Tag: Chikkaballapura Police

  • ಚಿಕ್ಕಬಳ್ಳಾಪುರ ರೇಪ್‌ ಕೇಸ್‌ | ಅನ್ಯಕೋಮಿನ ವ್ಯಕ್ತಿಯಿಂದ ಕೃತ್ಯ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

    ಚಿಕ್ಕಬಳ್ಳಾಪುರ ರೇಪ್‌ ಕೇಸ್‌ | ಅನ್ಯಕೋಮಿನ ವ್ಯಕ್ತಿಯಿಂದ ಕೃತ್ಯ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

    – ಡ್ರಾಪ್ ಕೊಡುವ ನೆಪದಲ್ಲಿ ನಡೆದೇಹೋಯ್ತು ಕೃತ್ಯ
    – ಹೊಸ ಬಟ್ಟೆ ತರ್ತೀನಿ ಅಂತ ಸ್ನೇಹಿತನನ್ನ ಕರೆಸಿ ಮತ್ತೆ ರೇಪ್‌

    ಚಿಕ್ಕಬಳ್ಳಾಪುರ: ಆಕೆ ಬಿಕಾಂ ಪದವೀಧರೆ (BCom Graduate) ಕೆಲಸ ಹುಡುಕೋಣ ಅಂತ ಹಳ್ಳಿಯಿಂದ ನಗರಕ್ಕೆ ಬಂದಿದ್ಲು. ಆದ್ರೆ ಕೆಲಸ ಸಿಗಲಿಲ್ಲ ಹೀಗಾಗಿ ಮರಳಿ ಹಳ್ಳಿಯತ್ತ ನಡೆದುಕೊಂಡು ಹೋಗ್ತಿದ್ದ ಯುವತಿಗೆ ದಾರಿ ಮಧ್ಯೆ ಡ್ರಾಪ್ (Bike Drop) ಕೋಡೋದಾಗಿ ಹೇಳಿ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಪಾಪಿ ತಾನು ಮಾತ್ರವಲ್ಲದೇ ಸ್ನೇಹಿತನನ್ನ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.

    ಇಡೀ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ಹೌದು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಡಾವಣೆಯೊಂದರಲ್ಲಿ ಕಾಮುಕನೊಬ್ಬ ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅರೆಸ್ಟ್

    ಸಂತ್ರಸ್ತೆ ಚಿಕ್ಕಬಳ್ಳಾಪುರದ (Chikkaballapura) ಹಳ್ಳಿಯೊಂದರ ನಿವಾಸಿ. ಬಿಕಾಂ ಪಧವೀಧರೆಯಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಕೆಲಸ ಹುಡುಕಿಕೊಂಡೇ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಳೆ. ಕೆಲಸ ಸಿಗದೇ ಇದ್ದಾಗ ತಮ್ಮೂರಿಗೆ ತಮ್ಮೂರಿಗೆ ವಾಪಸ್ ಹೋಗೋಣ ಅಂತ ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಳು. ಇದೇ ದಾರಿಯಲ್ಲಿ ಸಾಗುತ್ತಿದ್ದ ಚಿಕ್ಕಬಳ್ಳಾಪುರದ ಟ್ರ‍್ಯಾಕ್ಟರ್ ಮೆಕ್ಯಾನಿಕ್ ಸಿಖಂದರ್ ಎಂಬಾತ ರಸ್ತೆಯಲ್ಲಿ ಒಂಟಿ ಯುವತಿ ಕಂಡು ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಟಿ ಹತ್ತಿಸಿಕೊಂಡಿದ್ದಾನೆ. ಸೀದಾ ಗೌರಿಬಿದನೂರು ಮಾರ್ಗದ ಕಣಿವೆ ಇಳಿತಿದ್ದಂತೆ ಬಡಾವಣೆಯೊಂದರೊಳಗೆ ಸ್ಕೂಟಿ ತಿರುಗಿಸಿ ಅಲ್ಲೇ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ʻಬಂಗಾರʼ ಬದುಕು ಕಸಿದ ಕಾಮುಕರು
    ಇನ್ನೂ ಅತ್ಯಾಚಾರ ಮಾಡಿದ ಕಾಮುಕರು ಆಕೆಯ ಕಿವಿಯಲ್ಲಿದ್ದ ಬಂಗಾರದ ಒಲೆ ಕಸಿದುಕೊಂಡಿದ್ದಾರೆ. ನಂತರ ಆಕೆಗೆ ಹೊಸ ಬಟ್ಟೆ ತರುವುದಾಗಿ ಹೇಳಿ ಹೋಗಿದ್ದಾನೆ. ನಂತರ ಚಿಕ್ಕಬಳ್ಳಾಪುರಕ್ಕೆ ಹೋಗಿ ತನ್ನ ಸ್ನೇಹಿತ ಜನಾರ್ಧನಾಚಾರಿ ಎಂಬಾತನನ್ನು ಕರೆದುಕೊಂಡು ಬಂದು ಪುನಃ ಆಕೆಯನ್ನ ಅದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮತ್ತೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ.

