Tag: Chikkamagalur

  • ವಿಡಿಯೋ: ಮೂರು ವರ್ಷಗಳ ಬಳಿಕ ಕೋಡಿ ಹರಿದ ಮದಗದ ಕೆರೆ

    ವಿಡಿಯೋ: ಮೂರು ವರ್ಷಗಳ ಬಳಿಕ ಕೋಡಿ ಹರಿದ ಮದಗದ ಕೆರೆ

    ಚಿಕ್ಕಮಗಳೂರು: ಅಣ್ಣೇನಹಳ್ಳಿ ಅಣ್ಣೆಗೌಡ, ಕೋಡಿಹಳ್ಳಿ ಕೋಡಿಗೌಡ, ಮಲ್ಲೇನಹಳ್ಳಿ ಮಲ್ಲೇಗೌಡ ಎಂಟು ದಿಕ್ಕಲ್ಲಿ 22 ಕಡೆ ಗಂಗಮ್ಮನ ಕೂರಿಸಿ, ಆರು ಸಾವಿರ ಜನರು, ಮೂರು ಸಾವಿರ ಕುಡುಗೋಲಿನಿಂದ ನಿರ್ಮಿಸಿದ್ದ ಕೆರೆ ಮೂರು ವರ್ಷಗಳ ಬಳಿಕ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಜಾನಪದದ ಬಾಯಲ್ಲಿ ಅದ್ಭುತ ಪರಿಕಲ್ಪನೆಯೊಂದಿಗೆ ಮೂಡಿದೆ ಗೀತೆಗೆ ಸಾಥ್ ನೀಡಿದ್ದ ಕೆರೆಯ ಕಾಫಿನಾಡಿನ ಮದಗದ ಕೆರೆ. ಈ ಕೆರೆಗೆ ಬರೋದೇ ಮಾಯದಂತ ಮಳೆ. ಆದರೆ ಈ ಬಾರಿ ಚಿಕ್ಕಮಗಳೂರಿನ ಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ತಿಂಗಳಿನಲ್ಲೇ ಈ ಕೆರೆ ಮೈದುಂಬಿ ಹರಿಯುತ್ತಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿಗೆ ಈ ಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ.

    ಸುಮಾರು 2,036ಕ್ಕೂ ಅಧಿಕ ಹೆಕ್ಟೇರ್ ನಲ್ಲಿರೋ ಈ ಕೆರೆ ಮೂರು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಬರಪೀಡಿತ ತಾಲೂಕಿನ ಈ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಸುಮಧುರ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸ್ತಿದ್ದಾರೆ. ನೋಡೋದಕ್ಕೆ ಸಮುದ್ರದಂತಿರೋ ಈ ಕೆರೆಯ ಬಳಿ ಸೆಲ್ಫಿ ಕ್ರೇಜಿನ ಕಿಂಗ್, ಕ್ವೀನ್‍ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಹಾಲ್ನೋರೆಯಂತೆ ಧುಮ್ಮಿಕ್ತಿರೋ ಈ ಕೆರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರೋದಂತು ಸತ್ಯ.

    ಈ ಮಾಯದ ಕೆರೆಯ ಸುತ್ತ ಪ್ರಕೃತಿ ಸೌಂದರ್ಯವೇ ಮನೆ ಮಾಡಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಾಯಿಸಿದಲ್ಲೆಲ್ಲಾ ಹಸಿರ ವನರಾಶಿ. ತಣ್ಣಗೆ ಬೀಸೋ ಸ್ವಚ್ಛ ಗಾಳಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮಲೆನಾಡಲ್ಲಿ ದಶಕದ ಬಳಿಕ ವರುಣನ ಆರ್ಭಟ ಜೋರಾಗಿದ್ದು, ಎರಡು ವರ್ಷಗಳ ಬಳಿಕ ಜುಲೈ ತಿಂಗಳಿನಲ್ಲೇ ಕೋಡಿ ಬಿದ್ದಿರೋದು ರೈತರಿಗಂತು ಹಾಲು ಕುಡಿದಷ್ಟು ಸಂತೋಷವಾಗಿದೆ.

    ಈ ಬಾರಿ ಮಾತ್ರ ಈ ಕೆರೆಗೆ ಮಯಾದಂತ ಮಳೆ ಬಂದಿಲ್ಲ. ಬದಲಾಗಿ ಕಾಫಿನಾಡಿನ ಗಿರಿ ಭಾಗದ ಮಳೆಯೇ ಬಂದಿರೋದು. ಈ ಕೆರೆ ತುಂಬೋದ್ರಿಂದ ಕಡೂರಿನ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗೋದರ ಜೊತೆ ಜನ-ಜಾನುವಾರುಗಳಿಗೆ ಕುಡಿಯೋ ನೀರು ಸಿಕ್ಕಿದೆ. ಅಲ್ಲದೇ ಬಯಲುಸೀಮೆಯ 25ಕ್ಕೂ ಹೆಚ್ಚು ಕೆರೆಗಳಿಗೆ ಈ ಕೆರೆ ಸಂಪರ್ಕ ಸೇತುವೆಯಾಗಿರೋದ್ರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

    ಒಟ್ಟಾರೆ ಬರದಿಂದ ಬಸವಳಿದಿದ್ದ ಕಡೂರಿನ ರೈತರಿಗೆ ಮದಗದ ಕೆರೆ ತುಂಬಿರೋದು ಜೀವಕಳೆ ತಂದಂತಾಗಿದೆ. ಆದ್ದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಆದರೆ ಮತ್ತೊಂದೆಡೆ ಕೆರೆಯನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಬೇಸಿಗೆಯಲ್ಲೂ ಕೆರೆಗೆ ಮಲೆನಾಡಿನಲ್ಲಿ ಪೋಲಾಗುವ ನೀರನ್ನು ಹರಿಸಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

  • ‘ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಗುಂಡಿ ನಿರ್ಮಾಣ’

    ‘ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಗುಂಡಿ ನಿರ್ಮಾಣ’

    ಚಿಕ್ಕಮಗಳೂರು: ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಇಲ್ಲಿ ಗುಂಡಿಗಳನ್ನ ತೆಗೆಯಲಾಗಿದೆ, ಜನಸಾಮಾನ್ಯರು ಜಾಗರೂಕತೆಯಿಂದ ಓಡಾಡಿ ಎಂದು ಜನ ರಸ್ತೆ ಬದಿಗೆ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ರಸ್ತೆಯ ಅವ್ಯವಸ್ಥೆ ನೋಡಿ ಸ್ಥಳೀಯರೇ ಇಂತಹ ನಿರ್ಧಾರಕ್ಕೆ ಬಂದ್ದಿದ್ದಾರೆ. ಶೃಂಗೇರಿ ಮಠದಿಂದ ಸಾಗಿ ಎಸ್‍ಬಿಐ ಬ್ಯಾಂಕ್ ಮಾರ್ಗವಾಗಿ ವಿದ್ಯಾರಣ್ಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಡಿಯಾಳದ ಗುಂಡಿ ಬಿದ್ದಿವೆ. ರಸ್ತೆ ದುರಸ್ತಿಯಾಗದೇ ಸುಮಾರು ವರ್ಷಗಳೇ ಕಳೆದಿವೆ. ಈ ಬಗ್ಗೆ ಸರ್ಕಾರವಾಗಲಿ, ಗ್ರಾಮ ಪಂಚಾಯತ್ ಸದಸ್ಯರಾಗಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸ್ಥಳಿಯರೇ ಈ ರೀತಿಯ ನಾಮಫಲಕ ಹಾಕಿ ಗ್ರಾಮ ಪಂಚಾಯತ್ ಸದಸ್ಯರಿಗೆ ಧಿಕ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೆ ಇದೇ ನಾಮಫಲಕದ ಕೆಳಗೆ ರಸ್ತೆ ಸರಿಯಾಗದೇ, ಬೋರ್ಡ್ ಅನ್ನು ತೆಗೆದರೆ ಅಂತವರು ನಾಯಿಗೆ ಸಮ ಎಂದು ಬರೆಯಲಾಗಿದೆ. ಇದರಿಂದ ಜನಸಾಮಾನ್ಯರ ನೋವು ಎಷ್ಟಿರಬಹುದು ಎಂದು ಗೊತ್ತಾಗುತ್ತದೆ.

    ನಿತ್ಯವೂ ಈ ರಸ್ತೆಯ ಮೂಲಕ ಮಕ್ಕಳು-ಮಹಿಳೆಯರು ಓಡಾಡುತ್ತಾರೆ. ಹೀಗಾಗಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸ್ಥಳೀಯರೇ ಪಕ್ಕದ ತುಂಗಾ ನದಿಯ ದಡದಿಂದ ಮಣ್ಣನ್ನು ಹೊತ್ತು ತಂದು ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

  • ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರು: ಆನೆ ಈಜೋದನ್ನ ಅಷ್ಟಾಗಿ ಯಾರು ನೋಡಿರಲ್ಲ. ನೋಡಿದ್ರು ಕೂಡ ದಡದಲ್ಲಿ ನಿಂತು ಸೊಂಡಿಲಿನಿಂದ ಮೈಮೇಲೆ ನೀರು ಉಗ್ಗಿಕೊಳ್ಳೋದ್ನಷ್ಟೇ ನೋಡಿರ್ತಿರಾ. ಆದರೆ ಗಜರಾಜ ಅಷ್ಟು ದೊಡ್ಡ ಗಾತ್ರದ ದೇಹವನ್ನ ಸಂಪೂರ್ಣ ನೀರಿನಲ್ಲಿ ಮುಳುಗಿಸಿ ಈಜುತ್ತಾ ಮುಂದೆ ಹೋಗೋದ್ನ ನೋಡಸಿಗೋದು ತೀರಾ ವಿರಳ.

    ಅಂತಹಾ ಅಪರೂಪದ ವಿಡಿಯೋ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಲೇನಹಳ್ಳಿ ಹುಡುಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಹೌದು ಇಷ್ಟು ದಿನ ಮಲೆನಾಡಿನ ಕಾಡಂಚಿನ ಗ್ರಾಮಗಳಿಗೆ ಬರ್ತಿದ್ದ ಗಜರಾಜ ಇದೀಗ ಬಯಲು ಸೀಮೆಯ ಭತ್ತದ ಗದ್ದೆಗಳಿಗೆ ಬರೋದಕ್ಕೆ ಶುರುವಿಟ್ಟಿದ್ದಾನೆ.

    ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ಗ್ರಾಮದಂಚಿಗೆ ಭದ್ರಾ ಸಂರಕ್ಷಿತ ಅರಣ್ಯದಿಂದ ಬಂದ ಒಂಟಿ ಸಲಗ ಇಡೀ ರಾತ್ರಿ ಗ್ರಾಮದಂಚಿನಲ್ಲೇ ಬೀಡು ಬಿಟ್ಟಿದ್ದಾನೆ. ರಾತ್ರಿ ಬೆಲೇನಹಳ್ಳಿಯಲ್ಲಿ ಕಾಲ ಕಳೆದ ಗಜೇಂದ್ರ ಬೆಳಗಾಗುತ್ತಿದ್ದಂತೆ ಸಮೀಪದ ಕೆರೆಯಲ್ಲಿ ಫ್ರೆಶ್ ಆಗಿ ಹುರುಳುಹಳ್ಳಿ, ಹಿರೇಕಾತೂರಿನ ಜಮೀನುಗಳಲ್ಲೂ ಓಡಾಟ ನಡೆಸಿದೆ.

    ಐರಾವತನಿಂದ ಹೊಲ-ಗದ್ದೆ-ತೋಟಗಳು ನಾಶವಾಗಿದ್ದು, ಇದನ್ನೆಲ್ಲಾ ಕಂಡ ರೈತರು ಜೀವಭಯದಿಂದ ಹೊಲ ಗದ್ದೆಗಳಲ್ಲಿ ಕೆಲಸ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಸ್ಥಳಕ್ಕೆ ಬಂದ ತರೀಕೆರೆ ಅರಣ್ಯಾಧಿಕಾರಿಗಳು ಆನೆಯನ್ನ ಓಡಿಸಲು ಹರಸಾಹಸ ಪಟ್ಟಿದ್ದಾರೆ.

    https://www.youtube.com/watch?v=xw-t4if4uPo&feature=youtu.be

  • ಚಿಕ್ಕಮಗ್ಳೂರಲ್ಲಿ ಕಳೆದ ತಿಂಗಳಿಂದ ಭಾರೀ ಮಳೆ- ಜನಜೀವನ ಸಂಪೂರ್ಣ ಅಸ್ತವ್ಯಸ್ತ!

    ಚಿಕ್ಕಮಗ್ಳೂರಲ್ಲಿ ಕಳೆದ ತಿಂಗಳಿಂದ ಭಾರೀ ಮಳೆ- ಜನಜೀವನ ಸಂಪೂರ್ಣ ಅಸ್ತವ್ಯಸ್ತ!

    ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ.

    ಶೃಂಗೇರಿ, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕುದುರೆಮುಖ ಸೇರಿದಂತೆ ಅನೇಕ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದ್ರೆ, ಇತ್ತ ಅತಿವೃಷ್ಠಿಯಿಂದ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಹಾಗೂ ರೈತರು ಬೀದಿಗೆ ಬೀಳುವಂತಾಗಿದೆ.

    ಭಾರೀ ಮಳೆ-ಗಾಳಿಗೆ ಮಲೆನಾಡಿನ ಪ್ರಮುಖ ಬೆಳೆಯಾಗಿರೋ ಕಾಫಿ, ಅಡಿಕೆ, ಮೆಣಸು, ಭತ್ತ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಗಾಳಿ ಸಹಿತ ಮಳೆಯಾಗುತ್ತಿರೋದ್ರಿಂದ ಕಾಫಿ, ಮೆಣಸು ಹಾಗೂ ಅಡಿಕೆ ನೆಲಕಂಡಿದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

    ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದು, ನದಿ ಪಾತ್ರದಲ್ಲಿರೋ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿವೆ. ಜಿಲ್ಲಾಡಳಿತ ಹಾಗೂ ಸರ್ಕಾರ ಶೀಘ್ರವೇ ಬೆಳೆ ಹಾನಿಯಾಗಿರೋ ಪ್ರದೇಶಕ್ಕೆ ಭೇಟಿ ನೀಡಿ ರೈತರ ಹಾಗೂ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸ್ತಿದ್ದಾರೆ.

  • ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಚಿಕ್ಕಮಗಳೂರು: ಭಾರೀ ಗಾಳಿಯೊಂದಿಗೆ ಮಲೆನಾಡಲ್ಲಿ ಧಾರಾಕಾರ ಮಳೆಯಾಗ್ತಿದೆ. ಆದರೆ ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಸೈಕ್ಲಿಂಗ್ ಮಾಡಿದ್ದಾರೆ.

    ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್‍ನಿಂದ ಆಯೋಜನೆಗೊಂಡು ಶನಿವಾರ ನಡೆದ ಮೂರನೇ ವರ್ಷದ ಮಾನ್ಸೂನ್ ಬ್ರಿವೇ ಸೈಕ್ಲಿಂಗ್‍ನಲ್ಲಿ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಎರಡನೇ ವರ್ಷವೂ ಭಾಗವಹಿಸಿದರು.

    ಬೆಳಗ್ಗೆ ಆರು ಗಂಟೆಗೆ ನಗರದ ಟೌನ್ ಕ್ಯಾಂಟೀನ್‍ನಿಂದ ಆರಂಭವಾದ ಸೈಕಲ್ ರ‍್ಯಾಲಿಯಲ್ಲಿ 20ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ ಮಾರ್ಗವಾಗಿ ಸಕ್ರೆಬೈಲಿನ ಮೂಲಕ ಒಟ್ಟು 300 ಕಿ.ಮೀ. ಕ್ರಮಿಸಿ ಅದೇ ಮಾರ್ಗವಾಗಿ ಚಿಕ್ಕಮಗಳೂರಿಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ಸುರಿಯೋ ಧಾರಾಕಾರ ಮಳೆ ಭಾರೀ ಗಾಳಿಯ ನಡುವೆಯೇ ಎಸ್‍ಪಿ, ಸೈಕ್ಲಿಂಗ್ ಮಾಡಿರೋದನ್ನು ಕಂಡು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಎಸ್‍ಪಿಯವರು ಮಾರ್ಗ ಮಧ್ಯೆ ಊಟ, ತಿಂಡಿ ಹಾಗೂ ಕಾಫಿಗೆ ಸೈಕಲ್ ನಿಲ್ಲಿಸಿದಾಗ ಜನರು ಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಖುಷಿಪಟ್ಟರು.

  • ಮದ್ವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ- ಮನನೊಂದು ಪತ್ನಿಯು ನೇಣಿಗೆ ಶರಣು!

    ಮದ್ವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ- ಮನನೊಂದು ಪತ್ನಿಯು ನೇಣಿಗೆ ಶರಣು!

    ಚಿಕ್ಕಮಗಳೂರು: ಮದುವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ ಮಾಡಿಕೊಂಡ ಎಂದು ಒಂದೇ ತಿಂಗಳಿಗೆ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರಿನ ಕಂಬೀಹಳ್ಳಿಯಲ್ಲಿ ನಡೆದಿದೆ.

    ಅನಿಲ್ ಹಾಗೂ ಚಾಂದಿನಿ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಚಿಕ್ಕಮಗಳೂರು ಟ್ರಾಫಿಕ್ ಸ್ಟೇಷನ್‍ನಲ್ಲಿ ಪೇದೆಯಾಗಿದ್ದ ಅನಿಲ್ ಎಂಬವರು ಚಾಂದಿನಿ ಎಂಬ ಯುವತಿಯನ್ನು ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು.

    ಕೌಟುಂಬಿಕ ಕಲಹದ ಹಿನ್ನೆಲೆ ಒಂದು ತಿಂಗಳ ಹಿಂದೆ ಅನಿಲ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಬುಧವಾರ ಅನಿಲ್ ಪತ್ನಿ ಚಾಂದಿನಿ ಕೂಡ ಪತಿ ಆತ್ಮಹತ್ಯೆ ಮಾಡಿಕೊಂಡಿದರಿಂದ ಮನನೊಂದು ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸದ್ಯ ಈ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ಚಿಕ್ಕಮಗಳೂರು: ಪ್ರತಿದಿನ ಟಿವಿಯಲ್ಲಿ ಚಿಕ್ಕಮಗಳೂರು ಎಸ್‍ಪಿ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ವಯೋವೃದ್ಧರ ಆಸೆಯನ್ನು ಅಣ್ಣಾಮಲೈ ನೆರವೇರಿಸಿದ್ದಾರೆ.

    ಚುನಾವಣೆ ಪೂರ್ವದಿಂದಲೂ ಪ್ರತಿದಿನ ಟಿವಿಯಲ್ಲಿ ಅಣ್ಣಾಮಲೈ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿರೋ ಅನ್ನಪೂರ್ಣ ವೃದ್ಧಾಶ್ರಮದ ವಯೋವೃದ್ಧರು ಎಸ್‍ಪಿ ಅವರನ್ನು ಕಣ್ತುಂಬ ನೋಡಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು.

    ವಿಷಯ ತಿಳಿದ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ, ಕಷ್ಟವನ್ನು ವಿಚಾರಿಸಿದ್ದಾರೆ. ಮಂಗಳವಾರ ಸಂಜೆ ದಿಢೀರನೇ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಅಣ್ಣಾಮಲೈ ಅಲ್ಲಿನ ಹಿರಿ ಜೀವಗಳ ನೋವನ್ನು ಆಲಿಸಿದ್ದಾರೆ.

    ಎಸ್‍ಪಿ ಅಣ್ಣಾಮಲೈ ಅವರನ್ನು ನೋಡುತ್ತಿದ್ದಂತೆ ವಯೋವೃದ್ಧರು ಆನಂದಭಾಷ್ಪ ಸುರಿಸಿದರು. ಎಸ್‍ಪಿ ಪಕ್ಕದಲ್ಲಿ ಮಕ್ಕಳಂತೆ ಕೂತು ಹಿರಿಯ ಜೀವಗಳು ತಮ್ಮ ನೋವಗಳನ್ನು ಹೇಳಿ ಕಣ್ಣೀರಿಟ್ಟರು. ಒಬ್ಬೊಬ್ಬರ ನೋವನ್ನು ಕೇಳಿದ ಅಣ್ಣಾಮಲೈ ಅವರಿಗೆ ಸಾಂತ್ವಾನ ಹೇಳಿದ್ದರು.\

  • ನಗರಸಭೆಯ ಕಚೇರಿಯಲ್ಲಿ ಕಾಣಿಸಿಕೊಂಡ ಹಾವು-ಅಧಿಕಾರಿಗಳೆಲ್ಲಾ ದಿಕ್ಕಾಪಾಲು

    ನಗರಸಭೆಯ ಕಚೇರಿಯಲ್ಲಿ ಕಾಣಿಸಿಕೊಂಡ ಹಾವು-ಅಧಿಕಾರಿಗಳೆಲ್ಲಾ ದಿಕ್ಕಾಪಾಲು

    ಚಿಕ್ಕಮಗಳೂರು: ಅತಿ ವಿಷಯುಕ್ತವಾದ ಕೊಳಕಮಂಡಲ ಹಾವೊಂದು ನಗರಸಭೆ ಕಚೇರಿಗೆ ಬಂದು ಅಧಿಕಾರಿಗಳನ್ನು ತಲ್ಲಣಗೊಳಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಅಧಿಕಾರಿಗಳು ಎಂದಿನಂತೆ ಬೆಳಗ್ಗೆ ಕೆಲಸ ಆರಂಭಿಸಿದ್ದರು. ಆದರೆ ಕಂಪ್ಯೂಟರ್ ಸೆಕ್ಷನ್‍ನಲ್ಲಿ ಮಾನಿಟರ್ ಮೇಲಿಂದ ಕೆಳಗೆ ಇಳಿದ ಹಾವನ್ನು ಕಂಡು ಕಂಪ್ಯೂಟರ್ ಆಪರೇಟರ್ ಗಳು ಕೂಗಿಕೊಂಡು ಹೊರಗೆ ಓಡಿ ಬಂದಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನು ಹಿಡಿದಿದ್ದಾರೆ.

    ಹಾವು ಅತಿ ಸಣ್ಣದಾಗಿದ್ದ ಪರಿಣಾಮ ಕಚೇರಿಯೊಳಗೆ ಟೇಬಲ್‍ಗಳ ಸಂದಿಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹೋದ ಪರಿಣಾಮ ಕಚೇರಿಯ ಕಡತಗಳು ಹಾಗೂ ಕಂಪ್ಯೂಟರ್‍ಗಳನ್ನು ಒಂದೆಡೆ ತೆಗೆದಿಟ್ಟು, ಅಲ್ಲಿಂದ ಟೇಬಲ್‍ಗಳನ್ನ ಹೊರಗಿಟ್ಟು, ಗೋಡೆಯನ್ನ ಒಡೆದು ಹಾಕಿ ಹಾವನ್ನ ಹಿಡಿದಿದ್ದಾರೆ.

  • ಬಸ್ಸಿನಲ್ಲಿ ಸೀಟ್ ಸಿಗಲಿಲ್ಲ ಎಂದು ಗಲಾಟೆ- ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ ಕಂಡಕ್ಟರ್

    ಬಸ್ಸಿನಲ್ಲಿ ಸೀಟ್ ಸಿಗಲಿಲ್ಲ ಎಂದು ಗಲಾಟೆ- ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ ಕಂಡಕ್ಟರ್

    ಚಿಕ್ಕಮಗಳೂರು: ಟಿಕೆಟ್ ವಿಚಾರವಾಗಿ ನಿರ್ವಾಹಕ ಹಾಗೂ ಪ್ರಯಾಣಿಕರ ನಡುವೆ ಗಲಾಟೆಯಾಗಿ ಪ್ರಯಾಣಿಕನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಧರ್ಮಸ್ಥಳದಿಂದ ಹಾಸನದ ಕಡೆ ಬರುತ್ತಿದ್ದ ಬಸ್ ಡ್ರೈವರ್ ಗೆ ಅನಾರೋಗ್ಯದ ನಿಮಿತ್ತ ಕೊಟ್ಟಿಗೆಹಾರದ ಬಳಿ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳಿಸುವಂತೆ ಸಲಹೆ ನೀಡಿದ್ದಾನೆ. ಈ ವೇಳೆ 35 ಪ್ರಯಾಣಿಕರನ್ನು ಕಂಡಕ್ಟರ್ ಎರಡು ಬಸ್‍ಗೆ ಹತ್ತಿಸಿದ್ದಾರೆ.

    ಆದರೆ ಆ ಎರಡು ಬಸ್ಸಿನಲ್ಲೂ ಪ್ರಯಾಣಿಕರಿದ್ದ ಕಾರಣ ಸುಮಾರು ಜನರಿಗೆ ಸೀಟು ಸಿಕ್ಕಿಲ್ಲ. ಈ ವೇಳೆ ಪ್ರಯಾಣಿಕನೋರ್ವ ನಾನು ಧರ್ಮಸ್ಥಳದಿಂದ ಕುತ್ಕೊಂಡು ಬಂದಿದ್ದೇನೆ, ನನಗೆ ಸೀಟ್ ಬೇಕು, ನಾನು ನಿಂತುಕೊಂಡು ಹೋಗೋದಿಲ್ಲ ಎಂದು ಗಲಾಟೆ ಮಾಡಿದ್ದಾನೆ.

    ಈ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ್ದಾರೆ. ಇಬ್ಬರೂ ಕೈ-ಕೈ ಮಿಲಾಯಿಸಿ ಬಸ್ ಸ್ಟ್ಯಾಂಡ್‍ನಲ್ಲೇ ಹೊಡೆದಾಡಿಕೊಂಡಿದ್ದಾರೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ.

  • ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿಯುತ್ತಿದೆ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

    ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿಯುತ್ತಿದೆ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

    ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 5ಕ್ಕೂ ಹೆಚ್ಚು ಮನೆಗಳು ಧಗಧಗನೆ ಹೊತ್ತಿ ಉರಿದು ಘಟನೆ ಚಿಕ್ಕಮಗಳೂರು ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ.

    ಕಡೂರಿನಿಂದ ಹೊಸದುರ್ಗ ಕಡೆಗೆ ಪೆಟ್ರೋಲ್ ಟ್ಯಾಂಕರ್ ಹೋಗುತ್ತಿತ್ತು. ಈ ವೇಳೆ ಲಾರಿ ಪಕ್ಕದಲ್ಲೇ ಬೈಕ್ ಬಂದಿದ್ದು, ಅಪಘಾತ ತಡೆಯಲು ಹೋಗಿ ಲಾರಿ ಪಲ್ಟಿ ಆಗಿದೆ. ಬೈಕ್ ಮೇಲೆ ಪೆಟ್ರೋಲ್ ಟ್ಯಾಂಕರ್ ಬಿದ್ದಿದೆ.

    ಬೈಕಿನ ಮೇಲೆ ಬಿದ್ದ ಬಳಿಕ ಟ್ಯಾಂಕರ್ ಹೊತ್ತಿ ಉರಿದಿದೆ. ಹೊತ್ತು ಉರಿಯುತ್ತಿದ್ದಂತೆ ಕ್ಲೀನರ್ ಸ್ಥಳದಲ್ಲೇ ಸಜೀವ ದಹನವಾಗಿದ್ದರೆ. ಚಾಲಕ ಮೈತುಂಬಾ ಬೆಂಕಿ ಮೆತ್ತಿಕೊಂಡೇ ಓಡಿ ಬಂದಿದ್ದಾನೆ. ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಳೆ ಬಂದಿದ್ದ ಕಾರಣ ಲಾರಿ ಪಲ್ಟಿ ಹೊಡೆದಿದೆ. ಅಕ್ಕಪಕ್ಕದಲ್ಲಿ ಮನೆ ಇದ್ದ ಕಾರಣ 5ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿದೆ. 5 ಅಗ್ನಿ ಶಾಮಕ ದಳ ವಾಹನಗಳು ಈಗ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.

    ಸುಮಾರು 100 ಮೀ. ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿದ್ದು, ಸದ್ಯ ಅಕ್ಕಪಕ್ಕದ ಮನೆಯಲ್ಲಿದ್ದವರು ಹಿಂದಿನ ಬಾಗಿಲಿನಿಂದ ಹೊರ ಬಂದಿದ್ದಾರೆ.

     

    https://youtu.be/ES0e6bTA3F4