Tag: Chikkaballapura

  • ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

    ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever Virus) ಪ್ರಕರಣ ಪತ್ತೆಯಾಗಿದೆ.

    ಹೆಬ್ಬರಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ಹಂದಿ ಫಾರಂನಲ್ಲಿ ಈ ಮಾರಕ ವೈರಸ್ ಪತ್ತೆಯಾಗಿದೆ. ಕಳೆದೊಂದು ವಾರದಿಂದ ಫಾರಂ ನಲ್ಲಿನ ಹಲವು ಹಂದಿಗಳು ಧಿಡೀರ್ ಅಂತ ಸಾವನ್ನಪ್ಪುತ್ತಿದ್ದು. ಇದರಿಂದ ಆತಂಕಗೊಂಡ ಮಾಲೀಕ ಪಶುಪಾಲನಾ ಇಲಾಖೆ (Veterinary Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

    ಬಳಿಕ ಪಶುಪಾಲನಾ ಇಲಾಖೆ ಅಧಿಕಾರಿಗಳು ಸತ್ತ ಹಂದಿಗಳ ಮಾದರಿಗಳನ್ನ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದರು. ಪರೀಕ್ಷೆ ವೇಳೆ ಹಂದಿ ಜ್ವರ ಇರೋದು ದೃಢವಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಹಾಗೂ ಪಶುಪಾಲನಾ ಇಲಾಖೆ ಹೈಅಲರ್ಟ್ ಆಗಿದ್ದು ಹಂದಿ ಜ್ವರ ಕಡಿವಾಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಕೆ ಮುಂದಾಗಿದೆ. ಫಾರಂ ನಲ್ಲಿ ಉಳಿದ ಹಂದಿಗಳನ್ನ ಕೊಲ್ಲೋಕೆ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ಏನಿದು ಹಂದಿ ಜ್ವರ?
    ಆಫ್ರಿಕನ್ ಹಂದಿ ಜ್ವರ (ASF) ಎಂಬುದು ವೈರಸ್‌ನಿಂದ ಹಂದಿಗಳಲ್ಲಿ ಉಂಟಾಗುವ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. 100% ವರೆಗೆ ಮರಣ ಪ್ರಮಾಣ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದ್ರೆ ಇದು ಮಾನವರಿಗೆ ಹರಡುವುದಿಲ್ಲ. ಈ ರೋಗವು ಹಂದಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

    ಹೇಗೆ ಹರಡುತ್ತೆ?
    ಆಫ್ರಿಕನ್ ಹಂದಿ ಜ್ವರವು ASFV ಎಂಬ ವೈರಸ್‌ನಿಂದ ಹರಡುತ್ತೆ. ಇದನ್ನೂ ಓದಿ: ಬೆಂಗ್ಳೂರಿನಿಂದ ಒಸಾಕಾ, ನಗೋಯ ನಗರಗಳಿಗೆ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ ಪಾಟೀಲ್

  • ಚಿಕ್ಕಬಳ್ಳಾಪುರ: ಗೌರಿ-ಗಣೇಶ ಹಬ್ಬದಂದೇ ವಿದ್ಯುತ್ ಶಾಕ್‌ಗೆ ತಾಯಿ, ಮಲಮಗ ಸಾವು

    ಚಿಕ್ಕಬಳ್ಳಾಪುರ: ಗೌರಿ-ಗಣೇಶ ಹಬ್ಬದಂದೇ ವಿದ್ಯುತ್ ಶಾಕ್‌ಗೆ ತಾಯಿ, ಮಲಮಗ ಸಾವು

    ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಮನೆಯ ಮುಂದೆ ಒಣಗಿ ಹಾಕಿದ್ದ ಬಟ್ಟೆ ತೆಗೆದುಕೊಳ್ಳುವಾಗ ವಿದ್ಯುತ್‌ ಶಾಕ್‌ಗೆ ತಾಯಿ ಮತ್ತು ಮಗ ಬಲಿಯಾಗಿರುವ ಘಟನೆ ನಡೆದಿದೆ.

    ಲಲಿತಮ್ಮ ಮತ್ತು ಮಲಮಗ ಸಂಜಯ್ ಮನೆಯ ಎದುರೇ ಉಸಿರು ಚೆಲ್ಲಿದ್ದಾರೆ. ಲಲಿತಮ್ಮ ಮನೆಯ ಮುಂದೆ ಕಂಬಿ ಮೇಲೆ ಒಣಗಿ ಹಾಕಿದ್ದ ಬಟ್ಟೆ ತೆಗೆದುಕೊಳ್ಳೋಕೆ ಮುಂದಾಗಿದ್ದರು. ವಿದ್ಯುತ್‌ ಶಾಕ್‌ನಿಂದ ಲಲಿತಮ್ಮ ಕುಸಿದು ಬಿದ್ದಿದ್ದಾಳೆ. ದೊಡ್ಡಮ್ಮನ ರಕ್ಷಣೆಗೆ ಬಂದ ಮಲಮಗ ಸಂಜಯ್ ಕೂಡ ಪ್ರಾಣ ಬಿಟ್ಟಿದ್ದಾನೆ. ಇವರಿಬ್ಬರನ್ನ ಕಂಡು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಲ ಮಗಳು ಲಕ್ಷಮ್ಮ ಸಹ ರಕ್ಷಣೆಗೆ ಧಾವಿಸಿದರು. ಆಕೆಗೂ ಕೆರೆಂಟ್ ಶಾಕ್ ಹೊಡೆದು ಕೈಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

    ಗಾಯಾಳು ಲಕ್ಷಮ್ಮಳ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲಾ ಮನೆ ಮುಂದೆ ಜಮಾಯಿಸಿದ್ದಾರೆ. ಅಷ್ಟರಲ್ಲೇ ಕರೆಂಟ್ ಶಾಕ್ ಹೊಡೆದಿರೋದು ಗೊತ್ತಾಗಿದೆ. ಇದರಿಂದ ಗ್ರಾಮದ ಯುವಕರು ಕೋಲಿನ ಸಹಾಯದಿಂದ ಕಂಬಿ ಪಕ್ಕಕ್ಕೆ ಸರಿಸಿ ಲಲಿತಮ್ಮ ಹಾಗೂ ಸಂಜಯ್‌ನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಧೃಡೀಕರಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಸಿಪಿಐ ಸಾಧಿಕ್ ಪಾಷಾ ಹಾಗೂ ಬೆಸ್ಕಾಂ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    – ಆಟೋ ಚಾಲಕ, ಸಾಥ್‌ ಕೊಟ್ಟ ಗೆಳತಿ ಅರೆಸ್ಟ್‌ – ಮತ್ತಿಬ್ಬರು ನಾಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರಿನ (Bengaluru) ಆಟೋ ಚಾಲಕನೊರ್ವ ಆಟೋ ಇಎಂಎ ಸಾಲ ತೀರಿಸಲು ತನ್ನಿಬ್ಬರು ಸ್ನೇಹಿತೆಯರನ್ನೇ ಬಳಸಿಕೊಂಡು ಪ್ರೀಪ್ಲಾನ್ ಮಾಡಿ, ಹಳೆಯ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ. ಪಾಪಿ ಆಟೋ ಚಾಲಕನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

    ಆ.16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆಯೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಬೆನ್ನತ್ತಿದ್ದ ಪೊಲೀಸರಿಗೆ ಕಾಣೆಯಾದ ಮಹಿಳೆಯರ ಪ್ರಕರಣಗಳ ಹುಡುಕಾಟ ನಡೆಸಿದಾಗ ಆಕೆ ಆಂಧ್ರದ ಹಿಂದೂಪುರದ ಅರ್ಚನಾ ಎಂಬುದು ಗೊತ್ತಾಗಿತ್ತು. ಹಿಂದೂಪುರ ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ

    ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್‍ಐ ಆಕೆಯ ಸಿಡಿಆರ್ ಪರಿಶೀಲನೆ ಮಾಡಿದಾಗ ಕಾಣೆಯಾದ ದಿನದಂದು ಆರ್ಚನಾಳಿಗೆ ರಾಕೇಶ್ ಎಂಬಾತ ಹಲವು ಬಾರಿ ಕರೆ ಮಾಡಿರೋದು ಗೊತ್ತಾಗಿದೆ. ಹೀಗಾಗಿ ಮೂಲತಃ ಗೌರಿಬಿದನೂರಿನ ವಿರೂಪಸಂದ್ರದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ರಾಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕ ರಾಕೇಶ್ ತನ್ನ ಆಟೋ ಇಎಂಐನ್ನ ಮೂರು ತಿಂಗಳಿಂದ ಕಟ್ಟಿಲ್ಲ, ಹಾಗೂ ಬೈಕ್ ಮೇಲೆ 30,000 ಸಾಲ ಮಾಡಿದ್ದು, ಅದು ಸಹ ತೀರಿಸಲು ಹಣ ಇಲ್ಲ. ಕೈ ಸಾಲ ಬೇರೆ ಮಾಡಿಕೊಂಡಿದ್ದು ಸಾಲಗಾರನಾಗಿದ್ದು ಸಾಲ ತೀರಿಸಲು ಸ್ನೇಹಿತೆಯನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಕೊಲೆಯಾದ ಅರ್ಚನಾ ಶುಭಸಮಾರಂಭಗಳಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳ ಹಿಂದೆ ಕೊಲೆ ಮಾಡಿದ ಆಟೋ ಚಾಲಕ ಸಹ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ. ಅಂದಿನಿಂದಲೂ ಅರ್ಚನಾ ಹಾಗೂ ರಾಕೇಶ್ ಅಣ್ಣ ತಂಗಿಯ ಸಂಬಂಧದಂತೆ ಸ್ನೇಹಿತರಾಗಿದ್ದರಂತೆ. ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಲಕ ಲಕ ಹೊಳೆಯುತ್ತಿದ್ದ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದ. ಹಾಗಾಗಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ತನ್ನ ಮತ್ತೊಬ್ಬ ಸ್ನೇಹಿತಾ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದ. ತಾನು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಆಟೋ ಇಎಂಐ ಸಹ ಕಟ್ಟಿಲ್ಲ, ಹಾಗಾಗಿ ನನ್ನ ಫ್ರೆಂಡ್ ಅರ್ಚನಾ ಹತ್ರ ಚಿನ್ನದ ಸರ ಇದೆ ಅವಳನ್ನ ಸಾಯಿಸಿ ಆದ್ರೂ ಸರ ಕದ್ದು ಸಾಲ ತೀರಿಸಬೇಕು ನೀನು ನನಗೆ ಸಹಾಯ ಮಾಡು ಅಂತ ಕೇಳಿಕೊಂಡಿದ್ದನಂತೆ.

    ನಿಹಾರಿಕಾ ನಾನು ಬರೋಕೆ ಆಗಲ್ಲ ನನ್ನ ಪ್ರಾಣ ಸ್ನೇಹಿತೆ ಅಂಜಲಿ ಅಂತಾ ಇದಾಳೆ ಅವಳನ್ನ ಕರೆದುಕೊಂಡು ಹೋಗು ಅಂತ ಅಂಜಲಿನಾ ಕಳಿಸಿಕೊಟ್ಟಿದ್ದಾಳೆ. ಇನ್ನೂ ಅಂಜಲಿ ತಾನೊಬ್ಬಳೇ ಯಾಕೆ ಅಂತ ತನ್ನ ಸ್ನೇಹಿತ ನವೀನ್‌ ಎಂಬಾತನನ್ನ ಸಹ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ರಾಕೇಶ್ ಆಟೋದಲ್ಲಿ ಆದ್ರೆ ಮರ್ಡರ್ ಮಾಡೋಕೆ ಆಗಲ್ಲ ಅಂತ ಕಾರಿನಲ್ಲಿ ಆದ್ರೆ ಕೆಲಸ ಸುಲಭ ಅಂತ ಯೋಚನೆ ಮಾಡಿ, ಅಂಜಲಿ ವಾಸವಿದ್ದ ಪಿಜಿ ಮಾಲೀಕಿಗೆ ಸ್ನೇಹಿತೆಯನ್ನ ನೊಡೋಕೆ ಹಿಂದೂಪುರಕ್ಕೆ ಹೋಗಿ ಬರ್ತಿವಿ ಅಂತ ಪಿಜಿ ಮಾಲೀಕಿಯ ಇಟಿಯೋಸ್ ಕಾರನ್ನ ತೆಗೆದುಕೊಂಡು ಹೋಗಿದ್ದ.

    ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಸೀದಾ ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನ ಬಾ ಊಟಕ್ಕೆ ಹೋಗಿ ಬರೋಣ ಅಂತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರು ಹತ್ತಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಎಲ್ಲರೂ ಹಿಂದೂಪುರದಲ್ಲೇ ಫೋನ್‍ಗಳನ್ನ ಸ್ವಿಚ್ ಅಫ್ ಮಾಡಿಕೊಂಡಿದ್ದಾರೆ. ಹಿಂದೂಪುರದಿಂದ ಆರಂಭವಾದ ಕಾರು ಜರ್ನಿ ಗೌರಿಬಿದನೂರು ಮಂಚೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಹಾಗೂ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಜೆಯವರೆಗೂ ಸಾಗಿದ್ದು ಸಂಜೆ ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ ಮೃತದೇಹವನ್ನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಗ್ರಾಮದ ಬಳಿ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದರು.

