್ರ ವಾಹನಗಳಿಗೆ ಈ ಮೊದಲು 100 ರೂ. ಶುಲ್ಕವಿತ್ತು. ಈಗ ನೂತನ ದರ ಬಸ್ ನಿಲ್ದಾಣದ ಪಾರ್ಕಿಂಗ್ ಬಳಿಗೆ 125 ರೂ. ನಿಗದಿಯಾದ್ರೇ ಗಿರಿಧಾಮದ ಒಳಭಾಗದ ಮೇಲ್ಭಾಗಕ್ಕೆ 175 ರೂ. ನಿಗದಿಪಡಿಸಲಾಗಿದೆ. ಇನ್ನೂ 4 ಪ್ಲಸ್ 1 ಸೀಟ್ ಗಿಂತ ಹೆಚ್ಚು ಕೆಪಾಸಿಟಿಯ ವಾಹನಗಳಿಗೆ ಈ ಮೊದಲು 150 ರೂ. ಇದ್ದು, ಈಗಲೂ ಅದೇ ದರ ಮುಂದುವರೆಯಲಿದೆ. ಆದ್ರೆ ನಂದಿಗಿರಿಧಾಮದ ಒಳಭಾಗದ ಮೇಲ್ಬಾಗದ ಪ್ರವೇಶಕ್ಕೆ 175 ರೂ. ನಿಗದಿ ಮಾಡಲಾಗಿದೆ. ಇದಲ್ಲದೆ ತ್ರಿಚಕ್ರ ವಾಹನ ಆಟೋಗಳಿಗೆ ಈ ಮೊದಲು ಇದ್ದ 60 ರೂ. ಯಿಂದ 70 ರೂ.ಗೆ ಏರಿಕೆಯಾಗಿದ್ದು, ನಂದಿಗಿರಿಧಾಮದ ಮೇಲ್ಭಾಗಕ್ಕೆ 80 ರೂ. ನಿಗದಿ ಪಡಿಸಲಾಗಿದೆ.

    ಯಾಕೆ ಪ್ರವೇಶ ದರ ಏರಿಕೆ?
    ಜಿಎಸ್‍ಟಿ ಜಾರಿಯಾದ ನಂತರ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿರುವ ಕಾರಣ ಸರ್ಕಾರ ಈ ನಿರ್ಧಾರಕ್ಕೆ ಬರಲಾಗಿದೆ ಅಂತ ಸ್ವತಃ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಂದಿಗಿರಿಧಾಮಕ್ಕೆ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಎಕೋ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ್ದ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು.

    ಎಂದಿನಿಂದ ನೂತನ ದರ ಜಾರಿ?
    ನಂದಿಗಿರಿಧಾಮದ ಪ್ರವೇಶ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೆಂಡರ್ ಮೂಲಕ ಪ್ರಕ್ರಿಯೆಗಳನ್ನ ನಡೆಸಿ ಎರಡು ವರ್ಷಗಳಿಗೊಮ್ಮೆ ಟೆಂಡರ್ ಕೆರೆದು ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಅವಧಿಗೆ ಶ್ರೀ ವೈಷ್ಣವಿ ಎಂಟರ್ ಪ್ರೈಸಸ್ ರವರು 3.24 ಕೋಟಿಗೆ ಟೆಂಡರ್ ಪಡೆದುಕೊಂಡಿದ್ದರು. ಆದರೆ ಟೆಂಡರ್ ಪಡೆದವರು ಸರ್ಕಾರ ನಿಗದಿ ಮಾಡಿದ ದರದಂತೆಯೇ ಪ್ರವೇಶ ಶುಲ್ಕ ವಸೂಲಿ ಮಾಡಬೇಕು. 2 ತಿಂಗಳಲ್ಲಿ ಹಳೆಯ ಟೆಂಟರ್ ಅವಧಿ ಮುಗಿಯಲಿದ್ದು, ಈಗಾಗಲೇ ನೂತನ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಹೀಗಾಗಿ ನೂತನವಾಗಿ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಹೊಸ ದರ ಚಾಲ್ತಿಗೆ ಬರಲಿದೆ. ಅಂದಾಜು ಎರಡೂವರೆ ತಿಂಗಳ ನಂತರ ಈ ನೂತನ ದರ ಜಾರಿಗೆ ಬರಲಿದೆ ಅಂತ ನಂದಿಗಿರಿಧಾಮದ ವಿಶೇಷ ಅಧಿಕಾರಿ ರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv