Tag: Chikkamagalur

  • ಕಿಚ್ಚ ಸುದೀಪ್‍ಗೆ ಸಮನ್ಸ್ ಜಾರಿ

    ಕಿಚ್ಚ ಸುದೀಪ್‍ಗೆ ಸಮನ್ಸ್ ಜಾರಿ

    ಚಿಕ್ಕಮಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಚಿಕ್ಕಮಗಳೂರು ಜೆಎಂಎಫ್‍ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

    ದೀಪಕ್ ಮಯೂರ್ ಎಂಬವರು ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

    ಕಿಚ್ಚ ಸುದೀಪ್ ಖಾಸಗಿ ವಾಹಿನಿಯಲ್ಲಿ ‘ವಾರಸ್ದಾರ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು. ಈ ಧಾರಾವಾಹಿಯ ಶೂಟಿಂಗ್‍ಗಾಗಿ ಸುದೀಪ್ ದೀಪಕ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

    ದೀಪಕ್ ಅವರು ಬಾಡಿಗೆ ಹಣ ನೀಡದೇ ತೋಟ ನಾಶ ಮಾಡಿದ್ದಾರೆ ಎಂದು ಸುದೀಪ್ ವಿರುದ್ಧ ದೂರು ದಾಖಲಿಸಿದ್ದರು. ಸುದೀಪ್ ಮಂಗಳವಾರ ಕೋರ್ಟ್‍ಗೆ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

    ಏನಿದು ವಿವಾದ?
    ಖಾಸಗಿ ವಾಹಿನಿಯಲ್ಲಿ ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣದ ಅಡಿಯಲ್ಲಿ ವಾರಸ್ದಾರ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈಗ ಈ ಧಾರಾವಾಹಿ ಪ್ರಸಾರ ನಿಂತಿದ್ದು, ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಅವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ತಂಡ ಪಡೆದಿತ್ತು.

    ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದೆ. ಹಾನಿಯಾದ ಹಿನ್ನೆಲೆಯಲ್ಲಿ ಒಟ್ಟು 1.50 ಕೋಟಿ ರೂ. ನಷ್ಟವಾಗಿದ್ದು ಈ ಹಣವನ್ನು ನೀಡಬೇಕೆಂದು ನಿರ್ಮಾಣ ತಂಡಕ್ಕೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸುದೀಪ್ ಕ್ರಿಯೇಶನ್ಸ್ ತಿರಸ್ಕರಿಸಿತ್ತು.

  • ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಚಿಕ್ಕಮಗಳೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಟಿಪ್ಪರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಚಿಕ್ಕಮಗಳೂರು ನಗರದ ಶೃಂಗಾರ ಸರ್ಕಲ್‍ನಲ್ಲಿ ನಡೆದಿದೆ.

    ಲಕ್ಷ್ಮೀ(48) ಸ್ಥಳದಲ್ಲೇ ಮೃತಪಟ್ಟ ಮಹಿಳೆ. ಲಕ್ಷ್ಮೀ ತನ್ನ ಪತಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ನೋಡ ನೋಡ್ತಿದ್ದಂತೆ ಮಹಿಳೆ ಲಾರಿ ಅಡಿ ಸಿಲುಕಿ ಕೊನೆಯುಸಿರು ಎಳೆದಿದ್ದಾರೆ.

    ಈ ಘಟನೆಯಲ್ಲಿ ಸ್ಕೂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಭೀಕರ ಅಪಘಾತದ ದೃಶ್ಯ ಪಕ್ಕದ ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾದ ಕಾವಲಿಯಂತಾಗಿದೆ ಕಾಫಿನಾಡು – ನೆತ್ತಿ ಸುಡುತ್ತಿದೆ ಬಿಸಿಲು!

    ಕಾದ ಕಾವಲಿಯಂತಾಗಿದೆ ಕಾಫಿನಾಡು – ನೆತ್ತಿ ಸುಡುತ್ತಿದೆ ಬಿಸಿಲು!

