Tag: Chikkamagalur

  • ರಾಜ್ಯದ ಹಲವೆಡೆ ಭಾರೀ ಮಳೆ | ಮರ ಬಿದ್ದು ಕಳಸ – ಮೂಡಿಗೆರೆ ಮಾರ್ಗ ಬಂದ್‌

    ರಾಜ್ಯದ ಹಲವೆಡೆ ಭಾರೀ ಮಳೆ | ಮರ ಬಿದ್ದು ಕಳಸ – ಮೂಡಿಗೆರೆ ಮಾರ್ಗ ಬಂದ್‌

    ಚಿಕ್ಕಮಗಳೂರು: ರಾಜ್ಯದ ಹಲವೆಡೆ ಬೇಸಿಗೆ ಮಳೆ (Rain) ಅಬ್ಬರಿಸ್ತಾ ಇದೆ. ಮಳೆಯಿಂದಾಗಿ ರಾಜ್ಯದ ಹಲವೆಡೆ ನಾನಾ ಅವಂತರ ಆಗಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ಮಳೆಯಾರ್ಭಟಕ್ಕೆ ಮರ ಬಿದ್ದು ಕಳಸ – ಮೂಡಿಗೆರೆ ಮಾರ್ಗದ ಸಂಚಾರ ಬಂದ್ ಆಗಿದೆ.

    ಮೂಡಿಗೆರೆಯ ತರುವೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಯುವಾಗಲೇ ಭಾರೀ ಗಾಳಿಗೆ ಗ್ರಂಥಾಲಯ ನಿರ್ಮಾಣಕ್ಕಾಗಿ ಇಟ್ಟಿದ್ದ ಮರದ ರ‍್ಯಾಕ್ ಬಿದ್ದಿದೆ. ಪಂಚಾಯತಿ ಅಧ್ಯಕ್ಷೆ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ಲಾಸ್ಟಿಕ್ ಚೇರ್‌ಗಳು ಮುರಿದಿವೆ. ಶೃಂಗೇರಿ ತಾಲೂಕಿನಲ್ಲಿಯೂ ವರ್ಷಧಾರೆಯಗಿದೆ.

    ಹಾವೇರಿ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹಾವೇರಿ ತಾಲೂಕಿನ ಕಬ್ಬೂರಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಧಾರವಾಡ ಸುತ್ತಮುತ್ತ ಗುಡುಗು ಮಿಂಚು ಸಮೇತ ಸಾಧಾರಣ ಮಳೆಯಾಗಿದೆ. ಕಾರ್ಕಳದಲ್ಲಿ ಗಾಳಿ ಸಹಿತ ಜೋರು ಮಳೆಯಾಗಿದೆ. ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ.

    ನಾಳೆ (ಮಾ.26) ರಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಕಾಡ್ಗಿಚ್ಚು – ಡ್ರೋನ್ ಕಣ್ಗಾವಲಿಗೆ ಮುಂದಾದ ಅರಣ್ಯ ಇಲಾಖೆ

    ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಕಾಡ್ಗಿಚ್ಚು – ಡ್ರೋನ್ ಕಣ್ಗಾವಲಿಗೆ ಮುಂದಾದ ಅರಣ್ಯ ಇಲಾಖೆ

    ಚಿಕ್ಕಮಗಳೂರು: ಮುಳ್ಳಯ್ಯನಗಿರಿ (Mullayanagiri) ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚಿನಿಂದ ಚಂದ್ರದ್ರೋಣ (Chandra Drona) ಪರ್ವತಗಳ ಸಾಲಿನ ರಕ್ಷಣೆ ಮಾಡಲು ಅರಣ್ಯ ಇಲಾಖೆ ಪಣ ತೊಟ್ಟಿದ್ದು, ಡ್ರೋನ್‌ಗಳ ಮೊರೆ ಹೋಗಿದ್ದಾರೆ.

    ಮುಳ್ಳಯ್ಯನಗಿರಿ, ದತ್ತಪೀಠದ ಗುಡ್ಡಗಳಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾಡನ್ನ ರಕ್ಷಿಸಲು ಡ್ರೋನ್ ಕಣ್ಗಾವಲಿಗೆ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಖರ್ಜೂರದೊಳಗೆ ಇಟ್ಟು ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ಏರ್‌ಪೋರ್ಟ್‌ನಲ್ಲಿ ವಶಕ್ಕೆ

    ನಿತ್ಯ ಸಾವಿರಾರು ಜನ ಪ್ರವಾಸಿಗರು ಬಂದು ಹೋಗುವ ಪಶ್ಚಿಮ ಘಟ್ಟಗಳ ತಪ್ಪಲುಗಳಲ್ಲಿ ಡ್ರೋನ್ ಕಣ್ಗಾವಲಿನಿಂದ ಬೆಂಕಿ ಹಾಕುವವರು ಸ್ಥಳಿಯರೋ, ಪ್ರವಾಸಿಗರೋ ಅಥವಾ ನಿಜಕ್ಕೂ ಕಾಡ್ಗಿಚ್ಚೋ ಎಂಬುದನ್ನು ಗುರುತಿಸಲು ಸಹಕಾರಿಯಾಗುತ್ತದೆ. ಇದರಿಂದ ನಿತ್ಯ ಸುಟ್ಟು ಕರಕಲಾಗ್ತಿರೋ ಕಾಡಿನ ರಕ್ಷಣೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಇಗ್ಗುತಪ್ಪ, ನಾಲಾಡಿ ಬೆಟ್ಟದಲ್ಲಿ ಕಾಡ್ಗಿಚ್ಚು – 20 ಎಕ್ರೆಗೆ ಬೆಂಕಿ

    ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದರೆ ನಂದಿಸುವುದು ಕಷ್ಟವಾಗಿರುವುದರಿಂದ ಅಗ್ನಿಶಾಮಕ ವಾಹನ ಹೋಗದ ಕಡೆ ಅಧಿಕಾರಿಗಳೇ ಸೊಪ್ಪಿನಿಂದ ಕಾಡನ್ನ ರಕ್ಷಿಸಬೇಕು. ಇದೀಗ ಸ್ಥಳಿಯರು ಹಾಗೂ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಅರಣ್ಯಾಧಿಕಾರಿಗಳು ಡ್ರೋನ್ ಮೊರೆ ಹೋಗಿದ್ದಾರೆ.

    ಮಂಗಳವಾರ ಹೊರನಾಡು ಸಮೀಪದ ಮಾವಿನಹೊಳ-ಬಲಿಗೆ ಗುಡ್ಡದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಪರಿಣಾಮ ಹತ್ತಾರು ಎಕ್ರೆ ಅರಣ್ಯ ಬೆಂಕಿಗಾಹುತಿಯಾಗಿತ್ತು. ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್‌ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ

  • ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಕಾಮನ್ ಸೆನ್ಸ್ ಇರಬೇಕು: ಸಿ.ಟಿ ರವಿ ವಿರುದ್ಧ ಡಿಕೆಶಿ ಕಿಡಿ

    ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಕಾಮನ್ ಸೆನ್ಸ್ ಇರಬೇಕು: ಸಿ.ಟಿ ರವಿ ವಿರುದ್ಧ ಡಿಕೆಶಿ ಕಿಡಿ

    – ಸಿ.ಟಿ ರವಿ ದೊಡ್ಡ ಡ್ರಾಮಾ ಮಾಸ್ಟರ್

    ಚಿಕ್ಕಮಗಳೂರು: ಸಿ.ಟಿ ರವಿ (C.T Ravi) ಅವರನ್ನ ನ್ಯಾಷನಲ್ ಲೀಡರ್ ಎಂದು ತಿಳಿದುಕೊಂಡಿದ್ದೆ. ಆದರೆ ಅವರು ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್  (D.K Shivakumar) ಹೇಳಿದ್ದಾರೆ.

    ಶೃಂಗೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಅವರ ಮಾತು-ವಿಚಾರ ನೋಡಿದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪೆÇ್ಪೀದು ಬೇಡ, ಆತ್ಮಸಾಕ್ಷಿ ಒಪ್ಪಿದ್ರೆ ಸಾಕು. ಹಾಗೆ ಮಾತಾಡಬೇಕು ಎಂದಿದ್ದಾರೆ.

    100 ಜನ ಬಿಜೆಪಿ ನಾಯಕರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಕ್ಷಮೆ ಕೇಳಿದ್ರೆ ಮುಗಿದುಹೋಯ್ತು. ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋದ್ರೆ ಕೊನೆ ಇಲ್ಲ. ಅವರ ಹತ್ತಿರ ತನಿಖಾ ತಂಡ ಇದೆ, ತನಿಖೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.

    ಸಿ.ಟಿ.ರವಿ ಬಂದೂಕಿನ ವಿಷಯ ಮಾತನಾಡಿದ್ದಾರೆ. ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಬೇಸಿಕ್ ಕಾಮನ್ ಸೆನ್ಸ್ ಇರಬೇಕು, ಪೆÇಲೀಸರು ಏನು ಮಾಡಬೇಕು ಅದನ್ನು ಮಾಡುತ್ತಾರೆ. ಗೌಪ್ಯ ಯಾವ ರೀತಿ ಕಾಪಾಡಬೇಕು. ಅವರ ಕೆಲಸ ಅವರು ಮಾಡ್ತಾರೆ. ನಾವು ಹಸ್ತಕ್ಷೇಪ ಮಾಡಲ್ಲ. ನಕ್ಸಲರನ್ನ ಶರಣಾಗತಿ ಮಾಡ್ಸಿದ್ದಾರೆ, ಅದಕ್ಕೆ ಖುಷಿ ಪಡಬೇಕು. ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು ಅವರದ್ದು ಎಂದು ಕಿಡಿಕಾರಿದ್ದಾರೆ.

  • ನನಗ್ಯಾರ ಬೆಂಬಲವೂ ಬೇಡ, ನನಗಾಗಿ ಕೂಗೋದು ಬೇಡ: ಡಿಕೆಶಿ

    ನನಗ್ಯಾರ ಬೆಂಬಲವೂ ಬೇಡ, ನನಗಾಗಿ ಕೂಗೋದು ಬೇಡ: ಡಿಕೆಶಿ

    ಚಿಕ್ಕಮಗಳೂರು: ನನಗೆ ಯಾರ ಬೆಂಬಲವೂ ಬೇಡ, ನನಗಾಗಿ ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗೋದು ಬೇಡ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಹೇಳಿದ್ದಾರೆ.

    ಶೃಂಗೇರಿ (Sringeri) ಮಠದ ಹಿರಿಯ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷವಾದ ಹಿನ್ನಲೆ, ಮಠದ ಆವರಣದಲ್ಲಿ ನಡೆಯುತ್ತಿರುವ ಸುವರ್ಣಭಾರತೀ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ತೆರಳುವ ಮುನ್ನ ಬೆಂಬಲಿಗರು ಅವರ ಪರ ಘೋಷಣೆ ಕೂಗಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯಿಸಿ, ನನಗೆ ಯಾರ ಬೆಂಬಲವಾಗಲಿ, ಘೋಷಣೆ ಕೂಗೋದು ಬೇಡ ಎಂದಿದ್ದಾರೆ.

    ಟೆಂಪಲ್ ರನ್ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ದಿನ ಪೂಜೆ ಮಾಡ್ತೀನಿ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು. ಸಮಾಜ, ಜನ, ರಾಜ್ಯ, ಪಕ್ಷ, ಕುಟುಂಬಕ್ಕಾಗಿ ಪೂಜೆ ಮಾಡ್ತೀನಿ. ಟೆಂಪಲ್ ರನ್ ಏನಿಲ್ಲ, ಹಾಗಾದ್ರೆ ದೇವಸ್ಥಾನ ಏಕೆ, ಬೀಗ ಹಾಕ್ಬಿಡಿ. ದೇವನೊಬ್ಬ ನಾಮ ಹಲವು ಎನ್ನುವ ತತ್ವದ ಮೇಲೆ ನಂಬಿಕೆ ಇಟ್ಟವನು ನಾನು. ಅವರವರ ನಂಬಿಕೆ ಅವರವರ ಆಚಾರ-ವಿಚಾರ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

    ರಾಜಕಾರಣದಲ್ಲಿ ಯಾವ ತಿರುವು ಅವಶ್ಯಕತೆ ಇಲ್ಲ. ಪಕ್ಷ, ಹೈಕಮಾಂಡ್ ಹೇಳಿದ್ದೇ ಅಂತಿಮ. ನನಗೆ ಯಾರ ಒತ್ತಾಯ, ಬೆಂಬಲ ಏನೂ ಬೇಡ. ನನಗಾಗಿ ಕಾರ್ಯಕರ್ತರು, ಶಾಸಕರು, ಬೆಂಬಲಿಗರು, ಕೂಗೋದು ಬೇಡ. ಮಾಡೋ ಕೆಲಸ ಮಾಡೋಣ, ಫಲಾಫಲ ದೇವರಿಗೆ ಬಿಡೋಣ ಎಂದಿದ್ದಾರೆ,

  • ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ- ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ

    ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ- ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ

    ಚಿಕ್ಕಮಗಳೂರು: ಮಲೆನಾಡು (Malenadu) ಭಾಗದಲ್ಲಿ ಅಬ್ಬರದ ಮಳೆ (Rain) ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕಳಸ (Kalasa) ತಾಲೂಕಿನ ಹೆಬ್ಬಾಳೆ ಸೇತುವೆ (Hebbale Bridge) ಮುಳುಗಡೆಯಾಗಿದೆ.

    ಕಾಫಿನಾಡಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರ ಪರಿಣಾಮ ಕಳಸ – ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಸುತ್ತ ಹತ್ತಾರು ಹಳ್ಳಿಯ ಜನರು ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8ರಿಂದ 10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ವಾಹನಗಳಿಗೆ ಮುಕ್ತನಾ..?

    ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅದೇ ರೀತಿ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳ ಒಳಹರಿವು ಹೆಚ್ಚಳವಾಗಿದೆ. ಭಾರೀ ಮಳೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ- ಟ್ರಾಫಿಕ್ ಕಾನ್ಸ್‌ಸ್ಟೇಬಲ್ ಕಾರ್ಯಕ್ಕೆ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್: ಆರ್.ಅಶೋಕ್

    ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್: ಆರ್.ಅಶೋಕ್

    – ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ ಎಂದ ಮಾಜಿ ಸಚಿವ

    ಚಿಕ್ಕಮಗಳೂರು: ಲವ್ ಜಿಹಾದ್ (Love Jihad) ಅಂದ್ರೆ, ಪ್ರೀತಿಸಿ ಅವರಿಗೆ ಇಷ್ಟವಾದವರನ್ನ ಮದುವೆ ಆಗ್ತಾರೆ ಎಂಬ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ನಾನು ಹಾಗೇ ತಿಳಿದುಕೊಂಡಿದ್ದೆ. ಆದ್ರೆ, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಮತಾಂತರ ಮಾಡುವ ಲವ್ ಅಟ್ ಬ್ಯಾಕ್ ಸೈಟ್ ಎಂದು ಮಾಜಿ ಸಚಿವ ಆರ್. ಅಶೋಕ್ (R Ashoka) ಲೇವಡಿ ಮಾಡಿದ್ದಾರೆ.

    ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ, ಲವ್ ಅಟ್ ಬ್ಯಾಕ್ ಸೈಟ್ ಎಂದು ಅರ್ಥ. ಅಲ್ಲಿ ಲವ್ ಗೆ ಟ್ರೈನಿಂಗ್ ಕೊಡುತ್ತಾರೆ. ಅವರು ಹಾಗೇ ಹೋಗಿ ಲವ್ ಮಾಡಲ್ಲ. ಮೊದಲೇ ಪ್ರಿಪೇರ್ ಮಾಡಿಕೊಂಡಿರುತ್ತಾರೆ. ಒಳ್ಳೆಯ ಬೈಕ್ ಕೊಡಿಸುತ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್‌ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಹಣವನ್ನೂ ಕೊಡ್ತಾರೆ. ಎಲ್ಲಾ ಮಾಡಿ, ಹಿಂದೂ ಹುಡುಗಿಯರನ್ನ ಲವ್ ಮಾಡಿ ಅಂತಾ ಕಳಿಸುತ್ತಾರೆ. ಇದು ನಿಜವಾದ ಲವ್ ಜಿಹಾದ್ ಎಂದು ಹೇಳಿದ್ದಾರೆ.

    ಹೀಗೆ ಮತಾಂತರ ಮಾಡಿ ದೇಶವನ್ನ ಕಪಿಮುಷ್ಠಿಯಲ್ಲಿ ಹಿಡಿಯಲು ಯತ್ನಿಸಿದ್ದರು. ಆದರೆ, ಬಿಜೆಪಿ ಸರ್ಕಾರ (BJP Government) ಎಲ್ಲದಕ್ಕೂ ಕಡಿವಾಣ ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ ಮುಕ್ತ ಅವಕಾಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ ಮತಾಂತರಕ್ಕೆ ಸಿದ್ದರಾಮಯ್ಯನವರೇ (Siddaramaiah) ರಾಯಭಾರಿ ಎಂದು ಮುಖ್ಯಮಂತ್ರಿಗಳನ್ನ ಟೀಕಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

    ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ನಮ್ಮ ಪಕ್ಕ ಹಾಗೂ ಎದುರಿನ ಮನೆಯ ಅಮರನಾಥ್, ಅಬ್ದುಲ್ ಘನಿ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ

    ಬ್ರಿಟಿಷರು ಕೂಡ ಈ ದೇಶ ನಮ್ಮ ಕೈಯಲ್ಲಿ ಉಳಿಯಬೇಕು ಅಂದ್ರೆ ಮತಾಂತರ ಆಗಬೇಕು ಎಂದಿದ್ದರು. ಬಾಬರ್, ಔರಂಗಜೇಬ್ ಕೂಡ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದಿದ್ದರು. ಅದಕ್ಕೆ ಸಾಕ್ಷಿ ಇಲ್ಲೇ ಇದ್ದಾರೆ ನೋಡಿ, ಕೆ.ಜಿ.ಬೋಪಯ್ಯನವರು ಎಂದರು. ಬೋಪಯ್ಯ ಅಂದ್ರೆ ಬೋಪಯ್ಯನವರನ್ನ ನೋಡಬೇಡಿ. ಅವರಲ್ಲ ಮಾಡಿದ್ದು. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಮತಾಂತರ ಮಾಡಿದ್ದ. ಈಗ ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

    ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

    ಚಿಕ್ಕಮಗಳೂರು: ಮಲೆನಾಡಿನ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ (Vote) ಕೇಳಲು ಬಂದ್ರೆ ಅವರ ಮೇಲೆ ನಾಯಿ ಬಿಡಲಾಗುವುದು ಎಂದು ಎಚ್ಚರಿಕೆಯ ಬೋರ್ಡ್‌ ಹಾಕಿ ಕಾಂಗ್ರೆಸ್ಸಿನ (Congress) ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ʻʻಇದು ಬಜರಂಗದಳದವರ ಮನೆ. ಕಾಂಗ್ರೆಸ್ಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿಯನ್ನು ಬಿಡಲಾಗುವುದುʼʼಎಂಬ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ. ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡವಾಗಿರೋ ಬಜರಂಗದಳ ನಾನಾ ರೀತಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ.

  • ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ  ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಚಿಕ್ಕಮಗಳೂರು: ಅಮೆರಿಕದ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಶಕುಂತಲಾ ಎಂಬ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಆದರೆ, ಈ ಸಾಧನೆಗೆ ಕಾರಣವಾಗಿರುವುದೂ ಒಬ್ಬ ಮುಸ್ಲಿಂ ಯುವಕ.

    ಹೌದು. ಭಾರತ ದೇಶಾದ್ಯಂತ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಬಿತ್ತುವ ಘಟನೆಗಳು ನಡೆಯುತ್ತಿರುವ ನಡುವೆ ಮುಸ್ಲಿಂ ಯುವಕನ ಈ ಸಾಧನೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ  

    SPACE

    ಆಲ್ದೂರಿನ ಶಂಕುತಲಾ ಅಂದರೆ ಈ ಉಪಗ್ರಹದ ಕೇಂದ್ರ ಬಿಂದುವೇ ಆಲ್ದೂರು ಗ್ರಾಮದ ಯುವಕ ಅವೇಜ್ ಅಹಮ್ಮದ್. ಮೂಲತಃ ಚಿಕ್ಕಮಗಳೂರಿನ ಆಲ್ದೂರಿನವರೇ ಆದ ಅವೇಜ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ತಂದೆ ನದೀಪ್ ಅಹಮದ್ ತಮ್ಮದೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡು ಕುಟುಂಬ ನಡೆಸುತ್ತಿದ್ದಾರೆ.

    ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೇಜ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಇಂದು ತನ್ನ ಬಯಕೆಯಂತೆ 24ನೇ ವಯಸ್ಸಿಗೇ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾನೆ. ಆನಂತರ ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿ ಇಂದು ಏರೋಸ್ಪೇಸ್‌ ಪಿಕ್ಸೆಲ್‌ ಹೆಸರಿನಲ್ಲಿ  ಉಪಗ್ರಹ ತಯಾರಿಕಾ ಸ್ವಂತ ಕಂಪನಿ ಕೂಡ ಆರಂಭಿಸಿದ್ದಾರೆ. ತನ್ನ 24ನೇ ವಯಸ್ಸಿಗೆ ಕಡಲ ದಾಟಿ ಅಮೆರಿಕಾದಲ್ಲಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಇದನ್ನೂ ಓದಿ: 22 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಭಾರತ

    SPACE 3

    ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಶಕುಂತಲಾ ಎಂಬ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾರೆ. ಅವೇಜ್ ಅವರ ಈ ಉಪಗ್ರಹವು ಬೇರೆಲ್ಲಾ ಉಪಗ್ರಹಗಳಿಗಿಣದ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆ ಮಾಡುತ್ತದೆ. ಭೂಮಿಯ ಚಲನವಲನದ ಫೊಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.

    ಈ ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದ ಅವೇಜ್ ಅಹಮ್ಮದ್ ತನ್ನ ಕನಸಿನ ಯೋಜನೆಯನ್ನು ಪ್ರಧಾನಿ ಮುಂದೆ ಹೇಳಿಕೊಂಡಿದ್ದರು. ಇವರ ಮಾತನ್ನ ಆಲಿಸಿದ ಪ್ರಧಾನಿ, ಮೊದಲ ಉಪಗ್ರಹವನ್ನ ನಮ್ಮ ದೇಶದ ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿರುವ ಇಸ್ರೋದಿಂದಲೇ ಹಾರಿಸುವಂತೆ ಸಲಹೆ ನೀಡಿದ್ದರು. ಅದರಂತೆಯೇ ಇಸ್ರೋದಿಂದಲೇ ಬಾಹ್ಯಾಕಾಶ ಸೇರಲು ಮೊದಲ ಉಪಗ್ರಹ ರೆಡಿಯಾಗಿತ್ತು. ಆದರೆ ಸಮಯ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆ ಅವೇಜ್ ಅಹ್ಮದ್ ಅವರು 2ನೇ ಉಪಗ್ರಹವನ್ನ ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್

    24ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಯುವಕನಿಗೆ ಎಲ್ಲೆಡೆ ಪ್ರಶಂಸೆಯ ಮಹಪೂರವೇ ಹರಿದುಬರುತ್ತಿದೆ. ಅವೇಜ್ ಓದಿದ ಶಾಲೆಯ ಶಿಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಭವಿಷ್ಯಕ್ಕೆ ಶುಭ ಕೋರಿದ್ದಾರೆ.

