Tag: Chikkaballapura

  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಬ್ಬರು ಗರ್ಭಿಣಿಯರು (Pregnant), ಮತ್ತೋರ್ವ ಮಹಿಳೆ ಹಾಗೂ ಪುರಷ ಸೇರಿ 4 ಮಂದಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ (Health Officer) ಮಹೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:  ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಮೇಲೆ ಅಕ್ರಮವಾಗಿ ಎದ್ದಿರುವ ಬೃಹತ್ ಕಟ್ಟಡ ಯಾರದ್ದು?- ಹೆಚ್‌ಡಿಕೆ ಪ್ರಶ್ನೆ

    ಗೌರಿಬಿದನೂರಿನ‌ ಹಾಗೂ ಬಾಗೇಪಲ್ಲಿಯಲ್ಲಿ ತಲಾ ಒಬ್ಬರು ಗರ್ಭಿಣಿಯರು, ಚಿಂತಾಮಣಿಯಲ್ಲಿ 1 ಪ್ರಕರಣ, ಚಿಕ್ಕಬಳ್ಳಾಪುರ ನಗರದಲ್ಲಿ 1 ಪ್ರಕರಣ ಕಂಡುಬಂದಿದೆ. ಗೌರಿಬಿದನೂರಿನ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂವರು ಮನೆಯಲ್ಲೇ ಆರೋಗ್ಯವಾಗಿದ್ದಾರೆ ಅಂತ ಡಿಹೆಚ್‌ಒ (Chikkaballapura DHO) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ

    ಇನ್ನೂ ಮೋಡ ಮುಚ್ಚಿದ ವಾತವಾರಣ ಇರೋದ್ರಿಂದ ಜ್ವರ, ಕೆಮ್ಮು ನೆಗಡಿ ಸಾಮಾನ್ಯ, ಹಾಗಂತ ಹೆದರುವ ಅಗತ್ಯ ಇಲ್ಲ. ಆದ್ರೆ ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೆಮ್ಮು, ನೆಗಡಿ, ಜ್ವರ ವಿಪರೀತ ಆದಾಗ ಸ್ವಯಂ ಚಿಕಿತ್ಸೆ ಪಡೆಯದೇ ವೈದ್ಯರನ್ನೇ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

  • ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ – ಯುವಕ ಆತ್ಮಹತ್ಯೆ!

    ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ – ಯುವಕ ಆತ್ಮಹತ್ಯೆ!

    – ಮತ್ತೊಂದೆಡೆ ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ – ಸವಾರ ಸಾವು

    ಚಿಕ್ಕಬಳ್ಳಾಪುರ: ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ ಹಿನ್ನೆಲೆ ಸಂಬಂಧಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ.

    ಅಜ್ಜವಾರ ಗ್ರಾಮದ 27 ವರ್ಷದ ಮಂಜುನಾಥ್ ನೇಣಿಗೆ ಶರಣಾದ ದುರ್ದೈವಿ. ಅಂದಹಾಗೆ ಮಂಜುನಾಥ್ ಶಿಡ್ಲಘಟ್ಟ ತಾಲೂಕಿನ ಸೋದರ ಮಾವನ ಅಪ್ರಾಪ್ತ ಮಗಳನ್ನ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕೈ, ಕಾಲು ಕಟ್ಟಿ ಪೂಜಾರಿಯ ಕೊಲೆ – 3 ವಾರಗಳ ಹಿಂದೆಯೇ ಅರಣ್ಯದಲ್ಲಿ ಬೀಸಾಡಿರುವ ಶಂಕೆ

    ನಿನ್ನೆ ಸಹ ಬಾಲಕಿಯ ಹುಟ್ಟು ಹಬ್ಬದ ಅಂಗವಾಗಿ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದ. ಈ ವೇಳೆ ಬಾಲಕಿಯನ್ನ ಮದುವೆಯಾಗುವುದಾಗಿ ಮಂಜುನಾಥ್ ಹೇಳಿದ್ದು ಇದಕ್ಕೆ ಸೋದರ ಮಾವ ಹಾಗೂ ಅತ್ತೆ ಮಗಳನ್ನ ಕೊಡೋದಿಲ್ಲ ಎಂದಿದ್ದರಂತೆ. ಇದೇ ನೋವಿನಲ್ಲಿ ಮನೆಗೆ ವಾಪಸ್ ಬಂದಿದ್ದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ಮಾಹಿತಿ ತಿಳಿದುಬಂದಿದೆ. ಮೃತದೇಹವನ್ನ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೇಸ್‌ ನಂ.2: ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ- ಸವಾರ ಸಾವು
    ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಮಾರನಹಳ್ಳಿ ಬಳಿ ನಡೆದಿದೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

    ಕೊನಘಟ್ಟ ಗ್ರಾಮದ 30 ವರ್ಷದ ಮಣಿಕುಮಾರ್ ಮೃತ ಬೈಕ್ ಸವಾರ. ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾಗಿದೆ. ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗರಕ್ಕೆ ರವಾನೆ ಮಾಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಂತಾಮಣಿಯಲ್ಲಿ ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರ – ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಚಿಂತಾಮಣಿಯಲ್ಲಿ ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರ – ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಚಿಕ್ಕಬಳ್ಳಾಪುರ: ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಅಂದಹಾಗೆ ಚಿಂತಾಮಣಿ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಳೆದ 8 ತಿಂಗಳ ಹಿಂದೆ ಅಂಬೇಡ್ಕರ್ ಪ್ರತಿಮೆಯನ್ನ ರಾತ್ರೋರಾತ್ರಿ ಸ್ಥಾಪನೆ ಮಾಡಲಾಗಿತ್ತು. ಇದು ಚಿಂತಾಮಣಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ರಾಜಕೀಯ ಪ್ರತಿಷ್ಠೆಯಾಗಿ ವಿವಾದದ ರೂಪ ಪಡೆದುಕೊಂಡಿತ್ತು. ಇದನ್ನೂ ಓದಿ: ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಈ ಪ್ರತಿಮೆಯನ್ನ ತಾಲೂಕು ಆಡಳಿತ ನ್ಯಾಯಾಲಯದ ನಿದೇರ್ಶನದ ಮೇರೆಗೆ ತೆರವು ಮಾಡಿದ್ದು ಇದನ್ನ ಖಂಡಿಸಿ ದಲಿತ ಸಂಘಟನೆಗಳು ಚಿಂತಾಮಣಿ ಬಂದ್‌ಗೆ ಕರೆ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಮುಖಂಡರನ್ನ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಇದನ್ನ ಖಂಡಿಸಿ ದಲಿತ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಭಾರೀ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ ರೇಪ್‌ – ಸಿಪಿಐ ಪುತ್ರ ಸೇರಿ ಮೂವರು ಅರೆಸ್ಟ್‌

    ಇದೇ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಭಾರೀ ವಾಗ್ವಾದವೂ ನಡೆಯಿತು. ಇದನ್ನ ಹೊರತುಪಡಿಸಿ ಬಂದ್‌ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಬಸ್ ವಾಹನಗಳ ಓಡಾಟ ಎಂದಿನಂತೆ ಇತ್ತು. ಹೀಗಾಗಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದನ್ನೂ ಓದಿ: ಸೀಲ್ ಮಾಡಿದ್ದ ಬೋಬಾ ಟೀ ಬಾಟಲ್‌ನಲ್ಲಿ ಗ್ಲಾಸ್ ಪತ್ತೆ – ಐಸ್‌ ಕ್ಯೂಬ್ ಎಂದು ಕುಡಿದು ಆಸ್ಪತ್ರೆ ಸೇರಿದ ಯುವತಿ!

  • ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಚಿಕ್ಕಬಳ್ಳಾಪುರ: ಪ್ರೀತಿಗೆ ಜಾತಿ, ಧರ್ಮದ ಗಡಿ ಇಲ್ಲ ಎಂಬಂತೆಯೇ ಇಲ್ಲೊಂದು ಜೋಡಿ ಜಾತಿ ಧರ್ಮಗಳ ಎಲ್ಲೆ ಮೀರಿ ಪ್ರೇಮ ವಿವಾಹವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ(Chikkaballapura) ನಡೆದಿದೆ.

    ಮುಸ್ಲಿಂ(Muslim) ಯುವತಿಯು ಹಿಂದೂ(Hindu) ಯುವಕನನ್ನು ಪ್ರೀತಿಸಿ ಪ್ರೇಮವಿವಾಹವಾಗಿದ್ದು(Love Marriage), ಈ ವಿವಾಹಕ್ಕೆ ಸಹಜವಾಗಿಯೇ ಪೋಷಕರ ವಿರೋಧ ವ್ಯಕ್ತವಾಗಿದೆ. ಇದೀಗ ರಕ್ಷಣೆ ಕೋರಿ ನವಜೋಡಿಯು ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ಯಾಪಲಹಳ್ಳಿಯ(Yapalahalli) ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ(Someshwara) ಗ್ರಾಮದ ಯುವತಿ ನಜ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಭಯೋತ್ಪಾದನಾ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸ್ತಿದೆ: ಸಿಟಿ ರವಿ

    ಇಬ್ಬರು ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದರು. ಇಬ್ಬರದ್ದೂ ಬೇರೆ ಬೇರೆ ಧರ್ಮವಾದ ಕಾರಣ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಯುವತಿಯನ್ನ ಕೆಲಸಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ವಿರೋಧದ ನಡುವೆಯೇ ಮನೆಯಿಂದ ಹೊರಬಂದ ನಜ್ಮಾ, ಹರೀಶ್ ಬಾಬು ಜೊತೆ ವಿವಾಹವಾಗಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಕಳೆದ 4 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರಿಗೂ ವ್ಯಕ್ತಿತ್ವ ಇಷ್ಟವಾಗಿ ಮದುವೆ ಆಗಲು ತೀರ್ಮಾನಿಸಿದ್ದರು. ಮದುವೆಗೆ ಮನೆಯವರು ಒಪ್ಪದ ಕಾರಣ ಇಬ್ಬರು ಪ್ರೇಮವಿವಾಹವಾಗಿದ್ದರು. ಈ ಮದುವೆಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿರೋಧದ ಬೆನ್ನಲ್ಲೇ ನವಜೋಡಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸಿ ಮೊರೆ ಹೋಗಿದ್ದಾರೆ. ಅಂತರ್ ಧರ್ಮ ಪ್ರೇಮವಿವಾಹದ ಸೂಕ್ಷ್ಮತೆಯನ್ನ ಅರಿತ ಎಸ್ಪಿ ಕುಶಲ್ ಚೌಕ್ಸಿ ಇಬ್ಬರನ್ನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಯುವಕ ಯುವತಿಯ ತಂದೆ ತಾಯಿಯನ್ನ ಕರೆಸಿ ವಿಚಾರ ಮಾಡುವಂತೆ ತಿಳಿಸಿದ್ದರು. ಇದನ್ನೂ ಓದಿ: ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಅರೆಸ್ಟ್ – ಚಿನ್ನಾಭರಣ ಸೇರಿ 7.89 ಲಕ್ಷ ಮೌಲ್ಯದ ವಸ್ತು ಜಪ್ತಿ

    ಠಾಣೆಗೆ ಬಂದ ಯುವತಿ ಪೋಷಕರು ಹಾಗೂ ಸಂಬಂಧಿಕರು ಯುವಕನನ್ನ ಬಿಟ್ಟು ಬರುವಂತೆ ಬೇಡಿಕೊಂಡಿದ್ದರು. ಇದಕ್ಕೆ ಯುವತಿ ಒಪ್ಪಿರಲಿಲ್ಲ. ಹೀಗಾಗಿ ಎರಡು ಕಡೆಯವರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದು, ಯುವತಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನವಜೋಡಿಗೆ ಯಾವುದೇ ತೊಂದರೆ ಮಾಡದಂತೆ ತಿಳಿ ಹೇಳಿ ಕಳುಹಿಸಿದ್ದಾರೆ.

  • ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 15 ಮಂದಿಗೆ ಗಾಯ

    ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 15 ಮಂದಿಗೆ ಗಾಯ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ (Bus) ಪಲ್ಟಿಯಾಗಿ 15 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಏರ್‌ಪೋರ್ಟ್‌ನ ಬೇಗೂರು ಜಂಕ್ಷನ್ ಬಳಿ ನಡೆದಿದೆ.

    ಬಸ್ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಬಸ್‌ನ ಕೆಳಗಡೆ ಕಾರ್ಮಿಕರು ಸಿಲುಕಿ ನರಳಾಡಿದ್ದಾರೆ. ಕ್ರೇನ್ ಮೂಲಕ ಬಸ್ ಮೇಲೆತ್ತಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಯಲ್ಲೋ ಅಲರ್ಟ್ – ಮುಂದಿನ 3 ಗಂಟೆ ಭಾರೀ ಮಳೆ

    ಕಾರ್ಮಿಕರನ್ನು ಬಸ್ ಮೂಲಕ ಊಟಕ್ಕೆಂದು ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ಲೋಕಾ ರೇಡ್ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

  • ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ- ಕಂಬನಿ ಮಿಡಿದ ಕರುನಾಡು

    ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ- ಕಂಬನಿ ಮಿಡಿದ ಕರುನಾಡು

    ಚಿಕ್ಕಬಳ್ಳಾಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗಡಿ ಭಾಗದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶದ (Andhra Pradesh) ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧನೊಬ್ಬ (Soldier) ಹುತಾತ್ಮರಾಗಿದ್ದಾರೆ.

    ಮುರಳಿ ನಾಯಕ್‌ ಹುತಾತ್ಮ ಯೋಧ. ಪಾಕಿಸ್ತಾನ ಗಡಿಯಲ್ಲಿ (Pakistan Border) ನಡೆದ ದಾಳಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಅವರ ಏಕೈಕ ಪುತ್ರ ಮುರಳಿ ನಾಯಕ್ ದೇಶಕ್ಕಾಗಿ ಹೋರಾಡಿ ವೀರಮರಣ ಹೊಂದಿದ್ದಾರೆ. ಮುರಳಿ ಹುತಾತ್ಮನಾಧ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಬೆಂಗಳೂರು ಪಾಕಿಸ್ತಾನದ ಹಿಟ್‌ಲಿಸ್ಟ್‌ನಲ್ಲಿ ಇದ್ಯಾ? – ಗೃಹಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು…

    ಹುತಾತ್ಮ ಯೋಧ ಮುರಳಿ ನಾಯಕ್‌ (Murali Naik) ಪಾರ್ಥೀವ ಶರೀರವನ್ನು ಇಂದು ಜಮ್ಮುವಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಏರ್‌ಪೋರ್ಟ್‌ನ ಕಾರ್ಗೋ ಟರ್ಮಿನಲ್‌ನಲ್ಲಿ ಯೋಧರಿಂದ ಅಂತಿಮ ನಮನ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಇದನ್ನೂ ಓದಿ: ದೇಶದ ಕರೆಗೆ ಹನಿಮೂನ್‌ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ

    ದೇವನಹಳ್ಳಿ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮಾರ್ಗವಾಗಿ ಸ್ವಗ್ರಾಮದತ್ತ ಪಾರ್ಥಿವ ಶರೀರವನ್ನ ಸೇನಾ ವಾಹನದ ಸಾರಥಿಯೊಂದಿಗೆ ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗುತ್ತಿದೆ. ಈ ವೇಳೆ ಚಿಕ್ಕಬಳ್ಳಾಪುರದಲ್ಲಿ ಮಳೆ ಬಂದರೂ ಜಗದ್ದೇ ದಾರಿಯಲ್ಲೇ ನಿಂತಿದ್ದ ಜನ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದ ವಾಪಸಂದ್ರದ ಬಳಿ ಜನರು ಆಗಮಿಸಿ ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

  • ಒಂದು ವರ್ಷದ ಮಗುವಿನ ಎದುರೇ ಜೋಲಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

    ಒಂದು ವರ್ಷದ ಮಗುವಿನ ಎದುರೇ ಜೋಲಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಒಂದು ವರ್ಷದ ಮಗುವಿನ ಎದುರೇ ಮಹಿಳೆಯೊಬ್ಬಳು ಜೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಚಿಕ್ಕಬಳ್ಳಾಪುರ (Chikkaballapura) ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಝಾನ್ಸಿ (23) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಈಶ್ವರ್, ಕ್ರೈನ್ ಅಪರೇಟರ್ ಆಗಿದ್ದು, ಮನೆಗೆ ಊಟಕ್ಕೆ ಬಂದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ತಾಯಿಯ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ, ಮಗು ತಾಯಿಯ ಕಾಲುಗಳ ಬಳಿ ಮಲಗಿತ್ತಂತೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

    ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

    – 4.50 ಕೋಟಿ ಮೌಲ್ಯದ ಮೊಬೈಲ್‌ಗಳನ್ನ 90 ಲಕ್ಷಕ್ಕೆ ಸೇಲ್‌ ಮಾಡಿದ್ದ ಗ್ಯಾಂಗ್‌

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಅವು ಸರಿಸುಮಾರು 5 ಕೋಟಿ ಮೌಲ್ಯದ ಮೊಬೈಲ್‌ಗಳು (Mobile), ಉತ್ತರ ಪ್ರದೇಶದಿಂದ ಬೆಂಗಳೂರಿಗೆ (Bengaluru) ರವಾನೆ ಮಾಡ್ತಿದ್ದ ಟ್ರಕ್‌ನಲ್ಲಿ ರಂದ್ರ ಕೊರೆದು ಸಿನಿಮೀಯ ಶೈಲಿಯಲ್ಲಿ ಮೊಬೈಲ್‌ಗಳನ್ನ ಕಳವು ಮಾಡಲಾಗಿತ್ತು. ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಪ್ರಕರಣವನ್ನ ಚಿಕ್ಕಬಳ್ಳಾಪುರ (Chikkaballapura Police) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ದೇಶದಲ್ಲೇ ಪೊಲೀಸರ ಕಾಯಕ ಮಾದರಿ ಎನ್ನುವಂತಾಗಿದೆ.

    ಹೌದು. 2024ರ ನವೆಂಬರ್‌ 23ರಂದು ಟ್ರಕ್‌ವೊಂದು ರಾಷ್ಟ್ರೀಯ ಹೆದ್ದಾರಿ-44ರ (National Highway – 4) ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಬರೋಬ್ಬರಿ 6,640 ಮೊಬೈಲ್‌ಗಳನ್ನ ಹೊತ್ತು ಸಾಗಿತ್ತು. ಬೆಂಗಳೂರು ತಲುಪಲು ಇನ್ನೂ 50 ಕಿಮೀ ಅಷ್ಟೇ ಬಾಕಿಯಿತ್ತು. ಆದ್ರೆ ದಿನ ಕಳೆದರೂ ಬೆಂಗಳೂರು ತಲುಪಲೇ ಇಲ್ಲ. ಹೀಗಾಗಿ ಕಂಪನಿಯವರು ಜಿಪಿಎಸ್ ಆಧರಿಸಿ ಚೆಕ್ ಮಾಡಿದ್ರೆ ಅದು ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾ ವೊಂದರ ಬಳಿ ನಿಲ್ಲಿಸಲಾಗಿತ್ತು. ಹೋಗಿ ನೋಡಿದ್ರೆ ಟ್ರಕ್ ಇದೆ, ಚಾಲಕ ಇರಲಿಲ್ಲ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ನಂತರ ಟ್ರಕ್‌ನಲ್ಲಿ ಸರಕು ನೋಡಲು ಹೋದಾಗ ಚಾಲಕನ ಕ್ಯಾಬಿನ್‌ನಿಂದಲೇ ರಂದ್ರ ಕೊರೆದು ಮೊಬೈಲ್‌ಗಳನ್ನ ದೋಚಿ ಮತ್ತೊಂದು ಟ್ರಕ್‌ಗೆ ತುಂಬಿಸಿರುವುದು ಬೆಂಕಿಗೆ ಬಂದಿತು. 6,640 ಮೊಬೈಲ್ ಗಳ ಪೈಕಿ 5,140 ಮೊಬೈಲ್ ಗಳನ್ನ ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ ಗಳು ಹಾಗೆ ಟ್ರಕ್ ನಲ್ಲಿ ಉಳಿದಿದ್ದವು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಢು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇದೀಗ 7 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿ ಕಳವು ಮಾಡಿದ್ದ 5,140 ಮೊಬೈಲ್‌ಗಳ ಪೈಕಿ 56 ಮೊಬೈಲ್‌ಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಯುದ್ಧ ಕಾರ್ಮೋಡ – ಭಾರತೀಯ ಸೈನಿಕರ ಯಶಸ್ಸಿಗಾಗಿ ಪರಶುರಾಮನ ಕೊಡಲಿಯಿಟ್ಟು ಮಹಾಯಾಗ

    ದೆಹಲಿಯಲ್ಲಿ ಮಾರಾಟ
    ಚಿಕ್ಕಬಳ್ಳಾಪುರ ಸಮೀಪ ಮೊಬೈಲ್‌ ದೋಚಿದ್ದ ಕಳ್ಳರು ಬೇರೊಂದು ಟ್ರಕ್‌ಗೆ ತುಂಬಿಕೊಂಡು ದೆಹಲಿಯಲ್ಲಿ ಮಾರಾಟ ಮಾಡಿದ್ದರು. ಸರಿಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಲ್ಲಿಂದ ಮೊಬೈಲ್‌ಗಳು ದೇಶದ ನಾನಾ ರಾಜ್ಯಗಳಿಗೆ ಸಪ್ಲೈ ಆಗಿವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ. ಹೀಗಾಗಿ ಮೊಬೈಲ್‌ ಮಾರಿ ಆರೋಪಿಗಳ ಖಾತೆಯಲ್ಲಿದ್ದ ಉಳಿದಿದ್ದ 20 ಲಕ್ಷ ರೂ. ನಗದನ್ನು ಸೀಜ್‌ ಮಾಡಿಕೊಳ್ಳಲಾಗಿದೆ.

    ಅಲ್ಲದೇ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು 2 ವರ್ಷಗಳ ಹಿಂದೆ ಬಂಗಾಳದಲ್ಲಿ ನಡೆದಿರೋ 9 ಕೋಟಿಯ ಐಪೋನ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಪೊಲೀಸರಿಂದ ಪ. ಬಂಗಾಳ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ಕರ್ನಾಟಕದ ತೊಗಲುಗೊಂಬೆ ಕಲಾವಿದೆ ಭೀಮವ್ವಗೆ ಪದ್ಮಶ್ರೀ ಗೌರವ

  • ನಮ್ಮದು ಪಾಪರ್ ಸರ್ಕಾರ ಅಲ್ಲ – ವಿಪಕ್ಷಗಳಿಗೆ ಸಿದ್ದರಾಮಯ್ಯ ಟಾಂಗ್

    ನಮ್ಮದು ಪಾಪರ್ ಸರ್ಕಾರ ಅಲ್ಲ – ವಿಪಕ್ಷಗಳಿಗೆ ಸಿದ್ದರಾಮಯ್ಯ ಟಾಂಗ್

    ಚಿಕ್ಕಬಳ್ಳಾಪುರ: ಗ್ಯಾರಂಟಿಗಳಿಂದ (Guarantee Scheme) ಖಜಾನೆ ಖಾಲಿ, ಪಾಪರ್ ಸರ್ಕಾರ ಎಂದು ಬಿಜೆಪಿಯವರು (BJP) ಟೀಕೆ ಮಾಡುತ್ತಾರೆ. ಬಿಜೆಪಿಯವರ ಮಾತಲ್ಲಿ ಎಳ್ಳಷ್ಟು ಸತ್ಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.

    ರಾಜ್ಯ ಸರ್ಕಾರದ 2 ವರ್ಷದ ಸಾಧನೆಯ ಹೆಸರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಭೈರದೇನಹಳ್ಳಿ ಬಳಿ ಸಾಧನೆ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ಸಿಎಂ, ಚುನಾವಣಾ ಪೂರ್ವದಲ್ಲಿ ಜನರಿಗೆ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿದ್ದೆವು. ಅಧಿಕಾರಕ್ಕೆ ಬಂದ ಕೂಡಲೇ ನಾವು 5 ಗ್ಯಾರಂಟಿಗಳನ್ನ ಜನರಿಗೆ ಕೊಡುತ್ತಿದ್ದೇವೆ. 2 ವರ್ಷದಲ್ಲಿ 80 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಈ ವರ್ಷವೂ ಕೂಡ 50 ಸಾವಿರ ಕೋಟಿಗೂ ಹೆಚ್ಚು ಹಣ ಬಜೆಟ್‌ನಲ್ಲಿಟ್ಟಿದ್ದೇವೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹಾಗಿದ್ರೆ ಇಂದು 1,000 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಆಗುತ್ತಿತ್ತಾ? ಪಾಪರ್ ಆಗಿರುವ ಸರ್ಕಾರ ಈ ಕೆಲಸ ಮಾಡಲು ಸಾಧ್ಯ ಇಲ್ಲ ಎಂದರು. ಇದನ್ನೂ ಓದಿ: ಎನ್‌ಎಸ್‌ಎಸ್ ಶಿಬಿರದಲ್ಲಿ ನಮಾಜ್ ಮಾಡುವಂತೆ ಒತ್ತಾಯ – 8 ಮಂದಿಯ ವಿರುದ್ಧ FIR

    ಬಿಜೆಪಿಯವರು ಜನಾಕ್ರೋಶ ಅಂತ ಹೋರಾಟ ಮಾಡುತ್ತಿದ್ದಾರೆ. ಸುರ್ಜೇವಾಲರು ಹೇಳಿರುವ ಹಾಗೆ ಗೋಡೆ ಮಂಕಾಗಿದೆ, ಕೊಳಕಾಗಿದೆ ಎಂದು ಹೆಣ್ಣುಮಗಳು ಹೇಳುತ್ತಾಳೆ. ಆದರೆ ಕೊಳಕು ಆಗಿರೋದು ಹೆಣ್ಣುಮಗಳ ಕಿಟಕಿಯ ಗಾಜು. ಕಿಟಕಿಯ ಗಾಜು ಶುದ್ಧ ಮಾಡದೇ ನೋಡಿ ಹಾಗೆ ಹೇಳುತ್ತಾಳೆ. ಅದೇ ರೀತಿ ಬಿಜೆಪಿಯವರು ಸಹ ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ದಿನೇದಿನೇ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮೇಲೆ ಬೆಲೆ ಏರಿಕೆ ಮಾಡಿದ್ದರು. ಬಿಜೆಪಿ ಜನಾಕ್ರೋಶ ಆರಂಭ ಮಾಡಿದ ಮೇಲೆ ಬೆಲೆ ಏರಿಕೆ ಆಗಿದ್ದು, ಬೆಲೆ ಏರಿಕೆಗೆ ನೇರ ಕಾರಣ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಕಾರಣ. ನಾವು ಅಭಿವೃದ್ಧಿ ಜೊತೆಗೆ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. ಪಾಪರ್ ಸರ್ಕಾರದಲ್ಲಿ 38 ಸಾವಿರ ಕೋಟಿ ಹೆಚ್ಚು ಬಜೆಟ್ ಮಂಡಿಸಲು ಸಾಧ್ಯ ಇಲ್ಲ. ಬಿಜೆಪಿಯವರು ಸುಳ್ಳು ಅಪಾದನೆ ಆರೋಪ ಮಾಡೋದೆ ಅವರ ಕೆಲಸ. ಕರ್ನಾಟಕದ ಜನ ಬಿಜೆಪಿಯವರಿಗೆ ಪೂರ್ಣ ಬಹುಮತ ಎಂದೂ ಕೊಟ್ಟಿಲ್ಲ. ಹಿಂಬಾಗಿಲಿನ ಮೂಲಕ ಅಧಿಕಾರಿ ಹಿಡಿದವರು ಬಿಜೆಪಿಯವರು ಎಂದು ಟೀಕಿಸಿದರು. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

  • ಸರ್ಕಾರಿ ಜಾಗದಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ – ಕ್ರಷರ್ ಮಾಲೀಕನಿಂದ ರೈತನಿಗೆ ಗುಂಡೇಟು

    ಸರ್ಕಾರಿ ಜಾಗದಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ – ಕ್ರಷರ್ ಮಾಲೀಕನಿಂದ ರೈತನಿಗೆ ಗುಂಡೇಟು

    ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾದ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ರೈತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕ್ರಷರ್ ಮಾಲೀಕ ರೈತರೊಬ್ಬರ (Farmer) ಕಾಲಿಗೆ ಗುಂಡು ಹಾರಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶ್ ಕುಮಾರ್ ಎಂಬಾತ ಮಂಚೇನಹಳ್ಳಿ ಗ್ರಾಮದ ಚಿಕನ್ ರವಿ ಅಲಿಯಾಸ್ ಜಿಮ್ ರವಿ ಎಂಬ ರೈತರೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    ಸಕಲೇಶ್ ಕುಮಾರ್‌ಗೆ ಕೋಟಗಾನ ಗುಟ್ಟ ಎಂಬ ಬೆಟ್ಟದಲ್ಲಿ ಕ್ರಷರ್ ಮಾಡಲು ಮಂಜೂರಾತಿ ಸಿಕ್ಕಿತ್ತು. ಆದರೆ ಬೆಟ್ಟಕ್ಕೆ ತೆರಳಲು ದಾಳಿ ಇರಲಿಲ್ಲ. ಹೀಗಾಗಿ ಸಕಲೇಶ್ ತಾನೇ ಮುಂದೆ ನಿಂತು ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾಗಿದ್ದು, ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    ಇಂದು ಸಹ ಸಕಲೇಶ್ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ಮಾಡಲು ಮುಂದಾಗಿದ್ದು, ಗ್ರಾಮಸ್ಥರು ಕ್ರಷರ್ ಮಾಡಬಾರದು. ರಸ್ತೆಯನ್ನೂ ಅಗೆಯಬಾರದು ಎಂದು ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸಕಲೇಶ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಿರುತೆರೆ ದಂಪತಿ

    ಈ ವೇಳೆ ಸಕಲೇಶ್ ತನ್ನ ಪರವಾನಿಗೆ ಸಹಿತ ರಿವಾಲ್ವರ್‌ನಿಂದ ಚಿಕನ್ ರವಿ ಎಂಬ ರೈತರೊಬ್ಬರ ಕಾಲಿಗೆ ಗುಂಡು ಹಾರಿಸಿದ್ದಾನೆ. ಬಳಿಕ ನನ್ನ ತಲೆಗೆ ಕಲ್ಲಿನಿಂದ ಹೊಡೆದವರು ಯಾರು ಎಂದು ಕೂಗಾಡುತ್ತಾ ರಿವಾಲ್ವರ್ ಕೈಯಲ್ಲಿ ಹಿಡಿದು ಜನರನ್ನ ಬೆದರಿಸಿದ್ದಾನೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಘಟನೆಯಲ್ಲಿ ಗಾಯಗೊಂಡ ರವಿ ಎಂಬ ರೈತನಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆರೋಪಿ ಸಕಲೇಶ್‌ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.