    ಚಿಕ್ಕಮಗಳೂರು: ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸುವ ಹಸಿರ ತವರು ಕಾಫಿನಾಡಲ್ಲಿ ಮನೆ ಮಾಡಬೇಕೆಂದು ಅದೆಷ್ಟೋ ಪ್ರವಾಸಿಗರ ಬಯಕೆ. ಆದರೆ ಚಿಕ್ಕಮಗಳೂರಿನ ಸದ್ಯದ ಹವಾಮಾನ ಕೇಳಿದ್ರೆ, ಇತ್ತ ತಲೆ ಹಾಕಿಯೂ ಮಲಗೊಲ್ಲ.

    ಹೌದು. ವರ್ಷದಿಂದ ವರ್ಷಕ್ಕೆ ಕಾಫಿನಾಡು ಕಾದ ಕವಾಲಿಯಂತಾಗ್ತಿದೆ. ಏಕೆಂದರೆ ಈ ಬಾರಿ ಹಿಂದೆಂದೂ ಕಾಣದಂತ ಬಿಸಿಲು ನೆತ್ತಿ ಸುಡ್ತಿದೆ. ಕನಿಷ್ಠ 22 ರಿಂದ ಗರಿಷ್ಠ 26, 28ರವರೆಗಿದ್ದ ಬಿಸಿಲಿನ ತಾಪ ಈ ಬಾರಿ 38ರ ಗಡಿ ಮುಟ್ಟಿದೆ.


    ಕೊಪ್ಪ, ಶೃಂಗೇರಿ, ಎನ್.ಆರ್ ಪುರ, ಮೂಡಿಗೆರೆಯ ಪರಿಸ್ಥಿತಿಯೂ ಚಿಕ್ಕಮಗಳೂರಿಗಿಂತ ಭಿನ್ನವಾಗಿಲ್ಲ. ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾಗಿರೋ ಕಡೂರು, ತರೀಕೆರೆಯ ಪರಿಸ್ಥಿತಿಯಂತು ಮತ್ತಷ್ಟು ಶೋಚನಿಯ. ಜನಸಾಮಾನ್ಯರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಫಿನಾಡು ರಾಜ್ಯದ ಕಲಬುರಗಿ, ಬೆಳಗಾವಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಬಿಸಿಲು ಏರುತ್ತಿರುವ ಮಧ್ಯೆ ಎಳನೀರು ಹಾಗೂ ಜ್ಯೂಸ್ ವ್ಯಾಪಾರ ಭರ್ಜರಿ ಆಗುತ್ತಿದೆ. ಹಿಂದೆ ಬೆಳಗ್ಗೆಯಿಂದ ಸಂಜೆಯವರೆಗೂ ಏಳನೀರು ಸಿಗುತಿತ್ತು. ಆದರೆ ಈಗ ಮಧ್ಯಾಹ್ನವೇ ಏಳನೀರು ಖಾಲಿಯಾಗುತ್ತಿದೆ. ಹೀಗಾಗಿ ಏಳನೀರು ವ್ಯಾಪಾರಿಗಳು ಹೆಚ್ಚು ಏಳನೀರನ್ನು ರೈತರಿಂದ ಖರೀದಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಾರಿ ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋದ ಚಾಲಕ..!

    ಲಾರಿ ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋದ ಚಾಲಕ..!

    ಚಿಕ್ಕಮಗಳೂರು: ಲಾರಿಯ ಸ್ಟೇರಿಂಗ್‍ಗೆ ಕೈ ಹಾಕುತ್ತಿರುವಾಗ ಇಂಜಿನ್‍ನಲ್ಲಿ ಹಾವು ಕಂಡಿದ್ದು, ಇದನ್ನು ನೋಡಿದ ಚಾಲಕ ಲಾರಿಯನ್ನು ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.

    ಬಣಕಲ್‍ನ ರೈಸ್‍ಮಿಲ್‍ನಲ್ಲಿ ಲಾರಿಗೆ ಅಕ್ಕಿಯ ಮೂಟೆಗಳನ್ನು ಲೋಡ್ ಮಾಡಲಾಗಿತ್ತು. ಲಾರಿಯನ್ನು ಹೊರ ತೆಗೆಯಲು ಚಾಲಕ ಲಾರಿಗೆ ಹತ್ತಿದ ಕೂಡಲೇ ಹಾವನ್ನು ನೋಡಿ ಕೆಳಗಿಳಿದು ಓಡಿ ಹೋಗಿದ್ದಾನೆ. ಕೂಡಲೇ ರೈಸ್‍ಮಿಲ್ ಮಾಲೀಕ ಸ್ನೇಕ್ ಆರೀಫ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಲಾರಿಯ ಇಂಜಿನ್‍ನಲ್ಲಿದ್ದ ನಾಗರಹಾವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.