    ರಾತ್ರಿವರೆಗೆ ಶಾಕ್‌ನಲ್ಲೇ ಇದ್ದ ಯುವತಿ
    ಎರಡು ಬಾರಿ ಅತ್ಯಾಚಾರ ಮಾಡಿದ ಆರೋಪಿಗಳು ಸೀದಾ ಅಕೆಯನ್ನ ಕರೆತಂದು ಕೊನೆಗೆ ಪೆಟ್ರೋಲ್ ಬಂಕ್‌ವೊಂದರ ಬಳಿ ಬಿಟ್ಟು ಎಸ್ಕೇಪ್ ಅಗಿದ್ದಾರೆ. ಘಟನೆಯಿಂದ ಶಾಕ್‌ಗೆ ಗುರಿಯಾಗಿ ರಾತ್ರಿ ಆದ್ರೂ ಅಲ್ಲೇ ಇದ್ದ ಯುವತಿ ಕಂಡು ಶಿಲ್ಪಗೌಡ ಎಂಬ ಮಹಿಳೆ ಈಕೆಯನ್ನು ವಿಚಾರಿಸಿ ಉಪಚರಿಸಿದಾಗ ಯುವತಿ ನಡೆದ ಘಟನೆ ವಿವರಿಸಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಸಂತ್ರಸ್ತ ಯುವತಿಗೆ ಚಿಕಿತ್ಸೆ ನೀಡಿ ಮಹಿಳಾ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಘಟನೆ ಕುರಿತು ʻಪಬ್ಲಿಕ್‌ ಟಿವಿʼಜೊತೆಗೆ ಮಾತನಾಡಿರುವ ಮಹಿಳೆ ಶಿಲ್ಪಗೌಡ, ಮುಸ್ಲಿಂ ವ್ಯಕ್ತಿಯೊಬ್ಬ ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ, ಡ್ರಾಪ್‌ ಕೊಡ್ತೀನಿ ಅಂತ ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ. ಅಲ್ಲೊಂದು ಅಜ್ಜಿ ಮನೆ ಬಳಿ ಕೂರಿಸಿದ್ದಾನೆ. ನಮ್ಮ ತೋಟದಲ್ಲೇ ಅವರ ತಂದೆ-ತಾಯಿ ಕೆಲಸ ಮಾಡ್ತಿದ್ದಾರೆ, ಈಕೆಗೆ ಮೆಂಟಲ್‌ ಕಂಡೀಷನ್‌ ಸರಿಯಿಲ್ಲ ಅಂತ ಕೂರಿಸಿರುತ್ತಾನೆ. ಬಳಿಕ ಸ್ನೇಹಿತನನ್ನ ಕರೆದುಕೊಂಡು ಬಂದು ಕಣಿವೆ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡ್ತಾರೆ. ಆಕೆ ಕಿರುಚಿದಾಗ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಚಿನ್ನ ಕಸಿದು ಪೆಟ್ರೋಲ್‌ ಬಂಕ್‌ ಬಳಿ ಆಕೆಯನ್ನ ಬಿಟ್ಟು ಹೋಗಿದ್ದಾರೆ. ಶಾಕ್‌ನಲ್ಲಿದ್ದ ಯುವತಿ ಇಡೀ ರಾತ್ರಿ ಅಲ್ಲೇ ಮಲಗಿದ್ದಾಳೆ. ಅಸಹಾಯಕತೆಯಿಂದ ಏನೂ ಮಾಡೋದಕ್ಕೆ ಆಗಿಲ್ಲ. ಮರುದಿನ ಉಪಚರಿಸಿದ ನಂತರ ಆಕೆ ಘಟನೆ ವಿವರಿಸಿದ್ದಾಳೆ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ್ದಾರೆ.

  • ಚಿಕ್ಕಬಳ್ಳಾಪುರ | ತಂದೆ ಸಾವಿನಿಂದ ಮನನೊಂದು ಮಗಳೂ ಆತ್ಮಹತ್ಯೆ!

    ಚಿಕ್ಕಬಳ್ಳಾಪುರ | ತಂದೆ ಸಾವಿನಿಂದ ಮನನೊಂದು ಮಗಳೂ ಆತ್ಮಹತ್ಯೆ!

    – ಬೆಂಗಳೂರಲ್ಲಿ ಎಂಎಸ್ಸಿ ಓದುತ್ತಿದ್ದ ಸ್ವರ್ಣ

    ಚಿಕ್ಕಬಳ್ಳಾಪುರ: ತಂದೆಯ ಸಾವಿನಿಂದ ಮನನೊಂದ ಮಗಳು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.

    ಗೌರಿಬಿದನೂರು ನಗರೆದ ನಾಗಿರೆಡ್ಡಿ ಬಡಾವಣೆಯ 22 ವರ್ಷದ ಸ್ವರ್ಣ ಮೃತ ಮಗಳು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡ್ತಿದ್ದ ಸ್ವರ್ಣ ಕಾಲೇಜಿನ ಹಾಸ್ಟೆಲ್‌ನಲ್ಲಿ (College Hostel) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ

    ಮನೆಗೆ ಬಂದಿದ್ದ ಮಗಳನ್ನ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಳು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಸ್ವರ್ಣ ಸಾವನ್ನಪ್ಪಿದ್ದಾಳೆ. ಈಕೆ ತಂದೆ ಕಳೆದ 3 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅಂದಿನಿಂದಲೂ ಮಾನಸಿಕವಾಗಿ ಕುಗ್ಗಿ ಹೋಗಿ ಕಿನ್ನೆತೆಗೆ ಓಳಗಾಗಿದ್ದ ಸ್ವರ್ಣ ಸೂಸೈಡ್ ಮಾಡಿಕೊಂಡು ಈಗ ತಂದೆಯ ಹಾದಿ ಹಿಡಿದಿದ್ದಾಳೆ. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ಐವರು ಅಧಿಕಾರಿಗಳ ಮುಂದೆ ಹಾಜರ್‌!

    ಇನ್ನೂ ಒಂದ್ಕಡೆ ಗಂಡ ಮತ್ತೊಂದ್ಕಡೆ ಮಗಳು ಆತ್ಮಹತ್ಯೆ ಹಾದಿ ಹಿಡಿದಿದ್ದು ಇರೋ ಮಗನೊಂದಿಗೆ ತಾಯಿ ದಿಕ್ಕು ತೋಚದಂತಾಗಿದ್ದಾರೆ. ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು ತಾಯಿಗೆ ಆತಂಕ ಭಯ ಮೂಡಿಸಿದೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಮೃತ ಸ್ವರ್ಣ ತಾಯಿ ಬಳಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

  • ಅಪ್ರಾಪ್ತೆಯೊಂದಿಗೆ ಪ್ರೇಮ ವೈಫಲ್ಯ ಶಂಕೆ – ʻಮಿಸ್ ಯು ಚಿನ್ನʼ ಅಂತ ಪೋಸ್ಟ್‌ ಮಾಡಿ ಯುವಕ ನೇಣಿಗೆ ಶರಣು

    ಅಪ್ರಾಪ್ತೆಯೊಂದಿಗೆ ಪ್ರೇಮ ವೈಫಲ್ಯ ಶಂಕೆ – ʻಮಿಸ್ ಯು ಚಿನ್ನʼ ಅಂತ ಪೋಸ್ಟ್‌ ಮಾಡಿ ಯುವಕ ನೇಣಿಗೆ ಶರಣು

    – ಹುಡುಗಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
    – ಬೇರೊಬ್ಬನನ್ನ ಲವ್‌ ಮಾಡುತ್ತಾ, ಚಿರುತ್‌ನನ್ನ ಅವಾಯ್ಡ್‌ ಮಾಡ್ತಿದ್ದಳಂತೆ ಹುಡುಗಿ

    ಚಿಕ್ಕಬಳ್ಳಾಪುರ: ಆತನಿಗೆ ಇನ್ನೂ 18 ವರ್ಷ ವಯಸ್ಸು. ಆದ್ರೆ ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟವೂ ಆಡಿದ್ದ. ಇದ್ದಕ್ಕಿದ್ದಂತೆ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್‌ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಬಳಿ ನಡೆದಿದೆ.

    ಬಾಲಕುಂಟಹಳ್ಳಿ ಗ್ರಾಮದ 18 ವರ್ಷದ ಯುವಕ ಚಿರುತ್ ಕುಮಾರ್ ಆತ್ಮಹತ್ಯೆ (Suicide) ಮಾಡಿಕೊಂಡವ. ಅಂದಹಾಗೆ ಸಾಯುವ ಮುನ್ನ ʻಮಿಸ್ ಯು ಚಿನ್ನʼ ಅಂತ ಆಕೆಯೊಂದಿಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕೆಯ ವೇಲ್‌ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    SSLCನಲ್ಲಿ ಒಂದಲ್ಲ ಎರಡಲ್ಲ ಅಂತ ಮೂರು ಬಾರಿ ಫೇಲ್ ಆಗಿದ್ದ ಚಿರುತ್ ಊರಲ್ಲೇ ಕೃಷಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಜಮೀನು ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೆ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಚಿರುತ್ ಕುಮಾರ್ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಅನ್ನೋದು ಆರಂಭದಲ್ಲಿ ಸಂಬಂಧಿಕರಿಗೂ ಗೊತ್ತಾಗಿರಲಿಲ್ಲ. ಕೊನಗೆ ಆತನ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನ ಜಾಲಾಡಿದಾಗ ಆತ ಸಾಯುವ ಮುನ್ನ ಅಪ್ರಾಪ್ತ ಬಾಲಕಿಯೊಂದಿಗೆ ಇರುವ ಫೋಟೋಗಳನ್ನ ಹಾಕಿಕೊಂಡಿದ್ದಾನೆ. ಇದ್ರಿಂದ ಪ್ರೇಮ ವೈಫಲ್ಯದಿಂದಲೇ ಚಿರುತ್ ಕುಮಾರ್ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಈ ಹಿಂದೆಯೂ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್ ಮಾಡಿದ್ದನಂತೆ. ಆಗ ಸ್ನೇಹಿತರೇ ಹೋಗಿ ಅವನಿಗೆ ಬುದ್ದಿ ಮಾತು ಹೇಳಿ ಮನೆಗೆ ಕರೆದುಕೊಂಡು ಬಂದಿದ್ರಂತೆ. ಆದ್ರೆ ಮೂರನೇ ಬಾರಿ ಸೂಸೈಡ್ ಮಾಡಿಕೊಂಡು ಸಾವಿನ ಮನೆ ಸೇರಿಕೊಂಡಿದ್ದಾನೆ.

    ಇನ್ನೂ ಅಪ್ರಾಪ್ತ ಬಾಲಕಿ, ಚಿರುತ್‌ನನ್ನ ಬಿಟ್ಟು ಬೇರೆ ಯಾರೋ ಹುಡುಗನನ್ನ ಪ್ರೀತಿ ಮಾಡುತ್ತಿದ್ದಳಂತೆ, ಚಿರುತ್ ಫೋನ್‌ ರಿಸೀವ್ ಮಾಡದೇ ಅವಾಯ್ಡ್‌ ಮಾಡಿದ್ಲಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಆಪ್ತ ಸ್ನೇಹಿತರು ಬಳಗದಿಂದ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

  • ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    – ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆ; 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
    – ಮಸೀದಿ-ಮಂದಿರ-ಚರ್ಚ್‌ಗಳ ಬಳಿ ವಿಶೇಷ ಭದ್ರತೆ

    ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಗಣೇಶ ವಿಸರ್ಜನಾ ಮೆರವಣಿಗೆಗಳು (Ganesha Visarjan Procession) ಜೋರಾಗಿ ಸಾಗುತ್ತಿದ್ದರೆ, ಕೆಲ ಕಡೆಗಳಲ್ಲಿ ನಡೆದ ಅಹಿತಕರ ಘಟನೆಗಳಿಂದ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟದಿಂದ ಇಬ್ಬರು ಬಾಲಕರ ಸಾವು, ಮದ್ದೂರಿನಲ್ಲಿ ಕಲ್ಲುತೂರಾಟ ಗಲಾಟೆ, ಹಾಸನದಲ್ಲಿ ಮೆರವಣಿಗೆಯ ವೇಳೆ ಆದ ಅಪಘಾತದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರೂ (Chikkaballapura Police) ಫುಲ್‌ ಅಲರ್ಟ್‌ ಆಗಿದ್ದಾರೆ.

    ಗೌರಿಬಿದನೂರು ಬೈಪಾಸ್ ಗಣೇಶನ ವಿಶೇಷ
    ಪ್ರತಿಷ್ಠಿತ ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪೆಂಡಾಲ್‍ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಮಾದರಿಗಳನ್ನು ಅಲಂಕರಿಸಿರುವುದು ಭಕ್ತರ ಗಮನ ಸೆಳೆದಿದೆ. ಭಾನುವಾರ ನಡೆಯಲಿರುವ ಗಂಗಾವಿಲೀನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹಾಸನ ದುರಂತ – ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್

    ಪೊಲೀಸರ ತಯಾರಿ ಹೇಗಿದೆ?
    ಸಂಭಾವ್ಯ ಅಹಿತಕರ ಘಟನೆಗಳನ್ನ ತಪ್ಪಿಸಲು ಜಿಲ್ಲೆಯ ಎಸ್ಪಿ ಕುಶಲ್ ಚೌಕ್ಸಿ ನೇತೃತ್ವದಲ್ಲಿ ಹಲವು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೌರಿಬಿದನೂರು ಪಟ್ಟಣದಲ್ಲಿ ಭಾರೀ ಪೊಲೀಸರ ಪಥಸಂಚಲನ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಮೆರವಣಿಗೆ ಸರಿಸುಮಾರು ಸಂಜೆ 8ರ ವರೆಗೆ ಸಾಗಲಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿದೆ. ಮಸೀದಿ, ಮಂದಿರ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳ ಬಳಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ. ಸಿಸಿ ಟಿವಿಗಳನ್ನ ಆಳವಡಿಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಸಹ ಮಾಡಿಸಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

    ಪೊಲೀಸರಿಂದ ಸಾರ್ವಜನಿಕರಿಗೆ ಸಂದೇಶ
    ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ ಸಹಕಾರ ನಿಡಬೇಕು ಎಂದು ಎಸ್‍ಪಿ ಕುಶಲ್ ಚೌಕ್ಸಿ ಮನವಿ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆಗೆ ಕಟ್ಟಿನಿಟ್ಟಿನ ಭದ್ರತೆ ಒದಗಿಸಲು ಮುಂದಾಗಿರುವ ಪೊಲೀಸರು ಭಕ್ತರು ಶಾಂತಿಯುತವಾಗಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ ಮೋದಿ ಸಂತಾಪ

  • ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    – ವಿಶ್ವ ಆತ್ಮಹತ್ಯೆ ತಡೆ ದಿನದಂದು ಆತಂಕಕಾರಿ ವರದಿ
    – ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಕಾರಣಗಳೇನು?

    ಚಿಕ್ಕಬಳ್ಳಾಪುರ: ಜೀವನ ಎಂಬುದು ಅತ್ಯಮೂಲ್ಯವಾದದ್ದು, ಆದ್ರೆ ಕೆಲವು ಬಾರಿ ಸಮಸ್ಯೆಗಳು ಬಂದಾಗ ಸರಿಯಾಗಿ ಎದುರಿಸಲಾಗದೆಯೋ, ಖಿನ್ನತೆಗೆ ಓಳಗಾಗಿಯೋ, ಇಲ್ಲ ದುಡುಕಿಯೋ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯೊಂದರಲ್ಲೇ ಮೂರು ವರ್ಷಗಳಲ್ಲಿ ಕಳೆಯೋದ್ರಳೋಗೆ 536 ಮಂದಿ ಆತ್ಮಹತ್ಯೆ ಮಾಡಿಕೊಂಡಿರುರುವುದು ವಿಶ್ವ ಆತ್ಮಹತ್ಯೆ ತಡೆ ದಿನದಂದು (World Suicide Prevention Day) ಹೊರಬಿದ್ದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

    ಮಹಿಳೆಯರಿಗಿಂತ ಪುರುಷರ ಸಂಖ್ಯೆಯ ಹೆಚ್ಚು?
    ಇತ್ತೀಚಿನ ದಿನಮಾನಗಳಲ್ಲಿ ಆತ್ಮಹತ್ಯೆ ಎಂಬುದು ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ. ಮಕ್ಕಳು, ಯುವಕ-ಯುವತಿಯರು, ಅದ್ರಲ್ಲೂ ಗೃಹಿಣಿಯರು ಸಣ್ಣ ಪುಟ್ಟ ಕಾರಣಗಳಿಗೂ ಬದುಕಿನ ಪಯಣವನ್ನೇ ಮುಗಿಸುವ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಜೀವನ ಅಂದ ಮೇಲೆ ನೋವು ನಲಿವು ಕಷ್ಟ ಸುಖ ದುಃಖ ದುಮ್ಮಾನಗಳೆಲ್ಲವೂ ಸಾಮಾನ್ಯ ಎಂಬಂತೆ ಸ್ವೀಕರಿಸಲಾಗದೆ ಕೆಲವರು ತಮ್ಮನ್ನೇ ತಾವೇ ಸಾವಿನ ಮನೆಗೆ ಕರೆದೊಯ್ದುಕೊಳ್ಳುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕಳೆದ ಮೂರೇ ವರ್ಷಗಳಲ್ಲೇ 536 ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆ ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೊ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಳ್ಳೊವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ ಪೊಲೀಸ್‌ ದಾಖಲೆಗಳ ಪ್ರಕಾರ ಅಧಿಕೃತವಾಗಿ 536 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲಿ 404 ಜನ ಪುರುಷರು ವಿಷ ಸೇವಿಸಿ, ನೇಣು, ಬಿಗಿದುಕೊಂಡು, ಬೆಂಕಿ ಹಚ್ಚಿಕೊಂಡು, ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 132 ಜನ ಮಹಿಳೆಯರು ಸಹ ಸಾವನ್ನಪ್ಪಿದ್ದಾರೆ.