  • ರಾಜೇಗೌಡ್ರೆ, ಅಸೆಂಬ್ಲಿಗೆ ಬರದಿದ್ರು ಚಿಂತೆ ಇಲ್ಲ, ಸದಸ್ಯತ್ವ ಮಾಡಿಸಿ: ಶಾಸಕರಿಗೆ ಡಿಕೆಶಿ ಕ್ಲಾಸ್

    ರಾಜೇಗೌಡ್ರೆ, ಅಸೆಂಬ್ಲಿಗೆ ಬರದಿದ್ರು ಚಿಂತೆ ಇಲ್ಲ, ಸದಸ್ಯತ್ವ ಮಾಡಿಸಿ: ಶಾಸಕರಿಗೆ ಡಿಕೆಶಿ ಕ್ಲಾಸ್

    ಚಿಕ್ಕಮಗಳೂರು: ರಾಜೇಗೌಡರೇ ಐ ಯಮ್ ಸಾರಿ ನೀವು ಅಸೆಂಬ್ಲಿಗೆ ಬರದಿದ್ದರೂ ಚಿಂತೆ ಇಲ್ಲ. ನೀವು ಅಸೆಂಬ್ಲಿಗೆ ಬರಲು ಹೋಗಬೇಡಿ. ನಿಮಗೆ ಏನ್ ಪರ್ಮಿಷನ್ ಬೇಕೋ ನಾನು ಕೊಡಿಸುತ್ತೇನೆ. 27ನೇ ತಾರೀಖಿನೊಳಗೆ 35 ಸಾವಿರ ಸದಸ್ಯತ್ವವನ್ನ ಮಾಡಿಸಬೇಕು ಎಂದು ಖಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

    ಇಂದು ರಂಭಾಪುರಿ ಪೀಠದಲ್ಲಿ ನಡೆಯುತ್ತಿದ್ದ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಳಿಕ ಜಿಲ್ಲೆಯ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ನಿರೀಕ್ಷೆಯಂತೆ ಸದಸ್ಯತ್ವ ಮಾಡಿಸದ ಜಿಲ್ಲಾ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡರು. ತರೀಕೆರೆ ತಾಲೂಕಿನಲ್ಲಿ ಮಾತ್ರ 35 ಸಾವಿರ ಸದಸ್ಯತ್ವ ಮಾಡಿಸಿದ್ದಾರೆ. ಉಳಿದ ಎಲ್ಲೂ ಆಗಿಲ್ಲ ಎಂದು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡು ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಇದೇ ವೇಳೆ, ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಡಿ.ಕೆ.ಶಿವಕುಮಾರ್ ಸಾರ್ವಜನಿಕರ ಮಧ್ಯೆ ಅವಮಾನವಾಗುವ ರೀತಿ ವರ್ತಿಸಿದ ಘಟನೆಯೂ ನಡೆಯಿತು. ಮೋಟಮ್ಮ ಮಗಳು ನಯನಾ ಮೋಟಮ್ಮ ಮಾತನಾಡುವಾಗ ನಮಗೆ ಜವಾಬ್ದಾರಿ ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ನಿಮ್ಮ ತಾಯಿಯನ್ನು ಶಾಸಕಿ, ಮಿನಿಸ್ಟರ್, ಎಂಎಲ್‍ಸಿ ಮಾಡಿದ್ದೇವೆ. ಇನ್ನೇನು ಮಾಡಬೇಕು. ಇಷ್ಟಾದರೂ ನಾನು ಹಂಗೂ ಇಲ್ಲ, ಹಿಂಗೂ ಇಲ್ಲ ಅಂದರೆ ಯಾರು ಕೇಳುತ್ತಾರೆ ಎಂದರು. ಬಳಿಕ ಕಾರ್ಯಕ್ರಮ ಮುಗಿದ ಮೇಲೆ ಮೋಟಮ್ಮ ಬಂದು ಡಿ.ಕೆ.ಶಿವಕುಮಾರ್‍ರನ್ನು ಮಾತನಾಡಿಸಲು ಯತ್ನಿಸಿದರು ಪ್ರತಿಕ್ರಿಯೆ ನೀಡದೆ ಹೋದರು. ಆಗ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಮುಜುಗರ ಉಂಟಾಯಿತು. ಇದೇ ವೇಳೆ, ಜಿಲ್ಲೆಯಲ್ಲಿನ ಡಿಜಿಟಲ್ ಸದಸ್ಯತ್ವದ ಬಗ್ಗೆ ಜಿಲ್ಲಾ ಮುಖಂಡರಿಗೆ ಡಿಕೆಶಿ ಪಾಠ ಮಾಡಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಪರಿಹಾರ ನೀಡಿ ಅದು ಬಿಟ್ಟು ಪ್ರಚೋದನೆ ಮಾಡಬೇಡಿ: ಖರ್ಗೆ

    ತರೀಕೆರೆ ತಾಲೂಕು ಹೊರತುಪಡಿಸಿದರೆ ಉಳಿದ ಕಡೆ ನಿರೀಕ್ಷೆಯಷ್ಟು ಸದಸ್ಯತ್ವ ಮಾಡಿಸಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದಾರೆ. ನಾನು ಯಾವ ಕಾರಣವನ್ನೂ ಕೇಳುವುದಿಲ್ಲ. ಪ್ರತಿದಿನದ ಬೆಳವಣಿಗೆಯನ್ನು ರಾಹುಲ್ ಗಾಂಧಿ ನೋಡುತ್ತಿದ್ದಾರೆ, ಸದಸ್ಯತ್ವ ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದರು. ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದ ಅವಕಾಶ ಸಿಗಲಿದೆ. ಸದಸ್ಯರನ್ನೆ ಮಾಡಿಸದಿದ್ದರೆ ಮತ ಹೇಗೆ ತೆಗೆದುಕೊಳ್ತೀರಾ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಇಂದು ಎಲ್ಲಾ ಲಾಸ್ ಆಯ್ತು ಎಂದರು. ಬಿಜೆಪಿ ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್‍ಗೆ ಸಿದ್ಧತೆ ನಡೆಸುತ್ತಿದ್ದಾರೆ. ನಾವು ಅದನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಅವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ. ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಮುಂದೆ ನಮ್ಮ ಸರ್ಕಾರ ಬರುತ್ತೆ ಆಗ ನಾವು ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದರು.

  • ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಂಕ್‌ನಲ್ಲಿದ್ದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಕಳೆದ ರಾತ್ರಿ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್‌ನಲ್ಲಿ ಖಾಸಗಿ ಬಸ್ ನಿಂತಿತ್ತು. ಆದರೆ ಮಧ್ಯರಾತ್ರಿ ಸುಮಾರಿಗೆ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಪೆಟ್ರೋಲ್ ಬಂಕ್‌ನಲ್ಲೇ ಮಲಗಿದ್ದ ಸಿಬ್ಬಂದಿಗೆ ಎಚ್ಚರವಾಗಿದೆ. ಬೆಂಕಿಯನ್ನು ನೋಡಿದ ತಕ್ಷಣ ಅಕ್ಕಪಕ್ಕದವರನ್ನು ಕೂಗಿ ಎಬ್ಬಿಸಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.

    ಪೆಟ್ರೋಲ್ ಬಂಕ್‌ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಇತ್ತು. ಒಂದು ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಪೆಟ್ರೋಲ್ ಬಂಕ್ ನೌಕರನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಥಳೀಯರು ಬಸ್ಸಿಗೆ ತಾಗಿದ್ದ ಬೆಂಕಿಯನ್ನು ನಂದಿಸುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಇದನ್ನೂ ಓದಿ: ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