    https://www.youtube.com/watch?v=Wwl-2ZFkHXQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಳಿ ಬಗ್ಗೆ ಮಾಹಿತಿ ಇಲ್ಲ: ಸಿದ್ದರಾಮಯ್ಯ ಉಡಾಫೆ ಮಾತು

    ದಾಳಿ ಬಗ್ಗೆ ಮಾಹಿತಿ ಇಲ್ಲ: ಸಿದ್ದರಾಮಯ್ಯ ಉಡಾಫೆ ಮಾತು

    ಚಿಕ್ಕಮಗಳೂರು: ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

    ಜಿಲ್ಲೆಯ ತರೀಕೆರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, “ದಾಳಿ ಮಾಡಿದವರು ಯಾರು? ದಾಳಿ ನಾವ್ ಮಾಡಿರೋದಾ ಅಥವಾ ಅವರು ಮಾಡಿದ್ದಾರಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಅಲ್ಲದೇ ದಾಳಿ ಬಗ್ಗೆ ಮಾಹಿತಿ ಇಲ್ಲ. ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದೇನೆ. ಹಾಗಾಗಿ ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದು ಉತ್ತರ ನೀಡುತ್ತೇನೆ” ಎಂದ ಹೇಳಿದ್ದಾರೆ.

    “ಉಗ್ರರ ಕ್ಯಾಂಪ್ ಮೇಲೆ ಸರ್ಜಿಕಲ್ ಸ್ಟ್ರೈಕ್-2 ಮಾಡಿದ ವಾಯು ಸೇನೆಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಈ ದಾಳಿ ಪಾಕಿಸ್ತಾನಕ್ಕೆ ಒಂದು ಒಳ್ಳೆಯ ಪಾಠ” ಎಂದು ಇಂದು ಬೆಳಗ್ಗೆ 10.08ಕ್ಕೆ ಟ್ವೀಟ್ ಮಾಡಿ ಸೇನೆಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ ಈ ವಿಚಾರದ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡುವಾಗ ಉಡಾಫೆಯಾಗಿ ಮಾತನಾಡಿದ್ದಾರೆ.

    ಇಂದು ನಸುಕಿನ ಜಾವ 3.30ರ ಸುಮಾರಿಗೆ ಉಗ್ರರ ನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ಮಾಡಿದ್ದು, ಸುಮಾರು 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ವಾಯು ಸೇನೆಯ ಏರ್ ಸ್ಟ್ರೈಕ್‍ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿ, ಸಂಭ್ರಮ ಪಡುತ್ತಿದ್ದಾರೆ.

    https://www.youtube.com/watch?v=H0Eg3K5n5AQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹರಳಿ ಗಿಡದ ಸೊಪ್ಪು ತಿಂದು ಉಸಿರುಗಟ್ಟಿ ಸುಮಾರು 25 ಕುರಿಗಳು ಸಾವು

    ಹರಳಿ ಗಿಡದ ಸೊಪ್ಪು ತಿಂದು ಉಸಿರುಗಟ್ಟಿ ಸುಮಾರು 25 ಕುರಿಗಳು ಸಾವು

    ಚಿಕ್ಕಮಗಳೂರು: ಹರಳಿ ಗಿಡದ ಸೊಪ್ಪು ತಿಂದು ಉಸಿರುಗಟ್ಟಿ ಸುಮಾರು 25 ಕುರಿಗಳು ಸಾವನ್ನಪ್ಪಿ ಹೊಲದ ತುಂಬೆಲ್ಲಾ ಬಿದ್ದಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ದೇವರಗೊಂಡನಹಳ್ಳಿ ಗ್ರಾಮದಲ್ಲಿ ನಡದಿದೆ.