    ಆತ್ಮಹತ್ಯೆಗೆ ಕಾರಣಗಳೇನು?
    ಬಹುತೇಕ ಮಂದಿ ವಿಷ ಸೇವನೆ, ನೇಣು, ಬೆಂಕಿ ಹಚ್ಚಿಕೊಳ್ಳುವುದು, ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಕಲಹ, ವಿದ್ಯಾಭ್ಯಾಸದ ಒತ್ತಡ, ಪ್ರೇಮ ವೈಫಲ್ಯ, ಉದ್ಯೋಗದ ಒತ್ತಡ, ಉದ್ಯೋಗ ಇಲ್ಲದಿರುವುದು, ಖಿನ್ನತೆ, ನಿರಾಶೆ ಆತ್ಮಹತ್ಯೆಗೆ ಕಾರಣವಾಗಿದೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್

    ಎಸ್ಪಿ, ಆರೋಗ್ಯಾಧಿಕಾರಿಗಳು ಏನು?
    ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಪೊಲೀಸ್‌ ದಾಖಲೆಗಳ ಪ್ರಕಾರ, ಕಳೆದ 3 ವರ್ಷಗಳಲ್ಲಿ 536 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಅಂತ ಚಿಕ್ಕಬಳ್ಳಾಪುರ ಎಸ್‍ಪಿ ಕುಶಲ್ ಚೌಕ್ಸಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ “ವಿದ್ಯಾರ್ಥಿಗಳು, ಯುವಕರು, ವಿವಾಹಿತರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕುಟುಂಬ ಕಲಹ, ವಿದ್ಯಾಭ್ಯಾಸ ಒತ್ತಡ, ಪ್ರೇಮ ವೈಫಲ್ಯ ಪ್ರಮುಖ ಕಾರಣಗಳಾಗಿದ್ದು ಆತ್ಮಹತ್ಯೆಗಳನ್ನ ತಡೆಗಟ್ಟಲು ಜಾಗೃತಿ ಮೂಡಿಸುವ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್

    ರಾಜ್ಯದಲ್ಲಿ 2ನೇ ಸ್ಥಾನ:
    ಇನ್ನೂ ದೇಶದಲ್ಲೇ ಕರ್ನಾಟಕ ಆತ್ಮಹತ್ಯೆಗಳ ಸಂಖ್ಯೆಯ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿದ್ದು, 15 ರಿಂದ 30 ವರ್ಷದೊಳಗಿನ ಯುವಜನರೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಸಾಂಕ್ರಾಮಿಕಕ್ಕಿಂತಲೂ ಬೇಗ ಹರಡುತ್ತಿರುವ ಗಂಭೀರ ಸ್ವರೂಪದ ಸಾಮಾಜಿಕ ಸಮಸ್ಯೆಯಾಗುತ್ತಿದೆ. ಏನೇ ಆದ್ರೂ ಆತ್ಮಹತ್ಯೆಗೆ ಪರಿಹಾರಗಳು ಇಲ್ಲದಿರಬಹುದು. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರಗಳು ಇದ್ದೇ ಇರಲಿವೆ. ಕೊಂಚ ತಾಳ್ಮೆಯಿಂದ ಯೋಚನೆ ಮಾಡಿ ನಿಮಿಷ ದುಡಕದೆ ಮುಂದೂಡಿ ಸಮಯ ಕಳೆದರೆ ಸಾಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆತ್ಮಹತ್ಯೆ ತಡಗೆಟ್ಟುವ ಸಲುವಾಗಿ ಮತ್ತಷ್ಟು ಮುಂಜಾಗ್ರತಾ ಕಾರ್ಯಕ್ರಮಗಳನ್ನ ರೂಪಿಸಬೇಕಿದೆ. ಇದನ್ನೂ ಓದಿ: ಜೈಲು ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ – ಬಾಂಬೆ ಸಲೀಂ ಚಿಕ್ಕಬಳ್ಳಾಪುರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್

  • ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಹೆಡ್‌ ಕಾನ್ಸ್‌ಟೇಬಲ್‌ (Head Constable) ಒಬ್ಬರು ಪೊಲೀಸ್‌ ಠಾಣೆ ಆವರಣದಲ್ಲೇ ಇರುವ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.

    ಮಂಚೇನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ರಾಜಶೇಖರ್ (45) ಆತ್ಯಹತ್ಯೆ ಮಾಡಿಕೊಂಡವರು. ಠಾಣಾ ಆವರಣದಲ್ಲಿದ್ದ ಕ್ವಾಟ್ರಸ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಇಬ್ಬರೂ ಪಾಲಿಸುತ್ತೇವೆ – ಮತ್ತೆ ಸಿಎಂ ಸ್ಪಷ್ಟನೆ

    ಕಾರಣ ಏನು?
    ಮೊಬೈಲ್ ಆನ್‌ಲೈನ್ ಜೂಜಾಟಗಳಿಗೆ (Online gambling) ದಾಸನಾಗಿದ್ದ ಕಾನ್ಸ್‌ಟೇಬಲ್‌ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಹಲವರ ಬಳಿ ಬಡ್ಡಿಗೆ ಕೈಸಾಲ ಮಾಡಿಕೊಂಡಿದ್ದರು. ಈ ಬಗ್ಗೆ ತನ್ನ ಪೋಷಕರ ಬಳಿ ಕಷ್ಟ ಹೇಳಿಕೊಂಡಿದ್ದರು. ಜೊತೆಗೆ ಪತ್ನಿಯ ಚಿನ್ನಾಭರಣವನ್ನ ಸಾಲ ತೀರಿಸಲು ಅಡವಿಟ್ಟಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

  • ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಕೆಲಸಕ್ಕೆ ತೆರಳುತ್ತಿದ್ದ ಸ್ನೇಹಿತರು ಬೈಕ್ ಅಪಘಾತದಲ್ಲಿ ದುರ್ಮರಣ

    ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಕೆಲಸಕ್ಕೆ ತೆರಳುತ್ತಿದ್ದ ಸ್ನೇಹಿತರು ಬೈಕ್ ಅಪಘಾತದಲ್ಲಿ ದುರ್ಮರಣ

    ಚಿಕ್ಕಬಳ್ಳಾಪುರ: ಬೈಕ್‌ಗೆ ಕ್ಯಾಂಟರ್ (Canter vehicle) ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮಂಚೇನಹಳ್ಳಿ ತಾಲೂಕಿನ ಹಳೇಬುದ್ದಿವಂತನಹಳ್ಳಿ ಹಾಗೂ ಎಂ ಗುಂಡ್ಲಹಳ್ಳಿ ಅಕ್ಕ ಪಕ್ಕದ ಗ್ರಾಮದ 24 ವರ್ಷದ ಪ್ರಕಾಶ್ ಹಾಗೂ 26 ವರ್ಷದ ಕೃಷ್ಣ ಮೃತರು. ಇದನ್ನೂ ಓದಿ: Mangaluru | ಹೆದ್ದಾರಿ ತಡೆಗೋಡೆಗೆ ಕಾರು ಡಿಕ್ಕಿ – ಇಬ್ಬರು ಯುವಕರು ಸಾವು

    ಅಂದಹಾಗೆ ಈ ಇಬ್ಬರು ಯುವಕರು ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ (Private Company Job ಮಾಡುತ್ತಿದ್ದು ಮಾರ್ನಿಂಗ್ ಶಿಫ್ಟ್ ಇದ್ದ ಕಾರಣ ಬೆಳಿಗ್ಗೆ ಜೊತೆಯಾಗಿ ಒಂದೇ ಬೈಕಿನಲ್ಲಿ ಕೆಲಸಕ್ಕೆ ಬರ್ತಿದ್ದರು. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ – ಕರಾವಳಿಗೆ ಆರೆಂಜ್, ಉತ್ತರ ಒಳನಾಡಿನ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಈ ವೇಳೆ ಪೋಶೆಟ್ಟಿಹಳ್ಳಿ ಬಳಿ ವೇಗವಾಗಿ ಬಂದ ಕ್ಯಾಂಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ತಲೆಗೆ ಗಂಭೀರವಾದ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ

  • ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆಯಲ್ಲಿ ನಡೆದಿದೆ.

    ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ಮಕ್ಕಳಾದ ನಿಹಾರಿಕಾ (10) ನೇಹಾ (6) ವರ್ಷ ಮೃತರು. ಅಂದಹಾಗೆ ಗಂಡ ಜಯಣ್ಣನ ಜೊತೆ ನಿನ್ನೆ ಲಾವಣ್ಯ ವಾಗ್ವಾದ ನಡೆಸಿದ್ದರು. ಮಕ್ಕಳನ್ನ ಶಾಲೆಗೆ (School) ಸೇರಿಸಬೇಕು ಚೆನ್ನಾಗಿ ದುಡಿ, ಏರ್‌ಪೋರ್ಟ್‌ಗೆ ಡ್ರೈವರ್‌ (Airport Driver) ಕೆಲಸಕ್ಕೆ ಹೋಗುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಮೂಡಿದೆ. ಇದನ್ನೂ ಓದಿ: ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

    ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿ ಹಾಗೂ ಮಕ್ಕಳ ದೇಹ ಇಂದು ಕೆರೆಯಲ್ಲಿ ತೇಲಾಡಿದ್ದು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂರು ಮೃತದೇಹಗಳನ್ನ ಹೊರತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹೆಂಡತಿ ಮಕ್ಕಳನ್ನ ಕಳೆದುಕೊಂಡ ಗಂಡ ಜಯಣ್ಣ ರೋಧಿಸುವಂತಾಗಿದೆ. ಇದನ್ನೂ ಓದಿ: ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

  • ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ – ಯುವಕ ಆತ್ಮಹತ್ಯೆ!

    ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ – ಯುವಕ ಆತ್ಮಹತ್ಯೆ!

    – ಮತ್ತೊಂದೆಡೆ ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ – ಸವಾರ ಸಾವು

    ಚಿಕ್ಕಬಳ್ಳಾಪುರ: ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ ಹಿನ್ನೆಲೆ ಸಂಬಂಧಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ.

    ಅಜ್ಜವಾರ ಗ್ರಾಮದ 27 ವರ್ಷದ ಮಂಜುನಾಥ್ ನೇಣಿಗೆ ಶರಣಾದ ದುರ್ದೈವಿ. ಅಂದಹಾಗೆ ಮಂಜುನಾಥ್ ಶಿಡ್ಲಘಟ್ಟ ತಾಲೂಕಿನ ಸೋದರ ಮಾವನ ಅಪ್ರಾಪ್ತ ಮಗಳನ್ನ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕೈ, ಕಾಲು ಕಟ್ಟಿ ಪೂಜಾರಿಯ ಕೊಲೆ – 3 ವಾರಗಳ ಹಿಂದೆಯೇ ಅರಣ್ಯದಲ್ಲಿ ಬೀಸಾಡಿರುವ ಶಂಕೆ

    ನಿನ್ನೆ ಸಹ ಬಾಲಕಿಯ ಹುಟ್ಟು ಹಬ್ಬದ ಅಂಗವಾಗಿ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದ. ಈ ವೇಳೆ ಬಾಲಕಿಯನ್ನ ಮದುವೆಯಾಗುವುದಾಗಿ ಮಂಜುನಾಥ್ ಹೇಳಿದ್ದು ಇದಕ್ಕೆ ಸೋದರ ಮಾವ ಹಾಗೂ ಅತ್ತೆ ಮಗಳನ್ನ ಕೊಡೋದಿಲ್ಲ ಎಂದಿದ್ದರಂತೆ. ಇದೇ ನೋವಿನಲ್ಲಿ ಮನೆಗೆ ವಾಪಸ್ ಬಂದಿದ್ದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ಮಾಹಿತಿ ತಿಳಿದುಬಂದಿದೆ. ಮೃತದೇಹವನ್ನ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೇಸ್‌ ನಂ.2: ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ- ಸವಾರ ಸಾವು
    ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಮಾರನಹಳ್ಳಿ ಬಳಿ ನಡೆದಿದೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

    ಕೊನಘಟ್ಟ ಗ್ರಾಮದ 30 ವರ್ಷದ ಮಣಿಕುಮಾರ್ ಮೃತ ಬೈಕ್ ಸವಾರ. ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾಗಿದೆ. ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗರಕ್ಕೆ ರವಾನೆ ಮಾಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಂತಾಮಣಿಯಲ್ಲಿ ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರ – ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಚಿಂತಾಮಣಿಯಲ್ಲಿ ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರ – ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಚಿಕ್ಕಬಳ್ಳಾಪುರ: ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಅಂದಹಾಗೆ ಚಿಂತಾಮಣಿ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಳೆದ 8 ತಿಂಗಳ ಹಿಂದೆ ಅಂಬೇಡ್ಕರ್ ಪ್ರತಿಮೆಯನ್ನ ರಾತ್ರೋರಾತ್ರಿ ಸ್ಥಾಪನೆ ಮಾಡಲಾಗಿತ್ತು. ಇದು ಚಿಂತಾಮಣಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ರಾಜಕೀಯ ಪ್ರತಿಷ್ಠೆಯಾಗಿ ವಿವಾದದ ರೂಪ ಪಡೆದುಕೊಂಡಿತ್ತು. ಇದನ್ನೂ ಓದಿ: ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಈ ಪ್ರತಿಮೆಯನ್ನ ತಾಲೂಕು ಆಡಳಿತ ನ್ಯಾಯಾಲಯದ ನಿದೇರ್ಶನದ ಮೇರೆಗೆ ತೆರವು ಮಾಡಿದ್ದು ಇದನ್ನ ಖಂಡಿಸಿ ದಲಿತ ಸಂಘಟನೆಗಳು ಚಿಂತಾಮಣಿ ಬಂದ್‌ಗೆ ಕರೆ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಮುಖಂಡರನ್ನ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಇದನ್ನ ಖಂಡಿಸಿ ದಲಿತ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಭಾರೀ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ ರೇಪ್‌ – ಸಿಪಿಐ ಪುತ್ರ ಸೇರಿ ಮೂವರು ಅರೆಸ್ಟ್‌

    ಇದೇ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಭಾರೀ ವಾಗ್ವಾದವೂ ನಡೆಯಿತು. ಇದನ್ನ ಹೊರತುಪಡಿಸಿ ಬಂದ್‌ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಬಸ್ ವಾಹನಗಳ ಓಡಾಟ ಎಂದಿನಂತೆ ಇತ್ತು. ಹೀಗಾಗಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದನ್ನೂ ಓದಿ: ಸೀಲ್ ಮಾಡಿದ್ದ ಬೋಬಾ ಟೀ ಬಾಟಲ್‌ನಲ್ಲಿ ಗ್ಲಾಸ್ ಪತ್ತೆ – ಐಸ್‌ ಕ್ಯೂಬ್ ಎಂದು ಕುಡಿದು ಆಸ್ಪತ್ರೆ ಸೇರಿದ ಯುವತಿ!