    ಅರ್ಚನಾಳನ್ನ ಕೊಲೆ ಮಾಡಿ ಕದ್ದಿದ್ದ ಮಾಂಗಲ್ಯಸರ ಹಾಗೂ ಬಂಗಾರದ ಕಿವಿಯ ಒಲೆಯನ್ನ ಫೈನಾನ್ಸ್‌ ಒಂದರಲ್ಲಿ 2.19 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಬಂದ ಹಣದಿಂದ ಆಟೋ ಇಎಂಐ ಹಾಗೂ ಕೈ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿಕೊಂಡಿದ್ದರು. ಈಗ ರಾಕೇಶ್ ಹಾಗೂ ಅಂಜಲಿಗೆ ಪೊಲೀಸರು ಜೈಲು ದರ್ಶನ ಮಾಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಹತ್ಯೆಗೈದಿದ್ದ ಪಾಪಿ ತಾಯಿ ಅರೆಸ್ಟ್‌

  • ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್‌

    ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್‌

    – ತಮಿಳುನಾಡು ಪೊಲೀಸರು ಭೇದಿಸಲಾಗದೇ ಕೈಚೆಲ್ಲಿದ್ದ ಕೇಸ್

    ಚಿಕ್ಕಬಳ್ಳಾಪುರ: ಅದು 6 ವರ್ಷಗಳ ಹಿಂದೆ ನಡೆದ ಕಿಡ್ನಾಪ್ ಮತ್ತು ಕೊಲೆ ಪ್ರಕರಣ. ಆರು ವರ್ಷ ಕಳೆದ್ರೂ ನಿಗೂಢವಾಗಿ ಕಾಣೆಯಾಗಿದ್ದ ಆಟೋ ಚಾಲಕನ ಕೊಲೆ ಆಗಿದೆ ಅಂತ ಗೊತ್ತಿದ್ರೂ, ಆರೋಪಿಗಳ ಬಂಧನ ಆಗೇ ಇರಲಿಲ್ಲ. ಮನೆಯವರು ಸಹ ಸತ್ತವನು ಸತ್ತ ಅಂತ ಸುಮ್ಮನಾಗಿದ್ರು. ಇನ್ನೂ ಕೊಲೆ ಮಾಡಿದವರು ಸಹ ಆರಾಮಾಗಿ ಕೆಲಸ ಕಾರ್ಯ ಮಾಡಿಕೊಂಡು ಒಡಾಡಿಕೊಂಡು ಇದ್ರು. ಆದ್ರೆ 6 ವರ್ಷಗಳ ನಂತರ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

    ಹೌದು. ಹೀಗೆ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಆರೋಪಿಗಳ ಹೆಸರು ಹರೀಶ್ ಅಲಿಯಾಸ್ ಅಫಲ್, ದಿವಾಕರ್, ಮಾರ್ತಾಂಡಾ ಅಲಿಯಾಸ್ ಕೊಂಡಾ, ರಂಜಿತ್ ಕುಮಾರ್ ಅಲಿಯಾಸ್ ಎಗ್ ರೈಸ್ ರಂಜಿತ್, ಮಂಜುನಾಥ ಅಲಿಯಾಸ್ ಕಾಡೆಮ್ಮೆ ಅಂತ. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

    ಅಂದಹಾಗೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಈ ಆರೋಪಿಗಳು 6 ವರ್ಷಗಳಿಂದ ತಮಗೇನು ಗೊತ್ತೆ ಇಲ್ಲ. ತಾವ್ಯಾರನ್ನ ಮರ್ಡರ್ ಮಾಡೇ ಇಲ್ಲ ಕಿಡ್ನಾಪ್ ಅಂತೂ ಮೊದಲೇ ಮಾಡಿಲ್ಲ ಅನ್ನೋ ಹಾಗೆ ಜೀವನ ರೂಪಿಸಿಕೊಂಡು ಒಡಾಡಿಕೊಂಡಿದ್ರು. ಆದ್ರೆ 6 ವರ್ಷಗಳ ನಂತರ ಈಗ ಆರೋಪಿಗಳು ಮಾಡಿರೋ ಕಿಡ್ನಾಪ್ ಕೊಲೆ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸವಾರರಿಗೆ ಗುಡ್‌ನ್ಯೂಸ್‌ – ದಂಡ ಪಾವತಿಗೆ 50% ಡಿಸ್ಕೌಂಟ್ 

    5 ಮಂದಿ ಆರೋಪಿತರು ಸೇರಿದಂತೆ ತಲೆ ಮರೆಸಿಕೊಂಡಿರೋ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ. ಹಾಗೂ ತಮಿಳುನಾಡು ಪೊಲೀಸರ ಬಂಧಿಸಿರೋ ಜಾಕಿ ಅಲಿಯಾಸ್ ಶಿವಶಂಕರ್ ಹಾಗೂ ಇತರರು ಸೇರಿ ಶಿಡ್ಲಘಟ್ಟ ಪಟ್ಟಣದ ರಾಜೀವ್ ಗೌಡ ಬಡಾವಣೆಯ ನಿವಾಸಿ 27 ವರ್ಷದ ಗಿರೀಶ್ ನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ರು. ಶಿಡ್ಲಘಟ್ಟಲ್ಲಿ ಕಿಡ್ನಾಪ್ ಮಾಡಿದ ಆರೋಪಿಗಳು ಗಿರೀಶ್ ನನ್ನ ಕೋಲಾರದ ನರಸಾಪುರ ಹೊಸಕೋಟೆ ಮಾಲೂರು ಮಾರ್ಗದಲ್ಲಿ ಕಾರಿನಲ್ಲಿ ಕಿಡ್ನಾಪ್‌ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ರು. ಬಳಿಕ ಮೃತದೇಹವನ್ನ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ತಳಿ ರಸ್ತೆಯ ಕೆರೆಯೊಂದರಲ್ಲಿ ಬಿಸಾಡಿ ಬಂದಿದ್ರು. ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

    ಕೇಸ್‌ ಹಿನ್ನೆಲೆ ಏನು?
    2019ರ ಮೇ 12ರಂದು ಗಿರೀಶ್‌ನನ್ನ ಕಿಡ್ನಾಪ್ ಮಾಡಲಾಗಿತ್ತು. ಕೊಲೆಯಾದ ಗಿರೀಶ್ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ಆಟೋ ಚಾಲಕನಾಗಿದ್ದ. ಆರೋಪಿಗಳಾದ ಜಾಕಿ, ಹರೀಶ್ ಜೊತೆ ಗಿರೀಶ್ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದ. ಮೂರ್ನಾಲ್ಕು ಬಾರಿ ಜಗಳಗಳಾಗಿದ್ದು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಜಾಕಿ ಹಾಗೂ ಹರೀಶ್. ಪ್ಲ್ಯಾನ್‌ ಪ್ಲಾನ್ ಮಾಡಿ ಗಿರೀಶ್ ಕೊಲೆ ಮಾಡೋಕೆ ಸಂಚು ರೂಪಿಸಿದ್ರು. ಅಪರಿಚಿತ ಮೃತದೇಹ ಸಿಕ್ಕ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡಿನ ತಳಿ ಪೊಲೀಸರು 6 ವರ್ಷಗಳ ಕಾಲ ತನಿಖೆ ಮಾಡಿದ್ರೂ ಸೂಕ್ತ ತನಿಖೆ ನಡೆಸಿರಲಿಲ್ಲ. ಕೊನೆಗೆ ಕರ್ನಾಟಕಕ್ಕೆ ಕೇಸ್ ವರ್ಗಾವಣೆ ಮಾಡಿದ್ದು, ಈಗ ಶಿಡ್ಲಘಟ್ಟ ಪೊಲೀಸರು ಪ್ರಕರಣದಲ್ಲಿನ 5 ಮಂದಿ ಆರೋಪಿಗಳನ್ನ ಬಂಧಿಸಿದ್ದು. ಮತ್ತೋರ್ವ ಆರೋಪಿ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್‌ ನೀರು

  • ಚಿಕ್ಕಬಳ್ಳಾಪುರ | ಬಿಜೆಪಿ ಕಾರ್ಯಕರ್ತರಿಂದ `ಧರ್ಮ ಉಳಿಸಿ ಯಾತ್ರೆ’

    ಚಿಕ್ಕಬಳ್ಳಾಪುರ | ಬಿಜೆಪಿ ಕಾರ್ಯಕರ್ತರಿಂದ `ಧರ್ಮ ಉಳಿಸಿ ಯಾತ್ರೆ’

    ಚಿಕ್ಕಬಳ್ಳಾಪುರ: ಬಿಜೆಪಿ ಕಾರ್ಯಕರ್ತರು (BJP Worker) ದೇವನಹಳ್ಳಿಯಿಂದ ಧರ್ಮಸ್ಥಳಕ್ಕೆ ʻಧರ್ಮ ಉಳಿಸಿ ಯಾತ್ರೆʼ ಕೈಗೊಂಡಿದ್ದಾರೆ.

    ಧರ್ಮಸ್ಥಳದ (Darmasthala) ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಅಂತ ʻಧರ್ಮ ಉಳಿಸಿʼ ಅಭಿಯಾನದ ಹೆಸರಲ್ಲಿ ದೇವನಹಳ್ಳಿಯಿಂದ ಧರ್ಮಸ್ಥಳಕ್ಕೆ ಧರ್ಮ ಉಳಿಸಿ ಯಾತ್ರೆ ಕೈಗೊಂಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಸೇರಿ ಜಿಲ್ಲೆಯ ನಾನಾ ಕಡೆಗಳಿಂದ 250ಕ್ಕೂ ಹೆಚ್ಚು ಕಾರುಗಳ ಮೂಲಕ ದೇವನಹಳ್ಳಿ ಬಳಿಯ ರಾಣಿ ಕ್ರಾಸ್ ನಲ್ಲಿ ಜಮಾಯಿಸಿ ಅಲ್ಲಿಂದ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.

    ದೇವನಹಳ್ಳಿ ಬಳಿ ಘಟನೆಯನ್ನ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನ ಕೂಗಿದರು. 2-3 ದಿನಗಳಲ್ಲಿ ಶೀಘ್ರ ತನಿಖೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.

  • ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ದಂಡು ಹರಿದು ಬಂದಿದ್ದು, ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪ್ರವಾಸಿಗರು ಪರದಾಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮಕ್ಕೆ ವೀಕೆಂಡ್ ಹಿನ್ನೆಲೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು (Tourists) ಆಗಮಿಸಿದ್ದರು. ಈ ಹಿನ್ನೆಲೆ ವಾಹನ ದಟ್ಟನೆಯಿಂದಾಗಿ ಗಿರಿಧಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರವಾಸಿಗರು ಪರದಾಡುವಂತಾಗಿತ್ತು. ಇದನ್ನೂ ಓದಿ: PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಅಲ್ಲದೇ ಪ್ರವೇಶ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಗಿ, ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು. ಸಾವಿರಾರು ಜನ ಪ್ರವಾಸಿಗರಿಗೆ 2 ಕೌಂಟರ್‌ನಲ್ಲಿ ಮಾತ್ರ ಟಿಕೆಟ್ ವಿತರಿಸಲಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಈ ಅವ್ಯವಸ್ಥೆಯ ವಿರುದ್ಧ ಪ್ರವಾಸಿಗರು ಆಕ್ರೋಶ ಹಾಕಿದ್ದಾರೆ.

    ಸುರಿಯುವ ಮಳೆಯನ್ನೂ ಲೆಕ್ಕಿಸದೇ ಟಿಕೆಟ್‌ಗಾಗಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರೆನ್ನದೇ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದರು.

  • ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳದ ಆರೋಪದಡಿ ಮನನೊಂದ ಗೃಹಿಣಿ ತನ್ನ ಕಂದಮ್ಮನ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ಕಸ್ತೂರಿಯಲ್ಲಿ ನಡೆದಿದೆ.

    ಶಾಮಲ (26) ಮೃತ ಗೃಹಿಣಿ. ಶ್ಯಾಮಲ ಮದುವೆಯಾಗಿ 5 ವರ್ಷ ಆಗಿದ್ದು, ಒಂದು ಗಂಡು ಹಾಗೂ ಹೆಣ್ಣು ಮಗು ಇತ್ತು. ಕೆಲಸ ವಿಚಾರ ಹಾಗೂ ಬೇರೆ ಮನೆ ಮಾಡುವ ವಿಚಾರದಲ್ಲಿ ಅತ್ತೆ, ಮಾವ ಹಾಗೂ ಗಂಡನೊಂದಿಗೆ ಪದೇಪದೇ ಜಗಳಗಳು ನಡೆದಿದ್ದವು ಎನ್ನಲಾಗಿದೆ. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

    ಇದೇ ರೀತಿ ನಡೆದ ಜಗಳದಲ್ಲಿ ಎರಡನೇ ಮಗುವಿನ ಸಮೇತ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಮಗುವಿನ ಎದುರಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ. ಸೊಸೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಅತ್ತೆ ಕಿರುಚಾಡಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಶ್ಯಾಮಲ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್‌ ಖಂಡ್ರೆ ಬಾಂಬ್‌

    ಘಟನೆಯ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರಕುಳದ ಪ್ರಕರಣ ದಾಖಲಾಗಿದೆ.

  • ಡ್ರೈವರ್‌ ಬಾಬು ಆತ್ಮಹತ್ಯೆ ಕೇಸ್‌ – ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ FIR

    ಡ್ರೈವರ್‌ ಬಾಬು ಆತ್ಮಹತ್ಯೆ ಕೇಸ್‌ – ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ FIR

    ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ (Congress Vs BJP) ನಡುವೆ ರಾಜಕೀಯ ಜಟಾಪಟಿ ಜೋರಾಗಿದೆ.

    ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ (Dr. K Sudhakar) ಬೆಂಬಲಿಗರ ನಡುವೆ ಫೋಸ್ಟರ್ ವಾರ್ ನಡೆದಿತ್ತು. ಇದೀಗ ಘಟನೆ ಸಂಬಂಧಿಸಿದಂತೆ ಸಂಸದ ಸುಧಾಕರ್ ಬೆಂಬಲಿಗ, ಮುನಿರಾಜು ಎಂಬಾತ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರ ವಿರುದ್ಧ ಆಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಂಸದ ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್‌ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ

    ಸುಧಾಕರ್ ಬೆಂಬಲಿಗರ ವಿರುದ್ಧವೂ ಪ್ರತಿದೂರು
    ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಇತ್ತ ಸಂಸದ ಸುಧಾಕರ್ ಬೆಂಬಲಿಗರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸಂಸದ ಸುಧಾಕರ್ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಗಜೇಂದ್ರ ಆತನ ಸಹೋದರ ರವಿ, ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ಪ್ರದೀಪ್ ಈಶ್ವರ್ ಬೆಂಬಲಿಗ ಮೊಹಮ್ಮದ್‌ ಹಮೀಮ್ ಎಂಬಾತ ಹಲ್ಲೆ ಮಾಡಿ ಪ್ರಾಣ ಬೆದರಕೆ ಹಾಕಿರುವುದಾಗಿ ದೂರು ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎರಡು ಕಡೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ. ಇದನ್ನೂ ಓದಿ: ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

  • ಸಂಸದ ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್‌ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ

    ಸಂಸದ ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್‌ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ

    – ಮೃತ ವ್ಯಕ್ತಿ ಕುಟುಂಬಸ್ಥರಿಗೆ ಕಾಂಗ್ರೆಸ್‌ ಶಾಸಕ ಸಾಂತ್ವನ

    ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ನಡುವೆ ಭಾನುವಾರ ಮೃತ ಬಾಬು ನಿವಾಸಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಬು ಪತ್ನಿ ಶಿಲ್ಪಾ ಹಾಗೂ ತಾಯಿ ಕಾಳಮ್ಮ ಸೇರಿದಂತೆ ಸಹೋದರ ಲೋಕೇಶ್‌ಗೆ ಧೈರ್ಯ ಹೇಳಿದರು. ಈ ವೇಳೆ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಸುಧಾಕರ್‌ಗೆ ಸವಾಲು ಹಾಕಿದರು. ಇದನ್ನೂ ಓದಿ: ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್‌ – ಸಂಸದ ಡಾ. ಕೆ.ಸುಧಾಕರ್ ವಿರುದ್ಧ FIR ದಾಖಲು

    ಮೃತ ಬಾಬು ಪತ್ನಿ ಶಿಲ್ಪಾಗೆ ಸರ್ಕಾರಿ ಕೆಲಸ ಕೊಡಿಸುವಂತೆ ಸಂಬಂಧಿಕರು ಪ್ರದೀಪ್‌ ಈಶ್ವರ್‌ಗೆ ಬೇಡಿಕೆ ಇಟ್ಟಿದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ತಾಯಿ ಕಾಳಮ್ಮಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಕೊಡಿಸುವ ಭರವಸೆ ಕೊಟ್ಟರು. ಸಹೋದರ ಲೋಕೇಶ್‌ಗೂ ಹೃದಯ ಸಂಬಂಧಿ ಸಮಸ್ಯೆ ಇದೆ ಅಂತ ತಿಳಿದು ಅವರ ಆರೋಗ್ಯಕ್ಕಾಗಿ ಸಹಾಯ ಹಾಗೂ ಕೆಲಸ ಕೊಡಿಸುವುದಾಗಿ ಹೇಳಿದರು. ಸರ್ಕಾರದಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಡಿ ಬರುವ 8 ಲಕ್ಷ ರೂಪಾಯಿ ಪರಿಹಾರವನ್ನ ಅದಷ್ಟು ಬೇಗ ಕೊಡಿಸುತ್ತೇನೆ. ವೈಯುಕ್ತಿಕವಾಗಿ ಅರ್ಥಿಕವಾಗಿಯೂ ಸಹ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.

    ಎಫ್‌ಐಆರ್‌ನಲ್ಲಿ ಸಂಸದ ಸುಧಾಕರ್ ಹೆಸರು ಸೇರ್ಪಡೆಗೆ ಬಿಜೆಪಿ ನಾಯಕರ ಅಕ್ಷೇಪಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಇಲ್ಲ. ಗೌರಿಬಿದನೂರಿಗೆ ಬಂದು ಸುದ್ದಿಗೋಷ್ಟಿ ಮಾಡುವ ಬದಲು ಬಾಬು ಮನೆಗೆ ಬಂದು ಕಣ್ಣೀರು ಒರೆಸಬಹುದಿತ್ತಲ್ಲ? ಸಂಸದ ಸುಧಾಕರ್ ಅವರೇ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದ್ರೆ ನಿಮ್ಮದೇ ಕೇಂದ್ರ ಸರ್ಕಾರ ಇದೆಯಲ್ಲ. ಸಿಬಿಐ ತನಿಖೆ ಮಾಡಿಸಿ ಆರೋಪದಿಂದ ಮುಕ್ತರಾಗಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

    ಮಗನ ನೆನೆದು ಕುಟುಂಬಸ್ಥರು ಶಾಸಕರ ಎದುರು ಕಣ್ಣೀರಿಟ್ಟರು. ಬಿಜೆಪಿಯವರು ಆರೋಪ ಮಾಡಿದಂತೆ ನಾವು ಯಾರು ಕೂಡ ಒತ್ತಡದಿಂದ ದೂರು ದಾಖಲಿಸಿಲ್ಲ. ನಮ್ಮ ಮಗ ಬರೆದಿರುವ ಡೆತ್‌ನೋಟ್ ಆಧಾರದ ಮೇಲೆಯೇ ದೂರು ನೀಡಿದ್ದೇವೆ. ರಾಜಕಾರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ಮೃತ ಬಾಬು ತಾಯಿ ಕಾಳಮ್ಮ ಸ್ಪಷ್ಟಪಡಿಸಿದ್ದಾರೆ.

  • ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    – ಯಲಹಂಕದಿಂದ ಧರ್ಮಸ್ಥಳಕ್ಕೆ 200ಕ್ಕೂ ಹೆಚ್ಚು ಕಾರುಗಳಿಂದ ರ‍್ಯಾಲಿ
    – ಅನಾಮಿಕನನ್ನ ಗಲ್ಲಿಗೇರಿಸುವಂತೆ ಬಿಜೆಪಿ ಶಾಸಕ ಆಗ್ರಹ

    ಚಿಕ್ಕಬಳ್ಳಾಪುರ: ಧರ್ಮಸ್ಥಳದಲ್ಲಿ (Dharmasthala) ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಠ ಹಾಗೂ ಪವಿತ್ರವಾದ ಕ್ಷೇತ್ರ, ಹೀಗಾಗಿ ಧರ್ಮಸ್ಥಳದ ಜೊತೆ ನಾವು ಇದ್ದೇವೆ ಎಂದು ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ *(SR Vishwanath) ಹೇಳಿದರು.

    ಚಿಕ್ಕಬಳ್ಳಾಪುರ (Chikkaballapura)ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಶಾಸಕರು, ಧರ್ಮಸ್ಥಳ ಮಂಜುನಾಥಸ್ವಾಮಿ ತುಂಬಾ ಪವರ್‌ಫುಲ್, ಮಂಜುನಾಥಸ್ವಾಮಿ ಮೇಲೆ ಅಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ಆಗಸ್ಟ್ 16 ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್‌ ರ‍್ಯಾಲಿ (Dharmasthala Chalo Rally) ಹಮ್ಮಿಕೊಳ್ಳಲಾಗಿದೆ. 200ಕ್ಕೂ ಹೆಚ್ಚು ಕಾರುಗಳ ಮೂಲಕ ʻಧರ್ಮಸ್ಥಳದೊಂದಿಗೆ ನಾವಿದ್ದೇವೆʼ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರೆ ಕ್ಷೇತ್ರಗಳಿಂದಲೂ ಈ ಆಭಿಯಾನ ಆರಂಭವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ಅನಾಮಿಕನನ್ನ ಗಲ್ಲಿಗೇರಿಸಿ
    ಇನ್ನೂ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಯಾದವರನ್ನ ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದ್ರೆ, ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದ್ರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?

    ನ್ನೂ ಈತ ಅನಾಥ ಶವಗಳನ್ನ ಊಳುವವನಾಗಿದ್ದು ಅನಾಥ ಶವಗಳ ಮೇಲಿನ ಚಿನ್ನಾಭರಣ ಕದ್ದು ಅಂತ ಕೆಲಸದಿಂದ ತೆಗದು ಹಾಕಿದ್ರು ಅಂತ ಗೊತ್ತಾಗಿದೆ. ಈಗ ಬಂದು ಮಂಜುನಾಥ ಸ್ವಾಮಿಯ ಮೇಲೆಯೇ ಅಪಪ್ರಚಾರ ಮಾಡುತ್ತಿದ್ದಾನೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವ ತೆಗೆಯಿತು ವೈಟ್ ಶರ್ಟ್ – ಟಾರ್ಗೆಟ್ ಮಾಡಿದವನನ್ನ ಬಿಟ್ಟು ಮತ್ತೊಬ್ಬನ ಹತ್ಯೆ