    ಶಿವಣ್ಣ ಎಂಬವರಿಗೆ ಈ ಕುರಿಗಳು ಸೇರಿದ್ದು, ಇಂದು ಬೆಳಗ್ಗೆ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಬರಪೀಡಿತ ಪ್ರದೇಶವಾದ ಕಾರಣ ತಿನ್ನಲು ಹುಲ್ಲು ಇಲ್ಲವಾದ್ದರಿಂದ ಮೆಯುತ್ತಾ ಹೋದ ಕುರಿಗಳು ಹರಳಿ ಗಿಡದ ಸೊಪ್ಪನ್ನು ತಿಂದಿವೆ. ಸೊಪ್ಪನ್ನು ತಿಂದು ಹೊಲಕ್ಕೆ ಬರುತ್ತಿದ್ದಂತೆ ಕುರಿಗಳು ಉಸಿರುಗಟ್ಟಿ ನಿಂತ ಜಾಗದಲ್ಲೇ ಸಾಲು ಸಾಲಾಗಿ ಸಾವನ್ನಪ್ಪಿವೆ.

    ಕುರಿಗಳಿಂದ ಶಿವಣ್ಣ ಅವರಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿಗಳು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನು ಜೀವನಕ್ಕೆಂದು ನಂಬಿಕೊಂಡಿದ್ದ ಕುರಿಗಳು ಹೀಗೆ ಸಾವನ್ನಪ್ಪಿದ್ರಿಂದ ಶಿವಣ್ಣ ಕುಟುಂಬ ಕಂಗಾಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಟೋ ಬಾಡಿಗೆ ಕೇಳಿದ್ದಕ್ಕೆ ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದ

    ಆಟೋ ಬಾಡಿಗೆ ಕೇಳಿದ್ದಕ್ಕೆ ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದ

    – ಬಂಡೆಗಳ ಮಧ್ಯೆ ಅವಿತು ಕುಳಿತಿದ್ದ ಆರೋಪಿ ಅರೆಸ್ಟ್

    ಚಿಕ್ಕಮಗಳೂರು: ಬಾಡಿಗೆ ಹಣ ಕೇಳಿದ್ದಕ್ಕೆ ಆಟೋ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟಿಮನೆ ಗ್ರಾಮದಲ್ಲಿ ನಡೆದಿದೆ.

    ಹರೀಶ್ ಹಲ್ಲೆಗೊಳಗಾದ ಆಟೋ ಚಾಲಕ. ಮಕ್ಕಿ ಮನೆ ನಿವಾಸಿ ಆರೋಪಿ ದಿನೇಶ್ ಎಂಬಾತ ಶನಿವಾರ ರಾತ್ರಿ ಕೊಪ್ಪದಿಂದ ಹರೀಶ್ ಎಂಬವರ ಆಟೋವನ್ನ ಮಕ್ಕಿ ಮನೆಗೆ ಬಾಡಿಗೆಗೆ ಕರೆತಂದಿದ್ದನು. ಮನೆ ಬಂದ ಮೇಲೆ ಆಟೋ ಚಾಲಕ ಹರೀಶ್ ಬಾಡಿಗೆ ಕೇಳಿದ್ದಾನೆ. ಆಟೋದಿಂದ ಇಳಿದ ಆರೋಪಿ ದಿನೇಶ್ ಏಕಾಏಕಿ ಆಟೋ ಚಾಲಕ ಹರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

    ಇರಿತಕ್ಕೊಳಗಾದ ಚಾಲಕ ಹರೀಶ್ ಕೂಗಾಡಿದ ಮೇಲೆ ಸ್ಥಳಿಯರು ಹರೀಶ್‍ನನ್ನ ಜಯಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ದಿನೇಶ್ ಕಾಡಿನಲ್ಲಿ ಬಂಡೆಗಳ ಮಧ್ಯೆ ಅವಿತು ಕುಳಿತಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಜಯಪುರ ಪೆÇಲೀಸರು ಅವಿತು ಕುಳಿತಿದ್ದ ಆರೋಪಿ ದಿನೇಶ್‍ನನ್ನು ಭಾನುವಾರ ಸಂಜೆ ಬಂಧಿಸಿದ್ದಾರೆ.

    ಇರಿತಕ್ಕೊಳಗಾದ ಹರೀಶ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪದ ಹರ್ಷಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಚಿಕ್ಕಮಗಳೂರು: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆಗೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ಕಳೆದೊಂದು ತಿಂಗಳ ಅವಧಿಯಲ್ಲಿ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಒಟ್ಟು 9 ಮಂಗಗಳು ಮೃತಪಟ್ಟಿದ್ದು, ನಾಲ್ಕು ಮಾದರಿಯ ರಕ್ತವನ್ನು ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

    ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಗೋಪಾಲ ಕಾಲೋನಿಯಲ್ಲೂ ಒಂದೇ ದಿನ ನರಳಿ-ನರಳಿ ದಿಢೀರನೇ ಎರಡು ಮಂಗಗಳು ಮೃತಪಟ್ಟರುವದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ, ಮಂಗಗಳ ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಳಿಕ ಗ್ರಾಮದ ಸುತ್ತಲೂ ಔಷಧಿ ಸಿಂಪಡಿಸಿ, ಮಂಗಗಳನ್ನು ಸುಟ್ಟು ಹಾಕಿದ್ದಾರೆ. ಭದ್ರಾ ಡ್ಯಾಂ ತಪ್ಪಲಿನಲ್ಲಿರುವ ಲಕ್ಕವಳ್ಳಿ ಗ್ರಾಮದ ಸುತ್ತಲೂ ದಟ್ಟ ಅರಣ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಓಮ್ನಿ

    ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಓಮ್ನಿ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ 5 ಗಂಟೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮಳಿಗೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೈಸೂರು ಮೂಲದ ಲೀಲಾವತಿ(54) ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಗಾಯಗೊಂಡಿದ್ದಾರೆ.

    ಲೀಲಾವತಿ ಅವರ ಕುಟುಂಬ ಮೈಸೂರಿನಿಂದ ಶೃಂಗೇರಿಗೆ ಬಂದಿದ್ದರು. ಶೃಂಗೇರಿಗೆ ಹೋಗುವಾಗ ದಾರಿ ತಿಳಿಯದೇ ಜಯಪುರುದ ಮಾರ್ಗದ ಬಳಿ ಹೋಗಿದ್ದಾರೆ. ಅಲ್ಲಿಂದ ಕೊಪ್ಪಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಂದಕಕ್ಕೆ ಉರುಳಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಗಾಯಾಳುಗಳನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಜಯಪುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

    ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

    ಚಿಕ್ಕಮಗಳೂರು: ಬದುಕೇ ಒಂದು ಸಂದೇಶದಂತೆ 111 ವರ್ಷ ಸಾರ್ಥಕ ಬದುಕು ನಡೆಸಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತುಗಳು ಕಾಫಿನಾಡಲ್ಲೂ ಸಾಕಷ್ಟಿವೆ.

    ಶೃಂಗೇರಿ ಮಠದ 35ನೇ ಗುರುಗಳಾದ ಅಭಿನವ ವಿದ್ಯಾತೀರ್ಥರ ವರ್ಧಂತ್ಯುತ್ಸವ ಅಂಗವಾಗಿ 1973ರಲ್ಲಿ ನಡೆದ ಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದಗಂಗಾ ಶ್ರೀಗಳು ಭಾಗವಹಿಸಿದ್ದರು. ಅದೇ ರೀತಿ 2003ರಲ್ಲಿ ರಂಭಾಪುರಿ ಪೀಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಗುರುವಿರಕ್ತರ ಸಮಾವೇಶದಲ್ಲೂ ಸಿದ್ದಗಂಗಾ ಶ್ರೀಗಳು ಪಾಲ್ಗೊಂಡಿದ್ದರು.

    1995ರಲ್ಲಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದ ವೀರಶೈವ ಸಮುದಾಯದವರು ಮಾಡಿಕೊಂಡಿದ್ದ ಬಸವ ಸಮಿತಿ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳು ಉಪಸ್ಥಿತರಿದ್ದರು. ಇದೇ ವೇಳೆ ಕುದುರೆಮುಖದಲ್ಲಿ ಸ್ವಾಮೀಜಿ ಗಿಡವೊಂದನ್ನು ನೆಟ್ಟು, ಇಡೀ ಕುದುರೆಮುಖ ಕಂಪನಿಯನ್ನು ವೀಕ್ಷಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv